Tag: ಗಿಫ್ಟ್

  • ಬಿಯರ್ ಗ್ಲಾಸನ್ನು ತನ್ನ ಕೈಗೆ ಚುಚ್ಚಿಕೊಂಡು ಪ್ರಿಯತಮೆಗೆ ರಕ್ತ ಗಿಫ್ಟ್ ಕೊಟ್ಟ ಪ್ರೇಮಿ

    ಬಿಯರ್ ಗ್ಲಾಸನ್ನು ತನ್ನ ಕೈಗೆ ಚುಚ್ಚಿಕೊಂಡು ಪ್ರಿಯತಮೆಗೆ ರಕ್ತ ಗಿಫ್ಟ್ ಕೊಟ್ಟ ಪ್ರೇಮಿ

    ಚೆನ್ನೈ: ಯುವಕನೊಬ್ಬ ತನ್ನ ಕೈಯನ್ನು ಸೀಳಿಕೊಂಡು ಪ್ರಿಯತಮೆಗೆ ತನ್ನ ರಕ್ತವನ್ನು ಕೊನೆಯ ಉಡುಗೊರೆಯಾಗಿ ಕೊಟ್ಟಿರುವ ಘಟನೆ ತಮಿಳುನಾಡಿನ ನಂಗನಲ್ಲೂರಿನಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈ ಸೀಳಿಕೊಂಡ ಪಾಗಲ್ ಪ್ರೇಮಿಯನ್ನು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಕುಮಾರೆಸಾ ಪಾಂಡಿಯನ್ ಎಂದು ಗುರುತಿಸಲಾಗಿದೆ. ತನ್ನ ಗೆಳತಿ ನನ್ನ ಜೊತೆ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಈ ಹುಚ್ಚು ಸಾಹಸಕ್ಕೆ ಕೈ ಹಾಕಿ ಮೃತಪಟ್ಟಿದ್ದಾನೆ.

    ಪಾಂಡಿಯನ್ ಕಳೆದ ಕೆಲ ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ಯಾವುದೋ ಕಾರಣಕ್ಕೆ ಯುವತಿ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾಳೆ ಮತ್ತು ಅವನ ನಂಬರ್‍ ನ್ನು ಬ್ಲಾಕ್ ಮಾಡಿದ್ದಾಳೆ. ಇದರಿಂದ ಮನನೊಂದ ಆತ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ಇದೇ ಕಾರಣದಿಂದ ಪಾಂಡಿಯನ್ ಜನರ ಜೊತೆ ಸ್ನೇಹಿತ ಜೊತೆ ಮಾತನಾಡದೇ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಅವರ ಸ್ನೇಹಿತರು ಹೇಳಿದ್ದಾರೆ.

    ಹೀಗೆ ಖಿನ್ನತೆಗೆ ಒಳಗಾಗಿದ್ದ ಪಾಂಡಿಯನ್ ಮಂಗಳವಾರ ತನ್ನ ಸ್ನೇಹಿತ ಮುತ್ತುಗೆ ಕರೆಮಾಡಿ ಭೇಟಿಯಾಗಲು ಹೇಳಿದ್ದಾನೆ. ಇಬ್ಬರು ಒಂದು ಸ್ಥಳದಲ್ಲಿ ಭೇಟಿಯಾಗಿ ಮದ್ಯಪಾನ ಮಾಡಿದ್ದಾರೆ. ಆಗ ಪಾಂಡಿಯನ್ ತನ್ನ ಗೆಳತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾನೆ. ಈ ನಡುವೆ ಬಿಯರ್ ಬಾಟಲ್‍ನ್ನು ಒಡೆದು ಆದರ ಗಾಜಿನಿಂದ ತನ್ನ ಕೈಯನ್ನು ಚುಚ್ಚಿದ್ದಾನೆ.

    ಇದನ್ನು ತಡೆಯಲು ಹೋದ ಸ್ನೇಹಿತನಿಗೆ ಅದೇ ಬಾಟಲ್ ಹಿಡಿದು ಬೆದರಿಕೆ ಹಾಕಿದ್ದಾನೆ. ನಂತರ ಕೈಯಿಂದ ಬರುತ್ತಿದ್ದ ರಕ್ತವನ್ನು ಅಲ್ಲೇ ಇದ್ದ ಮದ್ಯದ ಬಾಟಲಿಗೆ ಅದನ್ನು ತುಂಬಿಸಿ, ಬಾಟಲಿಯನ್ನು ಸ್ನೇಹಿತ ಮುತ್ತುಗೆ ಕೊಟ್ಟು ಇದನ್ನು ತೆಗೆದುಕೊಂಡು ಹೋಗಿ ನನ್ನ ಗೆಳತಿಗೆ ಕೊಡು ಮತ್ತು ಇದು ನನ್ನ ಕೊನೆಯ ಗಿಫ್ಟ್ ಎಂದು ಹೇಳು ಎಂದು ಹೇಳಿದ್ದಾನೆ.

    ರಕ್ತಸ್ರಾವದ ನಂತರ ಕುಸಿದು ಬಿದ್ದ ಪಾಂಡಿಯನ್ ಅನ್ನು ಮುತ್ತು ಕ್ರೋಮ್‍ಪೇಟ್‍ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮತ್ತೆ ಎಚ್ಚರಗೊಂಡ ಪಾಂಡಿಯನ್ ವೈದ್ಯರಿಗೆ ಚಿಕಿತ್ಸೆ ನೀಡಲು ಬಿಡದೇ ಅಲ್ಲೂ ತನ್ನ ಕೋಪ ತೋರಿಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡು ಪಾಂಡಿಯನ್ ಬುಧವಾರ ಬೆಳಗ್ಗೆ ಸುಮಾರು 1.30ರ ಸುಮಾರಿಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಶಂಕರ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚಿನ ತನಿಖೆ ಮಾಡುತ್ತಿದ್ದಾರೆ.

  • ಮಗಳ ನೆನಪನ್ನ ಸ್ಮರಣೀಯವಾಗಿಸಿದ ರಾಕಿಂಗ್ ದಂಪತಿ

    ಮಗಳ ನೆನಪನ್ನ ಸ್ಮರಣೀಯವಾಗಿಸಿದ ರಾಕಿಂಗ್ ದಂಪತಿ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗಳು ಐರಾಳ ಪುಟ್ಟ ಕೈ, ಕಾಲುಗಳ ಮಾದರಿಯ ಅಚ್ಚನ್ನು ಮಾಡಿಸಿದ್ದು, ಈ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಯಶ್ ಮತ್ತು ರಾಧಿಕಾ ಇಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಮೊದಲ ಮಗುವಿನ ಪೋಷಕರಾಗಿ ಮಗಳ ನೆನಪನ್ನು ಸ್ಮರಣೀಯವಾಗಿಸಲು ಇಬ್ಬರು ನಿರ್ಧರಿಸಿದ್ದೆವು. ಅದರಂತೆಯೇ ನಮಗೆ ಒಂದು ಹೊಸ ಯೋಚನೆ ಬಂದಿತ್ತು. ಆ ಯೋಚನೆಯನ್ನು ಪ್ರಶಾಂತ್ ಅವರು ಉಡುಗೊರೆಯನ್ನಾಗಿ ಸಿದ್ಧಪಡಿಸಿ ನೀಡಿದ್ದಾರೆ ಎಂದಿದ್ದಾರೆ.

    ಪೋಷಕರಾಗಿ ಇದು ನಮಗೆ ಸ್ಮರಣೀಯವಾಗಿದೆ. ಆರ್ಗ್ಯಾನಿಕ್ ಐಟಂ ಮೂಲಕ ಮಗಳ ಪುಟ್ಟ ಪುಟ್ಟ ಕೈ, ಕಾಲಿನ ಪದಗಳನ್ನು ಅಚ್ಚು ಮಾಡಿ ತಯಾರಿಸಲಾಗಿದೆ. ಈ ಅಚ್ಚುಗಳನ್ನು ಸಿದ್ಧಪಡಿಸಲು ಪ್ರಶಾಂತ್ ಹೆಚ್ಚು ಶ್ರಮವಹಿಸಿದ್ದಾರೆ ಎಂದು ರಾಕಿಂಗ್ ದಂಪತಿ ಅವರಿಗೆ ಧನ್ಯವಾದ ತಿಳಿಸಿದರು.

    ಐರಾ ಬೆಳೆದ ಮೇಲೆ ಇದನ್ನು ನೋಡಿ ಖಂಡಿತ ಖುಷಿಪಡುತ್ತಾಳೆ. ಪಾದದ ಅಚ್ಚು ತಯಾರಿಸುವ ಸಂದರ್ಭದಲ್ಲಿ ಐರಾ ಸಖತ್ ತರ್ಲೆ ಮಾಡಿದ್ದಳು. ಆದರೂ ಈ ಬಗ್ಗೆ ಎಚ್ಚರ ವಹಿಸಿ ಪ್ರಶಾಂತ್ ಅವರು ಅಚ್ಚುಕಟ್ಟಾಗಿ ಇದನ್ನು ತಯಾರಿಸಿದ್ದಾರೆ ಎಂದು ಅಭಿಮಾನಿಗಳಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ್ ರಾಧಿಕಾ ಪಂಡಿತ್ ಅವರ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.

  • ಯೇಸುವಿನ ಹೆಸರಿನಲ್ಲಿ ಕ್ರೈಸ್ತ ದಂಪತಿ ಬಳಿ ಲಕ್ಷಾಂತರ ರೂ. ದೋಚಿದ ಕಳ್ಳ

    ಯೇಸುವಿನ ಹೆಸರಿನಲ್ಲಿ ಕ್ರೈಸ್ತ ದಂಪತಿ ಬಳಿ ಲಕ್ಷಾಂತರ ರೂ. ದೋಚಿದ ಕಳ್ಳ

    ಹಾಸನ: ಇತ್ತೀಚಿಗೆ ಆನ್‍ಲೈನ್ ದೋಖಾಗಳು ಪದೆ ಪದೇ ನಡೆಯುತ್ತಲೇ ಇದ್ದರೂ ಕೂಡ ಕೆಲವು ಮುಗ್ಧರು ಬಲಿಯಾಗುತ್ತಲೆ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಜಿಲ್ಲೆಯ ದಂಪತಿ ಕ್ರೈಸ್ತ ಧರ್ಮ ಮತ್ತು ಯೇಸುವಿನ ಹೆಸರಿನಲ್ಲಿ ಮೋಸಹೋಗಿದ್ದಾರೆ.

    ಫೇಸ್ ಬುಕ್‍ನಲ್ಲಿ ಪರಿಚಯದ ವ್ಯಕ್ತಿ ಗಿಫ್ಟ್ ಕಳುಹಿಸುತ್ತೇನೆ ಎಂದು ಒಂದು ಲಕ್ಷದ ಎಪ್ಪತ್ತು ಸಾವಿರ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ವಾಸವಾಗಿರುವ ಕುಸುಮ ಮತ್ತು ಸ್ಯಾಮುವೆಲ್ ದಂಪತಿ ಮೋಸಹೋಗಿದ್ದಾರೆ.

    ಪತಿ ಸ್ಯಾಮುವೆಲ್ ಚರ್ಚ್‍ನಲ್ಲಿ ಫಾದರ್ ಆಗಿದ್ರೆ ಪತ್ನಿ ಕುಸುಮ ಕೂಡ ಸಮಾಜ ಸೇವೆ ಮಾಡಿಕೊಂಡು ಚರ್ಚ್ ಕೆಲಸ ಮಾಡಿಕೊಂಡಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರ ಜೊತೆಗೆ ಕೆಲವು ನೊಂದವರನ್ನು ಮನೆಯಲ್ಲಿ ಸೇರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಫೇಸ್ ಬುಕ್‍ನಲ್ಲಿ ವಿಲಿಯಂ ಫ್ರಾಂಕ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಸ್ಯಾಮುವೆಲ್ ಮತ್ತು ಅವರ ಕುಟುಂಬದ ಬಗ್ಗೆ ಸಾಂತ್ವನ ವ್ಯಕ್ತಪಡಿಸಿದ ಅನಾಮಿಕ ವಿದೇಶದಿಂದ ಲಕ್ಷಾಂತರ ರೂಪಾಯಿ ಹಣ ಕಳುಹಿಸುತ್ತೇನೆ ಎಂದು ಹೇಳಿದ್ದಾನೆ.

    ನಿಮ್ಮ ಊರಿನಲ್ಲಿ ಹೊಸದಾಗಿ ಚರ್ಚ್ ನಿರ್ಮಾಣ ಮಾಡಿ. ನಿಮಗೆಲ್ಲ ಏನಾದರು ಸಹಾಯ ಮಾಡಬೇಕೆಂದು ಅನಿಸುತ್ತಿದೆ. ಆ ದೇವರೇ ನಿಮಗೆ ಸಹಾಯ ಮಾಡುತ್ತಿದ್ದಾನೆ ಎಂದೆಲ್ಲ ನಂಬಿಸಿದ್ದಾನೆ. ಮೋಸದ ಮಾತುಗಳನ್ನು ನಂಬಿದ ಇವರು ಒಮ್ಮೆ 28,600 ಇನ್ನೊಂದು ಬಾರಿ 89,000 ಆಮೇಲೆ 49,500 ಹೀಗೆ ಒಟ್ಟು 1,67,100 ರೂಪಾಯಿ ಬ್ಯಾಂಕ್ ಮೂಲಕವೇ ಪಾವತಿ ಮಾಡಿದ್ದಾರೆ. ಆದರೆ ಹಣ ಹಾಕಿದ ನಂತರ ಆ ಗಿಫ್ಟ್ ಬರಲೇ ಇಲ್ಲ. ಹಣ ಕಳೆದುಕೊಂಡವರು ಈಗ ಏನೂ ಮಾಡಲು ತೋಚದೆ ಯಾರೂ ಕೂಡ ಈ ರೀತಿ ಮೋಸ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಉಡುಪಿ: ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದರೆ ಸಿಹಿ ಹಂಚುವ ಸಂಪ್ರದಾಯ ಇದೆ. ನಾಮಕರಣಕ್ಕೆ ನೂರಾರು ಜನ ಬಂಧು-ಮಿತ್ರರಿಗೆ ಊಟ ಹಾಕಿ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ಜಿಲ್ಲೆಯಲ್ಲಿ ನಾಮಕರಣಕ್ಕೆ ಬಂದ ಬಂಧು-ಮಿತ್ರರಿಗೆಲ್ಲ ಸ್ಪೆಷಲ್ ಗಿಫ್ಟ್ ಕೊಡಲಾಗಿದೆ.

    ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯದ ಸಭಾಂಗಣಕ್ಕೆ ಬಂದ ಎಲ್ಲರ ರಾಶಿ ನಕ್ಷತ್ರ ಕೇಳಿದ್ದು ವಿಶೇಷವಾಗಿದೆ. ಉಡುಪಿಯ ಮಟ್ಟುವಿನಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ನಡೆದಿದೆ. ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಿಗೆ ಪುತ್ರ ಸಂತಾನವಾಗಿದೆ. ಈ ಪ್ರಯುಕ್ತ ಊರಿಗೆಲ್ಲಾ ಊಟ ಹಾಕಿಸಿದರು. ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಅಪರೂಪದ ತಳಿಯ ಗಿಡಗಳನ್ನು ಹಂಚಿದ್ದಾರೆ. ಗಿಡಗಳನ್ನು ಹಂಚುವಾಗಲು ಕೂಡ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದಾರೆ. ತಮ್ಮ ಬಂಧುಗಳು ಹಾಗೂ ಸ್ನೇಹಿತರ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಗಿಡಗಳನ್ನು ಕೊಟ್ಟು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ.

    ನಮ್ಮ ನಕ್ಷತ್ರಕ್ಕೂ ನಮ್ಮ ಸುತ್ತಲೂ ಇರಬೇಕಾದ ಸಸ್ಯ ಸಂಪತ್ತಿಗೂ ಒಂದು ನಂಟಿದೆ. ನಮ್ಮ ಜಾತಕದ ಅನುಸಾರ ನಮಗೆ ಬಾಧಿಸಬಹುದಾದ ಅನಾರೋಗ್ಯಗಳನ್ನು ಹೋಗಲಾಡಿಸುವ ಗಿಡಗಳನ್ನು ನೆಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ ಭರಣಿ ನಕ್ಷತ್ರದವರು ನೆಲ್ಲಿಯ ಗಿಡನೆಟ್ಟರೆ ದಾತು ವೃದ್ಧಿಯಾಗುತ್ತೆ ಅನ್ನೋದು ಶಾಸ್ತ್ರ. ರೋಹಿಣಿ ನಕ್ಷತ್ರವರಿಗೆ ನೇರಳೆ ಮರ, ಪುನರ್ವಸು ನಕ್ಷತ್ರಕ್ಕೆ ಬಿದಿರು, ಪುಷ್ಯ ನಕ್ಷತ್ರಕ್ಕೆ ಅಶ್ವತ್ಥ ಮರ. ಹೀಗೆ 27 ನಕ್ಷತ್ರಕ್ಕೂ ನಾನಾ ಬಗೆಯ ಗಿಡಗಳು ಅನುಕೂಲಕರವಾಗಲಿದೆ ಎಂದು ಧಾರ್ಮಿಕ ವಿದ್ವಾಂಸರು ನವೀನ್ ತಂತ್ರಿ ತಿಳಿಸಿದ್ದಾರೆ.

    ತಮ್ಮ ಮನೆಗೆ ಬಂದ ಪುಟ್ಟ ಕಂದಮ್ಮ ಕೇವಲ ತಮ್ಮ ಮನೆ ಬೆಳಗಿದರೆ ಸಾಲದು, ಊರನ್ನೂ ತಂಪಾಗಿಡಬೇಕು ಅನ್ನೋ ಪ್ರವೀಣ್ ತಂತ್ರಿಗಳ ಪರಿಸರ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಪಡೆದ ಈ ಗಿಡಗಳನ್ನು ದೇವರ ಪ್ರಸಾದವೆಂದೇ ಭಾವಿಸಿ ಜನರು ಲಾಲನೆ ಪಾಲನೆ ಮಾಡುವುದರಿಂದ ಪರಿಸರಕ್ಕೂ ಅನುಕೂಲವಾಗಲಿದೆ.

  • ಚಿರು ದಂಪತಿಯಿಂದ ದರ್ಶನ್‍ಗೆ ಸ್ಪೆಷಲ್ ಗಿಫ್ಟ್

    ಚಿರು ದಂಪತಿಯಿಂದ ದರ್ಶನ್‍ಗೆ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಉಡುಗೊರೆ ನೀಡುತ್ತಿರುತ್ತಾರೆ. ಇದೀಗ ನಟ ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ರಾಜ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ.

    ದರ್ಶನ್ ಅವರು ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ಅವರ ಅನೇಕ ಸಿನಿಮಾಗಳಿಗೆ ಸಾಥ್ ನೀಡಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ. ಈ ಹಿನ್ನೆಲೆಯಲ್ಲಿ ಈ ಜೋಡಿ ದರ್ಶನ್ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಚಿರು ದಂಪತಿ ತಮ್ಮ ಮನೆಯ ಬೀಮಾ ಎಂಬ ನಾಯಿಯ ಮಗನನ್ನು ದರ್ಶನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. “ನಟ ದರ್ಶನ್ ಸರ್ ನಮ್ಮ ಕುಟುಂಬ ವಿಶೇಷ ಸದಸ್ಯರಾಗಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಮ್ಮದೊಂದು ಚಿಕ್ಕ ಉಡುಗೊರೆ ಇದು” ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Bz4m3dQnMJc/

    ದರ್ಶನ್ ಅವರಿಗೆ ಚಿರು ನಾಯಿಮರಿಯನ್ನು ನೀಡುವಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಮೇಘನಾ ಅವರು ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ಅಭಿನಯಸಿದ್ದಾರೆ.

    ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’ ಸಿನಿಮಾದ ‘ಶಾನೆ ಟಾಪಾಗವ್ಳೆ ನಮ್ಮುಡುಗಿ..’ ಹಾಡನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿ, ಈ ಹಾಡು ನನಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದರು.

  • ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್ – ಸುತ್ತೋಲೆಯಲ್ಲಿ ಏನಿದೆ?

    ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್ – ಸುತ್ತೋಲೆಯಲ್ಲಿ ಏನಿದೆ?

    ಬೆಂಗಳೂರು: ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಕೆಎಸ್‍ಆರ್‍ಟಿಸಿ ಮುಂದಾಗಿದೆ.

    ಎರಡು ಮಕ್ಕಳನ್ನು ಹೊಂದಿದ್ರೆ ಸಿಬ್ಬಂದಿಗೆ ವಾರ್ಷಿಕ ವಿಶೇಷ ವೇತನ ಭಡ್ತಿ ನೀಡುವುದಾಗಿ ಕೆಎಸ್‍ಆರ್‍ಟಿಸಿ ಹೇಳಿದೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಚಿಂತನೆ ನಡೆಸಿದೆ.

    ಈ ಆಫರ್ ಪಡೆಯಬೇಕಾದರೆ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ. ಈ ಮೂಲಕ ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದೆ.

    ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, -ಕೆಎಸ್‍ಆರ್‍ಟಿಸಿ ಎಂಡಿ ಶಿವಯೋಗಿ ಕಳಸದ್ ಅವರು ಜುಲೈ 27 ರಂದು ಸುತ್ತೋಲೆ ಹೊರಡಿಸಿದ್ದಾರೆ.

    ಸುತ್ತೋಲೆಯಲ್ಲಿ ಏನಿದೆ?
    1 ಅಥವಾ 2 ಜೀವಂತ ಮಕ್ಕಳನ್ನು ಹೊಂದಿದ್ದು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು ಅಥವಾ ಪತಿ/ಪತ್ನಿ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನಾಂಕದಂದು ಅವರ ಹುದ್ದೆ ವೇತನ ಶ್ರೇಣಿಯ ವಾರ್ಷಿಕ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿ ಪಡೆಯಲು ಅರ್ಹರಿರುತ್ತಾರೆ.

    ಸರ್ಕಾರಿ ಆದೇಶದ ಅನ್ವಯ ಕುಟುಂಬ ಯೋಜನೆಯಡಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಕುರಿತಂತೆ, ನೌಕರರು(ತರಬೇತಿ ನೌಕರರು ಸೇರಿದಂತೆ) ‘ವಿಶೇಷ ವೇತನ ಬಡ್ತಿ’ಗಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸಿದ ದಿನಾಂಕದಿಂದ ಎರಡು ವರ್ಷದೊಳಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ‘ವಿಶೇಷ ವೇತನ ಬಡ್ತಿ’ ಗೆ ಅರ್ಹರಾಗಿರುವುದಿಲ್ಲ ಎಂದು ನಿರ್ಣಯಿಸಲಾಗಿದೆ. ಸಂಬಂಧ ಪಟ್ಟವರು ಈ ಅಂಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳಬೇಕು. ಉಲ್ಲೇಖಿತ ಸುತ್ತೋಲೆಯಲ್ಲಿನ ನಿರ್ದೇಶನಗಳಲ್ಲಿ ಬದಲಾವಣೆಗಳು ಇರುವುದಿಲ್ಲ. ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಜಾರಿಯಲ್ಲಿರುತ್ತದೆ.

  • ಪ್ರೇಯಸಿಗೆ ಗಿಫ್ಟ್ ಕೊಟ್ಟು ಅರೆಸ್ಟ್ ಆದ ಪ್ರಿಯಕರ

    ಪ್ರೇಯಸಿಗೆ ಗಿಫ್ಟ್ ಕೊಟ್ಟು ಅರೆಸ್ಟ್ ಆದ ಪ್ರಿಯಕರ

    ಭುವನೇಶ್ವರ: ಕಂಪನಿಯ ಹಣವನ್ನೇ ದುರುಪಯೋಗ ಮಾಡಿಕೊಂಡು ಪ್ರೇಯಸಿಗೆ ಬೆಲೆಬಾಳುವ ಉಡುಗೊರೆ ನೀಡಿದ್ದಕ್ಕೆ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಕೇಂದ್ರಾಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು ಪ್ರಭಾಕರ್ ದಾಸ್ (24) ಎಂದು ಗುರುತಿಸಲಾಗಿದೆ. ಈತ ಕೊರಿಯರ್ ಕಂಪೆನಿಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ತನ್ನ ಪ್ರೇಯಸಿಗೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲು 7.66 ಲಕ್ಷ ರೂ. ಕಂಪನಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಂಪನಿಗೆ ಸೇರಿದ್ದ 7.66 ಲಕ್ಷ ರೂ.ಯನ್ನು ಬ್ಯಾಂಕಿಗೆ ಪಾವತಿಸಲು ಹೋಗುತ್ತಿದ್ದೆ. ನನ್ನ ಮೋಟಾರ್ ಸೈಕಲ್ ಡಿಕ್ಕಿಯಲ್ಲಿ ಹಣ ಇಟ್ಟಿದ್ದೆ. ಆದರೆ ಅಲ್ಲಿಂದಲೇ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಆತನೇ ಪೊಲೀಸರಿಗೆ ದೂರು ದಾಖಲಿಸಿದ್ದನು.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಭಾಕರ್ ತನ್ನ ಗೆಳತಿಗೆ ಚಿನ್ನದ ಆಭರಣಗಳನ್ನು ಒಳಗೊಂಡಂತೆ ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದನು. ಅನುಮಾನದ ಮೇರೆಗೆ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದು, ಆತನೇ ಹಣವನ್ನು ಲೂಟಿ ಮಾಡಿ ಪ್ರೇಯಸಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

    ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಕ 40 ಸಾವಿರ ರೂ. ನಗದು, ದುಬಾರಿ ಮೊಬೈಲ್ ಫೋನ್‍ಗಳು, ಚಿನ್ನದ ಆಭರಣಗಳು, ಪೀಠೋಪಕರಣಗಳು, ಅಲ್ಮೇರಾ, ಏರ್ ಕೂಲರ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

  • ಮದುವೆ ಮನೆಯಲ್ಲೂ ಮೋದಿ ಹವಾ

    ಮದುವೆ ಮನೆಯಲ್ಲೂ ಮೋದಿ ಹವಾ

    ವಿಜಯಪುರ: ಇಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೋದಿ ಅಭಿಮಾನಿಗಳು ಅನೇಕ ಹರಕೆ ಕಟ್ಟಿಕೊಂಡು ಪೂರೈಸುತ್ತಿದ್ದಾರೆ. ಇದೀಗ ಮದುವೆ ಮನೆಯಲ್ಲೂ ನವಜೋಡಿಗೆ ಫೋಟೋ ಗಿಫ್ಟ್ ನೀಡಲಾಗಿದೆ.

    ವರ ಶಿವರಾಜ್ ಹಾಗೂ ವಧು ಸ್ನೇಹಲ್ ಗೆ ಮೋದಿ ಭಾವಚಿತ್ರ ಉಡುಗೊರೆಯಾಗಿ ಬಂದಿದೆ. ವಿಜಯಪುರದ ಸ್ಟೇಶನ್ ರಸ್ತೆಯ 18ನೇ ವಾರ್ಡ್ ವರನ ಸ್ವಗೃಹದಲ್ಲಿ ಇವರ ಮದುವೆ ನಡೆದಿದ್ದು, ಮೋದಿ ಅಭಿಮಾನಿಗಳು ಇಂದು ಮೋದಿ ಪ್ರಮಾಣ ವಚನದ ಹಿನ್ನೆಲೆಯಲ್ಲಿ ನವ ಜೋಡಿಗಳಿಗೆ ಮೋದಿ ಫೋಟೋ ಗಿಫ್ಟ್ ನೀಡಿದ್ದಾರೆ.

    ವರ ಶಿವರಾಜ್ ಕಲಬುರಗಿಯರಾಗಿದ್ದು, ಕಟ್ಟಾ ಮೋದಿ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರ ಸ್ನೇಹಿತರು ಮೋದಿ ಫೋಟೋವನ್ನೇ ಉಡುಗೊರೆಯಾಗಿ ನೀಡಿದ್ದಾರೆ. ನಂತರ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದು, ಮದುವೆ ಮಂಟಪದಲ್ಲಿ ಮೋದಿ..ಮೋದಿ ಎಂದು ಜೈಕಾರ ಹಾಕಿದ್ದಾರೆ.

  • ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಬೀಜಿಂಗ್: ತನಗೆ ಸ್ಮಾರ್ಟ್‍ಫೋನ್ ಗಿಫ್ಟ್ ನೀಡಿಲ್ಲ ಎಂದು ಪ್ರೇಯಸಿ ಸಾರ್ವಜನಿಕರ ಮುಂದುಗಡೆಯೇ ತನ್ನ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಚೀನಾದ ದಜಾವ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

    ಯುವತಿ ಕಪಾಳಮೋಕ್ಷ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ. ಯುವತಿ ಕಪಾಳಕ್ಕೆ ಹೊಡೆಯುವಾಗ ಯುವಕ ಆಕೆಯನ್ನು ತಡೆಯಲಿಲ್ಲ ಹಾಗೂ ಹೊಡೆತದಿಂದ ತಪ್ಪಿಸಿಕೊಳ್ಳಲು ಕೂಡ ಪ್ರಯತ್ನಿಸಲಿಲ್ಲ.

    ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಯಾರ ಮಾತನ್ನು ಕೇಳದೆ ತನ್ನ ಪ್ರಿಯಕರನಿಗೆ ನಿರಂತರವಾಗಿ ಕೆನ್ನೆಗೆ ಹೊಡೆದಿದ್ದಾಳೆ.

  • ಬಾಬಿ ವಿಜಯ್‍ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ

    ಬಾಬಿ ವಿಜಯ್‍ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ

    ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಡಿಯರ್ ಬಾಬಿ ಎಂದು ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದರು. ಇದೀಗ ವಿಜಯ್ ಅವರಿಗೆ ಬರ್ತ್ ಡೇಗೆ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದಾರೆ.

    ನಟ ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಶೂಟಿಂಗ್ ಸೆಟ್‍ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದೆ. ಚಿತ್ರತಂಡದ ಜೊತೆಗೆ ರಶ್ಮಿಕಾ ಕೂಡ ಭಾಗಿಯಾಗಿದ್ದು, ಕೇಕ್ ಕತ್ತರಿಸುವ ಮೂಲಕ ವಿಜಯ್‍ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ರಶ್ಮಿಕಾ ವಿಜಯ್‍ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದರು.

    ಇದೇ ವೇಳೆ ನಟಿ ರಶ್ಮಿಕಾ ವಿಜಯ್ ಅವರಿಗೆ ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ರಶ್ಮಿಕಾ ಕೊಟ್ಟ ಗಿಫ್ಟ್ ಅನ್ನು ಶೂಟಿಂಗ್ ಸೆಟ್‍ನಲ್ಲಿಯೇ ವಿಜಯ್ ಓಪನ್ ಮಾಡಿದ್ದಾರೆ. ಬಳಿಕ ಮೊದಲು ಆ ಬ್ರಾಸ್ಲೆಟ್ ಅನ್ನು ಮೊದಲು ರಶ್ಮಿಕಾ ಕೈಗೆ ಹಾಕಿ ನಂತರ ತಮ್ಮ ಕೈಗೆ ಹಾಕಿಕೊಂಡಿದ್ದಾರೆ.

    ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. `ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ’ ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು. `ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ `ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು.

    https://www.instagram.com/p/BxR4EvAgqK4/