Tag: ಗಿರೀಶ್ ಕುಮಾರ್

  • ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸಚಿವ ಮಹದೇವಪ್ಪ

    ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸಚಿವ ಮಹದೇವಪ್ಪ

    ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಉಗ್ರಂ ಖ್ಯಾತಿಯ ತಿಲಕ್ ಶೇಖರ್ (Tilak Shekhar) ನಾಯಕರಾಗಿ ನಟಿಸಿರುವ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ (Gangster Alla Frankster) ಚಿತ್ರದ ಟ್ರೈಲರ್ (Trailer) ಇತ್ತೀಚೆಗೆ ಬಿಡುಗಡೆಯಾಯಿತು. ‌ಸಚಿವ ಹೆಚ್.ಸಿ. ಮಹದೇವಪ್ಪ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಆನಂದ್ ಆಡಿಯೋ ಶ್ಯಾಮ್ ಅವರು ಸಹ ಸಮಾರಂಭಕ್ಕೆ ಆಗಮಿಸಿ ಯಶಸ್ಸನ್ನು ಹಾರೈಸಿದರು.

    ಈ ಹಿಂದೆ ನಾನು ಭಾವಚಿತ್ರ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿದ್ದೇನೆ.‌ ತಿಲಕ್ ಅವರು ಗ್ಯಾಂಗ್ ಸ್ಟರ್ ಆಗಿ, ನಾನು   ಫ್ರಾಂಕ್ ಸ್ಟರ್ ಆಗಿ ನಟಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇದು ಯೂಟ್ಯೂಬರ್ ಒಬ್ಬನ ಕಥೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸಚಿವರಿಗೆ ಹಾಗೂ ಗಣ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಹಾಗೂ ನಟ ಗಿರೀಶ್ ಕುಮಾರ್. ಇದನ್ನೂ ಓದಿ:Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಚಾರ್ಲಿ 777 ಅತ್ಯುತ್ತಮ ಪ್ರಾದೇಶಿಕ ಚಿತ್ರ

    ನಾನು ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡಿದ್ದೇನೆ. ಗಿರೀಶ್ ಕುಮಾರ್ (Girish Kumar) ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಜನರಿಗೆ ಹತ್ತಿರವಾಗಲಿದೆ ಎಂದು ನಾಯಕ ತಿಲಕ್ ಶೇಖರ್ ತಿಳಿಸಿದರು.  ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಹಾಗೂ ಚಿತ್ರದ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ್ದೇನೆ.‌ ಚಿತ್ರದಲ್ಲಿ ನಾನು‌ ಸಹ ಗ್ಯಾಂಗ್ ಸ್ಟರ್ ಎಂದರು ಗಿರೀಶ್ ಬಿಜ್ಜಳ್.

    ನಾಯಕಿ ವಿರಾನಿಕ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ.  ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.   ತಿಲಕ್ , ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂಟಿಂಗ್ ಮುಗಿಸಿದ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಸಿನಿಮಾ

    ಶೂಟಿಂಗ್ ಮುಗಿಸಿದ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಸಿನಿಮಾ

    ತಿಲಕ್ ಶೇಖರ್(ಉಗ್ರಂ ಖ್ಯಾತಿ) (Tilak Shekhar) ‘ಗ್ಯಾಂಗ್ ಸ್ಟರ್’ (Gangster) ಆಗಿ ಹಾಗೂ ಗಿರೀಶ್ ಕುಮಾರ್ ಬಿ (Girish Kumar)  ‘ಫ್ರಾಂಕ್ ಸ್ಟರ್’ (Frankster) ಆಗಿ ನಟಿಸಿರುವ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮುಖ್ಯಪಾತ್ರದಲ್ಲಿ ನಟಿಸಿರುವ ಗಿರೀಶ್ ಕುಮಾರ್ ಬಿ ಈ ಚಿತ್ರದ ನಿರ್ದೇಶಕರು ಹೌದು‌‌‌.  ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ.

    ಕಾಮಿಡಿ – ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗಿರೀಶ್ ಕುಮಾರ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ “ಭಾವಚಿತ್ರ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಅವರಿಗೆ ಇದು ಮೂರನೇ ಚಿತ್ರ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಫಸ್ಟ್ ಸಾಂಗ್ ಔಟ್

    ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಖ್ಯಾತ  ಆನಂದ್ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಬಿಡುಗಡೆಯಾಗಲಿದೆ. ಅಜಯ್ ಕುಮಾರ್ ಛಾಯಾಗ್ರಹಣ, ರತೀಶ್ ಕುಮಾರ್ ಸಂಕಲನ ಹಾಗೂ ಗಿರೀಶ್ ಬಿಜ್ಜಳ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

    ತಿಲಕ್ , ಗಿರೀಶ್ ಕುಮಾರ್, ವಿರಾಣಿಕ ಶೆಟ್ಟಿ, ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾ ಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.