ರಾಯಚೂರು: ಕಲ್ಲಿದ್ದಲು ಸಾಗಿಸುವ ರೈಲಿನ (Train) ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
ರಾಯಚೂರಿನ ಶಕ್ತಿನಗರದ (Shaktinagar) ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಗುತ್ತಿಗೆ ಕಾರ್ಮಿಕ ನಾಗರಾಜ್ (32) ರುಂಡ ಮುಂಡ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರೈಲಿನಲ್ಲೇ ನರಳಿ ನರಳಿ ಪ್ರಾಣಬಿಟ್ಟ ಮೂರ್ಛೆ ರೋಗಿ
ನವದೆಹಲಿ: 16 ವರ್ಷದ ಅಪ್ರಾಪ್ತ ಬಾಲಕಿಯ (Minor girl) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ಆತನ ಶರ್ಟ್ ಸುಳಿವಿನಿಂದ ಬಂಧಿಸಿದ (Arrest) ಪ್ರಕರಣ ದೆಹಲಿಯಲ್ಲಿ (Delhi) ನಡೆದಿದೆ. ಆರೋಪಿಯನ್ನು ಮೋನು ಎಂದು ಗುರುತಿಸಲಾಗಿದೆ. ಕೃತ್ಯ ಎಸಗುವಾಗ ಧರಿಸಿದ್ದ ಹಳದಿ ಬಣ್ಣದ ಶರ್ಟ್ ನಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಬಾಲಕಿಯ ಪೋಷಕರು ಶಾಲೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ (Contractual labourers) ಕೆಲಸ ಮಾಡುತ್ತಿದ್ದರು. ಅವರ ಕುಟುಂಬ ಶಾಲೆಯ ಒಂದು ಕೊಠಡಿಯಲ್ಲಿ ಉಳಿದುಕೊಂಡಿತ್ತು. ಕೆಲವು ದಿನಗಳಿಂದ ಶಾಲೆಗೆ ರಜೆ ಘೋಷಿಸಲಾಗಿತ್ತು. ಬಾಲಕಿಯ ಪೋಷಕರು ವೇತನ ಪಡೆಯಲು ಮಂಗಳವಾರ ತೆರಳಿದ್ದರು. ಈ ವೇಳೆ ಸಂತ್ರಸ್ತೆ ಮತ್ತು ಆಕೆಯ 18 ವರ್ಷದ ಸಹೋದರಿ ಇಬ್ಬರೇ ಮನೆಯಲ್ಲಿದ್ದರು. ಇದನ್ನು ಗಮನಿಸಿದ ಆರೋಪಿ ಮನೆಗೆ ನುಗ್ಗಿದ್ದ. ಇದನ್ನೂ ಓದಿ: ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯಾತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು
ಬೆಳಗ್ಗೆ 11.30 ರ ಸುಮಾರಿಗೆ ಆರೋಪಿ ನುಗ್ಗಿ ಬಾಲಕಿಯ ಮನೆಯನ್ನು ದರೋಡೆ (Robbery) ಮಾಡಿದ್ದಾನೆ. ಬಳಿಕ ಅಡುಗೆ ಮನೆಯಿಂದ ಚಾಕುವನ್ನು ಎತ್ತಿಕೊಂಡು 16 ವರ್ಷದ ಅಪ್ರಾಪ್ತ ಬಾಲಕಿಗೆ ಬೆದರಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಎಫ್‍ಐಆರ್ (FIR) ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಆರೋಪಿ ಹಳದಿ ಶರ್ಟ್ ಧರಿಸಿದ್ದಾನೆ ಎಂದು ಅಪ್ರಾಪ್ತ ಬಾಲಕಿ ತಿಳಿಸಿದ್ದಾಳೆ. ಸುತ್ತಮತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಹಳದಿ ಶರ್ಟ್‍ನಲ್ಲಿ ಆರೋಪಿಯ ಮಸುಕಾದ ಚಿತ್ರ ಕಂಡುಬಂದಿದೆ. ಇದರ ಆಧಾರದ ಮೇಲೆ ಸಂತ್ರಸ್ತೆ ಆರೋಪಿಯನ್ನು ಗುರುತಿಸಿದ್ದು ಬಂಧನಕ್ಕೆ ನೆರವಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ