Tag: ಗಿರೀಶ್ ಕಾರ್ನಾಡ್

  • ಗಿರೀಶ್ ಕಾರ್ನಾಡ್ ಕೊನೆಯ ಆಸೆಯಂತೆ ಅಂತ್ಯಕ್ರಿಯೆ

    ಗಿರೀಶ್ ಕಾರ್ನಾಡ್ ಕೊನೆಯ ಆಸೆಯಂತೆ ಅಂತ್ಯಕ್ರಿಯೆ

    ಬೆಂಗಳೂರು: ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ.

    ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು.

    ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.

    ಸಾಹಿತಿಗಳನ್ನು ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಈ ಹಿಂದೆ ಭಾರೀ ಟೀಕೆ ವ್ಯಕ್ತವಾಗಿತ್ತು. ಜಿ ಎಸ್ ಶಿವರುದ್ರಪ್ಪ, ಅನಂತಮೂರ್ತಿ ಅಂತ್ಯಕ್ರಿಯೆ ವೇಳೆ ಕಲಾಗ್ರಾಮದಲ್ಲಿ ಸ್ಥಳ ನೀಡುವ ಬಗ್ಗೆ ಭಿನ್ನ ಅಭಿಪ್ರಾಯ ಗಳು ಹೊರಬಿದ್ದಿತ್ತು. ಈ ಸಂದರ್ಭದಲ್ಲಿ ಸಾವಿನಲ್ಲೂ ರಾಜಕೀಯ ಬೇಡ ಎಂಬ ಅಭಿಪ್ರಾಯವನ್ನ ತಮ್ಮ ಪತ್ನಿ ಬಳಿ ತಿಳಿಸಿ ಸರ್ಕಾರಿ ಗೌರವ, ಸರ್ಕಾರಿ ಜಾಗ ಬೇಡ ಎಂದು ತಿಳಿಸಿದ್ದರು.

    https://www.youtube.com/watch?v=rjR2qIhqevM

  • ಕನ್ನಡಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಕೆಲವೇ ಗಣ್ಯರಲ್ಲಿ ಕಾರ್ನಾಡ್ ಒಬ್ಬರು: ಚಂಪಾ

    ಕನ್ನಡಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಕೆಲವೇ ಗಣ್ಯರಲ್ಲಿ ಕಾರ್ನಾಡ್ ಒಬ್ಬರು: ಚಂಪಾ

    ಬೆಂಗಳೂರು: ಗಿರೀಶ್ ಕಾರ್ನಾಡ್ ಅವರು ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದರು ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ನೆನಪನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಹಳ ಒಳ್ಳೆಯ ಮನುಷ್ಯ ಅವರಾಗಿದ್ದರು. ಕನ್ನಡಕ್ಕೆ ಅಂತರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೆಲವೇ ಕೆಲವು ವ್ಯಕ್ತಿಗಳ ಪೈಕಿ ಗಿರೀಶ್ ಕಾರ್ನಾಡ್ ಒಬ್ಬರು ಎಂದು ತಿಳಿಸಿದರು. ಇದನ್ನೂ ಓದಿ: ಗಿರೀಶ್ ಅವರನ್ನು ನೋಡ್ತಿದ್ದರೆ ವಿವೇಕಾನಂದ ನೆನಪಾಗ್ತಿದ್ರು: ಬಿ.ಟಿ ಲಲಿತಾ ನಾಯಕ್

    ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಿದ ಅವರು ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದರು. ನವ್ಯ ಬರಹಗಾರ, ನಾಟಕಕಾರ, ಸಿನಿಮಾ ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ ವ್ಯಕ್ತಿಯಾಗಿದ್ದರು ಎಂದು ಚಂಪಾ ನೆನಪನ್ನು ಹಂಚಿಕೊಂಡರು.

    ಕಳೆದ ವರ್ಷ ಗೌರಿ ಲಂಕೇಶ್ ಕುರಿತು ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊನೆಯ ಬಾರಿ ಕಾರ್ನಾಡ್ ಜೊತೆ ಮಾತನಾಡಿದ್ದೆ ಎಂದು ತಿಳಿಸಿದರು.

    https://www.youtube.com/watch?v=rjR2qIhqevM

  • ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಸರಸ್ವತಿ ಕಾರ್ನಾಡ್

    ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಸರಸ್ವತಿ ಕಾರ್ನಾಡ್

    ಬೆಂಗಳೂರು: ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ಮಧ್ಯಾಹ್ನದ ಮೇಲೆ ಬೈಯಪ್ಪನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಸಚಿವರು, ಗಣ್ಯರು ಯಾರು ಬರುವುದು ಬೇಡ. ಸಾರ್ವಜನಿಕ ದರ್ಶನ ಇರುವುದಿಲ್ಲ. ಯಾವುದೇ ವಿಧಿ ವಿಧಾನ ಇರುವುದಿಲ್ಲ ಎಂದು ನಿರ್ದೇಶಕ ಕೆ.ಎಂ ಚೈತನ್ಯ ತಿಳಿಸಿದ್ದಾರೆ.

    ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

    https://www.youtube.com/watch?v=rjR2qIhqevM

  • ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ

    ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ

    ಬೆಂಗಳೂರು: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಗಿರೀಶ್ ಕಾರ್ನಾಡ್(81) ಅವರು ಇಂದು ವಿಧಿವಶರಾಗಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

    ಮಹಾರಾಷ್ಟ್ರದಲ್ಲಿ ಜನಿಸಿರುವ ಇವರು ಕರ್ನಾಟಕದ ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಇಂಗ್ಲೆಂಡ್‍ನಲ್ಲಿ ರಾಜ್ಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದಾರೆ.

    ನಾಟಕಕಾರ, ಚಿತ್ರ ನಿರ್ದೇಶಕ, ನಟ ಹಾಗೂ ಕವಿಯಾಗಿಯೂ ಖ್ಯಾತಿ ಪಡೆದಿದ್ದಾರೆ. ಇವರ ತುಘಲಕ್ ಮತ್ತು ತಲೆದಂಡ ನವ್ಯಸಾಹಿತ್ಯ ಚಳವಳಿಯ ಅತ್ಯುತ್ತಮ ನಾಟಕಗಳು ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಕಾಡು, ಸಂಸ್ಕಾರ, ವಂಶವೃಕ್ಷ ಮೊದಲಾದ ಕೆಲ ಕನ್ನಡ ಚಿತ್ರಗಳು ನಿರ್ದೇಶನ ಮಾಡಿದ್ದಾರೆ. ಕಾರ್ನಾಡರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಕ್ನನಡಕ್ಕೆ 6ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ.

  • ನಾನು ಸಹ ನಗರ ನಕ್ಸಲ್ ಬೋರ್ಡ್ ಪ್ರದರ್ಶಿಸಿದ್ದ ಕಾರ್ನಾಡ್ ವಿರುದ್ಧ ದೂರು

    ನಾನು ಸಹ ನಗರ ನಕ್ಸಲ್ ಬೋರ್ಡ್ ಪ್ರದರ್ಶಿಸಿದ್ದ ಕಾರ್ನಾಡ್ ವಿರುದ್ಧ ದೂರು

    ಬೆಂಗಳೂರು: ಗೌರಿ ಸಂಸ್ಮರಣಾ ದಿನದ ಆಚರಣೆ ವೇಳೆ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಾನು ಸಹ ನಗರ ನಕ್ಸಲ್ ಎಂಬ ಅಡಿಬರಹವಿದ್ದ ಬೋರ್ಡನ್ನು ಹಾಕಿಕೊಂಡು ಪರೋಕ್ಷವಾಗಿ ನಕ್ಸಲ್ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗಿರೀಶ್ ಕಾರ್ನಾಡ್ ಸಾಹಿತಿಯಾಗಿದ್ದುಕೊಂಡು ಹಿಂಸೆಗೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಈ ರೀತಿ ಮಾಡುವ ಮೂಲಕ ಅವರು ಉಗ್ರವಾದಿ ವ್ಯಕ್ತಿಗೆ ಸಮನಾಗಿದ್ದಾರೆ. ನಾನು ಒಬ್ಬ ನಕ್ಸಲ್ ಎನ್ನುವ ಹೇಳುವ ಮೂಲಕ ನಕ್ಸಲರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಒಂದು ವೇಳೆ ಹಿಂದೂ ಸಂಘಟನೆಗಳು ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಕೂಡಲೇ ಸ್ವಯಂಪ್ರೇರಿತ ಕೇಸ್ ದಾಖಲಿಸುತ್ತಿದ್ದರು ಎಂದು ಕಿಡಿಕಾರಿದರು.

    ಪ್ರಚೋದನೆಗೆ ಹೇಳಿಕೆ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದರೂ, ಗಿರೀಶ್ ಕಾರ್ನಾಡ್ ವಿರುದ್ಧ ಸುಮೋಟೋ ಕೇಸ್ ಹಾಕಿಲ್ಲ. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾರ್ನಾಡ್ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಕಳೆದ ಬುಧವಾರ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ಗೌರಿ ಡೇ ಆಚರಣೆಯ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್‍ರವರು `ನಾನು ಒಬ್ಬ ನಗರ ನಕ್ಸಲ್’ ಎನ್ನುವ ಬೋರ್ಡ್ ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೌರಿ ಹತ್ಯೆ ಬಳಿಕ ಟಾರ್ಗೆಟ್ ಆದ್ರಾ ಮತ್ತೊಬ್ಬ ವಿಚಾರವಾದಿ-ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಅಭಿಯಾನ!

    ಗೌರಿ ಹತ್ಯೆ ಬಳಿಕ ಟಾರ್ಗೆಟ್ ಆದ್ರಾ ಮತ್ತೊಬ್ಬ ವಿಚಾರವಾದಿ-ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಅಭಿಯಾನ!

    ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ `ನಾನು ಅರ್ಬನ್ ನಕ್ಸಲ್’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಬಂದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.

    ಫೇಸ್‍ಬುಕ್‍ನಲ್ಲಿ ಗಿರೀಶ್ ಕಾರ್ನಾಡ್‍ರನ್ನು ಗಂಜಿ ಗಿರಾಕಿ ಎಂದು ನಿಂದಿಸಿ, ಸದ್ಯದಲ್ಲೇ ಹಾರ ಹಾಕಿಸಿಕೊಳ್ಳೋ ಕಾಲ ಹತ್ತಿರ ಇದೆ ಎಂದು ಕೆಲವರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಅರ್ಬನ್ ನಕ್ಸಲೇಟ್ ಬಳಿ ಇರುವ ಪ್ರಶಸ್ತಿಯನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ ಒಂದು ವರ್ಷ. ಕಳೆದ ವರ್ಷದ ಸೆ.5ರ ರಾತ್ರಿ 8 ಗಂಟೆಯೊಷ್ಟಿತ್ತಿಗೆ ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆ ಎದುರೇ ಗುಂಡಿಕ್ಕಿ ಕಗ್ಗೊಲೆಗೈದಿದ್ರು. ಬುಧವಾರ ಗೌರಿ ಸಮಾಧಿಗೆ ಹೋಗಿ ಪುಷ್ಪಾಂಜಲಿ ಸಲ್ಲಿಸಿದ್ದ ಹೋರಾಟಗಾರರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾದ ಹಲ್ಲೆ ಅಂತ ಘೋಷಿಸಿ ಮೌರ್ಯ ಸರ್ಕಲ್‍ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.

    ಸ್ವಾಮಿ ಅಗ್ನಿವೇಶ್, ಕನ್ನಯ್ಯ , ಪ್ರೊ.ಭಗವಾನ್ ಸೇರಿದಂತೆ ಅನೇಕ ಎಡಪಂಥೀಯ ಹೋರಾಟಗಾರರು ಗೌರಿ ದಿನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸನಾತನ ಸಂಸ್ಥೆಯನ್ನು ಪ್ರಧಾನಿ ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸಲಿ. ಮೋದಿ ವಿಚಾರವಾದಿಗಳನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಮೋದಿ ಮೊದಲು ಕುರ್ಚಿ ಬಿಟ್ಟು ಇಳಿಯಬೇಕು ಅಂತಾ ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಾದ ನಡೆಸಲಾಯಿತು. ಈ ವೇಳೆ ಪ್ರಧಾನಿ ಮೋದಿ ಗೌರಿ ಹತ್ಯೆಯ ವಿಚಾರದಲ್ಲಿ ಮೌನವಹಿಸಿದ್ದಾರೆ. ಮುಂದೆ ಯಾರ ಹತ್ಯೆಗೆ ಇವರೆಲ್ಲ ಸಂಚು ರೂಪಿಸುತ್ತಿದ್ದಾರೆ ಅಂತಾ ಕಿಡಿಕಾರಿದ್ರು. ಎಸ್‍ಐಟಿ ತನಿಖೆಯಿಂದ ಸನಾತನ ಸಂಸ್ಥೆಯ ಕರಾಳ ಮುಖ ಬಯಲಾಗಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv