Tag: ಗುಜರಾಜ್

  • 16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ 27.68 ಲಕ್ಷ ರೂ. ದಂಡ ತೆತ್ತ

    16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ 27.68 ಲಕ್ಷ ರೂ. ದಂಡ ತೆತ್ತ

    – ಜಾರ್ಖಂಡ್‍ನಲ್ಲಿ 2.5 ಕೋಟಿ ರೂ. ಕಾರು ಖರೀದಿ

    ಗಾಂಧಿನಗರ: 16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ ಕಾರು ಮಾಲೀಕನೋರ್ವ 27.68 ಲಕ್ಷ ರೂ. ದಂಡ ಪಾವತಿಸಿದ ಪ್ರಸಂಗವೊಂದು ಗುಜರಾಜ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ.

    ಅಹಮದಾಬಾದ್‍ನ ರಂಜಿತ್ ದೇಸಾಯಿ ಎಂಬವರು 16 ಲಕ್ಷ ರೂ.ಗಳ ತೆರಿಗೆ ಉಳಿಸಲು ಜಾರ್ಖಂಡ್‍ನಲ್ಲಿ 2.18 ಕೋಟಿ ರೂ.ಗೆ ಪೋರ್ಷೆ -911 ಕಾರನ್ನು ಖರೀದಿಸಿ ಅಲ್ಲಿಂದ ಪಾಸ್ ಪಡೆದರು. ಆದರೆ ಟ್ರಾಫಿಕ್ ಪೊಲೀಸರು ಕಾರನ್ನು ನವೆಂಬರ್ 29 ರಂದು ಅಹಮದಾಬಾದ್ ಹೆಲ್ಮೆಟ್ ಸರ್ಕಲ್‍ನಲ್ಲಿ ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ರಂಜಿತ್ ದೇಸಾಯಿ ಯಾವುದೇ ದಾಖಲೆಗಳನ್ನು ಹಾಗೂ ನಂಬರ್ ಪ್ಲೇಟ್ ಅನ್ನು ಹೊಂದಿರಲಿಲ್ಲ. ಇದರಿಂದಾಗಿ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದರು.

    ಕಾರಿನ ಮಾಲೀಕ ರಂಜಿತ್ ದೇಸಾಯಿ ಅವರಿಂದ ದಂಡವನ್ನು ವಸೂಲಿ ಮಾಡುವ ಪ್ರಕ್ರಿಯೆ ನವೆಂಬರ್‍ನಲ್ಲಿ ಪ್ರಾರಂಭವಾಯಿತು. ಈ ಪ್ರಕರಣ ನಡೆದ ಸುಮಾರು ಒಂದೂವರೆ ತಿಂಗಳ ನಂತರ ಇತ್ಯರ್ಥವಾಗಿರಲಿಲ್ಲ. ಹೀಗಾಗಿ ದಂಡದ ಮೊತ್ತ, ತೆರಿಗೆ ಮತ್ತು ದಂಡ ಬಡ್ಡಿ ಸೇರಿದಂತೆ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.

    ದಂಡದ ಮೊತ್ತ?:
    ದಂಡ ಮೊತ್ತ 4 ಲಕ್ಷ ರೂ. ಆಗಿದ್ದು, ರಸ್ತೆ ತೆರಿಗೆಗೆ 16 ಲಕ್ಷ ರೂ. ಸಂಗ್ರಹಿಸಲಾಗಿದೆ. ಇದಲ್ಲದೆ ದಂಡದ ಬಡ್ಡಿಯನ್ನು ನವೆಂಬರ್ ನಲ್ಲಿ ಆರಂಭಿಸಲಾಗಿದ್ದು, ಅದರ ಮೊತ್ತವು 7.68 ಲಕ್ಷ ರೂ. ಆಗಿದೆ. ಈ ಎಲ್ಲ ಮೊತ್ತ ಸೇರಿ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರ ಡಿಸಿಪಿ ಅಜಿತ್ ರಾಜನ್ ತಿಳಿಸಿದ್ದಾರೆ.

  • ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

    ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

    ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv