Tag: ಗುಜರಾತ್ ಸಿಎಂ

  • ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ: ಗುಜರಾತ್ ಸಿಎಂ

    ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ: ಗುಜರಾತ್ ಸಿಎಂ

    – ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ

    ಅಹಮದಾಬಾದ್: ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ. ಹಾಗೆಯೇ ಗೋ ಹತ್ಯೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗುಡುಗಿದ್ದಾರೆ.

    ಅಹಮದಾಬಾದ್ ನ ವೈಷ್ಣೋದೇವಿ ವೃತ್ತದ ಬಳಿ ಮಾಲಧಾರಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಹುಡುಗಿಯರನ್ನು ಪುಲಾಯಿಸಿ ಅವರನ್ನು ಕರೆದುಕೊಂಡು ಪರಾರಿ ಆಗುವವರನ್ನು ಸುಮ್ಮನೆ ಬಿಡಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಗೋಹತ್ಯೆ ಮಾಡುವವರ ವಿರುದ್ಧವೂ ಗುಡುಗಿರುವ ಸಿಎಂ, ಗೋ ಹತ್ಯೆ ಮಾಡುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ವಾರ್ನ್ ಮಾಡಿದ್ದಾರೆ. ನಮ್ಮ ಸರ್ಕಾರವು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗೋವು ವಧೆಯನ್ನು ತಡೆಯುವುದರಿಂದ ಹಿಡಿದು, ಸರಗಳ್ಳತನ ನಿಯಂತ್ರಣದವರೆಗೆ ಹಲವು ಕಾನೂನು ಅನುಷ್ಠಾನಕ್ಕೆ ಬಂದಿದೆ. ಇದನ್ನೂ ಓದಿ: ನಟ ಸಾಯಿಧರ್ಮ ತೇಜ್ ಆರೋಗ್ಯ ಸ್ಥಿರ

    ಅಂತೆಯೇ ಲವ್ ಜಿಹಾದ್ ವಿರುದ್ಧ ಕೂಡ ಕಠಿಣ ನಿಯಮವನ್ನು ಸರ್ಕಾರ ತಂದಿದೆ. ಲವ್ ಜಿಹಾದ್ ನಿಲ್ಲಿಸಲು ಕಾನೂನು ತಂದಿದ್ದು, ಹಿಂದೂ ಹುಡುಗಿಯನ್ನು ಬಲೆಗೆ ಬೀಳಿಸುವ ಹಾಗೂ ಅವರೊಂದಿಗೆ ಓಡಿಹೋಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ.

  • ಗುಜರಾತ್ ಸಿಎಂ ಹುಬ್ಬಳ್ಳಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

    ಗುಜರಾತ್ ಸಿಎಂ ಹುಬ್ಬಳ್ಳಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

    ಹುಬ್ಬಳ್ಳಿ: ಗುಜರಾತ್ ಸಿಎಂ ವಿಜಯ್ ರೂಪಾನಿ ಬಂದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದೆ. ಪೈಲೆಟ್‍ವೊಬ್ಬರು ವಿಮಾನ ನಿಲ್ದಾಣದಲ್ಲೇ ಧೂಮಪಾನ ಮಾಡಿದ್ದಾರೆ.

    ಸ್ಫೋಟಕ ವಸ್ತುಗಳು ಏರ್ ಪೋರ್ಟ್ ನಲ್ಲಿ ನಿಷೇಧವಿದ್ರೂ ವಿಶೇಷ ವಿಮಾನದ ಪೈಲೆಟ್ ರಾಜಾರೋಷವಾಗಿ ಸಿಗರೇಟ್ ಸೇವನೆ ಮಾಡಿದ್ದಾರೆ. ಪೊಲೀಸರು ಇದನ್ನ ಕಂಡೂ ಕಾಣದಂತೆ ಇದ್ದರು.

    ಅಲ್ಲದೆ ಗುಜರಾತ್ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಎಲ್ಲ ಮುಖಂಡರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೇಯರ್, ವಿಧಾನ ಪರಿಷತ್ ಸದಸ್ಯರಿಗಷ್ಟೇ ಒಳಗೆ ಪ್ರವೇಶ ನೀಡಿಲಾಗಿತ್ತು. ಇದರಿಂದ ಕೆರಳಿದ ಬಿಜೆಪಿ ಮುಖಂಡರಾದ ಉಮೇಶ ಜೋಷಿ, ಜಯತೀರ್ಥ ಕಟ್ಟಿ ಹಾಗೂ ಈರಣ್ಣ ಜಡಿ ಏರುದನಿಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ರು. ಕೂಡಲೇ ಬಿಜೆಪಿ ಪ್ರಭಾರಿ ಮಹೇಶ ತೆಂಗಿನಕಾಯಿ ಮಧ್ಯಪ್ರವೇಶಿಸಿದ್ರು. ಎಸಿಪಿ ದಾವೂದ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು.

    ವಿಶೇಷ ವಿಮಾನದಲ್ಲಿ ಬಂದಿಳಿದ ವಿಜಯ ರೂಪಾನಿ ಹುಬ್ಬಳ್ಳಿಯ ಏರ್‍ಪೋರ್ಟ್‍ನಲ್ಲಿ ವರದಿಗಾರರೊಂದಿಗೆ ಮಾತನಾಡಿ, ಈ ಸಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ ಚುನಾವಣೆ ಎದುರಿಸುತ್ತೇವೆ. 150 ಕ್ಕಿಂತಲೂ ಹೆಚ್ಚಿನ ಸ್ಥಾನ ಮೂಲಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೇವೆ. ಗುಜರಾತ್‍ನಲ್ಲಿ ಸರ್ಕಾರದ ವಿರೋಧಿ ಅಲೆಯಿಲ್ಲ. ಮೋದಿಯವರನ್ನು 3 ಬಾರಿ ಸಿಎಂ ಮಾಡಿರೋದು ಗುಜರಾತ್ ಜನತೆ. ಈ ಸಾರಿಯೂ ಅತೀ ಹೆಚ್ಚಿನ ಮತಗಳನ್ನು ಬಿಜೆಪಿಗೆ ಗುಜರಾತ್ ಜನತೆ ನೀಡ್ತಾರೆ. ಪಟೇಲ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೀಸಲಾತಿ ವಿಚಾರ ಬಿಜೆಪಿಗೆ ಹಿನ್ನೆಡೆಯಾಗೋದಿಲ್ಲ. ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಅಂದ್ರು.

    ಹಾವೇರಿಯಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ರೂಪಾನಿ ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಹಾವೇರಿಗೆ ಪ್ರಯಾಣ ಬೆಳೆಸಿದ್ರು.