Tag: ಗುದನಾಳ

  • ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ಎಡವಟ್ಟು – ಎಕ್ಸ್ ರೇ ನೋಡಿ ವೈದ್ಯರೇ ಶಾಕ್

    ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ಎಡವಟ್ಟು – ಎಕ್ಸ್ ರೇ ನೋಡಿ ವೈದ್ಯರೇ ಶಾಕ್

    ಬ್ರೆಜಿಲ್: ನಗರದಲ್ಲಿ ವ್ಯಕ್ತಿಯೊಬ್ಬರು ಕೆಲವು ತಿಂಗಳಿಂದ ಮಲಬದ್ಧತೆ, ವಾಕರಿಕೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರ ಬಳಿ ತೆರಳಿ ಪರೀಕ್ಷಿಸಿದಾಗ ಗುದನಾಳದಲ್ಲಿ 2 ಕೆ.ಜಿ ತೂಕದ ಡಂಬಲ್ಸ್ ಇರುವುದು ಪತ್ತೆಯಾಗಿದೆ. ಇದನ್ನು ಕಂಡ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.

    ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ ವರದಿ ಮಾಡಿರುವ ಪ್ರಕಾರ, 54 ವರ್ಷದ ಬ್ರೆಜಿಲಿಯನ್ ವ್ಯಕ್ತಿ ಕೆಲವು ತಿಂಗಳಿಂದ ಮಲಬದ್ಧತೆ, ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಸಮಸ್ಯೆ ತೀವ್ರವಾಗುತ್ತಿದ್ದಂತೆ ವೈದ್ಯರನ್ನು ಭೇಟಿ ಮಾಡಿದ್ದಾರೆ. ಮನೌಸ್‍ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಆ ವ್ಯಕ್ತಿ ತನ್ನ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಪರೀಕ್ಷಿಸಿ 2 ದಿನ ಔಷಧಿ ನೀಡಿ ಮತ್ತೆ 2 ದಿನ ಬಿಟ್ಟು ವಾಪಸ್ ಬರುವಂತೆ ಸಲಹೆ ನೀಡಿದ್ದಾರೆ. ಎರಡು ದಿನಗಳ ನಂತರ ವ್ಯಕ್ತಿಯ ಸಮಸ್ಯೆ ಪರಿಹಾರ ಸಿಗದೆ ಇದ್ದ ಕಾರಣ ವೈದ್ಯರು ಎಕ್ಸ್ ರೇ ಮಾಡಲು ತಿಳಿಸಿದ್ದಾರೆ. ಇದನ್ನೂ ಓದಿ: ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಆದರೆ ಆತ ಎಕ್ಸ್ ರೇ ಮಾಡಲು ನಿರಾಕರಿಸಿದ್ದಾನೆ. ಬಳಿಕ ವೈದ್ಯರು ಆತನ ಮನವೊಲಿಸಿ ಎಕ್ಸ್ ರೇ ಮಾಡಿಸಿದ್ದಾರೆ. ಈ ವೇಳೆ ಎಕ್ಸ್ ರೇ ಕಂಡು ವೈದ್ಯರು ಬೆಚ್ಚಿಬಿದ್ದಿದ್ದಾರೆ. ಕಾರಣ ಎಕ್ಸ್ ರೇನಲ್ಲಿ ವ್ಯಕ್ತಿಯ ಗುದನಾಳದಲ್ಲಿ ಡಂಬಲ್ಸ್ ಇರುವುದು ಪತ್ತೆಯಾಗಿದೆ. 2 ಕೆ.ಜಿ ತೂಕದ ಡಂಬಲ್ಸ್‌ನ್ನು ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಸಿಗಲಿದೆ ಮದುವೆ ಸರ್ಟಿಫಿಕೇಟ್: ಸರ್ಕಾರ ಆದೇಶ

    ಸುಮಾರು 20 ಸೆಂ.ಮೀ ಉದ್ದವಿದ್ದ ಡಂಬಲ್ಸ್, ಕೊಲೊನ್ ಗುದನಾಳವನ್ನು ಸಂಧಿಸುವ ಜಾಗದಲ್ಲಿ ಸೇರಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ. ಆತನ ಗುದನಾಳದಲ್ಲಿ ಡಂಬಲ್ಸ್ ಹೋಗಲು ಕಾರಣ ಲೈಂಗಿಕ ತೃಷೆ ಎಂಬುದು ವರದಿಯಾಗಿದೆ.

  • ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಭೋಪಾಲ್: ವಿವಾದವೊಂದಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳು ವ್ಯಕ್ತಿಯ ಗುದನಾಳದಿಂದ ಗಾಳಿ ಪಂಪ್ ಮಾಡಿದ ಪರಿಣಾಮ ಆತ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

    ಈ ಘಟನೆ 45 ದಿನಗಳ ಹಿಂದೆ ನಡೆದಿದ್ದು, ಶನಿವಾರ ವ್ಯಕ್ತಿ ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ ಎಂದು ಶಿವಪುರಿ ಎಸ್‍ಪಿ ರಾಜೇಂದ್ರ ಸಿಂಗ್ ಚಂಡೆಲ್ ತಿಳಿಸಿದ್ದಾರೆ.

    ಘಟನೆಯ ಕುರಿತು ನಮಗೆ ತಿಳಿದಾಗ ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪ್ರಕರಣ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಎಸ್‍ಪಿ ಹೇಳಿದ್ದಾರೆ. ಈ ದುರ್ಘಟನೆ ನವೆಂಬರ್ 8ರಂದು ನಡೆದಿರುವುದಾಗಿ ಮೃತ ವ್ಯಕ್ತಿಯ ಸಹೋದರ ಧನಿರಾಮ್ ಧಕಾಡ್ ತಿಳಿಸಿದ್ದಾರೆ.

    ಘಟನೆ ನಡೆದ ದಿನ ಸಹೋದರ ಎಂದಿನಂತೆ ಬೆಳಗ್ಗೆ ಆಫೀಸಿಗೆ ತೆರಳಿದ್ದನು. ಆದರೆ ಮಧ್ಯಾಹ್ನದ ಬಳಿಕ ಸಹೋದರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು. ಕೂಡಲೇ ನಾನು ಸಹೋದರನ ಬಳಿ ತೆರಳಿದೆ. ಆಗ ಆತ, ನನಗೆ ಗ್ಯಾಸ್ಟ್ರಿಕ್ ನೋವು ಅಲ್ಲ, ಸಹೋದ್ಯೋಗಿಗಳು ನನ್ನ ಗುದನಾಳದಿಂದ ಕಂಪ್ರೆಸ್ಸರ್ ಮೂಲಕ ಗಾಳಿ ಪಂಪ್ ಮಾಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ಘಟನೆಯ ತೀವ್ರತೆ ಅರಿತ ಕೂಡಲೇ ಆತನನ್ನು ಅನೇಕ ಆಸ್ಪತ್ರೆಗೆ ಕರೆದೊಯ್ದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದನು ಎಂದು ಧಕಾಡ್ ವಿವರಿಸಿದರು.

  • ಒಳ ಉಡುಪಿನಲ್ಲಿಟ್ಟಿದ್ದ ಡೈರಿ ಮಿಲ್ಕ್‌ನಲ್ಲಿ 2 ಕೋಟಿ ಮೌಲ್ಯದ 3.72 ಕೆಜಿ ಚಿನ್ನ ಪತ್ತೆ..!

    ಒಳ ಉಡುಪಿನಲ್ಲಿಟ್ಟಿದ್ದ ಡೈರಿ ಮಿಲ್ಕ್‌ನಲ್ಲಿ 2 ಕೋಟಿ ಮೌಲ್ಯದ 3.72 ಕೆಜಿ ಚಿನ್ನ ಪತ್ತೆ..!

    ಚೆನ್ನೈ: ದುಬೈನ ಶಾರ್ಜಾದಿಂದ ಹಿಂದಿರುಗುತ್ತಿದ್ದ ಪ್ರಯಾಣಿಕನೊಬ್ಬನ ಬಳಿ ಇದ್ದ 1.97 ಕೋಟಿ ಮೌಲ್ಯದ 3.72 ಕೆ.ಜಿ ಶುದ್ಧ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚೈನ್ನೈನಲ್ಲಿ ನಡೆದಿದೆ.

    ದುಬೈನ ಎಮಿರೇಟ್ಸ್ ಫ್ಲೈಟ್ ಇಕೆ 544 ಮೂಲಕ ಚೆನ್ನೈಗೆ ಆಗಮಿಸಿದ ಪದ್ಮಾ ಬಾಲಾಜಿ(25) ಅವರನ್ನು ತಡೆದು ಪರಿಶೀಲನೆ ಮಾಡಿದಾಗ ಆತ ತನ್ನ ಒಳ ಉಡುಪಿನಲ್ಲಿ ಮರೆಮಾಚಿದ್ದ ದೊಡ್ಡ ಕ್ಯಾಡ್ಬರೀಸ್ ಡೈರಿ ಮಿಲ್ಕ್ ಚಾಕ್ಲೇಟ್ ಕಂಡುಬಂದಿದೆ.

    ಚಾಕ್ಲೇಟ್ ತೆರೆದು ನೋಡಿದಾಗ 660 ಗ್ರಾಂ ಚಿನ್ನದ ಪೇಸ್ಟ್ ಹೊಂದಿರುವ ಪ್ಲಾಸ್ಟಿಕ್ ಪ್ಯಾಕೆಟ್ ಮೂಲಕ ಸುತ್ತಿಡಲಾಗಿತ್ತು. ಹೊರತೆಗೆದಾಗ 28.7 ಲಕ್ಷ ರೂ ಬೆಲೆ ಬಾಳುವ 546 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಆತನಿಂದ ವಶಪಡಿಸಿಕೊಂಡು ಪ್ರಯಾಣಿಕ ಪದ್ಮ ಬಾಲಾಜಿಯನ್ನು ಬಂಧಿಸಿದ್ದಾರೆ. ಅಲ್ಲದೆ ಬುಧವಾರ ಏರ್ ಇಂಡಿಯಾ ಫ್ಲೈಟ್ ಮೂಲಕ ಆಗಮಿಸಿದ 11 ಮಂದಿ ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಅಡಗಿಸಿಕೊಂಡಿದ್ದ 12 ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರತೆಗೆದಾಗ 2.15 ಕೆಜಿ ಚಿನ್ನವಾಗಿದ್ದು, ಅದರ ಬೆಲೆ 1.14 ಕೋಟಿ ಆಗಿತ್ತು.

    ಶಾರ್ಜಾದಿಂದ ಆಗಮಿಸಿದ 3 ಏರ್ ಅರೇಬಿಯಾ ವಿಮಾನದ ಜಿ 9-471 ಎಂಬ ಪ್ರಯಾಣಿಕನ ಗುದನಾಳದಲ್ಲಿ ಇದ್ದ 831 ಗ್ರಾಂ ತೂಕದ ಐದು ಕಟ್ಟುಗಳ ಚಿನ್ನದ ಪೇಸ್ಟ್ ನನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಆತನ ಬಳಿ 685 ಗ್ರಾಂ ಚಿನ್ನವಿದ್ದು, ಇದರ ಬೆಲೆ 36.40 ಲಕ್ಷ ರೂಗಳಾಗಿತ್ತು. ಫ್ಲೈ ದುಬೈ ಫ್ಲೈಟ್ ಎಫ್‍ಜೆಡ್ 8517 ಪ್ರಯಾಣಿಕನೊಬ್ಬನು ನಿರ್ಗಮಿಸುತ್ತಿದ್ದ ವೇಳೆ ತಡೆಹಿಡಿದು ಪರಿಶೀಲಿಸಿದಾಗ ಆತ ತನ್ನ ಗುದನಾಳದಲ್ಲಿ 401 ಗ್ರಾಂ ತೂಕದ ಎರಡು ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೊರತೆಗೆದಾಗ 18.28 ಲಕ್ಷರೂ ಮೌಲ್ಯದ 347 ಗ್ರಾಂ ಚಿನ್ನ ಸಿಕ್ಕಿತ್ತು.

  • ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಲಂಡನ್: ದೇಹದ ವಿವಿಧ ಭಾಗಗಳಲ್ಲಿ ಖದೀಮರು ಚಿನ್ನ ಸಾಗಾಟ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ, ಜೈಲಿನಲ್ಲಿ ತನಗೆ ನೀಡುವ ಆಹಾರ ಸಾಲುತ್ತಿಲ್ಲವೆಂದು ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಸಿಕ್ಕಿಬಿದ್ದ ಅಚ್ಚರಿಯ ಘಟನೆ ನಡೆದಿದೆ.

    ಹೌದು. ಇಂಗ್ಲೆಂಡ್‍ನ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು 2020ರಲ್ಲಿ ಬಂಧಿಸಿದ್ದವರ ಪಟ್ಟಿಯನ್ನು ತರಿಸಿ ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ಅದರಲ್ಲಿ ವ್ಯಕ್ತಿ ಒಬ್ಬ ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಿಕ್ಕಿಬಿದ್ದವನಾಗಿದ್ದಾನೆ.

    ಬರ್ಮಿಂಗ್‍ಹ್ಯಾಮ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಶಂಕಿತನೊಬ್ಬ ತನ್ನ ಒಳ ಉಡುಪಿನಲ್ಲಿ ಸಮೋಸಾ ಇರಿಸಿಕೊಂಡಿದ್ದಾನೆ. ಈ ವೇಳೆ ಆತನನ್ನು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಪ್ರಶ್ನೆ ಮಾಡಿದಾಗ, ಜೈಲಿನಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಆ ಆಹಾರದಿಂದ ನನಗೆ ತೃಪ್ತಿಲ್ಲ. ಅಲ್ಲದೇ ಅವರು ನೀಡುತ್ತಿರುವ ಆಹಾರ ನನಗೆ ಸಾಲುತ್ತಿಲ್ಲ ಎಂದು ಸಮೋಸಾವನ್ನು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ವ್ಯಕ್ತಿಯ ಉತ್ತರ ಕೇಳಿ ಪೊಲೀಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ.

    ಈ ಕುರಿತಂತೆ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸ್ ಕ್ರಿಮಿನಲ್ ಜಸ್ಟೀಸ್ ವಿಭಾಗದ ಇನ್ಸ್‍ಪೆಕ್ಟರ್ ಮಂಜ್ ಅಹಿರ್ ಮಾತನಾಡಿ, ನಾವು ಎಷ್ಟೋ ರೀತಿಯ ಘಟನೆಗಳನ್ನು ನೋಡಿದ್ದೇವೆ. ಆದ್ರೆ ನನ್ನ ಮನಸ್ಸಿಗೆ ನಾಟಿರುವ ಘಟನೆ ಅಂದ್ರೆ ಒಬ್ಬ ವ್ಯಕ್ತಿಯನ್ನು ಪರಿಶೀಲನೆ ಮಾಡಿದಾಗ ಆತ ತನ್ನ ಪೃಷ್ಠದ ನಡುವೆ ಸಮೋಸವನ್ನು ಅಡಗಿಸಿಟ್ಟುಕೊಂಡ ಘಟನೆ. ಆಹಾರವು ಪ್ರತಿಯೊಬ್ಬರಿಗೂ ಮುಖ್ಯ. ತನ್ನ ಹೊಟ್ಟೆಗಾಗಿ ಆತ ಸಮೋಸವನ್ನು ಕದಿಯಲು ಬಯಸಿದ್ದಾನೆ ಎಂದು ಹೇಳಿದರು.

    ಹೀಗೆ ಈ ವ್ಯಕ್ತಿ ಸಮೋಸಾವನ್ನು ಕದ್ದರೆ ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿಡ್ಲ್ಯಾಂಡ್ಸ್ ನ ಓಲ್ಡ್‍ಬರಿಯ ಕಸ್ಟಡಿಯಲ್ಲಿದ್ದಾಗ ಸಿಬ್ಬಂದಿಯಿಂದ ತಾನು ಪಡೆದ ಸೌಲಭ್ಯ ಹಾಗೂ ಆರೈಕೆಗಾಗಿ ಧನ್ಯವಾದ ಹೇಳಲು ಒಂದು ಚಾಕ್ಲೆಟ್ ಡಬ್ಬವನ್ನು ಅಧಿಕಾರಿಗಳಿಗೆ ಖರೀದಿಸಿ ನೀಡಿದ್ದಾನೆ.