ಮೈಸೂರು: ವಿಷಾನಿಲ ಸೋರಿಕೆಯಿಂದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣ ಮೈಸೂರಿನ (Mysuru) ಹಳೆ ಕೆಸರೆಯ ಗುಜರಿಯಲ್ಲಿ ನಡೆದಿದೆ.
ಗುಜರಿಯ ಗೋಡೌನ್‍ನಲ್ಲಿ ವಿಷಕಾರಿ ಅನಿಲ್ ಸೋರಿಕೆಯಾಗಿದ್ದು, ಸುತ್ತಮುತ್ತಲ ಜನರಿಗೆ ಕೆಮ್ಮು, ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಸುಮಾರು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಜರಿಯಲ್ಲಿ ಕೆಲಸ ಮಾಡುತ್ತಿದ್ದ ಐವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ಗೆ 7 ವರ್ಷ ಜೈಲು ಶಿಕ್ಷೆ
ಚಿಕ್ಕಬಳ್ಳಾಪುರ: ಪಟಾಕಿ ಕಿಡಿಯಿಂದ ಗುಜರಿ ಅಂಗಡಿಯೊಂದು (Rummage Shop) ಹೊತ್ತಿ ಉರಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯ ಮಂಡಿಬೆಲೆ ರೋಡ್ ಬಳಿ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಜಯಪುರ ಪಟ್ಟಣದ ಭರತ್ ನಗರದ ವಾಸಿ ಮುಬಾರಕ್ ಎಂಬವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದ್ದು, ಪಟಾಕಿಯ ಕಿಡಿ ಗುಜರಿ ಅಂಗಡಿ ಮೇಲೆ ಬಿದ್ದು ಬೆಂಕಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ
ದೀಪಾವಳಿ ಪ್ರಯುಕ್ತ ಪಟ್ಟಣದಾದ್ಯಂತ ಪಟಾಕಿ ಸಿಡಿಸುತ್ತಿದ್ದ ಸಂದರ್ಭ ಪಟಾಕಿ ಕಿಡಿ ಗುಜರಿ ಅಂಗಡಿಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಗುಜರಿ ಅಂಗಡಿಯ ಮಾಲೀಕ ಮುಬಾರಕ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಲೀಕರು, ರಾತ್ರಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಬೆಂಕಿ ಹೊತ್ತಿ ಉರಿಯುವ ಸಂದರ್ಭದಲ್ಲಿ ಬಂದು ನೋಡಿದಾಗ ಬೆಂಕಿ ಎಲ್ಲಾ ಕಡೆ ಆವರಿಸಿತ್ತು. ಸುಮಾರು ಎರಡರಿಂದ ಮೂರು ಲಕ್ಷ ಗುಜರಿ ಸಾಮಗ್ರಿಗಳು ನಷ್ಟವಾಗಿದೆ ಎಂದರು. ಸ್ಥಳಕ್ಕೆ ದೇವನಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಅಂತ MBBS ವಿದ್ಯಾರ್ಥಿನಿ ಆತ್ಮಹತ್ಯೆ
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಗ್ಯಾಸ್ ಕಟ್ಟರ್ ಮೂಲಕ ಬೋಟ್‍ನ ಕಂಪ್ರೇಸರ್ ಕಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.
ಮಲ್ಲಾರು ಗ್ರಾಮದ ಗುಡ್ಡೆಗೇರಿ ಎಂಬ ಜನವಸತಿ ಪ್ರದೇಶದಲ್ಲಿರುವ ಗುಜರಿ ಅಂಗಡಿಯ ಸುತ್ತಮುತ್ತ ಮನೆಗಳಿದ್ದು, ಅಂಗಡಿಗೆ ತಾಗಿಯೇ ಮಸೀದಿ ಇದೆ. ಬೆಳಗ್ಗೆ 10:30ರ ಸಂದರ್ಭದಲ್ಲಿ ಗುಜರಿ ಅಂಗಡಿಯ ಒಳಗೆ ಸ್ಫೋಟ ಆಗಿತ್ತು. ವಿಷಯ ತಿಳಿದಾಕ್ಷಣ ಪಾದೂರಿನ ಐಎಸ್ ಪಿಆರ್‍ಎಲ್ ಘಟಕದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗುಜರಿ ಅಂಗಡಿಗೆ ಸುತ್ತ ತಗಡುಗಳ ಶೀಟ್‍ಗಳನ್ನು ಅಳವಡಿಸಲಾಗಿದ್ದು, ಮೊದಲು ಅದನ್ನು ತೆಗೆದು ಅಗ್ನಿಶಾಮಕ ವಾಹನವನ್ನು ಒಳಗೆ ತೆಗೆದುಕೊಂಡು ಹೋಗಬೇಕಾಯಿತು.
ಅಗ್ನಿಶಾಮಕದಳದ ನಾಲ್ಕು ವಾಹನಗಳಿಂದ ಕಾರ್ಯಾಚರಣೆ ಮಾಡಲಾಯಿತು. ಬೆಂಕಿ ಉರಿಯುತ್ತಿದ್ದಂತೆ ಸಣ್ಣ ಸಣ್ಣ ಸಿಲಿಂಡರ್‍ಗಳು ಗುಜರಿ ಅಂಗಡಿ ಒಳಗೆ ಬ್ಲಾಸ್ಟ್ ಆಗಿವೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬರು ಸಾಗರ ಮೂಲದ ನಿಯಾಜ್ (40) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂಳಿದಂತೆ ಮೂವರು ಗಾಯಾಳುಗಳನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಅಧಿಕಾರಿಗಳು ರಕ್ಷಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ:ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರು ಸಜೀವ ದಹನ ಓರ್ವ ಗಂಭೀರ
ದಟ್ಟವಾದ ಹೊಗೆ ಮತ್ತು ಬೆಂಕಿ ಸಂಪೂರ್ಣವಾಗಿ ಗುಜರಿ ಅಂಗಡಿಯ ಸುತ್ತ ಆವರಿಸಿದ ಕಾರಣ ಅಗ್ನಿಶಾಮಕ ದಳದವರಿಗೆ ಮತ್ತು ಸ್ಥಳೀಯರಿಗೆ ಅಂಗಡಿಯ ಒಳಗೆ ಹೋಗಿ ಗಾಯಾಳುಗಳನ್ನು ಹೊರತರಲು ಸಾಧ್ಯವಾಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಥಳೀಯ ಸಮಾಜಸೇವಕ ಸೂರಿ ಶೆಟ್ಟಿ ಹೇಳಿದರು.
ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಅದೃಷ್ಟವಶಾತ್ ಪಕ್ಕದಲ್ಲಿದ್ದ ಮಸೀದಿ, ಮನೆಗಳಿಗೆ ಬೆಂಕಿ ಆವರಿಸಿಲ್ಲ. ಅಂಗಡಿ ಸುತ್ತಮುತ್ತ ಇದ್ದ ತೆಂಗಿನ ತೋಟ ಬೆಂಕಿಗಾಹುತಿಯಾಗಿದೆ. ನಾನು ಕಂಪನಿಯಿಂದ ಮೂರು ಬಾರಿ ನೀರು ತುಂಬಿಸಿಕೊಂಡು ಬಂದಿದ್ದೇನೆ. ಇನ್ನು ವಿಳಂಬವಾಗಿದ್ದರೆ, ಸುತ್ತಮುತ್ತಲಿನ ಮನೆ ಮತ್ತು ಮಸೀದಿಗೆ ಬೆಂಕಿ ಆವರಿಸಿಕೊಳ್ಳುತ್ತಿತ್ತು ಎಂದು ಐಎಸ್ ಪಿಆರ್‍ಎಲ್ ಫೈರ್ ತಂಡದ ಸಮಾದ್ ಮಜೂರು ಮಾಹಿತಿ ನೀಡಿದರು.
ಬೆಂಕಿ ಬಿದ್ದ ಕಾರಣ ಸುತ್ತಮುತ್ತ ಸ್ವಲ್ಪ ಹಾನಿಯಾಗಿದೆ. ಅಂಗಡಿ ಪಕ್ಕದಲ್ಲಿದ್ದ ಮಸೀದಿಗೆ ಹಾನಿಯಾಗಿದೆ. ಗುಜರಿ ಅಂಗಡಿಗೆ ಸುತ್ತಲೂ ತಗಡು ಶೀಟ್‍ಗಳನ್ನು ಹಾಕಿದ್ದಾರೆ. ಒಳಗೆ ಏನಾಗುತ್ತದೆ ಎಂಬ ಬಗ್ಗೆ ಆರಂಭದಲ್ಲಿ ಗೊತ್ತಾಗಲೇ ಇಲ್ಲ. ಬ್ಯಾರಿಕೇಡ್‍ಗಳನ್ನು ತೆರವು ಮಾಡಿ ಬೆಂಕಿ ನಂದಿಸಬೇಕಾಯ್ತು. ಏಕಕಾಲದಲ್ಲಿ 4 ಅಗ್ನಿಶಾಮಕ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್
ಅಂಗಡಿಯಲ್ಲಿ ಗುಜರಿ ಕಟ್ಟಿಂಗ್ ಗೆ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಇದನ್ನೂ ಓದಿ:13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ
ರಾಯಚೂರು: ತಡರಾತ್ರಿ ಗುಜುರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುಜುರಿ ಅಂಗಡಿಯು ಸೈಯದ್ ಉಸ್ಮಾನ್ ಎಂಬವರಿಗೆ ಸೇರಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ನಾಲ್ಕು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸಿದ್ದರಿಂದ ಕೆಲವಷ್ಟು ವಸ್ತುಗಳು ಉಳಿದುಕೊಂಡಿದೆ.
ಸುಮಾರು ಎಂಟು ಲಕ್ಷ ಮೌಲ್ಯದ ವಸ್ತುಗಳಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತು ಸುಟ್ಟುಹೋಗಿವೆ. ಆದರೆ ಬೆಂಕಿ ಹೊತ್ತಿಕೊಂಡಿದ್ದರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಳೆದ ವರ್ಷ ಸಹ ಗುಜುರಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿದ್ದವು. ಈಗ ಪುನಃ ಬೆಂಕಿ ಅವಘಡ ಸಂಭವಿಸಿದೆ.
ಈ ಸಂಬಂಧ ಸಿಂಧನೂರು ನಗರ ಪೋಲೀಸ್ ಠಾಣೆಯಲ್ಲಿ ಸೈಯದ್ ಉಸ್ಮಾನ್ ಪ್ರಕರಣ ದಾಖಲಿಸಿದ್ದಾರೆ.