Tag: ಗಿಫ್ಟ್

  • ಡೈಮಂಡ್ ರಿಂಗ್ ಅಲ್ಲ, ಬಾಟಲ್ ಓಪನರ್: ತಲೆ ಚೆಚ್ಚಿಕೊಂಡ ನಟಿ ತಮನ್ನಾ

    ಡೈಮಂಡ್ ರಿಂಗ್ ಅಲ್ಲ, ಬಾಟಲ್ ಓಪನರ್: ತಲೆ ಚೆಚ್ಚಿಕೊಂಡ ನಟಿ ತಮನ್ನಾ

    ಟಿ ತಮನ್ನಾ (Tamannaah) ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವಿದೆ. ಅದನ್ನು ‘ಸೈರಾ ನರಸಿಂಹ ರೆಡ್ಡಿ’ (Saira Narasimha Reddy) ಸಿನಿಮಾದಲ್ಲಿನ ತಮನ್ನಾ ಆಕ್ಟಿಂಗ್ ನೋಡಿ ರಾಮ್ ಚರಣ್ (Ram Charan) ಪತ್ನಿ ಉಪಾಸನಾ (Upasana) ದುಬಾರಿ ಗಿಫ್ಟ್‌ವೊಂದನ್ನ ನೀಡಿದ್ದರು ಎಂದು ಸುದ್ದಿಯಾಗಿತ್ತು. ತಮನ್ನಾ ವಜ್ರದ ಉಂಗುರದಂತೆ ಕಾಣುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಕೂಡ ಆಗಿತ್ತು.

    ದುಬಾರಿ ಬೆಲೆಯ ವಜ್ರದುಂಗುರ (Vajradugunru) ಎಂದು, ಅದನ್ನು ಉಪಾಸನಾ ನೀಡಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ತಮನ್ನಾ, ‘ಇಂಥದ್ದೊಂದು ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಬೇಸರವಾಗುತ್ತಿದೆ. ಅದು ವಜ್ರದ ಉಂಗುರ ಅಲ್ಲ, ಬದಲಾಗಿ ಅದು ಬಾಟಲ್ ಓಪನರ್ (Bottle Opener). ಈ ಹಿಂದೆ ಓಪನರ್ ಇಟ್ಟುಕೊಂಡು ಶೂಟ್ ಮಾಡಿದ್ದೆವು. ಅದರ ಬೆಲೆ ನೀವೇ ಹೇಳಿ’ ಎಂದಿದ್ದಾರೆ. ಇದನ್ನೂ ಓದಿ:ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ

    ಏನಿದು ವಜ್ರದುಂಗರ ಸ್ಟೋರಿ?

    ಸಿನಿಮಾದ ಸಕ್ಸಸ್ ವಿಚಾರವಾಗಿಯೂ ಸಖತ್ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ವಿಜಯ್ ವರ್ಮ ಜೊತೆಗಿನ ಡೇಟಿಂಗ್ ವಿಷ್ಯಕ್ಕೆ ತಮನ್ನಾ ಹೈಲೆಟ್ ಆಗಿದ್ದಾರೆ. ಇದರ ನಡುವೆ ಅಚ್ಚರಿ ವಿಚಾರವೊಂದು ಬಹಿರಂಗ ಆಗಿತ್ತು. ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಇದೆ. ಸೋಶಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದೆ. ಈ ದುಬಾರಿ ವಸ್ತು ತಮನ್ನಾಗೆ ಸಿಕ್ಕಿದ್ದು ಉಡುಗೊರೆಯ ರೂಪದಲ್ಲಿ ಅದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಕಡೆಯಿಂದ. ಈ ಉಂಗುರವನ್ನು ತಮನ್ನಾಗೆ ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಲಾಗಿತ್ತು.

     

    ತಮನ್ನಾ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ತಮನ್ನಾ ಎಂದರೆ ಇಷ್ಟ. ಉಪಾಸನಾ ಅವರ ಜೊತೆ ತಮನ್ನಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ರಾಮ್ ಚರಣ್ ನಿರ್ಮಿಸಿದ್ದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ ಖುಷಿಯಾಗಿದ್ದ ಉಪಾಸನಾ ಅವರು ಈ ವಜ್ರದ ಉಂಗುರ ನೀಡಿದ್ದರು ಎಂದು ಹೇಳಲಾಗಿತ್ತು. ಆ ವಿಚಾರದ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಚರ್ಚೆ ಶುರುವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ : ವ್ಹಾವ್ ಎಂದ ಯಶ್

    ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ : ವ್ಹಾವ್ ಎಂದ ಯಶ್

    ರಾಕಿಭಾಯ್ ಯಶ್ (Yash) ಇಂದು ಮಲೇಷ್ಯಾಗೆ ಹಾರಿದ್ದರು. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಅವರು, ಇಂದು ಮಲೇಷ್ಯಾದಲ್ಲಿ (Malaysia) ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ (Gift) ಸಾಕಷ್ಟು ವೈರಲ್ ಕೂಡ ಆಗಿದೆ.

    ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು (Group Photo) ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ:ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ. ಇಂದು ಮಲೇಷ್ಯಾಗೆ ಬಂದಿಳಿದಿರುವ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದರು ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎಂದಿದ್ದರು.

    ಕೆಜಿಎಫ್ 2 ಸಿನಿಮಾದ ನಂತರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಹೊಸ ಸಿನಿಮಾ ಯಾವಾಗ ಶುರು ಎಂದು ಕಳೆದ ಒಂದು ವರ್ಷದಿಂದಲೂ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಯಶ್ ಮಾತ್ರ ಯಾವುದೇ ಅಪ್ ಡೇಟ್ ನೀಡದೇ ಮೌನವಹಿಸಿದ್ದಾರೆ. ಹಾಗಂತ ಅವರು ಸುಮ್ಮನೆ ಕುಳಿತಿಲ್ಲ ಎನ್ನುವುದನ್ನೂ ಸ್ಪಷ್ಟ ಪಡಿಸಿದ್ದಾರೆ. ಹೊಸ ಸಿನಿಮಾದ ಕೆಲಸದಲ್ಲೇ ಬ್ಯುಸಿಯಾಗಿದ್ದೇನೆ ಎಂದೂ ಸ್ಪಷ್ಟನೆ ನೀಡಿದ್ದಾರೆ.

     

    ಮೊನ್ನೆಯಷ್ಟೇ ನಂಜನಗೂಡಿಗೆ ಆಗಮಿಸಿದ್ದ ಯಶ್, ‘ನಾನು ದುಡ್ಡಿಗಾಗಿ ಸಿನಿಮಾ ಮಾಡುವುದಿಲ್ಲ. ಸಿನಿಮಾವನ್ನು ಯಾರೂ ಫ್ರೀಯಾಗಿ ನೋಡುವುದಿಲ್ಲ. ಹಾಗಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಒಂದು ನಿಮಿಷವನ್ನೂ ಹಾಳು ಮಾಡಿಕೊಳ್ಳದೇ ಹೊಸ ಸಿನಿಮಾದ ಕೆಲಸವನ್ನು ಮಾಡುತ್ತಿದ್ದೇನೆ. ಅತೀ ಶೀಘ್ರದಲ್ಲೇ ಅಪ್ ಡೇಟ್ ನೀಡುತ್ತೇನೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ರಡ್ಮೂರು ದಿನಗಳಿಂದ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಅವರು, ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯನ್ನು (Bus Driver) ಕರೆಯಿಸಿಕೊಂಡು ಕಾರು (Car)  ಗಿಫ್ಟ್ ನೀಡಿರುವ ಸುದ್ದಿ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬರೀ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಇದೀಗ ತಮಿಳು ನಾಡಿನ ರಾಜಕೀಯ ವಲಯದಲ್ಲೂ ಅದು ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ನಡೆ ಎಂದು ಹೇಳಲಾಗುತ್ತಿದ್ದು, ಕಾರು ಕೊಟ್ಟಿರುವ ಕಮಲ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

    ಏನಿದು ಪ್ರಕರಣ?

    ಶರ್ಮಿಳಾ (Sharmila) ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ. ಅವತ್ತು ಮಹಿಳಾ ಚಾಲಕಿಯರನ್ನು ಗೌರವಿಸುವುದಕ್ಕಾಗಿ ಡಿಎಂಕೆ ಸಂಸದೆ ಕನಿಮೊಳಿ (Kanimozhi) ಕೊಯಮತ್ತೂರಿಗೆ ಬಂದಿದ್ದರು. ಚಾಲಕಿಯರನ್ನು ಗೌರವಿಸಿದ ಕೆಲವೇ ಗಂಟೆಗಳಲ್ಲೇ ಕನಿಮೊಳಿ ಅವರು ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದಾರೆ. ಇಲ್ಲಿಯೇ ಎಡವಟ್ಟು ಆಗಿದೆ.

    ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದ ಕನಿಮೊಳಿಗೆ ಆ ಬಸ್ ನಲ್ಲಿದ್ದ ಕಂಡಕ್ಟರ್ ಟಿಕೆಟ್ ತಗೆದುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಶರ್ಮಿಳಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಂಸದರು ನಮ್ಮನ್ನು ಗೌರವಿಸುವುದಕ್ಕಾಗಿ ಬಸ್ ಏರಿದ್ದಾರೆ. ಬಸ್‍ ನಲ್ಲಿ ಅವರು ಪ್ರಯಾಣಿಸುತ್ತಿರುವುದು ನಮಗೆ ಗೌರವ. ಟಿಕೆಟ್ ತಗೆದುಕೊಳ್ಳುವುದು ಬೇಡ ಎಂದಿದ್ದಾರೆ ಶರ್ಮಿಳಾ. ಈ ವಿಚಾರವಾಗಿ ಕಂಡಕ್ಟರ್ ಗೂ ಮತ್ತು ಶರ್ಮಿಳಾಗೂ ಗಲಾಟೆ ಆಗಿದೆ. ಈ ಗಲಾಟೆಗೆ ಈಗ ನಾನಾ ಬಣ್ಣಗಳು ಮೆತ್ತಿಕೊಂಡಿವೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಈ ಘಟನೆಯಾದ ಕೆಲವೇ ಗಂಟೆಗಳಲ್ಲೇ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಮತ್ತೊಂದು ಕಡೆ ಬಸ್ ಮಾಲೀಕರೆ ಶರ್ಮಿಳಾರನ್ನು ಕೆಲಸದಿಂದ ತಗೆದುಹಾಕಿದ್ದಾರೆ ಎನ್ನುವ ಸುದ್ದಿಯೂ ಇದೆ. ಸ್ವಯಂ ಪ್ರಚಾರಕ್ಕಾಗಿ ಸಿಲೆಬ್ರಿಟಿಗಳನ್ನು ಬಸ್ ನಲ್ಲಿ ಹತ್ತಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಸ್ ಮಾಲೀಕರು ಶರ್ಮಿಳಾರನ್ನು ಕೆಲಸದಿಂದ ತಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಮಾಲೀಕರು ನಿರಾಕರಿಸಿದ್ದಾರೆ.

    ಮತ್ತೊಂದು ಕಡೆ ಶರ್ಮಿಳಾ ಡಿಎಂಕೆ (DMK) ಬೆಂಬಲಿಗರು. ಹಾಗಾಗಿ ಕನಿಮೊಳಿ ಅವರ ಬೆಂಬಲಕ್ಕೆ ನಿಂತು ಟಿಕೆಟ್ ರಹಿತ ಪ್ರಯಾಣ ಮಾಡಿಸಲು ಮುಂದಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಏನೇ ಆದರೂ ಕೆಲಸ ಕಳೆದುಕೊಂಡು ಶರ್ಮಿಳಾಗೆ ಕಮಲ್ ಹಾಸನ್ ಕಾರು ಗಿಫ್ಟ್ ನೀಡುವ ಮೂಲಕ ಅವರ ಬದುಕಿಗೆ ನೆರವಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ರಾಮ್ ಚರಣ್ ಮಗುವಿಗೆ ‘ನಾಟು ನಾಟು’ ಗಾಯಕನಿಂದ ಸ್ಪೆಷಲ್ ಗಿಫ್ಟ್

    ರಾಮ್ ಚರಣ್ ಮಗುವಿಗೆ ‘ನಾಟು ನಾಟು’ ಗಾಯಕನಿಂದ ಸ್ಪೆಷಲ್ ಗಿಫ್ಟ್

    ಇಂದು ಬೆಳಗ್ಗೆಯಷ್ಟೇ ರಾಮ್ ಚರಣ್ ತಂದೆಯಾಗಿದ್ದಾರೆ. ‘ಹೆಣ್ಣು ಮಗುವಿನ (Baby Girl) ತಂದೆಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಬೆಳಗ್ಗೆಯಷ್ಟೇ ರಾಮ್ ಚರಣ್ (Ramcharan) ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ಆ ಮಗುವಿಗಾಗಿ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿನ ಗಾಯಕ ಕಾಲ ಭೈರವ್ (Kala Bhairav) ವಿಶೇಷ ಗಿಫ್ಟ್ ವೊಂದನ್ನು ಕೊಟ್ಟಿದ್ದಾರೆ. ಆ ಉಡುಗೊರೆಯನ್ನು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ರಾಮ್ ಚರಣ್ ಮತ್ತು ಉಪಾಸನಾ (Upasana) ದಂಪತಿಯ ಮಗುವಿಗಾಗಿ ಕಾಲ ಭೈರವ್ ಮೆಲೊಡಿ ಟ್ಯೂನ್ ವೊಂದನ್ನು ಕಂಪೋಸ್ ಮಾಡಿದ್ದು, ‘ಇಂಥದ್ದೊಂದು ರಾಗವನ್ನು ಕಂಪೋಸ್ ಮಾಡಿ ನನ್ನ ಮಗುವಿಗೆ ಉಡುಗೊರೆಯಾಗಿ (Gift) ನೀಡಿದ್ದಕ್ಕೆ ಧನ್ಯವಾದಗಳು ಕಾಲ ಭೈರವ’ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ಬೆಳಗ್ಗೆಯಷ್ಟೇ ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಅವರಿಗೆ ನಿಮ್ಮ ಹಾರೈಕೆ ಇರಲಿ ಎಂದು ರಾಮ್ ಚರಣ್ ತಿಳಿಸಿದ್ದಾರೆ. ಇದನ್ನೂ ಓದಿ:ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

    ನಿನ್ನೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.

    ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದರು.

    ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ತಿಳಿಸಿದ್ದರು.

     

    ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು. ಅಮೆರಿಕಾ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ್ದರಿಂದ, ಅಮೆರಿಕಾದಲ್ಲಿ ಮಗುವಿನ ಜನನ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೆಲ್ಲದಕ್ಕೂ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ತಮ್ಮದೇ ಆಸ್ಪತ್ರೆಯಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

  • ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

    ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

    ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಸಿದ್ದರಾಮಯ್ಯನವರಿಗೆ (Siddarmaiah) ಪತ್ನಿ ವಾಚ್‌(Watch) ಒಂದನ್ನು ಉಡುಗೊರೆಯಾಗಿ (Gift) ನೀಡಿದ್ದಾರೆ.

    ಭಾನುವಾರ ಕಾಂಗ್ರೆಸ್ ನೂತನ ಕಟ್ಟಡ ಇಂದಿರಾ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆಯಲ್ಲಿ ಸಿದ್ದರಾಮಯ್ಯ ಬಲಗಡೆ ಡಿಕೆ ಶಿವಕುಮಾರ್‌ (Shivakumar), ಎಡಗಡೆ ಎಂಬಿ ಪಾಟೀಲ್‌ (MB Patil) ಕುಳಿತ್ತಿದ್ದರು.

    ಸಚಿವ ಎಂಬಿ ಪಾಟೀಲ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಳಿ ಹೊಸ ವಾಚ್‌ ಬಗ್ಗೆ ಕೇಳಿದ್ದಾರೆ. ಈ ವೇಳೆ ಈ ವೇಳೆ ಪತ್ನಿ ಪಾರ್ವತಿ Rado ವಾಚ್ ಗಿಫ್ಟ್ ನೀಡಿದ ವಿಚಾರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

     

    ವಿವಾದಕ್ಕೆ ಕಾರಣವಾಗಿತ್ತು  ವಾಚ್‌:
    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಹುಬ್ಲೋಟ್ ವಾಚ್ ಗಿಫ್ಟ್ ಪ್ರಕರಣ ಭಾರೀ ಸದ್ದು ಮಾಡಿತ್ತು. ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

     

    ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡಿ  ಟೀಕೆ ಮಾಡುತ್ತಿದ್ದರು.

  • ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್!

    ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್!

    ರಾಯ್ಪುರ: ಮದುವೆಗೆ ಗಿಫ್ಟ್ (Marriage Gift) ಕೊಟ್ಟ ಹೋಮ್ ಥಿಯೇಟರ್ (Home Theatre) ಬ್ಲಾಸ್ಟ್ ಆಗಿ ನವವಿವಾಹಿತ ಹಾಗೂ ಆತನ ಸಹೋದರ ಸೇರಿ ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

    ಹೌದು. ಪ್ರಕರಣ ಸಂಬಂಧ ಪೊಲೀಸರು ಗಿಫ್ಟ್ ಕೊಟ್ಟವನನ್ನು ಬಂಧಿಸಿದ್ದು, ತನಿಖೆ ನಡೆಸಿದಾಗ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ಬಂಧಿತನನ್ನು ಸರ್ಜು ಎಂದು ಗುರುತಿಸಲಾಗಿದ್ದು, ಈ ಘಟನೆ ಛತ್ತೀಸ್‌ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.

    ಟ್ವಿಸ್ಟ್ ಏನು..?: ಸ್ಫೋಟಗೊಂಡ ಹೋಮ್ ಥಿಯೇಟರ್ ಅನ್ನು ವಧುವಿನ ಮಾಜಿ ಪ್ರಿಯತಮ ಉಡುಗೊರೆಯಾಗಿ ನೀಡಿರುವುದಾಗಿ ತನಿಖೆಯ ವೇಳೆ ಬಯಲಾಗಿದೆ. ವರನ ಕೊಲೆ ಮಾಡುವ ಉದ್ದೇಶದಿಂದ ಗಿಫ್ಟ್‌ ಆಗಿ ಕೊಟ್ಟಿರುವುದಾಗಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ವಧು ತನ್ನನ್ನು ಬಿಟ್ಟು ಬೇರೆ ಮದುವೆಯಾಗಿರುವುದರ ಮೇಲಿನ ಸಿಟ್ಟಿನಿಂದ ಈ ಐಡಿಯಾ ಮಾಡಿರುವುದಾಗಿ ಹೇಳಿದ್ದಾನೆ. ಹೋಮ್ ಥಿಯೇಟರ್ ಒಳಗಡೆ ಸ್ಫೋಟಕಗಳನ್ನು ಇಟ್ಟು ಯಾವುದೇ ಅನುಮಾನ ಬರದಂತೆ ಪ್ಯಾಕ್ ಮಾಡಿ ಅದನ್ನು ವಧುವಿಗೆ ಉಡುಗೊರೆಯಾಗಿ ನೀಡಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದಾನೆ.

    ನಡೆದಿದ್ದೇನು..?: ವರ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು. ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‍ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ಮೇರಾವಿ ಸಹೋದರ ರಾಜ್‍ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮೇರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಪ್ರಸ್ತುತ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ನ್ನಡ ಸಿನಿಮಾ ರಂಗದ ಹೆಸರಾಂತ ಹಾಸ್ಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಅವರ ಹುಟ್ಟು ಹಬ್ಬಕ್ಕೆ (Birthday) ನಾಡಿನ ಅನೇಕ ದಿಗ್ಗಜರು, ಕಲಾವಿದರು, ರಾಜಕಾರಣಿಗಳು ಶುಭಾಶಯ ಕೋರಿದ್ದಾರೆ. ಜೊತೆಗೆ ಅವರು ನಟಿಸಿದ ಸಿನಿಮಾ ತಂಡದವರು ಸರ್  ಪ್ರೈಸ್ ರೀತಿಯಲ್ಲಿ ಉಡುಗೊರೆಯನ್ನು ನೀಡಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದ ‘ರಂಗನಾಯಕ’ (Ranganayaka) ಚಿತ್ರ ತಂಡ ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ (Raghavendra Stores) ಚಿತ್ರತಂಡ ಇಂದು ವಿಭಿನ್ನ ರೀತಿಯಲ್ಲಿ ಜಗ್ಗೇಶ್ ಹುಟ್ಟು ಹಬ್ಬ ಆಚರಿಸಿವೆ.

    ಗುರು ಪ್ರಸಾದ್ ನಿರ್ದೇಶನದಲ್ಲಿ ತಯಾರಾದ ‘ರಂಗನಾಯಕ’ ಚಿತ್ರದ ಹೊಸ ಪೋಸ್ಟರ್ ಅನ್ನು ಜಗ್ಗೇಶ್ ಹುಟ್ಟು ಹಬ್ಬಕ್ಕಾಗಿಯೇ ರಿಲೀಸ್ ಮಾಡಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಏಪ್ರಿಲ್ 28 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ

    ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು ಜಗ್ಗೇಶ್. ಕುಟುಂಬ ಸಮೇತ ಪ್ರಧಾನಿಯನ್ನು ಭೇಟಿ ಮಾಡಿ, ಅವರ ಆರ್ಶಿವಾದ ಪಡೆದಿದ್ದರು. ತಾವು ಆರಾಧಿಸುವ ರಾಯರ ಮೂರ್ತಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿ ಬಂದಿದ್ದರು. ಆ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದರು.

    ಈ ಬಾರಿಯ ಹುಟ್ಟು ಹಬ್ಬದ ಮತ್ತೊಂದು ವಿಶೇಷ ಎಂದರೆ ಜಗ್ಗೇಶ್ ಇದೀಗ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅರವತ್ತನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರು ವಿಶೇಷ ಪೂಜೆ ಮತ್ತು ರಾಯರ ದರ್ಶನಕ್ಕೂ ಹೋಗಿ ಬಂದಿದ್ದಾರೆ. ಜಗ್ಗೇಶ್ ಅವರಿಗೆ ಇಡೀ ಚಿತ್ರತಂಡ ಶುಭಾಶಯ ತಿಳಿಸಿದೆ.

  • ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳ ಮುಖಂಡರು ಹೊಸ ಹೊಸ ಆಮಿಷ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಧುವಿಗೆ ಸೀಮೆಹಸು, ಫ್ರೀ ಸ್ಕೀಂ, ವರನಿಗೆ ಕೊಳವೆ ಬಾವಿಯ ಆಫರ್. ಅಷ್ಟೇ ಅಲ್ಲದೇ ಮದುವೆಗೆ ಬಂದವರಿಗೆ ಭರ್ಜರಿ ಬಾಡೂಟ ಬಡಿಸಲಾಗಿದೆ.

    ಹೌದು, ಬಾಗೇಪಲ್ಲಿ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (Congress MLA S N Subba Reddy), ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ (Mass Marriage) ಸಮಾರಂಭವನ್ನು ಹಮ್ಮಿಕೊಂಡಿದ್ರು. ಶಾಸಕರ ಪುತ್ರ ಅಭಿಷೇಕ ಸೇರಿದಂತೆ 212 ಜೋಡಿಗಳು ನವಜೀವನಕ್ಕೆ ಕಾಲಿಟ್ರು. ನವ ವಿವಾಹಿತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶುಭ ಹಾರೈಸಿದ್ರು.

    ಸಾಮೂಹಿಕ ಕಲ್ಯಾಣಕ್ಕೆ ಯುವಕ-ಯುವತಿಯರನ್ನು ಸೆಳೆಯಲು ಶಾಸಕ ಸುಬ್ಬಾರೆಡ್ಡಿ ಮಾಸ್ಟರ್ ಪ್ಲಾನ್ ರೂಪಿಸಿದ್ರು. ವಧುವಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆಹಸು ಗಿಫ್ಟ್ ಆಗಿ ಕೊಟ್ರು. ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೆಲ್ (Borewell), ಜಮೀನು ಮಂಜೂರು ಆಫರ್ ನೀಡಿದ್ರು. ಇದರಿಂದ ನೂರಾರು ಜನ ಮದುವೆಗೆ ಅರ್ಜಿ ಸಲ್ಲಿಸಿದ್ರು. 212 ಜೋಡಿಗಳಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಯಿತು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು – ಡಿಕೆಶಿ

    ಸಾಮೂಹಿಕ ಮದುವೆಯಲ್ಲಿ ಬಾಲ್ಯ ವಿವಾಹ ನಡೆಯಬಹುದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪ್ರತಿಯೊಂದು ಜೋಡಿಯ ದಾಖಲೆ ಹಾಗೂ ಮದುವೆ ನೋಂದಣಿ ಪರಿಶೀಲಿಸಿ, ಕಂಕಣ ಭಾಗ್ಯಕ್ಕೆ ಅವಕಾಶ ನೀಡಲಾಯ್ತು. ಸಾಮೂಹಿಕ ವಿವಾಹಗಳಿಗೆ ಬಂದ ಜನರಿಗೆ ದಾರಿಯುದ್ದಕ್ಕೂ ಉಚಿತ ಎಳನೀರು, ಜ್ಯೂಸ್, ಐಸ್ ಕ್ರೀಂ, ಬಾಳೆಹಣ್ಣು ವಿತರಿಸಿ ಭರ್ಜರಿ ಬಾಡೂಟ ಉಣಬಡಿಸಿದ್ರು.

    ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಮುಂದಾಗಿದ್ದು, ಜನರಿಗೆ ಉಚಿತ ಉಡುಗೊರೆಗಳ ಮಹಾಪೂರವನ್ನೇ ನೀಡಿ ರಣತಂತ್ರ ರೂಪಿಸ್ತಿದ್ದಾರೆ.

  • ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಹೆಸರಾಂತ ನಟಿ, ಕರಾವಳಿ ಚೆಲುವೆ ಪೂಜಾ ಹೆಗ್ಡೆ (Pooja Hegde) ಹೆಸರು ಮತ್ತೆ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚಿನ ಸಿನಿಮಾಗಳು ಗೆಲ್ಲದೇ ಇದ್ದರೂ, ಡೇಟಿಂಗ್ (Dating) ವಿಚಾರವಾಗಿ ಆಗಾಗ್ಗೆ ಪೂಜಾ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಪೂಜಾಗೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಪೂಜಾ ಮತ್ತು ಸಲ್ಮಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ, ಪೂಜಾ ಸಹೋದರನ ಮದುವೆ ಸಲ್ಮಾನ್ ಕೂಡ ಬಂದಿದ್ದರು.

    ಸಲ್ಮಾನ್ ಖಾನ್ ಜೊತೆಯಷ್ಟೇ ಅಲ್ಲ, ಪೂಜಾ ನಟಿಸಿರುವ ಸಿನಿಮಾಗಳ ಬಹುತೇಕ ನಟರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಆದರೂ, ಈವರೆಗೂ ಅವರು ಡೇಟಿಂಗ್ ವಿಚಾರವಾಗಿ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆ ಕುರಿತು ಮಾತನಾಡುವಂತಹ ಧೈರ್ಯವನ್ನೂ ಅವರು ಮಾಡಿಲ್ಲ. ಇದೀಗ ದುಬಾರಿ ಕಾರಿನ ಕಾರಣಕ್ಕಾಗಿ ಪೂಜಾ ಮತ್ತೆ ಸದ್ದು ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕರು ಪೂಜಾಗೆ ಎರಡು ಕೋಟಿ ಬೆಲೆಯ ದುಬಾರಿ ಕಾರು ನೀಡಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    ತೆಲುಗಿನ ಸ್ಟಾರ್ ಡೈರೆಕ್ಟರ್  ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಇತ್ತೀಚೆಗಷ್ಟೇ ದುಬಾರಿ ಕಾರೊಂದನ್ನು (Car) ಖರೀದಿಸಿದ್ದಾರೆ. ಆ ಕಾರನ್ನು ಪೂಜಾ ಹೆಗ್ಡೆಗೆ ಕೊಟ್ಟಿದ್ದಾರೆ ಎನ್ನುವುದು ವರ್ತಮಾನ. ತ್ರಿವಿಕ್ರಮ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೆಕುಂಠಪುರಂಲೋ ಚಿತ್ರಗಳಿಗೆ ಇವರೇ ನಾಯಕಿ. ಎರಡೂ ಹಿಟ್ ಚಿತ್ರಗಳು. ಈಗ ಮೂರನೇ ಬಾರಿ ಪೂಜಾ ಇದೇ ನಿರ್ದೇಶಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಹೊಸ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಸಿನಿಮಾದ ಶೂಟಿಂಗ್ ಗೆ ಬರುವುದಕ್ಕಾಗಿ ಪೂಜಾಗೆ ಕಾರು ಕೊಡಿಸಿದ್ದಾರೆ ಎನ್ನುವುದು ಗುಸುಗುಸು. ದುಬಾರಿ ಕಾರು ಕೊಡಿಸಿದ್ದರ ಕಾರಣಕ್ಕಾಗಿ ಇಬ್ಬರ ಮಧ್ಯೆ ಏನೋ ನಡೆದಿದ್ಯಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದಾರೆ. ಆದರೆ, ಈ ಕಾರಿನ ಹಿಂದೆ ಬೇರೆಯದ್ದೇ ಕಥೆ ಇದೆ ಎನ್ನುವುದು ಚಿತ್ರತಂಡದ ಮಾತು. ನಟಿಗೆ ಕೇವಲ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದಕ್ಕಾಗಿ ಮಾತ್ರ ಈ ಕಾರು ಬಳಕೆ ಆಗುತ್ತಿದೆಯಂತೆ.

  • ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್..!‌

    ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್..!‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k