Tag: ಗುಬ್ಬಚ್ಚಿ

  • ಸತ್ತ ಗುಬ್ಬಚ್ಚಿಗೆ ಸಮಾಧಿ ನಿರ್ಮಿಸಿ ತಿಥಿ ಮಾಡಿದ ಗ್ರಾಮಸ್ಥರು

    ಸತ್ತ ಗುಬ್ಬಚ್ಚಿಗೆ ಸಮಾಧಿ ನಿರ್ಮಿಸಿ ತಿಥಿ ಮಾಡಿದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಸತ್ತ ಗುಬ್ಬಚ್ಚಿಗೆ ಗ್ರಾಮಸ್ಥರರೆಲ್ಲರೂ ಸೇರಿ ಸಮಾಧಿ ನಿರ್ಮಾಣ ಮಾಡಿ ತಿಥಿ ಮಾಡಿದ್ದಾರೆ. ಈ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸತ್ತಿರುವ ಗುಬ್ಬಚ್ಚಿಯ ಫ್ಲೆಕ್ಸ್‌ ಬ್ಯಾನರ್ ಹಾಕಿ ಮಿಸ್ ಯೂ ಗೆಳೆಯ ಮತ್ತೆ ಹುಟ್ಟಿ ಬಾ ಗೆಳೆಯಾ, ಹೀಗೆ ಬರೆದು 11 ದಿನಗಳ ನಂತರ ಬ್ಯಾನರ್ ಹಾಕಿ ಸಂಪ್ರದಾಯದಂತೆ ತಿಥಿ ಸಹ ಮಾಡಿದ್ದಾರೆ. ತಿಥಿ ದಿನದಂದು ಬಾಡೂಟ ಸಹ ಹಾಕಿದ್ದಾರೆ.

    ಮನೆಯ ಸದಸ್ಯರೇ ಸತ್ತರೇ 11ನೇ ಕಾರ್ಯ, ಪುಣ್ಯತಿಥಿ ಮಾಡೋರು ಕಡಿಮೆ. ಕೆಲವರು ಮನೆಯಲ್ಲಿ ಸಾಕಿದ ನಾಯಿ ಸತ್ತಾಗ ಅದರ ತಿಥಿ ಕಾರ್ಯವನ್ನು ಮಾಡಿ, ನೂರಾರು ಜನರಿಗೆ ಊಟ ಹಾಕಲಾಗಿದೆ. ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಈ ಗುಬ್ಬಚ್ಚಿ ಎಲ್ಲರ ಮನೆಗೆ ಹೋಗುತ್ತಿತ್ತಂತೆ. ಹೀಗಾಗಿ ಈ ಗುಬ್ಬಚ್ಚಿ ಗ್ರಾಮಸ್ಥರಿಗೆ ಬಲು ಇಷ್ಟವಂತೆ. ಆದರೆ ಅದೇನಾಯ್ತೋ ಏನೋ ಅದೊಂದು ದಿನ ಗುಬ್ಬಚ್ಚಿ ಮರಿ ಅಸುನೀಗಿದೆ. ಇದ್ರಿಂದ ನೊಂದ ಗ್ರಾಮಸ್ಥರೆಲ್ಲರೂ ಸೇರಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್

    ಸಮಾಧಿ ನಿರ್ಮಿಸಿ ತಿಥಿ ಮಾಡಿದ್ದಾರೆ. ಈ ಸುದ್ದಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದ್ದಂತೆ. ಗ್ರಾಮದಲ್ಲಿ ಮಾಡಿರುವ ಈ ಅಂತ್ಯಸಂಸ್ಕಾರಕ್ಕೆ ಎಲ್ಲಿಲ್ಲದ ಅಭಿನಂದನೆಗಳು ಸುರಿಮಳೆ ಬಂದಿದೆ. ಪಕ್ಷಿ ಪ್ರೇಮವನ್ನು ಮೆರೆದ ಈ ಗ್ರಾಮದ ಜನರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

  • 1 ವರ್ಷದಲ್ಲಿ 800 ಗೂಡು ನಿರ್ಮಿಸಿ ಅಳಿವಿನಂಚಿನಲ್ಲಿದ್ದ ಗುಬ್ಬಚ್ಚಿಗಳನ್ನು ರಕ್ಷಿಸಿದ ಚಿತ್ರದುರ್ಗದ ಕಾರ್ತಿಕ್

    1 ವರ್ಷದಲ್ಲಿ 800 ಗೂಡು ನಿರ್ಮಿಸಿ ಅಳಿವಿನಂಚಿನಲ್ಲಿದ್ದ ಗುಬ್ಬಚ್ಚಿಗಳನ್ನು ರಕ್ಷಿಸಿದ ಚಿತ್ರದುರ್ಗದ ಕಾರ್ತಿಕ್

    ಚಿತ್ರದುರ್ಗ: ಬೇಸಿಗೆ ಶುರುವಾಗಿದ್ದು ಈಗಲೇ ನೀರಿಗೆ ಹಲವು ಕಡೆ ಬರ ಬಂದಿದ್ದು ಪ್ರಾಣಿ ಪಕ್ಷಿಗಳು ನೀರು ಸಿಗದೇ ಒದ್ದಾಡುತ್ತಿವೆ. ಅದರಲ್ಲೂ, ಅವಸಾನದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಕಥೆ ಹೇಳೋಕೆ ಆಗಲ್ಲ. ಆದ್ರೆ, ಚಿತ್ರದುರ್ಗದ ಕಾರ್ತಿಕ್ ಅನ್ನೋವರು ಮಾತ್ರ ವಿಭಿನ್ನ ಪ್ರಯತ್ನದ ಮೂಲಕ ಗುಬ್ಬಚ್ಚಿ ರಕ್ಷಣೆಗೆ ಪಣತೊಟ್ಟಿದ್ದಾರೆ.

    ಬೇಸಿಗೆಗೆ ಮುನ್ನವೇ ಚಿತ್ರದುರ್ಗದಲ್ಲಿ ಬರ ಎದುರಾಗಿದೆ. ಮೂರ್ನಾಲ್ಕು ವರ್ಷದಿಂದ ಬರಕ್ಕೆ ಬಸವಳಿದು ಹೋಗಿದ್ದ ಚಿತ್ರದುರ್ಗದಲ್ಲಿ ಈ ವರ್ಷ ಕೊಂಚ ಮಳೆಯಾಗಿತ್ತು. ಆದರೆ ಮಾರ್ಚ್‍ಗೆ ಮುನ್ನವೇ ಬೇಸಿಗೆಯನ್ನೂ ಮೀರಿಸೋ ಬಿಸಿಲು ಕಾಣ್ತಿದೆ. ಹೀಗಾಗಿ, ಚಿತ್ರದುರ್ಗದ ಮರಗಿಡಗಳು ಬೋಳಾಗಿವೆ.

    ಇದರಿಂದಾಗಿ, ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಆಹಾರ ಹಾಗೂ ಕುಡಿಯಲು ನೀರು ಸಹ ಸಿಗಲಾರದೇ ಕಂಗಾಲಾಗ್ತಿವೆ. ಅದರಲ್ಲೂ ಗುಬ್ಬಚ್ಚಿಗಳ ಪಾಡು ದೇವರಿಗೇ ಪ್ರೀತಿ. ಈ ಸನ್ನಿವೇಶನ್ನು ಸೂಕ್ಷ್ಮವಾಗಿ ಗಮನಿಸಿರೋ ವನ್ಯಜೀವಿ ಛಾಯಗ್ರಾಹಕ ಕಾರ್ತಿಕ್, ಗೆಳೆಯರೊಂದಿಗೆ ಸೇರಿ `ಗುಬ್ಬಚ್ಚಿ ಬಡ್ರ್ಸ್’ ಎಂಬ ಟ್ರಸ್ಟ್ ಕಟ್ಟಿ, ಒಂದು ವರ್ಷದಿಂದ ಗುಬ್ಬಚ್ಚಿಗಳ ರಕ್ಷಣೆಗೆ ನಿಂತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ.

    ಸ್ಟೇಡಿಯಂ ರಸ್ತೆ, ವಿದ್ಯಾನಗರ, ಜೋಗಿಮಟ್ಟಿ ರಸ್ತೆ ಹಾಗೂ ಐಯುಡಿಪಿ ಬಡಾವಣೆಯ 800ಕ್ಕೂ ಹೆಚ್ಚು ಮನೆಗಳ ಮುಂದೆ ಈ ಗುಬ್ಬಚ್ಚಿ ಗೂಡುಗಳನ್ನ ಕಟ್ಟಿದ್ದಾರೆ. ಕಾರ್ತಿಕ್ ಮತ್ತವರ ತಂಡಕ್ಕೆ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂಕ ಪ್ರಾಣಿ-ಪಕ್ಷಿಗಳ ವೇದನೆಗೆ ಸ್ಪಂದಿಸ್ತಿರೋ ಕಾರ್ತಿಕ್ ಮತ್ತವರ ತಂಡದ ಕಾರ್ಯ ಶ್ಲಾಘನಾರ್ಹವಾದುದು.

    https://www.youtube.com/watch?v=6tk0gU4nhqk

  • ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೇ ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ರಾಯಚೂರಿನ ಇವತ್ತಿನ ಪಬ್ಲಿಕ್ ಹೀರೋ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ.

    ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ ಎಂದು ಸಲಾವುದ್ದೀನ್ ಹೇಳ್ತಾರೆ.

    ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ. ಸಲಾವುದ್ದೀನ್‍ರ ಮನೆ ಬಳಿ ಯಾವಾಗಲು ಹಕ್ಕಿಗಳ ಚಿಲಿಪಿಲಿ ಇರುತ್ತದೆ.

    ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ. ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    https://www.youtube.com/watch?v=NwLGZRYzLIQ

  • ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮಸ್ಥರು ಪಕ್ಷಿಗಳಿಗೆ ಡಬ್ಬಗಳನ್ನು ನಿರ್ಮಾಣ ಮಾಡಿ ಆಶ್ರಯ ಕೊಟ್ಟಿದ್ದಾರೆ. ಗ್ರಾಮದ 2 ಕಡೆ 20ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಮನುಷ್ಯನ ಅತಿಯಾಸೆಯಿಂದ ಅವಸಾನವಾಗ್ತಿರೋ ಕಾಡಿನಿಂದಾಗಿ ಪಕ್ಷಿಗಳಿಗೂ ಆಸರೆಯಿಲ್ಲದಂತಾಗಿದೆ. ಆದ್ರೆ ಈ ಗ್ರಾಮಸ್ಥರು ಮಾತ್ರ ಮೂರು ಕಾಲದಲ್ಲೂ ಪಕ್ಷಿಗಳಿಗೆ ಅನ್ನಾಹಾರ ನೀಡ್ತಿದ್ದಾರೆ. ಈಗಿನ ಬೇಸಿಗೆಯಲ್ಲಂತೂ ಪಾರಿವಾಳ, ಗುಬ್ಬಚ್ಚಿಗಳು ಖುಷಿಯಾಗಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸುತ್ತಿವೆ.

    https://www.youtube.com/watch?v=4EH1zg-enwo