Tag: ಗುಪ್ತಚರ ವಿಭಾಗ

  • ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ

    ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ

    ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ (Anekal) ಗುಪ್ತಚರ (Intelligence) ವಿಭಾಗದ ಪೊಲೀಸರು ದಂಪತಿಯನ್ನು (Couple) ವಿಚಾರಣೆ ನಡೆಸಿದ್ದಾರೆ.

    ರಾಯಚೂರು ಮೂಲದ ದಂಪತಿ ಕಳೆದ ಎರಡು ವರ್ಷದಿಂದ ಮನೆಯಲ್ಲಿ ವಾಸವಾಗಿದ್ದರು. ತಡರಾತ್ರಿ 25ಕ್ಕೂ ಹೆಚ್ಚು ಪೊಲಿಸರು ದಂಪತಿಯನ್ನು ವಿಚಾರಣೆ ನಡೆಸಿದ್ದಾರೆ.

    ಕೆಲವೊಂದು ಅನುಮಾನದ ಹಿನ್ನೆಲೆಯಲ್ಲಿ ದಂಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರು ತಡರಾತ್ರಿ ಯಾವ ಕಾರಣಕ್ಕೆ ವಿಚಾರಣೆ ನಡೆಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

  • ಗುಪ್ತಚರ ವಿಭಾಗ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಅಣ್ಣಾಮಲೈ ಆರೋಪ

    ಗುಪ್ತಚರ ವಿಭಾಗ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಅಣ್ಣಾಮಲೈ ಆರೋಪ

    ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ರಾಜ್ಯ ಗುಪ್ತಚರ ವಿಭಾಗ ಕೆಲವು ದಿನಗಳಿಂದ ತಮ್ಮ ಫೋನ್ ಅನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಹಿಂದೆ ತಮ್ಮ ಕಚೇರಿಗೆ ನೀಡಲಾಗಿದ್ದ ರಕ್ಷಣೆಯನ್ನೂ ಕಡಿತಗೊಳಿಸಲಾಗಿದೆ. ವೈ-ಕೆಟಗರಿ ರಕ್ಷಣೆಯನ್ನು ಎಕ್ಸ್- ಕೆಟಗರಿಗೆ ಬದಲಾಯಿಸಲಾಗಿದೆ ಎಂದು ಹೇಳಿದರು.

    ರಾಜ್ಯ ಗುಪ್ತಚರ ಇಲಾಖೆ ತಮಿಳುನಾಡು ಪೊಲೀಸರ ಮೇಲೆ ದರ್ಪ ತೋರಿಸುತ್ತಿದೆ. ಗುಪ್ತಚರ ವಿಭಾಗದ ಎಡಿಜಿಪಿ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ಎಫ್‌ಐಆರ್ ದಾಖಲಿಸುವ ಮುನ್ನವೇ ತೀರ್ಮಾನ ತೆಗೆದುಕೊಂಡಿರುವುದು ಇದೇ ಮೊದಲು ಎಂದು ಹೇಳಿದರು. ಇದನ್ನೂ ಓದಿ: ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಭಾಗಿಯೇ ಹಿಜಬ್ ವಿವಾದಕ್ಕೆ ಮೂಲ ಕಾರಣ?

    ಗುಪ್ತಚರ ವಿಭಾಗ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ರಹಸ್ಯ. ನಾವು ಏನೇ ಹೇಳಿದರೂ ಅದು ಸಾರ್ವಜನಿಕ ವಲಯದಲ್ಲಿ ಬರುತ್ತದೆ. ತಮಿಳುನಾಡು ಗುಪ್ತಚರ ತಂಡ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ. ಇದನ್ನು ಸಾಬೀತುಪಡಿಸಲು ನಾನು ವಾಟ್ಸಪ್ ಚ್ಯಾಟ್‌ಗಳ ಸ್ಕ್ರೀನ್ ಶಾಟ್‌ಗಳನ್ನೂ ಹಂಚಿಕೊಂಡಿದ್ದೇನೆ. ಇದರ ಬಗ್ಗೆ ಶೀಘ್ರವೇ ದೂರು ದಾಖಲಿಸಲಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ WWE ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

  • ವಿಹೆಚ್‍ಪಿ, ಭಜರಂಗ ದಳವನ್ನ ಧಾರ್ಮಿಕ ಉಗ್ರಗಾಮಿ ಸಂಘಟನೆಗಳೆಂದ ಅಮೆರಿಕ ಗುಪ್ತಚರ ವಿಭಾಗ

    ವಿಹೆಚ್‍ಪಿ, ಭಜರಂಗ ದಳವನ್ನ ಧಾರ್ಮಿಕ ಉಗ್ರಗಾಮಿ ಸಂಘಟನೆಗಳೆಂದ ಅಮೆರಿಕ ಗುಪ್ತಚರ ವಿಭಾಗ

    ನವದೆಹಲಿ: ಅಮೆರಿಕ ಸರ್ಕಾರದ ಗುಪ್ತಚರ ವಿಭಾಗ ಸಿಐಎ ವಿಶ್ವ ಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದೆ.

    ಗುಪ್ತಚರ ವಿಭಾಗ ತನ್ನ ಇತ್ತೀಚಿನ ವಲ್ರ್ಡ್ ಫ್ಯಾಕ್ಟ್ ಬುಕ್ ಸಂಚಿಕೆಯಲ್ಲಿ ವಿಹೆಚ್‍ಪಿ ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆ ಪಟ್ಟಿಗೆ ಸೇರಿಸಿದೆ. ಆರ್‍ಎಸ್ ಎಸ್ ನನ್ನು ರಾಷ್ಟ್ರೀಯತೆ ಸಂಸ್ಥೆ ಎಂದು, ಹುರಿಯತ್ ಕಾನ್ಪರೆನ್ಸ್ ಅನ್ನು ಪ್ರತ್ಯೇಕತಾವಾದಿ ಗುಂಪೆಂದು, ಜಮಾತ್ ಉಲೇಮಾ-ಇ ಹಿಂದ್ ಅನ್ನು ಧಾರ್ಮಿಕ ಸಂಸ್ಥೆ ಎಂದು ಹೇಳಿದೆ.

    ಈ ಗುಂಪಿನ ಅಡಿಯಲ್ಲಿ ಇರುವವರು ಯಾರು ಜನಪ್ರತಿನಿಧಿಗಳಾಗಿ ಸ್ಪರ್ಧೆ ಮಾಡುವುದಿಲ್ಲ ಆದರೆ ಈ ಸಂಘಟನೆಗಳು ಸಕ್ರೀಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದೆ.

    ಕೇಂದ್ರ ಗುಪ್ತಚರ ವಿಭಾಗ ತನ್ನ ವಾರ್ಷಿಕ ವಲ್ರ್ಡ್ ಫ್ಯಾಕ್ಟ್ ಬುಕ್ ನಲ್ಲಿ ಅಮೆರಿಕ ಸರ್ಕಾರಕ್ಕೆ ದೇಶಗಳ ಕುರಿತು, ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. ದೇಶಗಳಿಗೆ ಸಂಬಂಧ ಪಟ್ಟ ಇತಿಹಾಸ, ಜನರು, ಸರ್ಕಾರ, ಆರ್ಥಿಕ ಪರಿಸ್ಥಿತಿ, ಭೂಗೋಳ, ಸಾರಿಗೆ, ಸಂವಹನ ಹಾಗೂ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. 1962 ರಿಂದ ಪ್ರಕಟವಾಗುತ್ತಿರುವ ಈ ಬುಕ್ 1975 ರಲ್ಲಿ ಸಾರ್ವಜನಿಕವಾಗಿ ಸಿಗುವಂತೆ ಮಾಡಿದೆ. ಒಟ್ಟು 267 ದೇಶಗಳ ಮಾಹಿತಿಯನ್ನು ಕೊಟ್ಟಿರುತ್ತದೆ.

    ಸಿಐಎ ಪ್ರಕಟಣೆ ಫೇಕ್ ಸುದ್ದಿಯಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ಸಂವಾದ ಸೆಲ್ ನ ಮಾಜಿ ರಾಷ್ಟ್ರೀಯ ಸಂಚಾಲಕ ಖೇಮ್ಚಂದ್ ಶರ್ಮಾ ಎಂದು ಹೇಳಿದ್ದಾರೆ.