Tag: ಗುದ್ದಲಿ ಪೂಜೆ

  • ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ

    ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ

    ಲಕ್ನೋ: ಅಯೋಧ್ಯೆಯ ರಾಮಮಂದಿರ ಗರ್ಭಗುಡಿಗೆ ಸಿಎಂ ಯೋಗಿ ಆದಿತ್ಯನಾಥ್ ಇವತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

    ಈ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಟ್ರಸ್ಟ್‌ ಧರ್ಮದರ್ಶಿಗಳಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಕೂಡ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಮಂದಿರ ನಿರ್ಮಾಣದ ಹೊಣೆ ಹೊತ್ತ ರಾಮಜನ್ಮ ಭೂಮಿ ಟ್ರಸ್ಟ್, ದೇವಾಲಯದ ಗರ್ಭಗುಡಿಯನ್ನು ರಾಜಸ್ಥಾನದ ಮಖ್ರಾನ ಬೆಟ್ಟದಿಂದ ತರಿಸಲಾದ ಬಿಳಿ ಅಮೃತಶಿಲೆಯಿಂದ ನಿರ್ಮಿಸುತ್ತಿದೆ. ಸುಮಾರು 13,300 ಕ್ಯೂಬಿಕ್ ಅಡಿ ಅಮೃತ ಶಿಲೆ ಬಳಸುವುದಾಗಿ ಟ್ರಸ್ಟ್ ಹೇಳಿದೆ.

    ಗರ್ಭಗುಡಿ ಕಾರ್ಯ 2023 ಮತ್ತು ಇಡೀ ದೇಗುಲ ನಿರ್ಮಾಣ ಕಾರ್ಯ 2024ರ ಅಂತ್ಯದೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹಾಕಲಾಗಿದೆ.