Tag: ಗುಣಮುಖನಾದ ಸೋಂಕಿತ

  • 154 ದಿನಗಳ ನಂತರ ಡಿಸ್ಚಾರ್ಜ್ – ಸಾವನ್ನು ಗೆದ್ದ ಕೊಪ್ಪಳದ ಮಹಿಳೆ

    154 ದಿನಗಳ ನಂತರ ಡಿಸ್ಚಾರ್ಜ್ – ಸಾವನ್ನು ಗೆದ್ದ ಕೊಪ್ಪಳದ ಮಹಿಳೆ

    ಕೊಪ್ಪಳ: ಕೊರೊನಾ ಸೋಂಕಿಗೆ ತುತ್ತಾಗಿರುವ ಮಹಿಳೆಯೊಬ್ಬರು ಬರೋಬ್ಬರಿ 158 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಬಿಡುಗಡೆಯಾದ ಅಪರೂಪದ ಪ್ರಕರಣಕ್ಕೆ ಕೊಪ್ಪಳದ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ಗೀತಾ (45) ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಜುಲೈ 13 ರಂದು ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ಗೀತಾ ದಾಖಲಾಗಿದ್ದರು. ಸೋಂಕಿತ ಮಹಿಳೆಯು ಒಟ್ಟು 104 ದಿನ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ರೋಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಶೇ.90ರಷ್ಟು ಶ್ವಾಸಕೋಶಕ್ಕೆ ಹಾನಿಯಾಗಿತ್ತು. ಆದರೂ ಸಾವನ್ನು ಗೆದ್ದು ಕೊರೊನಾ ಮುಕ್ತರಾಗಿದ್ದಾರೆ. ಸದ್ಯ ಸೋಂಕಿತ ಗೀತಾ ಸಂಪೂರ್ಣ ಗುಣಮುಖರಾಗಿದ್ದರೂ, ಕನಿಷ್ಠ ಆಕ್ಸಿಜನ್ ಸಪೋರ್ಟ್ ನಿಂದ ಉಸಿರಾಡುತ್ತಿದ್ದಾರೆ. ಸಾಕಷ್ಟು ಮುಂಜಾಗ್ರತೆ ಕ್ರಮಗಳ ಬಳಿಕ ವೈದ್ಯರು ಇಂದು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

  • ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದು ಪೊಲೀಸರು, ವೈದ್ಯರು, ನರ್ಸ್‍ಗಳಿಗೆ ನಾವು ಸಹಕರಿಸಬೇಕು ಎಂದು ಕಣ್ಣೀರಿಡುತ್ತಾ ಮನಮುಟ್ಟುವಂತೆ ಜನರಿಗೆ ಸಂದೇಶ ನೀಡಿದ್ದಾರೆ.

    ವಿಡಿಯೋವೊಂದರ ಮೂಲಕ ಇಡೀ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಕಳೆದ 3 ದಿನದ ಹಿಂದೆ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ವ್ಯಕ್ತಿ ಪೊಲೀಸರು, ವೈದ್ಯರು, ನರ್ಸ್‍ಗಳ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನರಕದಿಂದ ನಮ್ಮನ್ನು ಹೊರ ಕರೆತರಲು ಅವರು ಬಹಳ ಕಷ್ಟಪಡುತ್ತಿದ್ದಾರೆ. ಈ ನರಕದಿಂದ ಹೊರಬರಲು ನಾವು ಅವರಿಗೆ ಸಹಕಾರ ಕೊಡಬೇಕು. ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ನಾವು ಈ ಕೊರೊನಾ ಹೋರಾಟದಲ್ಲಿ ಹೋರಾಡಲು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

    ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಯನ್ನು ಸ್ಥಳೀಯರು ಯೋಧನ ರೀತಿ ಸ್ವಾಗತಿಸಿ ಬರಮಾಡಿಕೊಂಡರು. ತಬ್ಲಿಘಿ ಸಮಾವೇಶಕ್ಕೆ ತೆರಳಿ ಕೊರೊನಾ ಪಾಸಿಟಿವ್ ಆಗಿದ್ದ ತೊಕ್ಕೊಟ್ಟಿನ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವ್ಯಕ್ತಿ ಗುಣಮುಖರಾಗಿ ಮನೆಗೆ ಬರುತ್ತಿದ್ದಾಗ ಇವರನ್ನು ಸ್ವಾಗತಿಸಲು ಸೀಲ್‍ಡೌನ್ ಆದ ತೊಕ್ಕೊಟ್ಟು ಏರಿಯಾದಲ್ಲಿ 30ಕ್ಕೂ ಹೆಚ್ಚು ಮಂದಿ ಸೇರಿದ್ದರು. ಕೊರೊನಾ ಹರಡದಂತೆ ತೊಕ್ಕೊಟ್ಟಿನಲ್ಲಿ ಬಿಗುವಾದ ಲಾಕ್‍ಡೌನ್ ಮಾಡಲಾಗಿತ್ತು.

    ಈ ವೇಳೆ ಮಾತನಾಡಿದ ವ್ಯಕ್ತಿ, ವೈದ್ಯರು ಮತ್ತು ನರ್ಸ್‍ಗಳು ಸೇವೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಪೊಲೀಸರು, ವೈದ್ಯರು ಮತ್ತು ನರ್ಸ್‍ಗಳು ನಮ್ಮನ್ನು ಕೊರೊನಾ ನರಕದಿಂದ ಪಾರು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಬೇಕು. ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಅವರಿಗೆ ಎಷ್ಟೆ ಕಷ್ಟವಾದರೂ ಜನರ ಜೀವ ಉಳಿಸಲು ವೈದ್ಯರು, ಪೊಲೀಸರು, ನರ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಣ್ಣಿರಿಡುತ್ತಲೇ ಗುಖಮುಖರಾದ ಸೋಂಕಿತ ಹೇಳಿಕೊಂಡಿದ್ದಾರೆ.

    ಈ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು ಟ್ವೀಟ್ ಮಾಡಿದ್ದಾರೆ.