Tag: ಗೀತಾ ಮಹದೇವಪ್ರಸಾದ್

  • ಕಳಪೆ ಗುಣಮಟ್ಟದ ಕ್ರೀಡಾ ಸಾಮಾಗ್ರಿ ವಿತರಿಸಿ, ಇವರೇನು ರಾಷ್ಟ್ರ ಮಟ್ಟದಲ್ಲಿ ಆಡ್ತಾರಾ? ಅಂದ್ರು ಸಚಿವೆ ಗೀತಾಮಹದೇವಪ್ರಸಾದ್

    ಕಳಪೆ ಗುಣಮಟ್ಟದ ಕ್ರೀಡಾ ಸಾಮಾಗ್ರಿ ವಿತರಿಸಿ, ಇವರೇನು ರಾಷ್ಟ್ರ ಮಟ್ಟದಲ್ಲಿ ಆಡ್ತಾರಾ? ಅಂದ್ರು ಸಚಿವೆ ಗೀತಾಮಹದೇವಪ್ರಸಾದ್

    ಚಾಮರಾಜನಗರ: ಬುಧವಾರ ನಗರದಲ್ಲಿ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಕ್ರೀಡಾಪಟುಗಳಿಗೆ ಕಳಪೆ ಗುಣಮಟ್ಟದ ಕ್ರೀಡಾ ಸಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವೆ ಗೀತಾಮಹದೇವಪ್ರಸಾದ್ ಕ್ರೀಡಾಪಟುಗಳಿಕೆ ಕಳಪೆ ಗುಣಮಟ್ಟದ ಕ್ರಿಕೆಟ್, ವಾಲಿಬಾಲ್, ಶಟಲ್ ಇನ್ನಿತರ ಕ್ರೀಡೆಗಳ ಸಾಮಾಗ್ರಿ ವಿತರಿಸಿದ್ರು.

    ಕಳಪೆ ಗುಣಮಟ್ಟದ ಕ್ರೀಡಾ ಸಾಮಾಗ್ರಿಗಳನ್ನು ನೀಡಿದರ ಕುರಿತು ಮಾತನಾಡಿದ ಸಚಿವೆ, ನಾವು ನೀಡಿರುವ ಬಾಲ್ ನಿಂದ ಸ್ಟಂಪ್ ಬೀಳುತ್ತದೆ. ಇವರೇನು ರಾಷ್ಟ್ರ ಮಟ್ಟದಲ್ಲಿ ಪ್ರಾಕ್ಟೀಸ್ ಮಾಡ್ಬೇಕಾ..? ಇವರು ಇಲ್ಲೇ ಆಟ ಆಡುತ್ತಾರೆ, ಇವರಿಗೆ ಕ್ರೀಡಾ ಸ್ಫೂರ್ತಿ ತುಂಬಲು ಕಿಟ್ ನೀಡಿದ್ದೇವೆ ಅಷ್ಟೆ ಅಂತ ಬೇಜಾವ್ದಾರಿ ಉತ್ತರ ನೀಡಿದ್ರು.

    ಒಂದು ಕಿಟ್‍ಗೆ ಸರ್ಕಾರ 40,000 ಸಾವಿರ ರೂಪಾಯಿ ವ್ಯಯಿಸಿ, ಪ್ಲಾಸ್ಟಿಕ್ ಹಾಗೂ ಕಳೆಪೆ ಗುಣಮಟ್ಟದ ವಸ್ತುಗಳನ್ನು ನೀಡೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://youtu.be/N1wgvquKtjE

  • ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ನೂತನ ಶಾಸಕರಾಗಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಹಾಗೂ ಡಾ. ಗೀತಾ ಮಹದೇವ ಪ್ರಸಾದ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಪೀಕರ್ ಕೆಬಿ ಕೋಳಿವಾಡ ಪ್ರಮಾಣ ವಚನ ಬೋಧನೆ ಮಾಡಿದ್ರು.

    ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಕಳಲೆ ಕೇಶವಮೂರ್ತಿ ಅವರು ಶ್ರೀಕಂಠೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಹಾಗೆ ಮಲೆ ಮಹದೇಶ್ವರನ ಹೆಸರಿನಲ್ಲಿ ಗೀತಾ ಮಹದೇವಪ್ರಸಾದ್ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

    ಇದೇ ವೇಳೆ ಮಾತನಾಡಿದ ಶಾಸಕಿ ಗೀತಾ ಮಹದೇವಪ್ರಸಾದ್, ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ. ಅದರ ಬಗ್ಗೆ ನಾನು ಯಾವುದೇ ಯೋಚನೆ ಮಾಡಿಲ್ಲ. ಅವರು ಕೊಟ್ಟರೆ ಮುಂದೆ ನೋಡೋಣ ಅಂದ್ರು.

    ಕ್ಷೇತ್ರದಲ್ಲಿ ಮಹದೇವಪ್ರಸಾದ್ ರವರು ಶೇ. 85ರಷ್ಟು ಕೆಲಸ ಮಾಡಿದ್ದಾರೆ. ನಾನು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಬೇಕಾಗಿದೆ. ಅವರ ನೆನಪು ಇನ್ನೂ ನಮ್ಮನ್ನ ಕಾಡುತ್ತಿದೆ. ಕೆರೆಗೆ ನೀರು ತುಂಬುವ ಯೋಜನೆ ಬಾಕಿಯಿದೆ. ಆ ಕೆಲಸವನ್ನ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ. ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಖುಷಿ ತಂದಿದೆ. ನಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಅಂತ ಗೀತಾ ಮಹದೇವಪ್ರಸಾದ್ ಹೇಳಿದ್ರು .

    ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಾಸಕನಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ತುಂಬಾ ಸಂತೋಷವಾಗಿದೆ. ಕ್ಷೇತ್ರದ ಮತದಾರರಿಗೆ ನಾನು ಋಣಿಯಾಗಿರುವೆ. ಉಳಿದ ಅಲ್ಪಾವಧಿಯಲ್ಲೇ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತೇನೆ ಅಂದ್ರು.

     

  • ಗುಂಡ್ಲುಪೇಟೆಯಲ್ಲಿ ಈ ಬಾರಿ ಯಾರಿಗೆ ಎಷ್ಟು ವೋಟ್ ಬಿದ್ದಿದೆ? ಕಳೆದ ಬಾರಿ ಯಾರಿಗೆ ಎಷ್ಟು ಬಿದ್ದಿತ್ತು?

    ಗುಂಡ್ಲುಪೇಟೆಯಲ್ಲಿ ಈ ಬಾರಿ ಯಾರಿಗೆ ಎಷ್ಟು ವೋಟ್ ಬಿದ್ದಿದೆ? ಕಳೆದ ಬಾರಿ ಯಾರಿಗೆ ಎಷ್ಟು ಬಿದ್ದಿತ್ತು?

    ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ನೋಟಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಗೀತಾ ಮಹದೇವಪ್ರಸಾದ್ ಅವರಿಗೆ 90,258 ಮತಗಳು ಬಿದ್ದರೆ, ಬಿಜೆಪಿ ನಿರಂಜನ್ ಕುಮಾರ್‍ಗೆ 79,382 ಮತಗಳು ಬಿದ್ದಿವೆ. ಆದರೆ 1596 ಮಂದಿ ನೋಟಾ ಒತ್ತಿದ್ದಾರೆ.

    ಏಪ್ರಿಲ್ 9ರಂದು ನಡೆದ ಚುನಾವಣೆಯಲ್ಲಿ 2,00,82 ಮತದಾರರ ಪೈಕಿ 1,74,955 ಮಂದಿ ಮತದಾನ ಮಾಡಿದ್ದರು.

    ಯಾರಿಗೆ ಎಷ್ಟು ಮತ?
    ಕಾಂಗ್ರೆಸ್‍ನ ಗೀತಾ ಮೋಹನ್ ಕುಮಾರ್ – 90,260(ಶೇ.51.59)
    ಬಿಜೆಪಿಯ ನಿರಂಜನ್ ಕುಮಾರ್ – 79,383(ಶೇ.45.37)
    ಶಿವರಾಜು ಎಂ. ರಿಪಬ್ಲಿಕನ್ ಪಾರ್ಟಿ – 1,512(ಶೇ.86)
    ಪಕ್ಷೇತರ ಅಭ್ಯರ್ಥಿ ಕೆ. ಸೋಮಶೇಖರ -901(ಶೇ0.51)
    ಭಾರತೀಯ ಡಾ.ಬಿಆರ್.ಅಂಬೇಡ್ಕರ್ ಜನತಾ ಪಾರ್ಟಿ -503(ಶೇ.0.29)
    ಪಕ್ಷೇತರ ಅಭ್ಯರ್ಥಿ ಶಿವರಾಮು – 470(ಶೇ. 0.27)
    ಪಕ್ಷೇತರ ಅಭ್ಯರ್ಥಿ ಮಹಾದೇವಪ್ರಸಾದ್ ಬಿ – 330(ಶೇ.0.19)
    ನೋಟಾ -1596( ಶೇ.0.91)

    2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮಹದೇವಪ್ರಸಾದ್ 73,723(ಶೇ.45.4) ಮತಗಳನ್ನು ಪಡೆದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ನಿರಂಜನ್ ಕುಮಾರ್‍ಗೆ 66,048(ಶೇ.40.7) ಮತಗಳು ಬಿದ್ದಿತ್ತು. ಬಿಎಸ್‍ಪಿಯಿಂದ ಸ್ಪರ್ಧಿಸಿದ್ದ ನಾಗೇಂದ್ರ ಅವರಿಗೆ 6,052(ಶೇ.3.7) ಮತಗಳು ಬಿದ್ದಿತ್ತು.

  • ಗುಂಡ್ಲುಪೇಟೆಯಲ್ಲಿ ‘ಕೈ’ ಗೆ ಜಯ: ಗೆಲುವಿನ ನಗೆ ಬೀರಿದ ಗೀತಾ ಮಹದೇವ್‍ಪ್ರಸಾದ್

    ಗುಂಡ್ಲುಪೇಟೆಯಲ್ಲಿ ‘ಕೈ’ ಗೆ ಜಯ: ಗೆಲುವಿನ ನಗೆ ಬೀರಿದ ಗೀತಾ ಮಹದೇವ್‍ಪ್ರಸಾದ್

    ಚಾಮರಾಜನಗರ: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವೆಂದೇ ಪರಿಗಣಿಸಲಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್‍ಪ್ರಸಾದ್ ಗೆಲುವಿನ ನಗೆ ಬೀರಿದ್ದಾರೆ. ಬಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರಿಗೆ 75610 ಮತಗಳು ಸಿಕ್ಕಿದ್ದರೆ ಗೀತಾ ಮಹದೇವ್ ಪ್ರಸಾದ್ ಅವರಿಗೆ 87,687 ಮತಗಳು ಲಭಿಸಿವೆ. ಒಟ್ಟು 12,077 ಮತಗಳ ಅಂತರದಿಂದ ಗೀತಾ ಮಹದೇವ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ.

    ಗುಂಡ್ಲುಪೇಟೆ ಉಪಚುನಾವಣೆಯ ಅಂತಿಮ ಕಣದಲ್ಲಿದ್ದ ಅಭ್ಯರ್ಥಿಗಳು: ಸಿಎಸ್ ನಿರಂಜನ್ ಕುಮಾರ್ (ಬಿಜೆಪಿ), ಗೀತಾ ಮಹದೇವಪ್ರಸಾದ್ (ಕಾಂಗ್ರೆಸ್), ಶಿವರಾಂ (ಪಕ್ಷೇತರ), ಎಂ.ಹೊನ್ನೂರಯ್ಯ (ಭಾರತೀಯ ಡಾ. ಬಿಆರ್ ಅಂಬೇಡ್ಕರ್ ಜನತಾಪಾರ್ಟಿ), ಕೆ.ಸೋಮಶೇಖರ್ (ಪಕ್ಷೇತರ), ಶಿವರಾಜು (ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ), ಮಹದೇವಪ್ರಸಾದ್ ಬಿ (ಪಕ್ಷೇತರ)

    ಗುಂಡ್ಲುಪೇಟೆ ಸೆಂಟ್ ಜಾನ್ಸ್ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ನಾಲ್ಕು ಕೊಠಡಿಗಳಲ್ಲಿ ತಲಾ ನಾಲ್ಕು ಟೇಬಲ್ ಗಳಲ್ಲಿ ಮತ ಎಣಿಕೆ ಮಾಡಲಾಯಿತು. ಪ್ರತಿ ಟೇಬಲ್ ಗೆ ಓರ್ವ ಮತ ಎಣಿಕೆ ಅಧಿಕಾರಿ, ಓರ್ವ ಎಣಿಕೆ ಮೇಲ್ವಿಚಾರಕ, ಓರ್ವ ಮೈಕ್ರೋ ಅಬ್ಸರ್ವರ್, ಓರ್ವ ವೀಡಿಯೋಗ್ರಾಫರ್, ಓರ್ವ ಸಹಾಯಕನನ್ನು ನೇಮಕ ಮಾಡಲಾಗಿತ್ತು. ಸಂಪೂರ್ಣ ಮತ ಎಣಿಕೆ ಕಾರ್ಯ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆಯಿತ್ತು. ಮತ ಎಣಿಕೆ ಹಾಲ್ ಒಳಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇರಲಿಲ್ಲ.

    2013 ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಫಲಿತಾಂಶ ಹೀಗಿತ್ತು:

  • ಏನ್ ಮಾಡಿದ್ದೀರಾ ಎಂದು ಗೀತಾರನ್ನು ಗ್ರಾಮಸ್ಥ ಪ್ರಶ್ನಿಸಿದ್ದಕ್ಕೆ ಗುಂಡ್ಲುಪೇಟೆಯಲ್ಲಿ ‘ಕೈ’ ಗೂಂಡಾಗಿರಿ

    ಏನ್ ಮಾಡಿದ್ದೀರಾ ಎಂದು ಗೀತಾರನ್ನು ಗ್ರಾಮಸ್ಥ ಪ್ರಶ್ನಿಸಿದ್ದಕ್ಕೆ ಗುಂಡ್ಲುಪೇಟೆಯಲ್ಲಿ ‘ಕೈ’ ಗೂಂಡಾಗಿರಿ

    ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆಯ ವೇಳೆ ಗ್ರಾಮಸ್ಥನೊಬ್ಬ ಕೇಳಿದ ಪ್ರಶ್ನೆಗೆ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಓಡಿಸಿದ ಘಟನೆ ನಡೆದಿದೆ.

    ಬೊಮ್ಮಲಾಪುರದ ಸಿದ್ದಮಲ್ಲೇಶ್ವರ ದಾಸೋಹ ಮಠದ ಬಳಿ ಈ ಘಟನೆ ನಡೆದಿದೆ. ಬೊಮ್ಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು. ಹೀಗೆ ಮನೆಗೆ ಬಂದ ಅಭ್ಯರ್ಥಿಯನ್ನು ನೀವು ಏನ್ ಮಾಡಿದ್ದೀರಾ ಅಂತಾ ಪಕ್ಕದ ಅಂಕಳ್ಳಿ ಗ್ರಾಮಸ್ಥ ಗುರುಸ್ವಾಮಿ ಕೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥನ ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮಂಜು ಕೈಯಲ್ಲಿ ಕಲ್ಲು ಹಿಡಿದು ಗ್ರಾಮಸ್ಥರನ್ನ ಅಲ್ಲಿಂದ ಓಡಿಸಿದ್ದಾರೆ.

    ಈ ವೇಳೆ ಗೀತಾ ಮಹೇವಪ್ರಸಾದ್, ನೀವು ಶಾಂತವಾಗಿರಿ, ನೀವು ಏನು ಮಾತನಾಡಬಾರದು. ಈ ರೀತಿ ನಮ್ಮನ್ನ ಕೆರಳಿಸ್ತಾರೆ ನೀವು ಧೃತಿಗೆಡಬೇಡಿ. ಹೀಗೆ ಪಕ್ಕದ ಊರಿನಿಂದ ಬಂದು ಗಲಾಟೆ ಮಾಡ್ತಾರೆ. ಗಲಾಟೆ ಮಾಡುವ ಅವಶ್ಯಕತೆ ಇರಲಿಲ್ಲ ಅಂತಾ ಕೈ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.