ನವದೆಹಲಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್ ಗಲಭೆಗಳ (Gujarat Riots And Babri Masjid) ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿರಲಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಗಳನ್ನಾಗಿ ಮಾಡಬೇಕೇ? ಸಮಾಜದಲ್ಲಿ ದ್ವೇಷ ಬಿತ್ತಬೇಕೆ? ದ್ವೇಷಕ್ಕೆ ಮಕ್ಕಳು ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಅಂತಹ ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಪ್ರಶ್ನೆಗಳ ಮಳೆ ಸುರಿಸಿದರಲ್ಲದೇ ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ ಎಂದಿದ್ದಾರೆ.
ಎನ್‌ಸಿಇಆರ್‌ಟಿ 12ನೇ ತರಗತಿ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಅಯೋಧ್ಯೆ ಪಠ್ಯ ವಿಭಾಗವನ್ನು 2 ಪುಟಗಳಿಗೆ ಇಳಿಸಲಾಗಿದೆ. ಗಲಭೆಗಳ ಕುರಿತ ಬೋಧನೆಯು ಆವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದಾಗ ಅದರ ಬಗ್ಗೆ ಕಲಿಯಬಹುದು ಶಾಲೆಯ ಪಠ್ಯಪುಸ್ತಕಗಳು ಏಕೆ? ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಸಕ್ಲಾನಿ ಹೇಳಿದ್ದಾರೆ.
ನವದೆಹಲಿ: 2002 ರ ಗುಜರಾತ್ ಗಲಭೆ (2002 Gujarat Riots) ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ (Teesta Setalvad) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ಜಾಮೀನು ನೀಡಿದೆ.
ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ತ್ರಿಸದಸ್ಯ ಪೀಠವು, ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೇ ತೀಸ್ತಾ ಅವರಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು
ಸೆಟಲ್ವಾಡ್ ವಿರುದ್ಧ ಚಾರ್ಜ್‌ಸೀಟ್ ಸಲ್ಲಿಸಿರುವುದನ್ನು ನ್ಯಾಯಾಲಯ ಅವಲೋಕಿಸಿದೆ. ಕಸ್ಟಡಿ ವಿಚಾರಣೆಯ ಅಗತ್ಯವನ್ನು ತೆಗೆದುಹಾಕಲಾಗಿದೆ. ಆದಾಗ್ಯೂ, ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿ ಜಾಮೀನು ನೀಡಿದೆ.
ಗುಜರಾತ್ ಗಲಭೆ ಪ್ರಕರಣದಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತೀಸ್ತಾರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಇದನ್ನೂ ಓದಿ: ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ
ಜಾಮೀನು ಅವಧಿ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಶರಣಾಗುವಂತೆ ಗುಜರಾತ್ ಹೈಕೋರ್ಟ್ ಜು. 1 ರಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ತೀಸ್ತಾ ಅವರು ಮತ್ತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಾಷಿಂಗ್ಟನ್: ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡಲು ಶುರುಮಾಡಿದ ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಇದೀಗ ಗುಜರಾತ್ ಗಲಭೆ, ಪ್ರಧಾನಿ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರ (BBC Documentary) ಪ್ರಸಾರದಲ್ಲಿ ಟ್ವಿಟ್ಟರ್ ಪಾತ್ರದ ಕುರಿತು ಮಾತನಾಡಿದ್ದಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ವಿಟರ್ ವೇದಿಕೆಯಲ್ಲಿ ಲೈವ್ ಪ್ರಸಾರ ಮಾಡಿದ್ದರಿಂದ, ಭಾರತ ಸರ್ಕಾರದ ಆದೇಶದ ಮೇರೆಗೆ ಸೈಟ್ ಕೆಲವು ವಿಷಯವನ್ನು ತೆಗೆದುಹಾಕಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಸ್ಕ್, ನನಗೆ ಈ ನಿರ್ದಿಷ್ಟ ಸನ್ನಿವೇಶದ ಬಗ್ಗೆ ತಿಳಿದಿಲ್ಲ. ಭಾರತದಲ್ಲಿನ ಕೆಲವು ವಿಷಯಗಳಲ್ಲಿ ಪರಿಸ್ಥಿತಿ ನಿಖರವಾಗಿ ಏನಾಯಿತು ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!
2002ರ ಗುಜರಾತ್ ಗಲಭೆ (Gujarat Riots) ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ್ದ `India: The Modi Question’ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ಬ್ಯಾನ್ ಮಾಡಿದ್ದು ಅದರ ಲಿಂಕ್‌ಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿತ್ತು. ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿಯಲ್ಲಿ ತುರ್ತು ಅಧಿಕಾರ ಬಳಸಿಕೊಂಡು ಲಿಂಕ್‌ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ನೀಡಿದ್ದು ಟ್ವಿಟ್ಟರ್ ಮತ್ತು ಯೂಟ್ಯೂಬ್ ಈ ಆದೇಶ ಪಾಲನೆ ಮಾಡಲು ಒಪ್ಪಿಕೊಂಡಿದ್ದವು.
ಭಾರತದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನ ಬ್ಯಾನ್ ಮಾಡಿದ್ದರೂ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ವೀಡಿಯೋಗಳನ್ನ ಅಪ್‌ಲೋಡ್ ಮಾಡಲಾಗಿತ್ತು. ಆದ್ದರಿಂದ ಸಾಕ್ಷ್ಯಚಿತ್ರದ ವೀಡಿಯೋಗಳನ್ನು ಲಿಂಕ್ ಮಾಡುವ 50ಕ್ಕೂ ಹೆಚ್ಚು ಟ್ವಿಟ್ಟರ್ ಖಾತೆಗಳನ್ನ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಆದೇಶಿಸಿತು ಎಂದು ಸರ್ಕಾರದ ಸಲಹೆಗಾರ ಕಾಂಚನ್‌ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ
ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಮಸ್ಕ್, ಸಾಮಾಜಿಕ ಮಾಧ್ಯಮ ವಿಚಾರದಲ್ಲಿ ಭಾರತ ಸರ್ಕಾರದ ನಿಯಮಗಳು ಕಟ್ಟುನಿಟ್ಟಾಗಿವೆ. ನಾವು ಯಾವುದೇ ಕಾರಣಕ್ಕೂ ದೇಶದ ಕಾನೂನುಗಳನ್ನ ಮೀರಿ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಜನರು ಜೈಲಿಗೆ ಹೋಗ್ತೀರಾ? ಅಥವಾ ಕಾನೂನು ಪಾಲನೆ ಮಾಡ್ತೀರಾ? ಎಂಬ ಆಯ್ಕೆಗಳನ್ನ ನೀಡಿದ್ರೆ, ನಾವು ಕಾನೂನು ಪಾಲನೆ ಮಾಡುವ ಆಯ್ಕೆಯನ್ನೇ ಅನುಸರಿಸುತ್ತೇವೆ ಎಂದು ಭಾರತ ಕಾನೂನಿನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ನವದೆಹಲಿ: ಗುಜರಾತ್ ಗಲಭೆ (Gujarat riots) ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೋ (Bilkis Bano) ಪ್ರಕರಣದ 11 ಅಪರಾಧಿಗಳ ಅವಧಿಗೂ ಮುನ್ನವೇ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ (Supreme Court) ಪುರಸ್ಕರಿಸಿದೆ. ವಿಚಾರಣೆಗೆ ಹೊಸ ಪೀಠ ರಚಿಸಲು ಅನುಮತಿ ಸೂಚಿಸಿದೆ.
2022ರ ಆಗಸ್ಟ್ 15ರಂದು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಬಿಲ್ಕಿಸ್ ಬಾನೋ ಅರ್ಜಿ ಸಲ್ಲಿಸಿದ್ದರು.
2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರು ಗರ್ಭಿಣಿಯಾಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದವರನ್ನು ಕೊಲೆ ಮಾಡಲಾಗಿತ್ತು. ಒಟ್ಟು 11 ಜನರ ವಿರುದ್ಧ ಆರೋಪ ಸಾಬೀತಾಗಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಚುನಾವಣೆಗೆ ಮುನ್ನ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ, ತಂಬಾಕು ಸೀಜ್
ನವದೆಹಲಿ: 2002ರ ಗುಜರಾತ್ ಗಲಭೆ (2002 Gujarat Riots) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು (BBC Documentary) ಭಾರತ ಸರ್ಕಾರ ಬ್ಯಾನ್ ಮಾಡಿದ್ದು ಅದರ ಲಿಂಕ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿದೆ.
CENSORSHIP@Twitter @TwitterIndia HAS TAKEN DOWN MY TWEET of the #BBCDocumentary, it received lakhs of views
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಮಾಡಿದ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದು ಹಾಕಿದೆ. ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಾನು ಮಾಡಿದ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದಿದೆ. ಒಂದು ಗಂಟೆಯ ಬಿಬಿಸಿ ಡಾಕ್ಯುಮೆಂಟರಿ ಪ್ರಧಾನಿ ನರೇಂದ್ರ ಮೋದಿ ಹೇಗೆ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ನಾನು ಸ್ವೀಕರಿಸಿದ ಮೇಲ್ ಇಲ್ಲಿದೆ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ನಿವೃತ್ತ ಅಧಿಕಾರಿಗಳು ಗರಂ:
ಬಿಬಿಸಿ ವಿರುದ್ದ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಸೇರಿ 302 ನಿವೃತ್ತ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರವನ್ನು ಬಿಂಬಿಸಿದ್ದು ಪೂರ್ವಾಗ್ರಹಪೀಡಿತ ಎಂದು ಬಹಿರಂಗ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ 13 ನಿವೃತ್ತ ನ್ಯಾಯಾಧೀಶರು, 13 ಮಂದಿ ನಿವೃತ್ತ ಅಧಿಕಾರಿಗಳು, ರಾಯಭಾರಿಗಳು ಮತ್ತು 156 ನಿವೃತ್ತ ಸೇನಾಧಿಕಾರಿಗಳು ಸಹಿ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕವೂ ಬಿಬಿಸಿ ಈ ರೀತಿ ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುತ್ತಿದೆ. ದೇಶದ ಸುಪ್ರೀಂ ಕೋರ್ಟ್ ತೀರ್ಪನ್ನು ತಳ್ಳಿಹಾಕಿ ತನಗೆ ಬೇಕಾದಂತೆ ಮಾಡಿ ಪ್ರಚಾರ ಮಾಡುತ್ತದೆ. ಈ ಸಾಕ್ಷ್ಯಚಿತ್ರ ಬ್ರಿಟಿಷ್ ವಸಾಹತುಶಾಹಿಯ ಭ್ರಮೆ. ಆಧಾರಗಳು ಇದೆ ಎಂದ ಮಾತ್ರಕ್ಕೆ ನಂಬಲು ಸಾಧ್ಯವಿಲ್ಲ. ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಚಾರ್ಜ್‌ಶೀಟ್ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 19 ವರ್ಷಗಳಿಂದ ಗುಜರಾತ್ ಗಲಭೆ ಕುರಿತಾಗಿ ಒಂದು ಮಾತನ್ನೂ ಮಾತನಾಡದೆ ನೋವನ್ನು ವಿಷಕಂಠನಂತೆ ಸಹಿಸಿಕೊಂಡಿದ್ದಾರೆ. ವಿಷ ನುಂಗಿ ತನ್ನ ಗಂಟಲಿನಲ್ಲಿ ಹಿಡಿದಿಟ್ಟುಕೊಂಡ ಶಿವನಂತೆ ಮೋದಿ ಇದ್ದರು ಎಂದು ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್‍ನ ಗೋಧ್ರಾ ನರಮೇಧ ನಂತರದ ಹಿಂಸಾಚಾರ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಎಸ್‍ಐಟಿ (ವಿಶೇಷ ತನಿಖಾ ತಂಡ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ವಜಾಗೊಳಿಸಿತ್ತು. ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ಗುಜರಾತ್ ಗಲಭೆ ಯಾಕಾಯಿತು, ಹೇಗಾಯಿತು, ನಂತರದ ಪರಿಣಾಮಗಳು ಹೇಗೆ ಬೀರಿದ್ದವು ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಗಲಭೆ – ಮೋದಿಗೆ ಬಿಗ್ ರಿಲೀಫ್, ಸುಪ್ರೀಂನಿಂದ ಸಿಕ್ತು ಕ್ಲೀನ್ ಚಿಟ್
ಗುಜರಾತ್ ಗಲಭೆಗೆ ಪ್ರಮುಖ ಕಾರಣ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದು. 16 ದಿನದ ಮಗು ಸೇರಿದಂತೆ 59 ಮಂದಿ ಸಜೀವ ದಹನವಾಗಿದ್ದರು. ಆಗ ಮೆರವಣಿಗೆ ಮಾಡಿರಲಿಲ್ಲ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಅಂಬುಲೆನ್ಸ್ ನಲ್ಲಿ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಆದರೆ ಘಟನೆಯ ಬಳಿಕ ಈ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದವು. ಸತ್ಯದ ಪರವಾಗಿದ್ದರೂ ಆರೋಪಗಳನ್ನು ಎದುರಿಸುತ್ತಿರುವ ಮೋದಿಜೀ ಈ ನೋವನ್ನು ಸಹಿಸಿಕೊಳ್ಳುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದ್ದರಿಂದ ಅವರು ಮಾತನಾಡಲಿಲ್ಲ. ಅಂದು ಗುಜರಾತ್‍ನ ಗೃಹ ಸಚಿವನಾಗಿದ್ದ ನಾನು ಈ ಬಗ್ಗೆ ಮಾತನಾಡಲಿಲ್ಲ. ಇಂದಿನ ಸಂದರ್ಶನವನ್ನು ನಾನು 2003ರಲ್ಲಿ ಗುಜರಾತ್ ಗೃಹ ಸಚಿವನಾಗಿ ನೀಡಬಹುದಿತ್ತು. ಆದರೆ ನ್ಯಾಯಾಂಗ ಪ್ರಕ್ರಿಯೆ ಮುಗಿಯುವವರೆಗೂ ಮೋದಿಜೀ ಯಾವುದೇ ಪ್ರಭಾವ ಬೀರದಂತೆ ಏನನ್ನೂ ಹೇಳಲಿಲ್ಲ. ಇದೆಲ್ಲವನ್ನೂ ಅವರು ಮೌನವಾಗಿ ಸಹಿಸಿಕೊಂಡಿದ್ದರು ಇದರ ಫಲವಾಗಿ ಸತ್ಯಕ್ಕೆ ಜಯವಾಗಿದೆ ಎಂದರು.
ಬಿಜೆಪಿಯ ರಾಜಕೀಯ ವಿರೋಧಿಗಳು, ರಾಜಕೀಯ ಪ್ರೇರಿತ ಪತ್ರಕರ್ತರು ಮತ್ತು ಸರ್ಕಾರೇತರ ಸಂಘಟನೆಗಳು ಒಟ್ಟಾಗಿ ಬಿಜೆಪಿ ಮತ್ತು ಪಕ್ಷದ ನಾಯಕರ ವಿರುದ್ಧ ಗಲಭೆ ಪ್ರಕರಣದ ಆರೋಪ ಹೊರಿಸಿದರು. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದರೂ ಕೂಡ ಬಿಜೆಪಿಗೆ ಗುಜರಾತ್‍ನ ಜನತೆಯ ಮೇಲೆ ನಮಗೆ ನಂಬಿಕೆ ಇತ್ತು. ಅಲ್ಲಿನ ಜನರು ಬಿಜೆಪಿಯನ್ನು ಕೈಬಿಡಲಿಲ್ಲ. ಅಧಿಕಾರ ತಂದು ಕೊಟ್ಟರು. ಇಂದಿಗೆ ಈ ಘಟನೆ ನಡೆದು 20 ವರ್ಷಗಳಾಗಿದೆ. ಜನರ ಆದೇಶವೇ ದೊಡ್ಡದು, ಸಾರ್ವಜನಿಕರು ಎಲ್ಲವನ್ನೂ ನೋಡುತ್ತಾರೆ. ದೇಶದ 130 ಕೋಟಿ ಜನರಿಗೆ 260 ಕೋಟಿ ಕಣ್ಣುಗಳು ಮತ್ತು 260 ಕೋಟಿ ಕಿವಿಗಳಿವೆ. ಅವರು ಎಲ್ಲವನ್ನೂ ನೋಡುತ್ತಾರೆ ಮತ್ತು ಕೇಳುತ್ತಾರೆ, ನಾವು ಎಂದಿಗೂ ಚುನಾವಣೆಯಲ್ಲಿ ಗುಜರಾತ್‍ನಲ್ಲಿ ಸೋತಿಲ್ಲ. ಜನ ನಮ್ಮನ್ನು ಕೈಬಿಟ್ಟಿಲ್ಲ. ನಮ್ಮ ಮೇಲೆ ಜನರಿಗೆ ನಂಬಿಕೆ ಇತ್ತು ಇದೀಗ ಮತ್ತೆ ನಾವು ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಬಹಳ ಎಚ್ಚರಿಕೆಯಿಂದ ಓದಿದ್ದೇನೆ. ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಕೆಯು ನಡೆಸುತ್ತಿದ್ದ ಎನ್‍ಜಿಒ ನನಗೆ ಆ ಎನ್‍ಜಿಒ ಹೆಸರು ನೆನಪಿಲ್ಲ ಆದರೆ ಗಲಭೆಯ ಬಗ್ಗೆ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು. ಇದರಿಂದ ನಮ್ಮ ಮೇಲೆ ಸುಳ್ಳು ಆರೋಪ ಪಿತೂರಿ ನಡೆಸಲಾಗಿತ್ತು. ಇದೀಗ ಪ್ರಕರಣದ ಬಗ್ಗೆ ಸತ್ಯ ಹೊರಬಂದಿದ್ದು, ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಆರೋಪಗಳನ್ನು ಕೋರ್ಟ್ ಸರಿಯಾಗಿ ಪ್ರಶ್ನಿಸಿದೆ. ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ನೀವು ಹೇಳಬಹುದು, ಇದು ಸಹ ಸಾಭೀತಾಗಿದೆ. ಈ ಹೋರಾಟ ಕಳೆದ 19 ವರ್ಷಗಳಿಂದ ನಾವು ನಡೆಸಿರುವ ಹೋರಾಟ ಕಡೆಗೆ ಜಯ ನಮ್ಮದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗೋಧ್ರಾ ನರಮೇಧ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ಎಸ್‍ಐಟಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಸಂಸದ ಇಸಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿಟಿ ರವಿಕುಮಾರ್ ಅವರಿದ್ಧ ಪೀಠ ನಿನ್ನೆ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಎಸ್‍ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿ ಹಿಡಿದ ಕೋರ್ಟ್ ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿತು. ಇದನ್ನೂ ಓದಿ: ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?
ಏನಿದು ಪ್ರಕರಣ?
2002ರ ಫೆಬ್ರವರಿ 22 ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು. ವಿಶೇಷವಾಗಿ ಗುಲ್ಬರ್ಗಾ ಸೊಸೈಟಿಯಲ್ಲಿ ನರಮೇಧವೇ ನಡೆದು ಹೋಗಿತ್ತು. ಇದರಲ್ಲಿ ಇಸಾನ್ ಜಫ್ರಿ ಸೇರಿ 68 ಮಂದಿ ಹತರಾಗಿದ್ದರು. 2002 ಫೆಬ್ರವರಿ 27ರಿಂದ ಮೇ ತಿಂಗಳವರೆಗೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ ಅಡಗಿದೆ. ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.
ಗಾಂಧೀನಗರ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ. ಅದಕ್ಕೆ ಗಲಭೆಗೆ ಸಹಕರಿಸಿದೆ ಎಂದು ರಾಮನವಮಿಯಂದು ನಡೆದ ಹಿಂಸಾಚಾರ ಖಂಡಿಸಿ ಗುಜರಾತ್ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಎಷ್ಟು ದಿನ ಹಳೆಯ ಕಥೆಗಳನ್ನು ಹೊರತರುತ್ತೀರಿ? ನಿಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಿ. ನೀವೇ ಜಟಿಲರು. ಭಜನೆ ಮಾಡಬೇಕು, ಆದರೆ ಯಾವ ರೀತಿಯ ಘೋಷಣೆಗಳು ಎದ್ದವು? 50-100 ಕತ್ತಿಗಳನ್ನು ಬೀಸಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಇದನ್ನು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯ ಸೀರೆ ಮಳಿಗೆಯಲ್ಲಿ ಅಗ್ನಿ ದುರಂತ: ನಾಲ್ವರು ಸಜೀವ ದಹನ
ಗುಪ್ತಚರ ಇಲಾಖೆ (IB) ವರದಿಯಿದ್ದರೆ ನೀವು ಏಕೆ ಮಲಗಿದ್ದೀರಿ? ನೀವು ಅದನ್ನು ಬಹಿರಂಗಪಡಿಸಬೇಕು. ಹೆಚ್ಚಿನ ಪೋಲಿಸ್ ಪಡೆಯನ್ನು ನಿಯೋಜಿಸಿ, ಹಿಂಸಾಚಾರವನ್ನು ನಿಲ್ಲಿಸಬೇಕು. ನಿಮ್ಮ ಜಟಿಲ ವರ್ತನೆಯನ್ನು ಮರೆಮಾಡಲು ಕಥೆಗಳನ್ನು ಹೇಳುತ್ತೀರಿ. ಅಂತಹ ಕಥೆಗಳು ಈಗ ಹಳೆಯದಾಗಿವೆ ಎಂದು ಚಾಟಿ ಬೀಸಿದ್ದಾರೆ.
ಯಾವುದೇ ಹಿಂಸಾಚಾರವೂ ಸರಿಯಲ್ಲ. ಹಿಂಸಾಚಾರ ಭುಗಿಲೆದ್ದರೆ ಅದರ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರಗಳು ಬಯಸದಿದ್ದರೆ, ಹಿಂಸಾಚಾರ ಭುಗಿಲೇಳುವುದಿಲ್ಲ ಎಂದು ತನಿಖಾ ಆಯೋಗದ ವರದಿಗಳು ಹೇಳಿವೆ ಎಂದು ತಿಳಿಸಿದ್ದಾರೆ.
ಅಲಹಾಬಾದ್: ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾವತಿ ಆಯೋಗ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
2002ರ ಗಲಭೆ ಪ್ರಕರಣ ಸಂಬಂಧ ನಾನಾವತಿ ಆಯೋಗದ ವರದಿ 5 ವರ್ಷದ ಹಿಂದೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು ಇಂದು ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಇದು ಪೂರ್ವನಿಯೋಜಿತ ದಂಗೆಯಲ್ಲ. ಈ ದಂಗೆಯನ್ನು ನಿಯಂತ್ರಿಸಲು ಮೋದಿಯವರು ಪ್ರಯತ್ನ ನಡೆಸಿದ್ದರು. ದಂಗೆ ಕುರಿತು ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸುಳ್ಳು ಹೇಳಿದ್ದಾರೆ ಎಂದು 1500 ಪುಟಗಳ ವರದಿಯಲ್ಲಿ ತಿಳಿಸಿದೆ.
ಪೊಲೀಸರಿಗಿಂತಲೂ ಪ್ರತಿಭಟನಾಕಾರರ ಸಂಖ್ಯೆ ಜಾಸ್ತಿ ಇತ್ತು. ಇದರ ಜೊತೆಗೆ ಪೊಲೀಸರು ಶಸ್ತ್ರಸಜ್ಜಿತರಾಗಿ ಇರಲಿಲ್ಲ. ಈ ಕಾರಣದಿಂದ ಕೆಲವೊಂದು ಪ್ರದೇಶದಲ್ಲಿ ಪೊಲೀಸರು ಗಲಭೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು ಎಂದು ಹೇಳಿದೆ.
ಏನಿದು ಪ್ರಕರಣ?
2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತಿಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಹತ್ಯಾಕಾಂಡದ ನಂತರ ಗುಜರಾತ್‍ನ ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು.
ಗಲಭೆ ಪ್ರಕರಣ ಕುರಿತು 2002ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನಿವೃತ್ತ ನ್ಯಾ. ನಾನಾವತಿ ಮತ್ತು ಅಕ್ಷಯ್ ಮೆಹ್ತಾ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಗುಜರಾತ್ ಸರ್ಕಾರ ಈ ಪ್ರಕರಣದ ತನಿಖೆಗಾಗಿ ರಚಿಸಿದ್ದ ನಾನಾವತಿ ಆಯೋಗದ ವರದಿ ಮೊದಲ ಬಾರಿಗೆ 2008ರಲ್ಲಿ ಮಂಡನೆಯಾಗಿತ್ತು. ಸಬರಮತಿ ಎಕ್ಸ್‍ಪ್ರೆಸ್ ರೈಲಿನ ಎಸ್-6 ಬೋಗಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಲ್ಲ. ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಯೋಜಿತ ಪಿತೂರಿಯಾಗಿದ್ದು, ಗೋದ್ರಾ ರೈಲ್ವೇ ಸಮೀಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಎಂದು ವರದಿಯನ್ನು ಸಲ್ಲಿಸಿತ್ತು. 2014ರಲ್ಲಿ ಆನಂದಿ ಬೆನ್ ನೇತೃತ್ವದ ಸರ್ಕಾರದ ಮುಂದೆ ಅಂತಿಮ ವರದಿಯನ್ನು ಸಲ್ಲಿಸಿತ್ತು.