Tag: ಗುಪ್ತಚರ ಇಲಾಖೆ

  • ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

    ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

    – ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್ ನೇಮಕ
    – ಸೆನೆಟ್ ಆಯ್ಕೆ ಸಮಿತಿಯ ಮುಂದೆ 3 ಗಂಟೆ ವಿಚಾರಣೆ
    – ಇಸ್ಲಾಂ ಉಗ್ರರಿಗೆ ಒಬಾಮಾ ಸರ್ಕಾರದಿಂದ ಹಣಕಾಸಿನ ನೆರವು

    ವಾಷಿಂಗ್ಟನ್‌: ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ (Tulsi Gabbard) ಅವರು ತಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ಹುದ್ದೆಯನ್ನು ದೃಢೀಕರಣಗೊಳಿಸಲು ಗುಪ್ತಚರ ಕುರಿತ ಸೆನೆಟ್ ಆಯ್ಕೆ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದರು.

    ಡೆಮಾಕ್ರಟಿಕ್‌ಗಳು ನನ್ನನ್ನು ಟ್ರಂಪ್ ಕೈಗೊಂಬೆ, ಪುಟಿನ್ ಅವರ ಕೈಗೊಂಬೆ, ಅಸ್ಸಾದ್ ಕೈಗೊಂಬೆ, ಮೋದಿ ಅವರ ಕೈಗೊಂಬೆ ಎಂದು ಆರೋಪಿಸಿದ್ದಾರೆ. ಆದರೆ ನಿಜವಾಗಿಯೂ ಅವರನ್ನು ಕೆರಳಿಸುವ ವಿಷಯ ಯಾವುದು ಅಂದರೆ ನಾನು ಡೆಮಕ್ರಾಟಿಕ್‌ ಕೈಗೊಂಬೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದುರದೃಷ್ಟ ಏನೆಂದರೆ ಡೆಮಾಕ್ರಟಿಕ್‌ಗಳು ನನ್ನ ವಿರುದ್ಧ ಮತ್ತೆ ಧಾರ್ಮಿಕ ಮತಾಂಧತೆಯ ಕಾರ್ಡ್ ಬಳಸುತ್ತಿದ್ದಾರೆ. ಆದರೆ ಈ ಬಾರಿ ಹಿಂದೂಗಳು (Hindu) ಮತ್ತು ಹಿಂದೂ ಧರ್ಮದ ವಿರುದ್ಧ ಧಾರ್ಮಿಕ ಮತಾಂಧತೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ನನ್ನ ವೈಯಕ್ತಿಕ ಆಧ್ಯಾತ್ಮಿಕ ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದರೆ ಎಕ್ಸ್‌ನಲ್ಲಿ ನನ್ನ ಖಾತೆಗೆ ಹೋಗಿ ನೋಡಬಹುದು. ಅಲ್ಲಿ ನಾನು ಈ ವಿಷಯದ ಬಗ್ಗೆ ಹೆಚ್ಚಿನದನ್ನು ಹಂಚಿಕೊಳ್ಳುತ್ತೇನೆ ಎಂದು ತುಳಸಿ ಗಬ್ಬಾರ್ಡ್ ತಿಳಿಸಿದರು.

    ಸೆನೆಟ್ ಗುಪ್ತಚರ ಸಮಿತಿ ಗಬ್ಬಾರ್ಡ್ ಅವರನ್ನು ಮೂರು ಗಂಟೆಗಳ ವಿಚಾರಣೆ ನಡೆಸಿತು. ಈ ವೇಳೆ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದರು. ಸಿರಿಯನ್ ನಾಯಕ ಬಷರ್ ಅಲ್-ಅಸ್ಸಾದ್ ಬಗ್ಗೆ ನನಗೆ ಯಾವುದೇ ಒಲವು ಇಲ್ಲ. 2017 ರ ಲೆಬನಾನ್ ಪ್ರವಾಸದ ಸಮಯದಲ್ಲಿ ಹಿಜ್ಬೊಲ್ಲಾ ಪ್ರತಿನಿಧಿಗಳ ಜೊತೆಗಿನ ಭೇಟಿಯನ್ನು ನಿರಾಕರಿಸಿದ್ದೆ ಎಂದರು.

    ಅಸ್ಸಾದ್ ಅಥವಾ ಗಡಾಫಿ ಅಥವಾ ಯಾವುದೇ ಸರ್ವಾಧಿಕಾರಿಯ ಬಗ್ಗೆ ನನಗೆ ಯಾವುದೇ ಪ್ರೀತಿ ಇಲ್ಲ. ನಾನು ಅಲ್-ಖೈದಾವನ್ನು ದ್ವೇಷಿಸುತ್ತೇನೆ. ಇಸ್ಲಾಮಿಸ್ಟ್ ಉಗ್ರರ ಜೊತೆ ಸ್ನೇಹಪರರಾಗಿರುವ ಎಲ್ಲಾ ನಾಯಕರನ್ನೂ ನಾನು ದ್ವೇಷಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಮಾನ ದುರಂತಕ್ಕೆ ಒಬಾಮಾ, ಬೈಡನ್‌ ಜಾರಿಗೆ ತಂದ ನೇಮಕಾತಿ ನೀತಿಯೇ ಕಾರಣ: ಟ್ರಂಪ್‌ ವಾಗ್ದಾಳಿ

    ಮಧ್ಯಪ್ರಾಚ್ಯದಲ್ಲಿ ಆಡಳಿತ ಬದಲಾವಣೆ ಸ್ಥಾಪಿಸುವ ಸಲುವಾಗಿ ಒಬಾಮಾ ಅವರು ಸ್ಲಾಮಿಸ್ಟ್ ಉಗ್ರಗಾಮಿ ಗುಂಪುಗಳನ್ನು ರಚಿಸಿ ಹಣಕಾಸಿನ ನೆರವು ನೀಡಿದ್ದರು ಎಂದು ತುಳಸಿ ಗಬ್ಬಾರ್ಡ್ ಈ ವೇಳೆ ಬಹಿರಂಗಪಡಿಸಿದರು.

    ತುಳಸಿ ಗಬ್ಬಾರ್ಡ್ ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

     

    ಯಾರು ತುಳಸಿ ಗಬ್ಬಾರ್ಡ್‌?
    ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದೂ (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.

    ಬಾಲ್ಯದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದ ಇವರು ಭಗವದ್ಗೀತೆಯಿಂದ ಆಧ್ಯಾತ್ಮಿಕ ವಿಷಯಗಳನ್ನು ಕಲಿತ್ತಿದ್ದಾರೆ. ವೈಷ್ಣವ ಹಿಂದೂ ಸಂಘಟನೆಯಾದ ಸೈನ್ಸ್ ಆಫ್ ಐಡೆಂಟಿಟಿ ಫೌಂಡೇಶನ್ ಮತ್ತು ಇಸ್ಕಾನ್‌ ಸಂಸ್ಥೆಯ ಪ್ರಭಾವದಿಂದಾಗಿ ತುಳಸಿ ಅವರು ಹಿಂದೂ ಜೀವನ ಪದ್ದತಿಯಂತೆ ಜೀವಿಸುತ್ತಿದ್ದಾರೆ.

    2015ರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅಬ್ರಹಾಂ ವಿಲಿಯಮ್ಸ್ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಪತಿಯೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಭಗವತ್ ಗೀತೆಯ ಮೇಲೆ ಕೈಯಿಟ್ಟು ತುಳಸಿ ಪ್ರಮಾಣ ವಚನ ಸ್ವೀಕರಿಸಿದ್ದರು.

    2014ರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿಯವರ ಪ್ರಸ್ತಾವನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು.

    ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11 , 2001 ರಂದು ದಾಳಿ ನಡೆದ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ.

  • ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

    ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

    ಧಾರವಾಡ: ಮಾದಕ ವಸ್ತುಗಳ ವಿರುದ್ಧ ವಿರುದ್ಧ ನಾವು ಸಮರ ಸಾರಿದ್ದೇವೆ. ಕರ್ನಾಟಕದಲ್ಲಿ 10,000ಕ್ಕೂ ಹೆಚ್ಚು ಜನ ವಿದೇಶಿಗರಿದ್ದಾರೆ. ಅದರಲ್ಲಿ ಅನೇಕರು ಡ್ರಗ್ಸ್‌ ಜಾಲಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G Parameshwara) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ವಿದೇಶಿಗರನ್ನ ಫರ್ಮನೆಂಟ್ ಆಗಿ‌ ಮಾನಿಟರ್ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಜನರನ್ನ ಆಯಾ ದೇಶಕ್ಕೆ ವಾಪಸ್ ಕಳುಹಿಸುತ್ತೇವೆ. ಕೆಲವರನ್ನ ಡಿಟೆಸೆನ್ಸ್ ಕೇಂದ್ರಗಳಲ್ಲಿ ಇಟ್ಟುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ

    ಆಯಾ ದೇಶಗಳ ರಾಯಭಾರ ಕಚೇರಿಯವರ ಕ್ಲಿಯರೆನ್ಸ್ ಕೇಳಿ ವಾಪಸ್‌ ಕಳುಹಿಸುತ್ತೇವೆ ಎಂದ ಗೃಹಸಚಿವರು ಕೇಂದ್ರ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆ? RAW, IB ದವರು ವಿದೇಶಿಗರನ್ನು ಹಿಡಿದು ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್‌ ಸಮಸ್ಯೆ; ಚೆಕ್-ಇನ್‌, ಫ್ಲೈಟ್ ಕಾರ್ಯಾಚರಣೆಯಲ್ಲಿ ತೊಂದರೆ

    ಆನೇಕಲ್ ಬಳಿ ನಾಲ್ಕು ಜನರನ್ನು ಹಿಡಿದಿದ್ವಿ, ನಾಲ್ಕು ಜನ ನಮ್ಮ ರಾಜ್ಯಕ್ಕೆ ಬಂದು ಒಂದು ವರ್ಷ ಆಯ್ತು. ಆದರೆ ಅವರು ದೇಶಕ್ಕೆ ಬಂದು 10 ವರ್ಷ ಆಗಿದೆ. ನಮ್ಮ ಪೊಲೀಸರೇ ಅವರನ್ನು ಹಿಡಿದು IB ದವರಿಗೆ ಮಾಹಿತಿ ಕೊಟ್ಟಿದ್ದಾರೆ. ಹಿಂದೆ ಸಹ ಒಬ್ಬ ಹಾಗೆಯೇ ಮಾಡಿದ್ದ, ಅಂಗಡಿಗಳ ಮಧ್ಯೆ ಅಂಗಡಿ ಇಟ್ಟುಕೊಂಡಿದ್ದ, ಆತನನ್ನು ಪತ್ತೆ ಮಾಡಿದ್ವಿ. ಇಂತಹ ವಿಚಾರಗಳ ಬಗ್ಗೆ ಕರ್ನಾಟಕ ಪೊಲೀಸರಿಗೆ IB ದವರು ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ.

  • ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು

    ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು

    ಬೆಂಗಳೂರು: ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನೆ (Ganesh Procession) ವೇಳೆ ನಡೆದ ಕೋಮು ಗಲಭೆಗೆ ಪೊಲೀಸ್‌ (Police) ಮತ್ತು ಗುಪ್ತಚರ ಇಲಾಖೆ (Intelligence Bureau) ವೈಫಲ್ಯವೇ ಕಾರಣ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

    ಹೌದು. ಕಳೆದ ವರ್ಷವೇ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿದ್ದ ಕಾರಣ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಆದರೆ ಮುನ್ನೆಚ್ಚರಿಕೆ ವಹಿಸದ ಕಾರಣ ಈ ಗಲಭೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ವೈಫಲ್ಯ ಹೇಗೆ?
    ನಾಗಮಂಗಲದ ಸ್ಥಿತಿಗತಿ ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ತಿಳಿಯುತ್ತದೆ. ಇದಕ್ಕೆ ಸಾಕ್ಷಿ ಪೆಟ್ರೋಲ್ ಬಾಂಬ್, ಕಲ್ಲು, ತಲವಾರ್‌ಗಳು. ಭಾರೀ ಪ್ರಮಾಣದಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದರ ಜೊತೆ ಪೆಟ್ರೋಲ್‌ ಬಾಂಬ್‌ ಸಂಗ್ರಹಿಸುವ ಮೂಲಕ ಮೊದಲೇ ಗಲಭೆಗೆ ಬೇಕಾದ ವಸ್ತುಗಳನ್ನು ರಹಸ್ಯವಾಗಿ ಇಟ್ಟುಕೊಂಡಿದ್ದರು. ಜೊತೆಗೆ ಭಾರೀ ಸಂಖ್ಯೆಯಲ್ಲಿ ಯುವಕರು ಮಸೀದಿ ರಸ್ತೆಯಲ್ಲಿ ಸೇರಿದ್ದರು. ಇಷ್ಟೆಲ್ಲಾ ಪೂರ್ವಭಾವಿ ಸಿದ್ಧತೆ ಮಾಡಿದ್ದರೂ ಗುಪ್ತಚರ ಇಲಾಖೆ ಈ ವಿಚಾರ ತಿಳಿಯುವಲ್ಲಿ ವಿಫಲವಾಗಿತ್ತು. ಈ ಪೂರ್ವಭಾವಿ ವಿಚಾರ ಗೊತ್ತಾಗಿದ್ದರೆ ಗಲಭೆಯನ್ನು ಮಟ್ಟ ಹಾಕಬಹುದಿತ್ತು. ಇದನ್ನೂ ಓದಿ: ನಾನಿನ್ನೂ ವೆಬ್‌ಸೀರಿಸ್‌ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್

    ಗಲಭೆಗೂ ಮುನ್ನವೇ ಪೊಲೀಸ್ ಇಲಾಖೆ ಮೈ ಮರೆತಿತ್ತು. ಬದ್ರಿಕೊಪ್ಪಲು ಗ್ರಾಮದಿಂದ ಹೊರಟ ಮೆರವಣಿಗೆ ಮಂಡ್ಯ ವೃತ್ತಕ್ಕೆ ಬಂದಾಗ ಅನ್ಯಕೋಮಿನ ಯುವಕರು ಕ್ಯಾತೆ ಎತ್ತಿದ್ದರು. ಈ ವೇಳೆ ಮೆರವಣಿಗೆಯ ದಾರಿಯನ್ನು ಬದಲಿಸಿದರು. ಈ ಸಂದರ್ಭದಲ್ಲೇ ಪ್ರತಿಭಟನಾ ಯುವಕರಿಗೆ ತಿಳಿ ಹೇಳಬಹುದಿತ್ತು. ಆದರೆ ಪೊಲೀಸರು ಆ ಕೆಲಸ ಮಾಡಿರಲಿಲ್ಲ.

    ಪೊಲೀಸರು ಮತ್ತೆ ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಿದ್ದರು. ಈ ವೇಳೆ ಜೈ ಗಣಪತಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗಿ ಪ್ರತಿಯಾಗಿ ಅಲ್ಲಾ-ಹು ಅಕ್ಬರ್ ಘೋಷಣೆ ಕೂಗಿ ಕಲ್ಲು ತೂರಿದ್ದಾರೆ.

    ಕಳೆದ ಬಾರಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಯಾವ ದಾರಿಯಲ್ಲಿ ಮೆರವಣಿಗೆ ಹೋಗುತ್ತದೆ? ಎಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜಿಸಬೇಕು ಎನ್ನುವುದು ತಿಳಿದಿರಬೇಕಿತ್ತು. ಎರಡನೆಯದಾಗಿ ಪ್ರತಿಭಟನಾ ಯುವಕರಿಗೆ ಪೊಲೀಸರು ತಿಳಿ ಹೇಳಬೇಕಿತ್ತು. ಪೊಲೀಸರು ಈ ಎರಡು ಕೆಲಸ ಸರಿಯಾಗಿ ಮಾಡಿದ್ದರೆ ಗಲಭೆ ಆಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.

    ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್‌ ಅಧಿಕಾರಿ ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಅವರನ್ನು ಎತ್ತಗಂಡಿ ಮಾಡಲಾಗಿದೆ. ಇದರ ಜೊತೆ ನಾಗಮಂಗಲ ‌ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಅಶೋಕ್ ಕುಮಾರ್ (Ashok Kumar) ಅವರನ್ನು ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಅಮಾನತು ಮಾಡಿ ಆದೇಶ ಪ್ರಕಟಿಸಿದ್ದಾರೆ.

     

  • ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ರದ್ದು: ಸಚಿವರ ಸಭೆಯಲ್ಲಿ ನಡೆದಿದ್ದೇನು?

    ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ರದ್ದು: ಸಚಿವರ ಸಭೆಯಲ್ಲಿ ನಡೆದಿದ್ದೇನು?

    ನಿನ್ನೆ ಯಾದಗಿರಿಯಲ್ಲಿ (Yadagiri) ನಡೆಯಬೇಕಿದ್ದ ಜೀ ಕನ್ನಡ ವಾಹಿನಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ (Saregamappa) ಕಾರ್ಯಕ್ರಮ ಶುರುವಾಗುವ ಅರ್ಧ ಗಂಟೆ ಮುಂಚೆಯೇ ರದ್ದಾಗಿದೆ. ಸಂಜೆ 6 ಗಂಟೆಗೆ ಫಿನಾಲೆ ಶೋ ನಡೆಯಬೇಕಿತ್ತು. ಅದಕ್ಕೂ ಅರ್ಧಗಂಟೆ ಮುಂಚೆ ವೇದಿಕೆಗೆ ಬಂದ ವಾಹಿನಿಯ ಪ್ರತಿನಿಧಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವು ರದ್ದಾದ (Canceled) ಬಗ್ಗೆ ಮಾಹಿತಿ ನೀಡಿದರು. ಸಹಜವಾಗಿಯೇ ಅಭಿಮಾನಿಗಳಿಗೆ ಈ ನಡೆ ನಿರಾಸೆ ಮೂಡಿಸಿತು.

    ಯಾದರಿಗಿ ಜಿಲ್ಲಾ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಂದಾಜು 35 ಸಾವಿರ ಜನರು ನೆರೆದಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, (Dinesh Gundurao) ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ಮಾಡುತ್ತಿದ್ದರು. ಅದೇ ವೇಳೆಯಲ್ಲೇ  ಕಾರ್ಯಕ್ರಮ ನಡೆಸದಂತೆ ಗುಪ್ತಚರ ಇಲಾಖೆಯಿಂದ (Intelligence Department) ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವರು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ, ಕಾರ್ಯಕ್ರಮ ರದ್ದು ಮಾಡುವಂತೆ ಸೂಚಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ತಲೆಬಿಸಿಯಲ್ಲಿರುವ ಪೊಲೀಸ್ ಇಲಾಖೆಯು, ಕಾರ್ಯಕ್ರಮ ನೋಡಲು ಈ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಏನಾದರೂ ಸಣ್ಣ ಅವಘಡ ನಡೆದರೂ, ಅನಾಹುತ ತಪ್ಪಿದ್ದಲ್ಲ ಎಂದರಿತು ಕಾರ್ಯಕ್ರಮವನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ.

    ಜಿಲ್ಲಾಡಳಿತಕ್ಕೆ ಇಂಥದ್ದೊಂದ ಸಂದೇಶ ಬಂದ ತಕ್ಷಣವೇ ಜೀ ವಾಹಿನಿಯ ಆಯೋಜಕರಿಗೆ ಮಾಹಿತಿ ನೀಡಿ, ಕಾರ್ಯಕ್ರಮವನ್ನು ರದ್ದು ಮಾಡುವಂತೆ ತಿಳಿಸಿದ್ದಾರೆ. ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಿದೆ ವಾಹಿನಿ. ಗುಪ್ತಚರ ಮಾಹಿತಿಯನ್ನು ಬಹಿರಂಗ ಪಡಿಸದೇ ತಾಂತ್ರಿಕ ಕಾರಣವನ್ನು ನೀಡಿ, ಮೈದಾನವನ್ನು ಖಾಲಿ ಮಾಡಿಸಲಾಗಿದೆ.

    ಕಾರ್ಯಕ್ರಮ ರದ್ದಾದ ಕುರಿತಂತೆ ನಾನಾ ರೆಕ್ಕೆಪುಕ್ಕಗಳನ್ನೂ ಕಟ್ಟಲಾಗುತ್ತಿದೆ. ರಾಜಕೀಯ ಬಣ್ಣವನ್ನೂ ಬಳೆಯಲಾಗುತ್ತಿದೆ. ರಾಜಕಾರಣಿಗಳ ಸಣ್ಣತನದಿಂದಾಗಿ ಈ ಕಾರ್ಯಕ್ರನ ನಡೆಯಲಿಲ್ಲ ಎಂದು ಚರ್ಚಿಸಲಾಗುತ್ತಿದೆ. ಆದರೆ, ಅದೆಲ್ಲವೂ ಸುಳ್ಳು ಅಂತಿದ್ದಾರೆ ವಾಹಿನಿಯ ಪ್ರತಿನಿಧಿ.

  • ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ದಿಢೀರ್ ರದ್ದು: ಕಾರಣ ಹಲವು

    ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ದಿಢೀರ್ ರದ್ದು: ಕಾರಣ ಹಲವು

    ನ್ನಡದ ಹೆಸರಾಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ಶೋ ಸರಿಗಮಪ (Saregamapa)ಗ್ರ್ಯಾಂಡ್ ಫಿನಾಲೆ ತಲುಪಿದೆ. ಈ ಬಾರಿಯ ಫಿನಾಲೆಯಲ್ಲಿ ಯಾದಗಿರಿ (Yadagiri) ಜಿಲ್ಲಾ ಮೈದಾನದಲ್ಲಿ ನಡೆಸಲು ವಾಹಿನಿ ತೀರ್ಮಾನ ತಗೆದುಕೊಂಡಿತ್ತು. ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿ ಫಿನಾಲೆ ಮುಗಿದು, ವಿಜೇತರ ಕೈಯಲ್ಲಿ ಟ್ರೋಫಿ ಇರಬೇಕಿತ್ತು. ಇನ್ನೇನು ಕಾರ್ಯಕ್ರಮ ಶುರುವಾಗಬೇಕು ಆಗ ವಾಹಿನಿಯ ಪ್ರತಿನಿಧಿ ಕಾರ್ಯಕ್ರಮ ರದ್ದಾಗಿರುವ ಕುರಿತು ಪ್ರಕಟನೆ ನೀಡಿ ಅಭಿಮಾನಿಗಳನ್ನು ನಿರಾಸೆ ಮಾಡಿದ್ದಾರೆ.

    ಅಷ್ಟಕ್ಕೂ ಕಾರ್ಯಕ್ರಮ ದಿಢೀರ್ ಅಂತ ರದ್ದಾಗಲು ತಾಂತ್ರಿಕ ಕಾರಣವನ್ನು ನೀಡಲಾಗುತ್ತಿದೆ. ವಾಹಿನಿಯ ಪ್ರತಿನಿಧಿಯು ವೇದಿಕೆಯ ಮೇಲೆ ತಾಂತ್ರಿಕ ಕಾರಣವನ್ನೇ ನೀಡಿದ್ದಾರೆ. ಆದರೆ, ಕಾರ್ಯಕ್ರಮ ರದ್ಧಾಗಲು ಬೇರೆಯದ್ದೇ ಕಾರಣವನ್ನು ನೀಡಲಾಗುತ್ತಿದೆ. ಕಾರ್ಯಕ್ರಮವನ್ನು ಯಾದಗಿರಿಯಲ್ಲಿ ನೆಡೆಸಲು ಪೊಲೀಸರು ಪರ್ಮಿಷನ್ ಕೊಟ್ಟ ನಂತರವೂ ರದ್ಧಾದ ಕಾರಣದಿಂದಾಗಿ ಸಾಕಷ್ಟು ಅನುಮಾನ ಮೂಡಿದೆ.

    ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಬೇಕಿತ್ತು. ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿಯೇ ಸಚಿವ ದಿನೇಶ್ ಗುಂಡೂರಾವ್ ಯಾದಗಿರಿಗೆ ಬಂದಿಳಿದಿದ್ದರು. ವಾಹಿನಿಯ ಮುಖ್ಯಸ್ಥರು, ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಅರ್ಜುನ್ ಜನ್ಯ ಗಾಯಕರಾದ ವಿಜಯ್ ಪ್ರಕಾಶ್, ನಿರೂಪಕಿ ಅನುಶ್ರೀ, ಶೋ ಸ್ಪರ್ಧಿಗಳು, ಹೆಸರಾಂತ ಗಾಯಕ ಗಾಯಕಿಯರ ತಂಡವೇ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಿತ್ತು. ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಮೈದಾನದಲ್ಲಿ ಸೇರಿದ್ದರು. ಈ ಅಪಾರ ಪ್ರಮಾಣದಲ್ಲಿ ಸೇರಿದ ಜನರೇ ಕಾರ್ಯಕ್ರಮ ರದ್ದಿಗೆ ಕಾರಣರಾದರು ಎನ್ನುವುದು ಇನ್ ಸೈಡ್ ಸ್ಟೋರಿ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದಿಂದ ಬೆಚ್ಚಿ ಬಿದ್ದಿರುವ ಪೊಲೀಸ್ ಇಲಾಖೆ, ಆತನ ಹುಡುಕಾಟದಲ್ಲಿ ತಲೆ ಕೆಡಿಸಿಕೊಂಡು ಕೂತಿದೆ. ಶಂಕಿತ ವ್ಯಕ್ತಿಯು ಬಳ್ಳಾರಿಯಿಂದ ಯಾದಗಿರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕಾರಣದಿಂದಾಗಿ ರಾಜ್ಯ ಗುಪ್ತಚರ ( Intelligence Department)  ಇಲಾಖೆಯು ಕಾರ್ಯಕ್ರಮ ರದ್ದು ಮಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ದಿಢೀರ್ ಅಂತ ಕಾರ್ಯಕ್ರಮ ನಿಲ್ಲಿಸಲಾಗಿದೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

  • ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ನವದೆಹಲಿ: ಇಸ್ರೇಲ್-ಹಮಾಸ್ ನಡುವೆ ಯುದ್ಧ ಮುಂದುವರಿದಿದ್ದು, ಈ ನಡುವೆ ದೆಹಲಿಯಲ್ಲಿರುವ  (New Delhi) ಇಸ್ರೇಲ್ ರಾಯಭಾರಿ ಅಧಿಕಾರಿ (Ambassador of Israel) ನೌರ್ ಗಿಲೋನ್ ಮೇಲೆ ಮಾರಣಾಂತಿಕ ದಾಳಿ ಸಂಭವಿಸಬಹುದು ಮತ್ತು ಕಚೇರಿ (Embassy of Israel) ಮೇಲೆ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ (Intelligence Department) ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.

    ರಾಯಭಾರಿ ಮೇಲಿನ ದಾಳಿಯ ಬಗ್ಗೆ ದೇಶದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಇದಲ್ಲದೆ ಇಸ್ರೇಲ್ ರಾಯಭಾರ ಕಚೇರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಮಾಹಿತಿ ಆಧರಿಸಿ ದೆಹಲಿಯ ರಾಯಭಾರಿ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, ಇಸ್ರೇಲ್ ರಾಯಭಾರ ಕಚೇರಿಯಿಂದ ಪತ್ರ ಬಂದಿದೆ. ಇಸ್ರೇಲ್ ರಾಯಭಾರಿ ಮೇಲೆ ಉಗ್ರರ ದಾಳಿಯ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿವೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದೆ. ದೆಹಲಿ ಪೊಲೀಸರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಲಾಗಿದೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ

    ಇಸ್ರೇಲ್ ಅಬೆನ್ಸಿ ನವೆಂಬರ್ 16 ರಂದು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ಇಸ್ರೇಲ್ ರಾಯಭಾರಿಯ ಭದ್ರತೆಯನ್ನು ಕೂಡಲೇ ಹೆಚ್ಚಿಸುವಂತೆ ಗೃಹ ಸಚಿವಾಲಯಕ್ಕೆ ಆಗ್ರಹಿಸಲಾಗಿದೆ. ಗೃಹ ಸಚಿವಾಲಯದ ಪತ್ರದ ನಂತರ, ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಗೃಹ ಸಚಿವಾಲಯದ ಪತ್ರದ ನಂತರ ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ರಾಯಭಾರಿ ಮತ್ತು ಇಸ್ರೇಲ್ ರಾಯಭಾರಿ ಕಚೇರಿಯ ಭದ್ರತೆಯನ್ನು ಹೆಚ್ಚಿಸುವಂತೆ ಪೊಲೀಸ್ ಉಪ ಆಯುಕ್ತರು ಕೇಳಿಕೊಂಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಬೀಟ್ ಮತ್ತು ಗಸ್ತು ಸಿಬ್ಬಂದಿ ಜಾಗರೂಕರಾಗಿರಲು ಆದೇಶಿಸಲಾಗಿದೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

  • ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ (Government of India) ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ನಡುವೆ ಸಂವಹನ ನಡೆಸಲು ಬಳಕೆಯಾಗುತ್ತಿದ್ದ 14 ಅಪ್ಲಿಕೇಷನ್‍ಗಳನ್ನು ಕೇಂದ್ರ ನಿಷೇಧಿಸಿದೆ.

    ನಿಷೇಧಿಸಲಾದ ಎಲ್ಲಾ ಅಪ್ಲಿಕೇಷನ್‍ಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist Activities) ತೊಡಗಿದ್ದ ವ್ಯಕ್ತಿಗಳೊಂದಿಗೆ ಸಂದೇಶ ರವಾನಿಸಲು (Messaging Applications) ಬಳಕೆಯಾಗುತ್ತಿತ್ತು. ಈ ಬಗ್ಗೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸೂಕ್ತ ಮಾಹಿತಿ ನೀಡಿದ್ದವು. ಗುಪ್ತಚರ ಸಂಸ್ಥೆಗಳು (Security and Intelligence Agencies) ಸೂಚಿಸಿದ್ದ ಅಪ್ಲಿಕೇಷನ್‍ಗಳಲ್ಲಿ ಪಾಕಿಸ್ತಾನದಿಂದ (Pakistan) ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

    ನಿಷೇಧಿತ ಅಪ್ಲಿಕೇಷನ್‍ಗಳು:
    ಕ್ರಿಪ್‍ವೈಸರ್, ಎನಿಗ್ಮಾ, ಸೇಫ್‍ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‍ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ನಿಷೇಧಿತ ಅಪ್ಲಿಕೇಷನ್‍ಗಳಾಗಿವೆ.

    ಏ.20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ್ದ ಗ್ರೇನೆಡ್ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು. ಈ ವೇಳೆ ಉಗ್ರರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು. ಇದನ್ನೂ ಓದಿ: ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

  • ಖಲಿಸ್ತಾನಿ ಪರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ಗೆ ಐಎಸ್‌ಐ ಬೆಂಬಲ

    ಖಲಿಸ್ತಾನಿ ಪರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ಗೆ ಐಎಸ್‌ಐ ಬೆಂಬಲ

    ಚಂಡೀಗಢ: ಖಲಿಸ್ತಾನಿ (Khalistan) ಪರ ಹೋರಾಟಗಾರ, ವಾರೀಸ್ ಪಂಜಾಬ್ ದೇ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥ ಅಮೃತ್‍ಪಾಲ್ ಸಿಂಗ್ (Amritpal Singh) ದೇಶಕ್ಕೆ ಕಂಟಕವಾಗುವ ರೀತಿ ಕಾಣುತ್ತಿದ್ದು ಆತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ (ISI) ಬೆಂಬಲವಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

    ಅಮೃತಪಾಲ್‌ ಸಿಂಗ್‌ ಜಾರ್ಜಿಯಾಕ್ಕೆ ಭೇಟಿದ್ದ. ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಾಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

    ನಾನು ಭಾರತೀಯನೇ ಅಲ್ಲ, ಪಾಸ್‍ಪೋರ್ಟ್ ಇದ್ದ ಮಾತ್ರಕ್ಕೆ ನಾನು ಭಾರತೀಯ ವ್ಯಕ್ತಿಯಾಗುವುದಿಲ್ಲ. ಅದು ಕೇವಲ ಟ್ರಾವೆಲ್ ಡಾಕ್ಯುಮೆಂಟ್ ಎಂದು ಹೇಳಿಕೊಂಡಿದ್ದಾನೆ. ಸಿದ್ದಾಂತಕ್ಕೆ ಸಾವಿಲ್ಲ. ನಮ್ಮ ಸಿದ್ದಾಂತವೂ ಅಷ್ಟೇ. ಖಲಿಸ್ತಾನ್ ತಡೆಯಲು ನೋಡಿದರೆ ಇಂದಿರಾ ಗಾಂಧಿಗೆ ಆದ ಗತಿಯೇ ಅಮಿತ್ ಶಾಗೂ ಎದುರಾಗಲಿದೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾನೆ.  ಇದನ್ನೂ ಓದಿ: ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಂಬಾನಿ, ಕುಟುಂಬಕ್ಕೆ z+ ಭದ್ರತೆ ನೀಡಿ: ಸುಪ್ರೀಂ

    ಖಲಿಸ್ತಾನಿ ಪರ ಸಹಾನುಭೂತಿ ಇರುವವರು ಅಮೃತ್‍ಪಾಲ್ ಸಿಂಗ್‍ನನ್ನು ಎರಡನೇ ಬಿಂದ್ರನ್‍ವಾಲೆ ಎಂದು ಗುಣಗಾನ ಮಾಡುತ್ತಿದ್ದಾರೆ. ಅಮೃತ್‍ಪಾಲ್ ಸಿಂಗ್ ವೇಷಭೂಷಣವೂ ಬಿಂದ್ರನ್‍ವಾಲೆ ಸ್ಟೈಲ್‍ನಲ್ಲಿಯೇ ಇದೆ. ಅಮೃತ್‍ಪಾಲ್ ಸಿಂಗ್‌ಗೆ ಆಪ್‌ ಬೆಂಬಲ ನೀಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.

    ಅಮಿತ್ ಶಾ (Amit Shah) ಅವರನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೂ, ಈವರೆಗೂ ಅಮೃತ್‍ಪಾಲ್ ಸಿಂಗ್ ಮತ್ತು ಅವರ ಅನುಯಾಯಿಗಳ ವಿರುದ್ಧ ಈವರೆಗೂ ಒಂದೇ ಒಂದು ಕೇಸ್ ದಾಖಲಾಗದಿರುವುದು ಈ ಅನುಮಾನಕ್ಕೆ ಪುಷ್ಠಿ ಕೊಡುತ್ತಿದೆ. ಪಂಜಾಬ್‍ನಲ್ಲಿ ಕಳೆದ ಚುನಾವಣೆಯಲ್ಲಿ ಆಪ್ ವಿಜಯದ ಹಿಂದೆ ಖಲಿಸ್ತಾನಿ ಶಕ್ತಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದೆ.

  • ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್ – ದಾಳಿಗೆ ಸಂಚು ರೂಪಿಸಿರುವ ಶಂಕೆ

    ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್ – ದಾಳಿಗೆ ಸಂಚು ರೂಪಿಸಿರುವ ಶಂಕೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್‍ಗಳು (Khalistani Sleeper Cells) ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ (Intelligence Agencies) ಮೂಲಗಳಿಂದ ಮಾಹಿತಿ ಬಂದಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಶ್ಚಿಮ ದೆಹಲಿಯ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಖಲಿಸ್ತಾನಿ ಪರ ಪೋಸ್ಟರ್‌ಗಳು, ಖಲಿಸ್ತಾನಿ ಉಗ್ರರ ಗೋಡೆ ಬರಹಗಳು (Khalistani Poster) ಕಾಣಿಸಿಕೊಳ್ಳುತ್ತಿವೆ. ವಿಕಾಸಪುರಿ, ಜನಕಪುರಿ, ಪಶ್ಚಿಮ ವಿಹಾರ್, ಪೀರಗರ್ಹಿಯಲ್ಲಿ ಖಲಿಸ್ತಾನಿ ಪರ ಬರಹಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಗುಪ್ತಚಾರ ಇಲಾಖೆ ಸ್ಫೋಟಕ ಮಾಹಿತಿ ನೀಡಿದೆ. ಖಲಿಸ್ತಾನಿ ಉಗ್ರರು ದೊಡ್ಡ ಮಟ್ಟಿನ ದಾಳಿಗೆ ಸಂಚು ರೂಪಿಸಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಇತ್ತೀಚೆಗೆ ದೆಹಲಿ ಮತ್ತು ಪಂಜಾಬ್‍ನಲ್ಲಿ (Punjab) ಖಲಿಸ್ತಾನಿ ಉಗ್ರರ ಹಾವಳಿ ಹೆಚ್ಚಾಗಿದೆ. ಪಂಜಾಬ್‍ನಲ್ಲಿ ಭದ್ರತಾ ಪಡೆ ಕಚೇರಿಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದ್ದು, ಪ್ರತಿ ದಾಳಿಯ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲ ತಿಂಗಳ ಹಿಂದೆ ಪಶ್ಚಿಮ ದೆಹಲಿಯ ವಿಕಾಸಪುರಿ, ಜನಕಪುರಿ, ಪಶ್ಚಿಮ ವಿಹಾರ್, ಪೀರಗರ್ಹಿ ಮತ್ತು ಇತರ ಕಡೆಗಳಲ್ಲಿ, ಖಲಿಸ್ತಾನಿ ಪರ ಬರಹಗಳು ಮತ್ತು ಕೋಡ್‍ಗಳು ಕಾಣಿಸಿಕೊಂಡಿದ್ದವು. ಆ ಬಳಿಕ ಈ ಬಗ್ಗೆ ಎಚ್ಚರಿಕೆ ವಹಿಸಿಕೊಂಡಿರುವ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ಖಲಿಸ್ತಾನಿ ಉಗ್ರರ ಸಂಚಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ನ ಹತಾಶೆಯು ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗ್ತಿದೆ: ಬೊಮ್ಮಾಯಿ

    ಈ ನಡುವೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದ ಪೋಸ್ಟರ್‌ಗಳನ್ನು ಪೊಲೀಸರು ಕಿತ್ತೆಸೆದು, ಬರಹಗಳನ್ನು ಅಳಿಸಿ ಹಾಕಿದ್ದಾರೆ. ಪೋಸ್ಟರ್ ಅಂಟಿಸಿದವರು ಮತ್ತು ಗೋಡೆ ಬರಹ ಬರೆದವರ ಪತ್ತೆಗೆ ಮುಂದಾಗಿದ್ದಾರೆ. ಸ್ಥಳೀಯ ಸಿಸಿಟಿವಿಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಇತ್ತ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನೂ ಭದ್ರತಾ ಪಡೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿ ಎಲ್ಲೆಡೆ ಅಲರ್ಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗುಪ್ತಚರ ಅಧಿಕಾರಿಗಳ ಜೊತೆ  ಅಮಿತ್ ಶಾ ಹೈವೋಲ್ಟೇಜ್ ಮೀಟಿಂಗ್

    ಗುಪ್ತಚರ ಅಧಿಕಾರಿಗಳ ಜೊತೆ ಅಮಿತ್ ಶಾ ಹೈವೋಲ್ಟೇಜ್ ಮೀಟಿಂಗ್

    ನವದೆಹಲಿ: ದೇಶದ ಆತಂರಿಕ, ಬಾಹ್ಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)  ಉನ್ನತ ಮಟ್ಟದ ಸಭೆ (Meeting) ನಡೆಸುತ್ತಿದ್ದಾರೆ.

    ದೇಶದಲ್ಲಿರುವ ಗುಪ್ತಚರ ಇಲಾಖೆಯ (Intelligence Bureau) ಪ್ರಮುಖ ಅಧಿಕಾರಿಗಳ ಜೊತೆಗೆ ಗಂಭೀರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ದೆಹಲಿಯ ರಹಸ್ಯ ಸ್ಥಳದಲ್ಲಿ ಸಭೆ ಆಯೋಜನೆಯಾಗಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ಹೊರತುಪಡಿಸಿ ಯಾರಿಗೂ ಪ್ರವೇಶ ನೀಡಲಾಗಿಲ್ಲ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿದ್ದು, ಸಂಜೆ ಐದು ಗಂಟೆ ವರೆಗೂ ಈ ಸಭೆ ನಡೆಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಸಭೆಯಲ್ಲಿ ದೇಶದ ಆತಂರಿಕ ಭದ್ರತೆ, ಬಾಹ್ಯ ಭದ್ರತೆ, ಭಯೋತ್ಪಾದಕರ ಬೆದರಿಕೆಗಳು, ಮಾದಕ ವ್ಯಸನ ಜಾಲ, ಸಂಘಟಿತ ಅಪರಾಧ ಜಾಲ, ಸೈಬರ್ ಸ್ಪೇಸ್ ಅಕ್ರಮ ಬಳಕೆ, ವಿದೇಶಿ ಭಯೋತ್ಪಾದಕರ ಚಲನವಲನಗಳು, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಸಮನ್ವಯದ ಬಗ್ಗೆ ಚರ್ಚೆಯಾಗಲಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತಿ ಇರಲಿದ್ದು, ರಾಜ್ಯಗಳಿಂದಲೂ ಪ್ರಮುಖ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ. ಇದನ್ನೂ ಓದಿ: ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

    Live Tv
    [brid partner=56869869 player=32851 video=960834 autoplay=true]