Tag: ಗಿಲ್ಗಿಟ್

  • ಆಕ್ರಮಿತ ಜಾಗ ನಮ್ಮದು, ಗಿಲ್ಗಿಟ್ ಬಾಲ್ಟಿಸ್ತಾನಲ್ಲಿ ಚುನಾವಣೆ ನಡೆಸುವಂತಿಲ್ಲ – ಪಾಕ್‍ಗೆ ಭಾರತದ ಖಡಕ್ ಎಚ್ಚರಿಕೆ

    ಆಕ್ರಮಿತ ಜಾಗ ನಮ್ಮದು, ಗಿಲ್ಗಿಟ್ ಬಾಲ್ಟಿಸ್ತಾನಲ್ಲಿ ಚುನಾವಣೆ ನಡೆಸುವಂತಿಲ್ಲ – ಪಾಕ್‍ಗೆ ಭಾರತದ ಖಡಕ್ ಎಚ್ಚರಿಕೆ

    ನವದೆಹಲಿ: ಪಾಕಿಸ್ತಾನ ಆಕ್ರಮಿತ ಭಾರತದ ಪ್ರದೇಶ ಸೇರಿದಂತೆ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಭಾರತ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ.

    ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ಸೇರಿದಂತೆ ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ. ಆಕ್ರಮಿತ ಭೂ ಪ್ರದೇಶದಿಂದ ತಕ್ಷಣ ತೆರೆದು ತೆರಳುವಂತೆ ಭಾರತ ವಿದೇಶಾಂಗ ಶಾಖೆ ಪಾಕ್ ರಾಜತಾಂತ್ರಿಕ ಉನ್ನತ ಅಧಿಕಾರಿಗಳಿಗೆ ತಿಳಿಸಿದೆ.

    2018ರಲ್ಲಿ ಪಾಕಿಸ್ತಾನ ಸರ್ಕಾರ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮಾಡಿದ್ದ ತಿದ್ದುಪಡಿಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಏಪ್ರಿಲ್ 30ರಂದು ಚುನಾವಣೆ ನಡೆಸಲು ಅನುಮತಿ ನೀಡಿತ್ತು. ಈ ಆದೇಶವನ್ನು ತೀವ್ರವಾಗಿ ವಿರೋಧಿಸಿರುವ ಭಾರತ, ಆ ಪ್ರದೇಶಗಳು ತನ್ನದು ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭೂ ಭಾಗದಲ್ಲಿ ಪಾಕಿಸ್ತಾನಕ್ಕೆ ಹಾಗೂ ಅಲ್ಲಿನ ಸುಪ್ರೀಂ ಕೋಟಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ತಿಳಿಸಿರುವುದಾಗಿ ಭಾರತ ವಿದೇಶಾಂಗ ಇಲಾಖೆ ಹೇಳಿದೆ.

    ಭಾರತ ಪಾಕಿಸ್ತಾನದ ಇಂತಹ ನಡಾವಳಿಗಳನ್ನು ಭಾರತ ವಿರೋಧಿಸುತ್ತಿದೆ. ಆದರೆ ಪಾಕಿಸ್ತಾನ ನಿರಂತರವಾಗಿ ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ 7 ದಶಕಗಳಿಂದಲೂ ಪಾಕಿಸ್ತಾನ ತೀವ್ರವಾದ ಮಾನವ ಹಕ್ಕಗಳ ಉಲ್ಲಂಘನೆ ಮಾಡುತ್ತಿದೆ. ಅಲ್ಲದೇ ಇವುಗಳನ್ನು ವಿಶ್ವ ಸಮುದಾಯದ ದೃಷ್ಟಿಯಿಂದ ಮರೆಮಾಚಲು ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದಲ್ಲಿ ಪ್ರಸ್ತುತವಿರುದ ಸರ್ಕಾರ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದ್ದು, ಮುಂದಿನ 60 ದಿನಗಳ ಒಳಗೆ ಚುನಾವಣೆ ನಡೆಸಲು ಪಾಕ್ ಸರ್ಕಾರ ಮುಂದಾಗಿದೆ. ಆದರೆ ಪಾಕ್ ಕ್ರಮವನ್ನು ತಿರಸ್ಕರಿಸುವ ಭಾರತ, ಜಮ್ಮು ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.