Tag: ಗಿನ್ನಿಸ್ ರೆಕಾರ್ಡ್

  • 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    ಟೋಕಿಯೋ: ಗೇಮರ್ ಅಜ್ಜಿ ಖ್ಯಾತಿಯ ಜಪಾನ್‍ನ ಹಮಕೋ ಮರಿ 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿನ ಆಟಕ್ಕಿಂತ ಹೆಚ್ಚಾಗಿ ಆನ್‍ಲೈನ್ ಗೇಮ್, ಮೊಬೈಲ್ ಗೇಮ್‍ಗಳಲ್ಲೇ ಯುವಕರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪಬ್ ಜಿ, ಸಿಒಡಿ ಆನ್‍ಲೈನ್ ಗೇಮ್‍ಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಅನೇಕ ಪೋಷಕರು ಆರೋಪಿಸಿದ್ದಾರೆ. ಆದರೆ 90 ವರ್ಷದ ಅಜ್ಜಿ ಆನ್‍ಲೈನ್ ಗೇಮಿಂಗ್‍ನಲ್ಲಿ ಗಿನ್ನಿಸ್ ದಾಖಲೆ ಬೆರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.

    1981ರಿಂದ ಗೇಮಿಂಗ್ ಜಗತ್ತಿನಲ್ಲಿ ಸ್ಟೆಲ್ಲರ್ ಆಗಿರುವ ಜಪಾನ್‍ನ 90 ವರ್ಷದ ಅಜ್ಜಿ ಹಮಕೋ ಮಾರಿ ಅವರು 1981 ರಿಂದ ಗೇಮಿಂಗ್ ಕೌಶಲ್ಯವನ್ನು ಮೆರುಗುಗೊಳಿಸಿದ್ದಾರೆ. ಅವರು 1981ರಿಂದ ಗೇಮಿಂಗ್ ಜಗತ್ತಿನಲ್ಲಿ ನಾಕ್ಷತ್ರಿಕರಾಗಿದ್ದಾರೆ. ವಿಡಿಯೋ ಗೇಮ್‍ಗಳ ಬಗ್ಗೆ ಉತ್ಸಾಹ ಮತ್ತು ಪ್ರೀತಿ, “ಗೇಮರ್ ಅಜ್ಜಿ”, ಅವರು ಜನಪ್ರಿಯವಾಗಿ ತಿಳಿದಿರುವಂತೆ, ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1930ರ ಫೆಬ್ರವರಿ 18ರಂದು ಜನಿಸಿದ ಹಮಕೋ ಮರಿ ತಮ್ಮ 39ನೇ ವಯಸ್ಸಿನಲ್ಲಿ ಗೇಮಿಂಗ್ ಜಗತ್ತಿಗೆ ಕಾಲಿಟ್ಟರು. ಬಳಿಕ 2014ರ ಡಿಸೆಂಬರ್ 19ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್‍ನೊಂದಿಗೆ ಆನ್‍ಲೈನ್‍ನಲ್ಲಿ ತೊಡಗಿದರು. ಪ್ರತಿ ತಿಂಗಳು ನಾಲ್ಕು ವಿಡಿಯೋಗಳನ್ನು ಅಪ್‍ಲೋಡ್ ಮಾಡುವ ಅಜ್ಜಿ ಕಾಲ್ ಆಫ್ ಸೇರಿದಂತೆ ಅನೇಕ ಆನ್‍ಲೈನ್ ಆಟಗಳನ್ನು ಚೆನ್ನಾಗಿ ತಿಳಿದಿದ್ದಾರೆ.

    ಡ್ಯೂಟಿ, ಡಾಂಟ್‍ಲೆಸ್, ನೀರ್ ಅಂಡ್ ಆಟೊಮ್ಯಾಟಾ, ಗ್ರ್ಯಾಂಡ್ ಥೆಫ್ಟ್ ಆಟೋ ವಿ ಹಮಕೋ ಮರಿ ಅವರ ನೆಚ್ಚಿನ ಆಟವಾಗಿವೆ. ಅಷ್ಟೇ ಅಲ್ಲದೆ ಅವರು ಹಲವಾರು ಆನ್‍ಲೈನ್ ಆಟಗಳನ್ನು ಆಡಿ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಜಪಾನಿನ ಅಜ್ಜಿ ಪ್ರತಿದಿನ ಏಳು ರಿಂದ ಎಂಟು ಗಂಟೆಗಳ ಕಾಲ ಗೇಮಿಂಗ್‍ನಲ್ಲೇ ಕಳೆಯುತ್ತಾರೆ. ಜೊತೆಗೆ ಹಮಕೋ ಮಾರಿ ಅವರ ಯೂಟ್ಯೂಬ್ ಚಾನೆಲ್‍ಗೆ 2.78 ಲಕ್ಷ ಚಂದಾದಾರರಿದ್ದಾರೆ.

  • ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

    ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

    ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭಸಂಭ್ರಮದ ಹಿನ್ನೆಲೆಯಲ್ಲಿ ಶನಿವಾರ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬರೋಬ್ಬರಿ 5.51 ಲಕ್ಷ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬದ ದೀಪೋತ್ಸವವನ್ನು ಆಚರಿಸಲಾಗಿದ್ದು, ಇದು ಗಿನ್ನಿಸ್ ಬುಕ್ ದಾಖಲೆಗೆ ಸಾಕ್ಷಿಯಾಗಿದೆ.

    5.51 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಲಾಗಿತ್ತು. ಉಳಿದ ದೀಪಗಳನ್ನು ನಗರದ ಇತರೆ ದೇವಾಲಯಗಳಲ್ಲಿ ಬೆಳಗಿಸಲಾಯಿತು. ಅದರಲ್ಲೂ ಅಯೋಧ್ಯೆಯಲ್ಲಿ ರಾರಾಜಿಸಿದ ದೀಪಗಳೆಲ್ಲವೂ ಮಣ್ಣಿನ ದೀಪಗಳಾಗಿರುವುದು ವಿಶೇಷವಾಗಿತ್ತು.

    ಅಯೋಧ್ಯೆಯ ವಿಶೇಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಶ್ರೀರಾಮ ಆಳ್ವಿಕೆ ನಡೆಸಿದ ತ್ರೇತಾಯುಗದ ಮರುನಿರ್ಮಾಣ ಮಾಡಲಾಗಿತ್ತು. ಶ್ರೀರಾಮ ಹಾಗೂ ಸೀತಾಮಾತೆಯರು ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಂಡೆ ಮೇಲಿಳಿದ ದೃಶ್ಯಗಳನ್ನು ಪುನರ್ ಸೃಷ್ಟಿಸಲಾಗಿತ್ತು. ಈ ಕಲಾಕೃತಿಗಳು ಭಕ್ತಾದಿಗಳ ಕಣ್ಮನ ಸೆಳೆಯಿತು. ಹಾಗೆಯೇ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾತಂಡಗಳು ಅಯೋಧ್ಯೆ ದೀಪೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು.

    ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆ ಬಗ್ಗೆ ಸಿಎಂ ಯೋಗಿ ಮಾತನಾಡಿ, ಹಿಂದಿನ ಸಿಎಂಗಳು ಅಯೋಧ್ಯೆಗೆ ಭೇಟಿ ನೀಡದೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಾನು ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬಾರಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದೇನೆ. ಇಲ್ಲಿ ಬಡವ, ಶ್ರೀಮಂತ ಎನ್ನುವ ಭೇದಭಾವವಿಲ್ಲ. ಧರ್ಮ ಭೇದವೂ ಎಲ್ಲ. ಇಲ್ಲಿ ಎಲ್ಲರೂ ಸಮಾನರೆಂದು ಜನರು ಖುಷಿಯಾಗಿ ಬಾಳುತ್ತಿದ್ದಾರೆ ಎಂದು ಖುಷಿಯನ್ನು ಹಂಚಿಕೊಂಡರು.

    ಹಾಗೆಯೇ ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಮೂರನೇ ದೀಪೋತ್ಸವ. ಕಳೆದ ಬಾರಿ 3,51,000 ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ 4 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ಹೊಸ ದಾಖಲೆ ಬರೆಯಲಾಗಿದೆ. ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೂ ಪರಿಗಣಿಸಲಾಗಿದೆ ಎಂದು ತಿಳಿಸಿದರು.

  • 4 ಲಕ್ಷ ರೂ. ಬೆಲೆಯ ವಿಶ್ವದ ಅತ್ಯಂತ ಬೆಲೆ ಬಾಳುವ ಚಾಕಲೇಟ್ ಬಿಡುಗಡೆ

    4 ಲಕ್ಷ ರೂ. ಬೆಲೆಯ ವಿಶ್ವದ ಅತ್ಯಂತ ಬೆಲೆ ಬಾಳುವ ಚಾಕಲೇಟ್ ಬಿಡುಗಡೆ

    ಮುಂಬೈ: ವಿಶ್ವ ಅತ್ಯಂತ ದುಬಾರಿ  ಚಾಕಲೇಟೊಂದು ಸದ್ದು ಮಾಡುತ್ತಿದ್ದು, ಅದರ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.

    ಹೌದು ವಿಶ್ವದ ಬೆಲೆ ಬಾಳುವ ಚಾಕಲೇಟ್‍ನ್ನು ಐಟಿಸಿಯ ಅಂಗ ಸಂಸ್ಥೆ ಬಿಡುಗಡೆ ಮಾಡಿದೆ. ಇದರ ಬೆಲೆ ಪ್ರತಿ ಕೆ.ಜಿ.ಗೆ ಅಂದಾಜು 4.3 ಲಕ್ಷ ರೂ. ಆಗಿದ್ದು, ಚಾಕಲೇಟ್‍ನ ಸೀಮಿತ ಆವೃತ್ತಿಯನ್ನು ಐಟಿಸಿ ಫ್ಯಾಬೆಲ್ಲೆ ಅನಾವರಣಗೊಳಿಸಿದೆ.

    ಐಟಿಸಿಯ ಸ್ಥಳಿಯ ಐಷಾರಾಮಿ ಬ್ರ್ಯಾಂಡ್ ಫ್ಯಾಬೆಲ್ಲೆ ಎಕ್ಸ್ ಕ್ವಿಸಿಟ್ ಈ ಚಾಕಲೇಟ್‍ನ್ನು ತಯಾರಿಸಿದೆ. ಫ್ಯಾಬೆಲ್ಲೆ ಸಂಸ್ಥೆ ದಿ ಟ್ರಿನಿಟಿ-ಟ್ರಫಲ್ಸ್ ಎಕ್ಸ್ ಟ್ರಾರ್ಡಿನರಿಯನ್ನು ಪ್ರಾರಂಭಿಸಿದೆ. ಈ ಚಾಕಲೇಟ್‍ಗಳನ್ನು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಅತ್ಯಂತ ದುಬಾರಿ ಚಾಕಲೇಟ್ ಎಂದು ಪಟ್ಟಿ ಮಾಡಲಾಗಿದೆ.

    ಬುಧವಾರ ಈ ಚಾಕಲೇಟ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ದೀಪಾವಳಿಯ ಅಂಗವಾಗಿ ಸಂಸ್ಥೆ ಬಿಡುಗಡೆ ಮಾಡಿತು.

    ವಿಶ್ವದ ಅತ್ಯುತ್ತಮ ಚಾಕಲೇಟ್ ನ್ನು ಭಾರತದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ಜಗತ್ತಿಗೆ ತಿಳಿಸುವುದು ನಮ್ಮ ಗುರಿಯಾಗಿದೆ. ಅಲ್ಲದೆ ನಮ್ಮ ಸಂಸ್ಥೆಯಿಂದ ವಿವಿಧ ಮಾದರಿಯ ಚಾಕಲೇಟ್‍ಗಳು, ಸಿಹಿ ತಿಂಡಿ, ಕಾಫಿ ಹಾಗೂ ಹೊಸ ಮಾದರಿಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ ಎಂದು ಐಟಿಸಿ ಸಂಸ್ಥೆಯ ಸಿಒಒ ಅನುಜ್ ರುಸ್ತಗಿ ಹೇಳಿದ್ದಾರೆ.

    ಐಟಿಸಿಯಲ್ಲಿ ನಾವು ವಿಶ್ವ ದರ್ಜೆಯ ಭಾರತೀಯ ಬ್ರ್ಯಾಂಡ್‍ಗಳನ್ನು ರಚಿಸಲು ಬದ್ಧರಾಗಿದ್ದೇವೆ. ಇದರ ಭಾಗವಾಗಿ ಫ್ಯಾಬೆಲ್ಲೆ ಈ ವಿಶಿಷ್ಠ ಚಾಕಲೇಟ್‍ಗಳನ್ನು ತಯಾರಿಸಿದೆ. ಇದು ವಿಶ್ವ ಮಟ್ಟದಲ್ಲಿ ನಡೆದ ಅತ್ಯುತ್ತಮ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಸಿಒಒ ಬಣ್ಣಿಸಿದರು.

    ದಿ ಟ್ರಿನಿಟಿ-ಟ್ರಪಲ್ಸ್ ಎಕ್ಸ್ ಟ್ರಾರ್ಡಿನರಿ ಚಾಕೊಲೇಟ್‍ಗಳನ್ನು ಫ್ಯಾಬೆಲ್ಲೆ ಮತ್ತು ಮೈಕೆಲಿನ್ ಸ್ಟಾರ್ ಚೇಪ್ ಫಿಲಿಪ್ ಕಾಂಟಿಸಿನಿ ಪಾಲುದಾರಿಕೆಯಲ್ಲಿ ತಯಾರಿಸಲಾಗಿದೆ. ಈ ಚಾಕಲೇಟ್‍ಗಳನ್ನು ಸೃಷ್ಟಿ, ಸ್ಥಿತಿ, ಲಯ ಎಂಬ ಆಧ್ಯಾತ್ಮಿಕ ಸೂತ್ರದಿಂದ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಚೆಫ್ ಕಾಂಟಿಸಿನಿ ಮಾರ್ಗದರ್ಶನ ಹಾಗೂ ಪಾಲುದಾರಿಕೆಯಲ್ಲಿ ಈ ಚಾಕಲೇಟ್ ತಯಾರಿಸಲು ಸಾಧ್ಯವಾಗಿದೆ. ಇದಕ್ಕಾಗಿ ಕೈಯಿಂದ ತಯಾರಿಸಿದ ಮರದ ಪೆಟ್ಟಿಗೆಯನ್ನು ರಚಿಸಲಾಯಿತು. ಪ್ರತಿ ಮರದ ಪೆಟ್ಟಿಗೆಯಲ್ಲಿ 15 ಕರಕುಶಲ ಟ್ರಫಲ್‍ಗಳಿವೆ, ಪ್ರತಿಯೊಂದು ಸುಮಾರು 15 ಗ್ರಾಂ. ತೂಕ ಹೊಂದಿವೆ ಎಂದು ರುಸ್ಟಗಿ ತಿಳಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಚಾಕಲೇಟ್‍ಗಳನ್ನು ಭಾರತೀಯರಿಗೆ ಕೈಗೆಟಕುವಂತೆ ಮಾಡಲಾಗುವುದು. ವಿದೇಶಕ್ಕೆ ತೆರಳಿದಾಗ ಭಾರತೀಯರು ಅಲ್ಲಿಂದ ವಿದೇಶಿ ಬ್ರಾಂಡ್‍ನ ಚಾಕಲೇಟ್ ತುಂಬಿಕೊಂಡು ಬರುವುದನ್ನು ನೋಡಿದ್ದೇವೆ. ಇದನ್ನು ಬದಲಾಯಿಸಿ, ಭಾರತದಲ್ಲೇ ಉತ್ತಮ ಗುಣಮಟ್ಟದ ಚಾಕಲೇಟ್‍ಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಾಕಲೇಟ್‍ಗಳನ್ನು ತಯಾರಿಸುತ್ತೇವೆ ಎಂದು ಸಿಒಒ ಭರವಸೆ ನೀಡಿದರು.

  • 3 ನಿಮಿಷದಲ್ಲಿ 645 ಜಿಗಿತ – 56ರ ವ್ಯಕ್ತಿಯ ಸಾಧನೆ

    3 ನಿಮಿಷದಲ್ಲಿ 645 ಜಿಗಿತ – 56ರ ವ್ಯಕ್ತಿಯ ಸಾಧನೆ

    ಹುಬ್ಬಳ್ಳಿ: ನಾನ್ ಸ್ಟಾಪ್ ಸ್ಕಿಪಿಂಗ್ ಮಾಡುವ ಮೂಲಕ 56 ವರ್ಷದ ಹಿರಿಯರೊಬ್ಬರು ಗಿನ್ನಿಸ್ ರೆಕಾರ್ಡ್ ದಾಖಲೆ ಬರೆದಿದ್ದಾರೆ.

    ಹುಬ್ಬಳ್ಳಿಯ ಶಿರೂರ ಪಾರ್ಕ್ ನಿವಾಸಿಯಾದ ಗುಡ್ಡೋ ನಾಗನಗೌಡ(56) ಅವರು ಹಗ್ಗದಾಟದಲ್ಲಿ ಹೊಸದೊಂದು ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಬ್ಯಾಕ್ವರ್ಡ್ಸ್ ಸ್ಕಿಪ್ ಓವರ್ ರೋಪ್‍ನಲ್ಲಿ ಕೇವಲ 3 ನಿಮಿಷದಲ್ಲಿ 645 ಜಿಗಿತಗಳನ್ನು ಆಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

    ನಾಗನಗೌಡ ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಕಿವಿಜಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾಗನಗೌಡ ಈ ಹಿಂದೆಯೂ ಹಗ್ಗದಾಟದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. ಕೇವಲ 1 ನಿಮಿಷದಲ್ಲಿ 252 ಜಿಗಿತಗಳನ್ನು ಆಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದರು.

    ಇಂದು ಕೇವಲ 3 ನಿಮಿಷದಲ್ಲಿ 645ಕ್ಕೂ ಹೆಚ್ಚು ಜಿಗಿತಗಳನ್ನು ಪೂರೈಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ನಾಗನಗೌಡ ಅವರ ಸಾಧನೆಯನ್ನು ಕಂಡು ಸಹದ್ಯೋಗಿಗಳು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂತ್ರಿಯಾದ್ರೆ ಗಿನ್ನಿಸ್ ರೆಕಾರ್ಡ್ ಲೆವೆಲ್ ಗೆ ಕೆಲ್ಸ ಮಾಡ್ತೀನಿ- ಜಮೀರ್ ಅಹಮದ್

    ಮಂತ್ರಿಯಾದ್ರೆ ಗಿನ್ನಿಸ್ ರೆಕಾರ್ಡ್ ಲೆವೆಲ್ ಗೆ ಕೆಲ್ಸ ಮಾಡ್ತೀನಿ- ಜಮೀರ್ ಅಹಮದ್

    ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ನಾನು ಸಚಿವನಾಗುತ್ತೇನೆ. ಆಮೇಲೆ ನಾನು ಗಿನ್ನಿಸ್ ರೆಕಾರ್ಡ್ ಲೆವೆಲ್ ಕೆಲಸ ಮಾಡುತ್ತೇನೆ ಅಂತ ಶಾಸಕ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಾಮರಾಜಪೇಟೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಅಗೋದನ್ನ ಯಾರಿಂದಲೂ ತಡೆಯೋಕೆ ಆಗಲ್ಲ. ಸಿದ್ದರಾಮಯ್ಯ ಸಿಎಂ ಅದ್ರೇ ನಿಮ್ಮ ಬಚ್ಚಾ ಜಮೀರ್ ಮಂತ್ರಿ ಅಗೋದನ್ನ ಯಾರಿಂದಲೂ ತಡೆಯೋಕೆ ಅಗಲ್ಲ ಅಂತ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡೇ ಮಾಡ್ತೀವಿ. ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ್ರೆ ನಾನು ಮಂತ್ರಿ ಆಗೇ ಆಗ್ತೀನಿ. ಆಮೇಲೆ ಇದೆ ನೋಡಿ ಆಟ. ಮಿನಿಸ್ಟರ್ ಆಗಿ ಏನೆಲ್ಲ ಕೆಲಸ ಮಾಡ್ತಿನಿ ಅಂದ್ರೆ ನನ್ನ ಹೆಸರು ಗಿನ್ನಿಸ್ ಬಕ್‍ನಲ್ಲಿ ರೆಕಾರ್ಡ್ ಆಗುತ್ತೆ ಅಂತ ಹೇಳಿದ್ರು.

    https://www.youtube.com/watch?v=x8bg1m2yIaQ

  • ವಿಶ್ವ ದಾಖಲೆ ಪುಟ ಸೇರ್ತು 26,558 ಅಡಿ ಉದ್ದದ ವೆಡ್ಡಿಂಗ್ ಡ್ರೆಸ್

    ವಿಶ್ವ ದಾಖಲೆ ಪುಟ ಸೇರ್ತು 26,558 ಅಡಿ ಉದ್ದದ ವೆಡ್ಡಿಂಗ್ ಡ್ರೆಸ್

    ಪ್ಯಾರಿಸ್: 26,558 ಅಡಿ(8095 ಮೀಟರ್) ಉದ್ದದ ವೆಡ್ಡಿಂಗ್ ಡ್ರೆಸ್‍ವೊಂದನ್ನ ಫ್ರಾನ್ಸ್ ನಲ್ಲಿ ತಯಾರಿಸಲಾಗಿದೆ. ಇದು ಜಗತ್ತಿನ ಅತೀ ಉದ್ದದ ವೆಡ್ಡಿಂಗ್ ಡ್ರೆಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ.

    ಕನ್ ಸ್ಟ್ರಕ್ಷನ್ ಕಂಪನಿ ಡೈನಮಿಕ್ ಪ್ರಾಜೆಕ್ಟ್ಸ್, 15 ಸ್ವಸಹಾಯಕರ ಸಹಾಯ ಪಡೆದು 2 ತಿಂಗಳ ಅವಧಿಯಲ್ಲಿ ಈ ಡ್ರೆಸ್ ತಯಾರಿಸಿದೆ. ಮೊದಲು ಪ್ರತ್ಯೇಕ ತುಂಡುಗಳನ್ನ ತಯಾರಿಸಿಕೊಂಡು ನಂತರ ಉದ್ದದ ವೆಡ್ಡಿಂಗ್ ಡ್ರೆಸ್ ಹೊಲಿಯಲಾಗಿದೆ. ಈ ಹಿಂದೆ ದಾಖಲೆ ಮಾಡಿದ್ದ 3,949.8 ಅಡಿ(1203.9 ಮೀಟರ್) ಉದ್ದದ ಬಟ್ಟೆಯನ್ನು ಕೂಡ ಈ ತಂಡ ಬಳಸಿಕೊಂಡಿದೆ.

    ಲೇಸ್ ತಯಾರಿಕೆಗೆ ಪ್ರಸಿದ್ಧವಾಗಿರೋ ಫ್ರಾನ್ಸ್ ನ ಕಾಡ್ರಿಯಲ್ಲಿ ಈ ವೆಡ್ಡಿಂಗ್ ಡ್ರೆಸ್ ಅನಾವರಣ ಮಾಡಲಾಯಿತು. ವೃತ್ತಿಪರ ಸರ್ವೇಯರ್ ಕ್ರಿಸ್ಟೋಫ್ ಡ್ಯುಮೋಂಟ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ತೀರ್ಪುಗಾರರಾದ ರಾಬ್ ಮೊಲ್ಲಿ ಡ್ರೆಸ್ ನ ಉದ್ದಳತೆಯನ್ನ ಪರಿಶೀಲಿಸಿ ಕಂಪನಿಗೆ ಸರ್ಟಿಫಿಕೇಟ್ ನೀಡಿದ್ದಾರೆ.

    ಬಳಿಕ ವೆಡ್ಡಿಂಗ್ ಡ್ರೆಸ್ ವಿವಿಧ ಭಾಗಗಳಾಗಿ ಕತ್ತರಿಸಿ ಮಾರಾಟ ಮಾಡಲಾಗಿದೆ. ಇದರಿಂದ ಬಂದ ಹಣವನ್ನ ದಾನ ಮಾಡಲಾಗಿದೆ.

  • ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ವೀಡಿಯೋ: 1 ನಿಮಿಷದಲ್ಲಿ 32 ಬಾರಿ ನಾಲಗೆಯಲ್ಲಿ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ!

    ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ.

    ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ ನಾಲಿಗೆಯಿಂದ ಜೋರಾಗಿ ತಿರುಗುತ್ತಿರುವ ಫ್ಯಾನ್ ರೆಕ್ಕೆಗಳನ್ನು ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಇತ್ತೀಚೆಗೆ ಇಟಾಲಿಯನ್ ಶೋ `ಲೊ ಶೋ ಡೈ ರೆಕಾರ್ಡ್’ ನಲ್ಲಿ ಅತ್ಯದ್ಭುತ ಸಾಹಸ ಮಾಡಿ ಗಿನ್ನಿಸ್ ರೆಕಾರ್ಡ್ ಪುಟ ಸೇರಿದ್ದಾರೆ.

    ಜೋರಾಗಿ ತಿರುಗುವ ಎರಡು ಫ್ಯಾನ್‍ಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಫ್ಯಾನ್‍ನ ರೆಕ್ಕೆಗಳನ್ನು 1 ನಿಮಿಷದಲ್ಲಿ 32 ಬಾರಿ ನಾಲಗೆಯಿಂದ ನಿಲ್ಲಿಸೋ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಝಿಯೋ ಇತಿಹಾಸ ಬರೆದಿರೋದು ಇದು ಮೊದಲೇನಲ್ಲ. ಈ ಹಿಂದೆ 1 ನಿಮಿಷದಲ್ಲಿ 20 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸಿದ್ದು, ಆ ರೆಕಾರ್ಡನ್ನ ಈ ಬಾರಿ ಮುರಿದಿದ್ದರು.

    ಆದ್ರೆ ಶೋದಲ್ಲಿ ತನ್ನ ಮೊದಲಿನ ರೆಕಾರ್ಡನ್ನ ಮುರಿದು ಮತ್ತೊಂದು ದಾಖಲೆ ಬರೆದ ಝಿಯೋ ದಾಖಲೆಯನ್ನು ಮತ್ತೊಬ್ಬ ಮಹಿಳೆ ಅರ್ಶಿಟಾ ಫರ್ಮನ್ ಮುರಿದಿದ್ದಾರೆ. ಅರ್ಶಿಟಾ 1 ನಿಮಿಷದಲ್ಲಿ 35 ಬಾರಿ ಫ್ಯಾನ್ ರೆಕ್ಕೆ ನಿಲ್ಲಿಸುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

    https://www.youtube.com/watch?v=Lf814UKG0fk