Tag: ಗೀತಾ ಗೋವಿಂದಂ ಸಿನಿಮಾ

  • ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಕ್ತು ಗುಡ್‌ ನ್ಯೂಸ್‌

    ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಕ್ತು ಗುಡ್‌ ನ್ಯೂಸ್‌

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಜಯ್ ದೇವರಕೊಂಡಗೆ (Vijay Devarakonda) ನಾಯಕಿಯಾಗಿ ಮತ್ತೆ ‘ಗೀತಾ ಗೋವಿಂದಂ’ ನಟಿ ಸಾಥ್ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಪ್ರಸ್ತುತ ರಶ್ಮಿಕಾ ಮಂದಣ್ಣ ಪುಷ್ಪ 2 (Pushpa 2), ಕುಬೇರ, ಚಾವಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ ಎನ್ನಲಾಗಿದೆ. ‘ಶ್ಯಾಮ್ ಸಿಂಗ್ ರಾಯ್’ ಖ್ಯಾತಿಯ ನಿರ್ದೇಶಕ ರಾಹುಲ್ ಹೇಳಿರುವ ಸಿನಿಮಾದ ಕಥೆ ವಿಜಯ್ ದೇವರಕೊಂಡಗೆ ಇಷ್ಟವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ಸಿನಿಮಾ ಮಾಡೋದಾಗಿ ಅನೌನ್ಸ್ ಕೂಡ ಮಾಡಿದ್ದಾರೆ.

    ಇನ್ನೂ ಈಗಾಗಲೇ ವಿಜಯ್ ಮತ್ತು ರಶ್ಮಿಕಾ ನಟಿಸಿರುವ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಎರಡು ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಪ್ರೇಮ ಕಥೆ ತೋರಿಸಿದ್ರೆ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅನ್ನೋದು ನಿರ್ದೇಶಕ ರಾಹುಲ್ ಲೆಕ್ಕಾಚಾರ. ಇದನ್ನೂ ಓದಿ:ಪಕ್ಷಗಳ ಜೊತೆ ಗುರುತಿಸಿಕೊಳ್ಳಲ್ಲ: ಉಲ್ಟಾ ಹೊಡೆದ ನಟ ಚಿರಂಜೀವಿ

    ಅದಕ್ಕಾಗಿ ರಶ್ಮಿಕಾರನ್ನು ಸಂಪರ್ಕಿಸಿ, ಕಥೆ ಕೂಡ ಹೇಳಿದ್ದಾರಂತೆ. ಕಥೆಯಲ್ಲಿ ಹೊಸತನವಿದೆ ಎಂದು ನಟಿ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಸದ್ಯದಲ್ಲೇ ಚಿತ್ರತಂಡ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿದೆಯಾ? ಎಂಬುದನ್ನು ಕಾಯಬೇಕಿದೆ.

    ಅಂದಹಾಗೆ, ಈ ಹಿಂದೆ ಕೂಡ ಒಳ್ಳೆಯ ಕಥೆ ಸಿಕ್ಕರೆ ಮತ್ತೆ ಜೊತೆಯಾಗಿ ನಟಿಸುತ್ತೇವೆ ಎಂದು ‘ಗೀತಾ ಗೋವಿಂದಂ’ ಜೋಡಿ ಹೇಳಿಕೊಂಡಿತ್ತು.

  • ವಿಜಯ್ ದೇವರಕೊಂಡ ಶರ್ಟ್ ಧರಿಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಶರ್ಟ್ ಧರಿಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್‌ನಲ್ಲಿ (Bollywood) ಬ್ಯುಸಿ ನಟಿಯಾಗಿ ಮಿಂಚ್ತಿದ್ದಾರೆ. ಸಿನಿಮಾ ವಿಚಾರವಾಗಿ ಅದೆಷ್ಟು ಸದ್ದು ಮಾಡ್ತಿದ್ದಾರೋ ಹಾಗೆಯೇ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ವಿಷ್ಯವಾಗಿಯೂ ಅಷ್ಟೇ ಸುದ್ದಿ ಮಾಡ್ತಿದ್ದಾರೆ. ಇಬ್ಬರ ಲವ್ವಿ- ಡವ್ವಿ ಬಗ್ಗೆ ಅದೆಷ್ಟೇ ಕೇಳಿದ್ರು ನಾವಿಬ್ರು ಜಸ್ಟ್ ಫ್ರೆಂಡ್ಸ್ ಅನ್ನೋ ಜೋಡಿ ಈಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದ್ಹೇಗೆ ಅಂತೀರಾ?

    ಕನ್ನಡದ ನಟಿ ರಶ್ಮಿಕಾ ಅವರು ‘ಗೀತಾ ಗೋವಿಂದಂ’ (Geetha Govindam) ಸಿನಿಮಾ ಮೂಲಕ ವಿಜಯ್ ದೇವರಕೊಂಡಗೆ (Vijay Devarakonda) ಜೋಡಿಯಾದ್ರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಅಂದು ಪರಿಚಯವಾದ ಗೆಳೆತನ ಇಂದಿಗೂ ಒಡನಾಟವಿದೆ. ವಿಜಯ್ ಕುಟುಂಬದ ಜೊತೆಗೂ ರಶ್ಮಿಕಾಗೆ ಫ್ರೆಂಡ್‌ಶಿಪ್‌ಯಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ವಿಜಯ್ ತಮ್ಮ ಆನಂದ್ ದೇವರಕೊಂಡ ನಟನೆಯ ಬೇಬಿ (Baby Film)ಸಿನಿಮಾ ನಟಿ ಬೆಂಬಲಿಸಿದ್ದರು. ಸಿನಿಮಾ ನೋಡಿ ಶ್ರೀವಲ್ಲಿ ಭಾವುಕರಾದರು. ಆನಂದ್ ನಟನೆ ನೋಡಿ ರಶ್ಮಿಕಾ ಮೆಚ್ಚುಗೆ ಸೂಚಿಸಿದ್ದರು.

    ಕಳೆದ ವರ್ಷ ವಿಜಯ್ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ಅವರು ಟ್ರಿಪ್ ಕೂಡ ಮಾಡಿದ್ದರು. ಈ ಕುರಿತ ಫೋಟೋ ಸಖತ್ ವೈರಲ್ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮೆರಾ ಕಣ್ಣಿಂದ ದೂರವಿದ್ದರು. ಇಬ್ಬರ ಒಡನಾಟ ಚೆನ್ನಾಗಿದೆ ಎಂಬುದಕ್ಕೆ ಇದೀಗ ಸಾಕ್ಷಿ ಸಿಕ್ಕಿದೆ.

    ಆದರೆ ಈಗ ರಶ್ಮಿಕಾ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸರಿಯಾಗಿಯೇ ತಗ್ಲಾಕೊಂಡಿದ್ದಾರೆ. ಅದು ವಿಜಯ್ ದೇವರಕೊಂಡ ಜೊತೆಗಲ್ಲ ಬದಲಿಗೆ ವಿಜಯ್ ದೇವರಕೊಂಡ ಧರಿಸಿದ್ದ ಶರ್ಟ್ ಅನ್ನು ತಾನು ಧರಿಸೋ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಈ ಹಿಂದೆ ಪರ್ಪಲ್ ಕಲರ್ ಶರ್ಟ್ ಅನ್ನು ಏರ್‌ಪೋರ್ಟ್‌ನಿಂದ ಬರುವಾಗ ತೊಟ್ಟಿದ್ರು, ಈಗ ನೋಡಿದ್ರೆ ರಶ್ಮಿಕಾ, ವಿಜಯ್ ಹಾಕಿದ್ದ ಅಂಗಿಯನ್ನೇ ಹಾಕೋ ಮೂಲಕ ನಮ್ಮಿಬ್ಬರ ದೇಹ ಬೇರೆಯಾದ್ರೂ ಮನಸ್ಸು ಒಂದೇ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಶರ್ಟ್ ಕೂಡ ಒಂದೇ ಧರಿಸಿದ್ದಾರೆ. ಇದನ್ನೂ ಓದಿ:‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

    ಮತ್ತೆ ಮತ್ತೆ ವಿಜಯ್- ರಶ್ಮಿಕಾ ನಾವು ಲವ್ ಬರ್ಡ್ಸ್ ಅನ್ನೋದನ್ನ ಸೈಲೆಂಟ್ ಆಗಿ ತೋರಿಸಿ ಕೊಟ್ಟಿದ್ದಾರೆ. ಮುಂದೆ ಈ ಜೋಡಿ ತಮ್ಮ ಪ್ರೀತಿ ಒಪ್ಪಿಕೊಂಡು ಗುಡ್ ನ್ಯೂಸ್ ಕೊಡ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಯ್‌ಫ್ರೆಂಡ್ ದೇವರಕೊಂಡ ಜೊತೆ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ರಾ ರಶ್ಮಿಕಾ? ನಟಿ ಪ್ರತಿಕ್ರಿಯೆ

    ಬಾಯ್‌ಫ್ರೆಂಡ್ ದೇವರಕೊಂಡ ಜೊತೆ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ರಾ ರಶ್ಮಿಕಾ? ನಟಿ ಪ್ರತಿಕ್ರಿಯೆ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಏ.5ರಂದು ತಮ್ಮ 27ನೇ ವರ್ಷದ ಹುಟ್ಟುಹಬ್ಬವನ್ನು (Birthday) ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡ (Vijay Devarakonda) ಜೊತೆ ರಶ್ಮಿಕಾ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಬಗ್ಗೆ ಸುದ್ದಿ ವೈರಲ್ ಆಗ್ತಿದ್ದಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ರಶ್ಮಿಕಾ ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾ ಸೂಪರ್ ಸಕ್ಸಸ್ ಕಂಡರು. ವಿಜಯ್‌ಗೆ ನಾಯಕಿಯಾಗಿ ಮಿಂಚಿದರು. ಅಂದಿನಿಂದ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್ ವಿಚಾರ ಸದ್ದು ಮಾಡುತ್ತಲೇ ಇದೆ. ಇಬ್ಬರು ಈ ವಿಚಾರ ಸುಳ್ಳು ಎಂದು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ಈಗ ರಶ್ಮಿಕಾ ಹುಟ್ಟುಹಬ್ಬದಂದು, ಇಬ್ಬರ ಡೇಟಿಂಗ್ ಸುದ್ದಿಗೆ ಪುಷ್ಟಿ ನೀಡುವಂತಹ ಫೋಟೋ ಇದೀಗ ಸಖತ್ ವೈರಲ್ ಆಗಿದೆ. ರಶ್ಮಿಕಾ ಬರ್ತ್‌ಡೇ ದಿನ ಇಬ್ಬರು ಒಟ್ಟಿಗೆ ಇದ್ದರು ಎನ್ನಲಾದ ಫೋಟೋಸ್ ಈಗ ಸದ್ದು ಮಾಡ್ತಿದೆ. ಈ ಬಗ್ಗೆ ಖಾಸಗಿ ಸುದ್ದಿ ಪೇಜ್‌ವೊಂದು ವರದಿ ಮಾಡಿದೆ.

    ರಶ್ಮಿಕಾ ಮತ್ತು ವಿಜಯ್ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬುದು ಪ್ರೂವ್ ಆಗಿದೆ. ಅವರು ಪ್ರೀತಿಯಲ್ಲಿ ಸೀರಿಯಸ್ ಆಗಿದ್ದಾರೆ. ವಿಜಯ್ ಅವರ ನೆಚ್ಚಿನ ಉಂಗುರವನ್ನ (Ring) ನಟಿ ಬೆರಳಿಗೆ ಧರಿಸಿದ್ದಾರೆ. ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಖಾಸಗಿ ಪೇಜ್‌ವೊಂದು ಪೋಸ್ಟ್ ಮಾಡಿದೆ. ಇದಕ್ಕೆ ನಟಿ ರಿಯಾಕ್ಟ್ ಮಾಡಿ, ಅಯ್ಯೋ.. ಹೆಚ್ಚು ಯೋಚಿಸಬೇಡಿ ಬಾಬು ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗೆ ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ ಅವರು ಪುಷ್ಪ 2, ಅನಿಮಲ್, ನಿತಿನ್ ಜೊತೆ ಹೊಸ ಸಿನಿಮಾ, ಮಹಿಳಾ ಪ್ರಧಾನ ಚಿತ್ರ ‘ರೈನ್‌ಬೋ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ.