Tag: ಗುಂಟೂರು

  • ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವೃದ್ಧ ಸಾವು

    ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವೃದ್ಧ ಸಾವು

    – ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲು

    ಅಮರಾವತಿ: ಆಂಧ್ರಪ್ರದೇಶದಲ್ಲಿ (Andhra Pradesh) ಮಾಜಿ ಸಿಎಂ ಜಗನ್ ಮೋಹನ್‌ ರೆಡ್ಡಿ (Jagan Mohan Reddy) ಬೃಹತ್ ರ‍್ಯಾಲಿ ನಡೆಸುವ ವೇಳೆ ಭಾರೀ ಅವಘಡ ಸಂಭವಿಸಿದೆ. ಜಗನ್ ತೆರಳುತ್ತಿದ್ದ ಕಾರಿನಡಿ ಸಿಲುಕಿ 55 ವರ್ಷ ವ್ಯಕ್ತಿ ಮೃತಪಟ್ಟಿದ್ದಾರೆ.

    ಚೀಲಿ ಸಿಂಗಯ್ಯ ಮೃತ ವ್ಯಕ್ತಿ. ಸಿಂಗಯ್ಯ ಜಗನ್ ಮೋಹನ್ ರೆಡ್ಡಿಯ ದೊಡ್ಡ ಅಭಿಮಾನಿಯಾಗಿದ್ದರು. ಜೂನ್ 18ರಂದು ಗುಂಟೂರಿನಲ್ಲಿ ಜಗನ್ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಜಗನ್ ನೋಡಲು ಬಂದ ವೇಳೆ ನೂಕು ನುಗ್ಗಲು ತಳ್ಳಾಟವಾಗಿ ಸಿಂಗಯ್ಯ ಕೆಳಗೆ ಬಿದ್ದಿದ್ದಾರೆ. ಇದನ್ನೂ ಓದಿ: ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಜೀವಸಂಕುಲವೇ ನಾಶವಾಗುತ್ತಂತೆ!

    ಈ ವೇಳೆ ಕಾರು ಚಾಲಕನಿಗೆ ಕಾಣದೇ ಸಿಂಗಯ್ಯ ಮೇಲೆ ಕಾರು ಹರಿಸಿದ್ದಾನೆ. ಕೂಡಲೇ ಕಾರು ನಿಲ್ಲಿಸಿದರೂ ತಲೆಗೆ ಗಂಭೀರ ಗಾಯವಾಗಿದ್ದರಿಂದ ಇಂದು ಸಿಂಗಯ್ಯ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ – ಇಸ್ರೇಲ್‌ನೊಂದಿಗಿನ ಸಂಘರ್ಷ ಶಮನಕ್ಕೆ ಸಲಹೆ

  • ರಾಜ್ಯದ ರೈತರ ಮೆಣಸಿನಕಾಯಿ ಲಾರಿಗಳು ತೆಲಂಗಾಣದಲ್ಲಿ ಜಪ್ತಿ

    ರಾಜ್ಯದ ರೈತರ ಮೆಣಸಿನಕಾಯಿ ಲಾರಿಗಳು ತೆಲಂಗಾಣದಲ್ಲಿ ಜಪ್ತಿ

    – ಮೆಣಸಿನಕಾಯಿ ಮಾರಾಟಕ್ಕೆ ಹೊರಟಿದ್ದ ರೈತರಿಗೆ ಅಧಿಕಾರಿಗಳಿಂದ ಶಾಕ್

    ರಾಯಚೂರು: ಜಿಲ್ಲೆಯಿಂದ ಗುಂಟೂರಿಗೆ (Guntur) ಮಾರಾಟಕ್ಕೆ ಹೊರಟಿದ್ದ ಮೆಣಸಿನಕಾಯಿಯ 10ಕ್ಕೂ ಹೆಚ್ಚು ಲಾರಿಗಳನ್ನು ತೆಲಂಗಾಣ ಪೊಲೀಸರು (Telagana Police) ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಯಚೂರು (Raichuru) ಜಿಲ್ಲೆಯ ರೈತರು ಶನಿವಾರ ರಾತ್ರಿ ಗುಂಟೂರಿಗೆ ಮೆಣಸಿನಕಾಯಿ ಮಾರಾಟಕ್ಕಾಗಿ ಹೊರಟಿದ್ದರು. ಈ ವೇಳೆ ತೆಲಂಗಾಣದ ನಲ್ಲಗೊಂಡಾ ಜಿಲ್ಲೆಯ ಕೊಂಡಮಲ್ಲೆಪಲ್ಲಿಯಲ್ಲಿ ಪೊಲೀಸರು ಹಾಗೂ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು 10 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಣಸಿನಕಾಯಿಗೆ ಸೆಲ್ಸ್ ಟ್ಯಾಕ್ಸ್ ಮತ್ತು ಜಿಎಸ್‌ಟಿ ಕಟ್ಟುವಂತೆ ಒತ್ತಾಯಿಸಿ, ಬಳಿಕ ಲಾರಿಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.ಇದನ್ನೂ ಓದಿ: ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ಮೆಣಸಿನಕಾಯಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ತೆಲಂಗಾಣದಲ್ಲಿ ಅಧಿಕಾರಿಗಳು ಶಾಕ್ ನೀಡಿದ್ದು, ಅಗತ್ಯ ದಾಖಲೆಗಳನ್ನು ತೋರಿಸಿದರೂ ಕೂಡ ಲಾರಿಗಳನ್ನು ಬಿಡದೇ ಜಪ್ತಿ ಮಾಡಿಕೊಂಡಿದ್ದಾರೆ. ಪಹಣಿ, ತಹಶೀಲ್ದಾರ್ ಪತ್ರವನ್ನು ತೋರಿಸಿದರೇ ಅದಕ್ಕೂ ಬೆಲೆ ಕೊಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

    ಈ ಕುರಿತು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:ಹನಿಟ್ರ್ಯಾಪ್‌ ಹೈಡ್ರಾಮಾ | ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡೋಕೆ ಆಗಲ್ಲ ಎಂದ ಡಿಕೆಶಿ

  • ಮಹಿಳೆ, ಮಕ್ಕಳನ್ನು ಸೇತುವೆಯಿಂದ ತಳ್ಳಿದ ಲಿವ್ ಇನ್ ಪಾರ್ಟ್‌ನರ್ – 100ಕ್ಕೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಬಾಲಕಿ

    ಮಹಿಳೆ, ಮಕ್ಕಳನ್ನು ಸೇತುವೆಯಿಂದ ತಳ್ಳಿದ ಲಿವ್ ಇನ್ ಪಾರ್ಟ್‌ನರ್ – 100ಕ್ಕೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಬಾಲಕಿ

    ಅಮರಾವತಿ: ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್‌ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಗುಂಟೂರಿನಲ್ಲಿ (Guntur) ನಡೆದಿದೆ.

    13 ವರ್ಷದ ಬಾಲಕಿ ಕೀರ್ತನ, ತನ್ನ ತಾಯಿ ಪುಪ್ಪಳ ಸುಹಾಸಿನಿ (36) ಹಾಗೂ ಬಾಲಕಿಯ 1 ವರ್ಷದ ಸಹೋದರಿ ಜರ್ಸಿಯನ್ನು ಭಾನುವಾರ ಮುಂಜಾನೆ ಗೋದಾವರಿ ನದಿಗೆ (Godavari River) ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯಿಂದ (Bridge) ತಳ್ಳಲಾಗಿತ್ತು. ಬಾಲಕಿ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಪೈಪ್ ಅನ್ನು ಬಿಗಿಯಾಗಿ ಹಿಡಿದು, ಪೊಲೀಸರ ಸಹಾಯಕ್ಕಾಗಿ ತನ್ನ ಜೇಬಿನಿಂದ ಫೋನ್ ತೆಗೆದುಕೊಂಡು 100ಕ್ಕೆ ಕರೆ ಮಾಡಿದ್ದಾಳೆ.

    ಮಹಿಳೆ ಹಾಗೂ ಮಕ್ಕಳನ್ನು ಸೇತುವೆಗೆ ತಳ್ಳಿದ ಆರೋಪಿ ಉಳವ ಸುರೇಶ್ ಸುಹಾಸಿನಿಯ ಲಿವ್ ಇನ್ ಪಾರ್ಟ್‌ನರ್ ಆಗಿದ್ದ. ಗಂಡನಿಂದ ದೂರವಾಗಿದ್ದ ಸುಹಾಸಿನಿಗೆ ಸುರೇಶ್ ಪರಿಚಯವಾಗಿತ್ತು. ಹೀಗೆ ಸುರೇಶ್ ಹಾಗೂ ಸುಹಾಸಿನಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

    ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಸುರೇಶ್ ಪಿಕ್‌ನಿಕ್ ಕರೆದುಕೊಂಡು ಹೋಗಿದ್ದ ಮಾತ್ರವಲ್ಲದೇ ಗೆಳತಿ ಹಾಗೂ ಆಕೆಯ ಮಕ್ಕಳನ್ನು ಕೊಲ್ಲುವ ಸಂಚು ರೂಪಿಸಿದ್ದ. ಸೆಲ್ಫಿ ನೆಪದಲ್ಲಿ ಗೋದಾವರಿ ನದಿ ಬಳಿ ಕಾರು ನಿಲ್ಲಿಸಿ, ಮೂವರನ್ನು ಸೇತುವೆ ಅಂಚಿಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ಇದನ್ನೂ ಓದಿ: ‘ಹರ ಹರ ಶಂಭು’ ಗಾಯಕಿಯ ಸಹೋದರನ ಬರ್ಬರ ಹತ್ಯೆ

    ಆದರೆ ಬಾಲಕಿ ಕೀರ್ತನ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪೈಪ್ ಅನ್ನು ಗಟ್ಟಿಯಾಗಿ ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ತಕ್ಷಣ ತನ್ನ ಜೇಬಿನಿಂದ ಫೋನ್ ತೆಗೆದು ಸಹಾಯಕ್ಕಾಗಿ 100 ನಂಬರ್ ಅನ್ನು ಡಯಲ್ ಮಾಡಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸುಹಾಸಿನಿ ಹಾಗೂ ಆಕೆಯ 1 ವರ್ಷದ ಮಗು ನದಿಯಲ್ಲಿ ನಾಪತ್ತೆಯಾಗಿದೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

    ಇದೀಗ ನಾಪತ್ತೆಯಾಗಿರುವ ಸುಹಾಸಿನಿ ಹಾಗೂ ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆರೋಪಿ ಸುರೇಶ್‌ನನ್ನು ಬಂಧಿಸಲು ಬಲೆಬೀಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್

    ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್

    ಹೈದರಾಬಾದ್: ನನ್ನನ್ನು ಪ್ಯಾಕೇಜ್ ಸ್ಟಾರ್ (Package Star) ಎಂದು ಅಣುಕಿಸುವವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಜನಸೇನಾ (Jana Sena) ಮುಖ್ಯಸ್ಥ, ನಟ ಪವನ್ ಕಲ್ಯಾಣ್ (Pavan Kalyan) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಂಧ್ರಪ್ರದೇಶದಲ್ಲಿ (Andra Pradesh) ತೆಲುಗು ದೇಶಂ ಪಕ್ಷದೊಂದಿಗೆ ಪವನ್ ಕಲ್ಯಾಣ್ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಜಗನ್ ರೆಡ್ಡಿ (Jagan Reddy) ಅವರು ಆರೋಪಿಸಿದ್ದರು. ಈ ಬಗ್ಗೆ ಪವನ್ ಕಲ್ಯಾಣ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದನ್ನೂ ಓದಿ: ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ

    ಇಂದು ಇದೇ ವಿಚಾರವಾಗಿ ಗುಂಟೂರಿನ (Guntur) ಮಂಗಳಗಿರಿಯಲ್ಲಿ (Mangalagiri) ನಡೆದ ಸಭೆಯಲ್ಲಿ ವೇದಿಕೆ ಮೇಲೆ ಮಾತನಾಡಿದ ಪವನ್ ಕಲ್ಯಾಣ್ ಅವರು, “ನನ್ನನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆಯುವವರಿಗೆ ನನ್ನ ಲೆಫ್ಟ್ ಹ್ಯಾಂಡ್ ರೈಟ್ ಚಪ್ಪಲಿಯಿಂದ ಬಾರಿಸುತ್ತೇನೆ. ಇನ್ನೊಮ್ಮೆ ‘ಪ್ಯಾಕೇಜ್ ಸ್ಟಾರ್’ ಅಂತ ಕರೆಯಿರಿ, ಇದೇ ಚಪ್ಪಲಿಯಿಂದ ನಿಮ್ಮನ್ನು ಹೊಡೆಯುತ್ತೇನೆ ಎಂದು ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಹಿಡಿದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್‌ ನಾಯಕ

    ಶನಿವಾರ ಸಂಜೆ ಸ್ಥಳೀಯ ವಿಮಾನ ನಿಲ್ದಾಣದ ಆವರಣದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಸಿ) ನಾಯಕಿ ಆರ್.ಕೆ. ರೋಜಾ ಅವರ ಕಾರಿನ ಮೇಲೆ ಪವನ್ ಕಲ್ಯಾಣ್ ಅವರ ಬೆಂಬಲಿಗರು ದಾಳಿ ನಡೆಸಿದ್ದರು. ಈ ಸಂಬಂಧ ಇದೀಗ ವಿಶಾಖಪಟ್ಟಣಂ ಪೊಲೀಸರು ಪವನ್ ಕಲ್ಯಾಣ್ ಅವರಿಗೆ ನೋಟಿಸ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಹೈದರಾಬಾದ್: ಇಬ್ಬರು ವ್ಯಕ್ತಿಗಳು ಮಹಿಳೆಯ ಪತಿಯ ಮೇಲೆ ದಾಳಿ ಮಾಡಿ ನಂತರ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ರೈಲು ನಿಲ್ದಾಣದಲ್ಲಿ ನಡೆದಿದೆ.

    25 ವರ್ಷದ ಮಹಿಳೆಯೂ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಪ್ರಕಾಶಂ ಜಿಲ್ಲೆಯ ಗುಂಟೂರು ಜಿಲ್ಲೆಗೆ ಕಲ್ಲಿನ ಕೆಲಸ ಹುಡುಕಲು ಬಂದಿದ್ದರು. ಇದಕ್ಕಾಗಿ ಗುಂಟೂರು- ರೆಪಲ್ಲೆ ಪ್ಯಾಸಂಜರ್ ರೈಲಿನಲ್ಲಿ ರೆಪಳ್ಳೆ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಶನಿವಾರ ತಡರಾತ್ರಿ ಗುಂಟೂರು ರೈಲು ನಿಲ್ದಾಣದಲ್ಲೇ ತಂಗಲು ನಿರ್ಧರಿಸಿದರು.

    STOP RAPE

    ರಾತ್ರಿ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಬಳಿ ಬಂದು ಮಹಿಳೆಯ ಪತಿಯನ್ನು ಎಬ್ಬಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಕೇಳಿ ಎಚ್ಚೆತ್ತುಕೊಂಡ ಮಹಿಳೆ ಮಧ್ಯಪ್ರವೇಶಿಸಿದ್ದಾಳೆ. ಆಗ ಆ ದಾಳಿಕೋರರು ಮಹಿಳೆಯನ್ನು ಹಿಡಿದು ಪ್ಲಾಟ್‍ಫಾರ್ಮ್‍ನ ತುದಿಯಲ್ಲಿರುವ ಪೊದೆಗಳ ಹಿಂದೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    train

    ಈ ಬಗ್ಗೆ ಮಹಿಳೆಯ ಪತಿ ರೇಪಳ್ಳ ಪೊಲೀಸ್ ಠಾಣೆಗೆ ಧಾವಿಸಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿಕೋರರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಧ್ಯಾಪಕ ಅಮಾನತು

    ಇಬ್ಬರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ.

  • YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ಹಾಡಹಗಲಲ್ಲೇ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್‍ಟಿ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪ್ರತಿಮೆ ಕೆಡವಲು ಪ್ರಯತ್ನಿಸಿದ ವ್ಯಕ್ತಿಯನ್ನು ಶೆಟ್ಟಿಪಲ್ಲಿ ಕೋಟೇಶ್ವರ್ ರಾವ್ ಎಂದು ಗುರುತಿಸಲಾಗಿದ್ದು, ಈತ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರಾಗಿದ್ದಾನೆ. ಕೋಟೇಶ್ವರ್ ರಾವ್ ಗುಂಟೂರಿನ ದುರ್ಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಎನ್‍ಟಿ ರಾಮರಾವ್ ಪ್ರತಿಮೆಯನ್ನು ಸುತ್ತಿಗೆಯಿಂದ ಒಡೆದು ಧ್ವಂಸಗೊಳಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಎನ್‍ಟಿಆರ್ ಎಂದು ಜನಪ್ರಿಯವಾಗಿರುವ ನಂದಮೂರಿ ತಾರಕ ರಾಮರಾವ್ ಅವರು 1983 ರಿಂದ 1995 ರ ನಡುವೆ ಮೂರುಬಾರಿ ಮುಖ್ಯಮಂತ್ರಿಯಾಗಿ ಏಳು ವರ್ಷಗಳ ಕಾಲ ಆಂಧ್ರಪ್ರದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಈ ಘಟನೆ ವಿರೋಧ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ (ಎಂಎಲ್‍ಸಿ) ನಾರಾ ಲೋಕೇಶ್ ತಮ್ಮ ಅಜ್ಜನ ಪ್ರತಿಮೆಯನ್ನು ಧ್ವಂಸಗೊಳಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಚರ್ಲ ಕ್ಷೇತ್ರದ ದುರ್ಗಿಯಲ್ಲಿ ವೈಸಿಪಿ ಮುಖಂಡ ಶೆಟ್ಟಿಪಲ್ಲಿ ಕೋಟೇಶ್ವರರಾವ್, ದಿವಂಗತ ನಂದಮೂರಿ ತಾರಕ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರೈತರು ನನಗಾಗಿ ಸತ್ತರೇ ಅಂತ ಮೋದಿ ಹೇಳಿದ್ರು – ಮೇಘಾಲಯ ರಾಜ್ಯಪಾಲ ವಾಗ್ದಾಳಿ

  • ಗ್ರೂಪ್ ಫೋಟೋ ತೆಗ್ಸಿ ಮಗಳ ಕಾಲುಗಳನ್ನು ಕಟ್ಟಿ ರೈಲ್ವೇ ಟ್ರ್ಯಾಕ್ ಗೆ ಎಸೆದು ತಾಯಿಯೂ ಆತ್ಮಹತ್ಯೆ!

    ಗ್ರೂಪ್ ಫೋಟೋ ತೆಗ್ಸಿ ಮಗಳ ಕಾಲುಗಳನ್ನು ಕಟ್ಟಿ ರೈಲ್ವೇ ಟ್ರ್ಯಾಕ್ ಗೆ ಎಸೆದು ತಾಯಿಯೂ ಆತ್ಮಹತ್ಯೆ!

    – ತಾಯಿ ಮಕ್ಕಳ ಸಾವಿನಿಂದ ಮನನೊಂದ ತಂದೆಯೂ ಆತ್ಮಹತ್ಯೆ

    ಗುಂಟೂರು: ತನ್ನ ಏಳು ವರ್ಷದ ಮಗಳ ಹುಟ್ಟುಹಬ್ಬದ ದಿನದಂದೇ ಮಕ್ಕಳನ್ನು ರೈಲ್ವೇ ಟ್ರ್ಯಾಕ್ ನಲ್ಲಿ ರೈಲಿನ ಮುಂದೆ ಎಸೆದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ನರಸಾರೊಪೆಟ್ ಎಂಬಲ್ಲಿ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮೀ(32) ಹಾಗೂ ಮಕ್ಕಳಾದ ದಿಗ್ವಿಜಯ(7), ಸಾಯಿಗಣೇಶ್(4) ಎಂದು ಗುರುತಿಸಲಾಗಿದೆ. ಮೃತ ವಿಜಯಲಕ್ಷ್ಮೀ ಅವರು ಪಂಗಲೂರು ಮಂದಲ್ ನ ರಾಮಕುರು ಗ್ರಾಮದ ಪೆನುಬೋತ್ ಸೋಮಶೇಖರ್(40) ಎಂಬವರನ್ನು 2008ರಲ್ಲಿ ಮದುವೆಯಾಗಿದ್ದರು.

    ಏನಿದು ಘಟನೆ?: ಸೋಮವಾರ ಮಗಳು ದಿಗ್ವಿಜಯಳ ಹುಟ್ಟು ಹಬ್ಬವಾಗಿತ್ತು. ಹೀಗಾಗಿ ವಿಜಯಲಕ್ಷ್ಮಿ ಅವರು ನಿನ್ನೆ ಶಾಲೆಗೆ ತೆರಳಿ ತನ್ನಿಬ್ಬರು ಮಕ್ಕಳನ್ನು ಶಾಪಿಂಗ್ ಮಾಡಲೆಂದು ಕರೆದುಕೊಂಡು ಬಂದಿದ್ದರು. ಅಂತೆಯೇ ಮಗಳ ಹುಟ್ಟುಹಬ್ಬವಾಗಿದ್ದರಿಂದ ಫೋಟೋ ತೆಗೆಸಿಕೊಳ್ಳೋಣ ಎಂದು ಸ್ಟುಡಿಯೋಗೆ ತೆರಳಿ ಮೂವರ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೇ ಆ ಕೂಡಲೇ ಸಿಕ್ಕ ಫೋಟೋದ ಹಿಂಬದಿಯಲ್ಲಿ ಮೂವರ ಹೆಸರನ್ನು ಕೂಡ ತಾಯಿ ಬರೆದ್ರು. ನಂತರ ಅಲ್ಲಿಂದ ಸೀದಾ ರೈಲ್ವೇ ಟ್ರ್ಯಾಕ್ ಬಳಿ ಮೂವರು ಹೋಗಿದ್ದಾರೆ.

    ರೈಲ್ವೇ ಟ್ರ್ಯಾಕ್ ಬಳಿ ಮಗಳು ಓಡಿ ಹೋಗದಂತೆ ತಾಯಿ ಆಕೆಯ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾರೆ. ನಂತರ ತನ್ನ ಪತಿಗೆ ಕರೆ ಮಾಡಿ ಮಕ್ಕಳೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗೆ ಗಂಡನಿಗೆ ಮಾಹಿತಿ ನೀಡಿ ಫೋನ್ ಕಟ್ ಮಾಡಿದ ಮಹಿಳೆ, ತನ್ನಿಬ್ಬರು ಮಕ್ಕಳನ್ನು ರೈಲ್ವೇ ಹಳಿಗೆ ಬಿಸಾಕಿ, ಬಳಿಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ತಾಯಿ ಹಾಗೂ ಇಬ್ಬರು ಮಕ್ಕಳೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇತ್ತ ತಾಯಿ-ಮಕ್ಕಳ ಆತ್ಮಹತ್ಯೆಯ ಸುದ್ದಿ ಇಡೀ ಗ್ರಾಮಕ್ಕೆ ಹಬ್ಬುತ್ತಿದ್ದಂತೆಯೇ ಮೃತ ಮಹಿಳೆಯ ಪತಿ ಸೋಮಶೇಖರ್ ಅವರು, ತನ್ನ ತಂದೆಯ ಬಳಿಯಿಂದ 200ರೂ. ತೆಗೆದುಕೊಂಡು ಕೀಟನಾಶಕ ಬಾಟಲಿಯನ್ನು ಅಂಗಡಿಯಿಂದ ಖರೀದಿ ಮಾಡಿದ್ದಾರೆ. ಅಂಗಡಿಯಿಂದ ನೇರವಾಗಿ ಮಿಲ್ ಗೆ ಬಂದ ಸೋಮಶೇಖರ್, ಕೀಟನಾಶಕವನ್ನು ಕುಡಿದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಈ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಒಟ್ಟಿನಲ್ಲಿ ಮಗಳ ಹುಟ್ಟುಹಬ್ಬದಂದೇ ತಾಯಿ ಈ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.

    ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವಿಡಿಯೋ: ನೋಡ ನೋಡುತ್ತಿದ್ದಂತೆ ಕುಸಿದ 3 ಅಂತಸ್ತಿನ ಕಟ್ಟಡ

    ವಿಡಿಯೋ: ನೋಡ ನೋಡುತ್ತಿದ್ದಂತೆ ಕುಸಿದ 3 ಅಂತಸ್ತಿನ ಕಟ್ಟಡ

    ಗುಂಟೂರು: ನೋಡ ನೋಡುತ್ತಿದ್ದಂತೆ 3 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಜನರು ಬೆಚ್ಚಿ ಬಿದ್ದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಈ ಕಟ್ಟಡ ನಂದಿವೇಲುಗು ರಸ್ತೆಯ ಮಣಿ ಹೋಟೆಲ್ ಸೆಂಟರ್ ನ ಸಮೀಪದಲ್ಲಿದೆ. ಈ ಕಟ್ಟಡ ನರಸಿಂಹ ರಾವ್ ಎಂಬವರ ಒಡೆತನದಲ್ಲಿದ್ದು, ಇದನ್ನು ನಿರ್ಮಿಸಿ ಸುಮಾರು 12 ವರ್ಷಗಳಾಗಿದೆ. ಗುಂಟೂರು ಮುನ್ಸಿಪಲ್ ಕಾರ್ಪೋರೇಷನ್ (ಜಿಎಂಸಿ) ಕಟ್ಟಡ ಸಮೀಪದಲ್ಲಿ ರಸ್ತೆಯನ್ನು ಅಗಲೀಕರಣದ ಕಾಮಗಾರಿಯನ್ನು ಒಂದು ತಿಂಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಆ ಕಟ್ಟಡವನ್ನು ಉರುಳಿಸುವಂತೆ ಮಾಲೀಕರಿಗೂ ನೋಟಿಸ್ ಕಳುಹಿಲಾಗಿತ್ತು ಎಂದು ತಿಳಿದು ಬಂದಿದೆ.

    ವಿಡಿಯೋದಲ್ಲಿ ಪಿಂಕ್ ಮತ್ತು ಗ್ರೀನ್ ಪೇಂಟ್ ಇರುವ ಕಟ್ಟಡ ಶನಿವಾರ ಸುಮಾರು 4.30 ಗಂಟೆಗೆ ಒಂದೇ ಸೆಕೆಂಡಿನಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸಮೀಪದಲ್ಲಿದ್ದ ಕೆಲವು ಸ್ಥಳೀಯರು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ. ಅದೃಷ್ಟವಶಾತ್ ಕಟ್ಟಡದಲ್ಲಿ ಇದ್ದ ಎಲ್ಲ ಜನರನ್ನು ಕೆಲವು ದಿನಗಳ ಹಿಂದೆಯಷ್ಟೇ ಬೇರೆಡೆ ಸ್ಥಳಾಂತರಿಸಲಾಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

    ಕಟ್ಟಡದ ಕುಸಿತಕ್ಕೆ ಸ್ಥಳೀಯರು ಜಿಎಂಸಿ ನೇಮಿಸಿದ್ದ ಗುತ್ತಿಗೆದಾರರನ್ನು ಆರೋಪಿಸುತ್ತಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಎಂಜಿಯರಿಂಗ್ ತಂಡವು ಭೇಟಿ ನೀಡಿ ಪರೀಶೀಲನೆ ಮಾಡಿದ್ದು, ಕಟ್ಟಡದ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಕಟ್ಟಡದ ಅಡಿಪಾಯ ಸುರಕ್ಷಿತವಾಗಿರಲಿಲ್ಲ ಆದ್ದರಿಂದ ಕುಸಿದಿದೆ ಎಂದು ಮುನ್ಸಿಪಲ್ ಕಮಿಷನರ್ ಸಿ. ಅನುರಾಧಾ ತಿಳಿಸಿದ್ದಾರೆ.

    ಈ ಕಟ್ಟಡ ಕುಸಿತ ಪ್ರಕರಣ ಒಂದು ಕ್ಷಣ ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕಟ್ಟಡ ಕುಸಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

     

  • ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಹೈದರಾಬಾದ್: ಲ್ಯಾಪ್‍ಟಾಪ್‍ನಲ್ಲಿ ಬಾಹುಬಲಿ ಸಿನಿಮಾವನ್ನು ನೋಡುತ್ತಲೇ ಬ್ರೇನ್ ಆಪರೇಷನ್ ಮಾಡಿಸಿಕೊಂಡಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಆಪರೇಷನ್‍ಗೆ ಒಳಗಾಗಿರುವ ಯುವತಿಯನ್ನು ವಿನಯಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚಿಗೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಎಂಆರ್‍ಐ ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ ದುರ್ಮಾಂಸ ಬೆಳೆದಿರೋದು ಗೊತ್ತಾಗಿತ್ತು. ಇದರಿಂದ ಸರ್ಜರಿ ಮಾಡಲು ವೈದ್ಯರು ಸೂಚಿಸಿದ್ದರು. ಇದರಂತೆ ಇಂಟ್ರಾ ಆಪರೇಟಿಂಗ್ ನ್ಯಾವಿಗೇಷನ್ ವಿಧಾನದ ಮೂಲಕ ಆಪರೇಷನ್ ಕೈಗೊಂಡ ವೈದ್ಯರು ಯುವತಿಗೆ ಇಷ್ಟವಾದ ಬಾಹುಬಲಿ ಸಿನಿಮಾವನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಆಪರೇಷನ್ ವೇಳೆ ಯುವತಿ ವೈದ್ಯರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಒಟ್ಟಾರೆ ಐವರು ತಜ್ಞ ವೈದ್ಯರ ತಂಡ ಸುಮಾರು ಒಂದೂವರೆ ಗಂಟೆಗಳ ಕಾಲ ಸರ್ಜರಿಯನ್ನು ನಡೆಸಿ ದುರ್ಮಾಂಸವನ್ನು ತೆಗೆದುಹಾಕಿದ್ದಾರೆ. ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಯುವತಿ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಹೈದ್ರಾಬಾದ: ಗುಂಟೂರು ಜಿಲ್ಲೆಯ ವೆನಿಗ್ಲಾಂಡಾದಲ್ಲಿ ಪ್ರಿಯತಮೆಯೊಬ್ಬಳು ಆಕೆಯ ಮಾಜಿ ಪ್ರೇಮಿ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

    ಗುಂಟೂರು ಜಿಲ್ಲೆಯ ತಡಿಕೊಂಡ ಪಮುಲಪಡು ಗ್ರಾಮದ ಇಲಿಯಾಸ್ ಮತ್ತು ವೆನಿಗ್ಲಾಂಡದ ಹಿಮಾಬಿಂದು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜಿನಲ್ಲಿ ಫಾರ್ಮಾಸಿ ಓದುತ್ತಿದ್ದರು. ಕಾಲೇಜು ಪದವಿ ದಿನಗಳಿಂದಲೂ ಇಲಿಯಾಸ್ ಮತ್ತು ಬಿಂದು ಸ್ನೇಹಿತರಾಗಿದ್ದರು.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಇದ್ದಕ್ಕಿದ್ದಂತೆ ಇವರ ಪ್ರೇಮ ಸಂಬಂಧವೂ ಮುರಿದು ಬಿದ್ದಿತ್ತು. ಮಂಗಳವಾರ ಇಲಿಯಾಸ್ ಮತ್ತೊಂದು ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಅವಮಾನವಾದ ಬಿಂದು ಅದಕ್ಕಾಗಿ ಪ್ರತೀಕಾರ ತೀರಿಸಲು ಅದಕ್ಕಾಗಿ ಇಲಿಯಾಸ್‍ನ್ನು ಭೇಟಿಯಾಗಲು ಕರೆದು, ಅವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ತೀವ್ರವಾಗಿ ಗಾಯಗೊಂಡ ಇಲಿಯಾಸ್ ಗುಂಟೂರು ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೈತಪಟ್ಟಿದ್ದಾನೆ.

    ಇಲಿಯಾಸ್ ಕುಟುಂಬ ಸದಸ್ಯರು ಬಿಂದುವಿನ ಜೊತೆ ಸಂಬಂಧವಿರುವುದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಮಂಗಲಗಿರಿ ಸಿ.ಐ. ಬ್ಯಹ್ಮಯ್ಯ ಅವರು ಬಿಂದು ಮತ್ತು ಆಕೆಯ ಕೃತ್ಯಕ್ಕೆ ಸಹಾಯ ಮಾಡಿದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.