Tag: ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ

  • ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

    ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

    ಕಾಲಿವುಡ್ ನಟ ಅಜಿತ್ ಕುಮಾರ್‌ಗೆ  (Ajith Kumar) ಕಾಲಿಗೆ ಪೆಟ್ಟಾದ ಹಿನ್ನೆಲೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಕೇಳಿ ನಟನ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ಸೂರಿ, ಯುವ ಸಿನಿಮಾ- ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

    ಏ.28ರಂದು ಅಜಿತ್ ಕುಮಾರ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ಬಳಿಕ ನಿನ್ನೆ (ಏ.29) ನವದೆಹಲಿಯಿಂದ ಚೆನ್ನೈಗೆ ಅಜಿತ್ ವಾಪಸ್ ಆದರು. ಈ ವೇಳೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನಟನನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಈ ನೂಕುನುಗ್ಗಲಿನಲ್ಲಿ ಅಜಿತ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಸಣ್ಣ ಪ್ರಮಾಣದ ಗಾಯವಾಗಿದ್ದು, ಶೀಘ್ರದಲ್ಲಿಯೇ ಅಜಿತ್ ಡಿಸ್ಚಾರ್ಜ್ ಆಗಲಿದ್ದಾರೆ. ಸದ್ಯ ಈ ವಿಚಾರ ತಿಳಿದು ನೆಚ್ಚಿನ ನಟ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    ಇತ್ತೀಚೆಗೆ ಅಜಿತ್ ಕುಮಾರ್ ನಟಿಸಿದ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ಸಕ್ಸಸ್ ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಕೋಟಿಗಟ್ಟಲೇ ಕಲೆಕ್ಷನ್ ಮಾಡಿದೆ.

  • ಅಜಿತ್ ಸಿನಿಮಾ ವಿರುದ್ಧ ಇಳಯರಾಜ ಕಾನೂನು ಸಮರ- 5 ಕೋಟಿ ಪರಿಹಾರ ಕೋರಿ ನೋಟಿಸ್

    ಅಜಿತ್ ಸಿನಿಮಾ ವಿರುದ್ಧ ಇಳಯರಾಜ ಕಾನೂನು ಸಮರ- 5 ಕೋಟಿ ಪರಿಹಾರ ಕೋರಿ ನೋಟಿಸ್

    ಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಬೆನ್ನಲ್ಲೇ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ತನ್ನ ಸಂಯೋಜನೆಯ 3 ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕಾಗಿ ಚಿತ್ರತಂಡಕ್ಕೆ ಇಳಯರಾಜ 5 ಕೋಟಿ ರೂ. ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏ.10ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಹಳೆಯ ತಮಿಳು ಸಿನಿಮಾಗಳ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಒತ್ತಾ ರುಪಾಯುಮ್ ಥಾರೆನ್, ಇಲಮೈ ಇಧೊ ಇಧೋ, ಎನ್ ಜೋಡಿ ಮಂಜಾ ಕುರುವಿ ಹಾಡುಗಳನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಹಾಡುಗಳನ್ನು ಸಂಗೀತ ಸಂಯೋಜನೆ ಮಾಡಿರೋದು ಇಳಯರಾಜ. ಆದರೆ ಈ ಹಾಡುಗಳನ್ನು ಬಳಕೆ ಮಾಡಿಕೊಳ್ಳಲು ಚಿತ್ರತಂಡ ಇಳಯರಾಜ ಬಳಿ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ.

    ಹಾಗಾಗಿ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ವಿರುದ್ಧ ಇಳಯರಾಜ (Ilayaraja) ಕಾನೂನು ಸಮರ ಸಾರಿದ್ದಾರೆ. ತಮ್ಮ ಅನುಮತಿ ಪಡೆಯದೆ ಹಾಡು ಬಳಸಿದ್ದಕ್ಕೆ ಚಿತ್ರತಂಡಕ್ಕೆ 5 ಕೋಟಿ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಹಾಗಾದ್ರೆ ಚಿತ್ರತಂಡ ಮುಂದಿನ ನಡೆಯೇನು ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ಈ ಸಿನಿಮಾದಲ್ಲಿ ಅಜಿತ್ ಜೊತೆ ತ್ರಿಷಾ, ಪ್ರಿಯಾ ವಾರಿಯರ್ ನಟಿಸಿದ್ದರು. ಈ ಸಿನಿಮಾ ಆಗಿ 5 ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾದ ಯಶಸ್ಸಿಗೆ ಈ ಹಾಡುಗಳು ಪ್ಲಸ್ ಆಗಿತ್ತು.

  • ಅಜಿತ್‌ ಕುಮಾರ್‌ ಫ್ಯಾನ್ಸ್‌ಗೆ ಸಿಹಿಸುದ್ದಿ- ‌’ಗುಡ್‌ ಬ್ಯಾಡ್‌ ಅಗ್ಲಿ’ ಚಿತ್ರದ ಬಗ್ಗೆ ಅಪ್‌ಡೇಟ್

    ಅಜಿತ್‌ ಕುಮಾರ್‌ ಫ್ಯಾನ್ಸ್‌ಗೆ ಸಿಹಿಸುದ್ದಿ- ‌’ಗುಡ್‌ ಬ್ಯಾಡ್‌ ಅಗ್ಲಿ’ ಚಿತ್ರದ ಬಗ್ಗೆ ಅಪ್‌ಡೇಟ್

    ಮಿಳು ನಟ ಅಜಿತ್ ಕುಮಾರ್ (Ajith Kumar)‌ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾದ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. ಅಜಿತ್‌ ನಟಿಸಿರುವ ಹೊಸ ಸಿನಿಮಾದ ಕೆಲಸ ಶುರುವಾಗಿದೆ. ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

    ಇತ್ತೀಚೆಗೆ ಅಜಿತ್ ಕುಮಾರ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿತ್ತು ಚಿತ್ರತಂಡ. ಆದರೆ ಶೂಟಿಂಗ್ ಶುರುವಾಗೋದು ಯಾವಾಗ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಚಿತ್ರತಂಡ ಸೈಲೆಂಟ್ ಆಗಿಯೇ ಫಸ್ಟ್ ಶೆಡ್ಯೂಲ್ ಮುಗಿಸಿದೆ. ಅಜಿತ್ ಕುಮಾರ್ ಇಂಟ್ರಡಕ್ಷನ್ ಸೀನ್ ಸೇರಿದಂತೆ ಕಥೆಯ ಅನುಸಾರ ಹೈದರಾಬಾದ್ ಶೂಟಿಂಗ್ ಆಗಿದೆ. ಮುಂದಿನ ಶೆಡ್ಯೂಲ್‌ಗೆ ಚಿತ್ರತಂಡ ಪ್ಲ್ಯಾನ್‌ ಮಾಡುತ್ತಿದ್ದಾರೆ.

    ಅಂದಹಾಗೆ, ಚಿತ್ರದ ಪೋಸ್ಟರ್‌ನಲ್ಲಿ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ 3 ಲುಕ್‌ನಲ್ಲಿ ಅಜಿತ್ ಪೋಸ್ ಕೊಟ್ಟಿದ್ದರು. ಅದರಲ್ಲಿ ಮಧ್ಯದಲ್ಲಿರುವ ಅಜಿತ್ ಕೊಂಚ ದಪ್ಪಗೆ ಕಾಣಿಸಿಕೊಂಡಿದ್ದರು. ಅವರ ಕೈಗೆ ಟ್ಯಾಟೂ ಇದ್ದು, ಮತ್ತೊಂದರಲ್ಲಿ ಮಧ್ಯೆ ಬೆರಳು ತೋರಿಸಿ ಪೋಸ್ಟರ್‌ನಲ್ಲಿ ಬ್ಲರ್ ಮಾಡಿದ್ದರು. ಇನ್ನೊಂದರಲ್ಲಿ ಅಜಿತ್ ಯಾರೋನ್ನು ಹೊಡೆಯಲು ರೆಡಿಯಾದಂತೆ ಪೋಸ್ ಕೊಟ್ಟಿದ್ದರು. ಹಸಿರು ಮತ್ತು ಹಳದಿ ಮಿಶ್ರಿತ ಬಟ್ಟೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅಜಿತ್ ಕುಮಾರ್ ತ್ರಿಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರಾ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿತ್ತು.

    ಅಜಿತ್ ಕುಮಾರ್ ನಟನೆಯ 63ನೇ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

    ಅಂದಹಾಗೆ, ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾ (Sreeleela) ನಟಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್‌ನಲ್ಲಿ ನಟಿಗೆ ಬಿಗ್ ಆಫರ್ ಸಿಕ್ಕಿದೆ ಎನ್ನಲಾಗಿದೆ.

  • ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಔಟ್- ತ್ರಿಬಲ್ ರೋಲ್‌ನಲ್ಲಿ ಅಜಿತ್?

    ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಔಟ್- ತ್ರಿಬಲ್ ರೋಲ್‌ನಲ್ಲಿ ಅಜಿತ್?

    ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly Film) ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ತ್ರಿಬಲ್ ಶೇಡ್‌ನಲ್ಲಿ ಅಜಿತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ನಟನ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಕಿರುತೆರೆಯಲ್ಲಿ ಶುರುವಾಯ್ತು ಬ್ರ್ಯಾಂಡ್‌ ನ್ಯೂ ಸೆಲೆಬ್ರಿಟಿ ಗೇಮ್‌ ಶೋ

    ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ 3 ಲುಕ್‌ನಲ್ಲಿ ಅಜಿತ್ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಮಧ್ಯದಲ್ಲಿರುವ ಅಜಿತ್ ಕೊಂಚ ದಪ್ಪ ಕಾಣಿಸಿಕೊಂಡಿದ್ದಾರೆ. ಅವರ ಕೈಗೆ ಟ್ಯಾಟೂ ಇದೆ. ಮತ್ತೊಂದರಲ್ಲಿ ಮಧ್ಯೆ ಬೆರಳು ತೋರಿಸಿದ್ದು ಬ್ಲರ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಜಿತ್ ಯಾರೋನ್ನು ಹೊಡೆಯಲು ರೆಡಿಯಾದಂತೆ ಪೋಸ್ ಕೊಟ್ಟಿದ್ದಾರೆ. ಹಸಿರು ಮತ್ತು ಹಳದಿ ಮಿಶ್ರಿತ ಬಟ್ಟೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ಅಜಿತ್‌ ಕುಮಾರ್ ತ್ರಿಬಲ್‌ ರೋಲ್‌ನಲ್ಲಿ ನಟಿಸುತ್ತಿದ್ದಾರಾ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

    ಅಜಿತ್ ಕುಮಾರ್ ನಟನೆಯ 63ನೇ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮುಂದಿನ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್‌ ಚಿತ್ರತಂಡ ಮಾಡಿದೆ.

    ಅಂದಹಾಗೆ, ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾ (Sreeleela) ನಟಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್‌ನಲ್ಲಿ ನಟಿಗೆ ಬಿಗ್ ಆಫರ್ ಸಿಕ್ಕಿದೆ ಎನ್ನಲಾಗಿದೆ.