Tag: ಗಿನ್ನಿಸ್ ವಿಶ್ವ ದಾಖಲೆ

  • ತಂದೆಯ ದಾಖಲೆ ಹಿಂದಿಕ್ಕಲು ಮಗಳು ಸಿದ್ಧ

    ತಂದೆಯ ದಾಖಲೆ ಹಿಂದಿಕ್ಕಲು ಮಗಳು ಸಿದ್ಧ

    ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಮಾಡೆಲ್ ಬೆನ್ನಿ ಹಾರ್ಲೆಮ್ ತಮ್ಮ ವಿಶಿಷ್ಟ ಕೂದಲಿನ ಮೂಲಕ 2017ರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರ ಕೂದಲು ವಿಶ್ವದ ಅತಿ ಎತ್ತರದ ಮತ್ತು ದಪ್ಪದ ಕೂದಲಾಗಿವೆ.

    ಬೆನ್ನಿ ಅವರ ದಾಖಲೆಯನ್ನು ಈವರೆಗೂ ಯಾರೂ ಹಿಂದಿಕ್ಕಿಲ್ಲ. ಆದರೆ ತಂದೆಯ ದಾಖಲೆಯನ್ನು ಹಿಂದಿಕ್ಕಲು ಬೆನ್ನಿ ಮಗಳು ಜಾಕ್ಸೆನ್ ಹಾರ್ಲೆಮ್ ಮುಂದಾಗಿದ್ದಾರೆ.

    ಹೌದು. ತಂದೆ-ಮಗಳು ಫೋಟೋಶೂಟ್‍ಗಳಲ್ಲಿ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಬೆನ್ನಿ ತಮ್ಮ ಕೂದಲದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಇದರಿಂದಾಗಿ ಅವರ ಕೂದಲುಗಳು ಯಾವಾಗಲೂ ಆಕರ್ಷಕವಾಗಿ ಕಾಣುತ್ತವೆ. ಬೆನ್ನಿ ಹಾಗೂ ಜಾಕ್ಸೆನ್ ಕೂದಲಿಗೆ ಯಾವುದೇ ರೀತಿಯ ರಾಸಾಯನಿಕ, ಸಾಂಪು ಬಳಸದೆ ನೈಸರ್ಗಿಕ ಗಿಡಮೂಲಿಕೆ ಬಳಿಸುತ್ತಾರೆ.

    ಕ್ಯಾಲಿಫೋರ್ನಿಯಾದ ಬೆನ್ನಿ ಹಾರ್ಲೆಮ್ ಅವರನ್ನು ವಿಶ್ವದ ಅತ್ಯಂತ ಯಶಸ್ವಿ ಬಲಿಷ್ಟ ಕೂದಲು ಹೊಂದಿರುವ ವ್ಯಕ್ತಿಯಾಗಿದ್ದಾರೆ. 2016ರಲ್ಲಿ ಬೆನ್ನಿ ಅವರು ಭಾರೀ ಗಾತ್ರದ ಕೂದಲಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಅವರು ಮೊದಲು ಬೆಳಕಿಗೆ ಬಂಸಿದ್ದರು. ಆ ಬಳಿಕ ಅಂದ್ರೆ 2017ರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದರು.

    ಕೂದಲ ರಕ್ಷಣೆಗಾಗಿ ನಾವು ಮನೆಯಲ್ಲಿ ನೈಸರ್ಗಿಕ ಶಾಂಪೂ ತಯಾರಿಸುತ್ತೇವೆ. ಜೊತೆಗೆ ಪೋಷಕಾಂಶ ನೀಡುವ ಆಹಾರವನ್ನು ತಯಾರಿಸುತ್ತೇವೆ. ಮನೆಯಲ್ಲೇ ಶಾಂಪೂ ತಯಾರಿಸುವುದನ್ನು ಕಲಿಯಬೇಕು ಎಂದು ಮಾಡೆಲ್ ಬೆನ್ನಿ ಹಾರ್ಲೆಮ್ ಹೇಳುತ್ತಾರೆ.

  • ಒಂದು ಗಂಟೆಯಲ್ಲಿ 1,200 ಬಸ್ಕಿ ಹೊಡೆದು ಗಿನ್ನಿಸ್ ದಾಖಲೆ ಬರೆದ ಬಾಲಕ

    ಒಂದು ಗಂಟೆಯಲ್ಲಿ 1,200 ಬಸ್ಕಿ ಹೊಡೆದು ಗಿನ್ನಿಸ್ ದಾಖಲೆ ಬರೆದ ಬಾಲಕ

    ಹೈದರಾಬಾದ್: ಐದು ವರ್ಷದ ಬಾಲಕನೊಬ್ಬ ಸತತ 1200 ಬಸ್ಕಿ ಹೊಡೆದು ವಿಶ್ವ ದಾಖಲೆ ಬರೆದಿದ್ದಾನೆ.

    ಹೈದರಾಬಾದ್‍ನ ಅಶ್ಮಾನ್ ತನೇಜಾ ಗಿನ್ನಿಸ್ ವಿಶ್ವ ದಾಖಲೆಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅಮೆರಿಕದಲ್ಲಿ ನಡೆದ ವಲ್ರ್ಡ್ ಓಪನ್ ಟೇಕ್ವಾಂಡೋದಲ್ಲಿ ಅಶ್ಮಾನ್ ಭಾಗವಹಿಸಿ ಬೆಳ್ಳಿ ಪದಕ ಗೆದಿದ್ದಾರೆ. ಇದೇ ವೇಳೆ ಅಶ್ಮಾನ್ ಒಂದು ಗಂಟೆಯಲ್ಲಿ ನಿರಂತರವಾಗಿ 1,200 ಬಸ್ಕಿ ಹೊಡೆದ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಬಾಲಕ ಈ ದಾಖಲೆ ಗಿನ್ನಿಸ್ ವಿಶ್ವ ದಾಖಲೆಗಳ ಪುಟ ಸೇರಿದೆ.

    ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಲು ಬಾಲಕ ಅಶ್ಮಾನ್‍ನಿಗೆ ಆತನ ಅಕ್ಕ ಸ್ಫೂರ್ತಿ ಆಗಿದ್ದಾಳೆ. ಟೇಕ್ವಾಂಡೋ ಆಟಗಾರನಾದ ಅಶ್ಮಾನ್ ಸಹೋದರಿ ಎರಡು ವಿಶ್ವ ದಾಖಲೆಗಳನ್ನು ಬರೆದಿದ್ದಳು. ಇದರಿಂದ ಸ್ಫೂರ್ತಿ ಪಡೆದ ಅಶ್ಮಾನ್ ತಾನೂ ಏನನ್ನಾದರೂ ಸಾಧಿಸಬೇಕು ಎಂಬ ನಿರ್ಧರಿಸಿದ್ದ. ಅದರಂತೆ ಒಂದು ಗಂಟೆಯಲ್ಲಿ 1,200 ಬಸ್ಕಿ ಹೊಡೆದು ಗಿನ್ನಿಸ್ ವಿಶ್ವ ದಾಖಲೆಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.