Tag: ಗುಂಟೂರು ಮೆಣಸಿನಕಾಯಿ

  • ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸಖತ್ ಟೇಸ್ಟ್

    ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸಖತ್ ಟೇಸ್ಟ್

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದ್ರೆ ಅನ್ನದೊಂದಿಗೆ ಚಿಕನ್ ಗ್ರೇವಿ ಇದ್ರೆ ಎಷ್ಟು ಚಂದ ಅಲ್ವಾ. ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ರುಚಿಯಾದ ಚಿಕನ್ ಗ್ರೇವಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್- 1 ಕೆ.ಜಿ
    * ಗುಂಟೂರು ಮೆಣಸಿನಕಾಯಿ-20
    * ಈರುಳ್ಳಿ- 2
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಸಾಸಿವೆ- ಅರ್ಧ ಚಮಚ
    * ಅರಿಸಿಣ- ಅರ್ಧ ಚಮಚ
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್- 2 ಚಮಚ
    * ಲವಂಗ, ಚಕ್ಕೆ- ಸ್ವಲ್ಪ
    * ಕೊತ್ತಂಬರಿ- ಸ್ವಲ್ಪ
    * ಕರಿಬೇವು-ಸ್ವಲ್ಪ

    ಮಾಡುವ ವಿಧಾನ:
    * ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ಈರುಳ್ಳಿ, ಕರಿಬೇವು, ಸಾಸಿವೆ, ಅರಿಸಿಣ, ಉಪ್ಪು ಹಾಕಿ ಹಾಕಿ ಫ್ರೈ ಮಾಡಿ ಚಿಕನ್ ಹಾಕಿ ಬೇಯಲು ಬಿಡಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    * ಗುಂಟೂರು ಮೆಣಸಿನಕಾಯಿ, ಕೊತ್ತಂಬರಿಯನ್ನು ರುಬ್ಬಿಕೊಳ್ಳಬೇಕು.

    * ನಂತರ ಮತ್ತೋಂದು ಬಾಣಲೆಗೆ ಅಡುಗೆ ಎಣ್ಣೆ, ಕರಿಬೇವು, ಸಾಸಿವೆ, ಕೊತ್ತಂಬರಿ, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿಕೊಡಿ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

    * ನಂತರ ಈಗಾಗಲೇ ಬೇಯಿಸಿದ ಚಿಕನ್ ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ, ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    * ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ವಿಜಯವಾಡ: ನಾಲಿಗೆ ಚಪ್ಪರಿಸಿ ಗುಂಟೂರು ಮೆಣಸಿನಕಾಯಿ ಉಪ್ಪಿನಕಾಯಿ ತಿನ್ನುವ ಮಂದಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

    ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‍ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ ಎನ್ನುವ ಆತಂಕಕಾರಿ ವರದಿ ಪ್ರಕಟವಾಗಿದೆ.

    ಕ್ಯಾನ್ಸರ್ ತರುವಂತಹ ಸಾಮಥ್ರ್ಯ ಹೊಂದಿರುವ ಫಂಗಸ್ ಅಥವಾ ಶಿಲೀಂಧ್ರ ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್ ಆಗಿದ್ದು, ಈ ವಸ್ತು ಗುಂಟೂರು ಮೆಣಸಿನಕಾಯಿಯಲ್ಲಿದೆ ಎಂದು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್ ಜರ್ನಲ್ ಹೇಳಿದೆ.

    ಗುಂಟೂರು ಮೆಣಸಿನಕಾಯಿ ಸಾಕಷ್ಟು ರುಚಿ ಹಾಗೂ ತೀಕ್ಷ್ಣತೆಯಿದ್ದು, ಖಾರವಾಗಿರುತ್ತದೆ. ಹಾಗಾಗಿ ಈ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಸಿದ್ಧಿ ಪಡೆದಿದೆ.

    ಗುಂಟೂರು ಜಿಲ್ಲೆಯೊಂದರಲ್ಲಿ ವಾರ್ಷಿಕವಾಗಿ ಸುಮಾರು 2.80 ಲಕ್ಷ ಟನ್ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಅಲ್ಲದೇ ಈ ಮೆಣಸಿಕಾಯಿಯನ್ನು ಇಂಗ್ಲೆಂಡ್, ಅಮೆರಿಕ ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

    ಸಂಶೋಧಕರು ಎಫ್ಲಾಟಾಕ್ಸಿನ್ ಪತ್ತೆ ಹಚ್ಚಿ ವೈಜ್ಞಾನಿಕ ನಿರ್ವಹಣೆಯ ವಿಧಾನಗಳನ್ನು ಹೇಳಿದ್ದಾರೆ. ಈ ಮೆಣಸಿನಕಾಯಿಯನ್ನು ದಕ್ಷಿಣ ಭಾರತದ ಜನರು ಅಡುಗೆಗೆ ಬಳಸುತ್ತಾರೆ. ಹೆಚ್ಚಾಗಿ ತೆಲುಗು ಭಾಷೆಯವರು ಈ ಮೆಣಸಿನಕಾಯಿಯನ್ನು ಬಳಸುತ್ತಾರೆ. ಗುಂಟೂರು ಮೆಣಸಿನಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

    ಮಚಿಲಿಪಟ್ಟಣದ ಕೃಷ್ಣಾ ವಿಶ್ವಾವಿದ್ಯಾನಿಲಯದ ಸಂಶೋಧಕರು, ವಿಜಯವಾಡದ ಕೆಬಿಎನ್‍ಬಿಜಿ ಕಾಲೇಜು ಹಾಗೂ ಪಿ.ಬಿ ಸಿದ್ಧಾರ್ಥ್ ಕಾಲೇಜು ಜೊತೆ ಸೇರಿ ಗುಂಟೂರು ನಗರದೆಲ್ಲೆಡೆ ಮೆಣಸಿನಕಾಯಿಯನ್ನು ಸ್ಯಾಂಪಲ್ ಪಡೆದು ಅಧ್ಯಯನ ನಡೆಸಿದ್ದಾರೆ. ಮೆಣಸಿನಕಾಯಿ ಮಣ್ಣಿನಲ್ಲಿ ಹೆಚ್ಚು ಇದ್ದರೆ ಅದು ಫಂಗಸ್ ಅಥವಾ ಶಿಲೀಂಧ್ರ ವಿಷಕಾರಿ ಅಂಶಗಳನ್ನು ಸೇರಿಸಿಕೊಳ್ಳಬಹುದು ಎಂದು ವರದಿಯಾಗಿದೆ. 7 ಸ್ಯಾಂಪಲ್‍ಗಳಲ್ಲಿ 5ರಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ ಪತ್ತೆಯಾಗಿದ್ದು, ಎಫ್ಲಾಟಾಕ್ಸಿನ್ ಮೆಣಸಿನಕಾಯಿಯಲ್ಲಿ ಸ್ವಲ್ಪವಿದ್ದರೂ ಇದು ಕ್ಯಾನ್ಸರ್ ತರುತ್ತದೆ. ಈ ಮೆಣಸಿನಕಾಯಿ ಹಿರಿಯರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

    ಎರಡು ವರ್ಷಗಳ ಹಿಂದೆ ಈ ಬಗ್ಗೆ ಕೇರಳ ಕೃಷಿ ಕಾಲೇಜಿನಲ್ಲಿ 51 ಗುಂಟೂರು ಮೆಣಸಿನಕಾಯಿ ಸ್ಯಾಂಪಲ್ ಅನ್ನು ಅಧ್ಯಯನ ನಡೆಸಲಾಗಿತ್ತು. ಈ ವೇಳೆ 21 ಮಾದರಿಗಳಲ್ಲಿ ಬೈಫೆಂಟ್ರಿನ್, ಈಥಿಯೋನ್, ಕ್ಲೋರಿಪಿರಿಫೊಸ್, ಸೈಪರ್ಮೆಥರಿನ್ ಹಾಗೂ ಮ್ಯಾಲಥಿಯಾನ್ ಎನ್ನುವ ವಿಷಕಾರಿ ಅಂಶಗಳು ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv