Tag: ಗಿಫ್ಟ್

  • ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ!

    ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ!

    ಜೈಪುರ: ಒಬ್ಬ ತಾಯಿಗೆ ತನ್ನ ಮಗು ಅವಳನ್ನು ಎಷ್ಟು ಪ್ರೀತಿಸುತ್ತೆ, ಗೌರವಿಸುತ್ತೆ ಎಂಬುದು ದೊಡ್ಡ ಉಡುಗೊರೆಯಾಗಿರುತ್ತೆ. ತನ್ನ ತಾಯಿಯ ಕನಸನ್ನು ಮಕ್ಕಳು ಈಡೇರಿಸಿದರೆ ಆಕೆಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಅದೇ ರೀತಿಯ ಸುದ್ದಿಯೊಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಇಲ್ಲೊಬ್ಬ ಮಗ ತನ್ನ ತಾಯಿಯ ನಿವೃತ್ತಿ ದಿನ ಹೆಲಿಕಾಪ್ಟರ್ ರೈಡ್ ಕರೆದುಕೊಂಡು ಹೋಗಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

    ಶಾಲಾ ಶಿಕ್ಷಕಿ ಸುಶೀಲಾ ಚೌಹಾಣ್ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಶನಿವಾರ ನಿವೃತ್ತರಾದರು. 33 ವರ್ಷಗಳ ಸೇವೆಯ ನಂತರ, ಪಿಸಂಗನ್‍ನ ಕೇಸರಪುರ ಪ್ರೌಢಶಾಲೆಯಲ್ಲಿ ಸುಶೀಲಾ ಅವರ ಕೆಲಸದ ಕೊನೆಯ ದಿನವಾಗಿತ್ತು. ಈ ನಿವೃತ್ತಿಯ ದಿನವನ್ನು ಸ್ಮರಣೀಯವಾಗಿಸಲು, ಅವರ ಮಗ ಯೋಗೇಶ್ ಚೌಹಾಣ್ ತನ್ನ ತಾಯಿಗಾಗಿ ಹೆಲಿಕಾಪ್ಟರ್ ರೈಡ್ ಬುಕ್ ಮಾಡಿದರು. ಹೆಲಿಕಾಪ್ಟರ್ ಮೂಲಕ ತಾಯಿಯನ್ನು ಶಾಲೆಯಿಂದ ಮನೆಗೆ ಕರೆತರಲು ಯೋಗೇಶ್ ಆಡಳಿತದಿಂದ ವಿಶೇಷ ಅನುಮತಿಯನ್ನೂ ಪಡೆದುಕೊಂಡಿದ್ದರು. ಇದನ್ನೂ ಓದಿ: ನಾನು ಸಂದರ್ಶನ ಕೊಡಲು ಶುರು ಮಾಡಿದ್ರೆ ಭೂಕಂಪವಾಗುತ್ತೆ: ಉದ್ಧವ್‍ಗೆ ಶಿಂಧೆ ಟಾಂಗ್ 

    ಮಗ ಹೇಳಿದ್ದೇನು?
    ನನ್ನ ತಾಯಿ ಶಿಕ್ಷಕಿ ಕೆಲಸದಿಂದ ನಿವೃತ್ತಿಯಾಗುತ್ತಿದ್ದರು. ಅದಕ್ಕೆ ನನ್ನ ತಾಯಿಗಾಗಿ ವಿಶೇಷವಾದದ್ದನ್ನು ಮಾಡಬೇಕೆಂದು ಬಯಸಿದ್ದೆ. ಹಾಗಾಗಿ ನನ್ನ ತಾಯಿಯ ಶಾಲೆಯಿಂದ ಮನೆವರೆಗೂ ಹೆಲಿಕಾಪ್ಟರ್ ರೈಡ್ ಬುಕ್ ಮಾಡಬೇಕೆಂದು ನಿರ್ಧರಿಸಿದೆ. ಈ ಹಿನ್ನೆಲೆ ಅದೇ ರೀತಿ ಮಾಡಿದ್ದೇನೆ. ಆದರೆ, ಈ ಸಮಯದಲ್ಲಿ ಇಷ್ಟೊಂದು ಜನರು ಅಲ್ಲಿ ಬರುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ ಇದು ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.

    ತಾಯಿ ಸಂತಸ
    ನನ್ನ ಮಗನ ಈ ಸರ್ಪ್ರೈಸ್ ಉಡುಗೊರೆಯಿಂದ ತುಂಬಾ ಖುಷಿಯಾಗಿದೆ. ನನ್ನ ಮಗ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಒಬ್ಬ ಮಗಳು ಮತ್ತು ಮಗನಿದ್ದಾನೆ. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವಿವರಿಸಲು ಕಷ್ಟ ಎಂದರು. ಇದನ್ನೂ ಓದಿ:  ಪತ್ರಾ ಚಾವ್ಲ್ ಭೂ ಹಗರಣ: ಸಂಜಯ್ ರಾವತ್ ನಿವಾಸದ ಮೇಲೆ ಇಡಿ ದಾಳಿ 

    ಯೋಗೇಶ್ ಕೆಲಸವೇನು?
    ಯೋಗೇಶ್ ಚೌಹಾಣ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಪ್ರಸ್ತುತ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿಯ ನಿವೃತ್ತಿಯ ದಿನ ತಮ್ಮ ಸ್ವ-ಗ್ರಾಮಕ್ಕೆ ಬಂದ ಯೋಗೇಶ್ ಈ ಯೋಜನೆಯನ್ನು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಸಿಕ್ಕ ಉಡುಗೊರೆ ಏನು?

    ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಸಿಕ್ಕ ಉಡುಗೊರೆ ಏನು?

    ನ್ನಡದ ಹೆಸರಾಂತ ನಟ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 42ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಬಾರಿ ಅಭಿಮಾನಿಗಳ ಜೊತೆ ತಾವು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಅವರು ಅಭಿನಯಿಸುತ್ತಿರುವ ಚಿತ್ರಗಳು ಮಾತ್ರ ತಮ್ಮದೇ ಆದ ರೀತಿಯಲ್ಲಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.

    ಸದ್ಯ ಗಣೇಶ್ ಅವರ ಗಾಳಿಪಟ 2 ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿದ್ದಾರೆ. ಮೊನ್ನೆಯಷ್ಟೇ ಇವರ ಹುಟ್ಟು ಹಬ್ಬಕ್ಕಾಗಿಯೇ ಹಾಡೊಂದನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಅಲ್ಲದೇ, ಬಾನದಾರಿಯಲ್ಲಿ ಸಿನಿಮಾದ ಪೋಸ್ಟರ್ ಕೂಡ ಇಂದು ರಿಲೀಸ್ ಆಗಿದೆ. ಜೊತೆಗೆ ಡಬ್ಬಲ್ ಡೆಕ್ಕರ್ ಪೋಸ್ಟರ್ ಕೂಡ ಬಿಡುಗಡೆ ಮಾಡಿ ಶುಭ ಹಾರೈಸಿವೆ ಚಿತ್ರತಂಡಗಳು. ಈಗಾಗಲೇ ಬಾನದಾರಿಯಲ್ಲಿ ಸಿನಿಮಾದ ಎರಡು ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ ಗಣೇಶ್. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ಈ ಹುಟ್ಟು ಹಬ್ಬಕ್ಕಾಗಿಯೇ ನಿರ್ದೇಶಕ ಸುನಿ ಸರ್ ಪ್ರೈಸ್ ವೊಂದನ್ನು ನೀಡಲಿದ್ದಾರಂತೆ. ಈ ಕುರಿತು ಅವರು ಟ್ವಿಟ್ ಮಾಡಿದ್ದಾರೆ. ಇದು ರಾಯಗಡ್ ಸಿನಿಮಾದ ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಸೋನು ನಿಗಂ ಕೂಡ ಗಣೇಶ್ ಅವರಿಗಾಗಿ ಹಾಡೊಂದನ್ನು ಹೇಳಿ ಕಳುಹಿಸಿದ್ದಾರೆ. ಈ ಬಾರಿ ಇಷ್ಟೊಂದು ಸಂಭ್ರಮವನ್ನು ಗಣೇಶ್ ನಟನೆಯ ಚಿತ್ರತಂಡಗಳು ಮಾಡಿವೆ.

    Live Tv

  • ಜೈಲಿನಲ್ಲಿರುವ ಸುಕೇಶ್‌ನಿಂದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಡೆದ ಗಿಫ್ಟ್ ಏನು? ಬೆಚ್ಚಿ ಬೀಳಿಸುತ್ತೆ ವರದಿ

    ಜೈಲಿನಲ್ಲಿರುವ ಸುಕೇಶ್‌ನಿಂದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಡೆದ ಗಿಫ್ಟ್ ಏನು? ಬೆಚ್ಚಿ ಬೀಳಿಸುತ್ತೆ ವರದಿ

    ನೂರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೆ ರಂಪಾಟ ಮಾಡುತ್ತಿದ್ದಾನಂತೆ. ಪದೇ ಪದೇ ಪತ್ನಿಯ ಜೊತೆ ಮಾತಾಡಬೇಕೆಂದು ಹಠ ಹಿಡಿದಿದ್ದಾನಂತೆ. ಜೊತೆಗೆ ಉಪವಾಸ ಕೂಡ ಮಾಡುತ್ತಿದ್ದಾನಂತೆ. ಸುಕೇಶ್ ಈ ನಡೆ ಜೈಲು ಅಧಿಕಾರಿಗಳಿಗೆ ತಲೆನೋವು ತಂದಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಅನಾರೋಗ್ಯದ ಕಾರಣಕ್ಕಾಗಿ ಸುಕೇಶ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಇವನಿಗೆ ಚಿಕಿತ್ಸೆ ನೀಡಲು ವೈದ್ಯ ತಂಡ ಹರಸಾಹಸಪಡುತ್ತಿದೆ. ಕೆಲ ದಿನಗಳಿಂದ ಉಪವಾಸವಿದ್ದ ಕಾರಣಕ್ಕಾಗಿ ತೂಕ ಕೂಡ ಕಡಿಮೆ ಆಗಿದೆಯಂತೆ. ಹೀಗಾಗಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ವರದಿಯಾಗಿದೆ. ಜೈಲು ನಿಯಮದ ಪ್ರಕಾರ ತಿಂಗಳಿಗೆ ಎರಡೇ ಬಾರಿ ಒಳ ಜೈಲಿನ ಕೈದಿಗಳಿಗೆ ಭೇಟಿಗೆ ಅವಕಾಶ ನೀಡಲಾಗುತ್ತದೆ. ಸುಕೇಶ್ ಹೆಂಡತಿ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಇರುವುದರಿಂದ ಈಗಾಗಲೇ ಹಲವು ಬಾರಿ ಪತ್ನಿಯನ್ನು ಭೇಟಿ ಆಗಿದ್ದಾನಂತೆ. ಹೀಗಾಗಿ ಮತ್ತೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ವಿಚಾರಣೆಯ ನಂತರ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವಂತಹ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಜಾಕ್ವೆಲಿನ್ ಸ್ನೇಹ ಬೆಳೆಸುವುದಕ್ಕಾಗಿ ಸುಕೇಶ್ ಸಾಕಷ್ಟು ದುಬಾರಿಯ ಗಿಫ್ಟ್‌ಗಳನ್ನು ನೀಡಿದ್ದಾನಂತೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ದುಬಾರಿ ವಾಚ್, ಕಿವಿಯೋಲೆಗಳು, ಜಿಮ್ ಉಡುಗೆ, ಶೂಗಳು, ಐಷಾರಾಮಿ ಹೋಟೆಲ್ ಬುಕ್, ಬಳೆಗಳು, ಪರ್ಷಿಯನ್ ಬೆಕ್ಕು, ರತ್ನ ಖಚಿತ ಓಲೆಗಳು, ಬ್ರೇಸ್ಲೆಟ್, ಅರ್ಧ ಕೋಟಿ ಬೆಲೆಬಾಳುವ ಕುದುರೆ, ಹೆಸರಾಂತ ಬ್ರ್ಯಾಂಡ್‌ಗಳ ವಸ್ತುಗಳನ್ನೇ ಸುಕೇಶ್ ನೀಡಿದ್ದಾನೆ ಅಂತ ಸ್ವತಃ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  • ಮದುವೆಯಲ್ಲಿ ವಧು, ವರನಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಮದುವೆಯಲ್ಲಿ ವಧು, ವರನಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಚೆನ್ನೈ: ಇಂಧನ ದರ ಗಗನಕ್ಕೇರುತ್ತಿರುವ ಹಿನ್ನೆಲೆ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್‍ನಲ್ಲಿ ನವ ವಿವಾಹಿತ ದಂಪತಿಗೆ ತಮ್ಮ ಸ್ನೇಹಿತರು ಮದುವೆಯ ಉಡುಗೊರೆಯಾಗಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    petrol

    15 ದಿನಗಳ ಅಂತರದಲ್ಲಿ ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂಪಾಯಿಗಿಂತೂ ಹೆಚ್ಚು ಏರಿಕೆಯಾಗಿದ್ದು, ಒಂದು ಲೀಟರ್ ಪೆಟ್ರೋಲ್‍ಗೆ 110.85 ರೂ., ಡೀಸೆಲ್ 100.94 ರೂ.ಗೆ ಮಾರಾಟವಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ

    ಇದೇ ಸಮಯವನ್ನು ಬಳಸಿಕೊಂಡು, ಇತ್ತೀಚೆಗೆ ಚೆಯ್ಯೂರಿನಲ್ಲಿ ವಿವಾಹವಾದ ಗ್ರೇಸ್ ಕುಮಾರ್ ಮತ್ತು ಕೀರ್ತನಾ ಅವರಿಗೆ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮದುವೆಯ ಉಡುಗೊರೆಯಾಗಿ ನೀಡಿದರು. ಮೊದ ಮೊದಲು ಗಿಫ್ಟ್ ನೋಡುತ್ತಿದ್ದಂತೆಯೇ ಬೆಚ್ಚಿಬಿದ್ದ ವಧು, ವರರು, ಬಳಿಕ ಖುಷಿಯಿಂದ ಉಡುಗೊರೆ ಸ್ವೀಕರಿಸಿದರು. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

  • ಮಾಜಿ ಪತ್ನಿಯಿಂದ ಅಮೀರ್ ಖಾನ್ ಗೆ ಸಿಕ್ತು ಭರ್ಜರಿ ಗಿಫ್ಟ್

    ಮಾಜಿ ಪತ್ನಿಯಿಂದ ಅಮೀರ್ ಖಾನ್ ಗೆ ಸಿಕ್ತು ಭರ್ಜರಿ ಗಿಫ್ಟ್

    ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರುವ ಅಮೀರ್ ಖಾನ್‍ಗೆ ಈ ವಿಶೇಷ ದಿನದಂದು ಮಾಜಿ ಪತ್ನಿ ಕಿರಣ್ ರಾವ್ ಬೆಸ್ಟ್ ಗಿಫ್ಟ್ ನೀಡಿರುವುದಾಗಿ ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ. ಆ ಗಿಫ್ಟ್ ಈವರೆಗೂ ಸಿಗದೇ ಇರದಂತಹ ದುಬಾರಿ ಉಡುಗೊರೆಯಾಗಿದೆಯಂತೆ.

    ನನ್ನನ್ನು ಕಿರಣ್‍ಗಿಂತ ಚೆನ್ನಾಗಿ ಯಾರು ತಿಳಿದಿಲ್ಲ. ಹಾಗಾಗಿ ಈ ವರ್ಷ ಸ್ವಯಂ ಆಗಿ ಕೆಲಸ ಮಾಡಲು ಬಯಸುತ್ತಿರುವ ನನಗೆ ನನ್ನಲ್ಲಿರುವ ಒಂದಷ್ಟು ವೀಕ್‍ನೆಸ್‍ಗಳ ಬಗ್ಗೆ ಲಿಸ್ಟ್ ಮಾಡಿ ತಿಳಿಸುವಂತೆ ಕೇಳಿದ್ದೆ. ಅದಕ್ಕೆ ಕಿರಣ್ 10 ರಿಂದ 12 ಸಲಹೆಗಳನ್ನು ನೀಡಿದರು. ನಾನು ಅದೆಲ್ಲವನ್ನು ಬರೆದುಕೊಂಡೆ. ಇದು ನನ್ನ ಜೀವನದ ಅತ್ಯುತ್ತಮ ಗಿಫ್ಟ್ ಆಗಿದೆ ಎಂದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

     

    View this post on Instagram

     

    A post shared by Aamir Khan (@amirkhanactor_)

    ಇದೇ ವೇಳೆ ವಿಚ್ಚೇದನ ಕುರಿತಂತೆ ಮಾತನಾಡಿದ ಅವರು, ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾವು ಪರಸ್ಪರ ತುಂಬಾ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಆದರೆ ಜನರಿಗೆ ಇದು ಅರ್ಥವಾಗುವುದಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಸಾಮಾನ್ಯ ವಿಚಾರವಾಗಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮತ್ತು ಪರಸ್ಪರ ಕುಟುಂಬದವರನ್ನು ಅರ್ಥ ಮಾಡಿಕೊಂಡಿದ್ದೇವೆ. ವಾಸ್ತವವಾಗಿ ಕಿರಣ್ ಮತ್ತು ನನ್ನದು ಒಂದೇ ಕುಟುಂಬ. ಆದರೆ ನಮ್ಮ ಗಂಡ ಮತ್ತು ಹೆಂಡತಿಯ ಸಂಬಂಧದಲ್ಲಿ ಬದಲಾವಣೆಯಾಗಿದೆ. ನಾವು ಮದುವೆಯನ್ನು ಗೌರವಿಸುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ನಾವು ಗಂಡ ಮತ್ತು ಹೆಂಡತಿಯಾಗಿ ದೀರ್ಘಕಾಲ ಮುಂದುವರಿಯಲು ಆಗಲಿಲ್ಲ. ಹಾಗಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು ಎಂದಿದ್ದಾರೆ.

     

    View this post on Instagram

     

    A post shared by Aamir Khan (@amirkhanactor_)

    18 ವರ್ಷದ ದಾಂಪತ್ಯ ಜೀವನಕ್ಕೆ ಅಮೀರ್ ಮತ್ತು ಕಿರಣ್ 2021ರಲ್ಲಿ ವಿಚ್ಛೇದನ ಪಡೆದರು. ಆದರೆ ಇಬ್ಬರು ಸ್ನೇಹಿತರು ಮತ್ತು ಪೋಷಕರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

  • ವಂಚಕನಿಂದಲೇ ಜಾಕ್ವೆಲಿನ್‌ಗೆ ಸಿಕ್ತು 10 ಕೋಟಿ ರೂ. ಬೆಲೆಯ ಗಿಫ್ಟ್

    ವಂಚಕನಿಂದಲೇ ಜಾಕ್ವೆಲಿನ್‌ಗೆ ಸಿಕ್ತು 10 ಕೋಟಿ ರೂ. ಬೆಲೆಯ ಗಿಫ್ಟ್

    ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಕ್ಕಿಬಿದ್ದಿರುವ ವಂಚಕ ಸುಕೇಶ್ ಚಂದ್ರಶೇಖರ್ ಎಂಬಾತ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ಗೆ 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆ ನೀಡಿದ್ದಾನೆ.

    ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರು ಜೈಲು ಪಾಲಾದ ವಂಚಕ ಸುಕೇಶ್ ಚಂದ್ರಶೇಖರ್ ಅವರಿಂದ ಕೋಟ್ಯಂತರ ರೂ. ಮೌಲ್ಯದ ಉಡುಗೊರೆಯನ್ನು ಪಡೆದಿದ್ದಾರೆ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಾರ್ಜ್‍ಶೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಯುವತಿ ಸ್ಕೂಟರ್ ನಂಬರ್ ಪ್ಲೇಟ್‍ನಲ್ಲಿ ‘SEX’ ಪದ- ಮಹಿಳಾ ಆಯೋಗದಿಂದ ನೋಟಿಸ್

    ಸುಕೇಶ್ ಯಾರು?
    ಸುಕೇಶ್ ಚಂದ್ರಶೇಖರ್ ಮೂಲತಃ ಬೆಂಗಳೂರಿನವ. ಅದ್ದೂರಿ ಜೀವನ ನಡೆಸುವ ಉದ್ದೇಶದಿಂದ ತನ್ನ 17 ನೇ ವಯಸ್ಸಿನಿಂದಲೇ ಜನರನ್ನು ವಂಚಿಸಲು ಪ್ರಾರಂಭಿಸಿದ್ದ. ಬಾಲಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಚಂದ್ರಶೇಖರ್, ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ. ನಂತರ ರಾಜಕಾರಣಿಯೊಬ್ಬರ ಸಂಬಂಧಿ ಎಂದು ಹೇಳಿಕೊಂಡು 100ಕ್ಕೂ ಅಧಿಕ ಜನರಿಗೆ ವಂಚನೆ ಮಾಡಿ 75 ಕೋಟಿ ರೂಪಾಯಿ ವಂಚಿಸಿದ್ದಾನೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಸುದ್ದಿ ಮಾಧ್ಯಮದ ಪ್ರಕಾರ, 2011 ರಲ್ಲಿ ಚೆನ್ನೈನ ಕೆನರಾ ಬ್ಯಾಂಕ್‍ನಲ್ಲಿ ವಂಚನೆಗೆ ಮುಂದಾಗಿ ಚಂದ್ರಶೇಖರ್ ಮತ್ತು ಆತನ ಗೆಳತಿ ಮರಿಯಾ ಪಾಲ್‍ಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದರು.

    ಇದಾದ ಬಳಿಕವೂ ಚಂದ್ರಶೇಖರ್, ಅದಿತಿ ಎಸ್.ಸಿಂಗ್ ಅವರಿಂದ 200 ಕೋಟಿ ರೂ. ಪಡೆದು ವಂಚಿಸಿದ್ದ ಹಿನ್ನೆಲೆಯಿಂದ ಮತ್ತೆ ಜೈಲು ಪಾಲಾದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ರಾಮದಾನಿ ಮತ್ತು ದೀಪಕ್ ರಾಮದಾನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಜೈಲಿನೊಳಗೆ ಮೊಬೈಲ್ ಫೋನ್ ಬಳಸಿ ಸುಲಿಗೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

    ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆ ನೀಡಿರುವುದಾಗಿ ಸುಕೇಶ್ ಚಂದ್ರಶೇಖರ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಇಡಿ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

    ಸುಕೇಶ್‍ಗೆ ಜಾಕ್ವೆಲಿನ್ ಪರಿಚಯ ಹೇಗಾಯಿತು?
    ಸುಕೇಶ್ ಮತ್ತು ನಟಿ ಜಾಕ್ವೆಲಿನ್ 2021 ಜನವರಿಯಿಂದಲೂ ಪ್ರತಿದಿನ ಪರಸ್ಪರ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಬಳಿಕ ವಜ್ರದ ಆಭರಣಗಳು, ನಾಲ್ಕು ಪರ್ಷಿಯನ್ ಬೆಕ್ಕುಗಳು (ಒಂದು ಬೆಕ್ಕಿನ ಬೆಲೆ 9 ಲಕ್ಷ ರೂ.) ಗಿಫ್ಟ್‍ಗಳನ್ನು ನಟಿಗೆ ಕಳುಹಿಸಿದ್ದಾನೆ. ಹಾಗೆಯೇ ಅವರ ಒಡನಾಟ ಬೆಳೆದು ಇವರಿಬ್ಬರೂ ಮುಂಬೈ ಹೋಟೆಲ್‍ನಲ್ಲಿ ಇದ್ದರು ಎನ್ನಲಾಗಿದೆ. ಇಬ್ಬರೂ ಒಟ್ಟಿಗೆ ಓಡಾಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

  • ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

    ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

    ಕಾಬೂಲ್‌: ಅಫ್ಘಾನಿಸ್ತಾನದ ಹೋಟೆಲಿನಲ್ಲಿ ದಾಳಿ ಎಸಗಿ ಪ್ರವಾಸಿಗರ ಹತ್ಯೆ ಮಾಡಿದ್ದ ಉಗ್ರರನ್ನು ತಾಲಿಬಾನ್‌ ಸರ್ಕಾರದ ಸಚಿವ ಪ್ರಶಂಸಿಸಿ ಕುಟುಂಬಕ್ಕೆ ನಗದು ಬಹುಮಾನ ಮತ್ತು ನಿವೇಶನವನ್ನು ನೀಡುವುದಾಗಿ ಹೇಳಿದ್ದಾನೆ.

    ನೂತನವಾಗಿ ರಚನೆಯಾಗಿರುವ ತಾಲಿಬಾನ್‌ ಸರ್ಕಾರದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್‌ ಹೋಟೆಲಿನಲ್ಲಿ ಮೃತ ಉಗ್ರರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಪ್ರತಿಯೊಬ್ಬ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ 125 ಡಾಲರ್‌(ಅಂದಾಜು 9,300 ರೂ.) ಮತ್ತು ಜಾಗ ನೀಡುವುದಾಗಿ ಘೋಷಿಸಿದ್ದಾನೆ.

    ತಾಲಿಬಾನ್ ಪರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಥಳೀಯ ಮಾಧ್ಯಮಗಳು ಹಕ್ಕಾನಿ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿವೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕೋಮುಗಲಭೆ – ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆ ಬ್ಲಾಕ್

    ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವವರನ್ನು ನಾವು ಸ್ಮರಿಸಿಕೊಳ್ಳಬೇಕು. ನಾವು ಹುತಾತ್ಮರ ಆಕಾಂಕ್ಷೆಗಳಿಗೆ ಯಾವುದೇ ದ್ರೋಹ ಮಾಡಬಾರದು. ಅವರು ದೇಶದ ಮತ್ತು ಇಸ್ಲಾಂನ ನಿಜವಾದ ಹೀರೋಗಳು ಎಂಬುದಾಗಿ ಉಗ್ರರನ್ನು ಸಿರಾಜುದ್ದೀನ್ ಬಣ್ಣಿಸಿದ್ದಾನೆ.

    2018 ರ ಜನವರಿಯಲ್ಲಿ ಇಂಟರ್ ಕಾಂಟಿನೆಂಟಲ್ ಹೋಟೆಲ್‌ಗೆ ನುಗ್ಗಿದ್ದ 6 ಮಂದಿ ಉಗ್ರರು ಜನರನ್ನು ಒತ್ತೆಯಾಳಾಗಿ ಇರಿಸಿ ಮನ ಬಂದಂತೆ ಗುಂಡು ಹಾರಿಸಿ 40 ಜನರನ್ನು ಹತ್ಯೆ ಮಾಡಿದ್ದರು.

    ಸಿರಾಜುದ್ದೀನ್ ತಂದೆ ಜಲಾಲುದ್ದೀನ್ ರಚಿಸಿದ, ಹಕ್ಕಾನಿ ಜಾಲವು ತಾಲಿಬಾನ್‌ನ ಅತ್ಯಂತ ಭಯಾನಕ ಉಗ್ರ ಸಂಘಟನೆಯಾಗಿದ್ದು, ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಮಾರಣಾಂತಿಕ ದಾಳಿಗಳಿಗೆ ಕಾರಣವಾಗಿದೆ.

    ಸಿರಾಜುದ್ದೀನ್ ಹಕ್ಕಾನಿ ಅಮೆರಿಕದ ಭಯೋತ್ಪಾದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಆತನ ಬಂಧನಕ್ಕಾಗಿ 10 ದಶಲಕ್ಷ ಡಾಲರ್(75.13 ಕೋಟಿ ರೂ.) ಬಹುಮಾನವನ್ನು ಅಮೆರಿಕ ಘೋಷಿಸಿತ್ತು.

  • ನೂತನ ವಧು-ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ನೂತನ ವಧು-ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಚಿಕ್ಕಮಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿರೋ ಹಿನ್ನೆಲೆ ನವ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ಪೆಟ್ರೋಲ್ ಉಡುಗೊರೆ ನೀಡಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

    ಮುಹೂರ್ತ ಮುಗಿದ ಬಳಿಕ ವೇದಿಕೆ ಮೇಲೆ ರಿಸೆಪ್ಷನ್‍ಗೆ ನಿಂತಿದ್ದ ದಂಪತಿಗಳು ಪೆಟ್ರೋಲ್ ಬಾಟಲಿ ನೋಡಿ ಶಾಕ್ ಆಗಿದ್ದಾರೆ. ಮದುವೆಗೆ ಬಂದಿದ್ದ ಇತರೇ ಜನಸಾಮಾನ್ಯರು ಕೂಡ ಉಡುಗೊರೆ ನೋಡಿ ನಸುನಕ್ಕಿದ್ದಾರೆ. ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಮದುವೆ ಸಮಾರಂಭ ಇತ್ತು. ಮದುವೆ ಸಮಾರಂಭಕ್ಕೆ ಬಂದಿದ್ದ ಸಚಿನ್ ಮತ್ತು ಅವರ ಸ್ನೇಹಿತರು ನವದಂಪತಿಗಳಿಗೆ ಒಂದು ಲೀಟರ್‍ ನ ಮೂರು ಪೆಟ್ರೋಲ್ ಬಾಟಲಿಗಳನ್ನು ನೀಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ

    ವಧು ಹಾಗೂ ವರ ಇಬ್ಬರಿಗೂ ತಲಾ ಒಂದೂವರೆ ಲೀಟರ್ ಪೆಟ್ರೋಲ್ ಬಾಟಲಿಯನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಸ್ನೇಹಿತರ ಕೈಯಲ್ಲಿ ಪೆಟ್ರೋಲ್ ಬಾಟಲಿ ನೋಡಿದ ವೇದಿಕೆ ಮೇಲಿದ್ದ ನೂತನ ವಧು-ವರರು ಕೂಡ ಆಶ್ಚರ್ಯಕ್ಕೀಡಾಗಿದ್ದಾರೆ. ಮದುವೆಗೆ ಬಂದಿದ್ದ ಜನರೂ ಕೂಡ ಈ ಗಿಫ್ಟ್ ನೋಡಿ ಆಶ್ಚರ್ಯದ ಜೊತೆ ಸಂತೋಷ ವ್ಯಕ್ತಪಡಿಸಿ, ಪೆಟ್ರೋಲ್-ಡಿಸೇಲ್ ಬೆಲೆ ಗಗನ ಮುಟ್ಟಿದೆ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಯಾವಾಗ ಇಳಿಸುತ್ತೋ ಏನೋ ಅಂತ ಸರ್ಕಾರಕ್ಕೆ ಹಿಡಿಶಾಪ ಹಾಕ್ಕೊಂಡು, ಮದುವೆ ಮನೆಯಲ್ಲಿ ಊಟ ಮಾಡಿ, ನೂತನ ವಧು-ವರರಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

  • ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ

    ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ಗುರುವಾರ ಭಾರತ ಮೂಲದ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೊಂದು ರಾಜತಾಂತ್ರಿಕ ಭೇಟಿಯಾದರೂ ಪ್ರಧಾನಿ ಮೋದಿ, ಕಮಲಾ ಹ್ಯಾರಿಸ್ ಅವರೊಂದಿಗೆ ಭಾವನಾತ್ಮಕ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಅಪರೂಪದ ಗಿಫ್ಟ್ ನೀಡಿ ಹ್ಯಾರಿಸ್ ಅವರನ್ನು ಬೆರಗುಗೊಳಿಸಿದ್ದಾರೆ.

    ಭಾವನಾತ್ಮಕ ಗಿಫ್ಟ್
    ಸಭೆ ಫಲಪ್ರದವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಐದು ದಶಕಗಳ ಹಳೆಯ ಸರ್ಕಾರಿ ಅಧಿಸೂಚನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ಕಮಲಾ ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರ ಹೆಸರಿದೆ. ಸರ್ಕಾರಿ ಅಧಿಕಾರಿಯಾಗಿ ಗೋಪಾಲನ್ ಅವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 1966ರ ಸರ್ಕಾರದ ನೋಟಿಫಿಕೇಷನ್ ಗೆ ಕಟ್ಟಿಗೆಯ ಫ್ರೇಮ್ ಹಾಕಿಸಿ ಕಮಲಾ ಹ್ಯಾರಿಸ್ ಅವರಿಗೆ ನೀಡಿದ್ದಾರೆ. ಈ ವೇಳೆ ಭಾವನಾತ್ಮಕ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಈ ನೋಟಿಫಿಕೇಷನ್ ಪ್ರತಿ ಜೊತೆಗೆ ವಿಶೇಷವಾಗಿ ತಯಾರಿಸಲಾದ ಚಸ್ ಬೋರ್ಡ್ ನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇದನ್ನು ತಮ್ಮ ಕ್ಷೇತ್ರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ತಯಾರಿಸಲಾಗಿದೆ. ಅಲ್ಲದೆ ಈ ಚೆಸ್ ಸೆಟ್ ನ್ನು ಅತ್ಯಾಕರ್ಷಕ ಕರಕುಶಲತೆಯಿಂದ ತಯಾರಿಸಲಾಗಿದ್ದು, ಗುಲಾಬಿ ಮೀನಕರಿ ಪೇಂಟಿಂಗ್ ಒಳಗೊಂಡಿದೆ. ಇದರ ಕರಕುಶಲತೆ ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಕಾಶಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಚೆಸ್ ಸೆಟ್‍ನ ಪ್ರಕಾಶಮಾನವಾದ ಬಣ್ಣಗಳು ಕಾಶಿಯ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಸರ್ಕಾರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ

    ಭೇಟಿ ವೇಳೆ ಕೊರೊನಾ ವೈರಸ್, ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನೂ ವಿಶೇಷ ಎಂಬಂತೆ ಪ್ರಥಮ ಬಾರಿಗೆ ಭಾರತೀಯ ಮೂಲದವರೊಬ್ಬರು ಯುಎಸ್ ಉಪಾಧ್ಯಕ್ಷರಾಗಿದ್ದು, ಜನವರಿಯಲ್ಲಿ ಕಮಲಾ ಹ್ಯಾರಿಸ್ ಅವರು ಯುಎಸ್ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಭೇಟಿಯಾಗಿದೆ.

  • ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

    ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ 6 ಕೋಟಿ ರೂ. ಹಾಗೂ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಬ್ರ್ಯಾಂಡ್ ನ್ಯೂ ಎಕ್ಸ್ ಯುವಿ 700 ಕಾರ್ ನ್ನು ಉಡುಗೊರೆಯಾಗಿ ನೀಡುವುದಾಗಿ ಘೊಷಿಸಿದ್ದಾರೆ.

    ನೀರಜ್ ಚೋಪ್ರಾ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಅಥ್ಲೆಟಿಕ್ ಲೋಕ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅಲ್ಲದೆ ಹೊಸ ದಾಖಲೆಯನ್ನು ಬರೆದಿದ್ದಾರೆ. ಹೀಗಾಗಿ ಸರ್ಕಾರಗಳು ಸೇರಿದಂತೆ ಹಲವರು ಅವರಿಗೆ ಉಡುಗೊರೆಗಳನ್ನು ಘೊಷಿಸುತ್ತಿದ್ದಾರೆ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

    ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು 6 ಕೋಟಿ ರೂ.ಗಳ ನಗದು ಬಹುಮಾನವನ್ನು ಘೊಷಿಸಿದ್ದಾರೆ. ಇದರ ಬೆನ್ನಲ್ಲೇ ಆನಂದ್ ಮಹೀದ್ರಾ ಸಹ ಟ್ವೀಟ್ ಮಾಡುವ ಮೂಲಕ ನೀರಜ್‍ಗೆ ಹೊಸ ಎಸ್‍ಯುವಿ ಕಾರ್ ಗಿಫ್ಟ್ ಕೊಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶತಕೋಟಿ ಭಾರತೀಯರ ಕನಸು ನನಸು – ಚಿನ್ನ ಗೆದ್ದ ನೀರಜ್

    ಬರೋಬ್ಬರಿ 6 ಕೋಟಿ ನಗದು ಬಹುಮಾನದ ಜೊತೆಗೆ ನಿಯಮದಂತೆ ಸರ್ಕಾರದಲ್ಲಿ ಉನ್ನತ ಮಟ್ಟದ ಕೆಲಸ ನೀಡುವುದಾಗಿ ಹರಿಯಾಣ ಸಿಎಂ ಘೊಷಿಸಿದ್ದಾರೆ. ಅಲ್ಲದೆ ಅಥ್ಲೆಟ್ಸ್‍ಗಳಿಗಾಗಿ ಪಂಚಕುಲದಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ನೀರಜ್‍ಗೆ ಗೌರವ ಸಲ್ಲಿಸಿದ್ದಾರೆ.