Tag: ಗಿಫ್ಟ್

  • ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    – ಪತಿಯ ಉತ್ತರಕ್ಕಾಗಿ ಕಾಯ್ತಿರೋ ನೆಟ್ಟಿಗರು

    ವಾಷಿಂಗ್ಟನ್: ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆ ನೋಡಿದ ಪತಿ ಶಾಕ್ ಆಗಿ ತಲೆ ತಗ್ಗಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ. ಪತಿಗೆ ನೀಡಿದ ಉಡುಗೊರೆಯ ಫೋಟೋಗಳನ್ನ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯರು ಮೆಚ್ಚುಗೆ ಸೂಚಿಸಿದ್ರೆ, ಪುರುಷರು ಈ ರೀತಿ ಸಿಕ್ಕಿಕೊಳ್ಳೋದಾ ಅಂತ ಕಮೆಂಟ್ ಮಾಡುತ್ತಿದ್ದಾರೆ.

    ಗ್ಲೆರಿಯಾ ಅಮೆರಿಕಾದ ಪರಿಚಿತ ಟಿಕ್‍ಟಾಕ್ ಸ್ಟಾರ್ ಗಳಲ್ಲಿ ಒಬ್ಬರು. ಇನ್‍ಸ್ಟಾಗ್ರಾಂನಲ್ಲಿ ಪತಿ ಲೈಕ್ ಮಾಡಿರೋ ಸುಂದರ ಮಾದಕ ಚೆಲುವೆಯರ ಫೋಟೋಗಳ ಪ್ರಿಂಟ್ ತಗೆದು ಪ್ಲಕಾರ್ಡ್ ರೀತಿಯಲ್ಲಿ ಮಾಡಿಸಿದ್ದಾರೆ. ಈ ಪ್ಲಕಾರ್ಡ್ ಗಳನ್ನ ಟೇಬಲ್ ಮೇಲೆ ಅಂಟಿಸಿರೋ ಫೋಟೋವನ್ನ ಶೇರ್ ಮಾಡಿಕೊಂಡಿದ್ದು, ನಿಮ್ಮ ಪತಿ/ಗೆಳೆಯನಿಗೆ ನೀವೇನು ಗಿಫ್ಟ್ ನೀಡಿದಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬರೋಬ್ಬರಿ 38 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

    ಪತಿ ಲೈಕ್ ನೀಡಿರುವ ಮಾದಕ ಚೆಲುವೆಯರ ಫೋಟೋ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ನಂತರ ಎಲ್ಲವನ್ನ ಪ್ಲಕಾರ್ಡ್ ರೀತಿ ಮಾಡಿ ಬಾಕ್ಸ್ ನಲ್ಲಿರಿಸಿ ಪತಿಗೆ ಗಿಫ್ಟ್ ನೀಡಿದ್ದಾರೆ. ಪತಿ ಆಶ್ಚರ್ಯದಿಂದ ಗಿಫ್ಟ್ ನೋಡುತ್ತಿರುವ ಫೋಟೋ ಸಹ ವೈರಲ್ ಆಗಿದೆ. ಬಹುತೇಕ ನೆಟ್ಟಿಗರು ಗ್ಲೆರಿಯಾ ಪತಿಗೆ ಗಿಫ್ಟ್ ಕುರಿತು ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ

    ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ

    ಬೆಂಗಳೂರು: ಕಿಚ್ಚ ಸುದೀಪ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿ ಎಂಬುದು ತಿಳಿದ ವಿಚಾರ. ಅಲ್ಲದೆ ಈಗಾಗಲೇ ಅವರು ಹಲವರಿಗೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ ಸಹ. ಇದೀಗ ತಮ್ಮ ಅಂಗರಕ್ಷಕ (ಬಾಡಿಗಾರ್ಡ್)ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

    ಹೌದು ಕುಟುಂಬ, ಸ್ನೇಹಿತರು ಹಾಗೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸುದೀಪ್, ತಮ್ಮ ಬಾಡಿಗಾರ್ಡ್‍ಗೆ ಗಿಫ್ಟ್ ನೀಡಿ ಗಮನಸೆಳೆದಿದ್ದಾರೆ. ಕುಟಂಬದವರೊಂದಿಗೆ ಹೆಚ್ಚು ಕಾಲ ಕಳೆಯುವ ಕಿಚ್ಚ, ತಮ್ಮ ಸಿಬ್ಬಂದಿಯನ್ನೂ ಅಷ್ಟೇ ಪ್ರೀತಿಸುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆ ಕೆಲಸ ಮಾಡುತ್ತಿರುವ ಬಾಡಿಗಾರ್ಡ್ ಸಾಯಿ ಕಿರಣ್‍ಗೆ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಬುಲೆಟ್ ಬೈಕ್ ಗಿಫ್ಟ್ ನೀಡಿದ್ದಾರೆ.

    ಸಾಯಿ ಕಿರಣ್ ಅವರು ಕಿಚ್ಚ ಕಿರಣ್ ಎಂದೇ ಪ್ರಸಿದ್ಧರು. ಇದೀಗ ಅವರಿಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಸಾಯಿ ಕಿರಣ್ ಫುಲ್ ಖುಷಿಯಾಗಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿರುವ ಸಾಯಿ ಕಿರಣ್, ಕಿಚ್ಚ ಸುದೀಪ್ ಅವರು ಬುಲೆಟ್ ಬೈಕ್ ಗಿಫ್ಟ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಇದರಿಂದ ಖುಷಿ ಹಾಗೂ ಆಶ್ಚರ್ಯವಾಗಿದೆ. ಮೊದಲು ಕಿಚ್ಚ ಸುದೀಪ್ ಅವರನ್ನೇ ಹತ್ತಿಸಿಕೊಂಡು ಹೋಗುತ್ತೇನೆ. ಸುದೀಪ್ ಮೊದಲ ಸಿನಿಮಾ ಸ್ಪರ್ಷದಿಂದಲೂ ಅವರ ದೊಡ್ಡ ಅಭಿಮಾನಿ, ಕಳೆದ ಆರು ವರ್ಷಗಳಿಂದ ಸುದೀಪ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಚಿರಋಣಿಯಾಗಿದ್ದೇನೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅವರ ಅಭಿಮಾನಿಯ ಸ್ಥಿತಿ ಕಂಡು ಕೃತಕ ಕಾಲು ಜೋಡಣೆಗೆ ಸ್ಥಳದಲ್ಲೇ ಸಹಾಯ ಮಾಡಿದ್ದರು. ಈ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಇದು ಮಾತ್ರವಲ್ಲ ನೆರೆ ಪರಿಹಾರ, ಶಾಲಾ ಶುಲ್ಕ, ವಿವಾಹ ಹಾಗೂ ಸರ್ಕಾರಿ ಶಾಲೆ ದತ್ತು ಪಡೆಯುವುದು ಸೇರಿದಂತೆ ಹತ್ತು ಹಲವು ರೀತಿಯ ಸಹಾಯಗಳನ್ನು ಕೋಟಿಗೊಬ್ಬ ಮಾಡುತ್ತಿದ್ದಾರೆ.

    ಸುದೀಪ್ ಅವರ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಕೊನೇ ಭಾಗದ ಚಿತ್ರೀಕರಣವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಇದರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

  • ಆರೋಪ ಹಿನ್ನೆಲೆಯ ಉದ್ಯಮಿ ಪುತ್ರಿಗೆ ಶಹಪುರ ತಹಶೀಲ್ದಾರ್ ದುಬಾರಿ ಗಿಫ್ಟ್

    ಆರೋಪ ಹಿನ್ನೆಲೆಯ ಉದ್ಯಮಿ ಪುತ್ರಿಗೆ ಶಹಪುರ ತಹಶೀಲ್ದಾರ್ ದುಬಾರಿ ಗಿಫ್ಟ್

    ಯಾದಗಿರಿ: ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಮಗಳ ಹುಟ್ಟುಹಬ್ಬಕ್ಕೆ ಬೆಲೆ ಬಾಲು ಗಿಫ್ಟ್ ಕೊಟ್ಟು ಶಹಪುರ ತಹಶೀಲ್ದಾರ ಮೆಹಬೂಬಿ ಈಗ ಸುದ್ದಿಯಲ್ಲಿದ್ದಾರೆ. ಅಪರಾಧ ಹಿನ್ನೆಲೆ ಇರುವ ಉದ್ಯಮಿ ಮಗಳಿಗೆ ಸಾರ್ವಜನಿಕವಾಗಿ ಶಹಪುರ ತಹಶೀಲ್ದಾgರ್ ಮೆಹಬೂಬಿ ಮತ್ತು ಪತಿ ಚಿನ್ನದ ಸರ ಉಡುಗೊರೆಯನ್ನು ನೀಡಿದ್ದಾರೆ.

    ಇನ್ನೂ ತಹಶೀಲ್ದಾರ್ ಮೆಹಬೂಬಿ ಅವರ ಪತಿ ಕೂಡ ಹಿರಿಯ ಸರ್ಕಾರಿ ಅಧಿಕಾರಿಯಾಗಿದ್ದು, ಬೆಲೆ ಬಾಳುವ ಉಡುಗೊರೆ ನೀಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಶಹಪುರ ತಹಶೀಲ್ದಾರರ ಬೆಲೆ ಬಾಳುವ ಗಿಫ್ಟ್ ವಿಚಾರ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಶಹಪುರ ತಾಲೂಕಿನ ಚಾಮನಾಳ ಗ್ರಾಮದ ಉದ್ಯಮಿ ಮಲಿಕ್ ಎಂಬವರ ಮಗಳ ಬರ್ತ್ ಡೇ ಪಾರ್ಟಿ, ಜನವರಿ 03 ರಂದು ಶಹಪುರ ಸಮೀಪದ ಬಿ.ಗುಡಿಯಲ್ಲಿರುವ ಅವರ ಮನೆಯಲ್ಲಿ ನಡೆದಿತ್ತು. ಸರ್ಕಾರದ ಅಕ್ಕಿ ಅಕ್ರಮವಾಗಿ ಮಾರಾಟ ಮತ್ತು ಅಕ್ರಮ ಮದ್ಯ ಮಾರಾಟ, ಜೂಜಾಟದ ಆರೋಪಗಳು ಉದ್ಯಮಿ ಮಲಿಕ್ ಮೇಲಿದೆ.

    ಬರ್ತ್ ಡೇ ಪಾರ್ಟಿಯಲ್ಲಿ ತಹಶೀಲ್ದಾರ್ ಮಾತ್ರವಲ್ಲದೇ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿ ದುಬಾರಿ ಮೊತ್ತದ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಜೊತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮತ್ತು ಶಹಪುರ ತಹಶಿಲ್ದಾರರ ಮೆಹಬೂಬಿಗೂ ಏನು ಕೆಲಸ? ಜನರ ಕೆಲಸ ಮಾಡಲು ಸಮಯ ಇಲ್ಲ ಎನ್ನುವ ತಹಶೀಲ್ದಾರರಿಗೆ ಪಾರ್ಟಿ ಮಾಡಲು ಸಮಯ ಹೇಗೆ ಸಿಗುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಕೊರೊನಾದ ಯಾವುದೇ ನಿಯಮಗಳು ಪಾಲನೆ ಆಗಿಲ್ಲ, ತಾಲೂಕಿನಲ್ಲಿ ಕೊರೊನಾ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಾದ ಸ್ವತಃ ತಹಶೀಲ್ದಾರ್ ಅವರೇ ಮಾಸ್ಕ್ ಧರಿಸಿಲ್ಲ. ಇದು ಸಾರ್ವಜನಿಕ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತ ಜನ ಆಗ್ರಹಿಸುತ್ತಿದ್ದಾರೆ.

  • ಅತ್ತೆಯಿಂದ ಅಳಿಯನಿಗೆ ಎಕೆ-47 ಗಿಫ್ಟ್ – ವಿಡಿಯೋ ವೈರಲ್

    ಅತ್ತೆಯಿಂದ ಅಳಿಯನಿಗೆ ಎಕೆ-47 ಗಿಫ್ಟ್ – ವಿಡಿಯೋ ವೈರಲ್

    ಇಸ್ಲಾಮಾಬಾದ್: ಮದುವೆ ಮುಗಿದ ನಂತರ ತನ್ನ ಅಳಿಯನಿಗೆ ಅತ್ತೆಯೊಬ್ಬರು ಎಕೆ-47 ಗನ್ ಗಿಫ್ಟ್ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಮದುವೆಯಲ್ಲಿ ಅಳಿಯನಿಗೆ ಅತ್ತೆ-ಮಾವ ವರದಕ್ಷಿಣೆ ಎಂದು ಕಾರು, ಬೈಕ್ ಅನ್ನು ಗಿಫ್ಟ್ ಆಗಿ ನೀಡುತ್ತಾರೆ. ಆದರೆ ಇಲ್ಲೊಬ್ಬರು ಅತ್ತೆ ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಗಿಫ್ಟ್ ನೀಡುತ್ತಿರುವ ವಿಡಿಯೋವನ್ನು ಸೈಯದ್ ಎಂಬವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    https://twitter.com/HussainIkhteyar/status/1331643120543535105

    ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಮದುವೆ ಮುಗಿದ ಬಳಿಕ ವಧು-ವರ ಚೇರ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವಧುವಿನ ತಾಯಿ ಮೊದಲಿಗೆ ವರನ ಹಣೆಗೆ ಮುತ್ತಿಡುತ್ತಾಳೆ. ನಂತರ ಆತನಿಗೆ ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾಳೆ. ಅಲ್ಲಿಂದ ಜನರೆಲ್ಲ ಅಗ ಕಿರುಚುತ್ತಾರೆ. ನಂತರ ಆಕೆ ವಧು-ವರರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಅತ್ತೆ ಸಿಗಬೇಕು ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ವಿಡಿಯೋ ಪಾಕಿಸ್ತಾನದಿಂದ ಟ್ವಿಟ್ಟರಿಗೆ ಅಪ್ಲೋಡ್ ಆಗಿದ್ದು, ಯಾವಾಗ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

  • ಲಂಡನ್ ಹುಡುಗಿಯನ್ನು ನಂಬಿ 5 ಲಕ್ಷ ಕಳೆದುಕೊಂಡ ಹುಬ್ಬಳ್ಳಿ ವರ

    ಲಂಡನ್ ಹುಡುಗಿಯನ್ನು ನಂಬಿ 5 ಲಕ್ಷ ಕಳೆದುಕೊಂಡ ಹುಬ್ಬಳ್ಳಿ ವರ

    ಹುಬ್ಬಳ್ಳಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ.

    ಹುಬ್ಬಳ್ಳಿಯ ನವನಗರದ ನಿವಾಸಿ ಗುತ್ತಿಗೆದಾರ ಪ್ರಮೋದ್ ಕುಲಕರ್ಣಿ ಮೋಸ ಹೋಗಿದ್ದು ಈಗ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಧು ಹುಡುಕಾಟದಲ್ಲಿದ್ದ ಪ್ರಮೋದ್‌ಗೆ ‘ಸಂಗಮ’ ಹೆಸರಿನ ಮ್ಯಾಟ್ರಿಮೋನಿಯಲ್ಲಿ ಲಂಡನ್ ಮೂಲದ ಯುವತಿ ಅನ್ನಾ ಮೊಹಮ್ಮದ್‌ ಪರಿಚಯವಾಗಿದ್ದಾಳೆ. ಮೊದ‌ ಮೊದಲು ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡುತ್ತಿದ್ದ ಯುವತಿ ಬಳಿಕ ಪ್ರತಿನಿತ್ಯ ಚಾಟ್‌ ಮಾಡಿ ಪ್ರಮೋದರನ್ನ ನಂಬಿಸಿದ್ದಳು.

    ನಂತರ ಲಂಡನ್‌ನಿಂದ ದುಬಾರಿ ಬೆಲೆಯ ಗಿಫ್ಟ್‌ ಕಳುಹಿಸಿರುವುದಾಗಿ ತಿಳಿಸಿದ್ದಳು. ಗಿಫ್ಟ್‌ ನಂಬಿಕೊಂಡಿದ್ದ ಪ್ರಮೋದ್ ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಲಂಡನಿಂದ ನಿಮಗೆ ಗಿಫ್ಟ್‌ ಬಂದಿದೆ ಎಂದು ಹೇಳಿ ʼಪಾರ್ಸೆಲ್‌ ಶುಲ್ಕ’ ದ ಹೆಸರಿನಲ್ಲಿ ಹಂತಹಂತವಾಗಿ ಹಣ ಪಡೆದುಕೊಂಡಿದ್ದ.

    ದುಬಾರಿ ಬೆಲೆಯ ಗಿಫ್ಟ್‌ ನಂಬಿ ಆನಲೈನ್ ಮೂಲಕ ಹಂತಹಂತವಾಗಿ ಬರೋಬ್ಬರಿ 5,15,549 ಹಣವನ್ನ ಪ್ರಮೋದ್‌ ವರ್ಗಾವಣೆ ಮಾಡಿದ್ದರು.

    ಹಣ ವರ್ಗಾವಣೆ ಮಾಡಿದರೂ ಪಾರ್ಸೆಲ್‌ ಬಾರದ ಕಾರಣ ಕೊನೆಗೆ ತಾನು ಮೋಸ ಹೋಗಿರುವುದು ಪ್ರಮೋದ್‌ ಅವರಿಗೆ ಗೊತ್ತಾಗಿದೆ. ಈಗ ಆನಲೈನ್ ವಂಚಕರ ವಿರುದ್ಧ ಸೂಕ್ತ ಕ್ರಮ‌ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

  • ಅಜ್ಜಿ ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಕತ್ತು ಸೀಳಿ ಡೈನಿಂಗ್ ಟೇಬಲ್ ಮೇಲಿಟ್ಟ

    ಅಜ್ಜಿ ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಕತ್ತು ಸೀಳಿ ಡೈನಿಂಗ್ ಟೇಬಲ್ ಮೇಲಿಟ್ಟ

    ಮುಂಬೈ: ಅಜ್ಜಿ ಮೊಬೈಲ್ ಗಿಫ್ಟ್ ಕೊಡುವುದನ್ನು ನಿರಾಕರಿಸಿದ್ದಕ್ಕೆ 24 ವರ್ಷದ ಯುವಕ ಆಕೆಯ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ತಲೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟು ವಿಕೃತಿ ಮೆರೆದಿದ್ದಾನೆ.

    ಪಶ್ಚಿಮ ಬಾಂದ್ರಾದಲ್ಲಿ ಘಟನೆ ನಡೆದಿದ್ದು, ಆರೋಪಿ ಡ್ರಗ್ಸ್ ಅಡಿಕ್ಟ್ ಆಗಿದ್ದ, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಈತ ಥಾಣೆಯಲ್ಲಿರುವ ರೆಹಾಬ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆಗೆ ಹಣದ ಕೊರತೆ ಉಂಟಾಗಿ ಕೆಲ ದಿನಗಳ ಹಿಂದೆ ಪೋಷಕರು ಆತನನ್ನು ಮನೆಗೆ ಕರೆ ತಂದಿದ್ದರು. ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ಆರೋಪಿಯ ಅಜ್ಜಿಯನ್ನು ರೋಸಿ ಎಂದು ಗುರುತಿಸಲಾಗಿದೆ.

    ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ರೋಸಿ ಮೊಮ್ಮಗನ ಬೇಡಿಕೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಿತನಾದ ಆರೋಪಿ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ. ಅಜ್ಜಿ ಮಲಗಿದ ಬಳಿಕ ಹೊಂಚು ಹಾಕಿ ಆಕೆಯ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವಿಕೃತಿ ಮೆರೆದಿದ್ದಾನೆ.

    ಆರೋಪಿ ಡಯಾಸ್ ಸೋದರ ಸಂಬಂಧಿ ನೆಲ ಮಹಡಿಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯ ತುಂಬಾ ರಕ್ತ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಡಯಾಸ್ ತಂದೆಯನ್ನು ಕರೆದಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಮೈಸೂರು: ತಾಯಿಯನ್ನು ತನ್ನ ಹಳೇ ಬೈಕಿನಲ್ಲೇ ದೇಶ ಪರ್ಯಟನೆ ಮಾಡಿಸಿದ್ದ ಶ್ರವಣಕುಮಾರನಿಗೆ ಮಹೀಂದ್ರಾ ಕಂಪನಿ ಓನರ್ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಮೈಸೂರಿನ ಬೋಗಾದಿಯ ನಿವಾಸಿ ಕೃಷ್ಣಕುಮಾರ್ ತನ್ನ ಹೆತ್ತ ತಾಯಿಯನ್ನು ಬಜಾಜ್ ಸ್ಕೂಟರಿನಲ್ಲಿ ದೇಶ ಪರ್ಯಟನೆ ಮಾಡಿಸಿದ್ದರು. ಕೃಷ್ಣಕುಮಾರ್ ಬೇಲೂರು ಹಳೇಬೀಡನ್ನೂ ನೋಡದ ತಾಯಿಗೆ ದೇಶದ ಎಲ್ಲ ತೀರ್ಥ ಕ್ಷೇತ್ರಗಳಿಗೂ ಕರೆದುಕೊಂಡು ಹೋಗಿ ಅವರ ಇಚ್ಛೆಯನ್ನು ಪೂರೈಸಿದ್ದರು. ಮಗನ ಈ ಕಾರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ ಆಗಿದ್ದರು.

    ಕೃಷ್ಣಕುಮಾರ್ ಅವರಿಗೆ ತನ್ನ ತಾಯಿ ಮೇಲೆ ಇರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಗಿಫ್ಟ್ ಆಗಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಅಂತಯೇ ಅವರು ಮೈಸೂರಿಗೆ ಬಂದ ಎರಡನೇ ದಿನದಲ್ಲಿ ಮೈಸೂರಿನ ಮಹೀಂದ್ರಾ ಶೋರೂಂಗೆ ಕರೆಸಿ ಕಾರು ನೀಡಲಾಗಿದೆ. ಮಹೀಂದ್ರಾ ಕೆಯುವಿ-100 ಕಾರನ್ನು ಕೃಷ್ಣಕುಮಾರ್ ಮತ್ತು ಅವರ ತಾಯಿಗೆ ಅಲ್ಲಿನ ಶೋರೂಂ ಸಿಬ್ಬಂದಿಗಳು ಗಿಫ್ಟ್ ಮಾಡಿದ್ದಾರೆ.

    40 ವರ್ಷ ವಯಸ್ಸಿನ ಕೃಷ್ಣಕುಮಾರ್ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ಕೃಷ್ಣಕುಮಾರ್ ತಾಯಿಯ ಜವಾಬ್ದಾರಿ ಹೊತ್ತಿದ್ದರು. ಇವರು 70 ವರ್ಷದ ತಾಯಿಗೆ ದೇಶದ ತೀರ್ಥ ಕ್ಷೇತ್ರಗಳ ತೋರಿಸುವ ಸಂಕಲ್ಪ ಮಾಡಿದ್ದರು. ಅದರಂತೆಯೇ ಮಾತೃ ಸೇವಾ ಸಂಕಲ್ಪ ಯಾತ್ರೆ ಶುರು ಮಾಡಿದ್ದು, ತಂದೆ ಕೊಡಿಸಿದ ಬಜಾಜ್ ಸ್ಕೂಟರ್‍ನಲ್ಲೇ ತಾಯಿಯ ಜೊತೆ 2018ರ ಜನವರಿ 16ರಂದು ಯಾತ್ರೆ ಆರಂಭಿಸಿದ್ದರು.

    ಎರಡು 9 ತಿಂಗಳ ಕಾಲ ಯಾತ್ರೆ ನಡೆಸಿದ್ದಾರೆ. ಚಾಮುಂಡಿ ಬೆಟ್ಟದಿಂದ ಶುರುವಾದ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದೆ. ಒಟ್ಟು 56,522 ಕಿಲೋಮೀಟರ್ ಪ್ರಯಾಣ ಮುಗಿಸಿದ ತಾಯಿ ಮಗ ಜೋಡಿ ಇಂದು ಮೈಸೂರಿಗೆ ವಾಪಸ್ ಬಂದಿದ್ದಾರೆ. ತಾಯಿ ಚೂಡಾರತ್ನ ಅವರಿಗೆ ಈಗ 70 ವರ್ಷ. 70ರ ಇಳಿ ವಯಸ್ಸಿನಲ್ಲಿ ಸ್ಕೂಟರಿನಲ್ಲಿ ಯಾತ್ರೆ ಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ ಮಗನ ಮೇಲೆ ಭರವಸೆ ಇಟ್ಟು ಯಾತ್ರೆ ಮಾಡಿ ದೇಶದ ಪ್ರತಿಯೊಂದು ಧಾರ್ಮಿಕ ಸ್ಥಳಗಳನ್ನೂ ನೋಡಿ ಬಂದಿದ್ದಾರೆ.

  • ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಕುರಿತು ಹಲವು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಪಿಎಂ ಕೇರ್ಸ್ ಫಂಡ್‍ಗೆ 2.25 ಲಕ್ಷ ರೂ. ದಾನ ನೀಡಿದ್ದಾರೆ. ಅಲ್ಲದೆ ಈವರೆಗೆ ಪ್ರಧಾನಿ ಮೋದಿ ದೇಶಕ್ಕಾಗಿ 103 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬುಧವಾರವಷ್ಟೇ ಪಿಎಂ ಕೇರ್ಸ್ ಫಂಡ್‍ನ ಆಡಿಟ್ ರಿಪೋರ್ಟ್ ನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ 2.25 ಲಕ್ಷ ರೂ.ಗಳನ್ನು ದಾನ ನೀಡಿರುವುದು ಬೆಳಕಿಗೆ ಬಂದಿದೆ.

    ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ರಚಿಸಿತ್ತು. ಈ ಮೂಲಕ ದಾನಿಗಳಿಂದ ಸಹಾಯ ಕೋರಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿ ಹಲವು ಗಣ್ಯರು, ನಟ, ನಟಿಯರು ಸೇರಿ ವಿವಿಧ ಕ್ಷೇತ್ರದ ಶ್ರೀಮಂತರು ಸಹಾಯ ಮಾಡಿದ್ದರು. ಈ ಮೂಲಕ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿಯವರ 2.25 ಲಕ್ಷ ರೂ. ಹೊರತುಪಡಿಸಿ, ಪಿಎಂ ಕೇರ್ಸ್ ರಚಿಸಿದ ಐದೇ ದಿನಗಳಲ್ಲಿ ಬರೋಬ್ಬರಿ 3,076 ಕೋಟಿ ರೂ. ಸಂಗ್ರಹವಾಗಿತ್ತು. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಸೇರಿ ಬಿಜೆಪಿಯ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಮೊದಲಲ್ಲ ಈ ಹಿಂದೆ ಸಹ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಹಲವು ಬಾರಿ ದಾನ ನೀಡಿದ್ದಾರೆ. ಈ ಮೂಲಕ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ.

    ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಗಳಿಂದ ಹಿಡಿದು, ಸ್ವಚ್ಛ ಗಂಗಾ(ಕ್ಲೀನ್ ಗಂಗಾ) ಯೋಜನೆಯವರೆಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ ದೇಶದ ದೀನ ದಲಿತರ ಉದ್ಧಾರಕ್ಕೂ ಹಣ ನೀಡಿದ್ದಾರೆ. ಹೀಗೆ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ದಾನ ನೀಡಿದ್ದು, ಇದರ ಒಟ್ಟು ಮೊತ್ತ 103 ಕೋಟಿ ರೂ.ಗೂ ಅಧಿಕವಾಗಿದೆ. 2019ರಲ್ಲಿ ಕುಂಭ ಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದ ನಿಧಿಯಿಂದ 21 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ.

    ದಕ್ಷಿಣ ಕೋರಿಯಾ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯ ಒಟ್ಟು 1.3 ಕೋಟಿ ರೂ.ಗಳ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ನೀಡಿದ್ದರು. ಈ ಮೂಲಕ ನದಿಯನ್ನು ಸ್ವಚ್ಛಗೊಳಿಸಲು ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿ ತಮಗೆ ನೀಡಿದ ಮೊಮೊಂಟೋಗಳನ್ನು ಹರಾಜು ಹಾಕಿದ್ದು, ಇದರಿಂದ 3.40 ಕೋಟಿ ರೂ. ಸಂಗ್ರಹವಾಗಿತ್ತು. ಇದರ ಸಂಪೂರ್ಣ ಮೊತ್ತವನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‍ಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ 2015ರ ವರೆಗೆ ತಮಗೆ ಬಂದ ಉಡುಗೊರೆ ಹಾಗೂ ಮೊಮೆಂಟೋಗಳನ್ನು ಹಾರಾಜು ಮಾಡಿದ್ದು, ಇದರಿಂದ ಸಹ 8.35 ಕೋಟಿ ರೂ.ಸಂಗ್ರಹವಾಗಿದೆ. ಇದರ ಸಂಪೂರ್ಣ ಮೊತ್ತವನ್ನು ಸಹ ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ.

    ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ 21 ಲಕ್ಷ ರೂ.ಗಳ ತಮ್ಮ ವೈಯಕ್ತಿಕ ಉಳಿತಾಯದ ಹಣವನ್ನು ಗುಜರಾತ್‍ನ ಸರ್ಕಾರಿ ಸಿಬ್ಬಂದಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದಾಗ ತಮಗೆ ನೀಡಿದ ಎಲ್ಲ ಉಡುಗೊರೆಗಳನ್ನು ಹರಾಜು ಮಾಡಿದಾಗ ಬಂದ ಒಟ್ಟು 89.96 ಕೋಟಿ ರೂ.ಗಳನ್ನು ಕನ್ಯಾ ಕೇಲವಾನಿ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.

  • ಪಿಎ ಹುಟ್ಟುಹಬ್ಬಕ್ಕೆ ಬೆನ್ಜ್ ಕಾರು ಗಿಫ್ಟ್ ಕೊಟ್ಟ ಸ್ಟಾರ್ ಗಾಯಕಿ

    ಪಿಎ ಹುಟ್ಟುಹಬ್ಬಕ್ಕೆ ಬೆನ್ಜ್ ಕಾರು ಗಿಫ್ಟ್ ಕೊಟ್ಟ ಸ್ಟಾರ್ ಗಾಯಕಿ

    -35 ಲಕ್ಷ ರೂ.ಮೌಲ್ಯದ ಬೆನ್ಜ್ ಕಾರು ಗಿಫ್ಟ್

    ಲಂಡನ್: ಪಿಎ ಹುಟ್ಟುಹಬ್ಬಕ್ಕೆ ಯಾವುದೇ ಸ್ಟಾರ್ ನಟರು ಸಣ್ಣ ಪಾರ್ಟಿಯನ್ನು ಏರ್ಪಡಿಸುವುದು ಸಾಮಾನ್ಯ. ಆದ್ರೆ ಗಾಯಕಿ ಮ್ಯಾಡಿಸನ್ ಬಿಯರ್ ತಮ್ಮ ಪಿಎ 30ನೇ ಬರ್ತ್ ಡೇಗೆ ಸುಮಾರು 35 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಕಾರು ಗಿಫ್ಟ್ ನೀಡಿ ಅಚ್ಚರಿ ಕೊಟ್ಟಿದ್ದಾರೆ.

    ಪಿಎ ಹುಟ್ಟುಹಬ್ಬದ ಸಂದರ್ಭದ ಹಿನ್ನೆಲೆಯಲ್ಲಿ ಲಂಚ್ ಆಯೋಜಿಸಿದ್ದ ಮ್ಯಾಡಿಸನ್ ಬಿಯರ್ ಆ ಬಳಿಕ ಬ್ಯಾಗ್ ಒಂದನ್ನು ನೀಡಿದ್ದರು. ಆ ಬ್ಯಾಗ್‍ನಲ್ಲಿ ಮರ್ಸಿಡಿಸ್ ಬೆನ್ಜ್-ಸಿ300 ಮಾದರಿಯ ಕಾರಿನ ಕೀಯನ್ನು ಇಟ್ಟು ತಮ್ಮ ಪಿಎಗೆ ಬಹುಮಾನವಾಗಿ ನೀಡಿದ್ದರು. ಸ್ವತಃ ಅವರನ್ನೇ ಕಾರಿನ ಬಳಿ ಕರೆದುಕೊಂಡು ಹೋಗಿ ಮ್ಯಾಡಿಸನ್ ಅಚ್ಚರಿ ಮೂಡಿಸಿದ್ದರು.

    ಮರ್ಸಿಡಿಸ್ ಬೆನ್ಜ್ ಕಾರನ್ನು ಖರೀದಿ ಮಾಡಬೇಕೆಂಬುವುದು ಮ್ಯಾಡಿಸನ್ ಬಿಯರ್ ಪಿಎ ಅವರ ಬಹುದಿನಗಳ ಕನಸಾಗಿತ್ತು. 12 ವರ್ಷಗಳ ಹಳೆಯ ಕಾರನ್ನು ಮ್ಯಾಡಿಸನ್ ಪಿಎ ಬಳಸುತ್ತಿದ್ದರು. ಇದನ್ನು ವೀಕ್ಷಿಸಿದ್ದ ಮ್ಯಾಡಿಸನ್ ಪಿಎ ಕನಸನ್ನು ನನಸು ಮಾಡಿದ್ದಾರೆ. ಅಂದಹಾಗೇ ಮ್ಯಾಡಿಸನ್ ಬಿಯರ್ 13ಕ್ಕೆ ಗಾಯಕಿಯಾಗಿ ಹೆಸರು ಪಡೆದಿದ್ದರು. ಆಕೆ ಮಾಡಿದ್ದ ಯೂಟ್ಯೂಬ್ ವಿಡಿಯೋಗಳು 20 ವರ್ಷದ ಗಾಯಕಿಗೆ ಮೊದಲು ಬ್ರೇಕ್ ನೀಡಿತ್ತು.

  • ಸುದೀಪ್ ಕೊಟ್ಟ ಗಿಫ್ಟ್ ನೋಡಿ ಹರೀಶ್ ಕಣ್ಣೀರು

    ಸುದೀಪ್ ಕೊಟ್ಟ ಗಿಫ್ಟ್ ನೋಡಿ ಹರೀಶ್ ಕಣ್ಣೀರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಮುಕ್ತಾಯವಾಗಿದ್ದು, ಈ ಬಾರಿ ಬಿಗ್‍ಬಾಸ್ ಮನೆಯಲ್ಲಿದ್ದ ಅನೇಕರಿಗೆ ಕಿಚ್ಚ ಸುದೀಪ್ ಸ್ಪೆಷಲ್ ಉಡುಗೊರೆಯನ್ನು ಕೊಟ್ಟಿದ್ದಾರೆ. ಇದೀಗ ಬಿಗ್‍ಬಾಸ್ ಮುಗಿಯುತ್ತಿದ್ದಂತೆ ಹರೀಶ್ ರಾಜ್‍ಗೆ ಸುದೀಪ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.

    ಸುದೀಪ್ ಅವರು ಹರೀಶ್ ರಾಜ್ಗೆ ತಮ್ಮ ದುಬಾರಿ ವಾಚನ್ನು ಉಡುಗೊಡೆಯಾಗಿ ಕೊಟ್ಟಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿದ್ದಾಗ ಹರೀಶ್ ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಟ್ ಆಗುವ ಮೂಲಕ ರಾತ್ರೋರಾತ್ರಿ ಮನೆಯಿಂದ ಹೊರ ಬಂದಿದ್ದರು. ಅಂದು ಮನೆಯಿಂದ ಹೊರ ಬಂದವರು ಬಿಗ್‍ಬಾಸ್ ಫಿನಾಲೆಯಲ್ಲಿ ಸುದೀಪ್ ಜೊತೆ ವೇದಿಕೆ ಹಂಚಿಕೊಡಿದ್ದರು.

    ಬಿಗ್‍ಬಾಸ್ ಮನೆಯಲ್ಲಿದ್ದಾಗ ಹರೀಶ್ ಅವರು ಯುವಕರಿಗೆ ಪೈಪೋಟಿ ಕೊಟ್ಟು ಟಾಸ್ಕ್ ಗಳಲ್ಲಿ ಅದ್ಭುತವಾಗಿ ಆಟವಾಡಿದ್ದರು. ಅಲ್ಲದೇ ಮನೆಯಲ್ಲಿದ್ದಷ್ಟು ದಿನ ವೀಕ್ಷಕರಿಗೆ ತಮ್ಮ ನಟನೆ, ಮಿಮಿಕ್ರಿ ಮೂಲಕ ಮನರಂಜನೆ ನೀಡಿದ್ದರು. ಇದು ಸುದೀಪ್‍ಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ಹರೀಶ್‍ಗೆ ತಾವು ಹಾಕಿಕೊಂಡಿದ್ದ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ…

    ಈ ಬಗ್ಗೆ ಮಾತನಾಡಿದ ಹರೀಶ್ ರಾಜ್, ಸುದೀಪ್ ಸರ್ ಹೇಳಿದ್ದಂತೆ ಬಿಗ್‍ಬಾಸ್ ಮುಗಿಯುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಪಾರ್ಟಿ ಮಾಡಿದ್ವಿ. ಈ ವೇಳೆ ಮಾತನಾಡಿದ ಸುದೀಪ್ ಸರ್, ಹರೀಶ್ ರಾಜ್ ಎಲ್ಲರನ್ನು ಮನರಂಜನೆ ನೀಡಿದ್ದಾರೆ. ಅವರಿಗೆ ನಾನು ಏನಾದರು ಕೊಡಬೇಕು ಎಂದು ಎಲ್ಲರ ಮುಂದೆ ಹೇಳಿದರು. ಅಲ್ಲದೇ ಮಾತು ಮುಗಿಯುವ ಮುನ್ನವೇ ತಮ್ಮ ಕೈಯಲ್ಲಿದ್ದ ದುಬಾರಿ ವಾಚನ್ನು ತೆಗೆದು ನನಗೆ ಹಾಕಿದರು ಎಂದರು.

    ಸುದೀಪ್ ಸರ್ ನನಗೆ ವಾಚ್ ಹಾಕಿದ ತಕ್ಷಣ ಎಮೋಷನಲ್ ಆದೆ. ಆ ಸಂದರ್ಭದಲ್ಲಿ ನಾನು ಏನು ಮಾತನಾಡಲು ಸಾಧ್ಯವಾಗಿಲ್ಲ. ಆಗ ಸುದೀಪ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದೆ ಎಂದು ಹರೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಶೈನ್ ಶೆಟ್ಟಿ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.