ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಬೇಡಿಕೆಯಿದೆ. ಅದರಲ್ಲೂ ಸೌತ್ ಸಿನಿಮಾಗಳಲ್ಲಿ ರಶ್ಮಿಕಾಗೆ ಫ್ಯಾನ್ಸ್ ಬೇಸ್ ತುಸು ಜಾಸ್ತಿಯೇ ಇದೆ. ವಿಜಯ್- ರಶ್ಮಿಕಾ ಜೋಡಿಯ ಸಿನಿಮಾ ಅಂದರೆ ಹುಚ್ಚೆದ್ದು ನೋಡ್ತಾರೆ. ಇದೀಗ ವಿಜಯ್ ದೇವರಕೊಂಡ (Vijay Devarakonda) ಜೊತೆ ಮತ್ತೆ ರಶ್ಮಿಕಾ ಸಿನಿಮಾ ಮಾಡ್ತಾರಾ ಎಂದು ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸಿನಿಮಾ ಮಾಡ್ತಾರೆ ಎಂದು ಗಾಸಿಪ್ ಹಬ್ಬಿತ್ತು. ಹಾಗಾಗಿ ಇದೇ ಪ್ರಶ್ನೆ ಅವರಿಗೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ, ಒಳ್ಳೆಯ ಸ್ಕ್ರೀಪ್ಟ್ ಸಿಕ್ಕರೆ ಖಂಡಿತವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತೇವೆ. ನಾನು, ವಿಜಯ್ ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೇವೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ ಸಂಭ್ರಮದಲ್ಲಿ ಶರ್ವಾನಂದ್

ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರದ ಮೂಲಕ ರಶ್ಮಿಕಾ- ವಿಜಯ್ ಜೋಡಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಹಾಗಾಗಿ ಈ ಜೋಡಿ ಮತ್ತೆ ಜೊತೆಯಾದ್ರೆ ಚೆನ್ನಾಗಿರುತ್ತೆ ಅಲ್ವಾ ಎಂದು ಫ್ಯಾನ್ಸ್ ಕೂಡ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.
ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ. ರಿಯಲ್ ಲೈಫ್‌ನಲ್ಲಿಯೂ ಇಬ್ಬರ ಲವ್ ಬಗ್ಗೆ ಗುಸು ಗುಸು ಸುದ್ದಿ ಇದೆ. ಇಬ್ಬರೂ ಡೇಟ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಜೊತೆಗೆ ರಿಲೇಶನ್‌ಶಿಪ್ ಬಗ್ಗೆ ಮಾಹಿತಿ ಸಿಗುತ್ತಾ ಕಾದುನೋಡಬೇಕಿದೆ.



ಸೇಮ್ ಟು ಸೇಮ್ ಅದೇ ಟೆರೇಸ್‍ನಲ್ಲಿ ವಿಜಯ್ (Vijay Devarakonda) ಕೂಡ ಒಂದು ವಾರದ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ನಟ ಶೇರ್ ಮಾಡಿದ್ದಾರೆ. ಇಬ್ಬರು ಸೇಮ್ ಪ್ಲೇಸ್‍ನಲ್ಲಿ ಫೋಟೋ ಕ್ಲಿಕ್ಕಿಸಿರೋದು ಈಗ ರಿಲೇಶನ್‌ಶಿಪ್ ಬಗ್ಗೆ ನೆಟ್ಟಿಗರಿಗೆ ಅನುಮಾನ ಮೂಡಿದೆ. ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಶರ್ಟ್ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವಿಚಾರ ಕೂಡ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದನ್ನೂ ಓದಿ:






ಈ ಹಿಂದೆ `ಗೀತಾ ಗೋವಿಂದಂ’ ನಿರ್ದೇಶನ ಮಾಡಿರುವ ಪರಶುರಾಮ್ ಈ ಹೊಸ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ. ಮತ್ತೆ ರೊಮ್ಯಾಂಟಿಕ್ ಕಥೆಯ ಮೂಲಕ ಮೋಡಿ ಮಾಡಲು ವಿಜಯ್, ರಶ್ಮಿಕಾ ರೆಡಿಯಾಗಿದ್ದಾರೆ. ಇದನ್ನೂ ಓದಿ:





