Tag: ಗುಜರಾತ್ ಟೈಟಾನ್ಸ್

  • 42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

    42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

    ಚೆನ್ನೈ: ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ಲೆಜೆಂಡ್‌ ಎಂ.ಎಸ್‌ ಧೋನಿ (MS Dhoni) ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

    ಹೌದು. ಸಿಎಸ್‌ಕೆ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ (Cricket Fans) ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ಕಾಲ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದಿಂದ ಹೊರಬಂದಿಲ್ಲ.

    ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್‌ ಧೋನಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದರು ಚಿರಯುವಕನಿಗೆ ಸರಿಸಮನಾಗಿ ನಿಂತು ಮೈದಾನದಲ್ಲಿ ಉತ್ಸಾಹದಿಂದ ಪಂದ್ಯವನ್ನಾಡುತ್ತಿದ್ದಾರೆ. ಗುಜರಾತ್‌ ವಿರುದ್ಧ ಮಹಿ ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ (Stunning Catch) ಇದಕ್ಕೆ ತಾಜಾ ಉದಾಹರಣೆಯಾಗಿದೆ. ಇದನ್ನೂ ಓದಿ: ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಹೌದು.. 206 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಟೈಟಾನ್ಸ್‌ ಪಡೆ ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಷ್ಟಕ್ಕೀಡಾಯಿತು. 8ನೇ ಓವರ್‌ನಲ್ಲಿ ಡೇರಿಲ್‌ ಮಿಚೆಲ್‌ (Daryl Mitchell) ಬೌಲಿಂಗ್‌ ವೇಳೆ ಕ್ರೀಸ್‌ನಲ್ಲಿದ್ದ ವಿಜಯ್‌ ಶಂಕರ್‌ ಸ್ಟ್ರೈಕ್‌ ಮಾಡಲು ಮುಂದಾದರು. ಮಿಚೆಲ್‌ ಎಸೆದ 3ನೇ ಎಸೆತವು ಬ್ಯಾಟ್‌ಗೆ ತಗುಲಿ ಸ್ಲಿಪ್‌ ವಿಭಾಗದಲ್ಲಿ ಬೌಂಡರಿ ತಲುಪುವ ಸಾಧ್ಯತೆ ಇತ್ತು. ಆದ್ರೆ ಮಹಿ ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದರು. ಮಹಿ ಜಿಗಿದ ಅಂತರ ಸುಮಾರು 2.27 ಮೀಟರ್‌ ಉದ್ದವಿತ್ತು ಎಂದು ಹೇಳಲಾಗಿದೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು. ಅಲ್ಲದೇ 42ನೇ ವಯಸ್ಸಿನಲ್ಲೂ ಅದೆಂತಹ ಉತ್ಸಾಹ ಎಂದು ಅಚ್ಚರಿಪಟ್ಟರು.

    ಮಹಿ ಕ್ಯಾಚ್‌ ಹಿಡಿದ ವೀಡಿಯೋ ತುಣುಕು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಖಾತೆಗಳಲ್ಲಿ ವೀಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಮಂಗಳವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 143 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ 

  • ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ

    ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ

    ಚೆನ್ನೈ: ತವರಿನಲ್ಲಿ ಚೆನ್ನೈ ಸಿಡಿಸಿದ ರನ್‌ ಮಳೆಗೆ ಗುಜರಾತ್‌ ಟೈಟಾನ್ಸ್‌ (Gujarat Titans) ಕೊಚ್ಚಿ ಹೋಗಿದೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 63 ರನ್‌ಗಳ ಭರ್ಜರಿ ಜಯದೊಂದಿಗೆ ಐಪಿಎಲ್‌ (IPL) ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ತಂಡದ ಮೊತ್ತ 28 ರನ್‌ಗಳಿಸಿದಾಗ ಶುಭಮನ್‌ ಗಿಲ್‌ (Shubaman Gill) 8 ರನ್‌ ಗಳಿಸಿ ಎಲ್‌ಬಿಗೆ ಔಟಾದರು. 55 ರನ್‌ಗಳಿಸುವಷ್ಟರಲ್ಲಿ ಗುಜರಾತ್‌ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. 12 ರನ್‌ಗಳಿಸಿದ್ದ ವಿಜಯ್‌ ಶಂಕರ್‌ ಅವರ ಕ್ಯಾಚನ್ನು ಧೋನಿ (Dhoni) ಹಾರಿ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. 21 ರನ್‌ ಗಳಿಸಿ ಸಿಕ್ಸ್‌ ಸಿಡಿಸಲು ಹೋಗಿ ರಹಾನೆ ಹಿಡಿದ ಉತ್ತಮ ಕ್ಯಾಚ್‌ಗೆ ಡೇವಿಡ್‌ ಮಿಲ್ಲರ್‌ ಔಟಾದರು.

    ಸಾಯಿ ಸುದರ್ಶನ್‌ 37 ರನ್‌ (31 ಎಸೆತ, 3 ಬೌಂಡರಿ), ಡೇವಿಡ್‌ ಮಿಲ್ಲರ್‌ 21 ರನ್‌ ಗಳಿಸಿ ಔಟಾದರು. ಟೈಟಾನ್ಸ್‌ ಪರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಟಗಾರರು ಆಡದ ಕಾರಣ ಸೋಲೊಪ್ಪಿಕೊಂಡಿತು. ದೀಪಕ್‌ ಚಹರ್‌ 4 ಓವರ್‌ ಎಸೆದು 28 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ತುಷಾರ್‌ ದೇಶಾಪಂಡೆ 4 ಓವರ್‌ ಎಸೆದು 21 ರನ್‌ ನೀಡಿ 2 ವಿಕೆಟ್‌ ಕಿತ್ತರು. ಮುಸ್ತಫಿಜುರ್ ರೆಹಮಾನ್ 30 ರನ್‌ ನೀಡಿ 2 ವಿಕೆಟ್‌ ಪಡೆದರು.

    ಸ್ಪೋಟಕ ಆರಂಭ: ಚೆನ್ನೈ ಆರಂಭಿಕ ಆಟಗಾರರಾದ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಮತ್ತು ರಚಿನ್‌ ರವೀಂದ್ರ (Rachin Ravindra) ಸ್ಫೋಟಕ ಆರಂಭ ನೀಡಿದರು. ಇಬ್ಬರು ಮೊದಲ ವಿಕೆಟಿಗೆ 32 ಎಸೆತಗಳಲ್ಲಿ 62 ರನ್‌ ಜೊತೆಯಾಟ ನೀಡಿದರು. ರಚಿನ್‌ ರವೀಂದ್ರ 46 ರನ್‌ (20 ಎಸೆತ, 6 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರೆ ಗಾಯಕ್ವಾಡ್‌ 46 ರನ್‌ (36 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು

    ಅಜಿಂಕ್ಯಾ ರಹಾನೆ 12 ರನ್‌ ಗಳಿಸಿ ಔಟಾದರು. ನಂತರ ಬಂದ ಶಿವಂ ದುಬೆ (Shivam Dube) ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. 23 ಎಸೆತಗಳಲ್ಲಿ 5 ಸಿಕ್ಸ್‌, 2 ಬೌಂಡರಿಯೊಂದಿಗೆ 51 ರನ್‌ ಚಚ್ಚಿ ಔಟಾದರು.

    ಕೊನೆಯಲ್ಲಿ ಡೆರೆಲ್‌ ಮಿಚೆಲ್‌ ಔಟಾಗದೇ 24 ರನ್‌ ಮತ್ತು ಸಮೀರ್‌ ರಿಜ್ವಿ 14 ರನ್‌ ಹೊಡೆದರು. 6 ಮಂದಿ ಬೌಲರ್‌ಗಳು ಬೌಲ್‌ ಮಾಡಿದರೂ ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

  • 2024ರ ಐಪಿಎಲ್‌ ಟೂರ್ನಿಯಿಂದಲೇ ಶಮಿ ಔಟ್‌ – ಗುಜರಾತ್‌ ಟೈಟಾನ್ಸ್‌ಗೆ ಭಾರೀ ಆಘಾತ

    2024ರ ಐಪಿಎಲ್‌ ಟೂರ್ನಿಯಿಂದಲೇ ಶಮಿ ಔಟ್‌ – ಗುಜರಾತ್‌ ಟೈಟಾನ್ಸ್‌ಗೆ ಭಾರೀ ಆಘಾತ

    ಮುಂಬೈ: ಟೀಂ ಇಂಡಿಯಾ ಸ್ಟಾರ್‌ ವೇಗಿ ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ಬೌಲಿಂಗ್‌ ಸಾರಥಿ ಮೊಹಮ್ಮದ್‌ ಶಮಿ (Mohammed Shami) 2024ರ ಐಪಿಎಲ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಈಗಾಗಲೇ ಹಾರ್ದಿಕ್‌ ಪಾಂಡ್ಯ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಗುಜರಾತ್‌ ತಂಡಕ್ಕೆ ಮೊಹಮ್ಮದ್‌ ಶಮಿ ಅವರ ಗೈರು ಮತ್ತಷ್ಟು ಆಘಾತ ನೀಡಿದೆ.

    2023ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಎಡಪಾದದ ಗಾಯಕ್ಕೆ ತುತ್ತಾಗಿದ್ದ ಶಮಿ ಯುಕೆ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದ್ದರಿಂದ ಅವರು ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

    33 ವರ್ಷ ವಯಸ್ಸಿನ ಮೊಹಮ್ಮದ್‌ ಶಮಿ ಕೊನೆಯ ಬಾರಿಗೆ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಡಿದ್ದರು. ಜನವರಿ ಕೊನೆಯ ವಾರದಲ್ಲಿ ಇಂಜೆಕ್ಷನ್‌ ತೆಗೆದುಕೊಳ್ಳಲು ಲಂಡನ್‌ಗೆ ತೆರಳಿದ್ದರು. ಆದ್ರೆ ಇಂಜೆಕ್ಷನ್‌ನಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಶೀಘ್ರವೇ ಯುಕೆಗೆ ತೆರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಶಮಿ ಅದ್ಭುತ ಸಾಧನೆ ಮಾಡಿದ್ದರು. 7 ಪಂದ್ಯಗಳನ್ನಾಡಿದರೂ 24 ವಿಕೆಟ್‌ಗಳನ್ನು ಪಡೆಯುವ ಮೂಲಕ 2023ರ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಮೈಲುಗಲ್ಲನ್ನೂ ಸ್ಥಾಪಿಸಿದರು. ಶಮಿ ಅವರ ಈ ಸಾಧನೆಗಾಗಿ ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಲಾಗಿತ್ತು.

    ಶಮಿ ಕೆಲ ದಿನಗಳ ಹಿಂದೆಯೇ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಆದ್ರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಲಹೆಯಂತೆ ಚುಚ್ಚುಮದ್ದು ಪಡೆದುಕೊಂಡಿದ್ದರು. ಚುಚ್ಚುಮದ್ದು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಶಮಿ ಅವರು ಶಸ್ತ್ರಚಿಕಿತ್ಸೆಗೆ ದಾಖಲಾಗಲು ಮುಂದಾಗಿದ್ದಾರೆ. ಇದರು ಅವರ ಆರೋಗ್ಯದ ಪ್ರಶ್ನೆಯಾಗುರುವುದರಿಂದ ಐಪಿಎಲ್‌ ಆಡುವುದು ಮುಖ್ಯವಲ್ಲ ಎಂದು ಬಿಸಿಸಿಐ ಉನ್ನತ ಮೂಗಳು ತಿಳಿಸಿವೆ.

  • ಗುಜರಾತ್‌ ಟೈಟಾನ್ಸ್‌ಗೆ ನೂತನ ಸಾರಥಿ – ಕ್ಯಾಪ್ಟನ್‌ ಗಿಲ್‌ ಫಸ್ಟ್‌ ರಿಯಾಕ್ಷನ್‌ ಏನು?

    ಗುಜರಾತ್‌ ಟೈಟಾನ್ಸ್‌ಗೆ ನೂತನ ಸಾರಥಿ – ಕ್ಯಾಪ್ಟನ್‌ ಗಿಲ್‌ ಫಸ್ಟ್‌ ರಿಯಾಕ್ಷನ್‌ ಏನು?

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ತವರು ಮುಂಬೈ ಇಂಡಿಯನ್ಸ್‌ (Mumbai Indians) ಸೇರ್ಪಡೆಗೊಂಡ ಬಳಿಕ ಗುಜರಾತ್‌ ಟೈಟಾನ್ಸ್‌ ‌ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಹೆಗಲಿಗೆ ನಾಯಕತ್ವದ ಹೊಣೆ ನೀಡಲಾಗಿದೆ.

    ಈ ಬಗ್ಗೆ ಗುಜರಾತ್‌ ಟೈಟಾನ್ಸ್‌ (GujaratTaitans) ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಶುಭಮನ್‌ ಗಿಲ್‌ ಸಹ ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ನಾಯಕತ್ವ ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇಂತಹ ಉತ್ತಮ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಟ್ಟು ನಾಯಕತ್ವದ ಹೊಣೆ ನೀಡಿದೆ. ಇದನ್ನು ಕೇವಲ ಧನ್ಯವಾದ ಹೇಳಿ ಮುಗಿಸಲಾರೆ. ಈ ಟೂರ್ನಿಯನ್ನು ಸ್ಮರಣೀಯವಾಗಿಸೋಣ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಶುಭಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ಪರ ಆಡಿರುವ 2 ಆವೃತ್ತಿಯ 33 ಇನ್ನಿಂಗ್ಸ್‌ಗಳಲ್ಲಿ, 47.34 ಸರಾಸರಿಯಲ್ಲಿ 1,373 ರನ್‌ ಬಾರಿಸಿದ್ದಾರೆ. ಅದರಲ್ಲೂ 2023ರ 16ನೇ ಆವೃತ್ತಿಯ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 59.33 ಸರಾಸರಿಯಲ್ಲಿ ಒಟ್ಟು 890 ರನ್‌ ಬಾರಿಸಿದ್ದರು. ಇದರಲ್ಲಿ 3 ಶತಕ, 4 ಅರ್ಧ ಶತಕಗಳೂ ಸೇರಿತ್ತು. ಈ ಆವೃತ್ತಿಯಲ್ಲಿ ಒಟ್ಟು 890 ರನ್‌ ಗಳಿಸುವ ಮೂಲಕ ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜೊತೆಗೆ ಅತಿಹೆಚ್ಚು ರನ್‌ ಗಳಿಸಿದ್ದಕ್ಕಾಗಿ 10 ಲಕ್ಷ ರೂ. ಬಹುಮಾನವನ್ನೂ ಗಿಟ್ಟಿಸಿಕೊಂಡರು. ಅದರಲ್ಲೂ ಸೆಮಿಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಅಬ್ಬರಿಸಿದ್ದ ಗಿಲ್‌ 60 ಎಸೆತಗಳಲ್ಲೇ 129 ರನ್‌ ಬಾರಿಸಿದ್ದರು. ಇದರಿಂದ ತಂಡವು ಅಧಿಕ ರನ್‌ಗಳ ಜಯ ಸಾಧಿಸಿತ್ತು.

    2 ಆವೃತ್ತಿಗಳಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು. ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

  • IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅಧಿಕೃತವಾಗಿ ಮುಂಬೈ ಇಂಡಿಯನ್ಸ್‌ (Mumbai Indians) ಬಳಗ ಸೇರಿದ್ದಾರೆ. ನಾಯಕನಾಗಿ 2 ವರ್ಷಗಳ ಕಾಲ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ತಂಡ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು.

    ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ (GujaratTaitans) ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದ್ರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟಾನ್ಸ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ 15 ಕೋಟಿ ರೂ. ನೀಡಲಿದೆ ಎಂದು ವರದಿಯಾಗಿದೆ.

    ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್‌ (Shubhman Gill) ತಂಡದ ಕ್ಯಾಪ್ಟನ್‌ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ ರೂ. ಮಾತ್ರವೇ ಹೊಂದಿತ್ತು. ಈಗ ಹಾರ್ದಿಕ್‌ ಪಾಂಡ್ಯ ಖರೀದಿ ಸಲುವಾಗಿ ತನ್ನ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮರೂನ್‌ ಅವರನ್ನು ಆರ್‌ಸಿಬಿಗೆ (RCB) ಬಿಟ್ಟುಕೊಡುವ ಮೂಲಕ ಪರ್ಸ್‌ ಮೊತ್ತ ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಈ ಸಲುವಾಗಿ ಉಳಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಲು ನವೆಂಬರ್‌ 26 ಅಂತಿಮ ದಿನವಾಗಿತ್ತು. ಆದರೂ, ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಇರುವ ಟ್ರೇಡಿಂಗ್‌ ವಿಂಡೋ ಡಿಸೆಂಬರ್‌ 12ರ ವರೆಗೆ ತೆರೆದಿರಲಿದೆ. ಹೀಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸುವ ಡೀಲ್‌ ಮುಗಿಸಲಾಗಿದೆ.

    ಐಪಿಎಲ್‌ 2014 ಟೂರ್ನಿಯಿಂದ 2021ರ ಆವೃತ್ತಿವರಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿ 5 ಬಾರಿ ಟ್ರೋಫಿ ಗೆದ್ದಿದ್ದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬಳಿಕ ಹೊಸ ಫ್ರಾಂಚೈಸಿ ಗುಜರಾತ್‌ ಟೈಟಾನ್ಸ್‌ ಸೇರಿದ್ದರು. ಐಪಿಎಲ್ 2022 ಟೂರ್ನಿಯಲ್ಲಿ ಮೊದಲ ಪ್ರಯತ್ನದಲ್ಲೇ ಟೈಟಾನ್ಸ್‌ಗೆ ಟ್ರೋಫಿ ಗೆದ್ದುಕೊಟ್ಟರು. ಐಪಿಎಲ್ 2023 ಟೂರ್ನಿಯಲ್ಲೂ ಫೈನಲ್‌ಗೆ ಮುನ್ನಡೆಸಿದರಾದರೂ, ಸಿಎಸ್‌ಕೆ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

    ಹಾರ್ದಿಕ್ ಪಾಂಡ್ಯ ಈ ಮೂಲಕ ಐಪಿಎಲ್‌ ಟ್ರೇಡಿಂಗ್ ವಿಂಡೋ ಮೂಲಕ ಬೇರೆ ತಂಡ ಸೇರಿದ 3ನೇ ಕ್ಯಾಪ್ಟನ್‌ ಆಗಿದ್ದಾರೆ. ಐಪಿಎಲ್ 2020 ಟೂರ್ನಿ ವೇಳೆ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಬೇರೆ ತಂಡಗಳನ್ನು ಸೇರಿದ ಕ್ಯಾಪ್ಟನ್‌ಗಳಾಗಿದ್ದರು.

    ಏನಿದು ಟ್ರೇಡ್‌ ವಿಂಡೋ ನಿಯಮ?
    ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದು ವ್ಯವಹಾರಗಳಲ್ಲಿ ಆಟಗಾರರನ್ನು ಖರೀದಿಸಬಹುದು. ಈ ಸಂಪೂರ್ಣ ವಿಷಯದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅಂತಿಮ ಅಧಿಕಾರ ನೀಡಿದೆ. ಹೆಚ್ಚಿನ ಫ್ರಾಂಚೈಸಿಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ. ಈ ಸಂದರ್ಭದಲ್ಲಿ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಆಟಗಾರನ ವ್ಯಾಪಾರ ಅಥವಾ ವರ್ಗಾವಣೆಯ ಮೊದಲು ಆಟಗಾರನ ಒಪ್ಪಿಗೆ ಕೂಡ ಅಗತ್ಯ. ಆಟಗಾರನು ನಿರಾಕರಿಸಿದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.

  • IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

    IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

    ಮುಂಬೈ: ಊಹಾಪೋಹಗಳ ನಡುವೆ ಕೊನೆಗೂ ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಮುಂಬೈ ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.

    ಕಳೆದ ಎರಡು ಮೂರು ದಿನಗಳಿಂದಲೂ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ಸೇರುವುದು ಖಚಿತವಾಗಿದೆ ಎಂದು ಹೇಳಲಾಗಿತ್ತು. ಗುಜರಾತ್ ತಂಡವು ಸಹ ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಬಂದ್ರೆ ಅವರೇ ಮುಂದಿನ ನಾಯಕನಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. ಆದ್ರೆ ಗುಜರಾತ್ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂ.ಗಳಿಗೆ ತನ್ನಲ್ಲೇ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್‌ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ

    ಟೈಟಾನ್ಸ್ ತಂಡವು ಡಿಸೆಂಬರ್ 19ರಂದು ನಡೆಯಲಿರುವ ಹರಾಜಿಗೆ ಮುನ್ನ ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಮತ್ತು ದಸುನ್ ಶನಾಕ ಸೇರಿದಂತೆ ಮೂರು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 8 ಆಟಗಾರರಿಗೆ ಗೇಟ್‍ಪಾಸ್ ಕೊಟ್ಟಿದೆ.

    ಹಾರ್ದಿಕ್ ಪಾಂಡ್ಯ ಅವರನ್ನು 2022ರ ಮೆಗಾ ಹರಾಜಿನ ಡ್ರಾಫ್ಟ್‌ನಲ್ಲಿ ಗುಜರಾತ್ ಟೈಟಾನ್ಸ್ ಆಯ್ಕೆ ಮಾಡಿತ್ತು. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಪ್ರತಿನಿಧಿಸಿತ್ತು. ಟೈಟಾನ್ಸ್ ಪರ ನಾಯಕನಾಗಿ ಪ್ರತಿನಿಧಿಸಿದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದರು. ಅಲ್ಲದೇ 2023ರ ಆವೃತ್ತಿಯಲ್ಲಿ ರನ್ನರ್ ಅಪ್ ದಕ್ಕುವಂತೆ ಮಾಡಿದ್ದರು.

    ಜಿಟಿ ಉಳಿಸಿಕೊಂಡ ಆಟಗಾರರು:
    ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ಮೊಹಮ್ಮದ್ ಶಮಿ, ಸಾಯಿ ಸುದರ್ಶನ್, ಮೋಹಿತ್ ಶರ್ಮಾ, ಶುಭಮನ್ ಗಿಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ಜೋಶುವಾ ಲಿಟಲ್, ರಶೀದ್ ಖಾನ್.

    ಬಿಡುಗಡೆಯಾದ ಆಟಗಾರರು:
    ಕೆಎಸ್ ಭರತ್, ಶಿವಂ ಮಾವಿ, ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದಾಸುನ್ ಶನಕ, ಯಶ್ ದಯಾಳ್, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್. ಇದನ್ನೂ ಓದಿ: IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

  • IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    – ಕ್ಯಾಪ್ಟನ್‌ ರೇಸ್‌ನಲ್ಲಿ ಗಿಲ್‌, ರಶೀದ್‌ ಖಾನ್‌, ಕಮ್ಮಿನ್ಸ್‌, ವಿಲಿಯಮ್ಸನ್‌, ಮಿಲ್ಲರ್‌

    ಮುಂಬೈ: ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ಇದೀಗ ಐಪಿಎಲ್‌ ಕ್ರೇಜ್‌ ಹೆಚ್ಚಾಗುತ್ತಿದೆ. ಅದರಲ್ಲೂ 2024ರ ಐಪಿಎಲ್‌ (IPL 2024) ಟೂರ್ನಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ. ಫ್ರಾಂಚೈಸಿಗಳಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಹಾಲಿ – ಮಾಜಿ ಜಾಂಪಿಯನ್ಸ್‌ಗಳು ಸ್ಟಾರ್‌ ಪ್ಲೇಯರ್‌ಗಳಿಗೆ ಗಾಳಹಾಕಿವೆ. ಪ್ರಮುಖ ಫ್ರಾಂಚೈಸಿಗಳು ಮತ್ತೆ ಹಳೆಯ ಆಟಗಾರರನ್ನು ಮರಳಿ ತಂದು ಟ್ರೋಫಿ ಗೆಲಲ್ಲು ಕಸರತ್ತು ನಡೆಸುತ್ತಿವೆ.

    ಈ ನಡುವೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಹರಾಜಿಗೆ ಮುಂಚಿತವಾಗಿ ಭಾರತದ ಟಿ20I ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸುದ್ದಿಯಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ನಾಯಕನಾಗಿರುವ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್​ಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗುಜರಾತ್ ತಂಡ ಅವರನ್ನು ಬಿಡುಗಡೆ ಮಾಡಲಿದ್ದು, ಮಿನಿ ಹರಾಜಿನಲ್ಲಿ ಮುಂಬೈ ತಂಡ ಪಾಂಡ್ಯ ಅವರನ್ನು ಖರೀದಿಸಲಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಮುಂಬೈ ಇಂಡಿಯನ್ಸ್‌ ತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Taitans) ಮೊದಲ ಬಾರಿಗೆ ಪ್ರತಿನಿಧಿಸಿತು. ಟೈಟಾನ್ಸ್‌ ಪರ ನಾಯಕನಾಗಿ ಪ್ರತಿನಿಧಿಸಿದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್‌ ಆಗುವಂತೆ ಮಾಡಿದರು. ಅಲ್ಲದೇ 2023ರ ಆವೃತ್ತಿಯಲ್ಲಿ ರನ್ನರ್‌ ಪ್ರಶಸ್ತಿ ದಕ್ಕುವಂತೆ ಮಾಡಿದರು. ಇದನ್ನೂ ಓದಿ: ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಸಂತೈಸಿದ ಮೋದಿ ನಡೆಗೆ ರವಿಶಾಸ್ತ್ರಿ ಮೆಚ್ಚುಗೆ

    ಸದ್ಯ ಹಾರ್ದಿಕ್ ಮತ್ತೆ ಮುಂಬೈ ಇಂಡಿಯನ್ಸ್​ (Mumbai Indians) ತಂಡಕ್ಕೆ ಹೋಗುವ ಬಗ್ಗೆ ಮಾತುಕತೆಗಳು ನಡೆದಿವೆ. ಆದರೆ ಈ ಸಮಯದಲ್ಲಿ, ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಹೆಚ್ಚಿನ ಮಾಹಿತಿ ಖಚಿತಪಡಿಸಲಾಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

    ಮುಂಬೈನಲ್ಲಿ ಎಷ್ಟಿದೆ ದುಡ್ಡು?
    ಕಳೆದ 2 ಋತುಗಳಲ್ಲಿ ಗಾಯಗೊಂಡಿರುವ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂ.ಗೆ ಖರೀದಿಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಐಪಿಎಲ್ ಆಡಳಿತ ಮಂಡಳಿಯು ಹೆಚ್ಚುವರಿಯಾಗಿ 5 ಕೋಟಿ ರೂ.ಗಳನ್ನು ಹೆಚ್ಚಿಸಿದೆ. ಹೀಗಾಗಿ ಹಣದ ಮೀಸಲು ಹೆಚ್ಚಿಸಲು ತಮ್ಮ ಕೆಲವು ದೊಡ್ಡ ಖರೀದಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಹೊರತುಪಡಿಸಿದರೆ ಮುಂಬೈ ತಂಡ ಒಟ್ಟು 5.50 ಕೋಟಿ ರೂ.ಗಳೊಂದಿಗೆ (ಉಳಿಕೆ ಇರುವ 50 ಲಕ್ಷ ರೂ.ಸೇರಿ) ಮಿನಿ ಹರಾಜಿಗೆ ಹೋಗಬೇಕಾಗುತ್ತದೆ. ಹಾರ್ದಿಕ್‌ ಪಾಂಡ್ಯ ಅವರ ಮೂಲ ಬೆಲೆ ಮುಂಬೈ ಇಂಡಿಯನ್ಸ್‌ನಲ್ಲಿದ್ದಾಗ 11 ಕೋಟಿ ರೂ. ಇತ್ತು. ಗುಜರಾತ್‌ ಅವರನ್ನು 15 ಕೋಟಿ ರೂ.ಗೆ ಖರೀದಿಸಿತ್ತು. ಮುಂಬೈ ಇಂಡಿಯನ್ಸ್‌ ಅಷ್ಟೇ ಹಣವನ್ನು ನೀಡಿ ಖರೀದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಪಾಂಡ್ಯ ಅಂತಿಮವಾಗಿ ಮುಂಬೈ ಇಂಡಿಯನ್ಸ್ ಪರ ಆಡಿದರೆ, ತಂಡವನ್ನು 5 ಟ್ರೋಫಿಗಳಿಗೆ ಮುನ್ನಡೆಸಿದ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಇದನ್ನೂ ಓದಿ: ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

    ಇನ್ನೂ ಟ್ರೇಡಿಂಗ್​ ಆಟಗಾರರನ್ನು ಬದಲಾಯಿಸುವುದಕ್ಕೆ ಸೀಮಿತವಾಗಿರುವ ಕಾರಣ ಪಾಂಡ್ಯ ಎಂಐ ತಂಡಕ್ಕೆ ಮರಳಿದರೆ, ಯಾರು ಟೈಟಾನ್ಸ್​​ ನಾಯಕರಾಗಬಹುದು ಎಂಬ ಕೌತುಕ ಹೆಚ್ಚಾಗಿದೆ. ಸದ್ಯ ನಾಯಕನ ರೇಸ್‌ ಪಟ್ಟಿಯಲ್ಲಿ ಯುವ ಆರಂಭಿಕ ಶುಭಮನ್‌ ಗಿಲ್‌, ಅಫ್ಘಾನ್‌ ಸ್ಪಿನ್ನರ್‌ ರಶೀದ್‌ ಖಾನ್‌, ಡೇವಿಡ್‌ ಮಿಲ್ಲರ್‌, ಕೇನ್‌ ವಿಲಿಯಮ್ಸನ್‌ ಹಾಗೂ ಆಸೀಸ್‌ನ ಪ್ಯಾಟ್‌ ಕಮ್ಮಿನ್ಸ್‌ ಇದ್ದಾರೆ ಎಂದು ತಿಳಿದುಬಂದಿದೆ.

  • IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವಿನ ಫೈನಲ್ಸ್‌ (IPL Finals) ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿದೆ. ಸೋಮವಾರವೂ (ಮೇ 29) ಮಳೆಯ ಆರ್ಭಟ ಮುಂದುವರಿದರೆ, ಲೀಗ್‌ ರ‍್ಯಾಂಕಿಂಗ್‌ ಪಟ್ಟಿಯ ಆಧಾರದ ಮೇಲೆ ಚಾಂಪಿಯನ್ಸ್‌ ಪಟ್ಟ ನಿರ್ಧರಿಸಲಾಗುತ್ತದೆ.

    ಸೋಮವಾರ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್‌ ಹೊರಬಿದ್ದಂತೆ ಕಾಣ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎಲ್‌ಇಡಿ ಸ್ಕ್ರೀನ್‌ನ ಫೋಟೋವೊಂದು ಸದ್ದು ಮಾಡುತ್ತಿದೆ. ಭಾನುವಾರ ರಾತ್ರಿ ಮಳೆಯಿಂದಾಗಿ ಪಂದ್ಯವನ್ನ ರದ್ದು ಮಾಡಲಾಯಿತು. ಈ ವೇಳೆ ಕ್ರಿಕೆಟ್‌ ವೀಕ್ಷಣೆಗೆ ಇರಿಸಲಾಗಿದ್ದ ಎಲ್‌ಇಡಿ ಸ್ಕ್ರೀನ್‌ಬೋರ್ಡ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌ ಎಂದು ತೋರಿಸಲಾಗುತ್ತಿತ್ತು. ಈ ಫೋಟೋ ಸಖತ್‌ ವೈರಲ್‌ ಆಗ್ತಿದೆ. ಇದರಿಂದ ಮತ್ತೆ ಕ್ರಿಕೆಟ್‌ ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದೆ, ಜೊತೆಗೆ ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಮತ್ತೆ ಮಳೆಯಾದ್ರೆ ಯಾರಿಗೆ ಲಾಭ?
    ಹೌದು.. ನಿನ್ನೆಯಂತೆ ಇಂದೂ ಸಹ ಮಳೆ ಮುಂದುವರಿದು ರಾತ್ರಿ 9:40ರ ಒಳಗೆ ಬಿಡುವು ಸಿಕ್ಕರೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. 5 ಓವರ್‌ಗಳ ಪಂದ್ಯವನ್ನಾಡಿಸಲು ರಾತ್ರಿ 12:06ರ ವರೆಗೆ ಸಮಯವಿರಲಿದೆ. ಅದೂ ಸಾಧ್ಯವಾಗದಿದ್ದಲ್ಲಿ ಸೂಪರ್‌ ಓವರ್‌ ಆಡಿಸಲು ರಾತ್ರಿ 12:50ರ ವರೆಗೆ ಸಮಯವಿರಲಿದೆ. ಒಂದು ವೇಳೆ ಸಂಪೂರ್ಣವಾಗಿ ಪಂದ್ಯ ರದ್ದಾದರೆ ಲೀಗ್‌ ಹಂತದ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆದ ತಂಡವನ್ನ ಚಾಂಪಿಯನ್‌ ಆಗಿ ಘೋಷಣೆ ಮಾಡಲಾಗುತ್ತದೆ. ಇದನ್ನೂ ಓದಿ: ಗಿಲ್‌ ಗಿಲ್‌ ಗಿಲ್‌ – ಕೊಹ್ಲಿ IPL ದಾಖಲೆ ಉಡೀಸ್‌ ಮಾಡ್ತಾರಾ ಗಿಲ್‌?

    ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.

  • IPL 2023 Finals: ಬಿಟ್ಟು ಬಿಟ್ಟು ಕಾಡುತ್ತಿದೆ ಮಳೆ – ಕ್ಲೈಮ್ಯಾಕ್ಸ್‌ ಕದನಕ್ಕೆ ಬ್ರೇಕ್‌?

    IPL 2023 Finals: ಬಿಟ್ಟು ಬಿಟ್ಟು ಕಾಡುತ್ತಿದೆ ಮಳೆ – ಕ್ಲೈಮ್ಯಾಕ್ಸ್‌ ಕದನಕ್ಕೆ ಬ್ರೇಕ್‌?

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಫೈನಲ್‌ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. 7 ಗಂಟೆಗೆ ಶುರುವಾದ ಮಳೆ ಬಿಟ್ಟು ಬಿಟ್ಟು ಕಾಡುತ್ತಿದೆ. ರಾತ್ರಿ 10.50 ಸಮಯ ಮೀರಿದರೂ ಮಳೆ ಬಿಡುವು ನೀಡದೇ ಆಟವಾಡಿಸುತ್ತಿದೆ.

    ರಾತ್ರಿ 9.35ರ ವೇಳೆಗೆ ಮಳೆ ನಿಂತರೇ 20 ಓವರ್‌ಗಳ ಪಂದ್ಯವನ್ನೇ ಆಡಿಸಲು ಐಪಿಎಲ್‌ ಮಂಡಳಿ ನಿರ್ಧರಿಸಿತ್ತು. ಆದ್ರೆ ಸಮಯ ಮೀರಿದ್ದು, ಇದೀಗ 5 ಓವರ್‌ಗಳ ಪಂದ್ಯಕ್ಕೆ ಆಟಗಾರರು ಅಣಿಯಾಗಬೇಕಾಗಿದೆ. ಒಂದು ವೇಳೆ 11 ಗಂಟೆ ಬಳಿಕ ಮಳೆ ನಿಂತರೇ ಮೈದಾನ ಶುಚಿಗೊಳಿಸಲು ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ನಂತರ ಮಧ್ಯರಾತ್ರಿ 12.06 ರಿಂದ 5 ಓವರ್‌ ಪಂದ್ಯಕ್ಕೆ ಸೀಮಿತಗೊಳಿಸಲಾಗುತ್ತದೆ. ಮಳೆ ನಿರಂತರವಾಗಿ ಮುಂದುವರಿದರೆ ಪಂದ್ಯ ರದ್ದು ಮಾಡಬೇಕಾಗುತ್ತದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಸಂಜೆ 7 ಗಂಟೆಯಿಂದಲೇ ಆರಂಭಗೊಂಡ ಮಳೆ 8:30ರ ವೇಳೆಗೆ ಬಿಡುವು ನೀಡಿತ್ತು. ಇನ್ನೇನು ಪಂದ್ಯ ಆರಂಭಕ್ಕೆ ಎಲ್ಲ ಸಿದ್ಧತೆ ಮತ್ತೆ ವಕ್ಕರಿಸಿದ ಮಳೆರಾಯ ಬಿಟ್ಟೂ ಬಿಡದೇ ಕಾಡುತ್ತಿದೆ. ಈಗಾಗಲೇ ಪ್ರೇಕ್ಷಕರು ಹೊರಾಂಗಣದತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಇಂದಿನ ಪಂದ್ಯ ನಡೆಯುವುದು ಅನುಮಾನವಾಗಿದೆ. ಇಂದಿಗೆ ಪಂದ್ಯ ರದ್ದಾದರೇ ಮೇ 29 ರಂದು ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

  • IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

    IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

    ಅಹಮದಾಬಾದ್‌: 16ನೇ ಐಪಿಎಲ್‌ (IPL 2023) ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ಗುಜರಾತ್‌ ಟೈಟಾನ್ಸ್‌ (GT) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವೆ ರೋಚಕ ಕಾದಾಟ ನಡೆಯಲಿದೆ. ಆದ್ರೆ ಈ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    10ನೇ ಬಾರಿಗೆ ಐಪಿಎಲ್‌ ಫೈನಲ್‌ಗೆ ಲಗ್ಗೆಯಿಟ್ಟಿರುವ ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದೆ. ಆದ್ರೆ ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಬಲಿಷ್ಠ ಗುಜರಾತ್‌ ಟೈಟಾನ್ಸ್‌ ಪಡೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು, ಸತತ 2ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಕಾತುರವಾಗಿದೆ. ಆದ್ರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ 40% ರಿಂದ 65% ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ವರದಿಯ ಪ್ರಕಾರ, ಭಾನುವಾರ (ಮೇ 28) ಸಂಜೆ ವೇಳೆಗೆ 78% ಮೋಡ ಕವಿದ ವಾತಾವರಣವಿದ್ದು, ಆಟ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದ್ರೆ, ಕನಿಷ್ಠ 2 ಗಂಟೆಗಳ ಕಾಲ ಸುರಿಯಲಿದೆ ಎನ್ನಲಾಗಿದೆ.

    ಮಳೆ ಅಡ್ಡಿಯಾದ್ರೆ ಕಥೆ ಏನು?
    ಫೈನಲ್‌ ಪಂದ್ಯ ಮಳೆಯಿಂದಾಗಿ ಅಡ್ಡಿಯಾದರೆ ಅದಕ್ಕೆ ರೈನ್‌ ರೂಲ್ಸ್‌ ಮೂಲಕ ಫಲಿತಾಂಶ ನಿಗದಿಮಾಡಲು ಐಪಿಎಲ್‌ ಮಂಡಳಿ ನಿರ್ಧರಿಸಿದೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ರಾತ್ರಿ 9.40ರ ಒಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಇತ್ತಂಡಗಳು 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ 9.40ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.

    ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ. ರಾತ್ರಿ 11.56 ರಿಂದ 12.50ರ ಒಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್​ ನಡೆಯಲಿದೆ. ಆದರೆ ಸೂಪರ್ ಓವರ್​ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50ಕ್ಕೆ ಸೂಪರ್ ಓವರ್​ ಪಂದ್ಯ ಶುರುವಾಗಲಿದೆ.

    ಸೂಪರ್‌ ಓವರ್‌ ನಡೆಸುವುದಕ್ಕೂ ಸಾಧ್ಯವಾಗದಿದ್ದಲ್ಲಿ ಐಪಿಎಲ್‌ ಲೀಗ್‌ ಪಾಯಿಂಟ್ಸ್‌ ರ‍್ಯಾಂಕಿಂಗ್‌ನಿಂದ ಚಾಂಪಿಯನ್ಸ್‌ ಎಂದು ಘೋಷಿಸಲು ಅಥವಾ ಪಂದ್ಯವನ್ನು ಮುಂದೂಡಲು ಐಪಿಎಲ್‌ ಮಂಡಳಿ ನಿರ್ಧರಿಸಿದೆ.

    ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.