Tag: ಗಿನ್ನಿಸ್ ವರ್ಲ್ಡ್ ರೆಕಾರ್ಡ್

  • 28 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಬೆಳಗಿದ ರಾಮಜನ್ಮಭೂಮಿ- 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದ ದೀಪೋತ್ಸವ

    28 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಬೆಳಗಿದ ರಾಮಜನ್ಮಭೂಮಿ- 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದ ದೀಪೋತ್ಸವ

    – ಸರಯು ಘಾಟ್‌ನಲ್ಲಿ 1,100 ಜನರಿಂದ ಆರತಿ

    ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರ ಇಂದು ಸುಮಾರು 28 ಲಕ್ಷಕ್ಕೂ ಹೆಚ್ಚಿನ ದೀಪಗಳಿಂದ ಬೆಳಗಿದೆ. ಆರತಿಯ ಸಮಯದಲ್ಲಿ 1,100 ಕ್ಕೂ ಹೆಚ್ಚು ಜನರು ಸರಯು ಘಾಟ್‌ನಲ್ಲಿ ಒಟ್ಟಾಗಿ ಆರತಿಯನ್ನು ಮಾಡುವ ಮೂಲಕ ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ದಾಖಲೆಯನ್ನು ಬರೆದಿದ್ದು, ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.

    ಅಯೋಧ್ಯೆಯ ರಾಮಮಂದಿರದ ಪ್ರಾಣಪ್ರತಿಷ್ಠೆಯ ನಂತರ ಇದು ಮೊದಲ ದೀಪೋತ್ಸವವಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮಲಲ್ಲಾನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ದೇವಾಲಯವನ್ನು ಸಾವಿರಾರು ದೀಪಗಳಿಂದ ಬೆಳಗಿಸುವ ಮೂಲಕ ಈ ವರ್ಷದ ದೀಪಾವಳಿಯು ಐತಿಹಾಸಿಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – A8 ಆರೋಪಿ ರವಿಶಂಕರ್ ಬಿಡುಗಡೆ

    ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದ ದೀಪೋತ್ಸವ:
    ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತಂಡವು ದೀಪೋತ್ಸವದ ಮೇಲ್ವಿಚಾರಣೆಯನ್ನು ನಡೆಸಿದ್ದು, ಇದೀಗ ಎರಡು ದಾಖಲೆಗಳನ್ನು ಅಯೋಧ್ಯೆ ದೀಪಾವಳಿ ಬರೆದಿದೆ. 1,100 ಜನರ ಸರಯು ಆರತಿ ಮತ್ತು 28 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ಇದು ರಾಮಮಂದಿರ ನಿರ್ಮಾಣದ ನಂತರದ ಮೊದಲ ದೀಪೋತ್ಸವವಾಗಿದೆ. ಮಂಗಳವಾರ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಲಹೆಗಾರ ನಿಶ್ಚಲ್ ಬರೋಟ್ ನೇತೃತ್ವದ 30 ಸದಸ್ಯರ ತಂಡವು ಡ್ರೋನ್‌ಗಳನ್ನು ಬಳಸಿಕೊಂಡು ಸರಯುವಿನ 55 ಘಾಟ್‌ಗಳಲ್ಲಿ ದಿಯಾಗಳನ್ನು ಎಣಿಸಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ: ಹೆಚ್.ಕೆ ಪಾಟೀಲ್
    ರಾಮಾಯಣದ ಘಟನೆಗಳನ್ನು ಚಿತ್ರಿಸುವ ಲೇಸರ್ ಮತ್ತು ಡ್ರೋನ್ ಪ್ರದರ್ಶನ ಕೂಡ ನಡೆಯಿತು. ಈ ಆಚರಣೆಯು ಆರು ದೇಶಗಳನ್ನು ಪ್ರತಿನಿಧಿಸುವ ಮ್ಯಾನ್ಮಾರ್, ನೇಪಾಳ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾವನ್ನು ಪ್ರತಿನಿಧಿಸುವ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಹಾಗೆಯೇ ಉತ್ತರಾಖಂಡದ ರಾಮ್ ಲೀಲಾ ಪ್ರಸ್ತುತಿ ಕೂಡ ನಡೆಯಿತು. ಇದನ್ನೂ ಓದಿ: ಬ್ರಿಟನ್‌ ಕಿಂಗ್ ಚಾರ್ಲ್ಸ್ ದಂಪತಿಯಿಂದ ಬೆಂಗಳೂರಿಗೆ 4 ದಿನದ ರಹಸ್ಯ ಭೇಟಿ – ಇಂದು ವಾಪಸ್

    ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸರಿಸುಮಾರು 10,000 ಭದ್ರತಾ ಸಿಬ್ಬಂದಿಯನ್ನು ನಗರದಾದ್ಯಂತ ನಿಯೋಜಿಸಲಾಗಿದೆ. ವಿಶೇಷ ವ್ಯವಸ್ಥೆಯಲ್ಲಿ 80,000 ದಿಯಾಗಳನ್ನು ಸ್ವಸ್ತಿಕದ ಆಕಾರದಲ್ಲಿ ಘಾಟ್ ನಂ. 10, ಮಂಗಳಕರ ಸಂಕೇತ ಮತ್ತು ಈವೆಂಟ್‌ನ ಕೇಂದ್ರ ಆಕರ್ಷಣೆ.

    ಭದ್ರತಾ ಕ್ರಮಗಳಲ್ಲಿ ರಾಮ್ ಕಿ ಪೈಡಿಗೆ ಹೋಗುವ 17 ಮಾರ್ಗಗಳನ್ನು ಮುಚ್ಚಲಾಗಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ. ರಾಮಾಯಣದ ರೋಮಾಂಚಕ ಟ್ಯಾಬ್ಲೋ ಹೊಂದಿರುವ ಮೆರವಣಿಗೆಯು ದೇವಾಲಯದ ಪಟ್ಟಣದ ಮೂಲಕ ಸಾಗಿತು. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಪಾತ್ರಧಾರಿ ಕಲಾವಿದರು ಕುಳಿತಿದ್ದ ರಥವನ್ನು ಯೋಗಿ ಆದಿತ್ಯನಾಥ್ ಅವರು ಆರತಿ ಬೆಳಗುವುದರೊಂದಿಗೆ ಬರಮಾಡಿಕೊಂಡರು. ಇದನ್ನೂ ಓದಿ: ವಯಸ್ಸಿನ ಅಂತರವಿಲ್ಲದೇ ಆಚರಿಸುವ ಹಬ್ಬ ದೀಪಾವಳಿ!

    ರಾಮಾಯಣದಲ್ಲಿ ಉಲ್ಲೇಖಿಸಲಾದ ಪೌರಾಣಿಕ ಪುಷ್ಪಕ ವಿಮಾನಕ್ಕೆ ನಮನ ಸಲ್ಲಿಸಲು ಪಾತ್ರಗಳನ್ನು ಮೊದಲು ಹೆಲಿಕಾಪ್ಟರ್‌ನಲ್ಲಿ ಅಯೋಧ್ಯೆಗೆ ಕರೆತರಲಾಯಿತು. ಪ್ರವಾಸೋದ್ಯಮ ಇಲಾಖೆಯ ಸ್ತಬ್ಧಚಿತ್ರವು ತುಳಸಿದಾಸರ ರಾಮಚರಿತಮಾನಸದಿಂದ ತೆಗೆದ ಬಾಲ್‌ಕಾಂಡ್, ಅಯೋಧ್ಯಾಕಾಂಡ್, ಅರಣ್ಯಕಾಂಡ್, ಕಿಷ್ಕಿಂಧಾ ಕಾಂಡ್, ಸುಂದರ್ ಕಾಂಡ್, ಲಂಕಾಕಾಂಡ್ ಮತ್ತು ಉತ್ತರ ಕಾಂಡದ ದೃಶ್ಯಗಳನ್ನು ಚಿತ್ರಿಸಿದೆ. ಇದನ್ನೂ ಓದಿ: ಭಾರತ-ಚೀನಾ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣ – ದೀಪಾವಳಿಯಂದು ಉಭಯ ದೇಶಗಳ ಸೈನಿಕರಿಂದ ಸಿಹಿ ವಿನಿಮಯ

    ರಾಮನ ಜೀವನದ ಪ್ರಮುಖ ಘಟನೆಗಳನ್ನು ವಿವರಿಸಿದ ವಿಶೇಷ ಪ್ರದರ್ಶನಗಳು, ಅವನ ಶಿಕ್ಷಣ, ಸೀತೆಯೊಂದಿಗಿನ ವಿವಾಹ, 14 ವರ್ಷಗಳ ವನವಾಸ, ಭಾರತ್ ಮಿಲಾಪ್, ಶಬರಿಯ ಭಕ್ತಿ, ಹನುಮಂತನ ಲಂಕಾ ಪ್ರಯಾಣ, ರಾವಣನ ಸೋಲು ಮತ್ತು ಅಯೋಧ್ಯೆಗೆ ಮತ್ತೆ ಅವನ ಆಗಮನ ಕುರಿತ ಮೆರವಣಿಗೆಯು ಎಲ್ಲರ ಕಣ್ಮನ ಸೆಳೆಯಿತು. ಇದನ್ನೂ ಓದಿ: ವಿಜಯಪುರ ವಕ್ಫ್ ವಿವಾದ – ರೈತರ ಹೋರಾಟಕ್ಕೆ ಜಯ, ನೋಟಿಸ್ ಹಿಂಪಡೆದ ಜಿಲ್ಲಾಡಳಿತ

  • ಕೈಯಿಂದಲೇ ವೇಗವಾಗಿ ಓಡುವ ಅಥ್ಲೀಟ್‌ನಿಂದ ಮತ್ತೆರಡು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌

    ಕೈಯಿಂದಲೇ ವೇಗವಾಗಿ ಓಡುವ ಅಥ್ಲೀಟ್‌ನಿಂದ ಮತ್ತೆರಡು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌

    ಕೈಯಿಂದಲೇ ವೇಗವಾಗಿ ಓಡುವ ಅಥ್ಲೀಟ್‌ ಜಿಯಾನ್‌ ಕ್ಲಾರ್ಕ್‌ (Zion Clark) ಈಗ ಮತ್ತೆ ಎರಡು ಗಿನ್ನಿಸ್‌ ದಾಖಲೆಗಳನ್ನು ಬರೆದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಿಯಾನ್‌ ಕ್ಲಾರ್ಕ್‌ ಸಾಧನೆಯ ವೀಡಿಯೋವನ್ನು ಪೋಸ್ಟ್ ಮಾಡಿದೆ.

    ಕೌಡಲ್ ರಿಗ್ರೆಸಿವ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಕಾಲುಗಳಿಲ್ಲದೆ, ಕೈಗಳ ಮೇಲೆಯೇ ಅವಲಂಬಿತವಾಗಿರುವ ಅಥ್ಲೀಟ್ ಜಿಯಾನ್ ಕ್ಲಾರ್ಕ್ ಈಗ ಇನ್ನೆರಡು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆದಿದ್ದಾರೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ

    ಈಚೆಗೆ ಲಾಸ್ ಏಂಜಲೀಸ್‌ನ ಜಿಮ್‌ನಲ್ಲಿ ಮೂರು ನಿಮಿಷಗಳಲ್ಲಿ ಕೈಗಳಿಂದ ಅತಿ ಹೆಚ್ಚು ಬಾಕ್ಸ್ ಜಂಪ್ ಮತ್ತು ಡೈಮಂಡ್ ಪುಷ್-ಅಪ್‌ ಮಾಡಿ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಅವರು ಕೇವಲ 4.78 ಸೆಕೆಂಡುಗಳಲ್ಲಿ ತಮ್ಮ ಕೈಗಳ ಮೂಲಕ 20 ಮೀಟರ್‌ಗಳನ್ನು ಓಡಿದ್ದರು. ಆ ಮೂಲಕ ಎರಡು ಕೈಗಳಲ್ಲಿ ಓಡುವ ವಿಶ್ವದ ಅತ್ಯಂತ ವೇಗದ ವ್ಯಕ್ತಿ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

    ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ (Guinness World Record) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಿಯಾನ್‌ ಕ್ಲಾರ್ಕ್‌ ಸಾಧನೆಯ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಎರಡು ಹೊಸ ದಾಖಲೆಗಳು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

    ಮೊದಲ ದಾಖಲೆಯಲ್ಲಿ, ಕ್ಲಾರ್ಕ್ ಸಲೀಸಾಗಿ ನೆಲದಿಂದ ಕನಿಷ್ಠ 24 ಇಂಚು ಎತ್ತರವಿರುವ ಪೆಟ್ಟಿಗೆಯ ಮೇಲೆ ಹಾರಿದ್ದಾರೆ. ತಮ್ಮದೇ ಸಾಧನೆಯನ್ನು ಮೆಟ್ಟಿ ನಿಂತ ಅವರು ಮತ್ತೊಮ್ಮೆ 33 ಇಂಚು ಜಿಗಿದು ಹೊಸ ದಾಖಲೆ ಬರೆದರು.

    ಅಲ್ಲದೇ ಮತ್ತೊಂದೆಡೆ ಕಡಿಮೆ ನಿಮಿಷದಲ್ಲಿ ಡೈಮಂಡ್‌ ಪುಷ್‌-ಅಪ್‌ ಮಾಡಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅಥ್ಲೀಟ್ ಕ್ಲಾರ್ಕ್‌ ಮೂರು ನಿಮಿಷಗಳಲ್ಲಿ 248 ಡೈಮಂಡ್ ಪುಷ್-ಅಪ್‌ಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಅಧಿಕೃತ ಘೋಷಣೆ

    ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಅಧಿಕೃತ ಘೋಷಣೆ

    ನವದೆಹಲಿ: ವೀಕೆಂಡ್ ಮುಗಿದ ನಂತರ ಬರುವ ಸೋಮವಾರವನ್ನು ಯಾಕಾದರೂ ಬರುತ್ತೋ ಎಂದು ಶಪಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದೀಗ ಅಚ್ಚರಿ ಎನ್ನುವಂತೆ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ (Guinness World Record) ಸಂಸ್ಥೆಯೂ ಅಧಿಕೃತವಾಗಿ ಸೋಮವಾರವನ್ನು (Monday)  ಕೆಟ್ಟ ದಿನವೆಂದು ಘೋಷಿಸಿದೆ.

    ಬಹಳಷ್ಟು ಜನರಿಗೆ ಸೋಮವಾರವು ನೀರಸ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಟ್ವೀಟ್ ಮಾಡಿ, ವಾರದ (Week) ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ನಾವು ಸೋಮವಾರ ಅಧಿಕೃತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

    ಈ ಪೋಸ್ಟ್‌ನ್ನು 4 ಲಕ್ಷಕ್ಕೂ ಅಧಿಕ ಜನರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ಈ ಕಾರಣಕ್ಕಾಗಿಯೇ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ. ಇನ್ನೋರ್ವ ನೀವು ಸಾಕಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾನೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    Live Tv
    [brid partner=56869869 player=32851 video=960834 autoplay=true]

  • ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾದ ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ 3,182 ಪುಷ್‌-ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ತಮ್ಮ ವಿಶಿಷ್ಟ ಸಾಧನೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿ ಅಥ್ಲೀಟ್‌ ಸ್ಕಾಲಿ ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯನ್ ಜರಾಡ್ ಯಂಗ್ ಅವರು ಗಂಟೆಗೆ 3,054 ಪುಷ್‌-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದರು. ಈಗ ಸ್ಕಾಲಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಜಿಡಬ್ಲ್ಯೂಆರ್‌ ತಿಳಿಸಿದೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ

    GWR ಶುಕ್ರವಾರ ತನ್ನ ಅಧಿಕೃತ ಯೂಟ್ಯೂಬ್‌ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸ್ಕಾಲಿ ಅವರು ತಮ್ಮ ಜೀವನ ಮತ್ತು ಸಾಧನೆ ಕುರಿತು ಹೇಳಿಕೊಂಡಿದ್ದಾರೆ.

    ಸ್ಕಾಲಿ ತನ್ನ 12 ನೇ ವಯಸ್ಸಿನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗಿನಿಂದ ಸಿಆರ್‌ಪಿಎಸ್‌ (ಕಾಂಪ್ಲೆಕ್ಸ್ ರೀಜನಲ್ ಪೇಯ್ನ್‌ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ನೋವಿನಿಂದಾಗಿ ಅವರು ಆಗಾಗ್ಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು GWR ತಿಳಿಸಿದೆ.

    Live Tv

  • 9ರ ಬಾಲಕ ಯೋಗ ಟೀಚರ್, ಗಿನ್ನಿಸ್ ದಾಖಲೆ ಬರೆದ- ಈತನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ

    9ರ ಬಾಲಕ ಯೋಗ ಟೀಚರ್, ಗಿನ್ನಿಸ್ ದಾಖಲೆ ಬರೆದ- ಈತನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ

    ಗುರಿ ನಿರ್ದಿಷ್ಟವಾಗಿದ್ದರೆ ನಮ್ಮ ಸಾಧನೆಗೆ ಯಾವುದೇ ಅಡ್ಡಿ ಬಂದರು ಸಾಧಿಸುವ ಛಲ ನಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಯಾವುದೇ ವಯಸ್ಸಿನ ಮೀತಿ ಇರುವುದಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಇಲ್ಲೊಬ್ಬ ಬಾಲಕ 9ನೇ ವಯಸ್ಸಿಗೆ ಯೋಗಾ ಟೀಚರ್ ಆಗುವುದರ ಜೊತೆಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್‍ನಲ್ಲಿ ದಾಖಲೆ ಬರೆದಿದ್ದಾನೆ.

    ರೆಯಾಶ್ ಸುರಾನಿ(Reyansh Surani) 9ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಾನೆ. ರೆಯಾಶ್, ಆನಂದ ಶೇಖರ್ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾನೆ. ವಲ್ರ್ಡ್ ರೆಕಾರ್ಡ್ ವರದಿಯ ಪ್ರಕಾರ ರೆಯಾಶ್ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು. ಸದ್ಯ ಅತೀ ಕಿರಿಯ ಯೋಗ ಟೀಚರ್ ಬಗ್ಗೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಯುಟ್ಯೂಬ್‍ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು

    ವೀಡಿಯೋದಲ್ಲಿ ಏನಿದೆ?: ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಂಚಿಕೊಂಡಿರುವ ವೀಡಿಯೋದಲ್ಲಿ ಬಾಲಕ ಮೊದಲು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ನಂತರ ಯೋಗದ ಬಗೆಗೆ ಆತನಿಗಿರುವ ಆಸಕ್ತಿಯ ಬಗ್ಗೆ ಹೇಳುತ್ತಾನೆ. ಯೋಗವನ್ನು ಮಾಡುವುದನ್ನು ಎಂಜಾಯ್ ಮಾಡುತ್ತೇನೆ. ಯೋಗದಿಂದ ಇಂಟರ್‌ನೇಟ್‌ ಮತ್ತು ಏರ್​ಕೂಲರ್​ಗಳಿಲ್ಲದೆಯೂ ಬದುಕಬಹುದು ಎಂದಿದ್ದಾನೆ. ಸದ್ಯ ಈ ವೀಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಈತನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮನೆ, ಮನೆಗೆ ಉಚಿತ ಸಿಲಿಂಡರ್: ರಾಜನಾಥ್ ಸಿಂಗ್ ಆಶ್ವಾಸನೆ

  • 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    ಜೆರುಸಲೇಮ್: ಸಾಮಾನ್ಯವಾಗಿ ಸ್ಟ್ರಾಬೆರಿ ತೂಕ ಎಷ್ಟಿರುತ್ತದೆ? 10 ರಿಂದ 20 ಗ್ರಾಂ? ಇನ್ನೂ ಹೆಚ್ಚೆಂದರೆ 30 ಗ್ರಾಂ ಇರಬಹುದು. ಆದರೆ ಇಲ್ಲಿ ಒಬ್ಬ ವ್ಯಕ್ತಿ ಬರೋಬ್ಬರಿ 290 ಗ್ರಾಂನ ಸ್ಟ್ರಾಬೆರಿ ಬೆಳೆದು ದಾಖಲೆ ಬರೆದಿದ್ದಾನೆ.

    290 ಗ್ರಾಂ ತೂಕದ ದೈತ್ಯ ಸ್ಟ್ರಾಬೆರಿ ಬೆಳೆದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿರುವ ಘಟನೆ ಇಸ್ರೇಲ್ ದೇಶದ ಕಡಿಮಾ-ಜೋರಾನ್‌ನಲ್ಲಿ ನಡೆದಿದೆ. ಏರಿಯಲ್ ಚಾಹಿ ಈ ದೈತ್ಯ ಸ್ಟ್ರಾಬೆರಿ ಬೆಳೆದ ವ್ಯಕ್ತಿ.

    ಇಸ್ರೆಲ್‌ನ ವ್ಯಕ್ತಿ ಬೆಳೆದಿರುವ ಸ್ಟ್ರಾಬೆರಿ 290 ಗ್ರಾಂ ತೂಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇದನ್ನು ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂದು ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲಿ ಹಿಜಬ್‌ ಬ್ಯಾನ್‌

    ಈ ದೈತ್ಯ ಸ್ಟ್ರಾಬೆರಿಇಲಾನ್ ಪ್ರಬೇಧಕ್ಕೆ ಸೇರಿದ್ದು, ಏರಿಯಲ್‌ನ ಕುಟುಂಬದ ವ್ಯಾಪಾರ ಸಂಸ್ಥೆ ಸ್ಟ್ರಾಬೆರಿ ಇನ್ ದ ಫೀಲ್ಡ್ ಎಂಬಲ್ಲಿಂದ ಬೆಳೆಸಲಾಗಿದೆ. ಇದನ್ನೂ ಓದಿ: ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ದೈತ್ಯ ಸ್ಟ್ರಾಬೆರಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಮೊದಲಿಗೆ ಐಫೋನ್ ಎಕ್ಸ್ಆರ್‌ನ ತೂಕವನ್ನು ನೋಡಿ ಬಳಿಕ ಸ್ಟ್ರಾಬೆರಿಯ ತೂಕವನ್ನು ನೋಡಲಾಗಿದೆ. ಐಫೋನ್ ಕೇವಲ 194 ಗ್ರಾಂ ತೂಗಿದೆ. ಬಳಿಕ ಸ್ಟ್ರಾಬೆರಿಯ ಉದ್ದ, ಅಗಲ ಹಾಗೂ ಸುತ್ತಳತೆ ನೋಡಿದ್ದು ಅದು ಕ್ರಮವಾಗಿ 18 ಸೆಂ.ಮೀ, 4 ಸೆಂ.ಮೀ, ಹಾಗೂ 34 ಸೆಂ.ಮೀ ಇರುವುದನ್ನು ತೋರಿಸಲಾಗಿದೆ.

  • ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    – ಒಂದೇ ದಿನ ಎರಡು ದಾಖಲೆ

    ಉಡುಪಿ: ಈಗಾಗಲೇ ಎರಡು ವಿಶ್ವದಾಖಲೆ ಮಾಡಿರುವ 10ರ ಪೋರಿ, ಒಂದೇ ದಿನ ಮತ್ತೆರಡು ದಾಖಲೆ ಮಾಡಿದ್ದಾಳೆ. ದೇಹದೊಳಗೆ ಮೂಳೆ ಇದ್ಯೋ ಇಲ್ಲವೋ ಅಂತ ಡೌಟ್ ಬರುವಂತೆ ಉಡುಪಿಯ ತನುಶ್ರೀ ಸಾವಿರಾರು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾಳೆ.

    ಉಡುಪಿಯ ತನುಶ್ರೀ ಪಿತ್ರೋಡಿಗೆ ಈ 10 ವರ್ಷ. ಆದರೆ ಜೀವಮಾನದಲ್ಲಿ ಹೆಚ್ಚಿನವರಿಂದ ಅಸಾಧ್ಯವಾದುದನ್ನು ಬಾಲ್ಯದಲ್ಲೇ ಸಾಧಿಸಿದ್ದಾಳೆ. ಭರತನಾಟ್ಯ- ಯಕ್ಷಗಾನ ಕಲೆಯಲ್ಲಿ ಪರಿಣತಿ ಪಡೆದಿರುವ ಈಕೆ ಯೂಟ್ಯೂಬ್‍ನಲ್ಲಿ ನೋಡಿ ಯೋಗ ಕಲಿತು ವಿಶ್ವದಾಖಲೆ ಮೇಲೆ ವಿಶ್ವದಾಖಲೆ ಮಾಡಿದ್ದಾಳೆ. ತನುಶ್ರೀ ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಹಿಂದೆ ನಿರಾಲಂಭ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆ ಮಾಡಿದ್ದಳು. 1 ನಿಮಿಷದಲ್ಲಿ 42 ಬಾರಿ ಆಸನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಳು. ಇದೀಗ ಒಂದು ನಿಮಿಷದಲ್ಲಿ 60ಕ್ಕೂ ಹೆಚ್ಚು ಬಾರಿ ಧನುರಾಸನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ.

    ಸಂಸ್ಥೆಯ ಏಷ್ಯಾ ಹೆಡ್ ಮನೀಷ್ ಉಡುಪಿಗೆ ಬಂದು ಸಾಧಕಿ ತನುಶ್ರೀಗೆ ಸರ್ಟಿಫಿಕೇಟ್ ಕೊಟ್ಟು ಬೆನ್ನು ತಟ್ಟಿದ್ದಾರೆ. ಈ ಹಿಂದೆಯೂ ಬಾಲಕಿಯ ಸಾಧನೆ ನೋಡಿದ್ದೇವೆ. ಜೀವನದಲ್ಲಿ ಮತ್ತಷ್ಟು ದಾಖಲೆಗಳು ಮಾಡುವ ಮತ್ತು ಬೆಳೆದು ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣ ಇದೆ ಅಂತ ಹೇಳಿದರು.

    ಸಾಧಕಿ ತನುಶ್ರೀ ಮಾತನಾಡಿ, ಮೈದಾನದಲ್ಲಿ ನಾನು ಪ್ರ್ಯಾಕ್ಟೀಸ್ ಮಾಡಿಯೇ ಇರಲಿಲ್ಲ. ಕ್ಯಾಮೆರಾಗಳು, ಜನರು ಎಲ್ಲ ಸೇರಿದಾಗ ಬಹಳ ಮುಜುಗರ ಆಯ್ತು. ನರ್ವಸ್ ಆಗದಂತೆ ತಂದೆ ತಾಯಿ ಹುರಿದುಂಬಿಸಿದರು. ಕಾನ್ಸನ್ಟ್ರೇಶನ್ ಮಾಡಿ ಸಾಧಿಸಿಯೇ ಬಿಟ್ಟೆ ಅಂತ ಹೇಳಿದ್ದಾಳೆ.

    ಮನೆಯೊಳಗೆ ಚಾವಡಿಯಲ್ಲಿ- ಟೆರೇಸ್ ಮೇಲೆ ಅಭ್ಯಾಸ ಮಾಡುತ್ತಿದ್ದ ತನ್ನ ಶಾಲೆಯ ಮೈದಾನದಲ್ಲಿ ಪ್ರಥಮ ಪ್ರಯೋಗದಲ್ಲೇ ದಾಖಲೆ ಮಾಡಿದ್ದಾಳೆ. ತಂದೆ ಉದಯಕುಮಾರ್- ತಾಯಿ ಸಂಧ್ಯಾ ಈ ಸಾಧನೆಯ ಹಿಂದಿರುವ ಬೆನ್ನೆಲುಬು.

    ತನುಶ್ರೀ ತಂದೆ ಉದಯಕುಮಾರ್, ತಾಯಿ ಸಂಧ್ಯಾ ಮಾತನಾಡಿ, ನಾವು ಅವಳಿಗೆ ಎಲ್ಲಾ ವಿಷಯದಲ್ಲಿ ಸಪೋರ್ಟ್ ಮಾಡುತ್ತೇವೆ. ಯೋಗ ಕ್ಲಾಸಿಗೆ ಅವಳು ಹೋಗದೇ ಯುಟ್ಯೂಬ್ ನೋಡಿಯೇ ಈ ನಾಲ್ಕು ದಾಖಲೆ ಮಾಡಿದ್ದಾಳೆ. ಯಕ್ಷಗಾನ -ಭರತನಾಟ್ಯದಲ್ಲೂ ಸಾಧನೆ ಮಾಡುವ ಹಂಬಲ ಅವಳಲ್ಲಿದೆ. ಕಲಿಕೆಯಲ್ಲೂ ಮುಂದಿರುವುದರಿಂದ ಪಠ್ಯೇತರ ಚಟುವಟಿಕೆಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

    ಸಾಧಕಿಗೆ ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ಕೊಡಲಾಗಿದೆ. ಯೋಗ ದಿನಾಚರಣೆಯ ಪಬ್ಲಿಕ್ ಹೀರೋ ಆಗಿದ್ದ ತನುಶ್ರೀ ಒಂದು ನಿಮಿಷದ ರೆಕಾರ್ಡ್ ಜೊತೆ ತನುಶ್ರೀ ಮೋಸ್ಟ್ ನಂಬರ್ ಆಫ್ ಧನುರಾಸನ ಎಂಬ ದಾಖಲೆಯನ್ನೂ ಮಾಡಿದ್ದಾಳೆ. ಒಂದು ನಿಮಿಷ 1.46 ಸೆಕೆಂಡುಗಳ ಕಾಲ ಧನುರಾಸನ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮತ್ತಷ್ಟು ದಾಖಲೆ ಮಾಡುವ ತಯಾರಿಯನ್ನು ತನುಶ್ರೀ ಮಾಡಿಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv