Tag: ಗಿಫ್ಟ್

  • ಚಾಮರಾಜನಗರದಲ್ಲೊಂದು ವಿಶೇಷ ಮದ್ವೆ – ಜೋಡಿಯಿಂದ ಅತಿಥಿಗಳಿಗೆ ಸಸಿ ಗಿಫ್ಟ್

    ಚಾಮರಾಜನಗರದಲ್ಲೊಂದು ವಿಶೇಷ ಮದ್ವೆ – ಜೋಡಿಯಿಂದ ಅತಿಥಿಗಳಿಗೆ ಸಸಿ ಗಿಫ್ಟ್

    ಚಾಮರಾಜನಗರ: ಸಾಮಾನ್ಯವಾಗಿ ಮದುವೆ ಅಂದಮೇಲೆ ಬಂದ ಅಥಿತಿಗಳಿಗೆ ತಾಂಬೂಲದ ವೇಳೆ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆ ಮನೆಯಲ್ಲಿ ಅತಿಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಪಾಠ ಮಾಡುವುದರ ಜೊತೆಗೆ, ಪರಿಸರ ಸಂರಕ್ಷಣೆಗೆಂದು ಒಂದು ಗಿಫ್ಟ್ ಕೂಡ ನೀಡಿದ್ದಾರೆ.

    ಮರ ಬೆಳೆಸಿ ಪರಿಸರ ರಕ್ಷಿಸಿ ಎನ್ನುವ ಸಂದೇಶದೊಂದಿಗೆ ದಿವ್ಯಜ್ಯೋತಿ ಮತ್ತು ನಂದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಧುನಿಕರಣ ಜನರನ್ನು ಆವರಿಸುತ್ತಿರುವ ದಿನಗಳಲ್ಲಿ ಪರಿಸರವೂ ಕೂಡ ನಾಶವಾಗುತ್ತಿದೆ. ಈ ಪರಿಸರದ ಅವನತಿ ಆಗಬಾರದು ಎಂದು ನವ ಜೋಡಿಗಳು ಹಾಗೂ ಅವರ ಪೋಷಕರು ಜನರಿಗೆ ಪರಿಸರದ ಪಾಠ ಹೇಳಿ ಕೊಡುವುದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ತಾಂಬೂಲದ ಜೊತೆಗೆ ಸಸಿಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಕಾಡುಗಳು ಬೆಂಕಿ ಬಿದ್ದು ನಾಶವಾಗಿತ್ತು. ಈ ರೀತಿ ಕಾಡು ನಾಶವಾದರೆ ನಮ್ಮ ಪರಿಸರ ಸಂಪೂರ್ಣವಾಗಿ ಹಾಳಾಗುತ್ತದೆ. ಹೀಗಾಗಿ ಪರಿಸರಕ್ಕೆ ನಮ್ಮದೊಂದು ಕಾಣಿಕೆ ಇರಲಿ ಎಂದು ಬಂದ ಅಥಿತಿಗಳಿಗೆ ಬೇವು, ಸಿಲ್ವರ್, ಸೀಬೆ, ನಿಂಬೆ ಸೇರಿದಂತೆ ಇತರೆ ಜಾತಿಯ ಗಿಡಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎಂದು ಮದುವೆಗೆ ಬಂದ ಅತಿಥಿ ರವೀಶ್‍ಮೂರ್ತಿ ಹೇಳಿದ್ದಾರೆ.

  • ಪ್ರಧಾನಿ ಮೋದಿಗಾಗಿ ಬೆಳ್ಳಿ ಗದೆ ಸಿದ್ಧತೆ

    ಪ್ರಧಾನಿ ಮೋದಿಗಾಗಿ ಬೆಳ್ಳಿ ಗದೆ ಸಿದ್ಧತೆ

    ಕೊಪ್ಪಳ: ಇಂದು ಭತ್ತದ ನಾಡು ಗಂಗಾವತಿಗೆ ಪ್ರಧಾನಿ ಮೋದಿ ಅವರು ಭೇಟಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳು ಅವರಿಗಾಗಿ ಬೆಳ್ಳಿ ಗದೆ ಉಡುಗೊರೆ ಕೊಡುತ್ತಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಕೊಡಲು 1,650 ಗ್ರಾಂ. ಬೆಳ್ಳಿ ಗದೆ ಗಿಫ್ಟ್ ಈಗಾಗಲೇ ಸಿದ್ಧವಾಗಿದೆ. ಈ ಗದೆಯನ್ನು ಕೊಲ್ಲಾಪೂರದಲ್ಲಿ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಹನುಮ ಮಾಲಾಧಾರಿಗಳು ಗದೆಗೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಪ್ರಧಾನಿ ಮೋದಿ ಗೆದ್ದು ಬರಲಿ ಎಂದು ವಿಶೇಷ ಪೂಜೆ ಮಾಡಿಸಿದ್ದಾರೆ.

    ಹನುಮ ಹುಟ್ಟಿದ ಸ್ಥಳ ಎಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಹೆಸರಾಗಿದೆ. ಹೀಗಾಗಿ ಹನುಮ ಹುಟ್ಟಿದ ನಾಡು ಹಿನ್ನೆಲೆಯಲ್ಲಿ ಮೋದಿ ಅವರಿಗೆ ಬೆಳ್ಳಿ ಗದೆ ಗಿಫ್ಟ್ ಕೊಡಲಾಗುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಹನುಮ ಮಾಲಾಧಾರಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ.

    ಇಂದು ಮಧ್ಯಾಹ್ನ ಮೂರು ಗಂಟೆಗೆ ಗಂಗಾವತಿಯ ಕನಕಗಿರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸಂಸದ ಸಂಗಣ್ಣ ಕರಡಿ ಪರ ಮತಯಾಚನೆ ಮಾಡಲಿದ್ದಾರೆ. ಸುಮಾರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಗಳಿವೆ. ಹೀಗಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜನೆ ಮಾಡಲಾಗಿದೆ.

    ಈ ಹಿಂದೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಅನೇಕ  ರಾಜಕೀಯ ಮುಖಂಡರು ಈ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ್ದರು.

  • ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ಅವರಿಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಉಡುಗೊರೆಯಾಗಿ ಸಿಕ್ಕಿದೆ.

    ನಟ ಠಾಕೂರ್ ಅನೂಪ್ ಸಿಂಗ್ ಅವರು ದರ್ಶನ್ ಅವರಿಗೆ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ್ದಾರೆ. ದರ್ಶನ್ ಅವರು ಸ್ನೇಹಿತ ಅನೂಪ್ ಸಿಂಗ್ ಹಾಗೂ ಸುನೀಲ್ ಕುಮಾರ್ ದೇಸಾಯಿ ಆಹ್ವಾನಿಸಿದ್ದರಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.

    ಅನೂಪ್ ಸಿಂಗ್ ಅವರು ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಠಾಕೂರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರಾಗಿದ್ದರು. ‘ಉದ್ಘರ್ಷ’ ಸಿನಿಮಾದಲ್ಲಿ ಅನೂಪ್ ಸಿಂಗ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಠಾಕೂರ್ ತನ್ನ ಗೆಳೆಯ ದರ್ಶನ್‍ಗೆ ಒಂದು ಕೆಜಿ ತೂಕದ ವಾಚ್ ನೀಡಿದ್ದಾರೆ. ಆದರೆ ವಾಚಿನ ಬೆಲೆ ಮಾತ್ರ ತಿಳಿಸಲಿಲ್ಲ.

    ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಸಿನಿಮಾದಲ್ಲಿ ಅಭಿನಯಿಸಿ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವಿಚಾರದಲ್ಲಿ ಠಾಕೂರ್ ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಸಂತಸ ತಂದಿದೆ. ಸಿನಿಮಾದಲ್ಲಿ ಅಭಿನಯಿಸಿ ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ” ಎಂದು ದರ್ಶನ್ ಹೇಳಿದ್ದರು.

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬರುತ್ತಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ್ತ್ ಡೇಗೂ ಮುನ್ನವೇ ದರ್ಶನ್ ಮನೆ ತಲುಪಿದ ಗಿಫ್ಟ್

    ಬರ್ತ್ ಡೇಗೂ ಮುನ್ನವೇ ದರ್ಶನ್ ಮನೆ ತಲುಪಿದ ಗಿಫ್ಟ್

    -ಬ್ಯಾರಿಕೇಡ್ ಹಾಕಿ ವೇದಿಕೆ ಸಿದ್ಧತೆ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳ ಗಿಫ್ಟ್ ದರ್ಶನ್ ಮನೆ ತಲುಪಿದೆ.

    ದರ್ಶನ್ ಅಭಿಮಾನಿಯೊಬ್ಬರು ಲೋಡ್‍ಗಟ್ಟಲೆ ಅಕ್ಕಿ ಮೂಟೆಗಳನ್ನ ದರ್ಶನ್ ಮನೆಗೆ ತಂದು ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಆರ್.ಆರ್ ನಗರದ ದರ್ಶನ್ ನಿವಾಸದ ಮುಂದೆ ಬ್ಯಾರಿಕೇಡ್ ಹಾಕಿ ವೇದಿಕೆ ರೆಡಿಮಾಡಲಾಗುತ್ತಿದೆ. ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಸಿಗುವ ಎಲ್ಲಾ ಧಾನ್ಯಗಳನ್ನೂ ಪ್ರತೀ ಜಿಲ್ಲೆಯ ಒಂದು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ನೀಡುವ ಜವಾಬ್ದಾರಿಯನ್ನ ದರ್ಶನ್ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ ತಿಳಿಸಿ ಪತ್ರ ಬರೆದ ದರ್ಶನ್

    ಫೆ.16 ರಂದು 42 ವಸಂತಕ್ಕೆ ಕಾಲಿಡಲಿರುವ ಹಿನ್ನೆಲೆಯಲ್ಲಿ ಕೇಕ್, ಪಟಾಕಿ, ಹೂ ಹಾರಕ್ಕಾಗಿ ಹಣ ವ್ಯಯ ಮಾಡದಂತೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು. ಹೀಗಾಗಿ ದರ್ಶನ್ ಮನವಿಯನ್ನ ಚಾಚೂ ತಪ್ಪದೆ ಪಾಲಿಸುವ ಅಭಿಮಾನಿಗಳು ಈ ವರ್ಷದಿಂದ ಸಮಾಜಮಖಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚೆಯೇ ಆರ್.ಆರ್ ನಗರದ ದರ್ಶನ್ ಮನೆಗೆ ಆಹಾರ ಧಾನ್ಯಗಳ ಉಡುಗೊರೆ ಸಂಗ್ರಹವಾಗುತ್ತಿದೆ.

    ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ. ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನನ್ನ ಹುಟ್ಟುಹ್ಬಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದುಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್‍ಗಳನ್ನೇ ಬಳಸಿ. ವಂದನೆಗಳೊಂದಿಗೆ ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್” ಎಂದು ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಬೆಂಗಳೂರು: ಫೆಬ್ರವರಿ 14 ಬಂದರೆ ಪ್ರೇಮಿಗಳಿಗೆ ಹಬ್ಬ. ಪ್ರತಿ ವ್ಯಾಲೇಂಟೆನ್ಸ್ ಡೇಗೂ ನನ್ನ ಹುಡ್ಗಾನೇ ಗಿಫ್ಟ್ ಕೊಡತ್ತಾನೆ. ಆದರೆ ಈ ವರ್ಷ ನನ್ನ ಹೀರೋಗೆ ಏನಾದ್ರೂ ಕೊಡೋಣ ಎಂದು ಯುವತಿಯರು ಫುಲ್ ರೆಡಿಯಾಗಿದ್ದಾರೆ.

    ಸಿಲಿಕಾನ್ ಸಿಟಿ ಬೆಡಗಿಯರ ಕೈಯಲ್ಲಿ ಪ್ರೇಮ ಚಿತ್ತಾರಗಳು ಮೂಡಿದೆ. ಕೈಯಲ್ಲಿ ಮೆಹಂದಿ ಇದೆ ಎಂದರೆ ಅಲ್ಲೊಂದು ಖುಷಿ, ಸಂತೋಷ ಇದೆ ಎಂದು ಅರ್ಥ. ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಕ್ಕೆ ಮೆಹಂದಿ, ಟ್ಯಾಟೂ ಟ್ರೆಂಡ್ ಹುಟ್ಟಿಕೊಂಡಿದೆ. ಪೋಟ್ ರೇಟ್ ಮದರಂಗಿಯಲ್ಲೇ ತಮ್ಮ ಗೆಳೆಯನ ಹೆಸರನ್ನು ಹಾಕಿಸಿಕೊಳ್ಳುತ್ತಿದ್ದಾರೆ.

    ಇವುಗಳ ಜೊತೆ ಟ್ಯಾಟೂ ಟ್ರೆಂಡ್ ಸಹ ಸ್ಟಾರ್ಟ್ ಆಗಿದ್ದು, ತಮ್ಮ ಇನಿಯನ ನೆನಪಿಗಾಗಿ ಲವ್ ಸಿಂಬಲ್ ಗಳನ್ನು ರಂಗೇರಿಸಿ ಕೊಳ್ಳುತ್ತಿದ್ದಾರೆ. ಜೀವವಿಲ್ಲದ ವಸ್ತುಗಳನ್ನು ಕೊಡುವುದಕ್ಕಿಂತ ತನ್ನ ಕೈಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಈ ಡಿಸೈನ್‍ಗಳು ಕನಿಷ್ಟ 1 ವಾರವಿರುವುದರಿಂದ ಯುವತಿಯರು, ತಾತ್ಕಾಲಿಕ ಹಾಗೂ ಪರ್ಮೇನೆಂಟ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಈ ಡಿಸೈನ್‍ಗಳು ಚೆಲುವೆಯರ ಕೈಗೆ ನ್ಯೂ ಲುಕ್ ನೀಡುತ್ತಿವೆ. ಜೊತೆಗೆ ಪ್ರೀತಿಯನ್ನು ರಂಗೇರಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಚ್‍ಎಸ್‍ಆರ್ ಪೊಲೀಸರಿಗೆ ಸ್ಪೆಷಲ್ ಗಿಫ್ಟ್ ನೀಡಿದ ಇನ್ಸ್ ಪೆಕ್ಟರ್!

    ಹೆಚ್‍ಎಸ್‍ಆರ್ ಪೊಲೀಸರಿಗೆ ಸ್ಪೆಷಲ್ ಗಿಫ್ಟ್ ನೀಡಿದ ಇನ್ಸ್ ಪೆಕ್ಟರ್!

    ಬೆಂಗಳೂರು: ಹೆಚ್‍ಎಸ್‍ಆರ್ ಪೊಲೀಸ್ ಸಿಬ್ಬಂದಿಗೆ ಠಾಣೆಯ ಇನ್ಸ್ ಪೆಕ್ಟರ್ ಎಸ್.ಆರ್ ರಾಘವೇಂದ್ರ ವಿಶೇಷ ಉಡುಗೊರೆ ನೀಡಿದ್ದಾರೆ.

    ಸಿಬ್ಬಂದಿಯ ಹುಟ್ಟುಹಬ್ಬದ ದಿನ ಹಾಗೂ ವಿವಾಹ ವಾರ್ಷಿಕೋತ್ಸವ ದಿನ ಕಡ್ಡಾಯ ವಾರದ ರಜೆಯನ್ನು ಘೋಷಣೆ ಮಾಡಿದ್ದಾರೆ. ಒತ್ತಡದ ಬದುಕಿನಲ್ಲಿ ನಿಮ್ಮ ಕುಟುಂಬದವರು ನಿಮ್ಮ ಪ್ರೀತಿ ನಿರೀಕ್ಷೆ ಮಾಡುತ್ತಿರುತ್ತಾರೆ. ಇದಕ್ಕಾಗಿ ಹುಟ್ಟುಹಬ್ಬದ ದಿನ ಹಾಗೂ ವಿವಾಹದ ದಿನ ನಿಮ್ಮ ಕುಟುಂಬದ ಜೊತೆಯೇ ಕಳೆಯಿರಿ ಎಂದು ಇನ್ಸ್ ಪೆಕ್ಟರ್ ಸಿಬ್ಬಂದಿಗೆ ಪತ್ರದ ಮೂಲಕ ಗಿಫ್ಟ್ ನೀಡಿದ್ದಾರೆ.

    ಇನ್ಸ್ ಪೆಕ್ಟರ್ ಪತ್ರ:
    ಪ್ರೀತಿಯ ಹೆಚ್‍ಎಸ್‍ಆರ್ ಠಾಣಾ ಸಿಬ್ಬಂದಿ ಸಹೋದರ/ಸಹೋದರಿಯರೇ.. “ಯಾವಾಗಲೂ ಬಿಡುವಿಲ್ಲದೆ ಕೆಲಸದಲ್ಲಿ ತಮ್ಮನ್ನು ನಾನು ಮರೆತಿರುತ್ತೇವೆ. ನಮಗೂ ಒಂದು ಕುಟುಂಬವಿದೆ, ಅವರಿಗೂ ನಾವು ಸಮಯ ನೀಡಬೇಕು ಎಂಬುದನ್ನು ಮರೆತು ಹಗಲಿರುಳು ಕೆಲಸ ಮಾಡುತ್ತಿರುತ್ತೇವೆ. ಆದರೆ ಅಂತಿಮವಾಗಿ ನಮ್ಮನ್ನು  ನಮ್ಮ ಕುಟುಂಬದವರು ಮತ್ತು ಪ್ರೀತಿ ಪಾತ್ರದಾರ ಸ್ನೇಹಿತರು ಮಾತ್ರ ನಿರೀಕ್ಷಿಸುತ್ತಿರುತ್ತಾರೆ. ಅದಕ್ಕಾಗಿ ನಿಮ್ಮ ಹುಟ್ಟುಹಬ್ಬದ ದಿನವನ್ನು ಹಾಗೂ ನಿಮ್ಮ ವಿವಾಹದ ದಿನವನ್ನು ಹೆಚ್ಚ ಅರ್ಥಪೂರ್ಣವಾಗಿ ಆಚರಿಸಲು ಆ ದಿನಗಳಂದು ಕಡ್ಡಾಯವಾಗಿ ವಾರದ ರಜೆಯನ್ನು ಬಳಸಿಕೊಳ್ಳಲು ಸೂಚಿಸಿರುತ್ತೇನೆ. ಇದರಿಂದ ನೀವುಗಳು ವೃತ್ತಿ ಜೀವನದಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲಿ ಎಂಬುದು ನನ್ನ ಆಶಯ” ಎಂದು ಬರೆದಿದ್ದಾರೆ.

    ಇನ್ಸ್ ಪೆಕ್ಟರ್ ಎಸ್.ಆರ್ ರಾಘವೇಂದ್ರ ಅವರು ನೀಡಿದ ಈ ಕೊಡುಗೆಯಿಂದ ಪೊಲೀಸ್ ಸಿಬ್ಬಂದಿ ಫುಲ್ ಖುಷಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಲ್ಲಿ ನವದಂಪತಿಗೆ ಸಿಕ್ತು ಮೋದಿ ಭಾವಚಿತ್ರದ ಗಿಫ್ಟ್

    ಮದ್ವೆಯಲ್ಲಿ ನವದಂಪತಿಗೆ ಸಿಕ್ತು ಮೋದಿ ಭಾವಚಿತ್ರದ ಗಿಫ್ಟ್

    ಬೆಳಗಾವಿ/ಚಿಕ್ಕೋಡಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಹೆಸರು ಬಳಸಿದ್ದು ನೋಡಿದ್ದೀರಿ, ಮೋದಿ ಸಾಧನೆಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವದನ್ನು ನೋಡಿದ್ದೀರಿ. ಆದರೆ ಅದಕ್ಕೂ ವಿಶೇಷ ಎನ್ನುವಂತೆ ಮದುವೆ ಕಾರ್ಯಕ್ರಮದಲ್ಲಿ ವಧು-ವರರಿಗೆ ಮೋದಿ ಭಾವಚಿತ್ರ ಗಿಫ್ಟ್ ಕೊಡಲಾಗಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಜರುಗಿದ ಕಲ್ಲಪ್ಪ ಪಾಯನ್ನವರ ಹಾಗೂ ಜಯಾ ಅವರ ಮದುವೆ ಕಾರ್ಯಕ್ರಮದಲ್ಲಿ ಈಶ್ವರ್ ಶೇಗುನಿಶಿ ಎಂಬವರು ವಧು-ವರರಿಗೆ ಮೋದಿ ಭಾವಚಿತ್ರ ಗಿಫ್ಟ್ ನೀಡಿದ್ದಾರೆ. ಮೋದಿ ಭಾವಚಿತ್ರದ ಜೊತೆಗೆ ಚಿನ್ನದ ಉಂಗುರ ಕೊಡುಗೆಯಾಗಿ ಕೊಟ್ಟಿದ್ದಾರೆ. ಈ ವೇಳೆ ಮೋದಿ ಭಾವಚಿತ್ರದ ಗಿಫ್ಟ್ ಸಂತಸ ತಂದಿದೆ ಎಂದು ವರ ಕಲ್ಲಪ್ಪ ಹೇಳಿಕೊಂಡಿದ್ದಾರೆ.

    ವರ ಕಲ್ಲಪ್ಪ ಪಾಯನ್ನವರ ಮೂಲತಃ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದವರಾಗಿದ್ದರು. ಐರ್ಲ್ಯಾಂಡ್ ದೇಶದ ಟಿಪ್ಪೆರೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಗಿಫ್ಟ್ ನೀಡಿರುವ ಈಶ್ವರ್ ಶೇಗುಣಶಿ ಮೂಲತ ಹುಕ್ಕೇರಿ ತಾಲೂಕಿನ ಕುರಣಿವಾಡಿ ಗ್ರಾಮದವರಾಗಿದ್ದು, ಐರ್ಲ್ಯಾಂಡ್ ದೇಶದ ಗಾಲವೇ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರೂ ಸ್ನೇಹಿತರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ದೇಶದ ಪ್ರಧಾನಿ ಮೋದಿ ಅವರ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯಗೆ ಕಾರ್ ಗಿಫ್ಟ್ ಕೊಟ್ಟ ‘ಶಿಷ್ಯ’ ಭೈರತಿ ಸುರೇಶ್ – ಸಿದ್ದು ಉತ್ತರಾಧಿಕಾರಿ ಆಗ್ತಾರಾ?

    ಸಿದ್ದರಾಮಯ್ಯಗೆ ಕಾರ್ ಗಿಫ್ಟ್ ಕೊಟ್ಟ ‘ಶಿಷ್ಯ’ ಭೈರತಿ ಸುರೇಶ್ – ಸಿದ್ದು ಉತ್ತರಾಧಿಕಾರಿ ಆಗ್ತಾರಾ?

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆಜೆ ಜಾರ್ಜ್ ಅವರಿಂದ ಭರ್ಜರಿ ಗಿಫ್ಟ್ ಲಭಿಸಿತ್ತು. ಆದಾದ ಬಳಿಕ ಸದ್ಯ ಸಿದ್ದರಾಮಯ್ಯ ಅವರ ರಾಜಕೀಯ ಶಿಷ್ಯರೆಂದೇ ಗುರುತಿಸಿಕೊಂಡಿರುವ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರು ಕೋಟಿ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ.

    ರಾಜಕೀಯದಲ್ಲಿ ತಮ್ಮ ಮಗನನ್ನು ಬೆಳೆಸುವ ಬದಲು ತಮ್ಮ ಶಿಷ್ಯಂದಿರಗೆ ಉತ್ತಮ ರಾಜಕೀಯ ಜೀವನ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಅವರ ಶಿಷ್ಯರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಅವರು ಹೊಸ ಕಾರು ನೀಡಿದ್ದಾರೆ.

    ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಭೈರತಿ ಸುರೇಶ್ ಅವರು ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ವತಂತ್ರ್ಯವಾಗಿ ಸ್ಪಧಿಸಿದ್ರು. ಬಳಿಕ ಹೆಬ್ಬಾಳ ಕ್ಷೇತ್ರದಲ್ಲಿ ಗೆದ್ದು ಶಾಸಕ ಸ್ಥಾನ ಪಡೆದಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಮನೆಗೆ ಬಂತು ಕೋಟಿ ಮೌಲ್ಯದ ಬೆಂಜ್ ಕಾರ್! –  ವಿಶೇಷತೆ ಏನು?

    ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ನಲ್ಲಿ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಈ ಹಿಂದೆಯೇ ಸಂದೇಶ ನೀಡಿದ್ದರು. ಸಾಮಾನ್ಯವಾಗಿ ತಂದೆ ಸಕ್ರಿಯ ರಾಜಕಾರಣದಲ್ಲಿದ್ದರೆ ಅವರ ಮಗ ಉತ್ತರಾಧಿಕಾರಿ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಸಿಎಂ ತಮ್ಮ ಮಗನ ಬಗ್ಗೆ ಹೆಚ್ಚು ಒಲವು ತೋರಿಸದೇ ತಮ್ಮದೇ ಸಮುದಾಯ ಶಾಸಕರದ ಭೈರತಿ ಸುರೇಶ್ ಅವರನ್ನು ಸದ್ದಿಲ್ಲದೇ ಪ್ರಚಾರಕ್ಕೆ ತರಲು ಮುಂದಾಗಿದ್ದರು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ತಮ್ಮ ಮಗನಿಗೆ ಮಂತ್ರಿಗಿರಿ ಕೊಡಿಸುವಂತೆ ಒತ್ತಡ ಹೇರದೆ ಭೈರತಿ ಸುರೇಶ್ ಅವರ ಪರವಾಗಿ ಸಿದ್ದರಾಮಯ್ಯ ಹೆಚ್ಚಿನ ಒಲವು ತೋರಿದ್ದರು.

    ಪಕ್ಷದ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದ ಭೈರತಿ ಸುರೇಶ್ ರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದರು. ಆದ್ದರಿಂದ ಅವರನ್ನೇ ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಇನ್ನುಳಿದ ಕುರುಬ ಸಮುದಾಯದ ನಾಯಕ ಅಸಮಾಧಾನಕ್ಕೂ ಕಾರಣವಾಗಿತ್ತು. ಪ್ರಮುಖವಾಗಿ ಹೆಚ್.ಎಂ.ರೇವಣ್ಣ, ಶಾಸಕರಾದ ಶಿವಳ್ಳಿ, ಎಂ.ಟಿ.ಬಿ.ನಾಗರಾಜ್ ಪಕ್ಷದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಭಯ ಪಡುವಂತಾಗಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯನವರೇ ನಮ್ಮ ಪಾಲಿಗೆ ವಿಲನ್ ಆಗಿದ್ದು, ಮಂತ್ರಿ ಸ್ಥಾನಕ್ಕೆ ಸಿಎಂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಕುರುಬ ಸಮಾಜದ ಶಾಸಕರು ತಮ್ಮ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

    ಯಾಕೆ ನೀವು ಭೈರತಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯನವರನ್ನು ಕೇಳಿದ್ದಕ್ಕೆ ತಮ್ಮ ಆಪ್ತರ ಬಳಿ, ಭೈರತಿ ಸುರೇಶ್ ತಮ್ಮ ಸಾಮಥ್ರ್ಯದಿಂದಲೇ ಪರಿಷತ್ ಸದಸ್ಯರಾಗಿದ್ದಾರೆ. ಹೆಬ್ಬಾಳ ಉಪ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ನಿಷ್ಟೆಯಿಂದಲೇ ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವುದೇ ಅಪಸ್ವರ ಎತ್ತದೇ ಶಿಸ್ತಿನಿಂದ ಪಕ್ಷ ಕಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಕ್ಕಾಗ ಅವರಿಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಸಮುದಾಯದ ಉಳಿದ ಶಾಸಕರುಗಳು ಅವರವರ ಗೆಲುವಿಗಷ್ಟೆ ಸೀಮಿತರಾದರು. ಕಷ್ಟದಲ್ಲಿದ್ದಾಗ ಯಾರೂ ನೆರವಿಗೂ ಬರಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಚಾರ ತಿಳಿದುಬಂದಿತ್ತು.

    ಇದೇ ಕಾರಣಕ್ಕೆ ಭೈರತಿ ಸುರೇಶ್ ಗೆ ಮಂತ್ರಿ ಸ್ಥಾನ ನೀಡಬೇಕು ಅಂತಾ ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಕೂಡಾ ಮಾಡಿದ್ದರು ಎನ್ನಲಾಗಿತ್ತು. ತಮ್ಮ ಪುತ್ರನಿಗಿಂತ ಹೆಚ್ಚು ಪ್ರೀತಿ ತೋರಿಸಿ ಭವಿಷ್ಯದ ಸಮುದಾಯದ ನಾಯಕನನ್ನಾಗಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಆಪ್ತ ವಲಯದಲ್ಲೇ ಈಗ ಕೇಳಿ ಬಂದಿತ್ತು. ಸದ್ಯ ಬೈರತಿ ಸುರೇಶ್ ಅವರು ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದ ಸಿದ್ದರಾಮಯ್ಯ ಅವರಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    -ಬಿಗ್ ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಮತ್ತು ರಾಕೇಶ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಕ್ಷತಾ ಅವರು ಕ್ರಿಸ್ ಮಸ್ ಪ್ರಯುಕ್ತ ರಾಕೇಶ್ ಕೊಟ್ಟ ಉಡುಗೊರೆಯನ್ನು ಮೊದಲು ನಿರಾಕರಿಸಿ ಬಳಿಕ ಎಲ್ಲರೂ ಮಲಗಿದ ನಂತರ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಕ್ರಿಸ್‍ಮಸ್ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆಲ್ಲರೂ ಸಾಂತಾ ಆಗಿದ್ದರು. ಆದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳೆಲ್ಲರಿಗೂ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಎಂದರೆ ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸ್ಪರ್ಧಿಯೊಬ್ಬರಿಗೆ ಉಡುಗೊರೆ ರೂಪದಲ್ಲಿ ಕೊಡಬೇಕಿತ್ತು. ಉಡುಗೊರೆ ಕೊಟ್ಟ ಕಾರಣವನ್ನು ಎಲ್ಲರ ಮುಂದೆ ಹೇಳಿ ಕೊಡಬೇಕಿತ್ತು.

    ಅದೇ ರೀತಿ ಎಲ್ಲರೂ ತಮ್ಮ ಅಮೂಲ್ಯ ವಸ್ತುಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ರಾಕೇಶ್, ರಶ್ಮಿ ಅವರಿಗೆ ಕ್ರಿಸ್‍ಮಸ್ ಗಿಫ್ಟ್ ಆಗಿ ಒಂದು ಬೆಲ್ಟ್ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ಸಿಕ್ಕಿತ್ತು. ಆದರೆ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಇದರಿಂದ ಅಕ್ಷತಾ ಬೇಸರ ಮಾಡಿಕೊಂಡಿದ್ದರು. ಕೊನೆಗೆ ರಾಕೇಶ್ ಮೇಕಪ್ ರೂಮಿಗೆ ತೆರಳಿ ಅಕ್ಷತಾ ಸೂಟ್‍ಕೇಸ್ ಮೇಲೆ ಗಿಫ್ಟ್ ಇಟ್ಟು ಬಂದಿದ್ದರು.

    ಮೇಕಪ್ ರೂಮಿನಲ್ಲಿ ಇರಿಸಿದ ಗಿಫ್ಟ್ ನ್ನು ನಿವೇದಿತಾ ಗೌಡ ನೋಡಿದರು. ಗಿಫ್ಟ್ ಮೇಲೆ ಅಕ್ಷತಾ ಅಂತ ಬರೆಯಲಾಗಿತ್ತು. ಹಾಗಾಗಿ ನಿವೇದಿತಾ ಗೌಡ ನೇರವಾಗಿ ಅಕ್ಷತಾಗೆ ನೀಡಿದರು. ಆದರೆ ಅಕ್ಷತಾ ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನು ಇಟ್ಟುಕೊಂಡು ಕಾಣಿಕೆಯನ್ನು ರಾಕೇಶ್ ಸೂಟ್‍ಕೇಸ್ ನಲ್ಲಿ ವಾಪಸ್ ಇಟ್ಟಿದ್ದರು. ರಾಕೇಶ್ ತಮ್ಮ ಸ್ವೆಟರ್ ನ್ನು ಉಡುಗೊರೆಯಾಗಿ ಕೊಟ್ಟಿದ್ದರು.

    ಇದನ್ನು ನೋಡಿದ ರಾಕೇಶ್, ಇದು ಕ್ರಿಸ್ ಮಸ್ ಗಿಫ್ಟ್, ಯಾರು ಉಡುಗೊರೆಯನ್ನ ವಾಪಸ್ ಕೊಡಬಾರದು ಅಂತ ಪದೇ ಪದೇ ಅಕ್ಷತಾಗೆ ಹೇಳಿದರು. ಆದರೆ ಅಕ್ಷತಾ ನೀವು ಕನ್ನಡದಲ್ಲಿ ಬರೆದಿರುವ ಸಂದೇಶ ಸಾಕು ಎಂದು ಗಿಫ್ಟ್ ಪಡೆಯದೆ ಹೋದರು. ಬಳಿಕ ಬಿಗ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಅಕ್ಷತಾ ರಾಕೇಶ್ ಕೊಟ್ಟ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ.

    ರಾತ್ರಿ ವೇಳೆ ಅಕ್ಷತಾ ಗಿಫ್ಟ್ ತೆಗೆದುಕೊಂಡು ರಾಕೇಶ್ ಬರೆದ ಸಂದೇಶವನ್ನು ಬಿಗ್ ಬಾಸ್ ಕ್ಯಾಮೆರಾ ಮುಂದೆ ಓದಿ ಹೇಳಿದ್ದಾರೆ. “ಅಕ್ಷತಾ ನನಗೆ ಗೊತ್ತು, ಇದು ನಿನಗೆ ಬೇಕು ಅಂತ, ನೀನು ಇದನ್ನು ಕ್ಯಾಮೆರಾ ಮುಂದೆ ಬೇಕು ಎಂದು ಕೇಳುತ್ತಿದ್ದೆ. ನಮ್ಮ ಮಧ್ಯೆ ನಡೆಯುತ್ತಿರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿದೆ’ ಎಂದು ರಾಕೇಶ್ ಬರೆದಿದ್ದರು.

    ಅಕ್ಷತಾ ಬಿಗ್ ಮನೆಯಲ್ಲಿ ಕ್ಯಾಮೆರಾ ಮುಂದೆ ಹೋಗಿ ನನಗೆ ಸ್ವೆಟರ್ ಬೇಕು ಎಂದು ಕೇಳುತ್ತಿದ್ದರು. ಆದ್ದರಿಂದ ರಾಕೇಶ್ ಕ್ರಿಸ್‍ಮಸ್ ಪ್ರಯುಕ್ತ ಅಕ್ಷತಾಗೆ ಸ್ವೆಟರ್ ಕೊಟ್ಟಿದ್ದಾರೆ. ಕೊನೆಗೆ ಸ್ವೆಟರ್ ಕೊಟ್ಟ ರಾಕೇಶ್ ಗೆ ಅಕ್ಷತಾ ಧನ್ಯವಾದ ತಿಳಿಸಿದ್ದಾರೆ. ರಾತ್ರಿ ವೇಳೆ ಗಿಫ್ಟ್ ಪಡೆದುಕೊಂಡ ಕಾರಣ ಉಳಿದ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೋನಿಯಾ ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ ಗಿಫ್ಟ್..!

    ಸೋನಿಯಾ ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ ಗಿಫ್ಟ್..!

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೂರು ರಾಜ್ಯಗಳ ಗೆಲುವಿನ ಮೂಲಕ ತಾಯಿ ಸೋನಿಯಾ ಗಾಂಧಿಯವರಿಗೆ ಉಡುಗೋರೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    2017ರ ಡಿಸೆಂಬರ್ 11 ರಂದು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅದೇ ಡಿಸೆಂಬರ್ 11ಕ್ಕೆ ಸರಿಯಾಗಿ ಒಂದು ವರ್ಷ ತುಂಬುವ ದಿನದಂದೇ ಕಾಂಗ್ರೆಸ್, ಬಿಜೆಪಿ ಅಧಿಕಾರದ 3 ರಾಜ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಡಿಸೆಂಬರ್ 11 ನಿರ್ಣಾಯಕ ದಿನವಾಗಿದೆ ಅಂತ ಪ್ರಶಂಸಿಸಲಾಗಿದೆ. ಡಿಸೆಂಬರ್ 9 ಸೋನಿಯಾ ಗಾಂಧಿ ಬರ್ತ್ ಡೇ ಆಗಿರೋದ್ರಿಂದ ಪುತ್ರ ರಾಹುಲ್ ಗಾಂಧಿ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ ಎನ್ನಲಾಗ್ತಿದೆ.

    ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ರಫೇಲ್ ಡೀಲ್ ಹಗರಣ ಪ್ರಸ್ತಾಪ ಮಾಡುವ ಮೂಲಕ ಮೋದಿ ವಿರೋಧಿ ಅಲೆಯನ್ನ ಬಡಿದೆಬ್ಬಿಸಿದ್ರು. ಕಾಂಗ್ರೆಸ್ ಗೆಲುವಿಗೆ ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ. ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ಮುನ್ನಡೆಸಿದ್ದರು. ಆ ಪರಿಶ್ರಮದಿಂದಲೇ ಬಿಜೆಪಿಯ 3 ಕೋಟೆಗಳನ್ನು ಗೆದ್ದಿದ್ದೇವೆ ಅಂತ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ.

    ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್, ಕಾಂಗ್ರೆಸ್ಸನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇವೆ. ವಿಶೇಷವಾಗಿ ಈ ಕಾಂಗ್ರೆಸ್ ಗೆಲುವನ್ನು ದೇಶದ ರೈತರು, ಕಾರ್ಯಕರ್ತರು ಹಾಗೂ ದುಡಿಯುವ ಕೈಗಳಿಗೆ ಅರ್ಪಿಸುತ್ತೇನೆಂದು ಹೇಳಿದ್ದರು. ಆದ್ರೆ ಇದೀಗ ಕಾಂಗ್ರೆಸ್ ಗೆಲುವನ್ನು ತಾಯಿಗೆ ಅರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸತತವಾಗಿ ನಡೆಸಿದ ಟೆಂಪಲ್ ರನ್, ಬಿಜೆಪಿ ಹಿಡಿತದಲ್ಲಿದ್ದ ಛತ್ತೀಸ್‍ಗಢ ಮತ್ತು ರಾಜಸ್ಥಾನವನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಶಿವಭಕ್ತನಾದ ರಾಹುಲ್ ನಡೆಯನ್ನ ಮಧ್ಯಪ್ರದೇಶದ ಮತದಾರರು ಒಪ್ಪಿದಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv