Tag: ಗುತ್ತಿಗೆದಾರ ರಾಜು ಜಾಧವ್

  • ಸಂತೋಷ್ ಪಾಟೀಲ್ ಕೆಲಸ ಮಾಡಿಲ್ಲ, ನಾವು ಕೆಲಸ ಮಾಡಿದ್ದೇವೆ: ರಾಜು ಜಾಧವ್

    ಸಂತೋಷ್ ಪಾಟೀಲ್ ಕೆಲಸ ಮಾಡಿಲ್ಲ, ನಾವು ಕೆಲಸ ಮಾಡಿದ್ದೇವೆ: ರಾಜು ಜಾಧವ್

    ಬೆಳಗಾವಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಹಣ ಹಾಕಿಲ್ಲ. ನಾವು ಹೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಸಂತೋಷ್ ಕಡೆಯಿಂದ ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಜಾಧವ್ ಹೇಳಿದರು.

    ಗೋಕಾಕ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಮತ್ತು ಸಂತೋಷ್ ನಮಗೆ ಕೆಲಸ ಮಾಡಿ ಅಂತಾ ಹೇಳಿದ್ದರು. ಈ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ನಾವು ವರ್ಕ್ ಆರ್ಡರ್ ಕೇಳಿದಾಗ ನನ್ನ ಬಳಿ ವರ್ಕ್ ಆರ್ಡರ್ ಇದೆ ಅಂತಾ ಹೇಳಿದ್ದಲ್ಲದೇ ನೀವು ಕಾಳಜಿ ಮಾಡಬೇಡಿ ಕೆಲಸ ಮಾಡಿ ಅಂತಾ ಹೇಳಿದ್ದರು. ನಾವು ಯಾರು ಕೂಡ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    BRIBE

    ನಾನು ಒಬ್ಬನೇ 27 ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದೇನೆ. ನನ್ನ ಜೊತೆಗೆ ಹನ್ನೆರಡು ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದಾರೆ. ನಾವು ಹಣ ಹಾಕಿ ಕೆಲಸ ಮಾಡಿದ್ದಕ್ಕೆ ಸಂತೋಷ್ ಹಣ ಹಾಕಿರುವುದಾಗಿ ಹೇಳಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ

    ಇದಕ್ಕೂ ಮುಂಚೆ ಗೋಕಾಕ್‍ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಗೌಪ್ಯವಾಗಿ ಭೇಟಿಯಾಗಿದ್ದರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕಡೆಯಿಂದ ತುಂಡು ಗುತ್ತಿಗೆದಾರಿಕೆ ಪಡೆದಿದ್ದ ಹನ್ನೆರಡ ಜನ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.