Tag: ಗಿರ್

  • ಸಿಂಹಗಳನ್ನ ಬೈಕ್‍ನಲ್ಲಿ ಚೇಸ್ ಮಾಡಿ ಮಜಾ ತಗೊಂಡ್ರು- ವಿಡಿಯೋ ವೈರಲ್

    ಸಿಂಹಗಳನ್ನ ಬೈಕ್‍ನಲ್ಲಿ ಚೇಸ್ ಮಾಡಿ ಮಜಾ ತಗೊಂಡ್ರು- ವಿಡಿಯೋ ವೈರಲ್

    ಅಹಮದಾಬಾದ್: ಬೈಕ್ ಸವಾರರ ಗುಂಪೊಂದು ಗುಜರಾತ್‍ನ ಗಿರ್ ಅರಣ್ಯಧಾಮದಲ್ಲಿ ಸಿಂಹಗಳನ್ನ ಚೇಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

    ಘಟನೆಗೆ ಸಂಬಂಧಿಸಿದಂತೆ ನಾಲ್ವರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಾಲ್ವರು ಸಿಂಹಗಳು, ಸಿಂಹಿಣಿಗಳು ಹಾಗೂ ಮರಿಗಳನ್ನು ಬೈಕ್‍ನಲ್ಲಿ ಚೇಸ್ ಮಾಡಿದ್ದಾರೆ. ಒಂದು ಬೈಕಿನ ಲೈಸೆನ್ಸ್ ಪ್ಲೇಟ್ ವಿಡಿಯೋದಲ್ಲಿ ಕಾಣಿಸುತ್ತದೆ. ಸಿಂಹಗಳು ಬೈಕ್ ಸದ್ದಿಗೆ ಬೆದರಿ ಅಲ್ಲಿಂದ ದಿಕ್ಕಾಪಾಲಾಗಿ ಓಡಿವೆ. ಇದರ ವಿಡಿಯೋವನ್ನ ಬುಧವಾರದಂದು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿತ್ತು.

    ವನ್ಯಜೀವಿ ಅಧಿಕಾರಿಗಳು ಉಳಿದ ಆರೋಪಿಗಳ ಪತ್ತೆಗಾಗಿ ಹಾಗೂ ವಿಡಿಯೋದ ಮೂಲದ ಬಗ್ಗೆ ತಿಳಿಯಲು ಪ್ರಯತ್ನ ನಡೆಸಿದ್ದಾರೆ.

    ಇಂದು ರಾಜ್‍ಕೋಟ್ ಬಳಿ ಓರ್ವ ಬೈಕ್ ಸವಾರನನ್ನು ಬಂಧಿಸಲಾಗಿದೆ. ಬೈಕ್ ನೋಂದಣಿ ಸಂಖ್ಯೆ ಹಾಗೂ ಸ್ಥಳೀಯ ಗ್ರಾಮಸ್ಥರ ಮಾಹಿತಿ ಆಧರಿಸಿ ಆತನನ್ನು ಪತ್ತೆಹಚ್ಚಲಾಗಿದೆ. ಉಳಿದ ಮೂವರು ಆರೋಪಿಗಳಲ್ಲಿ ಇಬ್ಬರು ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯವರು ಎಂದು ವರದಿಯಾಗಿದೆ.

     

     

    ಗುಜರಾತ್‍ನ ಗಿರ್ ಅರಣ್ಯಧಾಮ ಏಷ್ಯಾಟಿಕ್ ಲಯನ್‍ಗಳ ಏಕೈಕ ನೈಸರ್ಗಿಕ ವಾಸಸ್ಥಾನವಾಗಿದೆ. 1400 ಚದರ ಅಡಿ ವಿಸ್ತೀರ್ಣದ ಈ ವನ್ಯಜೀವಿಧಾಮದಲ್ಲಿ 400 ಸಿಂಹಗಳಿವೆ. ಜೂನ್‍ನಲ್ಲಿ ಅಮ್ರೇಲಿ ಜಿಲ್ಲೆಯಲ್ಲಿ ಕಾರಿನಲ್ಲಿದ್ದ ಯುವಕರ ಗುಂಪೊಂದು ಸಿಂಹದ ಮರಿಯನ್ನು ಚೇಸ್ ಮಾಡಿದ ವಿಡಿಯೋ ಹರಿದಾಡಿತ್ತು.

    https://www.youtube.com/watch?v=-6-vyqTM644

  • ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಅಹಮದಾಬಾದ್: 32 ವರ್ಷದ ಮಹಿಳೆಯೊಬ್ಬರು ಗುಜರಾತ್‍ನ ಗಿರ್ ಅರಣ್ಯಪ್ರದೇಶದಲ್ಲಿ ಆಂಬುಲೆನ್ಸ್ ನೊಳಗೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅಷ್ಟೆ ಅಲ್ಲ ಅಂದು ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಲ್ಲಿಸಲಾಗಿದ್ದ ಈ ಆಂಬುಲೆನ್ಸ್ ಬಳಿ ಹತ್ತಿರದ ಕಾಡಿನಿಂದ 12 ಸಿಂಹಗಳು ಬಂದು ವಾಹನವನ್ನ ಸುತ್ತುವರಿದಿದ್ದವು ಎಂದರೆ ನೀವು ನಂಬಲೇಬೇಕು.

    ಹೌದು. ಗುರುವಾರದಂದು ಮಧ್ಯರಾತ್ರಿ ಸುಮಾರು 2.30ರ ವೇಳೆಯಲ್ಲಿ ಇಲ್ಲಿನ ಲುನಾಸಾಪುರ್ ನಿವಾಸಿಯಾದ ಮಂಗುಬೆನ್ ಮಕ್ವಾನಾ ಅವರನ್ನ ಹೆರಿಗೆಗಾಗಿ ಜಾಫರ್‍ಬಾದ್ ಟೌನ್‍ನ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿದ್ದು ಮಗುವಿನ ತಲೆ ಹೊರಗೆ ಬರ್ತಿದ್ರಿಂದ ಯಾವ ಕ್ಷಣದಲ್ಲಾದ್ರೂ ಹೆರಿಗೆಯಾಗುವ ಸಂಭವವಿತ್ತು. ಹೀಗಾಗಿ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ತಂತ್ರಜ್ಞರಾದ ಅಶೋಕ್ ಮಕ್ವಾನಾ ಚಾಲಕ ರಾಜು ಅವರಿಗೆ ವಾಹನವನ್ನ ಅರ್ಧ ದಾರಿಯಲ್ಲೇ ನಿಲ್ಲಿಸಲು ಹೇಳಿದ್ರು ಎಂದು ಅಮ್ರೇಲಿಯ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಗಾದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬಳಿಕ ತಂತ್ರಜ್ಞ ಅಶೋಕ್, ಹೆರಿಗೆ ಮಾಡಿಸಲು ಸಲಹೆಗಾಗಿ ವೈದ್ಯರಿಗೆ ಕರೆ ಮಾಡಿದ್ರು. ಈ ವೇಳೆ ಮನುಷ್ಯರು ಇದ್ದಿದ್ದನ್ನು ಗ್ರಹಿಸಿದ ಸಿಂಹಗಳ ಹಿಂಡು ಹತ್ತಿರದ ಪೊದೆಗಳಿಂದ ಹೊರಬಂದು ಆಂಬುಲೆನ್ಸ್ ಸುತ್ತುವರಿದವು. ಸ್ಥಳೀಯರಾಗಿದ್ದ ಆಂಬುಲೆನ್ಸ್ ಚಾಲಕ ರಾಜು ಸಿಂಹಗಳ ವರ್ತನೆ ಬಗ್ಗೆ ತಿಳಿದುಕೊಂಡಿದ್ದರಿಂದ ಅವುಗಳನ್ನ ಬೆದರಿಸಲು ಪ್ರಯತ್ನಿಸಿದ್ರು. ಆದ್ರೆ ಸಿಂಗಹಳು ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವು ಸಿಂಹಗಳು ವಾಹನದ ಮುಂದೆಯೇ ಕುಳಿತುಕೊಂಡು ರಸ್ತೆಯನ್ನ ಅಡ್ಡಗಟ್ಟಿದ್ವು ಎಂದು ಅವರು ಹೇಳಿದ್ದಾರೆ.

    ಇಷ್ಟೆಲ್ಲಾ ಆಗ್ತಿದ್ರೂ ಆಂಬುಲೆನ್ಸ್ ಒಳಗೆ ತಂತ್ರಜ್ಞ ಅಶೋಕ್ ವೈದ್ಯರ ನಿರ್ದೇಶನದಂತೆ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದ್ರು. ನಂತರ ಚಾಲಕ ರಾಜು ಗಾಡಿಯನ್ನ ಸ್ಟಾರ್ಟ್ ಮಾಡಿ ನಿಧಾನವಾಗಿ ಮುಂದೆ ಸಾಗಿದ್ರು. ಗಾಡಿ ಚಲಿಸಲು ಶುರು ಮಾಡಿದ್ದರಿಂದ ಹಾಗೂ ಆಂಬುಲೆನ್ಸ್ ಲೈಟ್‍ನ ಬೆಳಕಿನಿಂದಾಗಿ ಸಿಂಹಗಳು ರಸ್ತೆಯ ಪಕ್ಕಕ್ಕೆ ಹೋಗಿದ್ದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟವು ಎಂದು ಚೇತನ್ ವಿವರಿಸಿದ್ದಾರೆ.

    ಸದ್ಯ ಮಹಿಳೆ ಹಾಗೂ ನವಜಾತ ಶಿಶುವನ್ನ ಜಫರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.