Tag: ಗುಡ್ ಬೈ

  • ಅಡ್ವಾನ್ಸ್ ವಾಪಸ್ ಮಾಡಿದ ಸಮಂತಾ: ಚಿತ್ರರಂಗಕ್ಕೆ ತಾತ್ಕಾಲಿಕ ಗುಡ್ ಬೈ

    ಅಡ್ವಾನ್ಸ್ ವಾಪಸ್ ಮಾಡಿದ ಸಮಂತಾ: ಚಿತ್ರರಂಗಕ್ಕೆ ತಾತ್ಕಾಲಿಕ ಗುಡ್ ಬೈ

    ದು ನಿಜಕ್ಕೂ ಸಮಂತಾ (Samantha) ಅಭಿಮಾನಿಗಳಿಗೆ ಕಹಿ ಸಮಾಚಾರ. ಇದ್ದಕ್ಕಿದ್ದಂತೆಯೇ ಸಮಂತಾ ಸಿನಿಮಾ ರಂಗದಿಂದ ದೂರ (Goodbye) ಉಳಿಯುವ ಆಲೋಚನೆ ಮಾಡಿದ್ದಾರಂತೆ. ಕೈಯಲ್ಲಿರುವ ಎರಡು ಪ್ರಾಜೆಕ್ಟ್ ಗಳನ್ನು ಶೀಘ್ರವಾಗಿ ಮುಗಿಸಿಕೊಟ್ಟು, ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇರುವ ಪ್ಲ್ಯಾನ್ ಮಾಡಿದ್ದಾರಂತೆ.

    ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ (Khushi,) ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಮಂತಾ.  ಈ ಸಿನಿಮಾದ ಶೂಟಿಂಗ್ ನಾಲ್ಕೈದು ದಿನಗಳ ಬಾಕಿಯಷ್ಟೇ ಇದೆಯಂತೆ. ಅಲ್ಲದೇ, ಸಿಟಾಡೆಲ್ (Citadel) ಪ್ರಾಜೆಕ್ಟ್ ಅನ್ನೂ ಬಹುತೇಕ ಮುಗಿಸಿದ್ದಾರಂತೆ ಸಮಂತಾ. ಈಗಾಗಲೇ ಒಪ್ಪಿಕೊಂಡಿದ್ದ ಕೆಲವು ಪ್ರಾಜೆಕ್ಟ್ ಗಳ ನಿರ್ಮಾಪಕರಿಗೆ ಹಣ ವಾಪಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಸಮಂತಾ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರಿಗಿರುವ ಅನಾರೋಗ್ಯ. ಆಟೋಇಮ್ಯೂನ್ ಎನ್ನುವ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಕಳೆದ ವರ್ಷದಿಂದ ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವಾಗಲೂ ಅವರು ಚಿತ್ರರಂಗದಿಂದ ದೂರವಿದ್ದರು. ಇದೀಗ ಹೆಚ್ಚುವರಿಯಾಗಿ ಮತ್ತೆ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ.

    ಈ ಕಾಯಿಲೆಗೆ ಹೆಚ್ಚು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ರಂಗಕ್ಕೆ ಗುಡ್ ಬೈ : ಶಾಕಿಂಗ್ ಸುದ್ದಿ ಕೊಟ್ಟ ಸ್ಟಾರ್ ಡೈರೆಕ್ಟರ್ ಲೋಕೇಶ್

    ಸಿನಿಮಾ ರಂಗಕ್ಕೆ ಗುಡ್ ಬೈ : ಶಾಕಿಂಗ್ ಸುದ್ದಿ ಕೊಟ್ಟ ಸ್ಟಾರ್ ಡೈರೆಕ್ಟರ್ ಲೋಕೇಶ್

     ಸೂಪರ್ ಹಿಟ್ ಚಿತ್ರಗಳನ್ನೇ ನೀಡಿರುವ ಲೋಕೇಶ್ ಕನಗರಾಜ್ (Lokesh Kanagaraj) ಇದ್ದಕ್ಕಿದ್ದಂತೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ‘ನಾನು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಮತ್ತು ಒಂದಷ್ಟು ಕೆಲಸ ಮಾಡುವ ಆಸೆಯಿತ್ತು. ಹತ್ತು ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ರಂಗವನ್ನು ತೊರೆಯುವುದಾಗಿ (Goodbye) ಅವರು ಮಾತನಾಡಿದ್ದಾರೆ.

    ತಮಿಳು (Tamil) ಸಿನಿಮಾ ರಂಗದಲ್ಲಿ ಅತೀ ಕಡಿಮೆ ಅವಧಿಯಲ್ಲೇ ಸಾಕಷ್ಟು ಹೆಸರು ಮಾಡಿದವರು ಲೋಕೇಶ್ ಕನಗರಾಜ್. ಐವರೆಗೂ ಇವರು ಮಾಡಿದ್ದು ಐದು ಸಿನಿಮಾ. ಇನ್ನೂ ಐದು ಸಿನಿಮಾಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಅವರು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ.  ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್

    ಲೋಕೇಶ್ ಅವರ ಮುಂದಿನ ಸಿನಿಮಾ ಕೂಡ ಅನೌನ್ಸ್ ಆಗಿದೆ. ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾವನ್ನು ಮಾಡಲಿದ್ದಾರೆ. ಇದು ಅವರ 6ನೇ ಸಿನಿಮಾ. ಭಾರೀ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ಈ ಚಿತ್ರಕ್ಕೆ ಬೇಕಾದ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದರೆ ಕೈಯಲ್ಲಿ ಉಳಿಯೋದು ನಾಲ್ಕು ಸಿನಿಮಾ ಮಾತ್ರ.

    ತಮ್ಮದೇ ಆದ ಶೈಲಿಯ ಚಿತ್ರಗಳಿಂದ ಗುರುತಿಸಿಕೊಂಡಿರುವ ಲೋಕೇಶ್, ಇಷ್ಟು ಬೇಗ ಚಿತ್ರರಂಗವನ್ನು ತೊರೆಯುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಾಕಷ್ಟು ಚಿತ್ರಗಳನ್ನು ಕೊಡುತ್ತಾರೆ ಎಂದೇ ಹಲವರು ಕನಸು ಕಂಡಿದ್ದರು. ಲೋಕೇಶ್ ಜೊತೆ ಕೆಲಸ ಮಾಡುವ ಕನಸನ್ನೂ ಹಲವರು ಹೇಳಿಕೊಂಡಿದ್ದರು. ಅವರೆಲ್ಲರಿಗೂ ಲೋಕೇಶ್ ನಿರಾಸೆ ಮಾಡಿದ್ದಾರೆ.

  • ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    ಮಗುವಾದ ನಂತರ ಅನುಷ್ಕಾ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಪತಿ ವಿರಾಟ್ ಕೊಹ್ಲಿ (Virat Kohli) ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಹೀಗೆಯೇ ಇರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ನನಗೆ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ. ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು. ನಟಿಸಲು ನನಗೇನೂ ಅವಸರವಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಷ್ಕಾ, ಅನೇಕ ಹಿಟ್ ಚಿತ್ರಗಳನ್ನು ಕೊಟ್ಟವರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದವರು. ಇದೀಗ ಸಿನಿಮಾ ರಂಗದಿಂದ ಕ್ರಮೇಣ ದೂರವಾಗುವ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  • ಕದ್ದು ಮುಚ್ಚಿ ಮಾಲ್ಡೀವ್ಸ್‌ಗೆ ಹಾರಿದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ

    ಕದ್ದು ಮುಚ್ಚಿ ಮಾಲ್ಡೀವ್ಸ್‌ಗೆ ಹಾರಿದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ

    ಟಾಲಿವುಡ್‌ನ(Tollywood) ಸ್ಟಾರ್ ಜೋಡಿ ವಿಜಯ್ ದೇವರಕೊಂಡ(Vijay Devarakonda) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಲವ್ ಸ್ಟೋರಿ ಆಗಾಗ ಸಖತ್ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂದು ಟಿಟೌನ್‌ನಲ್ಲಿ ಸಖತ್ ಸುದ್ದಿಯಾಗಿತ್ತು. ಆದರೆ ಆ ಬ್ರೇಕಪ್ ಕಥೆಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ವಿಜಯ್ ಮತ್ತು ರಶ್ಮಿಕಾ ಮದಣ್ಣ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

    ಸೌತ್ ಸಿನಿರಂಗದ ಸೆನ್ಸೇಷನ್ ಜೋಡಿ ವಿಜಯ್ ಮತ್ತು ರಶ್ಮಿಕಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಮಧ್ಯೆ ಎನು ಸರಿಯಿಲ್ಲ. ದೂರ ದೂರ ಆಗಿದ್ದಾರೆ ಎನ್ನಲಾಗಿತ್ತು. ಈ ಎಲ್ಲಾ ಗಾಸಿಪ್‌ಗಳಿಗೂ ಈಗ ಬ್ರೇಕ್ ಬಿದ್ದಿದೆ. ವಿಜಯ್ ಮತ್ತು ರಶ್ಮಿಕಾ ಏರ್‌ರ್ಪೋಟ್‌ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ಗಾಸಿಪ್‌ಗೆ ಫುಲ್ ಸ್ಟಾಪ್ ಬಿದ್ದಿದೆ. ಇವರಿಬ್ಬರು ಒಟ್ಟಿಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    `ಗುಡ್‌ಬೈ’ (Good Bye) ಸಿನಿಮಾ ರಿಲೀಸ್ ಆಗುತ್ತಿದ್ದಂತೆ ದೇವರಕೊಂಡ ಜೊತೆ ಮಾಲ್ಡೀವ್ಸ್‌ಗೆ ರಶ್ಮಿಕಾ ಜೊತೆಯಾಗಿ ಹೋಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನೂ ಬಿಟೌನ್‌ನ ಚೊಚ್ಚಲ ಚಿತ್ರದ `ಗುಡ್‌ಬೈ’ ಚಿತ್ರದ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾಚುತ್ತಾ ಅಭಿಮಾನಿಯ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ ಮಂದಣ್ಣ

    ನಾಚುತ್ತಾ ಅಭಿಮಾನಿಯ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna)  ಇದೀಗ ದಕ್ಷಿಣದ ಸಿನಿಮಾ ಮತ್ತು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನ ಕೂಡ ರಶ್ಮಿಕಾ ಸಂಪಾದಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬರು ಎದೆಯ ಮೇಲೆ ಆಟೋಗ್ರಾಫ್ ಕೊಡುವಂತೆ ಕೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ಪುಷ್ಪ’ ಚಿತ್ರದ ಸಕ್ಸಸ್ ನಂತರ ಶ್ರೀವಲ್ಲಿಗೆ ಫ್ಯಾನ್ಸ್ ಬೇಸ್ ಜಾಸ್ತಿ ಆಗಿದೆ. `ಪುಷ್ಪ’ (Pushpa) ಬ್ಯೂಟಿಯನ್ನು ಮೀಟ್ ಆಗಲು ಅದೆಷ್ಟೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಲಕ್ಕಿ ಅಭಿಮಾನಿಯೊಬ್ಬರಿಗೆ ರಶ್ಮಿಕಾರನ್ನ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಎದೆಯ ಮೇಲೆ ಆಟೋಗ್ರಾಫ್ ಬರೆಯುವಂತೆ ಕೇಳಿದ್ದಾರೆ. ಅದಕ್ಕೆ ನಟಿ ಕೂಡ ನಾಚುತ್ತಾ ಆಟೋಗ್ರಾಫ್ ನೀಡಿದ್ದಾರೆ. ನೆಚ್ಚಿನ ನಟಿಯನ್ನ ಭೇಟಿಯಾಗಿರುವುದು ಅಭಿಮಾನಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

     

    View this post on Instagram

     

    A post shared by Viral Bhayani (@viralbhayani)

    ಸದ್ಯ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ 2′ (Pushpa 2) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಲಿವುಡ್‌ನ ಮೊದಲ ಚಿತ್ರ ಬಿಗ್ ಬಿ ಜತೆಗಿ `ಗುಡ್ ಬೈ’ (Good Bye)  ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

    ಬಿಟೌನ್‌ನಲ್ಲಿ ತಮ್ಮ ಮೊದಲ ಸಿನಿಮಾ ರಿಲೀಸ್‌ಗೂ ಮುಂಚೆ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಸೂಚನೆ ಕೂಡ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನಾನು ಗೋಲ್ಡನ್ ಗರ್ಲ್’ ಎಂದು ತನಗೆ ತಾನೇ ಹೊಗಳಿಕೊಂಡ ರಶ್ಮಿಕಾ ಮಂದಣ್ಣ

    ‘ನಾನು ಗೋಲ್ಡನ್ ಗರ್ಲ್’ ಎಂದು ತನಗೆ ತಾನೇ ಹೊಗಳಿಕೊಂಡ ರಶ್ಮಿಕಾ ಮಂದಣ್ಣ

    ಬಂಗಾರ ಬಣ್ಣದ ಕಾಸ್ಟ್ಯೂಮ್ ಧರಿಸಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ‘ನಾನು ಗೋಲ್ಡನ್ ಗರ್ಲ್’ (Golden Girl) ಎಂದು ತಮ್ಮನ್ನು ತಾವೇ ಕರೆದುಕೊಂಡಿದ್ದಾರೆ. ಆ ಕಾಸ್ಟ್ಯೂಮ್ ನಲ್ಲಿ ಸಖತ್ ಸೆಕ್ಸಿಯಾಗಿ ರಶ್ಮಿಕಾ ಕಾಣಿಸಿದ್ದು, ಟ್ರೋಲ್ ಕೂಡ ಆಗುತ್ತಿದ್ದಾರೆ. ಗುಡ್ ಬೈ ಸಿನಿಮಾದ ಪ್ರಚಾರಕ್ಕಾಗಿ ಈ ಕಾಸ್ಟ್ಯೂಮ್ ಅನ್ನು ಧರಿಸಿದ್ದು, ಆ ಸಿನಿಮಾದ ಕೆಲ ಅಪ್ ಡೇಟ್ ಕೂಡ ನೀಡಿದ್ದಾರೆ.

    ಮೊನ್ನೆಯಷ್ಟೇ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೇನಿದು ಹಾಟ್ ಅವತಾರ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಅಲ್ಲದೇ, ಆ ಫೋಟೋಗಳಿಗೆ ನಾನಾ ರೀತಿಯ ಸಂದೇಶಗಳನ್ನೂ ಕಳುಹಿಸಿದ್ದರು. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ರಶ್ಮಿಕಾ ಮಂದಣ್ಣ ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಯಾವುದಕ್ಕಾಗಿ ಈ ಫೋಟೋ ಶೂಟ್ ಮಾಡಿಸಿದ್ದಾರೆ ಎನ್ನುವ ವಿವರ ಸಿಕ್ಕಿಲ್ಲ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ, ತಾವೇ ಟ್ರೋಲ್ ಮಾಡಲು ಪ್ರೇರೇಪಿಸಿದ್ದಾರೆ. ನೀಲಿ ಬಣ್ಣದ ಡೆನಿಮ್ ನಲ್ಲಿ ಸಖತ್ ಆಗಿಯೇ ಕಂಡಿದ್ದಾರೆ. ಅವರ ಈ ಲುಕ್ ಗೆ ಪಡ್ಡೆಗಳು ಫಿದಾ ಆಗಿದ್ದಾರೆ. ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

    ರಶ್ಮಿಕಾ ಇದೀಗ ಕೇವಲ ದಕ್ಷಿಣದ ನಟಿಯಾಗಿ ಉಳಿದುಕೊಂಡಿಲ್ಲ. ಬಾಲಿವುಡ್ ಗೂ ಹಾರಿದ್ದಾರೆ. ಗುಡ್ ಬೈ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಮೆಚ್ಚುಗೆಯ ಮಹಾಮಳೆಯೇ ಸುರಿದಿದೆ. ಹಾಗಾಗಿಯೇ ಸಹಜವಾಗಿಯೇ ರಶ್ಮಿಕಾ ಖುಷಿಯಲ್ಲಿದ್ದರು. ಈ ಸಿನಿಮಾ ತಮಗೊಂದು ಬ್ರೇಕ್ ನೀಡಬಹುದು ಎನ್ನುವ ನಂಬಿಕೆಯೂ ಅವರದ್ದು.

    ಗುಡ್ ಬೈ (Good Bye) ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಅಮಿತಾಭ್ ಬಚ್ಚನ್ (Amitabh Bachchan) ಜೊತೆ ರಶ್ಮಿಕಾ ನಟಿಸಿದ್ದಾರೆ. ಸ್ವತಃ ಅಮಿತಾಭ್ ಅವರೇ ರಶ್ಮಿಕಾ ಜೊತೆಗಿರುವ ಫೋಟೋವೊಂದನ್ನು ಈ ಹಿಂದೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಗೆ ಮಗಳಾಗಿ ರಶ್ಮಿಕಾ ನಟಿಸಿದ್ದಾರೆ. ಇನ್ನಷ್ಟೇ ಸಿನಿಮಾ ರಿಲೀಸ್ ಆಗಲಿದ್ದು, ಆ ಸಿನಿಮಾದ ಪ್ರಚಾರದಲ್ಲೂ ರಶ್ಮಿಕಾ ತೊಡಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಡಿ ನೋವು ನಡುವೆಯೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಮಂಡಿ ನೋವು ನಡುವೆಯೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಮೊನ್ನೆಯಷ್ಟೇ ಮಂಡಿನೋವು ಕಾರಣಕ್ಕಾಗಿ ಆಸ್ಪತ್ರೆಯ ಬಾಗಿಲು ತಟ್ಟಿದ್ದ ರಶ್ಮಿಕಾ ಮಂದಣ್ಣ (Rashmika Mandanna), ಈಗ ಆ ನೋವಿನ ನಡುವೆಯೂ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇನಿದು ಹಾಟ್ ಅವತಾರ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಆ ಫೋಟೋಗಳಿಗೆ ನಾನಾ ರೀತಿಯ ಸಂದೇಶಗಳನ್ನೂ ಕಳುಹಿಸುತ್ತಿದ್ದಾರೆ.

    ರಶ್ಮಿಕಾ ಮಂದಣ್ಣ ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಯಾವುದಕ್ಕಾಗಿ ಈ ಫೋಟೋ ಶೂಟ್ (Photo Shoot)ಮಾಡಿಸಿದ್ದಾರೆ ಎನ್ನುವ ವಿವರ ಸಿಕ್ಕಿಲ್ಲ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ, ತಾವೇ ಟ್ರೋಲ್ ಮಾಡಲು ಪ್ರೇರೇಪಿಸಿದ್ದಾರೆ. ನೀಲಿ ಬಣ್ಣದ ಡೆನಿಮ್ ನಲ್ಲಿ ಸಖತ್ ಆಗಿಯೇ ಕಂಡಿದ್ದಾರೆ. ಅವರ ಈ ಲುಕ್ ಗೆ ಪಡ್ಡೆಗಳು ಫಿದಾ ಆಗಿದ್ದಾರೆ. ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ರಶ್ಮಿಕಾ ಇದೀಗ ಕೇವಲ ದಕ್ಷಿಣದ ನಟಿಯಾಗಿ ಉಳಿದುಕೊಂಡಿಲ್ಲ. ಬಾಲಿವುಡ್ ಗೂ ಹಾರಿದ್ದಾರೆ. ಗುಡ್ ಬೈ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಮೆಚ್ಚುಗೆಯ ಮಹಾಮಳೆಯೇ ಸುರಿದಿದೆ. ಹಾಗಾಗಿಯೇ ಸಹಜವಾಗಿಯೇ ರಶ್ಮಿಕಾ ಖುಷಿಯಲ್ಲಿದ್ದರು. ಈ ಸಿನಿಮಾ ತಮಗೊಂದು ಬ್ರೇಕ್ ನೀಡಬಹುದು ಎನ್ನುವ ನಂಬಿಕೆಯೂ ಅವರದ್ದು.

    ಗುಡ್ ಬೈ (Good Bye) ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಅಮಿತಾಭ್ ಬಚ್ಚನ್ (Amitabh Bachchan) ಜೊತೆ ರಶ್ಮಿಕಾ ನಟಿಸಿದ್ದಾರೆ. ಸ್ವತಃ ಅಮಿತಾಭ್ ಅವರೇ ರಶ್ಮಿಕಾ ಜೊತೆಗಿರುವ ಫೋಟೋವೊಂದನ್ನು ಈ ಹಿಂದೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಗೆ ಮಗಳಾಗಿ ರಶ್ಮಿಕಾ ನಟಿಸಿದ್ದಾರೆ. ಇನ್ನಷ್ಟೇ ಸಿನಿಮಾ ರಿಲೀಸ್ ಆಗಲಿದ್ದು, ಆ ಸಿನಿಮಾದ ಪ್ರಚಾರದಲ್ಲೂ ರಶ್ಮಿಕಾ ತೊಡಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    `ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣದ ಸಿನಿಮಾಗಳ ಜತೆ ಬಾಲಿವುಡ್‌ನಲ್ಲೂ ಮಿಂಚ್ತಿದ್ದಾರೆ. ಇದೀಗ ರಶ್ಮಿಕಾ ಮತ್ತು ಬಿಗ್‌ಬಿ ನಟನೆಯ ʻಗುಡ್ ಬೈʼ ಚಿತ್ರದ ಫಸ್ಟ್ ಲುಕ್ ಮೂಲಕ  ರಶ್ಮಿಕಾ ಸೌಂಡ್ ಮಾಡ್ತಿದ್ದಾರೆ.

    ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜೊತೆಗಿನ ʻಗುಡ್ ಬೈʼ ಚಿತ್ರದ ಮೂಲಕ ಗಮನ ಸೆಲೆಯುತ್ತಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಜೊತೆ ರಿಲೀಸ್ ಡೇಟ್ ಕೂಡ ಚಿತ್ರದ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ವಿಕಾಸ್ ನಿರ್ದೇಶನದ ಗುಡ್ ಬೈ ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇನ್ನು ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಿಬ್ಬರ ಈ ಕಾಂಬಿನೇಷನ್ ಚಿತ್ರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    ಸೌತ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ರಶ್ಮಿಕಾ, ಇದೀಗ ಬಾಲಿವುಡ್ ಅಂಗಳದಲ್ಲೂ ಗೆಲ್ಲುತ್ತಾರಾ ಹಿಂದಿ ಸಿನಿಪ್ರೇಕ್ಷಕ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ – ಎಂಪಿ ರವೀಂದ್ರ ಗುಡ್‍ಬೈಗೆ ನಿರ್ಧಾರ

    ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ – ಎಂಪಿ ರವೀಂದ್ರ ಗುಡ್‍ಬೈಗೆ ನಿರ್ಧಾರ

    ದಾವಣಗೆರೆ: ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ. ಆದ್ರೆ ಪಕ್ಷ ಸಂಘಟನೆಯಲ್ಲಿ ಇರ್ತಿನಿ. ಕಲುಷಿತ ರಾಜಕೀಯ, ದುಬಾರಿ ಚುನಾವಣೆಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹರಪ್ಪನಹಳ್ಳಿ ಕಾಂಗ್ರೆಸ್ ಶಾಸಕ ಎಂಪಿ ರವೀಂದ್ರ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಭಾವುಕರಾದ ಅವರು, ನನ್ನನ್ನು ಪಕ್ಷ ಕಡೆಗಣಿಸಿಲ್ಲ. ಸಿಎಂ ಕಡೆಗಣಿಸಿಲ್ಲ. ನನ್ನ ಚುನಾವಣೆಯ ಸ್ವಯಂ ನಿವೃತ್ತಿ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಬಹಳ ದಿನದ ಆಲೋಚನೆ ಮಾಡಿ ನಾನು ನಿರ್ಧಾರ ಪ್ರಕಟಿಸಿದ್ದೇನೆ ಎಂದು ಹೇಳಿ ಗದ್ಗದಿತರಾದ್ರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ತಂದೆಗೆ ಸಮಾನ. ಅವರ ಬಗ್ಗೆ ನನಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ, ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ. ವ್ಯವಸ್ಥೆ ಸರಿ ಇಲ್ಲ, ವೈಯಕ್ತಿಕ ಕಾರಣದಿಂದ ನಾನು ಚುನಾವಣೆ ನಿವೃತ್ತಿ ಪಡೆಯುತ್ತಿದ್ದೇನೆ ಅಂದ್ರು.

    ಎಂ ರವೀಂದ್ರ ಚುನಾವಣಾ ನಿವೃತ್ತಿ ಹೇಳಿಕೆ ಹಿನ್ನಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೂಡಲೇ ಎಂ ಪಿ ರವೀಂದ್ರ ರವರು ಹೇಳಿಕೆಯನ್ನು ಹಿಂಪಡೆಯಬೇಕು. ಅವರೇ ಮತ್ತೇ ನಮ್ಮ ಶಾಸಕರಾಗಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ರು.

    ಅಲ್ಲದೇ ಎಂಪಿ ರವೀಂದ್ರ ಅಭಿಮಾನಿಗಳು ಹರಪ್ಪನಹಳ್ಳಿಯ ಪ್ರವಾಸಿ ಮಂದಿರದ ಬಳಿ ಪೆಟ್ರೋಲ್ ಸುರಿದುಕೊಂಡ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ರು.