Tag: ಗಿಲ್ಲಿ ಕನ್ನಡ ಸಿನಿಮಾ

  • ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

    ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

    ನ್ನಡದ ‘ಗಿಲ್ಲಿ’ (Gilli Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಈಗ ಸೌತ್- ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ಹೈಲೆಟ್ ಆಗಿದ್ದಾರೆ. ಸದ್ಯ ಎದೆಯ ಗೀಟು ಕಾಣುವಂತೆ ಬೋಲ್ಡ್ ಆಗಿ ರಾಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನಯಾ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಪ್ಪು ಬಣ್ಣ ಧಿರಿಸಿನಲ್ಲಿ ರಾಕುಲ್ ಪ್ರೀತ್ ಸಿಂಗ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಗೀಟು ಕಾಣುವಂತೆ ಪೋಸ್ ಕೊಟ್ಟಿರೋ ನಟಿಯೇ ಮೈ ತುಂಬಾ ಬಟ್ಟೆ ಹಾಕಿ ಅಂತೆಲ್ಲಾ ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿದೆ. ಇದನ್ನೂ ಓದಿ:ವಿನಯ್‌ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್‌ ಕ್ಲಾಸ್‌

    ಇನ್ನೂ ಸಿನಿಮಾಗಳ ಆಫರ್ ಇದ್ರೂ ಚಿತ್ರದ ಸಕ್ಸಸ್‌ಗಾಗಿ ಒಂದೊಳ್ಳೆಯ ಬ್ರೇಕ್‌ಗಾಗಿ ರಾಕುಲ್ ಕಾಯ್ತಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ನಲ್ಲಿ ರಾಕುಲ್ ನಟಿಸಿದ್ದಾರೆ. ಚಿತ್ರದ ಮೊದಲ ಗ್ಲಿಂಪ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯ್ತು.

    ಕಮಲ್ ಹಾಸನ್, ಕಾಜಲ್, ರಾಕುಲ್ ಸೇರಿದಂತೆ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇಯಿದೆ. ಎಸ್. ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.

  • ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ನ್ನಡದ ‘ಗಿಲ್ಲಿ’ ಸಿನಿಮಾ (Gilli Film) ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸೌತ್ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಹಾರಿದ್ದರು. ಸತತ 7 ಸಿನಿಮಾಗಳ ಸೋಲಿನ ನಂತರ ಈಗ ಮತ್ತೆ ದಕ್ಷಿಣ ಸಿನಿಮಾಗಳತ್ತ ರಾಕುಲ್ ಮುಖ ಮಾಡಿದ್ದಾರೆ. ತಮಿಳಿನ ನಟ ಶಿವಕಾರ್ತಿಕೇಯನ್‌ಗೆ ‘ಗಿಲ್ಲಿ’ ಬ್ಯೂಟಿ ಹೀರೋಯಿನ್ ಆಗಿದ್ದಾರೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಿರುವಾಗಲೇ ಇಲ್ಲಿನ ಸಿನಿಮಾ ಬೇಡ ಅಂತಾ ಕಡೆಗಣಿಸಿ ಬಾಲಿವುಡ್ ಚಿತ್ರಗಳಿಗೆ ರಾಕುಲ್ ಮಣೆ ಹಾಕಿದ್ದರು. 2014ರಿಂದಲೇ ಹಿಂದಿ ಸಿನಿಮಾರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದರು. ಬಳಿಕ ಅಟ್ಯಾಕ್, ರನ್‌ವೇ 34, ಕಟ್‌ಪುತ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ಐ ಲವ್ ಯೂ, ಛತ್ರಿವಾಲಿ ಸಿನಿಮಾಗಳು ಮಕಾಡೆ ಮಲಗಿವೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

    ಬಾಲಿವುಡ್‌ನ 7 ಸಿನಿಮಾಗಳು ಸೋತ ಮೇಲೆ ಈಗ ಸೌತ್ ಸಿನಿಮಾಗಳಿಗೆ ನಟಿ ಮಣೆ ಹಾಕಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಲಾಯನ್’ (Ayalaan) ಸಿನಿಮಾಗೆ ರಾಕುಲ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ (Indian 2) ಹೀರೋಯಿನ್ ಆಗಿ ಸಾಥ್ ನೀಡಿದ್ದಾರೆ. 7 ಸಿನಿಮಾ ಸೋತ ಮೇಲೆ ಬುದ್ಧಿ ಬಂತಾ ಎಂದು ನೆಟ್ಟಿಗರು ರಾಕುಲ್ ಕಾಲೆಳೆದಿದ್ದಾರೆ.

    ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಾಕುಲ್, ಪಾಕೆಟ್ ಮನಿಗಾಗಿ ‘ಗಿಲ್ಲಿ’ ಸಿನಿಮಾ ಮಾಡಿದೆ ಎಂದು ಮಾತನಾಡಿದ್ದರು. ಅಂದು ಅವರ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ (Gururaj) ನಟನೆಯ ‘ಗಿಲ್ಲಿ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ರಾಕುಲ್ ಸಿನಿಪಯಣ ಶುರು ಮಾಡಿದರು. ಇದೀಗ ಸೌತ್-ಬಾಲಿವುಡ್ ರಂಗದಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

     

    View this post on Instagram

     

    A post shared by Rakul Singh (@rakulpreet)

    ಸದ್ಯ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೆಲ ದಿನಗಳಿಂದ ನಟಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಬಿಕಿನಿಯ ಹಸಿ ಬಿಸಿ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ರೆಡ್ ಕಲರ್ ಬಿಕಿನಿ (Bikini) ಧರಿಸಿ ಬೀಚ್ ಬಳಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಎಲ್ಲೆಡೆ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ರಾಕುಲ್ ಡೇಟ್ ಮಾಡ್ತಿದ್ದಾರೆ. ಸದ್ಯ ಸ್ಟಾರ್‌ಗಳ ಮದುವೆ ಸೀಸನ್ ನಡೆಯುತ್ತಿರುವ ಕಾರಣ, ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಮೈನಸ್‌ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮುಳುಗೆದ್ದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಮೈನಸ್‌ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮುಳುಗೆದ್ದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli) ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಾಲಿವುಡ್- ಸೌತ್ ಸಿನಿಮಾರಂಗದಲ್ಲಿ ಸದ್ದು ಮಾಡ್ತಿದ್ದಾರೆ. ಸದ್ಯ ಅವರು ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶದಲ್ಲಿ ಪ್ರವಾಸ ಮಾಡ್ತಿದ್ದಾರೆ. ಬಿಕಿನಿನಲ್ಲಿ ಸಖತ್ ಹಾಟ್ ಆಗಿ ರಾಕುಲ್ ಪ್ರೀತ್ ಕಾಣಿಸಿಕೊಂಡಿದ್ದಾರೆ.

    ಇತ್ತೀಚಿಗೆ ಥ್ಯಾಂಕ್ ಗಾಢ್, ಛತ್ರಿವಾಲಿ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ರಾಕುಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಟಿಸಿರುವ ಸಿನಿಮಾದಿಂದ ಸದ್ಯ ಯಾವುದೇ ಬ್ರೇಕ್ ಸಿಗದೇ ಇದ್ದರು. ಗಿಲ್ಲಿ ನಾಯಕಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕತ್ರಿನಾ ದಂಪತಿ? ನಟಿ ಸ್ಪಷ್ಟನೆ

     

    View this post on Instagram

     

    A post shared by Rakul Singh (@rakulpreet)

    ರಾಕುಲ್ ಪ್ರೀತ್ ಸಿಂಗ್ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ಇರುವ ನೀರಿನಲ್ಲಿ ಮುಳುಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಕಿನಿ(Bikini) ಧರಿಸಿದ್ದರು ಅನ್ನೋದು ವಿಶೇಷ. ಸದ್ಯ ಈ ಸಖತ್ ವಿಡಿಯೋ ವೈರಲ್ ಆಗಿದೆ. ರಾಕುಲ್ ಮಾತ್ರ ತುಂಡು ಬಟ್ಟೆ ಹಾಕಿ ಐಸ್ ನೀರಲ್ಲಿ ಮುಳುಗೆದ್ದಿದ್ದರು. ಈ ಮೂಲಕ ನಟಿ ರಾಕುಲ್ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

    ರಾಕುಲ್ ಪ್ರೀತ್ ಸಿಂಗ್ ಮುಳುಗೆದ್ದ ಬಳಿಕ ನೀರು ಬಿಸಿಯಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಾಕುಲ್ ಹಾಟ್ ಆಗಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ