Tag: ಗಿನ್ನೆಸ್ ದಾಖಲೆ

  • 3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    ಚಂಡೀಗಢ: 12 ವರ್ಷದ ಪೋರ ಹರಿಯಾಣದಲ್ಲಿ ಮೂರು ಆ್ಯಪ್‍ಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾನೆ.

    ಝಜ್ಜರ್‌ನ ಜವಾಹರ್ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್ ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕೆಯ ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ 

    ಕಾರ್ತಿಕೇಯ ಈ ಕುರಿತು ಮಾತನಾಡಿದ್ದು, ನನ್ನ ತಂದೆ ಅಜಿತ್ ಸಿಂಗ್ ಅವರು ರೈತರಾಗಿದ್ದರು. ಕೋವಿಡ್ ಸಮಯದಲ್ಲಿ ಆನ್‍ಲೈನ್ ತರಗತಿಗಳಿಗೆ ಸುಮಾರು 10,000 ರೂ. ವೆಚ್ಚದ ಮೊಬೈಲ್ ಫೋನ್ ಖರೀದಿಸಿ ಮಹನಿಗೆ ಕೊಟ್ಟಿದ್ದರು. ಆದರೆ ಫೋನ್‍ನಲ್ಲಿ ಕೆಲವು ಕೋಡಿಂಗ್ ಸಮಸ್ಯೆ ಇತ್ತು. ಈ ಹಿನ್ನೆಲೆ ಯೂ ಟ್ಯೂಬ್ ನೋಡಿ ನಾನು ಫೋನ್ ಸಮಸ್ಯೆಯನ್ನು ನಿಭಾಯಿಸಿದ್ದಾನೆ ಎಂದು ತಿಳಿಸಿದ್ದಾನೆ.

    ಈ ಹಿನ್ನೆಲೆ ನಾನು ನನ್ನ ಅಧ್ಯಯನವನ್ನು ಮುಂದುವರಿಸಿದೆ. ನಿರತರ ಅಧ್ಯಯನದಿಂದ ನಾನು ಮೂರು ಅಪ್ಲಿಕೇಶನ್‍ಗಳನ್ನು ಸಿದ್ಧಪಡಿಸಿದ್ದೇನೆ. ಮೊದಲ ಅಪ್ಲಿಕೇಶನ್ ಲುಸೆಂಟ್ ಜಿ.ಕೆ ಎಂಬ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದೆ. ಎರಡನೇ ಅಪ್ಲಿಕೇಶನ್ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್ ಆಗಿದ್ದು, ಅದು ಕೋಡಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿಸುತ್ತದೆ. ಮೂರನೇ ಅಪ್ಲಿಕೇಶನ್ ಡಿಜಿಟಲ್ ಶಿಕ್ಷಣ ಕುರಿತು ಇದೆ ಎಂದು ವಿವರಿಸಿದ್ದಾನೆ. ಇದನ್ನೂ ಓದಿ:  ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ 

    ಈ ಅಪ್ಲಿಕೇಶನ್‍ಗಳು 45,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಿದ್ದರಿಂದ ನನಗೆ ಪ್ರೇರಣೆ ಸಿಕ್ಕಿದೆ. ನಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಗಿನ್ನೆಸ್ ದಾಖಲೆ ಬರೆದ ನಾಯಿ

    ನ್ಯೂಯಾರ್ಕ್: ಸಾಮಾನ್ಯವಾಗಿ ನಾಯಿಗಳು ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ. ಆದರೆ ಅಮೇರಿಕಾದ ಸೌತ್ ಕೆರೊಲಿನಾದ ನಾಯಿಯೊಂದು ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಇನ್ನೂ ಜೀವಂತವಾಗಿದ್ದು, ಗಿನ್ನೆಸ್ ದಾಖಲೆ ಬರೆದಿದೆ.

     

    View this post on Instagram

     

    A post shared by Pebbles (@pebbles_since_2000)

    ಈ ಕುರಿತು ಶ್ವಾನದ ಮಾಲೀಕರು ನಾಯಿಯ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಾರ್ಚ್ 28, 2000 ರಂದು ಜನಿಸಿದ ಪೂಚ್ ಎಂಬ ಹೆಸರಿನ ನಾಯಿಯ ವಯಸ್ಸು 22 ವರ್ಷ. ಈ ಮುದ್ದಾದ ಟೋಬಿಕೀತ್ ಎಂಬ ಜಾತಿಯ ನಾಯಿಯು ಹಗಲಿನಲ್ಲಿ ಮಲಗಲು ಇಷ್ಟಪಡುತ್ತದೆ ಹಾಗೂ ರಾತ್ರಿಯಿಡೀ ಎಚ್ಚರವಾಗಿರುತ್ತದೆ ಎಂದು ಅದರ ಮಾಲೀಕ ಜೂಲಿ ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

     

    View this post on Instagram

     

    A post shared by Pebbles (@pebbles_since_2000)

    ಪೂಚ್ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಮ್ಮೊಂದಿಗಿದ್ದು, ಅವಳು ಯಾವಾಗಲೂ ನಮ್ಮ ಕುಟುಂಬದ ದಾರಿದೀಪವಾಗಿದ್ದಾಳೆ. ನಮ್ಮ ಜೀವನದಲ್ಲಿಯೇ ನಾವು ಅವಳನ್ನು ಮರೆಯೊದಕ್ಕೆ ಸಾಧ್ಯವಿಲ್ಲ ಎಂದು ಫೋಟೋಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಅಮೇರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಮನುಷ್ಯನ ಜೀವನದ 15 ವರ್ಷ ನಾಯಿ ಜೀವನದ 1 ವರ್ಷಕ್ಕೆ ಸಮನಾಗಿರುತ್ತದೆ. ನಾಯಿಗೆ ಎರಡು ವರ್ಷವು ಮನುಷ್ಯನಿಗೆ ಸುಮಾರು ಒಂಬತ್ತು ವರ್ಷಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.

     

  • ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಮ್ಯಾಡ್ರಿಡ್: ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.

    112 ವರ್ಷ 211 ದಿನ ವಯಸ್ಸಾಗಿರುವ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು. ಆದರೆ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ.  ಇದನ್ನೂ ಓದಿ: ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ

    Spain Old man

    ಇದೀಗ ಅವರನ್ನು ಅತೀ ಹೆಚ್ಚು ವರ್ಷ ಬದುಕಿರುವ ವ್ಯಕ್ತಿ ಎಂದು ಹೇಳಲಾಗಿದೆ. ಇವರಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ ಮಗ ಬಾಲ್ಯದಲ್ಲಿಯೇ ತೀರಿಕೊಂಡರು. ಸದ್ಯ ಸ್ಯಾಟರ್ನಿನೋ ಅವರು ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ವಾಸವಾಗಿದ್ದು, ಇವರಿಗೆ 14 ಜನ ಮೊಮ್ಮಕ್ಕಳು ಮತ್ತು 22 ಜನ ಮರಿ ಮೊಮ್ಮಕ್ಕಳಿದ್ದಾರೆ.

    ತಮ್ಮ ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಕೇಳಿದಾಗ ಅವರು, 112 ವರ್ಷ ಅವರು ನೆಮ್ಮದಿಯಿಂದ ಜೀವನ ನಡೆಸಿದ್ದು, ಯಾರನ್ನು ನೋಯಿಸಬೇಡಿ ಮತ್ತು ನೆಮ್ಮದಿಯಿಂದ ಜೀವನ ನಡೆಸಿ ಎಂದಿದ್ದಾರೆ. 4.92 ಅಡಿ ಎತ್ತರವಿರುವ ಸ್ಯಾಟರ್ನಿನೋ, 1936ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ನಾನು ಕಡಿಮೆ ಎತ್ತರ ಇದ್ದರಿಂದ ಯುದ್ಧದಲ್ಲಿ ಹೋರಾಡುವುದು ತಪ್ಪಿತು ಎಂದಿದ್ದಾರೆ. ಶೂ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ತಮ್ಮ ಪತ್ನಿ ಆಂಟೋನಿನಾ ಬ್ಯಾರಿಯೊ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:  ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

    112 ವರ್ಷ ವಯಸ್ಸಿನ ಸ್ಯಾಟರ್ನಿನೊ ಒಬ್ಬ ಫುಟ್ಬಾಲ್ ಅಭಿಮಾನಿಯಾಗಿದ್ದು, ಫುಟ್ಬಾಲ್ ಆಟವನ್ನು ಹಲವು ವರ್ಷಗಳಿಂದ ಆಡಿದ್ದಾರೆ ಮತ್ತು ಸ್ಥಳೀಯ ತಂಡವಾದ ಪ್ಯುಂಟೆ ಕ್ಯಾಸ್ಟ್ರೋ ಸಹ ಸ್ಥಾಪಿಸಿದ್ದಾರೆ.

  • ಲೇಹ್‍ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ

    ಲೇಹ್‍ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ

    ಲಡಾಕ್: ಭಾರತೀಯ ಸೇನಾ ಅಧಿಕಾರಿಯೊಬ್ಬರು 34 ಗಂಟೆ 54 ನಿಮಿಷಗಳಲ್ಲಿ ಲೇಹ್‍ನಿಂದ ಮನಾಲಿವರೆಗೆ 472 ಕಿ.ಮೀ ದೂರ ಸೈಕಲ್ ಸವಾರಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. ಇದನ್ನೂ ಓದಿ:  ವಾಕ್ ಸ್ವಾತಂತ್ರ್ಯವಿದೆ ಎಂದು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡ್ತಾರೆ: ಹಾಲಪ್ಪ ಆಚಾರ್

    ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್‍ ಅವರು ಶನಿವಾರ ಬೆಳಗ್ಗೆ 5 ಗಂಟೆಗೆ ಲಡಾಖ್‍ನ ಲೇಹ್‍ನಿಂದ ಸೈಕ್ಲಿಂಗ್ ಆರಂಭಿಸಿದ ಅವರು ಸೆಪ್ಟೆಂಬರ್ 26ರಂದು ಮಧ್ಯಾಹ್ನ ಮನಾಲಿಯನ್ನು ತಲುಪಿದ್ದಾರೆ. ಇದನ್ನೂ ಓದಿ:  ನಾನು 35 ಮಾಕ್ಸ್ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ 

    ಭಾರತೀಯ ಸೇನೆಯು ನಾರ್ಥರ್ನ್ ಕಮಾಂಡ್‍ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಧಿಕಾರಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಯಶಸ್ವಿಯಾಗಿ ಲೇಹ್‍ನಿಂದ ಮನಾಲಿಯವರೆಗೂ 472 ಕಿ.ಮೀ ಫಾಸ್ಟೆಸ್ಟ್‌ ಸೋಲೊ ಸೈಕ್ಲಿಂಗ್‌ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ಕುರಿತಂತೆ ಶ್ರೀಪಾದ ಅವರು, ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು 34 ಗಂಟೆ 54 ನಿಮಿಷದಲ್ಲಿ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.

  • ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    – ಐದು ದಿನದ ಕಂದಮ್ಮನಿಂದ ಶತಾಯುಷಿ ಶ್ರೀಗಳವರೆಗೆ..!
    – ಬೆಂಗಳೂರಲ್ಲೂ ಕೆಲಸ ಮಾಡಿದ್ದರು ಡಾ.ಮೊಹಮ್ಮದ್ ರೇಲಾ

    – ಪವಿತ್ರ ಕಡ್ತಲ

    ಬೆಂಗಳೂರು: ಲಿವರ್ (ಯಕೃತ್) ಕಸಿ ಶಸ್ತ್ರಚಿಕಿತ್ಸೆಯಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಚೆನ್ನೈನ ಖ್ಯಾತ ಅರಿವಳಿಕೆ ತಜ್ಞ ಎಲ್.ಎನ್.ಕುಮಾರ್ ಅವರು ಸಿದ್ದಗಂಗಾ ಶ್ರೀಗಳಿಗೆ ಆಪರೇಷನ್ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳನ್ನು ಇಂದು ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಲಾಗಿದೆ.

    ಚೆನ್ನೈನಲ್ಲಿ ಶ್ರೀಗಳಿಗೆ ರೇಲಾ ಇನ್ಸ್ ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯ ಡಾ.ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರಾಗಿದ್ದಾರೆ. ಅವರು 5 ದಿನದ ಹಸುಗೂಸಿಗೂ ಲಿವರ್ ಕಸಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.

    ಡಾ.ಮೊಹಮ್ಮದ್ ರೇಲಾ ಭಾರತ ದೇಶ ಮಾತ್ರವಲ್ಲದೇ ಜಗತ್ತಿನ ಬೆಸ್ಟ್ ಡಾಕ್ಟರ್ ಅನ್ನಿಸಿಕೊಂಡವರು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಯಕೃತಿನ ಕಸಿಯನ್ನು ಮಾಡಿದ್ದಾರೆ. ಅವರೇ ಶತಾಯುಷಿಗಳಾದ ಸಿದ್ದಗಂಗಾ ಶ್ರೀಗಳಿಗೆ ಇಂದು ಚಿಕಿತ್ಸೆ ನೀಡಲಿದ್ದಾರೆ ಎನ್ನುವುದೂ ವಿಶೇಷ.

    ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ವಿಲಾಸ್ ರಾವ್ ದೇಶ್ ಮುಖ್, ತಮಿಳುನಾಡು ಸಿಎಂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ಪತಿ ನಟರಾಜ್ ಅವರಿಗೂ ಮಹಮ್ಮದ್ ರೇಲಾ ಅವರೇ ಚಿಕಿತ್ಸೆ ನೀಡಿದ್ದರು.

    5 ದಿನದ ಹಸುಗೂಸು ಈಗ 21 ವರ್ಷದ ಯುವತಿ!:
    ಹುಟ್ಟಿದ ಐದು ದಿನಕ್ಕೇ ಲಿವರ್ ಕಸಿ ಮಾಡಿಸಿಕೊಂಡಿದ್ದ ಆ ಮುದ್ದು ಪೋರಿ ಬೇವನ್ ಈಗ 21 ವರ್ಷ ಯುವತಿ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬೇವಾನ್ ಮತ್ತು ಡಾ.ಮೊಹಮ್ಮದ್ ರೇಲಾ ಅವರು ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ಭೇಟಿಯಾಗಿದ್ದರು. “ಅಂದು 20 ವರ್ಷ ಹಿಂದೆ ಆಪರೇಷನ್ ಮಾಡಿದಾಗ ನನ್ನಲ್ಲಿ ಗಿನ್ನೆಸ್ ದಾಖಲೆ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಅದಾಗಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಆ ದಂಪತಿಯ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕು ಅಂತ ಲಿವರ್ ಕಸಿಮಾಡಿದೆವು. ಆದರೆ ಅದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುತ್ತದೆ ಎಂದು ಆಮೇಲೆ ಗೊತ್ತಾಯಿತು” ಎಂದು ಡಾ.ರೇಲಾ ಅವರು ಬೇವಾನ್‍ಳನ್ನು ನೋಡುತ್ತಾ ಹೇಳಿದ್ದರು.

    ಇದೇ ವೇಳೆ ಮಾತನಾಡಿದ್ದ ಬೇವಾನ್, ಮೊಹಮ್ಮದ್ ಡಾಕ್ಟರ್ ಇಲ್ಲದಿದ್ದರೆ ನಾನು ಇಂದು ಇರುತ್ತಿರಲಿಲ್ಲ ಎಂದು ಹೇಳಿ ಭಾವುಕರಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದರು.

    ಡಾ.ಮೊಹಮ್ಮದ್ ರೇಲಾ ಯಾರು?:
    ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರು. ಸುಮಾರು 30 ವರ್ಷದಿಂದ ಲಿವರ್ ಕಸಿ ಮಾಡುತ್ತಿದ್ದಾರೆ. 2009ರಲ್ಲಿ ಗ್ಲೋಬಲ್ ಗ್ಲೆನ್ ಈಗಲ್ಸ್ ಹೆಲ್ತ್ ಸಿಟಿಯಲ್ಲಿ ಲಿವರ್ ಕಾಯಿಲೆ ಮತ್ತು ಕಸಿ ಕೇಂದ್ರವನ್ನು ಆರಂಭಿಸಿದರು. ಜೊತೆಗೆ ಲಂಡನ್ ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್‍ನ ಲಿವರ್ ಕಸಿ ಸರ್ಜರಿ ವಿಭಾಗದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ಲೋಬಲ್ ಗ್ಲೆನ್ ಈಗಲ್ ಸಂಸ್ಥೆಯನ್ನು ಬಿಟ್ಟು ಹೊರಬಂದ ಡಾ.ಮೊಹಮ್ಮದ್ ರೇಲಾ ಅವರು ಡಾ. ರೇಲಾ ಇನ್ಸ್ ಟಿಟ್ಯೂಟ್ & ಮೆಡಿಕಲ್ ಸೆಂಟರ್ ಆರಂಭಿಸಿದರು. ಇದುವರೆಗೆ ಡಾ.ರೇಲಾ ಸುಮಾರು 4,000ಕ್ಕೂ ಹೆಚ್ಚು ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲೂ ಕಾರ್ಯ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv