Tag: ಗೀತ ಗೋವಿಂದಂ

  • ರಶ್ಮಿಕಾ ಮಂದಣ್ಣ ನಟನೆ ಮೆಚ್ಚಿದ ಮಹೇಶ್ ಬಾಬು!

    ರಶ್ಮಿಕಾ ಮಂದಣ್ಣ ನಟನೆ ಮೆಚ್ಚಿದ ಮಹೇಶ್ ಬಾಬು!

    ಕನ್ನಡದ ಕಿರಿಕ್ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಅಂದುಕೊಂಡಂತೆಯೇ ಹವಾ ಎಬ್ಬಿಸಿದ್ದಾರೆ. ಅವರು ನಟಿಸಿದ್ದ ಗೀತ ಗೋವಿಂದಂ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ರಶ್ಮಿಕಾ ಅಭಿನಯಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಖುಷಿಯಲ್ಲಿರೋ ರಶ್ಮಿಕಾಗೆ ಅನಿರೀಕ್ಷಿತವಾಗಿ ಮತ್ತೊಂದು ಥ್ರಿಲ್ ಆಗುವಂಥಾ ಖುಷಿಯೂ ಕೈ ಹಿಡಿದಿದೆ!

     

    ಭಾರತೀಯ ಚಿತ್ರರಂಗದ ಮೋಸ್ಟ್ ಟ್ಯಾಲೆಂಟೆಡ್, ಹ್ಯಾಂಡ್ಸಮ್ ಹೀರೋ ಮಹೇಶ್ ಬಾಬು ಅವರೇ ರಶ್ಮಿಕಾ ಮಂದಣ್ಣ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ರಶ್ಮಿಕಾರದ್ದು ಬ್ರಿಲಿಯಂಟ್ ಆಕ್ಟಿಂಗ್ ಅಂತ ಕೊಂಡಾಡಿದ್ದಾರೆ. ಈ ಚಿತ್ರವನ್ನು ಬಿಡುಗಡೆಯಾದೇಟಿಗೆ ನೋಡಿರುವ ಮಹೇಶ್ ಬಾಬು ಟ್ವೀಟ್ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿರೋದಲ್ಲದೇ ರಶ್ಮಿಕಾ ಬಗ್ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ.

    ಇದು ರಶ್ಮಿಕಾ ತೆಲುಗು ಚಿತ್ರರಂಗದಲ್ಲಿಯೂ ನೆಲೆ ನಿಲ್ಲುವ ಸ್ಪಷ್ಟವಾದ ಮುನ್ಸೂಚನೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ನಂತರ ಸ್ಟಾರ್ ನಟರಿಗೂ ನಾಯಕಿಯಾಗಿ ಅಚ್ಚರಿಗೊಳಿಸಿದ್ದ ರಶ್ಮಿಕಾ ಇಷ್ಟರಲ್ಲಿಯೇ ತೆಲುಗಿನ ಸ್ಟಾರ್ ನಟರ ಜೊತೆಗೂ ನಟಿಸೋ ಅವಕಾಶ ಪಡೆಯೋದರಲ್ಲಿ ಯಾವ ಸಂಶಯವೂ ಇಲ್ಲ. ಸದ್ಯ ರಶ್ಮಿಕಾ ಗೀತ ಗೋವಿಂದಂ ಚಿತ್ರದ ಬಗ್ಗೆ ಬರುತ್ತಿರೋ ವ್ಯಾಪಕ ಮೆಚ್ಚುಗೆಯಿಂದ ಥ್ರಿಲ್ ಆಗಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv