Tag: ಗಿರವಿ

  • ಬಳ್ಳಾರಿ | 200ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಅಡವಿಟ್ಟು ಹಣಪಡೆದು ಪರಾರಿ

    ಬಳ್ಳಾರಿ | 200ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಅಡವಿಟ್ಟು ಹಣಪಡೆದು ಪರಾರಿ

    ಬಳ್ಳಾರಿ: ಬಾಡಿಗೆ ಪಡೆದ 200ಕ್ಕೂ ಹೆಚ್ಚು ಕಾರುಗಳನ್ನು (Rented Car) ಗಿರವಿಯಿಟ್ಟು ಹಣಪಡೆದು ವಂಚಕನೋರ್ವ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ.

    ರಾಯಚೂರು (Raichur) ಜಿಲ್ಲೆಯ ಸಿಂಧನೂರಿನ (Sindhanur) ಎಂ.ಡಿ ಜಹೀದ್ ಭಾಷಾ ಅಲಿಯಾಸ್ ಸೋನೊ 200ಕ್ಕೂ ಹೆಚ್ಚು ಜನರಿಗೆ ವಂಚಿಸಿ ಪರಾರಿಯಾಗಿದ್ದಾನೆ. ಎರಡು ಮೂರು ತಿಂಗಳು ಕಾರಿಗೆ ಬಾಡಿಗೆ ಕೊಟ್ಟು ಬಳಿಕ ಕೈ ಕೊಟ್ಟಿದ್ದಾನೆ. ಆರು ತಿಂಗಳಿಂದ ಸತತವಾಗಿ ಬಳ್ಳಾರಿಯ ತನ್ನ ಸ್ನೇಹಿತರ ಮೂಲಕ ಕಾರುಗಳನ್ನ ಇತರರಿಂದ ಬಾಡಿಗೆ ಪಡೆದಿದ್ದ ಎಂ.ಡಿ ಜಹೀದ್ ಪಾಷಾ ಸಿಂಧನೂರಿನಲ್ಲಿ ಕಾರುಗಳನ್ನ ಗಿರವಿ ಇಟ್ಟು ಹಣಪಡೆದು ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ವೋಟರ್‌ ಐಡಿ ದುರುಪಯೋಗ ತಡೆಗೆ ಪರಿಹಾರ; ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ

    ಜಹೀದ್ ಪಾಷಾ ನೇರವಾಗಿ ಕಾರು ಮಾಲಿಕರಿಗೆ ಸಂಪರ್ಕವೇ ಇರಲಿಲ್ಲ. ಎಲ್ಲವನ್ನೂ ಸ್ಥಳೀಯ ಸ್ನೇಹಿತರ ಮೂಲಕ ವ್ಯವಹಾರ ಮುಗಿಸಿ ಬಾಡಿಗೆ ಅಗ್ರಿಮೆಂಟ್ ಕೊಟ್ಟಿದ್ದ. ಇತ್ತೀಚೆಗೆ ಬಾಡಿಗೆ ಕೊಡದಿದ್ದ ಹಿನ್ನೆಲೆ ಕಾರು ಮಾಲೀಕರು ಕಾರಿನ ಜಿಪಿಎಸ್ ಟ್ರೇಸ್ ಮಾಡಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಜಹೀದ್ ಪಾಷಾ ಬಾಡಿಗೆ ಪಡೆದಿದ್ದ ಕಾರುಗಳನ್ನು ಇತರ ದೊಡ್ಡ ದೊಡ್ಡ ಜನರ ಬಳಿ ಗಿರವಿಯಿಟ್ಟಿದ್ದಾನೆ. ಇದೀಗ ಕಾರು ಮಾಲೀಕರು ವಂಚಕನ ವಿರುದ್ಧ ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ರಚಿಸಿದ್ದ ಆಯೋಗ ದಿಢೀರ್‌ ರದ್ದು

  • ಮನ್ಸೂರ್ ಹೆಸರಲ್ಲಿದೆ 488 ಕೋಟಿ ಮೌಲ್ಯದ ಚರಾಸ್ತಿ, 1,888 ಕೆಜಿ ಚಿನ್ನಾಭರಣ!

    ಮನ್ಸೂರ್ ಹೆಸರಲ್ಲಿದೆ 488 ಕೋಟಿ ಮೌಲ್ಯದ ಚರಾಸ್ತಿ, 1,888 ಕೆಜಿ ಚಿನ್ನಾಭರಣ!

    ಬೆಂಗಳೂರು: ಸಾವಿರಾರು ಜನರಿಗೆ ಮೋಸ ಮಾಡಿ ತಲೆಮರೆಸಿಕೊಂಡಿರುವ ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಸಾವಿರಾರು ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾನೆ.

    ಮನ್ಸೂರ್ ಖಾನ್ ತನ್ನ ಹೆಸರಿನಲ್ಲಿ 488 ಕೋಟಿ ಮೌಲ್ಯದ ಚರಾಸ್ತಿ, 1,888 ಕೆಜಿ ಚಿನ್ನಾಭರಣ, 18.64 ಕೆ.ಜಿ ಪ್ಲಾಟಿನಂ, 463 ಕೆ.ಜಿಯ ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್ ವಜ್ರ, 110 ಕೆ.ಜಿ ಬಿಳಿ ಬಂಗಾರ ಇದೆ ಎಂದು ಘೋಷಿಸಿಕೊಂಡಿದ್ದ.

    ಇಷ್ಟೇ ಅಲ್ಲದೇ ಐಎಂಎ ಗೋಲ್ಡ್‍ನಿಂದ ಅಡಮಾನ ಪಡೆದ 350 ಕೆ.ಜಿ ಚಿನ್ನ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ರತ್ನಗಳು ಹೊಂದಿದ್ದೇನೆ ಎಂದು ಸ್ವತಃ ಘೋಷಿಸಿಕೊಂಡಿದ್ದನು.

    ಐಎಂಎ ನಲ್ಲಿ ಕೇವಲ ಹಣ ಮಾತ್ರ ಹೂಡಿಕೆ ಮಾಡದೇ ಜನರು ಚಿನ್ನವನ್ನು ಕೊಡ ಗಿರವಿ ಇಟ್ಟಿದ್ದಾರೆ. ಚಿನ್ನ ಗಿರವಿ ಇಟ್ಟು ಸಾಲ ಕೂಡ ಪಡೆದಿದ್ದಾರೆ. ಐಎಂಎ ವಿರುದ್ಧ ಇದುವರೆಗೂ 14 ಸಾವಿರಕ್ಕೂ ಅಧಿಕ ದೂರು ದಾಖಲಾಗಿದ್ದು. 14 ಸಾವಿರದಲ್ಲಿ 300 ರಿಂದ 400 ಜನ ಚಿನ್ನಾಭರಣಗಳನ್ನು ಗಿರವಿ ಇಟ್ಟವರು ದೂರು ನೀಡಿದ್ದಾರೆ. ಲಾಕರ್‍ನಲ್ಲಿ ಚಿನ್ನಾಭರಣ ಇಟ್ಟು ಹಣ ಪಡದು ಬಡ್ಡಿ ಕಟ್ಟುತ್ತಿದ್ದ ದೂರುದಾರು ಶೇ.4 ರಿಂದ ಶೇ.5 ಬಡ್ಡಿ ಕಟ್ಟುತ್ತಿದ್ದರು.

    ಸದ್ಯ ಚಿನ್ನಾಭರಣಗಳನ್ನು ಗಿರವಿ ಇಟ್ಟು ಸಾಲ ಪಡೆದವರ ಚಿನ್ನ ಸೇಫ್ ಇದ್ಯಾ ಇಲ್ವಾ ಅನ್ನೋ ಅನುಮಾನದಲ್ಲಿ ಇದ್ದಾರೆ.