Tag: ಗಿರಿಜಾ ಲೋಕೇಶ್

  • 1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    – ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ಆಗಿದ್ರು ಸರೋಜಾದೇವಿಯವರು

    ನ್ನಡದಲ್ಲಿ ಮಾತ್ರವಲ್ಲ, ಎಲ್ಲ ನಟರಿಗೆ ಹಾಟ್ ಫೇವರೆಟ್ ಆಗಿದ್ದರು ಬಿ.ಸರೋಜಾದೇವಿಯವರು (B.Sarojadevi) ಎಂದು ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಅವರು ತಿಳಿಸಿದರು.

    ನಟಿ ಸರೋಜಾದೇವಿ ಅವರೊಂದಿಗಿನ ಒಡನಾಟದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಡಿದ ಅವರು, ಅವರ ಚಿತ್ರಗಳನ್ನು ನೋಡಿದಾಗ ನಮ್ಮ ಕನಸಿನ ಕನ್ಯೆ ಅಂತ ಅನಿಸುತ್ತಿದ್ದರು. ಅವರ ಹತ್ತಿರ ಹೋಗೋ ಯೋಗ್ಯತೆಯೂ ನಮಗಿರಲಿಲ್ಲ. ಅವರನ್ನು ನೋಡೋದೇ ನಮ್ಮ ಭಾಗ್ಯವಾಗಿತ್ತು. ಲೋಕೇಶ್ ಅವರೊಟ್ಟಿಗೆ ತುಂಬಾ ಚೆನ್ನಾಗಿ ಮಾತಾಡುತ್ತಿದ್ದರು ಎಂದರು.ಇದನ್ನೂ ಓದಿ: ಶಕ್ತಿಗೆ ಇಂದು 500 ಕೋಟಿ ಟಿಕೆಟ್‌ ಸಂಭ್ರಮ- ಕಂಡಕ್ಟರ್‌ ಆಗಿ ಟಿಕೆಟ್‌ ಹಂಚಿದ ಸಿಎಂ

    ಪ್ರತಿ ವರ್ಷ ನವೆಂಬರ್ 1 ಎಲ್ಲ ಕಲಾವಿದರು ಭೇಟಿಯಾಗುತ್ತಿದ್ದೆವು. ಆಗ ಒಂದು ಕಾರ್ಯಕ್ರಮ ಮಾಡಿ, ಕಲಾವಿದರನ್ನು ಸನ್ಮಾನ ಮಾಡುತ್ತಿದ್ದರು. ಆಗ ಅವರಿಗೆ ತಮ್ಮ ಸ್ವಂತ ಹಣದಿಂದ ಉಂಗುರ ನೀಡುತ್ತಿದ್ದರು. ಜೊತೆಗೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ರಾಷ್ಟ್ರೀಯ ಪ್ರಶಸ್ತಿ ನೀಡಿ, ಒಂದು ಲಕ್ಷ ರೂ. ನೀಡುತ್ತಿದ್ದರು. ಆದರೆ ಇದನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇನ್ನೂ ನಾನು ಅಭಿನಯಕ್ಕೆ ಬಂದ ಮೇಲೆ ಜಯಂತಿ ಅವರೊಟ್ಟಿಗೆ ಸೇರಿ, ಸರೋಜಾದೇವಿ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಭಾಗ್ಯ ಸಿಕ್ಕಿತ್ತು. ಕಲಾವಿದರನ್ನ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

    ಚಿಕ್ಕ ಮಕ್ಕಳ ಮನಸ್ಸಿನವರು. ತುಂಬಾ ಮುಗ್ಧ ಸ್ವಭಾವದವರು. ಆದರೆ ಚಿತ್ರರಂಗದ ಹೊರಗೆ ತುಂಬಾ ಗಾಂಭೀರ್ಯತೆಯಿಂದ ಇರುತ್ತಿದ್ದರು. ಪರಿಪೂರ್ಣ ಜೀವನವನ್ನು ಅನುಭವಿಸಿದರು. ಆದರೆ ವೈವಾಹಿಕ ಜೀವನವನ್ನು ಬಹಳ ದಿನ ಅನುಭವಿಸುವ ಭಾಗ್ಯ ಅವರಿಗೆ ಸಿಗಲಿಲ್ಲ. ಇನ್ನೂ ಕನ್ನಡ ಸೇರಿ ಬೇರೆ ಭಾಷೆಯ ನಟರು ಕೂಡ ಅವರ ಜೊತೆ ನಟಿಸಲು ಕಾಯುತ್ತಿದ್ದರು. ದಿಲೀಪ್ ಕುಮಾರ್, ಶಿವಾಜಿ ಗಣೇಶನ್ ಸೇರಿ ಹಿರಿಯ ನಟರು ಇವರ ಜೊತೆ ನಟನೆಗಾಗಿ ಕಾಯುತ್ತಿದ್ದರು. ಆಗ ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ನಟಿ ಆಗಿದ್ದರು. ಸರೋಜಾದೇವಿ ನಮ್ಮ ಸಿನಿಮಾದಲ್ಲಿ ಇರಬೇಕು ಎಂದು ಹಾತೊರೆಯುತ್ತಿದ್ದರು ಎಂದರು.

    ತಿಂಗಳಿಗೆ ಒಂದು ಬಾರಿಯಾದ್ರೂ ಭೇಟಿಯಾಗಿ ಮಾತನಾಡ್ತಿದ್ದೆ. ಆದರೆ ಕಳೆದ ಎರಡು ತಿಂಗಳಿಂದ ನಾನು ಅವರೊಂದಿಗೆ ಮಾತನಾಡಿರಲಿಲ್ಲ. ಅದೇ ಬೇಜಾರು. ಎಲ್ಲಾ ವಿಚಾರದಲ್ಲೂ ಶಿಸ್ತು. ಎಲ್ಲವನ್ನೂ ನಮಗೆ ಹೇಳಿ ಕೊಡುತ್ತಿದ್ದರು ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

  • ದರ್ಶನ್ ನೆನೆದು ಕಣ್ಣೀರಿಟ್ಟ ಗಿರಿಜಾ ಲೋಕೇಶ್

    ದರ್ಶನ್ ನೆನೆದು ಕಣ್ಣೀರಿಟ್ಟ ಗಿರಿಜಾ ಲೋಕೇಶ್

    ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಇದೀಗ ದರ್ಶನ್ (Darshan) ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅಲ್ಲಿ ಕಷ್ಟಪಡ್ತಿರೋದು ನೋಡಿದ್ರೆ ತುಂಬಾನೇ ನೋವಾಗುತ್ತದೆ ಎಂದು ಗಿರಿಜಾ ಲೋಕೇಶ್ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದಲ್ಲಿ ಬಾಲಿವುಡ್ ನಟ ನಿಕಿತಿನ್ ಧೀರ್

    ನಾನೇನು ಹೇಳಲಿ. ದರ್ಶನ್ ಈಗ ಕಷ್ಟಪಡ್ತಿರೋದು ನೋಡಿದ್ದರೆ ತುಂಬಾನೇ ನೋವಾಗುತ್ತದೆ. ಆದಷ್ಟು ಬೇಗ ಇದರಿಂದ ಹೊರಬರಲಿ ಎಂದು ಆಶಿಸುತ್ತೇನೆ. ದೇವರಲ್ಲಿ ಬೇಡಿಕೊಳ್ಳುತ್ತೇನೆ. ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ. ನಾವೇನು ಮಾತನಾಡಬಾರದು. ಯಾರು ತಪ್ಪು ಮಾಡಿದ್ದಾರೋ ಏನು ಎಂಬುದು ಗೊತ್ತಿಲ್ಲ. ಪೊಲೀಸರು ಮತ್ತು ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ತಲೆಬಾಗಬೇಕು ಎಂದು ಗಿರಿಜಾ ಲೋಕೇಶ್ ಮಾತನಾಡಿದ್ದಾರೆ.

    14 ವರ್ಷದಿಂದ ದರ್ಶನ್ ನೋಡಿದ್ದೀನಿ. ತುಂಬಾ ಮುಗ್ಧ ಹುಡುಗ ಎಂದು ಮಾತನಾಡುತ್ತಾ ಹಿರಿಯ ನಟಿ ಕಣ್ಣೀರಿಟ್ಟಿದ್ದಾರೆ. ಈ ಸಂದರ್ಭ ನೋಡಿದ್ರೆ ಕನಸಾಗಿರಬಾರದಾ ಅನಿಸುತ್ತಿದೆ. ತಪ್ಪು ಯಾವುದೇ ವ್ಯಕ್ತಿ ಮಾಡಿದ್ರೂ ಶಿಕ್ಷೆ ಅನುಭವಿಸಲೇಬೇಕು. ಅದು ನಾನು ಆಗಿದ್ರೂ ಕೂಡ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನಟಿ ಮಾತನಾಡಿದ್ದಾರೆ.

    ಜೀವನದಲ್ಲಿ ತುಂಬಾ ಕಷ್ಟಗಳನ್ನ ಮೆಟ್ಟಿ ನಿಂತು ಬೆಟ್ಟದಂತೆ ಬೆಳೆದು ನಿಂತ ಹುಡುಗ ದರ್ಶನ್. ಅವರ ತಂದೆ ಸತ್ತಾಗ ಅಕ್ಕನ ಮದುವೆ ಮಾಡಿದಾಗ ಹೇಗೆ ಹೆದರಿಸಿದ ಅಂತ ನಾನು ನೋಡಿದ್ದೀನಿ. ಆದರೆ ಇಂದಿನ ಈ ಘಟನೆ ನೋಡಿ ಆಘಾತವಾಗಿದೆ. ಆದಷ್ಟು ಬೇಗ ಇದರಿಂದ ಮುಕ್ತರಾಗಿ ದರ್ಶನ್‌ ಹೊರಬರಲಿ  ಎಂದು ಗಿರಿಜಾ ಲೋಕೇಶ್ ಭಾವುಕರಾಗಿದ್ದಾರೆ.

  • ಸುಂದರ ಸಂಸಾರವನ್ನು ದೇವರು ಹಾಳು ಮಾಡಿಬಿಟ್ಟ: ಗಿರಿಜಾ ಲೋಕೇಶ್

    ಸುಂದರ ಸಂಸಾರವನ್ನು ದೇವರು ಹಾಳು ಮಾಡಿಬಿಟ್ಟ: ಗಿರಿಜಾ ಲೋಕೇಶ್

    ಬೆಂಗಳೂರು: ಒಂದು ಸುಂದರವಾದ ಸಂಸಾರವನ್ನು ದೇವರು ಹಾಳುಮಾಡಿ ಬಿಟ್ಟ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಕಣ್ಣೀರು ಹಾಕಿದ್ದಾರೆ.

    ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಂದರವಾದ ಸಂಸಾರವನ್ನ ದೇವರು ಹಾಳು ಮಾಡುಬಿಟ್ಟ. ಅವಳನ್ನ ನೋಡ್ತಿದ್ರೆ ಬದುಕೇ ಇದ್ದಾಳೆ ಅನಿಸುತ್ತೆ. ಸ್ಪಂದನಾ ಮುಖದಲ್ಲಿ ಕಳೆ ಹಾಗೇ ಇದೆ. ಈ ರೀತಿಯ ಸಾವು ಯಾರಿಗೂ ಬರಬಾರದು ಎಂದು ಭಾವುಕರಾದರು.

    ಬ್ಯಾಂಕಾಕ್‍ಗೆ (Bankok) ತೆರಳಿದ್ದಾಗ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಮಂಗಳವಾರ ರಾತ್ರಿ ಬ್ಯಾಂಕಾಕ್‍ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದನ್ನೂ ಓದಿ: ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‍ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ಮೇಲೆ ವಿಜಯ್ ಡಿಪೆಂಡ್ ಆಗ್ತಿದ್ದ, ದೇವರು ಅನ್ಯಾಯ ಮಾಡಿದ- ಗಿರಿಜಾ ಲೋಕೇಶ್

    ಸ್ಪಂದನಾ ಮೇಲೆ ವಿಜಯ್ ಡಿಪೆಂಡ್ ಆಗ್ತಿದ್ದ, ದೇವರು ಅನ್ಯಾಯ ಮಾಡಿದ- ಗಿರಿಜಾ ಲೋಕೇಶ್

    ಸ್ಯಾಂಡಲ್‌ವುಡ್ (Sandalwood) ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನರಾಗಿದ್ದಾರೆ. ವಿಜಯ್ ಪತ್ನಿಯ ಬಗ್ಗೆ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh)  ಅವರು ಭಾವುಕರಾಗಿದ್ದಾರೆ. ಸ್ಪಂದನಾ ಸಾವಿನಿಂದ ರಾಘು ಅವರ ಜೀವನ ಮುಂದೇ ಹೇಗೆ ಎಂದು ನಟಿ ರಿಯಾಕ್ಟ್ ಮಾತನಾಡಿದ್ದಾರೆ.

    ಮೊನ್ನೆ ಶೂಟಿಂಗ್ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲ್ಕೊಂಡೆ. ಬೆಳಿಗ್ಗೆ ಎದ್ದಾಗ ನನ್ನ ಸೊಸೆ ಗ್ರೀಷ್ಮಾ (Greeshma) ಹೇಳಿದ್ದರು. ಸ್ಪಂದನಾ ಸಾವಿನ ವಿಚಾರ, ಈ ವಿಚಾರ ಕೇಳಿದಾಗ ನಂಬಲಾಗಲಿಲ್ಲ. ಸುದ್ದಿ ಕೇಳಿದ ಕೂಡಲೇ ನಾನು ಕಿರುಚಿಕೊಂಡೆ. ಅಷ್ಟು ಫಿಟ್ ಆಗಿರುವ ಹುಡುಗಿ, ಇಷ್ಟು ಚಿಕ್ಕ ವಯಸ್ಸಿಗೆ ಹೋದರು. ದೇವರ ಮಾಡಿದ ಅನ್ಯಾಯ ಇದು ಎಂದು ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ. ಇದನ್ನೂ ಓದಿ:ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ, ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

    ತುಂಬಾನೇ ನೋವಾಗುತ್ತೆ, ನಾವು ಇರುವವರೆಗೂ ಈ ನೋವನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಯ್ ಮನೆಯಲ್ಲಿ ತಂದೆ- ತಾಯಿ ಎಲ್ಲರೂ ವಯಸ್ಸಾದವರು ಹೇಗೆ ಸಹಿಸಿಕೊಳ್ಳುವುದು. ಸ್ಪಂದನಾ ಹಿರಿಯ ಸೊಸೆ ಎಲ್ಲರ ಜವಬ್ದಾರಿ ಆಕೆಯ ಮೇಲಿತ್ತು. ಸಂಸಾರದಲ್ಲಿ ಗಂಡು ಇಲ್ಲಾ ಅಂದರೆ ಬದುಕಬಹುದು. ಆದರೆ ಒಂದು ಹೆಣ್ಣಿಲ್ಲ ಅಂದರೆ ಬದುಕೋದು ಕಷ್ಟ. ವಿಜಯ್ ಎಲ್ಲದ್ದಕ್ಕೂ ಸ್ಪಂದನಾ ಮೇಲೆ ಡಿಪೆಂಡ್ ಆಗಿದ್ದ, ಪತ್ನಿಯ ನಡೆಗೆ ವಿಜಯ್ ಕೂಡ ಬೆಂಬಲಿಸುತ್ತಿದ್ದರು.

    ಸ್ಪಂದನಾ ಸುಂದರವಾದ ಹೆಣ್ಣು, ಸರಳವಾದ ಅವರ ವ್ಯಕ್ತಿತ್ವ. ಸ್ಪಂದನಾಳಲ್ಲಿ ಯಾವುದೇ ನಿಶಕಲ್ಮಶ ಇರಲಿಲ್ಲ. ಆಕೆಯ ನಗುವಿನಲ್ಲೇ ನಿಶಕಲ್ಮಶ ಗುಣ ಗೊತ್ತಾಗುತ್ತಿತ್ತು. ನನ್ನ ಮಗ ಸೃಜನ್ (Srujan Lokesh) ಮತ್ತು ಸ್ಪಂದನಾ ಬರ್ತ್‌ಡೇ ಒಂದೇ ದಿನ, ಜೂನ್ 28ರಂದು ಇಬ್ಬರು ಒಟ್ಟಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದರು. ಇಲ್ಲಿ ಬಂದು ಕೇಕ್ ಕಟ್ ಮಾಡ್ತಿದ್ದರು. ಆ ದಿನಗಳನ್ನ ಮರಿಯೋಕೆ ಸಾಧ್ಯವಿಲ್ಲ. ನಮ್ಮ ಕುಟುಂಬದ ಜೊತೆ ಸ್ಪಂದನಾಗೆ (Spandana)  ಒಳ್ಳೆಯ ಬಾಂದವ್ಯವಿತ್ತು.

    ನಾನು ರಾಘುನ ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ. ಆಗಿನಿಂದಲೂ ಅವನಿಗೆ ಅಗಾಧವಾದ ಪ್ರತಿಭೆಯಿದೆ. ಶಂಕರ್‌ನಾಗ್ ತೀರಿಕೊಂಡ ಸಮಯದಲ್ಲಿ ನಾನು ವಿಜಯ್ ಮನೆಯಲ್ಲಿಯೇ ಇದ್ದೆ, ಮೈಸೂರಿನಿಂದ ಅಲ್ಲಿಗೆ ಬರೋಕೆ ಆಗಲ್ಲ ಅಂತಾ. ಆಗ ರಾಘು ಎಲ್ಲಾ ಮಕ್ಕಳನ್ನ ಸೇರಿಸಿಕೊಂಡು ಹಾಡು- ಡ್ಯಾನ್ಸ್ ಮಾಡುತ್ತಿದ್ದ. ರಾಘು ಮನಸ್ಸಿಗೆ ಶತ್ರುಗಳೇ ಇರಲಿಲ್ಲ. ರಾಘು ತುಂಬಾ ಹಂಬಲ್ ವ್ಯಕ್ತಿಯಾಗಿದ್ದರು. ದೇವರು ವಿಜಯ್‌ಗೆ ಅನ್ಯಾಯ ಮಾಡಿದ್ದಾರೆ. ಸ್ಪಂದನಾ ಸಾವನ್ನ ಚೇತರಿಕೊಳ್ಳುವ ಶಕ್ತಿ ಆ ಕುಟುಂಬಕ್ಕೆ ಕೊಡಲಿ ಎಂದು ಗಿರಿಜಾ ಲೋಕೇಶ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಬಣ್ಣ ಹಚ್ಚಿದ ಪೂಜಾ ಲೋಕೇಶ್

    ಮತ್ತೆ ಬಣ್ಣ ಹಚ್ಚಿದ ಪೂಜಾ ಲೋಕೇಶ್

    ಸಿನಿಮಾ, ಧಾರಾವಾಹಿ, ಶೋ ಅಂತೆಲ್ಲ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾ ಗಿರಿಜಾ ಲೋಕೇಶ್ (Girija Lokesh) ಪುತ್ರಿ ಪೂಜಾ ಲೋಕೇಶ್ ಹಲವು ವರ್ಷಗಳಿಂದ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರಲಿಲ್ಲ. ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ಹಲವಾರು ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪೂಜಾ, ಹಲವಾರು ವರ್ಷಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ.

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ (Sita Rama) ಧಾರಾವಾಹಿಯಲ್ಲಿ ಪೂಜಾ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಇವರ ಪಾತ್ರದ ಪ್ರೋಮೋ ಕೂಡ ರಿಲೀಸ್ ಆಗಿದೆ. ಖಡಕ್ ಲುಕ್ ನಲ್ಲಿ ಪೂಜಾ (Pooja Lokesh) ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ವಿಲನ್ ಪಾತ್ರದಂತೆಯೇ ಕಾಣಿಸುವ ಪಾತ್ರದ ಹಿನ್ನೆಲೆ ಮಾತ್ರ ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಹಾಗಂತ ಪೂಜಾ ಕಿರುತೆರೆಯಿಂದ ದೂರವಿರಲಿಲ್ಲ. ಸಹೋದರ ಸೃಜನ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ನಲ್ಲಿ ಪೂಜಾ ಕೆಲಸ ಮಾಡುತ್ತಿದ್ದರು. ಸೃಜನ್ ಅವರ ಕಾಸ್ಟ್ಯೂಮ್ ಡಿಸೈನ್ ಇವರೇ ಮಾಡುತ್ತಿದ್ದರು. ಜೊತೆಗೆ ಹಿನ್ನೆಲೆಯಾಗಿ ನಿಂತುಕೊಂಡು ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ, ಲೋಕೇಶ್ ಪ್ರೊಡಕ್ಷನ್ ನ ಉಸ್ತುವಾರಿಯನ್ನು ಇವರೇ ವಹಿಸಿಕೊಂಡಿದ್ದರು.

    ಪೂಜಾ ಮತ್ತು ಸೃಜನ್ (Srujan Lokesh) ಇಬ್ಬರೂ ಪ್ರತಿಭಾವಂತ ಕಲಾವಿದರು. ಸೃಜನ್ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರೆ, ಪೂಜಾ ಕೊಂಚ ಕಾಲ ಬ್ರೇಕ್ ತಗೆದುಕೊಂಡಿದ್ದು. ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಪೂಜಾ ಇದೀಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಸ್ಯಾಂಡಲ್‌ವುಡ್‌ಗೆ (Sandalwood) ಕಮ್‌ಬ್ಯಾಕ್ ಆಗಿರುವ ಮೇಘನಾ ರಾಜ್ ಅವರು ಸದ್ಯ `ತತ್ಸಮ ತದ್ಭವ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹಿರಿದಾಗುತ್ತಿದೆ. ಮೇಘನಾಗೆ (Meghana Raj) ಸಾಥ್ ನೀಡಲು ಹಿರಿಯ ನಟಿ ಶ್ರುತಿ ಕೃಷ್ಣ ಸುಮನಳಾಗಿ ಈ ಚಿತ್ರದ ಭಾಗವಾಗಿದ್ದಾರೆ.

    ಪತಿ ಚಿರು ಸರ್ಜಾ ನಿಧನದ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ ಈಗ ನಟನೆ ಅಂತಾ ಬ್ಯುಸಿಯಾಗಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

     

    View this post on Instagram

     

    A post shared by Meghana Raj Sarja (@megsraj)

    ಪನ್ನಗ ಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ `ತತ್ಸಮ ತದ್ಭವ’ (Tatsama Tadbhava) ಚಿತ್ರಕ್ಕೆ ವಿಶಾಲ್ ಅಥ್ರೇಯಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಶೋಷಣೆಗೆ ಒಳಗಾದ ಯುವತಿಯ ಕಥೆ ಈ ಚಿತ್ರದಲ್ಲಿದೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಜೊತೆ ಇದೀಗ ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರುತಿ ಸುಮನಳಾಗಿ ಕಾಣಿಸಿಕೊಳ್ತಿದ್ದಾರೆ.

  • Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    ನ್ನಡದ ಟಾಕಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಸೃಜನ್ ಲೋಕೇಶ್ (Srujan Lokesh) ಮೊನ್ನೆಯಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ನಟನೆ ಮಾತ್ರವಲ್ಲ, ಇನ್ಮುಂದೆ ನಿರ್ದೇಶನವನ್ನೂ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದರು. ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ಕೊಡುತ್ತಿರುವುದಾಗಿ ತಿಳಿಸಿದ್ದರು. ಈ ಸಿನಿಮಾದ ಬಗೆಗಿನ ಹೊಸ ಅಪ್ ಡೇಟ್ ಅಂದರೆ, ಈ ಸಿನಿಮಾದಲ್ಲಿ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಜೊತೆಗೆ ಸೃಜನ್ ಪುತ್ರ (Son) ಕೂಡ ನಟಿಸುತ್ತಿದ್ದಾರೆ.

    ಸೃಜನ್ ನಿರ್ದೇಶನದ (Direction) ಜೊತೆಗೆ ನಾಯಕನಾಗಿ ನಟಿಸುತ್ತಿದ್ದರೆ, ಗಿರಿಜಾ ಲೋಕೇಶ್ (Girija Lokesh) ಮತ್ತು ಸೃಜನ್ ಪುತ್ರ ಯಾವೆಲ್ಲ ಪಾತ್ರ ಮಾಡಲಿದ್ದಾರೆ ಎನ್ನುವುದು ಸಸ್ಪೆನ್ಸ್. ಒಂದೇ ಸಿನಿಮಾದಲ್ಲಿ ಒಂದು ಕುಟುಂಬದ ಮೂರು ತಲೆಮಾರಿನ ಕಲಾವಿದರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಿನಿಮಾ ಟೈಟಲ್, ಮುಹೂರ್ತ, ಶೂಟಿಂಗ್ ಇತ್ಯಾದಿ ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿರುವ ಸೃಜನ್, ನಾಯಕಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಮುಗಿದಿದೆ. ನಾಯಕಿಯ ಹುಡುಕಾಟ ನಡೆದಿದೆ. ಎರಡೆರಡು ಜವಾಬ್ದಾರಿಯನ್ನು ಸೃಜನ್ ಹೊತ್ತಿರುವುದರಿಂದ ಪಕ್ಕಾ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರಂತೆ. ಈಗಾಗಲೇ ನಿರ್ಮಾಣದ ಜೊತೆಗೆ ನಟನೆಯನ್ನೂ ಮಾಡಿರುವ ಸೃಜನ್, ಈ ಬಾರಿ ಸಂದೇಶ್ ಪ್ರೊಡಕ್ಷನ್ (Sandesh Production) ಜೊತೆ ಕೈ ಜೋಡಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಜೊತೆ ಈ ಹಿಂದೆಯೇ ಸೃಜನ್ ಸಿನಿಮಾ ಮಾಡಬೇಕಿತ್ತು. ಅದೀಗ ಈಡೇರಿದಂತಾಗಿದೆ.

    ಕಿರುತೆರೆಯಲ್ಲಿ ಸೃಜನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಅದರಿಂದ ಕೊಂಚ ಬಿಡುವು ತಗೆದುಕೊಂಡು ತಮ್ಮ ಚೊಚ್ಚಲು ನಿರ್ದೇಶನದ ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಶೂಟಿಂಗ್ ಗೂ (Shooting) ಮುನ್ನ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ತಮ್ಮ ತಂಡದೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲೇ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಸೃಜನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Exclusive- ನಟನೆ ಜೊತೆ ನಿರ್ದೇಶನಕ್ಕೂ ಮುಂದಾದ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್

    Exclusive- ನಟನೆ ಜೊತೆ ನಿರ್ದೇಶನಕ್ಕೂ ಮುಂದಾದ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್

    ನ್ನಡ ಕಿರುತೆರೆ ಮತ್ತು ಸಿನಿಮಾ ರಂಗದ ಟಾಕಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ಸೃಜನ್ ಲೋಕೇಶ್ (srujan lokesh) ತಮ್ಮ ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಮೈಸೂರಿನ ಚಾಮುಂಡಿ ದರ್ಶನ ಪಡೆದ ನಂತರ ಅಲ್ಲಿಂದಲೇ ಅವರು ಸಿನಿಮಾ ನಿರ್ದೇಶನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಹತ್ತು ಹಲವು ಸಾಹಸ ಕೆಲಸಗಳನ್ನೂ ಮಾಡಲು ಮುಂದಾಗಿದ್ದಾರೆ. ಸೃಜನ್ ನಿರ್ದೇಶನದ ಮೊದಲ ಸಿನಿಮಾಗೆ ಸಂದೇಶ್ ಪ್ರೊಡಕ್ಷನ್ ಕೂಡ ಕೈ ಜೋಡಿಸಿದ್ದು ವಿಶೇಷ.

    ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಸೃಜನ್ ಲೋಕೇಶ್, ‘ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ತುಂಬಾ ದಿನಗಳ ಆಸೆ ಆಗಿತ್ತು. ಹಾಗಾಗಿ ನಾನೇ ಒಂದು ಕಥೆ ಮಾಡಿಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದೆ. ಹೀಗೆ ಮಾತನಾಡುತ್ತಿದ್ದಾಗ ಸಂದೇಶ್ ಅವರ ಜೊತೆ ಸಿನಿಮಾ ಮಾಡುವ ವಿಚಾರ ಹಂಚಿಕೊಂಡೆ. ಮತ್ತು ಅವರಿಗಾಗಿ ನಾನೊಂದು ಸಿನಿಮಾ ಮಾಡಬೇಕಿತ್ತು. ಇದೀಗ ಎಲ್ಲವೂ ಕೂಡಿ ಬಂದು ಈ ಸಿನಿಮಾ ಆಗುತ್ತಿದೆ’ ಅಂದರು.

    ನಟನೆ ಮಾಡುತ್ತಲೇ ನಿರ್ದೇಶನ ಮಾಡುವುದು ಸುಲಭವಲ್ಲ. ಹಾಗಂತ ಸೃಜನ್ ಲೋಕೇಶ್ ಅವರಂಥ ಸೃಜನಶೀಲರಿಗೆ ಕಷ್ಟವೂ ಅಲ್ಲ. ಸೃಜನ್ ಅವರ ತಾತ ಮತ್ತು ತಂದೆ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಈ ಕುಟುಂಬದ ಮೂರನೇ ತಲೆಮಾರು ಸೃಜನ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂದಹಾಗೆ ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಹಾರರ್ ಕಾಮಿಡಿ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಿದ್ದಾರಂತೆ. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಮಗನ ಮೊದಲನೇ ಸಿನಿಮಾಗೆ ಸೃಜನ್ ತಾಯಿ ಗಿರಿಜಾ ಲೋಕೇಶ್ (girija lokesh) ಅವರು ಸಾಥ್ ನೀಡುತ್ತಿದ್ದು, ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ. ತಾಯಿಗೆ ಆ್ಯಕ್ಷನ್ ಕಟ್ ಹೇಳುವ ಭಾಗ್ಯ ಸೃಜನ್ ಅವರಿಗೆ ಸಿಕ್ಕಿದೆ. ಈಗಾಗಲೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಕೆಲಸವನ್ನೂ ಮುಗಿಸಿರುವ ಸೃಜನ್, ನಾಯಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಮತ್ತು ಲೋಕೇಶ್ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಪ್ರವೇಶವಾಗಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್ ‘ಅಂತು ಇಂತು’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿರುವುದು ವಿಶೇಷ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈ ಕುರಿತು ಮಾತನಾಡಿರುವ ಬೃಂದಾ, ‘ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ನಾಟ್ ನಾಟ್ ಎಂಬ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇದು ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಕಥೆ‌. ನಾವು ಎಲ್ಲೇ ಇದ್ದರೂ ನಮ್ಮ ಹುಟ್ಟಿದ ಊರಿನ ಮಮತೆ ಸದಾ ಸೆಳೆಯುತ್ತಿರುತ್ತದೆ. ಈ ರೀತಿ ಭಾವನಾತ್ಮಕ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ‘ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ  ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ  ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು’ ಎನ್ನುವುದು ಜಯಶ್ರೀ ರಾಜ್ ಮಾತು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಅಂದಹಾಗೆ ಈ ಸಿನಿಮಾದಲ್ಲಿ ದಿಗಂತ್ ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ‌. ಕೆನಡಾದ ಸ್ಥಳಿಯ ತಂತ್ರಜ್ಞರು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ‌.

  • ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ

    ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ

    ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರು ಅತ್ಯಂತ ಪ್ರೌಢಿಮೆಯ ಅಭಿನಯವನ್ನು ಪ್ರದರ್ಶಿಸುತ್ತಿದ್ದ ಕಲಾವಿದರಾಗಿದ್ದರು. ಅವರ ಸಿನಿಮಾಗಳು ಮನದಾಳದಲ್ಲಿದೆ. ಯಾವುದೇ ಪಾತ್ರವನ್ನು ನೀಡಿದರೂ ಸುಲಲಿತವಾಗಿ ಅಭಿನಯಿಸುವ ಸಾಮರ್ಥ್ಯ ಅವರಲ್ಲಿತ್ತು.

    ಕಲಾಸೇವೆಯನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ತಾನು ದೊಡ್ಡ ನಟನೆಂಬ ಆಡಂಬರವಿಲ್ಲದೇ ಬದುಕಿದ ಅತ್ಯಂತ ಸರಳಜೀವಿ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

    ಡಿ.ಕೆ. ಶಿವಕುಮಾರ್ ಸಂತಾಪ 
    ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ‘ರಾಜೇಶ್ ಅವರು ಹಿರಿಯ ನಟರು, ಅತ್ಯುತ್ತಮ ಕಲಾವಿದರು. ನಾವು ಅವರ ಚಿತ್ರಗಳನ್ನು ನೋಡಿ ಬೆಳೆದವರು. ಅವರ ಅಗಲಿಕೆ ನೋವು ತಂದಿದೆ. ರಾಜೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಅವರು ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ : ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ಗಿರಿಜಾ ಲೋಕೇಶ್ ಕಂಬನಿ 
    ರಾಜೇಶ್ ಅವರ ಜೊತೆ ನಾಟಕಗಳಲ್ಲಿ ಅಭಿನಯಿಸಿದ್ದೇನೆ ಕಲೆಯಲ್ಲಿ ತುಂಬಾ ಶ್ರದ್ದೆ ಅವರಿಗೆ ಹದಿನಾರನೇ ವಯಸ್ಸಿನಲ್ಲಿ ನಾನು ‌ಅವರೊಟ್ಟಿಗೆ ನಾಟಕದಲ್ಲಿ ಅಭಿನಯಿಸಿದ್ದೇನೆ. ಕಾಸ್ಟ್ಯೂಮ್, ಹೇರ್ ಸ್ಟೈಲ್, ಬಾಡಿ ಲಾಂಗ್ವೇಜ್ ಯಾವುದೇ ಇರಲಿ ಅಲ್ಲಿ ಶಿಸ್ತು ಬಯಸುತ್ತಿದ್ದರು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು ಅವರಿಂದ ನೋಡಿ ತುಂಬಾ ಕಲಿತಿದ್ದೇವೆ. ಅವರು ಶಿಸ್ತುಬದ್ದ ಜೀವನ ನಡೆಸಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಕಲಾವಿದರು ಅಡ್ಡದಿಡ್ಡಿ ದೇಹ ಬೆಳೆಸಬಾರದು, ನೀಟಾಗಿರಬೇಕು. ಫಿಟ್ ಅಂಡ್ ಫೈನ್ ಆಗಿರಬೇಕು ಎನ್ನುತ್ತಿದ್ದರು. ಬೆಳುವಲದ‌ ಮಡಿಲಲ್ಲಿ ಚಿತ್ರದಲ್ಲಿ ರಾಜೇಶ್ ಅವರ ಮಗಳಾಗಿ ಅಭಿನಯಿಸಿದ್ದೇನೆ ಅವರು ಸಂತೃಪ್ತ ಜೀವನ ನಡೆಸಿ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಕಂಬನಿ ಮಿಡಿದಿದ್ದಾರೆ ಹಿರಿಯ ನಟಿ ಗಿರಿಜಾ ಲೋಕೇಶ್. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಚಂದ್ರು 
    ರಾಜೇಶ್ ಅಂತಿಮ ದರ್ಶನ ಪಡೆದ ಮಾತನಾಡಿದ ಚಂದ್ರು, “ರಾಜೇಶ್ ಆತ್ಮೀಯರು ಹಾಗೂ ನನ್ನ ಮಾರ್ಗದರ್ಶಕರು. ರಾಜ್ ಕುಮಾರ್ , ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಸಾಲಿನವರು ಅಭಿನಯಕ್ಕೆ ನವರಸಗಳನ್ನು ತುಂಬಿದವರು. ರಂಗಭೂಮಿಯಲ್ಲಿ ಪಳಗಿದವರು, ಅದ್ಬುತ ಅಭಿನಯ ಮಾಡುತ್ತಿದ್ದರು. ಅವರ ಜೊತೆಗೆ ಬೇರೆಯವರು ಅದ್ಬುತವಾಗಿ ನಟಿಸಬೇಕು‌ ಎನ್ನುತ್ತಿದ್ದರು. ಇಂಗ್ಲಿಷ್ ಪಾಂಡಿತ್ಯವೂ ಇತ್ತು. ಕನ್ನಡ ಪಾಂಡಿತ್ಯವೂ ಇತ್ತುಅವರೊಟ್ಟಿಗೆ ಅಭಿನಯಿಸಿದ್ದೇನೆ. ತುಂಬು ಜೀವನ ಮಾಡಿ‌ ಹೋಗಿದ್ದಾರೆ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜೇಶ್ ಸೇರಿದಂತೆ ದಿಗ್ವಿಜರ ಪರಂಪರೆಯವರ ಜೊತೆ ಸಿನಿಮಾ ಮಾಡುವ ಭಾಗ್ಯ ನನ್ನದು” ಎಂದು ಚಂದ್ರು. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    ತಾರಾ ಅನುರಾಧ ಸಂತಾಪ 
    ನಮ್ಮ ಚಿತ್ರರಂಗದ ಹಿರಿಯರನ್ನ ಕಳೆದುಕೊಂಡಿದ್ದೇವೆ. ಅವರ ಕೆಲಸ, ಸಿನಿಮಾಗಳು ನಮಗೆ ಅವರ ನೆನಪು ಉಳಿಯುವಂತೆ ಮಾಡುತ್ತವೆ ಎಂದಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಅನುರಾಧ.