Tag: ಗುಟ್ಕಾ

  • Kalaburagi | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

    Kalaburagi | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

    ಕಲಬುರಗಿ: ಗುಟ್ಕಾ (Gutka) ತಿನ್ನಬೇಡ, ಶರೀರ ಹಾಳಾಗುತ್ತದೆ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಕ್ಕೆ, ಮೊಮ್ಮಗನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ರೋಹಿತ್ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ದಮಯಂತಿ ಎಂಬ ಅಜ್ಜಿ ತನ್ನ ಮೊಮ್ಮಗನನ್ನು ಕಳೆದ ಏಳೆಂಟು ವರ್ಷಗಳಿಂದ ಸಾಕಿ ಸಲುಹಿ, ವಿದ್ಯಾಭ್ಯಾಸ ಕೊಡಿಸುತ್ತಿದ್ದಳು. ಅಜ್ಜಿಗೆ ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ಆತನ ಸ್ನೇಹಿತರಿಂದ ಗೊತ್ತಾಗಿದ್ದು, ತಿನ್ನಬೇಡಾ ಎಂಬ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

    ಬುದ್ಧಿವಾದದ ಮಾತುಗಳನ್ನು ಹೇಳಿದ ಒಂದೇ ಕಾರಣಕ್ಕಾಗಿ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

  • ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ 1,000 ರೂ. ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ

    ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ 1,000 ರೂ. ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ ದಂಡ ಕಟ್ಟಲೇಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ಉಗುಳಿದರೆ 1,000 ರೂ. ದಂಡ ಕಟ್ಟಬೇಕು.

    ರಾಜ್ಯ ಸರ್ಕಾರ ಮಸೂದೆ ತಂದಿತ್ತು. ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ಮಸೂದೆ2024ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 23ರಂದು ಅಂಕಿತ ಹಾಕಿದರು. ಈ ಸಂಬಂಧ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ, ಕಾಯ್ದೆ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ 7 ಜಿಲ್ಲೆಗಳಲ್ಲಿ ಏಕಾಏಕಿ ದಾಳಿ!

     

    ಇನ್ನು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ, ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕಾಯ್ದೆ ಉಲ್ಲಂಘಿಸಿದವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

    ಅಲ್ಲದೆ ಹೋಟೆಲ್‌ಗಳು, ಪಬ್, ಬಾರ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವೆನೆಗೂ ಅವಕಾಶ ಇಲ್ಲ. ನಿಷೇಧವನ್ನು ಉಲ್ಲಂಘಿಸಿದವರಿಗೆ 50,000 ದಿಂದ 1 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಇದನ್ನೂ ಓದಿ: Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

  • ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಬೆಳಗಾವಿ: ಗುಟ್ಕಾ (Gutka) ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟು ಗಲಾಟೆಗೆ ತಿರುಗಿ ಕೊಲೆಯಲ್ಲಿ (Murder) ಅಂತ್ಯವಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ್ ಸುಣಗಾರ(45) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಮಂಜುನಾಥ್‌ಗೆ ಅಜಯ್ ಹಿರೇಮಠ (25) ಎಂಬವನೊಂದಿಗೆ ಗಲಾಟೆಯಾಗಿತ್ತು. ಇದನ್ನೂ ಓದಿ: ಪಾರ್ಟಿ ಮಾಡಲು ಹೋದ ಮೂವರು ಯುವಕರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಸಾವು

    ಆರೋಪಿ ಹಾಗೂ ಹತ್ಯೆಯಾದ ಇಬ್ಬರೂ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಬಳಿ ನಿಂತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿ ಅಜಯ್ ಮಂಜುನಾಥ್ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಹತ್ಯೆ ನಡೆಸಿದ್ದಾನೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಅಜಯ್‌ನನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಹೆಲ್ತ್‌ಬುಲೆಟಿನ್- ದ್ರವಾಹಾರ ಸೇವಿಸ್ತಿದ್ದು, ಭಕ್ತರಿಗೆ ಆತಂಕ ಬೇಡ

    Live Tv 
    [brid partner=56869869 player=32851 video=960834 autoplay=true]

  • ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಭೋಪಾಲ್: ಮದ್ಯಪಾನ (Liquor) ಬೇಕಾದರೂ ಮಾಡಿ, ಗುಟ್ಕಾ (Gutka) ಬೇಕಾದರೂ ತಿನ್ನಿ, ಅಯೋಡೆಕ್ಸ್‌ನಾದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ನೀರಿನ ಸಂರಕ್ಷಣೆ ಕುರಿತಂತೆ ಸಲಹೆ ನೀಡುವ ಭರದಲ್ಲಿ ಬಿಜೆಪಿ (Bharatiya Janata Party) ಸಂಸದ ಜನಾರ್ದನ್ ಮಿಶ್ರಾ (Janardan Mishra) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಭಾನುವಾರ ಜಿಲ್ಲೆಯ ರೇವಾದ (Rewa) ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ (Krishnaraj Kapoor Auditorium) ಜಲ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮೀನುಗಳು ನೀರಿನಿಂದ ಬತ್ತಿ ಹೋಗುತ್ತಿದ್ದು, ಅವುಗಳನ್ನು ಉಳಿಸಬೇಕು. ನೀವು ಗುಟ್ಕಾನಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ವಾಸನೆ ಬರುವ ಅಯೋಡೆಕ್ಸ್ ಆದ್ರೂ ತಿನ್ನಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

    ಇದೇ ವೇಳೆ ಯಾವುದಾದರೂ ಸರ್ಕಾರ ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳಿಂದಲೂ ರಿಲೀಫ್ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಲಕಿಯರ ಶೌಚಾಲಯವನ್ನು ಬರಿಗೈಯಲ್ಲೇ ಸ್ವಚ್ಛಗೊಳಿಸಿದ ಬಿಜೆಪಿ MP

    ಜನಾರ್ದನ್ ಮಿಶ್ರಾ ಅವರು ಸುದ್ದಿಯಾಗುತ್ತಿರುವುದು ಇದೇ ಮೊದಲೆನಲ್ಲ, ಈ ಹಿಂದೆ ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದ್ದರು. ಅಲ್ಲದೇ , ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಸಂದೇಶವಾಗಿದೆ. ಇಂತಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ ಎಂದಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ನಿಷೇಧ

    ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ನಿಷೇಧ

    ವಿಜಯವಾಡ: ತಂಬಾಕು, ನಿಕೊಟಿನ್ ಹಾಗೂ ಇತರೆ ತಂಬಾಕಿನ ಉತ್ಪನ್ನಗಳ ತಯಾರಿಕೆಯಾದ ಗುಟ್ಕಾ ಹಾಗೂ ಪಾನ್ ಮಸಾಲಗಳ ಮಾರಾಟವನ್ನು ಆಂಧ್ರಪ್ರದೇಶ ಸರ್ಕಾರ ನಿಷೇಧಿಸಿದೆ.

    ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಅಡಿಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಆರೋಗ್ಯ, ಆಹಾರ ಸುರಕ್ಷತಾ ನಿರ್ದೇಶನಾಲಯದ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದಾರೆ.

    ಇಂದಿನಿಂದ ಒಂದು ವರ್ಷದವರೆಗೆ ಈ ನಿಯಮವೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಪದಾರ್ಥಗಳನ್ನು ಹೊಂದಿರುವ ಗುಟ್ಕಾ, ಪಾನ್ ಮಸಾಲ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟದಿಂದ ಅಪಾರ ಹಾನಿಯಾಗುತ್ತದೆ. ಅದನ್ನು ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಲೆಗಳು ಬರುವ ಸಾಧ್ಯತೆಯಿದ್ದು, ಇದರಿಂದಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO

    ತಂಬಾಕು ಉತ್ಪನ್ನಗಳನ್ನು ಜಗಿಯುವ ತಂಬಾಕು, ಖೈನಿ, ಖರ್ರಾ, ಪರಿಮಳಯುಕ್ತ ತಂಬಾಕು ಹೀಗೆ ವಿವಿಧ ಬಗೆಯಲ್ಲಿ ಪ್ಯಾಕ್ ಮಾಡಲಾಗುವ ತಂಬಾಕು ಮಾರಾಟವನ್ನು ಇಡೀ ಆಂಧ್ರಪ್ರದೇಶದಲ್ಲಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ.

  • ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ

    ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ

    – ಬೆಚ್ಚಿ ಬಿದ್ದ ಕುಂದಾ ನಗರಿ

    ಬೆಳಗಾವಿ: ಗುಟ್ಕಾ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಪಾನ್ ಶಾಪ್ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಘಟನೆಯಿಂದ ಕುಂದಾನಗರಿ ಜನ ಬೆಚ್ಚಿಬಿದ್ದಿದ್ದಾರೆ.

    ಮಂಗಳವಾರ ರಾತ್ರಿ ಬೆಳಗಾವಿಯ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಜೋರಾಗಿತ್ತು. ಜನರು ಗಣೇಶನ ವಿಸರ್ಜನೆಯಲ್ಲಿಯೇ ತಲ್ಲೀನರಾಗಿದ್ದರು. ಆದರೆ ಇತ್ತ ಆರೋಪಿ ದತ್ತಾತ್ರೇಯ ಶಿವಾನಂದ ಜತ್ತಿನಮಠ ಗುಟ್ಕಾ ಸಾಲ ಕೊಡು ಎಂದು ಬಂದಿದ್ದು, ಉದ್ರಿ ಕೊಡುವುದಿಲ್ಲ ಎಂದು ಪಾನ್ ಶಾಪ್ ಮಾಲೀಕ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಇಷ್ಟು ಅಂದಿದ್ದೇ ತಡ ಪಾನ್ ಅಂಗಡಿ ಮಾಲೀಕನನ್ನು ದತ್ತಾತ್ರೇಯ ಶಿವಾನಂದ ಜತ್ತಿನಮಠ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

    ಹತ್ಯೆಯಾದ ಬಾಲಕೃಷ್ಣ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಕಳೆದ 25 ವರ್ಷಗಳಿಂದ ಪಾನ್ ಶಾಪ್ ನಡೆಸುತ್ತಿದ್ದರು. ಬೆಳಗ್ಗೆಯಿಂದ ರಾತ್ರಿವರೆಗೂ ಪಾನ್ ಶಾಪ್ ನಡೆಸಿಕೊಂಡು ಪತ್ನಿ, ಮಕ್ಕಳನ್ನು ಸಾಕುತ್ತಿದ್ದರು.

    ಘಟನೆ ಸಂಬಂಧ ಕೊಲೆಯಾದ ಬಾಲಕೃಷ್ಣ ಶೆಟ್ಟಿ ಆಪ್ತ ಪ್ರಭಾಕರ್ ಶೆಟ್ಟಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾದಕ ವಸ್ತು ಸೇವಿಸಿ ಬಂದು, ಗುಟ್ಕಾ ಸಾಲ ಕೊಡುವಂತೆ ಪದೇ ಪದೇ ಕಿರಿ ಕಿರಿ ಮಾಡುತ್ತಿದ್ದರು. ಉದ್ರಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಆರೋಪಿ ದತ್ತಾತ್ರೇಯ ಶಿವಾನಂದ ಜತ್ತಿನಮಠ ನಮ್ಮ ಉಡುಪಿಯವರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಹೊರಗೆ ಬಿಡಬಾರದು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

  • ಗುಟ್ಕಾ ತಿಂದು ರಸ್ತೆಗೆ ಉಗಿದವನಿಗೆ ಶಿಕ್ಷೆ ನೀಡಿದ ಕೊರೊನಾ ವಾರಿಯರ್

    ಗುಟ್ಕಾ ತಿಂದು ರಸ್ತೆಗೆ ಉಗಿದವನಿಗೆ ಶಿಕ್ಷೆ ನೀಡಿದ ಕೊರೊನಾ ವಾರಿಯರ್

    ಚಿಕ್ಕೋಡಿ(ಬೆಳಗಾವಿ): ಗುಡ್ಕಾ ತಿಂದು ರಸ್ತೆಗೆ ಉಗುಳಿದ ವ್ಯಕ್ತಿಗೆ ಕೊರೊನಾ ವಾರಿಯರ್ ಶಿಕ್ಷೆ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.

    ಕೊರೊನಾ ಮಹಾಮಾರಿ ಹರಡುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಗುಟ್ಕಾ ತಿಂದು ನಿಪ್ಪಾಣಿ ನಗರಸಭೆ ಎದುರು ರಸ್ತೆಗೆ ಉಗುಳಿದ್ದಾನೆ. ಇದನ್ನು ಕೊರೊನಾ ವಾರಿಯರ್ ಒಬ್ಬರು ಗಮನಿಸಿದ್ದಾರೆ. ಅಲ್ಲದೆ ಕೂಡಲೇ ಆತನಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಿದ್ದಾರೆ.

    ವ್ಯಕ್ತಿ ಉಗಿದ ಕೂಡಲೇ ಸ್ಥಳಕ್ಕೆ ಬಂದ ಪೌರಾಯುಕ್ತ ಮಹಾವೀರ ಬೋರನ್ನ, ಆತನ ಅಂಗಿ ಬಿಚ್ಚಿಸಿ ಅದರಿಂದಲೇ ಉಗಿದ ಜಾಗ ಕ್ಲೀನ್ ಮಾಡಿಸಿದ್ದಾರೆ. ಈ ಮೂಲಕ ಕೊರೊನಾ ಆತಂಕದ ನಡುವೆ ಗುಟ್ಕಾ ತಿಂದು ಉಗುಳುವವರಿಗೆ ಪೌರಾಯುಕ್ತರು ಪಾಠ ಕಲಿಸಿದ್ದಾರೆ.

  • ಮದ್ಯ ಆಯ್ತು, ಈಗ ಗುಟ್ಕಾಪ್ರಿಯರಿಂದ ಕ್ಯೂ

    ಮದ್ಯ ಆಯ್ತು, ಈಗ ಗುಟ್ಕಾಪ್ರಿಯರಿಂದ ಕ್ಯೂ

    ರಾಯಚೂರು: ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಮದ್ಯದ ಅಂಗಡಿ ಮುಂದೆ ಮದ್ಯಪ್ರಿಯರು ಕ್ಯೂ ನಿಂತಿದ್ದರು. ಈಗ ಗುಟ್ಕಾ, ಸಿಗರೇಟ್ ಅಂಗಡಿ ಮುಂದೆ ದೊಡ್ಡ ಕ್ಯೂ ಕಾಣಿಸುತ್ತಿದೆ.

    ಪಾನ್ ಬೀಡ ವ್ಯಾಪಾರಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಸಗಟು ಅಂಗಡಿಗಳ ಮುಂದೆ ವ್ಯಾಪಾರ ಜೋರಾಗಿದೆ. ರಾಯಚೂರಿನ ಮಾನ್ವಿಯಲ್ಲಿ ನೂರಾರು ಜನರಿಂದ ಭರ್ಜರಿ ವ್ಯಾಪಾರ ನಡೆದಿದೆ. ಮಾನ್ವಿಯ ಸಗಟು ವ್ಯಾಪಾರ ಅಂಗಡಿಗಳ ಮುಂದೆ ಜನಜಂಗುಳಿ ಸೇರಿದ್ದು ಸಾಮಾಜಿಕ ಅಂತರ, ಮಾಸ್ಕ್‍ಗಳನ್ನು ಮರೆತು ಗುಟ್ಕಾ ಪ್ಯಾಕೆಟ್ ಗಳನ್ನು ಜನ ಕೊಳ್ಳುತ್ತಿದ್ದಾರೆ.

    ಕ್ಯೂನಲ್ಲಿ ನಿಂತ ಪಾನ್ ಬೀಡ ಅಂಗಡಿ, ಕಿರಾಣಿ ಅಂಗಡಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾ ಭೀತಿಯನ್ನೇ ಮರೆತಿದ್ದಾರೆ. ಗ್ರಾಮೀಣ ಭಾಗದಿಂದಲೂ ಬಂದ ನೂರಾರು ಜನ ಗುಟ್ಕಾ ಪ್ಯಾಕೆಟ್‍ಗಳನ್ನು ತೆಗೆದುಕೊಂಡು ಹೋದರು. ಮೊದಮೊದಲಿಗೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಮೇ 4 ರಂದು ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

  • ಗುಟ್ಕಾ ತಿಂದು ಉಗಿದವನ ಶರ್ಟ್ ಬಿಚ್ಚಿಸಿ ರಸ್ತೆ ಸ್ವಚ್ಛಗೊಳಿಸಿದ್ರು

    ಗುಟ್ಕಾ ತಿಂದು ಉಗಿದವನ ಶರ್ಟ್ ಬಿಚ್ಚಿಸಿ ರಸ್ತೆ ಸ್ವಚ್ಛಗೊಳಿಸಿದ್ರು

    ಚಿಕ್ಕೋಡಿ(ಬೆಳಗಾವಿ): ಗುಟ್ಕಾ ತಿಂದು ರಸ್ತೆಯಲ್ಲೇ ಉಗಿದಿದ್ದವನ ಶರ್ಟ್ ಬಿಚ್ಚಿಸಿ ಅದರಿಂದಲೇ ರಸ್ತೆ ಸ್ವಚ್ಛ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆದಿದೆ.

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದ ರಸ್ತೆಗಳನ್ನ ಪೌರ ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯಪುರ ಮೂಲದ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ರಸ್ತೆಯಲ್ಲಿಯೇ ಉಗುಳಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ನಿಪ್ಪಾಣಿ ನಗರ ಸಭೆಯ ಪೌರಾಯುಕ್ತ ಮಹಾವೀರ ಬೋರಣ್ಣವರ ಗುಟ್ಕಾ ತಿಂದು ಉಗಳುವುದನ್ನ ಗಮನಿಸಿ ವ್ಯಕ್ತಿಯನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಲ್ಲದೆ ಅಲ್ಲೇ ವ್ಯಕ್ತಿಯ ಶರ್ಟ್ ಬಿಚ್ಚಿಸಿ ಅದರಿಂದಲೇ ಉಗಿದಿದ್ದ ಗುಟ್ಕಾವನ್ನ ಸ್ವಚ್ಛ ಮಾಡಿಸಿ ಸ್ಥಳದಲ್ಲೆ ಶಿಕ್ಷೆ ನೀಡಿದ್ದಾರೆ. ವ್ಯಕ್ತಿ ಶುಚಿಗೊಳಿಸುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ನಿಪ್ಪಾಣಿ ನಗರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಕೊರೊನಾ ಎಫೆಕ್ಟ್ – ಪಾನ್ ಮಸಾಲ, ಗುಟ್ಕಾ ಉತ್ಪಾದನೆ ಬಂದ್

    ಕೊರೊನಾ ಎಫೆಕ್ಟ್ – ಪಾನ್ ಮಸಾಲ, ಗುಟ್ಕಾ ಉತ್ಪಾದನೆ ಬಂದ್

    ಲಕ್ನೋ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭಾರತ ಬಂದ್ ಘೋಷಣೆ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತಾತ್ಕಾಲಿಕವಾಗಿ ಪಾನ್ ಮಸಾಲ ಉತ್ಪಾದನೆಗೆ ಬ್ರೇಕ್ ಹಾಕಿದೆ.

    ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ ಪಾನ್ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ ಮಾಡದಂತೆ ಉತ್ಪಾದಕರಿಗೆ ಉತ್ತರ ಪ್ರದೇಶ ಸರ್ಕಾರದಿಂದ ಸೂಚನೆ ನೀಡಿದೆ. ತಂಬಾಕು ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಲಾಲಾ ರಸದಲ್ಲಿರುವ ಸೋಂಕು ಮತ್ತೊಬ್ಬರಿಗೆ ಹರಡುಬಹುದು ಎನ್ನುವ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಗುಟ್ಕಾ, ಪಾನ್ ಮಸಾಲ ಮತ್ತು ಚೂಯಿಂಗ್ ತಂಬಾಕು ಬಳಕೆಯನ್ನು ತಕ್ಷಣ ನಿಷೇಧಿಸುವಂತೆ ಮುಖ್ಯಮಂತ್ರಿ ಹಿಂದೆ ಆದೇಶಿಸಿದರು. ಆದಾಗ್ಯೂ ಸರ್ಕಾರಿ ನೌಕರರು ತಂಬಾಕು ಮತ್ತು ಪಾನ್ ಮಸಾಲವನ್ನು ಅಗಿಯಲು ಪ್ರಾರಂಭಿಸಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ತಂಬಾಕು ನಿಷೇಧದ ಬದಲಿಗೆ ಅದರ ಉತ್ಪಾದನೆಗೆ ಬ್ರೇಕ್ ಹಾಕುವ ಪ್ರಯತ್ನ ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದಾರೆ.