Tag: ಗುಜರಾತ್ ಸೂಪರ್ ಜೈಂಟ್ಸ್

  • ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಮುಂಬೈ: 2014ರ ಐಪಿಎಲ್‍ನಲ್ಲಿ ಪರ್ಪಲ್ ಕ್ಯಾಪ್ ವಿಜೇತ ಬೌಲರ್, ಐಪಿಎಲ್‍ನಲ್ಲಿ ಮಿಂಚಿ ಸ್ಟಾರ್ ಆಟಗಾರ ಎನಿಸಿಕೊಂಡಿದ್ದ ಮೋಹಿತ್ ಶರ್ಮಾ ಇದೀಗ ಗುಜರಾತ್ ಟೈಟಾನ್ಸ್‌ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.

    ಐಪಿಎಲ್ ಅದೇಷ್ಟೋ ಪ್ರತಿಭಾವಂತ ಆಟಗಾರರನ್ನು ಭಾರತ ತಂಡಕ್ಕೆ ಪರಿಚಯಿಸಿದ ಕೀರ್ತಿ ಹೊಂದಿದೆ. ಕೆಲ ಆಟಗಾರರು ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡು ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡರೆ, ಕೆಲ ಆಟಗಾರರು ಮಿಂಚಿ ಮರೆಯಾಗಿದ್ದಾರೆ. ಅಂತವರ ಸಾಲಿನಲ್ಲಿ ಇದೀಗ ಹರಿಯಾಣ ಮೂಲದ ವೇಗಿ ಮೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮೋಹಿತ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೇಸ್ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದರು. ಎಂಎಸ್ ಧೋನಿ ಗರಡಿಯಲ್ಲಿ ನಂಬಿಕಸ್ಥ ಬೌಲರ್ ಆಗಿದ್ದ ಮೋಹಿತ್ ಯಶಸ್ಸಿನ ತುತ್ತತುದಿಯಲ್ಲಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಮೋಹಿತ್ ತನ್ನ ಸ್ಲೋವರ್ ಬೌಲಿಂಗ್‍ನಿಂದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾಗಿದ್ದರು. ಐಪಿಎಲ್‍ನಲ್ಲಿ ಒಟ್ಟು 86 ಪಂದ್ಯಗಳಲ್ಲಿ 92 ವಿಕೆಟ್ ಪಡೆದಿದ್ದು, 2014ರ ಐಪಿಎಲ್‍ನಲ್ಲಿ ಸಿಎಸ್‍ಕೆ ಪರ ಒಟ್ಟು 16 ಪಂದ್ಯಗಳನ್ನು ಆಡಿದ ಮೋಹಿತ್ ಶರ್ಮಾ ಒಟ್ಟು 23 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಈ ಪ್ರದರ್ಶನದಿಂದಲೇ ಮೋಹಿತ್ ಶರ್ಮಾ 2014ರ ಟಿ20 ವಿಶ್ವಕಪ್ ಹಾಗೂ 2015ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ಆದರೆ ದುರದೃಷ್ಟ ವೆಂಬಂತೆ ಸಿಎಸ್‍ಕೆ ತಂಡ ಐಪಿಎಲ್‍ನಿಂದ 2 ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಮೋಹಿತ್ ಫಾರ್ಮ್ ಕೂಡ ಕೈಕೊಟ್ಟಿತು. ಆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಕಾಣಿಸಿಕೊಂಡರು ಕೂಡ ಈ ಹಿಂದಿನ ಚಾರ್ಮ್ ಅವರಲ್ಲಿ ಕಾಣಸಿಗಲಿಲ್ಲ.

    ಮೋಹಿತ್ ಶರ್ಮಾ ನಂತರ ಪಂಜಾಬ್‍ಕಿಂಗ್ಸ್ ಮತ್ತು ಡೆಲ್ಲಿ ತಂಡದ ಪರ ಆಡಿದರು ಕೂಡ ಈ ಹಿಂದಿನ ರೀತಿಯ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗಲಿಲ್ಲ. 2022ರ ಐಪಿಎಲ್ ಹರಾಜಿನಲ್ಲಿ ಮೋಹಿತ್ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಖರೀದಿಸಲು ಯಾವ ತಂಡ ಕೂಡ ಮುಂದೆ ಬಂದಿರಲಿಲ್ಲ. ಇದೀಗ ಮೋಹಿತ್ ಐಪಿಎಲ್‍ನ ನೂತನ ತಂಡ ಗುಜರಾತ್ ಸೂಪರ್ ಜೈಂಟ್ಸ್ ಪರ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಬುಲ್ಸ್ ವಿರುದ್ಧ ಗೆಲುವಿನ ನಗೆ ಬೀರಿದ ಜೈಂಟ್ಸ್

    ಬುಲ್ಸ್ ವಿರುದ್ಧ ಗೆಲುವಿನ ನಗೆ ಬೀರಿದ ಜೈಂಟ್ಸ್

    ಬೆಂಗಳೂರು: ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಸೂಪರ್ ಜೈಂಟ್ಸ್ 40-36 ಅಂತರದಿಂದ ಗೆದ್ದಿದೆ.

    ಕೊನೆಯ ನಿಮಿಷಗಳಲ್ಲಿ ರೈಡಿಂಗ್‍ನಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ಸೂಪರ್ ಜೈಂಟ್ಸ್ ಬುಲ್ಸ್ ವಿರುದ್ಧ 4 ಅಂಕಗಳ ಅಂತರದಿಂದ ಜಯ ಸಾಧಿಸಿದೆ. ಇದನ್ನೂ ಓದಿ: 1000ನೇ ಏಕದಿನ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡ ಭಾರತ – ವಿಂಡೀಸ್‍ಗೆ ಹೀನಾಯ ಸೋಲು

    ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಗುಜರಾತ್ ಪರ ಪ್ರದೀಪ್ ಕುಮಾರ್ 12 ರೈಡ್, 2 ಬೋನಸ್ ಸಹಿತ ಒಟ್ಟು 14 ಅಂಕ ಸಂಪಾದಿಸಿದರೆ, ಬುಲ್ಸ್ ಪರ ಪವನ್ ಶೆರವತ್ 10 ರೈಡ್, 2 ಬೋನಸ್ ಸಹಿತ 12 ಅಂಕ ಮತ್ತು ಭರತ್ 10 ರೈಡ್, 1 ಬೋನಸ್ ಸಹಿತ 11 ಅಂಕ ಕಲೆಹಾಕಿ ಮಿಂಚಿದರು. ಇದನ್ನೂ ಓದಿ: U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?

    https://twitter.com/ProKabaddi/status/1490356834208989184

    ಬೆಂಗಳೂರು 24 ರೈಡ್, 1 ಸೂಪರ್ ರೈಡ್, 8 ಟೇಕಲ್, 2 ಆಲೌಟ್, 2 ಇತರೆ ಅಂಕ ಸಹಿತ ಒಟ್ಟು 36 ಪಾಯಿಂಟ್ ಪಡೆದರೆ, ಗುಜರಾತ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಆಲೌಟ್, 4 ಇತರೆ ಸಹಿತ ಒಟ್ಟು 40 ಪಾಯಿಂಟ್ ಸಂಪಾದಿಸಿ 4 ಅಂಕಗಳ ಅಂತರದ ಜಯ ಸಾಧಿಸಿದೆ.