Tag: ಗುಜರಾತ್ ಹೈ ಕೋರ್ಟ್

  • ಮಾಸ್ಕ್ ಹಾಕದವರಿಗೆ ಕೊರೊನಾ ಸೆಂಟರ್‌ನಲ್ಲಿ ಕೆಲಸ ಮಾಡಿಸಿ- ಹೈಕೋರ್ಟ್ ಚಾಟಿ

    ಮಾಸ್ಕ್ ಹಾಕದವರಿಗೆ ಕೊರೊನಾ ಸೆಂಟರ್‌ನಲ್ಲಿ ಕೆಲಸ ಮಾಡಿಸಿ- ಹೈಕೋರ್ಟ್ ಚಾಟಿ

    – ನಿಯಮ ರೂಪಸುವಂತೆ ಸರ್ಕಾರಕ್ಕೆ ಸೂಚನೆ
    – ಸ್ವಚ್ಛ, ಹೌಸ್‍ಕೀಪಿಂಗ್ ಸೇರಿದಂತೆ ವಿವಿಧ ಕೆಲಸ

    ಗಾಂಧಿನಗರ: ಕೊರೊನಾ ಎರಡನೇ ಅಲೆ, ಮೂರನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಹಲವರು ಮಾಸ್ಕ್ ಹಾಕದೇ, ಕೊರೊನಾ ನಿಯಮ ಪಾಲಿಸಿದೆ ಉಡಾಫೆ ತೋರುತ್ತಿದ್ದಾರೆ. ಇಂತಹವರಿಗೆ ಕೋರ್ಟ್ ಚಾಟಿ ಬೀಸಿದ್ದು, ಮಾಸ್ಕ್ ಹಾಕದವರನ್ನು ಕೊರೊನಾ ಸೆಂಟರ್‌ನಲ್ಲಿ ಕೆಲಸ ಮಾಡಿಸುವ ನಿಯಮ ರೂಪಿಸಿ ಎಂದು ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

    ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಅಂತಹವರನ್ನು ಕೊರೊನಾ ಕೇಂದ್ರಗಳಲ್ಲಿ ಸಾರ್ವಜನಿಕರ ಸೇವೆ ನಿಯೋಜಿಸಬೇಕು. ಈ ನಿಟ್ಟಿನಲ್ಲಿ ನಿಯಮ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವ ಹೈಕೋರ್ಟ್, ಕೊರೊನಾ ನಿಯಮ ಉಲ್ಲಂಘಿಸುವವರು ಐದರಿಂದ 15 ದಿನಗಳ ವರೆಗೆ ಕನಿಷ್ಠ ನಾಲ್ಕರಿಂದ ಐದು ಗಂಟೆಗಳ ಕಾಲ ಯಾವುದೇ ಕೋವಿಡ್ ಕೇರ್ ಸೆಂಟರ್‍ನಲ್ಲಿ ವೈದ್ಯಕೀಯೇತರ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

    ಉಲ್ಲಂಘಿಸುವವರು ಕೊರೊನಾ ಕೇಂದ್ರಗಳ ಸ್ವಚ್ಛಗೊಳಿಸುವುದು, ಹೌಸ್ ಕೀಪಿಂಗ್, ಅಡುಗೆ ಮಾಡುವುದು, ಸಹಾಯಕರಾಗುವುದು, ಸೇವೆ, ದಾಖಲೆ ಸಿದ್ಧಪಡಿಸುವುದು, ಅಂಕಿ ಅಂಶಗಳ ಸಂಗ್ರಹಣೆ ಸೇರಿದದಂತೆ ಇತರೆ ಸೇವೆಗಳನ್ನು ಮಾಡಬೇಕು. ದಂಡದ ಜೊತೆಗೆ ಈ ಸೇವೆ ಮಾಡಬೇಕು.

    ನಿಯೋಜಿಸಲಾದ ಕೆಲಸದ ಸ್ವರೂಪವು ನಿಯಮ ಉಲ್ಲಂಘಿಸುವವರ ವಯಸ್ಸು, ವಿದ್ಯಾರ್ಹತೆ, ಲಿಂಗ ಹಾಗೂ ಸ್ಥಿತಿಗೆ ಅನುಗುಣವಾಗಿರುತ್ತದೆ. ಕೋರ್ಟ್ ಆದೇಶ ಪಾಲಿಸಿದ ಕುರಿತು ಡಿಸೆಂಬರ್ 24ರಂದು ಸರ್ಕಾರ ಸ್ಥಿತಿಗತಿ ವರದಿ ಸಲ್ಲಿಸಬೇಕು. ವಿಶಾಲ್ ಅವತಾನಿ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕಕ್ತಿ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

  • ನರೋಡಾ ಗಾಮ್ ಹತ್ಯಾಕಾಂಡ: ಗುಜರಾತ್ ಮಾಜಿ ಸಚಿವೆ ಕೊಡ್ನಾನಿ ಖುಲಾಸೆ

    ನರೋಡಾ ಗಾಮ್ ಹತ್ಯಾಕಾಂಡ: ಗುಜರಾತ್ ಮಾಜಿ ಸಚಿವೆ ಕೊಡ್ನಾನಿ ಖುಲಾಸೆ

    ಅಹಮದಾಬಾದ್: ಗುಜರಾತ್ ಹೈ ಕೋರ್ಟ್ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಿಂದ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದೆ. ಬಜರಂಗ ದಳದ ಮುಖಂಡ ಬಾಬು ಬಜರಂಗಿ ಗೆ ನೀಡಿದ ಶಿಕ್ಷೆಯ ತೀರ್ಪನ್ನು ಕೋರ್ಟ್ ಎತ್ತಿ ಹಿಡಿದಿದೆ.

    ಪ್ರಕರಣದ ವಿಚಾರಣೆಯ ವೇಳೆ ಸಾಕ್ಷ್ಯಗಳೆಂದು ಪರಿಗಣಿಸಲಾಗಿದ್ದ 11 ಮಂದಿಗಳ ಪೈಕಿ ಯಾರೊಬ್ಬರು ಮಾಯಾ ಕೊಡ್ನಾನಿ ಈ ಗಲಾಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸದ ಹಿನ್ನೆಯಲ್ಲಿ ಕೋರ್ಟ್ ಕೊಡ್ನನಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

    ವಿಚಾರಣೆಯ ವೇಳೆ ಕೊಡ್ನಾನಿ ಅವರು ಪೊಲೀಸರ ಜೊತೆ ಮಾತನಾಡುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಸಾಕ್ಷ್ಯ ನುಡಿದಿದ್ದರು. ಈ ಹಿನ್ನೆಲೆಯ ಹತ್ಯಾಕಾಂಡಕ್ಕೆ ಯಾವುದೇ ಕ್ರಿಮಿನಲ್ ಪಿತೂರಿ ಎಸಗಿಲ್ಲ ಎಂದು ಅಭಿಪ್ರಾಯಪಟ್ಟು ಕೋರ್ಟ್ ಕೊಡ್ನಾನಿ ಅವರನ್ನು ದೋಷಮುಕ್ತಗೊಳಿಸಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ಕೋರ್ಟ್ 2012ರಲ್ಲಿ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಸೇರಿದಂತೆ 32 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿ 29 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಾಯಾ ಕೊಡ್ನಾನಿ ಗುಜರಾತ್ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಎಸ್‍ಐಟಿ ಕೋರ್ಟ್ ಗೆ ಹಾಜರಾಗಿ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ಹೇಳಿದ ಅಮಿತ್ ಶಾ

    ಏನಿದು ಪ್ರಕರಣ?
    ಗುಜರಾತ್ ನರೋಡಾ ಗಾಮ್ ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪ ಮಾಯಾ ಕೊಡ್ನಾನಿ ಮೇಲಿತ್ತು. 2002ರ ಫೆಬ್ರವರಿ 28ರಂದು ಈ ಹತ್ಯಾಕಾಂಡ ನಡೆದಿದ್ದು 97 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾಯಾ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಹತ್ಯಾಕಾಂಡ ನಡೆದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ವಿಧಾನಸಭೆಯ ಅಧಿವೇಶನ ನಡೆದ ಬಳಿಕ ಸೋಲಾ ಆಸ್ಪತ್ರಗೆ ತೆರಳಿದ್ದೆ ಎಂದು ಮಾಯಾ ಕೊಡ್ನಾನಿ ನ್ಯಾಯಾಲಯಕ್ಕೆ ತಿಳಿಸಿದ್ದರು.