Tag: ಗುಂಟುರೂ

  • ಸ್ಟೇಜ್ ನಿಂದ ಜಿಗಿದು, ಮದುವೆಗೆ ಬಂದಿದ್ದ ಪ್ರಿಯಕರನೊಂದಿಗೆ ಓಡಿ ಹೋದ ವಧು!

    ಸ್ಟೇಜ್ ನಿಂದ ಜಿಗಿದು, ಮದುವೆಗೆ ಬಂದಿದ್ದ ಪ್ರಿಯಕರನೊಂದಿಗೆ ಓಡಿ ಹೋದ ವಧು!

    ಗುಂಟೂರು: ವರನ ಜೊತೆ ಮದುವೆಯಾಗುವುದ್ದಕ್ಕೆ ನಿರಾಕರಿಸಿ ಅತಿಥಿಗಳ ಮುಂದೆಯೇ ವಧು ತನ್ನ ಪ್ರಿಯತಮನ ಜೊತೆ ಓಡಿ ಹೋಗಿರುವ ಸಿನಿಮೀಯ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

    ಗುಂಟೂರಿನ ಚರ್ಚ್‍ವೊಂದರಲ್ಲಿ ಮದುವೆಯ ಕಾರ್ಯಕ್ರಮ ನಡೆಯುತ್ತಿತ್ತು. ಮುಂಜಾನೆಯಿಂದ ಮದುವೆಯ ಎಲ್ಲಾ ಶಾಸ್ತ್ರ- ಸಂಪ್ರದಾಯಗಳು ನಡೆದಿದ್ದವು. ಆದ್ರೆ ವಧು ಮಾತ್ರ ಪ್ರಿಯತಮನ ಜೊತೆ ಓಡಿ ಹೋಗಲು ಮಾನಸಿಕವಾಗಿ ತಯಾರಾಗಿದ್ದಳು.

    ಕಾರ್ಯಕ್ರಮ ಶುರುವಾದ ಮೇಲೆ ಕ್ರೈಸ್ತ ಪುರೋಹಿತರು ಬೈಬಲ್ ಓದಲು ಆರಂಭಿಸಿದ್ದರು. ನಂತರ ಆಕೆಯನ್ನು ಮೆದುವೆಯಾಗಲು ನೀವು ತಯಾರಿದ್ದೀರಾ? ಎಂದು ಕೇಳಿದಾಗ ವರ, ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ವಧುವನ್ನು ನೀವು ಮದುವೆಯಾಗಲು ತಯಾರಿದ್ದೀರಾ? ಎಂದು ಕೇಳಿದ್ದಕ್ಕೆ ಆಕೆ ಮದುವೆ ನಿರಾಕರಿಸಿದ್ದಾಳೆ.

    ಇದಾದ ಬಳಿಕ ವಧು ಸ್ಟೇಜ್ ನಿಂದ ಜಿಗಿದು ನಾನು ನನ್ನ ಪ್ರಿಯತಮನ ಜೊತೆ ಓಡಿ ಹೋಗುತ್ತಿದ್ದೀನಿ ಎಂದು ಎಲ್ಲರ ಮುಂದೆ ಹೇಳಿದ್ದಾಳೆ.