Tag: ಗುತ್ತಿಗೆದಾರ ಸಚಿನ್

  • ಗುತ್ತಿಗೆದಾರ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ ಘೋಷಣೆ

    ಗುತ್ತಿಗೆದಾರ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ ಘೋಷಣೆ

    – ನ್ಯಾಯಯುತವಾಗಿ ತನಿಖೆ ನಡೆಯುತ್ತೆ ಎಂದು ಭರವಸೆ

    ಬೀದರ್: ಗುತ್ತಿಗೆದಾರ ಸಚಿನ್ (Contractor Suicide) ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಘೋಷಿಸಿದ್ದಾರೆ.

    ಬೀದರ್‌ನ (Bidar) ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಗುತ್ತಿಗೆದಾರ ಸಚಿನ್ ಮನೆಗೆ ಭಾನುವಾರ ಭೇಟಿ ನೀಡಿದ ಸಚಿವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಮ್ಮ ಕುಟುಂಬದ ಜೊತೆಗೆ ನಾನಿದ್ದೇನೆ. ನಿಮಗೆ ನ್ಯಾಯ ಕೊಡಿಸುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿ ಅವರು ಏನೇ ಮಾಡಿದ್ರು ನಾನು ರಾಜೀನಾಮೆ ಕೊಡೊಲ್ಲ: ಪ್ರಿಯಾಂಕ್ ಖರ್ಗೆ

    ಕುಟುಂಬಸ್ಥರ ಭೇಟಿ ನಂತರ ಮಾಧ್ಯಮದವರ ಜೊತೆಗೆ ಮಾತಾಡಿದ ಖಂಡ್ರೆ, ಸಚಿನ್ ಆತ್ಮಹತ್ಯೆ ಒಂದು ನೋವಿನ ಸಂಗತಿಯಾಗಿದೆ. ಇದು ಖೇದಕರ ಸಂಗತಿ. ನಾನು, ನಮ್ಮ ಸರ್ಕಾರ ಸಚಿನ್ ಕುಟುಂಬಸ್ಥರ ಜೊತೆಗೆ ಇದ್ದೇವೆ. ನಾನು ಸಚಿನ್ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದೇನೆ. ಸಚಿನ್ ಆತ್ಮಹತ್ಯೆ ಕೇಸ್ ನಿರ್ಲಕ್ಷ್ಯ ಮಾಡಿದ ಪೊಲೀಸರು ಮೇಲೆ ಕ್ರಮವಾಗುತ್ತೆ. ಈ ಕೇಸ್ ರೈಲ್ವೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇಸ್ ತನಿಖೆ ನ್ಯಾಯಯುತವಾಗಿ ನಡೆಯುತ್ತೆ. ಈ ಪ್ರಕರಣದಲ್ಲಿ ಯಾರೇ ಇರಲಿ ಅವರ ಮೇಲೆ ಕಾನೂನು ರೀತಿ ಕ್ರಮವಾಗುತ್ತದೆ. ಸಚಿನ್ ಕುಟುಂಬಕ್ಕೆ ಸರ್ಕಾರ ಹಾಗೂ ಖಾಸಗಿಯಾಗಿ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದೇವೆ. ನಾನು ಮೊನ್ನೆಯೇ ಬರಬೇಕಾಗಿತ್ತು, ಬರಲು ಆಗಲಿಲ್ಲ. ಬೆಳಗಾವಿ ಕಾರ್ಯಕ್ರಮ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಕಾರಣಕ್ಕೆ ಬರಲಿಲ್ಲ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಈಗಾಗಲೇ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕೇಸನ್ನ ನಾನೇ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಸಚಿನ್ ಮರಣ ಪತ್ರವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಆ ವರದಿ ಬರಲಿ ಎಂದು ತಿಳಿಸಿದರು.

    ಕಾಂಗ್ರೆಸ್‌ನ ಐದು ಗ್ಯಾರಂಟಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಆರನೇ ಗ್ಯಾರಂಟಿ ವಿಚಾರವಾಗಿ ಮಾತನಾಡಿ, ನಮ್ಮ ಐದು ಗ್ಯಾರಂಟಿ ಸಕ್ಸಸ್ ಆಗಿವೆ. ಅದೇ ಹೊಟ್ಟೆ ಕಿಚ್ಚಿನಿಂದ ಬಿಜೆಪಿಯವರು ಹೀಗೆ ಮಾತಾಡುತ್ತಿದ್ದಾರೆ. ಈ ನೆಲದ ಕಾನೂನಿನ ಅಡಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಸಚಿನ್ ಆತ್ಮಹತ್ಯೆ ಕೇಸ್ ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್

    ಸಚಿನ್ ಸಾವಿನಿಂದ ಮನೆಗೆ ಆಧಾರ ಸ್ತಂಭವಾಗಿದ್ದ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ. ನಾನು ಹಾಗೂ ನಮ್ಮ ಸರ್ಕಾರ ದುಃಖತಪ್ತ ಕುಟುಂಬದ ಜೊತೆಗೆ ಇದ್ದೇವೆ. ಈಗಾಗಲೇ ಪರವಾರದ ಜೊತೆ ಸುದೀರ್ಘ ಸಮಾಲೋಚನೆ ಮಾಡಿದ್ದೇನೆ. ಪ್ರಮುಖವಾಗಿ ಸಚಿನ್ ಆತ್ಮಹತ್ಯೆ ಮಾಹಿತಿ ಬಂದಾಗ ಪೊಲೀಸರು ದೂರು ತೆಗೆದುಕೊಳ್ಳಬೇಕಿತ್ತು. ನಿಷ್ಪಕ್ಷಪಾತ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಅಂತಾ ಸೂಚನೆ ನೀಡದ್ದೇನೆ. ಯಾವ ಠಾಣೆ ಪೊಲೀಸರ ನಿರ್ಲಕ್ಷ್ಯ ಇದೆಯೋ ಅವರ ಮೇಲೆ ಕ್ರಮ ಆಗುತ್ತೆ. ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಸಿಎಂ ಜೊತೆಗೂ ಮಾತನಾಡಿದ್ದೇನೆ. ಸಾವಿಗೆ ಕಾರಣರಾದ ವಿರುದ್ಧ ಕ್ರಮವಾಗುತ್ತೆ. ಸಮಾಜದಲ್ಲಿ ಎಲ್ಲರಿಗೂ ಭರವಸೆ ಬರುವ ರೀತಿಯಲ್ಲಿ ಕ್ರಮವಾಗುತ್ತೆ. ತನಿಖೆಯನ್ನ ಸಿಓಡಿಗೆ ವಹಿಸ್ತೇವೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 10 ಲಕ್ಷ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.