Tag: ಗಿರೀಶ್ ಕಾಸರವಳ್ಳಿ

  • ‘ಸಂಗಮೇಶ್ವರ ಮಹಾರಾಜರ’ ಚಿತ್ರಕ್ಕೆ ಚಾಲನೆ ನೀಡಿದ ಕಾಸರವಳ್ಳಿ

    ‘ಸಂಗಮೇಶ್ವರ ಮಹಾರಾಜರ’ ಚಿತ್ರಕ್ಕೆ ಚಾಲನೆ ನೀಡಿದ ಕಾಸರವಳ್ಳಿ

    ಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” (Samarth Sadhguru Sangameshwara Maharaj) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ಆರಂಭವಾಯಿತು. ಇಂಚಗೇರಿಯ ಶ್ರೀ ಸ.ಸ.ಪ್ರಭುಜೀ ಮಾಹಾರಾಜರ ಸಾನಿಧ್ಯದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ (Girish Kasaravalli) ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

    ಇಂಚಗೇರಿಯ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರಯನ್ನು ಚಿತ್ರ‌  ಮಾಡಿ ಎಂದು ನಾನು ಎರಡು ವರ್ಷಗಳ ಹಿಂದೆ ನಿರ್ಮಾಪಕ ಮಾಧವಾನಂದ ಅವರಿಗೆ ತಿಳಿಸಿದೆ. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಇಂಚಗೇರಿ ಸಂಪ್ರದಾಯಕ್ಕೆ ಅದರದೆ ಆದ ಮಹತ್ವವಿದೆ‌. ಅದನ್ನು ಶ್ರೀಸಂಗಮೇಶ್ವರ ಮಹಾರಾಜರು ಪಾಲಿಸಿಕೊಂಡು ಬರುತ್ತಿದ್ದರು. ಕಲಿಯುಗದ ಕಲ್ಪತರುವೆಂದೆ ಖ್ಯಾತರಾಗಿರುವ ಶ್ರೀಸಂಗಮೇಶ್ವರರ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶ್ರೀಪ್ರಭುಜೀ ಮಹಾರಾಜರು ಆಶೀರ್ವದಿಸಿದರು.

    ನಾನು ಈ ಚಿತ್ರದ ಮುಹೂರ್ತಕ್ಕೆ ಬರಲು ನಿರ್ಮಾಪಕ ಹಾಗೂ ನಿರ್ದೇಶಕರು ಇಬ್ಬರು ಕಾರಣ. ಏಕೆಂದರೆ, ಅವರಿಬ್ಬರು ನನ್ನ “ತಾಯಿಸಾಹೇಬ” ಚಿತ್ರದ ಸಮಯದಲ್ಲಿ ಸಹಾಯ ಮಾಡಿದ್ದಾರೆ. ಇನ್ನು ಶ್ರೀಸಂಗಮೇಶ್ವರ ಮಹಾರಾಜರ ಚರಿತ್ರೆ ಕೇಳಿದಾಗ ಆಶ್ಚರ್ಯವಾಯಿತು. ನೀವು ತೆರೆಯಮೇಲೆ ಅವರನ್ನು ಪವಾಡ ಪುರುಷರಂತೆ ತೋರಿಸದೆ, ಮಹಾನ್ ಸಾಧಕರ ರೀತಿ ತೋರಿಸಿ ಎಂದು ಸಲಹೆ ನೀಡಿದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಚಿತ್ರಕ್ಕೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

    ಶ್ರೀಪ್ರಭುಜೀ ಮಹಾರಾಜರು ಹೇಳಿದಂತೆ ಇಂದು ಶ್ರೀ ಸಂಗಮೇಶ್ವರ ಮಹಾರಾಜರ ಕುರಿತಾದ ಚಿತ್ರಕ್ಕೆ ಚಾಲನೆ ದೊರಕಿದೆ. ಚಾಲನೆ ನೀಡಿದ ಪ್ರಭು ಮಹಾರಾಜರಿಗೆ ಹಾಗೂ ಗಿರೀಶ್ ಕಾಸರವಳ್ಳಿ ಅವರಿಗೆ ಧನ್ಯವಾದ. ಮುಂದಿನ ತಿಂಗಳಿನಿಂದ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ನೂತನ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ನಿರ್ದೇಶಕ ರಾಜಾ ರವಿಶಂಕರ್ ತಿಳಿಸಿದರು. ನಾನು ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಿಸಿದ್ದೆ. ಇದು ಮೂರನೇಯ ಚಿತ್ರ. ಶ್ರೀಸಂಗಮೇಶ್ವರ ಮಹಾರಾಜರ ಸಾಧನೆಗಳು ಅಪಾರ. ಆ ಸಾಧನೆಗಳನ್ನು ಚಿತ್ರದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಮಾಧವಾನಂದ ಯೋಗಪ್ಪ ಶೇಗುಣಸಿ ತಿಳಿಸಿದರು.

    ತಮ್ಮ ಪಾತ್ರದ ಬಗ್ಗೆ ರವಿ ನಾರಾಯಣ್ ವಿವರಣೆ ನೀಡಿದರು. ಸಂಗೀತ ನಿರ್ದೇಶಕ ಎ.ಟಿ.ರವೀಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಗು ಇಂಚಗೇರಿ ಸಂಪ್ರದಾಯದ ಭಕ್ತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ಗೆ ರೆಸ್ಟೋರೇಷನ್ ಭಾಗ್ಯ

    ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ಗೆ ರೆಸ್ಟೋರೇಷನ್ ಭಾಗ್ಯ

    ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿಯವರು (Girish Kasaravalli) 1978ರಲ್ಲಿ ನಿರ್ದೇಶಿಸಿದ್ದ ಡಾ.ಯು. ಆರ್. ಅನಂತಮೂರ್ತಿಯವರ ಕತೆ ಆಧರಿಸಿದ ಚಿತ್ರ ಘಟಶ್ರಾದ್ಧ (Ghatasraddha) ಹಲವು ಪ್ರಥಮಗಳನ್ನು ಕನ್ನಡಕ್ಕೆ ತಂದುಕೊಟ್ಟ ಚಿತ್ರ. 90 ವರ್ಷಗಳ ಕನ್ನಡ ಚಿತ್ರ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ಮಾತ್ರ ರಾಷ್ಟ್ರಪತಿಗಳ ಸ್ವರ್ಣ ಕಮಲ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳಾಗಿವೆ. ಘಟಶ್ರಾದ್ಧ ಆ ಸರಣಿಯಲ್ಲಿ ಮೊದಲನೆಯದು. ಭಾರತೀಯ ಸಿನಿಮಾದ ಶತಮಾನೋತ್ಸವ ಸಂಧರ್ಭದಲ್ಲಿ ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ಈ ಚಿತ್ರ ಅನೇಕ ಅಂತಾರಾಷ್ಟೀಯ ಮನ್ನಣೆ ಗಳಿಸಿತ್ತು. ಇದೀಗ ಅದಕ್ಕೆ ಪುನರುಜ್ಜೀವನ (Restoration)ದ ಅವಕಾಶ ಸಿಕ್ಕಿದೆ.

    ಜಾಗತಿಕ ಸಿನಿಮಾದ ಶ್ರೇಷ್ಠ ನಿರ್ದೇಶಕರೊಲ್ಲೊಬ್ಬರಾದ ಹಾಲಿವುಡ್ ಚಿತ್ರರಂಗದ ಮಾರ್ಟಿನ್ ಸ್ಕಾರ್ಸೆಸಿಯವರ (Martin Scorsese) ಸಿನಿಮಾ ಫೌಂಡೇಷನ್ ಮತ್ತು ಶಿವೇಂದ್ರ ಸಿಂಗ್ ಅವರ ಫಿಲ್ಮ್ ಹೆರಿಟೇಜ್ ಫೌಂಡೇಷನ್ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ಗೆ ಕೈಜೋಡಿಸಿದ ಸಂಸ್ಥೆ ಹಾಲಿವುಡ್ ಚಿತ್ರರಂಗದ ಸ್ಟಾರ್‌ವಾರ್ಸ್ ಚಿತ್ರ ಸರಣಿಯ ನಿರ್ದೇಶಕ ಜಾರ್ಜ್ ಲ್ಯೂಕಾಸ್ ತಮ್ಮ ಪತ್ನಿಯ ಜೊತೆ ಸೇರಿ ರೂಪಿಸಿದ ಹಾಬ್ಸನ್- ಲ್ಯೂಕಾಸ್  ಫೌಂಡೇಶನ್.

    ಮಾರ್ಟಿನ್ ಸ್ಕಾರ್ಸೆಸಿಯವರ ಸಿನಿಮಾ ಫೌಂಡೇಷನ್‌ನ ವಿಶ್ವ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಜಾಗತಿಕ ಸಿನಿಮಾ ರಂಗದಲ್ಲಿನ ಶ್ರೇಷ್ಠ ಚಿತ್ರಗಳನ್ನು ಹುಡುಕಿ ಅವುಗಳ ಪುನರುಜ್ಜೀವನ ಮಾಡುತ್ತಿದೆ. ಆ ಯೋಜನೆಯಲ್ಲಿ ಭಾರತದಿಂದ ಆಯ್ಕೆಯಾದ ಮೂರನೆಯ ಚಿತ್ರ ಘಟಶ್ರಾದ್ಧ. ಈಗಾಗಲೇ ಅವರು ಅರವಿಂದನ್ ನಿರ್ದೇಶನದ ಮಲೆಯಾಳಂ ಚಿತ್ರ ‘ತಂಪ್’ ಹಾಗೂ ಅರಿಭಾಮ್ ಶ್ಯಾಂ ಶರ್ಮ ಅವರ ಮಣಿಪುರಿ ಭಾಷೆಯ ‘ಇಶಾನು’ ಚಿತ್ರಗಳ ಪುನರುಜ್ಜೀವನವನ್ನು ಕೈಗೆತ್ತಿಕೊಂಡಿತ್ತು. ಈ ಎರಡೂ ಚಿತ್ರಗಳೂ ಈ ವರ್ಷದ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದವು.

    ಈ ಸಾಲಿನ ಬಿ.ವಿ.ಕಾರಂತ ಪ್ರಶಸ್ತಿ ಪಡೆದ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ನಿರ್ಮಿಸಿದ ಈ ಚಿತ್ರಕ್ಕೆ ಎಸ್.ರಾಮಚಂದ್ರ ಐತಾಳ್‌ರ ಛಾಯಾಗ್ರಹಣ, ಬಿ.ವಿ.ಕಾರಂತರ ಸಂಗೀತ. ಕೆ.ವಿ.ಸುಬ್ಬಣ್ಣನವರ ಕಲಾನಿರ್ದೇಶನ ಇದ್ದು ಮೀನಾ, ಅಜಿತ್ ಕುಮಾರ್, ನಾರಾಯಣ ಭಟ್, ಬಿ. ಸುರೇಶ ಮೊದಲಾದವರ ಅಭಿನಯವಿತ್ತು.

    ಈ ಚಿತ್ರದ ಪುನರುಜ್ಜೀವನ ಮಾಡಲು ಕಾಸರವಳ್ಳಿಯವರ ಚಿತ್ರಗಳ ಬಗ್ಗೆ ವಿಶೇಷ ಒಲವು ಇರುವ ಶಿವೇಂದ್ರ ಸಿಂಗ್ ಅವರ ಫಿಲ್ಮ್ ಹೆರಿಟೇಜ್ ಫೌಂಡೇಷನ್‌ನ ಶ್ರಮ ಉಲ್ಲೇಖಾರ್ಹವಾಗಿದೆ. ಕಾಸರವಳ್ಳಿಯವರು ತಮ್ಮೆಲ್ಲ ಚಿತ್ರಗಳ ಹಾಗೂ ಚಿತ್ರ ಸಾಮಗ್ರಿಗಳನ್ನು ಈ ಫೌಂಡೇಷನ್‌ಗೆ ನೀಡಿದ್ದು ಆ ಸಂಸ್ಥೆ ಆ ಸಾಮಗ್ರಿಗಳನ್ನು ಎಚ್ಚರದಿಂದ ಸಂರಕ್ಷಿಸುವ ಹೊಣೆ ಹೊತ್ತಿದೆ.

     

    ಸುಮಾರು 8 ತಿಂಗಳ ಕಾಲ ಹಿಡಿಯುವ ಈ ಪುನರುಜ್ಜೀವನ ಕೆಲಸವನ್ನು ವಿಶ್ವದ ಪ್ರತಿಷ್ಠಿತ ಸಿನಿಮಾ ಪುನರುಜ್ಜೀವನ ಸಂಸ್ಥೆಯಾದ ಇಟಲಿಯ ಲ ಇಮ್ಯಾಜಿನ್ ರಿಟ್ರೋವಟ ಕೈಗೆತ್ತಿಕೊಂಡಿದೆ.

  • Special- ಮೈಸೂರಿನಲ್ಲಿ ಫಿಲ್ಮ್ ಸಿಟಿ: ಸಿಎಂಗೆ ಕೊಟ್ಟ ಪತ್ರದಲ್ಲಿ ಏನಿದೆ?

    Special- ಮೈಸೂರಿನಲ್ಲಿ ಫಿಲ್ಮ್ ಸಿಟಿ: ಸಿಎಂಗೆ ಕೊಟ್ಟ ಪತ್ರದಲ್ಲಿ ಏನಿದೆ?

    ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಮೈಸೂರಿನಲ್ಲಿ (Mysore) ಫಿಲ್ಮ್ ಸಿಟಿ ಆಗುವ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಮೊನ್ನೆಯಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ (Girish Kasaravalli), ಪಿ. ಶೇಷಾದ್ರಿ, ಬಿ.ಎಸ್.ಲಿಂಗದೇವರು (Lingadevaru), ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಟ ಶ್ರೀನಿವಾಮೂರ್ತಿ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟಿಯರಾದ ಅಕ್ಷತಾ ಪಾಂಡವಪುರ, ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮೈಸೂರಿನಲ್ಲೇ ಫಿಲ್ಮ್ ಸಿಟಿ (Filmy City) ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

    ಮನವಿ ಪತ್ರದಲ್ಲೇನಿದೆ?

    ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ತಾವು ಆಧಿಕಾರ ಸ್ವೀಕರಿಸಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ ಮತ್ತು ತಮಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ತಾವು ಮೊದಲಿನಿಂದಲೂ ಕನ್ನಡ ಚಿತ್ರರಂಗದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸಿದ್ದೀರಿ. ಅವುಗಳಲ್ಲಿ ಮೈಸೂರು ವರುಣ ಕ್ಷೇತ್ರದಲ್ಲಿ ಚಿತ್ರನಗರಿ ಘೋಷಣೆ ಮಾಡಿದ್ದು ಕೂಡ ಒಂದು. ಸುಮಾರು ಆರು ವರ್ಷಗಳಿಂದ ಮೈಸೂರಿನ ಚಿತ್ರನಗರಿ ಕಾರ್ಯ ಕುಂಟುತ್ತಾ ನಡೆಯುತ್ತಿದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ವಿಷಾದ ಎನ್ನಿಸುತ್ತಿದೆ.

    ಈಗ ತಮ್ಮ ಗಮನಕ್ಕೆ ತರುವುದೇನೆಂದರೆ ಸದರಿ ಚಿತ್ರನಗರಿಗೆ ಈಗಾಗಲೇ ಭೂಮಿ ಮತ್ತು ರೂ 500 ಕೋಟಿಗಳ ಮಂಜೂರು ಆಗಿದ್ದು, ಕೆಐಎಡಿಬಿ ಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಚಿತ್ರನಗರಿಗೆ ಬೇಕಾದ ಭೂಮಿಯ ಹಸ್ತಾಂತರ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕೆಐಎಡಿಬಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಣ ಸಂದಾಯದ ವಿಷಯದಲ್ಲಿ ಸಮಸ್ಯೆ ಉಂಟಾಗಿ ಮೈಸೂರಿನ ಚಿತ್ರನಗರಿ ಕಾರ್ಯ ಸ್ಥಗಿತಗೊಂಡಿದೆ. ತಾವು ದಯವಿಟ್ಟು ಈ ವಿಷಯದಲ್ಲಿ ಕೆಐಎಡಿಬಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಚಿತ್ರನಗರದ ಕಾರ್ಯಕ್ಕೆ ವೇಗ ಕೊಡಬೇಕಾಗಿ ವಿನಂತಿ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್

    ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ಮತ್ತು ಚಲನಚಿತ್ರರಂಗದಲ್ಲಿ ದುಡಿಯುತ್ತಿರು ಎಲ್ಲಾ ತಂತ್ರಜ್ಞರು ಮತ್ತು ಕಲಾವಿದರಿಗಾಗಿ ಯೋಜಿತ ಚಿತ್ರನಗರಿ ಪಕ್ಕದಲ್ಲಿ ನಿವೇಶನ ಕಲ್ಪ್ಪಿಸಲು ಗಂಧದ ಗುಡಿ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಸ್ಥಾಪನೆಗೊಂಡಿದ್ದು, ದಿನಾಂಕ 15.10.2022 ರಂದು ಸದರಿ ಗೃಹ ನಿರ್ಮಾಣ ಸಂಘಕ್ಕೆ ರಿಯಾಯತಿ ದರದಲ್ಲಿ ಭೂಮಿ ಮಂಜೂರು ಮಾಡಲು ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಧನಾತ್ಮಕವಾಗಿ ಸ್ಪಂದಿಸಿ. ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು ರವರಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದರು. ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ತಮ್ಮ ಪತ್ರ ದಿನಾಂಕ 7.11.2022ರ ಮೂಲಕ ಮಾನ್ಯ ತಹಶೀಲ್ದಾರ್, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಇವರಿಗೆ ನಿಯಮಾನುಸಾರ ಸ್ಥಳ ಪರಿಶೀಲನೆ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದರು. ಮಾನ್ಯ ತಹಶೀಲ್ದಾರ್, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಇವರು  ತಮ್ಮ ಪತ್ರದ ದಿನಾಂಕ 20.12.2022 ರಲ್ಲಿ ರಾಜಸ್ವ ನಿರೀಕ್ಷಕರು, ಚಿಕ್ಕಯ್ಯನಛತ್ರ ಹೋಬಳಿ ಇವರಿಗೆ ನಿಯಮಾನುಸಾರ ಸ್ಥಳ ಪರಿಶೀಲನೆ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದಾರೆ.

    ಎಲ್ಲಾ ಕಲಾಪ್ರಕಾರಗಳ ಸಂಯೋಜಿತ, ಸೃಜನಶೀಲ ಕಲೆ ಸಿನಿಮಾ. ಇದರಲ್ಲಿ ಪಾಲ್ಗೊಳ್ಳುವ ಸೃಜನಶೀಲರು ಕಲಾವಿದರು ಮತ್ತು ತಂತ್ರಜ್ಞರು. ಸಿನಿಮಾವನ್ನು ಕೇವಲ ಕಲೆ ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ ಅದು ಉದ್ಯಮವೂ ಆಗಿ ಈಗ ಕಲೋದ್ಯಮ ಎಂಬುದಾಗಿ ಕರೆಯಲಾಗುತ್ತಿದೆ. ರಾಷ್ಟ್ರ ಕಟ್ಟುವ ಕೆಲಸಕ್ಕೆ ಅತ್ಯಂತ ಹೆಚ್ಚು ತೆರಿಗೆ ಕಟ್ಟುತ್ತಿರುವುದರಲ್ಲಿ ಈ ಕಲೋದ್ಯಮವೂ ಒಂದು. ಒಂದೇ ಭೂ ಪ್ರದೇಶದಲ್ಲಿ ಚಿತ್ರನಗರಿ ಮತ್ತು ತಂತ್ರಜ್ಞರು ಮತ್ತು ಕಲಾವಿದರಿಗಾಗಿ ನಿವೇಶನ ಮಾಡಿದಲ್ಲಿ ದೇಶಕ್ಕೆ ಒಂದು ಮಾದರಿ ಆಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.

    ಈ ಎಲ್ಲ ಹಿನ್ನಲೆಯಲ್ಲಿ ಕನ್ನಡ ಚಿತ್ರೋದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಮೈಸೂರಿನಲ್ಲಿ ಚಿತ್ರನಗರಿ ಚಾಲನೆ ಆಗಬೇಕಾಗಿದೆ ಮತ್ತು ಗಂಧದ ಗುಡಿ ಗೃಹ ನಿರ್ಮಾಣ ಸಹಕಾರ ಸಂಘ (ನಿ)ಕ್ಕೆ ರಿಯಾಯತಿ ದರದಲ್ಲಿ ಭೂಮಿ ಮಂಜೂರು ಮಾಡಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಸುದೀರ್ಘವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಅವಧಿಯಲ್ಲಾದರೂ ಫಿಲ್ಮ್ ಸಿಟಿ ಆಗತ್ತಾ ಕಾದು ನೋಡಬೇಕು.

  • ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ: ಅಪ್ಪು ಹೆಸರಿನಲ್ಲಿ ನೆನಪಿನ ಕಾಣಿಕೆ

    ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ: ಅಪ್ಪು ಹೆಸರಿನಲ್ಲಿ ನೆನಪಿನ ಕಾಣಿಕೆ

    ದು ದಿನಗಳಿಂದ ನಡೆಯುತ್ತಿದ್ದ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ (Chirotsava) ತೆರೆ ಕಂಡಿದೆ. ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿರುವ ಮಕ್ಕಳ ಚಲನಚಿತ್ರೋತ್ಸವ ಅದ್ಭುತ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾಗಿದೆ. ಮೊದಲ ಚಲನಚಿತ್ರೋತ್ಸವವನ್ನು ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಅರ್ಪಣೆ ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ ನೀಡಲಾಯಿತು.

    ಫೆಬ್ರವರಿ 22ರಿಂದ ಒಟ್ಟು ಐದು ದಿನಗಳ ಕಾಲ ನಡೆದಿದ್ದ ಚಲನಚಿತ್ರೋತ್ಸವದಲ್ಲಿ ಕನ್ನಡ ಒಳಗೊಂಡಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶನಗೊಂಡಿದೆ. ಇಂದು ಚಲನಚಿತ್ರೋತ್ಸವ ಅದ್ದೂರಿಯಾಗಿ ತೆರೆ ಕಂಡಿದ್ದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ (Girish Kasaravalli), ಎಸ್.ನಾರಾಯಣ್, ವಿ.ನಾಗೇಂದ್ರ ಪ್ರಸಾದ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ (B.M. Harish), ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಉಲ್ಲಾಸ್, ಕಾರ್ಯಕ್ರಮ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು, ನಿರ್ದೇಶಕ ಹರಿ ಸಂತೋಷ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್ ರಾಜ್  ಸೇರಿದಂತೆ ಹಲವರು ಭಾಗಿಯಾಗಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ರು. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್

    ಕಾರ್ಯಕ್ರಮದಲ್ಲಿ ಎಸ್.ನಾರಾಯಣ್ ಮಾತನಾಡಿ ಇದು ಚಲನಚಿತ್ರೋತ್ಸವ ಮುಕ್ತಾಯ ಸಮಾರಂಭ ಅಲ್ಲ ನನ್ನ ಪ್ರಕಾರ ಇದು ಆರಂಭ. ಈ ವೇದಿಕೆ ಬಳಸಿಕೊಂಡು ಹಲವರ ಪ್ರತಿಭೆ ಅನಾವರಣವಾಗಲಿ. ಸುಂದರವಾದ ವಿಚಾರ ಅಂದ್ರೆ ಅಪ್ಪು ಹೆಸರಲ್ಲಿ ಈ ಪ್ರಶಸ್ತಿ ಕೊಡುತ್ತಿರೋದು ಹೆಮ್ಮೆಯ ವಿಚಾರ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಅದ್ಭುತವಾದ ಪ್ರಶಸ್ತಿಯೇ ಅಪ್ಪು. ಅವರ ಹೆಸರಲ್ಲಿ ಅರ್ಥಪೂರ್ಣವಾಗಿ ಚಲನಚಿತ್ರೋತ್ಸವನ್ನು ಆಚರಿಸಲಾಗುತ್ತಿದೆ. ಪ್ರಶಸ್ತಿ ಸಿಕ್ಕವರಿಗೆಲ್ಲ ಅಭಿನಂದನೆಗಳು ಎಂದು ಎಲ್ಲರಿಗೂ ಶುಭ ಹಾರೈಸಿದ್ರು.

    ಪ್ರಶಸ್ತಿ ವಿವರ:

    ಅತ್ಯುತ್ತಮ ಮಕ್ಕಳ ಚಿತ್ರ

    ಮೊದಲ ಸ್ಥಾನ: ದಿ ಗಾರ್ಡ್

    ಎರಡನೇ ಸ್ಥಾನ:  ಗಾಂಧಿ ಮತ್ತು ನೋಟು

    ಮೂರನೇ ಸ್ಥಾನ: ಕೇಕ್

    ಅತ್ಯುತ್ತಮ ನಿರ್ದೇಶಕಿ: ಆಶಾ ದೇವಿ.ಡಿ (ಓ ನನ್ನ ಚೇತನ)

    ಅತ್ಯುತ್ತಮ ಸಂಕಲನಕಾರ: ವಸಂತ್ ಕುಮಾರ್ (ಗಾಂಧಿ ಮತ್ತು ನೋಟು)

    ಅತ್ಯುತ್ತಮ ಛಾಯಾಗ್ರಾಹಕ: ರಾಜು ಎನ್.ಎಂ ( ಮನ್ 3)

    ಅತ್ಯುತ್ತಮ ಸಂಗೀತ ನಿರ್ದೇಶಕಿ: ವಾಣಿ ಹರೀಕೃಷ್ಣ (ಗಾಂಧಿ ಮತ್ತು ನೋಟು)

    ಅತ್ಯುತ್ತಮ ನಿರ್ಮಾಣ ಸಂಸ್ಥೆ: ಪೂಜಾ ಘೋಯಲ್ ( ನಮ್ಮ ಅರಣ್ಯ ಪ್ರದೇಶ)

    ಅತ್ಯುತ್ತಮ ಚಿತ್ರಕಥೆ: ಉಮೇಶ್ ಬಡಿಗೇರ್ ( ದಿ ಗಾರ್ಡ್)

    ಅತ್ಯುತ್ತಮ ಬಾಲನಟ: ತರುಣ್( ಮಸಣದ ಹೂವು)

    ಅತ್ಯುತ್ತಮ ಬಾಲನಟಿ: ದಿವಿಜ (ಗಾಂಧಿ ಮತ್ತು ನೋಟು)

    ಅತ್ಯುತ್ತಮ ಬಾಲ ನಟ ವಿಮರ್ಶಕರ ಆಯ್ಕೆ: ಮಹೇಂದ್ರ (ನನ್ನ ಹೆಸರು ಕಿಶೋರ)

    ಅತ್ಯುತ್ತಮ ಬಾಲನಟಿ ವಿಮರ್ಶಕರ ಆಯ್ಕೆ: ದೀಕ್ಷಾ. ಡಿ. ರೈ (ಪೆನ್ಸಿಲ್ ಬಾಕ್ಸ್)

    ಅತ್ಯುತ್ತಮ ಪೋಷಕ ನಟ: ಕಾರ್ತಿಕ್ (ಮೂಕ ಜೀವ)

    ಅತ್ಯುತ್ತಮ ಪೋಷಕ ನಟಿ: ಅರುಣಾ ಬಾಲರಾಜ್ (ನಹಿ ಜ್ಞಾನೇನ ಸದೃಶಂ)

  • ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ: ಗಿರೀಶ್ ಕಾಸರವಳ್ಳಿ ಮೆಚ್ಚುಗೆ

    ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ: ಗಿರೀಶ್ ಕಾಸರವಳ್ಳಿ ಮೆಚ್ಚುಗೆ

    ನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಇಂದಿಲ್ಲಿ ಹೇಳಿದರು. ‘ಸಂಸ್ಕಾರ’ , ‘ಸ್ಕೂಲ್ ಮಾಸ್ಟರ್ ‘ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು‌ ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ,  ಅದನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವನ್ನು  ಉದ್ಘಾಟಿಸಿ, ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸಬೇಕು, ಆ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ  ಆಚೆಗೂ  ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು.

    ‘ಕನ್ನಡದಲ್ಲಿ  ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. ‘‌ಕಾಂತಾರ ‘ ತನ್ನ ಅಸ್ಮಿತೆಯಿಂದ ದೇಶವಿದೇಶಗಳಲ್ಲಿ ಯಶಸ್ಸು ಗಳಿಸಿತು. ಆದರೆ ‘ಕೆಜಿಎಫ್’ ಹಾಗಲ್ಲ, ಅದರ ಗೆಲುವಿಗೆ ಬೇರೆಯದೇ  ಆದ ಕಾರಣ ಇದೆ. ಕನ್ನಡದಲ್ಲಿ ಬೇರೆಯೇ ರೀತಿಯ ಚಿತ್ರಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿದೆ. ‘ಬಳೆ ಕೆಂಪ’,  ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಜಗತ್ತಿನಾದ್ಯಂತ  ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲ ಅಷ್ಟೇ’ ಎಂದು ಅವರು ಹೇಳಿದರು.  ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ದಲಿತ, ಬಂಡಾಯ ಸಾಹಿತ್ಯ ಕನ್ನಡ ಚಿತ್ರರಂಗದಲ್ಲಿ ಚಿತ್ರ ಗೀತೆಯಲ್ಲಿ ಬಂದಿದೆ. ಆದರೆ  ಸಿನಿಮಾದಲ್ಲಿ ಬಂದಿಲ್ಲ. ‌ಅದನ್ನು ದಾಖಲು ಮಾಡವ ಅಗತ್ಯವಿದೆ ಎಂದ ಅವರು, ‘ಕೃತಿಯನ್ನು ಸಮಾಜದ ಬೆಳವಣಿಗೆ, ಕಾಲ ಮತ್ತು ಕಾಲಾತೀತವಾಗಿ ನೋಡಬೇಕಾಗಿದೆ. ಪುಟ್ಟಣ್ಣ ಅವರು ಸಾಂಸ್ಕೃತಿಕ, ಧಾರ್ಮಿಕ ನಿಲುವು ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಸಿನಿಮಾ ಶೂನ್ಯದಲ್ಲಿ ಸೃಷ್ಠಿ ಆಗುವುದಿಲ್ಲ’ ಎಂದು ಹೇಳಿದರು.

    ‘ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ.  ಆಗ ಚಲನಚಿತ್ರ ಪತ್ರಕರ್ತಕರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು.  ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲ. ವಿಮರ್ಶಕ ಆಮ್ಲಜನಕದ ರೀತಿ ಕೆಲಸ ಮಾಡುತ್ತಾರೆ. ಸಿನಿಮಾ ವಿಮರ್ಶೆ ಮಾಡದಿದ್ದರೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹಿಂದೆ ಪತ್ರಕರ್ತರ ಪರಿಷತ್ ಪ್ರತಿ ವಾರ ನಡೆಸುತ್ತಿದ್ದ ವಿಮರ್ಶೆಗಳ ವಿಮರ್ಶೆ ಸಂವಾದ ಕಾರ್ಯಕ್ರಮ ನಿರ್ದೇಶಕರನ್ನು ಉತ್ತೇಜಿಸುತ್ತಿದ್ದುದನ್ನು ಹೇಳಿದರು.   ‘ವಿಮರ್ಶಕರಿಂದ ಮಾಧ್ಯಮ, ಉದ್ಯಮ ಬೆಳೆಯಲಿದೆ. ಇಲ್ಲದಿದ್ದರೆ ಸ್ಥಗಿತವಾಗಲಿದೆ. ಚಲನಚಿತ್ರ  ಪತ್ರಕರ್ತರ ಸಂಘ ಮತ್ತೊಮ್ಮೆ ಉದ್ಘಾಟನೆಯಾಗಿರುವುದು ಖುಷಿಕೊಟ್ಟಿದೆ’  ಎಂದರು.

    ಹಿರಿಯ ಪರ್ತಕರ್ತೆ ಡಾ. ವಿಜಯಾ ಮಾತನಾಡಿ, ‘ಹಿಂದಿನ ಸಂಘಟನೆಗಳು, ತಮ್ಮ ವೈಯಕ್ತಿಕ ಹಿತಾಸಕಿಗಳನ್ನು ಮರೆತು,  ಚಿತ್ರರಂಗದ ಬೆಳವಣಿಗೆಯನ್ನಷ್ಟೇ ಬಯಸಿದವು, ಇಲ್ಲಿ ಹಾಗಾಗದಂತೆ ಗಮನಹರಿಸಿದ್ದೀರಿ’ ಎಂದು ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಮತ್ತು ವಿವಿಧ ವಿಷಯಗ‌ಳ‌ ಮೇಲೆ ಬೆಳಕು ಚೆಲ್ಲಿದರು.

    ಸಂಘದ ಅಧ್ಯಕ್ಷ ಬಾ.ನಾ. ಸುಬ್ರಹ್ಮಣ್ಯ ಸಂಘದ ಕಾರ್ಯ ಚಟುವಟಿಕೆ ಉದ್ದೇಶಗಳ ಕುರಿತು ವಿವರಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್,  ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್,  ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಖಿಲ ಬಾರತ ಕಾರ್ಯನಿರತ  ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮಾಧ್ಯಮ ತಜ್ಞ ಜಿ.ಎನ್. ಮೋಹನ್,  ಹಿರಿಯ ಚಲನಚಿತ್ರ ಪತ್ರಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಸಂಸ್ಥಾಪಕ ಆಡಳಿತ ಮಂಡಳಿ : 

    ಬಿ.ಎನ್. ಸುಬ್ರಹ್ಮಣ್ಯ – ಅಧ್ಯಕ್ಷರು

    ಸುನಯನಾ ಸುರೇಶ್ – ಉಪಾಧ್ಯಕ್ಷರು

    ನಾಡಿಗೇರ್ ಚೇತನ್ – ಕಾರ್ಯಾಧ್ಯಕ್ಷರು

    ಅರುಣ್ ಕುಮಾರ್. ಜಿ – ಪ್ರಧಾನ ಕಾರ್ಯದರ್ಶಿ

    ಜಗದೀಶ್ ಕುಮಾರ್ ಎಸ್ –  ಕಾರ್ಯದರ್ಶಿ

    ಹರೀಶ್ ಸೀನಪ್ಪ – ಸಹ ಕಾರ್ಯದರ್ಶಿ

    ಕೆ.ಎಸ್.ವಾಸು – ಖಜಾಂಚಿ

    ಕಾರ್ಯಕಾರಿ ಸಮಿತಿಯ ಸದಸ್ಯರು

    ಮನೋಹರ್‌ ಆರ್

    ಮಂಜುನಾಥ್ ಎನ್

    ದೇಶಾದ್ರಿ ಹೆಚ್

    ಲಕ್ಷ್ಮೀನಾರಾಯಣ

    ಸಿ.ಜಿ. ರಮೇಶ್

    ವಿಜಯ್ ಆರ್

    ಅವಿನಾಶ್ ಜಿ.ಆರ್

    ಹರ್ಷವರ್ಧನ್ ಎಸ್‌.ಆರ್‌

    ಮಾಲತೇಶ ಹೆಚ್. ಜಗ್ಗೇನ್

    ಶಶಿಧರ ಚಿತ್ರದುರ್ಗ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫಾತಿಮಾ ‘ಛಂದ ಪುಸ್ತಕ ಬಹುಮಾನ’ ನಿರಾಕರಣೆ: ಸೋಷಿಯಲ್ ಮೀಡಿಯಾದಲ್ಲಿ ಎಡ-ಬಲ ಚರ್ಚೆ

    ಫಾತಿಮಾ ‘ಛಂದ ಪುಸ್ತಕ ಬಹುಮಾನ’ ನಿರಾಕರಣೆ: ಸೋಷಿಯಲ್ ಮೀಡಿಯಾದಲ್ಲಿ ಎಡ-ಬಲ ಚರ್ಚೆ

    ಪ್ರತಿವರ್ಷವೂ ಛಂದ ಪುಸ್ತಕ (Chanda Pushtaka) ಪ್ರಕಾಶನವು ಕಥೆಗಾರರನ್ನು ಉತ್ತೇಜಿಸುವ ಸುಲವಾಗಿ ‘ಛಂದ ಪುಸ್ತಕ ಬಹುಮಾನ’ ನೀಡುತ್ತಾ ಬಂದಿದೆ. ಮೊನ್ನೆಯಷ್ಟೇ 2022ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಘೋಷಿಸಲಾಗಿತ್ತು. ಈ ಬಾರಿಯ ಪ್ರಶಸ್ತಿಯನ್ನು ಯುವ ಬರಹಗಾರ್ತಿ ಫಾತಿಮಾ ರಲಿಯಾ (Fatima Ralia) ಪಡೆದುಕೊಂಡಿದ್ದರು. ಸತತ ಮೂರು ವರ್ಷಗಳ ಕಾಲ ಮಹಿಳೆಯರೇ ಈ ಪ್ರಶಸ್ತಿಯನ್ನು ಪಡೆದಿದ್ದರಿಂದ ಸ್ವತಃ ಸ‍ಂಸ್ಥೆಯೇ ಹೆಮ್ಮೆಯ ಮಾತುಗಳನ್ನು ಆಡಿತ್ತು. ಆದರೆ, ಹೆಮ್ಮೆಪಟ್ಟ ಸಂಗತಿಯೇ ಇದೀಗ ವಿವಾದಕ್ಕೆ ಮೂಲವಾಗಿ ಕೂತಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಫಾತಿಮಾ, ಆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

    ಅಂದುಕೊಂಡಂತೆ ನಡೆದಿದ್ದರೆ, ಮುಂದಿನ ತಿಂಗಳು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಅಂದು ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ಬಂದ ಹಸ್ತಪ್ರತಿಯು ಪುಸ್ತಕವಾಗಿ ಬಿಡುಗಡೆ ಆಗಬೇಕಿತ್ತು. ಅಂದು ಕಾರ್ಯಕ್ರಮಕ್ಕೆ ಬರುವಂತೆ ಸ್ವತಃ ಫಾತಿಮಾ ರಲಿಯಾ ಕೂಡ ಕೆಲವರಿಗೆ ಮಸೇಜ್ ಕೂಡ ಮಾಡಿದ್ದರು. ಆದರೆ, ಇದೀಗ ಪ್ರಶಸ್ತಿಯನ್ನೇ ನಿರಾಕರಿಸಿ ಚರ್ಚೆಗೆ ಕಾರಣವಾಗಿದ್ದಾರೆ. ಛಂದ ಸಂಸ್ಥೆಗೆ ಕಳುಹಿಸಿರುವ ಇಮೇಲ್ ನಲ್ಲಿ ‘ವೈಯಕ್ತಿಕ ಕಾರಣದಿಂದಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ’ ಎಂದು ಬರೆದಿದ್ದಾರೆ. ಹಾಗಾಗಿ ಛಂದ ಪ್ರಕಾಶನದ ವಸುಧೇಂದ್ರ ಕೂಡ ಆ ಬರಹಗಾರ್ತಿಯ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಪ್ರಶಸ್ತಿ ನಿರಾಕರಣೆಯ ಹಿಂದೆ ಹಲವು ಅನುಮಾನಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ. ರಲಿಯಾ ಕಳುಹಿಸಿದ್ದ ಹಸ್ತಪ್ರತಿಯಲ್ಲಿ ಮುಸ್ಲಿಂ ಮಹಿಳೆಯರ ತಲ್ಲಣಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪುಸ್ತಕವನ್ನು ಪ್ರಕಟಿಸದಂತೆ ಮತ್ತು ಬಹುಮಾನವನ್ನು ಪಡೆಯದಂತೆ ರಲಿಯಾಗೆ ಒತ್ತಡವನ್ನೂ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ವೈಯಕ್ತಿಕ ಕಾರಣ ನೀಡಿ, ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲೂ ಇವರಿಗೆ ಬಹುಮಾನ ಬಂದಿತ್ತು. ಕಾರ್ಯಕ್ರಮಕ್ಕೆ ಬರದೇ ಇದ್ದರೂ, ಆ ಪ್ರಶಸ್ತಿಯನ್ನು ಮತ್ತು ನಗದು ಬಹುಮಾನವನ್ನು ಅವರು ಸ್ವೀಕರಿಸಿದ್ದಾರೆ. ಛಂದ ಪುಸ್ತಕ ಬಹುಮಾನವನ್ನು ಮಾತ್ರ ನಿರಾಕರಿಸಿದ್ದಾರೆ. ಹಾಗಾಗಿ ಅನೇಕ ಪ್ರಶ್ನೆಗಳು ಮೂಡಿವೆ.

    ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಛಂದ ಪುಸ್ತಕದ ವಸುಧೇಂದ್ರ (Vasudhendra), ‘ಆ ಹುಡುಗಿ ವೈಯಕ್ತಿಕ ಕಾರಣ ಎಂದು ಹೇಳಿ ಬಹುಮಾನವನ್ನು ನಿರಾಕರಿಸಿದ್ದಾರೆ. ವೈಯಕ್ತಿಕ ಕಾರಣ ಅಂತ ಹೇಳಿದ ಮೇಲೆ ನಾವೂ ಅದನ್ನು ಕೇಳಲು ಹೋಗಿಲ್ಲ. ನಿರಾಕರಣೆಯ ಹಿಂದೆ ಅವರ ಧರ್ಮದವರು ಇದ್ದಾರೆ ಎನ್ನುವುದನ್ನು ನಾನು ಒಪ್ಪಲಾರೆ. ಈ ಬಹುಮಾನ ಬಂದಾಗ ಅವರ ಧರ್ಮದವರೇ ಸಂಭ್ರಮಿಸಿದ್ದಾರೆ. ಈಗಾಗಲೇ ರಲಿಯಾ ಒಂದು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ನಿರಾಕರಣೆಗೆ ಬೇರೆ ಬಣ್ಣ ಕೊಡುವುದು ಬೇಡ’ ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರು, ’ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷವೇ ಪ್ರಕಟಿಸಿದ್ದಾರೆ. ಕಳೆದ ವಾರವಷ್ಟೇ ವಿಜಯ ಕರ್ನಾಟಕ ಕಥಾ ಸ್ಪರ್ಧೆಯ ಬಹುಮಾನವನ್ನೂ ಇವರು ಪಡೆದಿದ್ದಾರೆ. ಛಂದ ಪುಸ್ತಕ ಬಹುಮಾನವಾಗಿ 40,000 ರೂಪಾಯಿ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆಯಲಿದ್ದರು.

    ಈ ಬಾರಿಯ ಛಂದಾ ಪುಸ್ತಕ ಬಹುಮಾನಕ್ಕಾಗಿ 93 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ದೇಶದ ಹೆಮ್ಮೆಯ ಸಿನಿಮಾ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ (Girish Kasaravalli) ಅವರು ಮಾಡಿದ್ದರು. ರಲಿಯಾ ಬರೆದು ಪುಸ್ತಕದ ಬಗ್ಗೆ ಗಿರೀಶ್ ಟಿಪ್ಪಣಿ ಮಾಡಿ, “ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ’ ಎಂದು ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಲೇಖಕ ಚಂದ್ರಶೇಖರ್ ಕಂಬಾರ್ ಅವರಿಗೆ ಸಿನಿಮಾ ರಂಗ ಹೊಸದಲ್ಲ. ಈಗಾಗಲೇ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಭಾಷಣೆ ಬರೆದಿದ್ದಾರೆ. ಇವರ ಅನೇಕ ಕೃತಿಗಳು ಸಿನಿಮಾಗಳಾಗಿವೆ. ತುಂಬಾ ವರ್ಷಗಳ ನಂತರ ಕಂಬಾರರು ಬಣ್ಣ ಹಚ್ಚಿದ್ದಾರೆ. ಅದು ಅತಿಥಿ ಪಾತ್ರದಲ್ಲಿ ಎನ್ನುವುದು ವಿಶೇಷ. ಎನ್.ಎಸ್. ಶಂಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ ಈಗ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ರಾಜಮೌಳಿ ನಿರ್ದೇಶನದಲ್ಲಿ ಈ ಹಿಂದೆ ‘ಈಗ’ ಎನ್ನುವ ಸಿನಿಮಾ ಮೂಡಿ ಬಂದಿತ್ತು.  ಈ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದರು. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇರದೇ ಇದ್ದರೂ, ಕನ್ನಡದ ಈಗ ಹೊಸದೊಂದು ಕಥೆಯನ್ನು ಪ್ರೇಕ್ಷಕರು ಮುಂದೆ ತೆರೆದಿಡಲಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವಾಗಿದ್ದು, ಈ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

    ಮುಹೂರ್ತದ ದಿನದಂತೆ ಮೊದಲ ದೃಶ್ಯಕ್ಕೆ ಗಿರೀಶ್ ಕಾಸರವಳ್ಳಿ ಕ್ಯಾಮೆರಾಗೆ ಚಾಲನೆ ನೀಡಿದರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ, ನಟಿ ಸುಂದರರಾಜ್ ಆರಂಭ ಫಲಕ ತೋರಿದರು. ಡಾ.ಚಂದ್ರಶೇಖರ್ ಕಂಬಾರ ಅವರು ನಾಯಕಿ ಶ್ರುತಿ ಹರಿಹರ್ ಅವರಿಗೆ ಶಾರದಾ ಪುರಸ್ಕಾರ ನೀಡುವ ದೃಶ್ಯದಲ್ಲಿ ಕಾಣಿಸಿಕೊಂಡರು. ಕನ್ನಡ ಉಪನ್ಯಾಸಕ ರಾಜಪ್ಪ ದಳವಾಯಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ.

    Live Tv