Tag: ಗಿರ್ಮಿಟ್

  • ನವೆಂಬರ್ 8ಕ್ಕೆ ಗಿರ್ಮಿಟ್ ಚಿತ್ರ ತೆರೆಗೆ

    ನವೆಂಬರ್ 8ಕ್ಕೆ ಗಿರ್ಮಿಟ್ ಚಿತ್ರ ತೆರೆಗೆ

    ಓಂಕಾರ್ ಮೂವೀಸ್ ಹಾಗೂ ರವಿ ಬಸ್ರೂರ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಂಪೂರ್ಣವಾಗಿ ಮಕ್ಕಳೇ ಅಭಿನಯಿಸಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಗಿರ್ಮಿಟ್. ಸುಮಾರು 300ಕ್ಕೂ ಹೆಚ್ಚು ಮಕ್ಕಳು ಈ ಚಿತ್ರದಲ್ಲಿ ಬರುವ ಕಮರ್ಷಿಯಲ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

    ಈ ಹಿಂದೆ ಕಟಕ ಚಿತ್ರವನ್ನು ನಿರ್ದೇಶಿಸಿದ್ದ ರವಿ ಬಸ್ರೂರು ಅವರು ಈ ಚಿತ್ರದ ಮೂಲಕ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ಡ್ರಾಮಾ ಜೂನಿಯರ್ಸ್‍ನಂಥ ರಿಯಾಲಿಟಿ ಶೋಗಳಲ್ಲಿ ಅನಾವರಣವಾಗುತ್ತಿರುವ ಮಕ್ಕಳ ಪ್ರತಿಭೆ ಕಂಡು ನಿರ್ದೇಶಕ ರವಿ ಬಸ್ರೂರು ಬಿಗ್ ಸ್ಕ್ರೀನ್ ಮೇಲೆ ಇಂಥದೊಂದು ಪ್ರಯತ್ನ ಮಾಡಿದ್ದಾರೆ.

    ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿರುವಂತೆ ಆಕ್ಷನ್, ಕಾಮಿಡಿ, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡ ಈ ಚಿತ್ರದಲ್ಲಿ ಮಕ್ಕಳಿಗೆ ದೊಡ್ಡವರು ದನಿಯಾಗಿದ್ದಾರೆ. ಅಂದರೆ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಸಾಧುಕೋಕಿಲ, ನಯನ, ಅನುಪಮಾಗೌಡ ಮುಂತಾದವರು ಮಕ್ಕಳ ಪಾತ್ರಗಳಿಗೆ ತಮ್ಮ ವಾಯ್ಸ್ ನೀಡಿದ್ದಾರೆ. ವಿಶೇಷವಾಗಿ ಗಿರ್ಮಿಟ್ ಚಿತ್ರದ ಹೀರೋ-ಹೀರೋಯಿನ್ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಗಿರ್ಮಿಟ್ ಒಂದು ಹೊಸ ಪ್ರಯೋಗವಾಗಿದೆ.

    ಉಗ್ರಂ, ಕೆಜಿಎಫ್ ಚಿತ್ರಗಳಿಗೆ ಅದ್ಭುತವಾಗಿ ಆರ್ ಆರ್ ಮಾಡುವ ಮೂಲಕ ಗುರುತಿಸಿಕೊಂಡಿದ್ದ ರವಿ ಬಸ್ರೂರು ಅವರು ಸಂಗೀತ ಅಲ್ಲದೆ ನಿರ್ದೇಶನದಲ್ಲೂ ಮತ್ತೊಂದು ಹೊಸ ಪ್ರಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

    ಜಟ್ಟ, ಮೈತ್ರಿಯಂಥ ಹೊಸತನದ ಸಿನಿಮಾಗಳನ್ನು ನಿರ್ಮಿಸಿದ್ದ ಎನ್.ಎಸ್. ರಾಜಕುಮಾರ್ ಗಿರ್ಮಿಟ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನಟ ಪುನೀತ್ ರಾಜ್‍ಕುಮಾರ್ ಕೂಡ ಹಾಡೊಂದಕ್ಕೆ ದನಿಯಾಗಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ, ಪವಿತ್ರಾ ಹೆಸ್ಕತ್ತೂರ್, ಜಯೇಂದ್ರ ವಕ್ವಾಡಿ, ಮನೀಶ್ ಶೆಟ್ಟಿ, ಸಾರ್ಥಕ್ ಶೆಣೈ, ಮಹೇಂದ್ರ ಅಲ್ಲದೆ ಸಹನ ಬಸ್ರೂರು ಹಾಗೂ ಪವನ್ ಬಸ್ರೂರು ಸಹ ಅಭಿನಯಿಸಿದ್ದಾರೆ. ಇವರೆಲ್ಲ ಪುಟಾಣಿಗಳು ಎನ್ನುವುದು ಇಲ್ಲಿ ವಿಶೇಷ. ನವೆಂಬರ್ 8ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

  • ಸಂಜೆ ಸ್ನ್ಯಾಕ್ಸ್ ಗೆ ಇರಲಿ ಉತ್ತರ ಕರ್ನಾಟಕದ ಸ್ಪೆಷಲ್ ಗಿರ್ಮಿಟ್

    ಸಂಜೆ ಸ್ನ್ಯಾಕ್ಸ್ ಗೆ ಇರಲಿ ಉತ್ತರ ಕರ್ನಾಟಕದ ಸ್ಪೆಷಲ್ ಗಿರ್ಮಿಟ್

    ವೀಕೆಂಡ್ ದಿನ ಹೊರಗಡೆ ಹೋಗಲು ಕೆಲವರಿಗೆ ಮನಸ್ಸು ಒಪ್ಪಲ್ಲ. ಮನೆಯಲ್ಲಿ ರೆಸ್ಟ್ ಮಾಡೋಣ ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಹೊರಗಡೆ ಹೋಗಿ ಜಂಕ್ ಫುಡ್ ಮೊರೆ ಹೋಗದೆ ಮನೆಯಲ್ಲಿಯೇ ಉತ್ತರ ಕರ್ನಾಟಕದ ಸ್ಪೆಷಲ್ ಗಿರ್‍ಮಿಟ್ ಮಾಡಿಕೊಂಡು ಸವಿಯಿರಿ.

    ಬೇಕಾಗಿರುವ ಸಾಮಾಗ್ರಿಗಳು:
    1 ಮಂಡಕ್ಕಿ/ಕಡಲೆಪುರಿ – 3 ಕಪ್
    2 ಹುಣಸೆ ರಸ – 1/4 ಕಪ್
    3 ಟೊಮೆಟೊ – 1
    4 ಈರುಳ್ಳಿ – 2
    5 ಕೊತ್ತಂಬರಿ ಸೊಪ್ಪು – ಸ್ವಲ್ಪ
    6 ಹುರಿಗಡಲೆ ಪುಡಿ – 2 ಚಮಚ
    7 ಹಸಿರು ಮೆಣಸಿನಕಾಯಿ – 3
    8 ಎಣ್ಣೆ – 2 ಚಮಚ
    9 ಜೀರಿಗೆ – 2 ಚಮಚ
    10 ಸಾಸಿವೆ – 2 ಚಮಚ
    11 ಬೆಲ್ಲ- 2 ಚಮಚ
    12 ಉಪ್ಪು- ರುಚಿಗೆ ತಕ್ಕಷ್ಟು
    13 ಕರಿಬೇವು- ಸ್ವಲ್ಪ
    14 ಅರಿಶಿಣ ಪುಡಿ- 1/4 ಚಮಚ
    15 ಸೇವ್/ಖಾರ ಬೂಂದಿ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
    * ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
    * ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿ.
    * ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲೆ ರೆಡಿ.
    * ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲೆ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿಸಿ ಮಿರ್ಚಿ ಬಜ್ಜಿ ಜೊತೆಗೆ ಸವಿಯಲು ಕೊಡಿ.

  • ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ ವಿಧಾನ.

    ಬೇಕಾಗಿರುವ ಸಾಮಾಗ್ರಿಗಳು:
    1 ಮಂಡಕ್ಕಿ/ಕಡಲೆಪುರಿ – 3 ಕಪ್
    2 ಹುಣಸೆ ರಸ – 1/4 ಕಪ್
    3 ಟೊಮೇಟೊ – 1
    4 ಈರುಳ್ಳಿ – 2
    5 ಕೊತ್ತಂಬರಿ ಸೊಪ್ಪು – ಸ್ವಲ್ಪ
    6 ಹುರಿಗಡಲೆ ಪುಡಿ – 2 ಚಮಚ
    7 ಹಸಿರು ಮೆಣಸಿನಕಾಯಿ – 3
    8 ಎಣ್ಣೆ – 2 ಚಮಚ
    9 ಜೀರಿಗೆ – 2 ಚಮಚ
    10 ಸಾಸಿವೆ – 2 ಚಮಚ
    11 ಬೆಲ್ಲ- 2 ಚಮಚ
    12 ಉಪ್ಪು- ರುಚಿಗೆ ತಕ್ಕಷ್ಟು
    13 ಕರಿಬೇವು- ಸ್ವಲ್ಪ
    14 ಅರಿಶಿಣ ಪುಡಿ – 1/4 ಚಮಚ
    15 ಸೇವ್/ಖಾರ ಬೂಂದಿ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
    * ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
    * ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿ.
    * ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ರೆಡಿ.
    * ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿಸಿ ಮಿರ್ಚಿ ಬಜ್ಜಿ ಜೊತೆಗೆ ಸವಿಯಲು ಕೊಡಿ.