Tag: ಗಿರ್‌ ವನ್ಯಜೀವಿ ಅಭಯಾರಣ್ಯ

  • World Wildlife Day – ಗಿರ್ ಅಭಯಾರಣ್ಯದಲ್ಲಿ ಮೋದಿ ಸಫಾರಿ

    World Wildlife Day – ಗಿರ್ ಅಭಯಾರಣ್ಯದಲ್ಲಿ ಮೋದಿ ಸಫಾರಿ

    – ಸಿಂಹಗಳ ಸುಂದರ ಕ್ಷಣ ಕ್ಯಾಮೆರಾದಲ್ಲಿ ಸೆರೆ

    ಗಾಂಧಿನಗರ: ವಿಶ್ವ ವನ್ಯಜೀವಿ ದಿನದ (World Wildlife Day) ಅಂಗವಾಗಿ ಸೋಮವಾರ ಬೆಳಗ್ಗೆ ಪ್ರಧಾನಿ ಮೋದಿಯವರು (Narendra Modi) ಗುಜರಾತ್‌ನ (Gujarat) ಜುನಾಗಢದ ಗಿರ್ (Gir) ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿ ಕೈಗೊಂಡರು.

    ವಿಶ್ವ ವನ್ಯಜೀವಿ ದಿನದ ಸಲುವಾಗಿ, `ನಮ್ಮ ಗ್ರಹದ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ” ಎಂದು ಪ್ರಧಾನಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಮುಂದುವರಿದು… ಪ್ರತಿಯೊಂದು ಪ್ರಭೇದವೂ ಪ್ರಮುಖ ಪಾತ್ರವಹಿಸುತ್ತದೆ. ಮುಂದಿನ ಪೀಳಿಗೆಗೆ ಅವುಗಳನ್ನ ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ಸಲುವಾಗಿ ಭಾರತ ಕೈಗೊಂಡ ಕೊಡುಗೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ತಿಳಿಸಿದ್ದಾರೆ.

    ಸಫಾರಿಯ ವೇಳೆ ಪ್ರಧಾನಿಯವರಿಗೆ ಕೆಲ ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು. ಈ ವೇಳೆ ಪ್ರಧಾನಿವರು ಸಿಂಹಗಳ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

    ಗಿರ್‌ನಲ್ಲಿ `ಪ್ರಾಜೆಕ್ಟ್ ಲಯನ್’ ಯೋಜನೆ
    ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಗಾಗಿ ಕೇಂದ್ರವು ಗುಜರಾತ್‌ನ ಗಿರ್‌ನಲ್ಲಿ “ಪ್ರಾಜೆಕ್ಟ್ ಲಯನ್” ಅನ್ನು ಜಾರಿಗೆ ತಂದಿದೆ.

    ಇತ್ತೀಚೆಗೆ ಗುಜರಾತ್‌ನಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಹೆಚ್ಚುತ್ತಿದೆ. ಸಿಂಹಗಳ ಸಂಖ್ಯೆ 2010ರಲ್ಲಿ 411 ಮತ್ತು 2015ರಲ್ಲಿ 523 ಇತ್ತು. ಆದರೆ 2020ರ ಜೂನ್‌ನಲ್ಲಿ ಇವುಗಳ ಸಂಖ್ಯೆ 674ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ತಿಳಿಸಿದೆ.