Tag: ಗಿನ್ನಿಸ್ ರೆಕಾರ್ಡ್

  • International Yoga Day: ‘ಯೋಗ’ವೆಂಬ ಗಿನ್ನಿಸ್‌ ರೆಕಾರ್ಡ್‌ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?

    International Yoga Day: ‘ಯೋಗ’ವೆಂಬ ಗಿನ್ನಿಸ್‌ ರೆಕಾರ್ಡ್‌ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?

    ಯೋಗವೆಂದರೆ (International Yoga Day 2024) ಕೇವಲ ದೈಹಿಕವಾಗಿ ಮಾಡುವ ಆಸನಗಳ ವ್ಯಾಯಾಮ ಅಷ್ಟೇ ಅಲ್ಲ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಮ್ಮಿಲನದ ಆಯಾಮ. ಈಗಿನ ವೇಗದ, ಒತ್ತಡಮಯ ಜೀವನಶೈಲಿಯಿಂದ ಮನುಕುಲ ಅಲ್ಪಾಯುಷಿಯಾಗುತ್ತಿದೆ. ಯಾರೊಬ್ಬರ ಬದುಕಿನಲ್ಲಿ ‘ಯೋಗ’ ವೆಂಬುದೇ ಇಲ್ಲದಂತಾಗಿದೆ. ದೈಹಿಕ ಸದೃಢತೆ, ಮಾನಸಿಕ ಸಾಮರ್ಥ್ಯ, ಆಧ್ಯಾತ್ಮಿಕ ಚಿಂತನೆ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ. ಮನುಷ್ಯ ಪರಿಪೂರ್ಣನಾಗಿದ್ದರೆ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈಗಿನ ಡೋಲಾಯಮಾನ ಯುಗದಲ್ಲಿ ಯೋಗದ ಹಾದಿಯಲ್ಲಿ ನಡೆದು ಆರೋಗ್ಯಕರ ಸಮಾಜ ನಿರ್ಮಿಸುವುದು ಮುಖ್ಯವಾಗಿದೆ.

    ಇಂದು (ಜೂ.21) ಅಂತರರಾಷ್ಟ್ರೀಯ ಯೋಗ ದಿನ. ಈ ಬಾರಿಯ ವಸ್ತು ವಿಷಯ ‘ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ’. ಇಡೀ ಜಗತ್ತಿಗೆ ಇಂದು ಯೋಗಾಸನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಎಲ್ಲರ ಚಿತ್ತ ಯೋಗದ ಕಡೆ ನೆಟ್ಟಿದೆ. ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಯನ್ನು ದಾಟಿ ಯೋಗ ಪಸರಿಸಿದೆ. ಯೋಗಾಸನದ (Yoga) ಪ್ರಯೋಜನ, ಮಹತ್ವವನ್ನು ಜಗತ್ತು ಕೊಂಡಾಡುತ್ತಿದೆ. ಭಾರತವಷ್ಟೇ ಅಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತಿದೆ. ದೈಹಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಯೋಗ ಎಂದು ಸಾರಿ ಹೇಳಲಾಗುತ್ತಿದೆ. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್‌, ಕ್ರಿಕೆಟಿಗ ಮನಿಷ್‌ ಪಾಂಡೆ ಸಾಥ್‌

    ಭಾರತದಲ್ಲಂತೂ ಪ್ರತಿ ವರ್ಷ ಯೋಗ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಗುಜರಾತ್, ಕರ್ನಾಟಕ ಹೀಗೆ ಅನೇಕ ರಾಜ್ಯಗಳಲ್ಲಿ ಗಿನ್ನಿಸ್ ರೆಕಾರ್ಡ್‌ಗಳು ಕೂಡ ಆಗಿದೆ. ‘ಯೋಗ’ಕ್ಕೆ ಜಾಗತಿಕ ಮನ್ನಣೆ ತಂದುಕೊಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ನೇತೃತ್ವದಲ್ಲಿ ಭಾರತದ ಅನೇಕ ಕಡೆಗಳಲ್ಲಿ ದಾಖಲೆಯ ಮಟ್ಟದಲ್ಲಿ ಜನರನ್ನು ಸೇರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ.

    ಮೊದಲ ಅಂತಾರಾಷ್ಟ್ರೀಯ ಯೋಗ ದಿನವೇ ರೆಕಾರ್ಡ್
    2015ರ ಜೂ.21 ರಂದು ವಿಶ್ವದಾದ್ಯಂತ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಭಾರತದ ನವದೆಹಲಿಯ ರಾಜಪಥದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅನೇಕ ರಾಷ್ಟ್ರಗಳ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. 35 ನಿಮಿಷಗಳ ಕಾಲ 21 ಆಸನಗಳನ್ನು ಪ್ರದರ್ಶಿಸಲಾಯಿತು. ಬರೋಬ್ಬರಿ 35,985 ಮಂದಿ ಒಂದೇ ವೇದಿಕೆಯಲ್ಲಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಗಿನ್ನಿಸ್ ದಾಖಲೆ ಬರೆಯಿತು. ಭಾರತವಷ್ಟೇ ಅಲ್ಲದೇ ನ್ಯೂಯಾರ್ಕ್, ಪ್ಯಾರಿಸ್, ಬೀಜಿಂಗ್, ಬ್ಯಾಂಕಾಕ್, ಕೌಲಾಲಂಪುರ್, ಸ್ಯಾನ್ ಫ್ರಾನ್ಸಿಸ್ಕೋ, ಸಿಯೋಲ್ ಮತ್ತು ಸೀಶೆಲ್ಸ್ ಸೇರಿದಂತೆ ಅನೇಕ ರಾಷ್ಟçಗಳಲ್ಲಿ ಯೋಗ ದಿನವನ್ನು ಆಚರಿಸಲಾಗಿತ್ತು. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ಉತ್ತರ ಪ್ರದೇಶದಲ್ಲಿ 51,000 ಜನರಿಂದ ಯೋಗಾಸನ
    ಮೊದಲ ವರ್ಷದ ಯಶಸ್ಸಿನ ಫಲವಾಗಿ, ಪ್ರತಿ ಬಾರಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ಜನರನ್ನು ಒಟ್ಟುಗೂಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೊಂಡಿತು. 2017 ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 50,000 ಜನರು ಪಾಲ್ಗೊಂಡು ಯೋಗಾಸನ ಮಾಡಿದರು. ಇದು ಮೊದಲ ವರ್ಷದ ದಾಖಲೆಯನ್ನು ಮುರಿಯಿತು. ಆಗ ಕರ್ನಾಟಕದ ಮೈಸೂರಿನಲ್ಲೂ ಬೃಹತ್ ವೇದಿಕೆಯಲ್ಲಿ ಯೋಗಾಸನ ಕಾರ್ಯಕ್ರಮ ಜರುಗಿತ್ತು. ಇಲ್ಲಿ 55,506 ಜನರು ಭಾಗವಹಿಸಿದ್ದರು. ಇದು ಕೂಡ ಗಿನ್ನಿಸ್ ರೆಕಾರ್ಡ್ ದಾಖಲಿಸಿತ್ತು.

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಹಂಗಾಮ
    2022ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಕಾರ್ಯಕ್ರಮ ನಡೆದಿತ್ತು. ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಜನರು ಯೋಗಾಸನ ಮಾಡಿದರು. ಆಗ ಸುಮಾರು 15,000 ಮಂದಿ ಭಾಗವಹಿಸಿದ್ದರು. ಇದು ಗಿನ್ನಿಸ್ ರೆಕಾರ್ಡ್ ಮಾಡದೇ ಇದ್ದರೂ ದೇಶದ ಗಮನ ಸೆಳೆಯಿತು. ಆಗ ತಾನೇ ದೇಶವು ಜನತೆ ಕೋವಿಡ್ ಸಾಂಕ್ರಾಮಿಕದಿಂದ ಚೇತರಿಸಿಕೊಂಡಿತ್ತು. ಹೀಗಾಗಿ ಮುಂಜಾಗ್ರತೆ ದೃಷ್ಟಿಯಿಂದ ಸೀಮಿತ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನೂ ಓದಿ: ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

    ಮೋದಿ ತವರಲ್ಲಿ ದಾಖಲೆ
    2023ರಲ್ಲಿ ಪ್ರಧಾನಿ ಮೋದಿ ತವರು ಗುಜರಾತ್‌ನ ಸೂರತ್‌ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸುಮಾರು 1.50 ಲಕ್ಷ ಜನರು ಪಾಲ್ಗೊಂಡು ಯೋಗಾಸನ ಮಾಡಿದರು. ವಿಶ್ವದಲ್ಲೇ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಡೆಸಿದ ಕಾರ್ಯಕ್ರಮ ಇದಾಗಿದೆ. ಇದುವರೆಗಿನ ಅತಿದೊಡ್ಡ ದಾಖಲೆಯಿದು. ಹೀಗಾಗಿ ಇದು ವರ್ಲ್ಡ್ ಆಫ್ ಬುಕ್ ರೆರ್ಕಾಡ್ ಸೇರಿತು. ಇದೇ ವರ್ಷ ಭಾರತದ ನರೇಂದ್ರ ಮೋದಿ ನೇತೃತ್ವದಲ್ಲಿ ನ್ಯೂಯಾರ್ಕ್ನಲ್ಲಿರುವ ಯುಎನ್ ಪ್ರಧಾನ ಕಚೇರಿಯಲ್ಲಿ ಐತಿಹಾಸಿಕ ಯೋಗ ಕಾರ್ಯಕ್ರಮ ನಡೆಯಿತು.

  • ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

    ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

    ಲಕ್ನೋ: ಅಯೋಧ್ಯೆಯ (Ayodhya) ಸರಯು ನದಿಯ ತಟದಲ್ಲಿ 22 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆಯಲಾಗಿದೆ. ಈ ಸ್ಮರಣೀಯ ಸಂದರ್ಭದ ಮರುದಿನವೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.

    ದೀಪೋತ್ಸವದ (Deepotsava) ದಿನ ಕೆಲವು ಮಕ್ಕಳು ಘಾಟ್‌ನಲ್ಲಿ ದೀಪದಿಂದ ಎಣ್ಣೆಯನ್ನು ತೆಗೆದುಕೊಂಡು ಪಾತ್ರೆಗಳಲ್ಲಿ ತುಂಬುತ್ತಿರುವ ದೃಶ್ಯದ ವೀಡಿಯೋವನ್ನು ಅಖಿಲೇಶ್‌ ಯಾದವ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Ayodhya Deepotsav: ಶ್ರೀರಾಮ ಜನ್ಮಭೂಮಿಯಲ್ಲಿ ದೀಪೋತ್ಸವ – ಅಯೋಧ್ಯೆ ಬೆಳಗಿದ 24 ಲಕ್ಷ ಹಣತೆಗಳು

    ದೈವಿಕತೆಯ ನಡುವೆ ಬಡತನ… ಬಡತನವು ದೀಪಗಳಿಂದ ಎಣ್ಣೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ಆಚರಣೆಯ ಬೆಳಕು ಮಂದವಾಗುತ್ತದೆ. ಘಟ್ಟ ಮಾತ್ರವಲ್ಲದೆ ಪ್ರತಿಯೊಬ್ಬ ಬಡವರ ಮನೆಯೂ ಬೆಳಗುವ ಇಂತಹ ಹಬ್ಬ ಬರಲಿ ಎಂಬುದು ನಮ್ಮ ಹಾರೈಕೆ ಎಂದು ಎಸ್‌ಪಿ ಮುಖ್ಯಸ್ಥ ಬರೆದುಕೊಂಡಿದ್ದಾರೆ.

    7ನೇ ಆವೃತ್ತಿಯ ದೀಪೋತ್ಸವದಂದು ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ಬರೆಯಲಾಯಿತು. ಒಟ್ಟು 22.23 ಲಕ್ಷ ಮಣ್ಣಿನ ದೀಪಗಳು ಅಯೋಧ್ಯೆಯನ್ನು ಬೆಳಗಿದವು. ಕಳೆದ ವರ್ಷಕ್ಕಿಂತ 6.47 ಲಕ್ಷ ಹೆಚ್ಚು ಹಣತೆಗಳನ್ನು ಈ ಬಾರಿ ಹಚ್ಚಲಾಗಿತ್ತು. 25,000 ಸ್ವಯಂಸೇವಕರು ನದಿಯ ಉದ್ದಕ್ಕೂ ರಾಮ್ ಕಿ ಪೈಡಿಯ 51 ಘಾಟ್‌ಗಳಲ್ಲಿ ಬೆಳಗಿದರು. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರತಿನಿಧಿಗಳು ಡ್ರೋನ್‌ಗಳನ್ನು ಬಳಸಿ ದೀಪಗಳನ್ನು ಎಣಿಸಿ ಅದನ್ನು ವಿಶ್ವ ದಾಖಲೆಯಾಗಿ ನೋಂದಾಯಿಸಿದ ನಂತರ ಅಯೋಧ್ಯೆ ‘ಜೈ ಶ್ರೀರಾಮ್’ ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು.

  • ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಈ ಬಾರಿಯ ದೀಪಾವಳಿಗೆ (Deepavali) ಹೊಸ ದಾಖಲೆ ಸೃಷ್ಟಿಸಲು ತಯಾರಿ ನಡೆದಿದೆ. ಈ ಬಾರಿಯ ದೀಪಾವಳಿಗೆ 24 ಲಕ್ಷ ಹಣತೆಗಳನ್ನು ಹಚ್ಚಲು ಸರ್ಕಾರ ತಿರ್ಮಾನಿಸಿದ್ದು, ದೀಪೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಒಟ್ಟು 51 ಘಾಟ್‌ಗಳಲ್ಲಿ 24 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಹಚ್ಚಲಾಗುತ್ತದೆ.

    ಕಾರ್ಯಕ್ರಮಕ್ಕೂ ಮುನ್ನ ಇಂದು ಬೆಳಗ್ಗೆ ಸಂಭ್ರಮಾಚರಣೆಯಲ್ಲಿ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ರಾಮಾಯಣವನ್ನು ಆಧರಿಸಿದ ಹದಿನಾರು ಕೋಷ್ಟಕಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು. ನಗರದಲ್ಲಿ ಶ್ರೀರಾಮನ ಜೀವನಗಾಥೆಯನ್ನು ಬಿಂಬಿಸುವ ಮರಳು ಕಲೆಯನ್ನೂ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆ – ಉತ್ತರಾಖಂಡದಲ್ಲಿ ಮೊದಲು ಕಾನೂನು ಜಾರಿಗೆ ಸಿದ್ಧತೆ

    2017ರಿಂದ ರಾಮಮಂದಿರ ಪ್ರದೇಶದಲ್ಲಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಮತ್ತು ಪ್ರತಿ ವರ್ಷ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಈ ಬಾರಿಯ ದೀಪೋತ್ಸವದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. 50 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶದ (Uttar Pradesh) ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಹೇಳಿದ್ದಾರೆ. ಇದನ್ನೂ ಓದಿ: ತಿಹಾರ್‌ ಜೈಲಿನಿಂದ ಬಂದು ಅನಾರೋಗ್ಯ ಪೀಡಿತ ಪತ್ನಿ ಭೇಟಿಯಾದ ಮನೀಶ್ ಸಿಸೋಡಿಯಾ

    2017ರಲ್ಲಿ 51,000 ಹಣತೆಗಳನ್ನು ಹಚ್ಚಲಾಗಿತ್ತು. 2019ರಲ್ಲಿ 4.10 ಲಕ್ಷ ಹಣತೆಗಳನ್ನು ಬೆಳಗಿದ್ದು, 2020ರಲ್ಲಿ 6 ಲಕ್ಷಕ್ಕೂ ಹೆಚ್ಚು, 2021ರಲ್ಲಿ 9 ಲಕ್ಷಕ್ಕೂ ಅಧಿಕ, 2022ರಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಇದು ವಿಶ್ವ ದಾಖಲೆಗೆ ಸಾಕ್ಷಿಯಾಗಿತ್ತು. ಈ ವರ್ಷ 2023ರಲ್ಲಿ 24 ಲಕ್ಷ ದೀಪ ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ (Guinness Record) ಬರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಆಚರಣೆಯ ಸಮಯದಲ್ಲಿ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಅಯೋಧ್ಯೆಯನ್ನು 14 ಪೊಲೀಸ್ ವಲಯಗಳಾಗಿ ವಿಂಗಡಿಸಿದ್ದೇವೆ ಎಂದು ಅಯೋಧ್ಯೆ ರೇಂಜ್ ಐಜಿ ಪ್ರವೀಣ್ ಕುಮಾರ್ ಹೇಳಿದರು. ಭದ್ರತಾ ಸಿದ್ಧತೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಹ ಬಳಸಲಾಗಿದೆ. ರಾಮ್ ಕಿ ಪೈಡಿಯಲ್ಲಿರುವ ವಿವಿಐಪಿ ಆವರಣವನ್ನು ಶ್ವಾನದಳದೊಂದಿಗೆ ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್

    ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 24 ಲಕ್ಷ ದೀಪಗಳನ್ನು  ಬೆಳಗಿಸಲಾಗುತ್ತದೆ. 20 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ಜಿಲ್ಲಾಡಳಿತ ಬೆಳಕು-ಧ್ವನಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದ್ದು, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ನಿರೀಕ್ಷೆ ಇದೆ. ರಾಮ್ ಕಿ ಪೈಡಿಯಲ್ಲಿ ಬೆಳಗುವ ಒಂದು ದೀಪಕ್ಕೆ 51 ರೂ. ಮತ್ತು 51 ದೀಪಗಳಿಗೆ 1,100 ರೂ.ಗಳನ್ನು ನೀಡುವ ಮೂಲಕ ಈವೆಂಟ್‌ನಲ್ಲಿ ಭಾಗಿಯಾಗಲು ಸಾಮಾನ್ಯ ಜನರಿಗೆ ಸರ್ಕಾರ ಅವಕಾಶ ನೀಡಿದೆ. ಇದನ್ನೂ ಓದಿ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ: ಜಾವೇದ್ ಅಖ್ತರ್

  • ಗಿನ್ನಿಸ್ ಗಾಗಿ ‘ದೇವರ ಆಟ ಬಲ್ಲವರಾರು’ ಟೀಮ್ ಮಾಡಿದ್ದೇನು?

    ಗಿನ್ನಿಸ್ ಗಾಗಿ ‘ದೇವರ ಆಟ ಬಲ್ಲವರಾರು’ ಟೀಮ್ ಮಾಡಿದ್ದೇನು?

    ನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತದೆ. ಇಂತಹ ಸಿನಿಮಾಗಳು ಯಶಸ್ವಿ ಕೂಡ ಆಗಿದೆ.  ದೇವರ ಆಟ ಬಲ್ಲವರಾರು (Devara Aata Ballavararu) ಸಿನಿಮಾ ಕೂಡ ಚಿತ್ರೀಕರಣ ಹಂತದಲ್ಲೇ ಸಾಕಷ್ಟು ಭರವಸೆ ಮೂಡಿಸಿದೆ. ಈ ಚಿತ್ರ  ವೇಗದ ಸೆಟ್ ವರ್ಕ್ ನಿರ್ಮಾಣ ಮಾಡಿ ಮೊದಲ ಹಂತ ಗಿನ್ನಿಸ್ (Guinness Record) ದಾಖಲಿಸಿದೆ. ಇಗ ಎರಡನೇ ಹಂತದ ಗಿನ್ನಿಸ್ ಸರದಿ.

    ಮಡಿಕೇರಿಯಲ್ಲಿ (Madikeri) ಮಳೆಯಲ್ಲೇ ರಾತ್ರಿಯಿಂದ ಚಿತ್ರೀಕರಣ ಆರಂಭಿಸಿದೆ ಚಿತ್ರತಂಡ. ಸಿ.ವಿ. ರಾಮನ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಜನಾರ್ದನ್ ಪಿ ಜಾನು (Janardhan P Janu) ಗಿನ್ನಿಸ್ ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಅತೀ ವೇಗದ ಕಮರ್ಷಿಯಿಲ್ ಮೂವಿ ನಿರ್ಮಾಣ ಮಾಡಿ ಗಿನ್ನಿಸ್ ದಾಖಲೆ ಬರೆಯಲು ಚಿತ್ರತಂಡ ಮುಂದಾಗಿದೆ.  ಚಿತ್ರೀಕರಣದ ಸ್ಥಳದಲ್ಲಿಯೇ 30 ದಿನಗಳ ಕಾಲ ಗಿನ್ನಿಸ್ ವೀಕ್ಷೆಣೆಯ ತಂಡದ ಸದಸ್ಯರು ಉಪಸ್ಥಿತರಿರುತ್ತಾರೆ. ಇಂದಿನಿಂದ 30 ದಿನಗಳಲ್ಲಿ  ಚಿತ್ರೀಕರಣ ಪೂರ್ಣಗೊಳಿಸಿ, ಚಿತ್ರವನ್ನು ತರೆಗೆ ತರುವ ಪ್ರಕ್ರಿಯೆ ಆರಂಭವಾಗಿದೆ.

    ಮಧ್ಯರಾತ್ರಿ 12ಗಂಟೆಯಿಂದ ಶೂಟಿಂಗ್ ಆರಂಭಿವಾಗಿದೆ. ದಿನದ 24 ಗಂಟೆಯೂ ಶೂಟಿಂಗ್, ಲೈವ್ ಎಡಿಟಿಂಗ್, ರೀರೆಕಾರ್ಡಿಂಗ್ ಎಲ್ಲಾ ಕಾರ್ಯಗಳು ಚಿತ್ರೀಕರಣ ಸ್ಥಳದಲ್ಲಿಯೇ ನಡೆಸಲು ಸಿದ್ಧತೆಯಾಗಿದೆ.  ಯಾವುದೇ ಅಡೆತಡೆ ಯಾಗದಂತೆ ಯೋಜನೆ ಹಾಕಿಕೊಂಡು ಚಿತ್ರಿಕರಣ ಆರಂಭಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಒಟ್ಟು 4 ಕ್ಯಾಮರಗಳು, 150 ಎಕರೆ ವಿಸ್ತೀರ್ಣದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದ ಅತ್ಯಂತ ಹಿರಿಯ ಶ್ವಾನ ನಿಧನ – ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆದಿದ್ದ ʻಪೆಬ್ಲೆಸ್‌ʼ

    ವಿಶ್ವದ ಅತ್ಯಂತ ಹಿರಿಯ ಶ್ವಾನ ನಿಧನ – ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬರೆದಿದ್ದ ʻಪೆಬ್ಲೆಸ್‌ʼ

    ವಾಷಿಂಗ್ಟನ್‌: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದೇ ಹೆಸರಾಗಿ ಗಿನ್ನಿಸ್‌ ರೆಕಾರ್ಡ್‌ (Guinness World Record) ಬರೆದಿದ್ದ ಪೆಬ್ಲೆಸ್‌ (23) ದಕ್ಷಿಣ ಕೆರೊಲಿನಾ ಟೇಲರ್ಸ್‌ನಲ್ಲಿ ಸಾವನ್ನಪ್ಪಿದೆ.

    ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಮಾರ್ಚ್ 28, 2000 ರಂದು ಪೆಬಲ್ಸ್‌ ಜನಿಸಿತ್ತು. ಮಾಲೀಕರಾದ ಬಾಬಿ ಮತ್ತು ಜೂಲಿ ಗ್ರೆಗೊರಿ ಅವರ ಸಾಕು ಪ್ರಾಣಿಯಾಗಿತ್ತು. ಇದನ್ನೂ ಓದಿ: ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    ಗ್ರೆಗೊರಿ ಪ್ರಕಾರ, ಪೆಬ್ಲೆಸ್‌ (Pebbles) ಸಂತೋಷದಾಯಕ ಮತ್ತು ದೀರ್ಘ ಜೀವನವನ್ನು ನಡೆಸಿದೆ. ಮನೆಯ ರಾಣಿಯಂತಿತ್ತು. ಪೆಬ್ಲೆಸ್‌ ತನ್ನ ಸಂಗಾತಿ ರಾಕಿಯೊಂದಿಗೆ ಜೀವನ ನಡೆಸಿತ್ತು. 2017 ರಲ್ಲಿ 16 ನೇ ವಯಸ್ಸಿನಲ್ಲಿ ರಾಕಿ ನಿಧನ ಹೊಂದಿತು. ಪೆಬಲ್ಸ್ 32 ನಾಯಿಮರಿಗಳಿಗೆ ಜನ್ಮ ನೀಡಿತ್ತು ಎಂದು ತಿಳಿಸಿದ್ದಾರೆ.

    ಪೆಬ್ಲೆಸ್‌ಗೆ ಮಾಂಸ ಆಧಾರಿತ ಪೋಷಕಾಂಶಯುಕ್ತ ಆಹಾರ ನೀಡಲಾಗುತ್ತಿತ್ತು. ಹೀಗಾಗಿ ಶ್ವಾನ ದೀರ್ಘಾಯುಷ್ಯ ಬದುಕಿತು. ನಮ್ಮ ಕುಟುಂಬದವರ ಪ್ರೀತಿ ಮತ್ತು ಕಾಳಜಿಗೆ ಶ್ವಾನ ಪಾತ್ರವಾಗಿತ್ತು ಎಂದು ಗ್ರೆಗೊರಿ ಸ್ಮರಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

    Live Tv
    [brid partner=56869869 player=32851 video=960834 autoplay=true]

  • ಗಿನ್ನಿಸ್ ರೆಕಾರ್ಡ್ ಸೇರಿತು ಮಹಿಳೆ ಹೆಸರು – ಈಕೆ ಹೆಸರಲ್ಲಿದೆ ಬರೋಬ್ಬರಿ 1,019 ಅಕ್ಷರ

    ಗಿನ್ನಿಸ್ ರೆಕಾರ್ಡ್ ಸೇರಿತು ಮಹಿಳೆ ಹೆಸರು – ಈಕೆ ಹೆಸರಲ್ಲಿದೆ ಬರೋಬ್ಬರಿ 1,019 ಅಕ್ಷರ

    – ಮಹಿಳೆಯ ಜನನ ಪ್ರಮಾಣ ಪತ್ರವೇ ಇದೆ 2 ಅಡಿ ಉದ್ದ
    – ಸುಮಾರು 1,019 ಅಕ್ಷರಗಳಿರುವ ಹೆಸರು

    ಹೂಸ್ಟನ್: ಹೆತ್ತವರು ತಮ್ಮ ಮಕ್ಕಳಿಗೆ ಹೆಸರಿಡುವಾಗ ನಾನಾ ರೀತಿಯಲ್ಲಿ ಯೋಚಿಸುತ್ತಾರೆ. ಮಗುವಿನ ರೂಪ ಲಾವಣ್ಯ, ಹುಟ್ಟಿದ ಸಂದರ್ಭಕ್ಕೆ ತಕ್ಕಂತೆ ಹೆಸರಿಡುವವರಿದ್ದಾರೆ. ಎಷ್ಟೋ ಮಂದಿ ತಮ್ಮ ಇಷ್ಟದ ವ್ಯಕ್ತಿ, ನಟ, ನಟಿ ಹೆಸರೋ ಅಥವಾ ಕುಟುಂಬದ ಸದಸ್ಯರ ನೆನಪಿನಾರ್ಥ ಅವರ ಹೆಸರನ್ನೇ ಇಡುವವರಿದ್ದಾರೆ. ಇನ್ನೂ ಕೆಲವರು ಶಾಸ್ತ್ರ, ಸಂಪ್ರದಾಯಕ್ಕೆ ತಕ್ಕಂತೆ ಮಕ್ಕಳಿಗೆ ಹೆಸರಿಡುತ್ತಾರೆ.

    ಆದರೆ ಇಲ್ಲೊಬ್ಬರು ತಮ್ಮ ಮಗಳಿಗೆ ಕೇಳುಗರು ಅಚ್ಚರಿ ಪಡುವಂತ ಹೆಸರಿಟ್ಟಿದ್ದಾರೆ. ಆ ಹೆಸರು ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದ್ದು, ರೆಕಾರ್ಡ್ ಕೂಡ ಮಾಡಿದೆ. ಜಗತ್ತಿನ ಅತೀ ಉದ್ದದ ಹೆಸರು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಆ ಹೆಸರು ಕೇಳಿದರೆ ಖಂಡಿತ ನಿಮಗೂ ಅಚ್ಚರಿಯಾಗಬಹುದು. ಇದನ್ನೂ ಓದಿ: ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

    ಹೌದು, ಉತ್ತರ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‍ನ ಜೇಮ್ಸ್ ವಿಲಿಯಮ್ಸ್ ಮತ್ತು ಸಾಂಡ್ರಾ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ವಿಶಿಷ್ಟವಾದ ಹೆಸರನ್ನು ಇಟ್ಟಿದ್ದಾರೆ. ಆ ಹೆಸರಿನ ಜನನ ಪ್ರಮಾಣ ಪತ್ರವೇ 2 ಅಡಿ ಉದ್ದ ಇದೆ. ಸುಮಾರು 1,019 ಅಕ್ಷರಗಳಿರುವ ಹೆಸರನ್ನು ಆ ಮಹಿಳೆ ತನ್ನ ಮಗಳಿಗೆ ನಾಮಕರಣ ಮಾಡಿದ್ದಾರೆ.

    ಹೆಸರೇನು ಗೊತ್ತೆ?
    Rhoshandiatellyneshiaunneveshenkescianneshaimondrischlyndasaccarnaerenquellenendrasamecashaunettethalemeicoleshiwhalhinive’onchellecaundenesheaalausondrilynnejeanetrimyranaekuesaundrilynnezekeriakenvaunetradevonneyavondalatarneskcaevontaepreonkeinesceellaviavelzadawnefriendsettajessicannelesciajoyvaelloydietteyvettesparklenesceaundrieaquenttaekatilyaevea’shauwneoraliaevaekizzieshiyjuanewandalecciannereneitheliapreciousnesceverroneccaloveliatyronevekacarrionnehenriettaescecleonpatrarutheliacharsalynnmeokcamonaeloiesalynnecsiannemerciadellesciaustillaparissalondonveshadenequamonecaalexetiozetiaquaniaenglaundneshiafrancethosharomeshaunnehawaineakowethauandavernellchishankcarlinaaddoneillesciachristondrafawndrealaotrelleoctavionnemiariasarahtashabnequckagailenaxeteshiataharadaponsadeloriakoentescacraigneckadellanierstellavonnemyiatangoneshiadianacorvettinagodtawndrashirlenescekilokoneyasharrontannamyantoniaaquinettesequioadaurilessiaquatandamerceddiamaebellecescajamesauwnneltomecapolotyoajohnyaetheodoradilcyana

    ವರ್ಲ್ಡ್‌ ರೆಕಾರ್ಡ್
    ತನ್ನ ಮಗಳಿಗೆ ಈ ಹೆಸರಿಡಲು ಸಾಂಡ್ರಾ ವಿಲಿಯಮ್ಸ್ ಅವರು ಸತತ ಒಂದು ವರ್ಷ ಯೋಚನೆ ಮಾಡಿದ್ದರು. ಉದ್ದದ ಹೆಸರು ಪಡೆದಿರುವ ಮಹಿಳೆ 1984ರಲ್ಲಿ ಜನಿಸಿದರು. ಈಗ ಆಕೆಯ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಮಾಡಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

    1 ವರ್ಷ ಯೋಚಿಸಿದ್ದ ತಾಯಿ
    ಈಕೆ ಹೆಸರು ಉದ್ದ ಎಂಬ ಕಾರಣಕ್ಕೆ Jameshauwnnel ಅಥವಾ Jamie’ ಅಂತ ಎರಡು ಅಡ್ಡ ಹೆಸರುಗಳಿಂದ ಸ್ನೇಹಿತರು ಕರೆಯುತ್ತಾರೆ. ಸಂಬಂಧಿಕರು, ಹಲವು ದೇಶಗಳು ಮತ್ತು ನಗರಗಳು, ಸ್ನೇಹಿತರು, ಪ್ರೀತಿ ಪಾತ್ರರ ಹೆಸರುಗಳನ್ನು ಸೇರಿಸಿ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ.

    ರಿಜಿಸ್ಟ್ರಾರ್‌ಗೆ ಕಿರಿಕಿರಿ
    ಈ ಹೆಸರನ್ನು ನೋಂದಣಿ ಮಾಡುವಾಗ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತ್ತು. ಇಷ್ಟು ದೊಡ್ಡದಾದ ಹೆಸರನ್ನು ಹೇಗೆ ನೋಂದಣಿ ಮಾಡುವುದು ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಈಕೆ ಹೆಸರಿನ ನಂತರ ರಾಜ್ಯ ರಿಜಿಸ್ಟ್ರಾರ್ ಡಬ್ಲ್ಯೂ.ಡಿ.ಕ್ಯಾರೊಲ್ ಅವರು, 51/8 ಇಂಚಿನ ಜಾಗದಲ್ಲಿ ಎರಡು ಟೈಪ್‍ರೈಟ್ ಲೈನ್‍ಗಳಿಗೆ ಹೊಂದಿಕೆಯಾಗದ ಯಾವುದೇ ಹೆಸರನ್ನು ಕಚೇರಿ ಸ್ವೀಕರಿಸುವುದಿಲ್ಲ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರು.

    ಇಷ್ಟದ ಹೆಸರಿಡಲು ಕೋರ್ಟ್ ಅನುಮತಿ
    ಪಾಲಕರು ತಮ್ಮ ಮಕ್ಕಳಿಗೆ ಏನು ಬೇಕಾದರೂ ಹೆಸರಿಡಬಹುದು ಎಂದು ರಾಜ್ಯದಲ್ಲಿ ಮೂರು ನ್ಯಾಯಾಲಯಗಳು ತೀರ್ಪು ನೀಡಿವೆ. ಆದರೆ ಕ್ಯಾರೊಲ್ ಅವರ ಆದೇಶ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಈ ಬಗ್ಗೆ ರಾಜ್ಯ ರಿಜಿಸ್ಟ್ರಾರ್ ಕಚೇರಿಯ ಸಹಾಯಕ ಅಧಿಕಾರಿಯನ್ನು ಕೇಳಿದರೆ, ಕ್ಯಾರೊಲ್ ಅವರ ಆದೇಶವನ್ನು ಟೆಕ್ಸಾಸ್‍ನಲ್ಲಿ ಇನ್ನೂ ಯಾರೂ ಪ್ರಶ್ನಿಸಿಲ್ಲ ಎಂದು ಹೇಳಿದ್ದಾರೆ.

  • 407 ಸಿನಿಮಾ ಹೆಸರನ್ನು ಬಳಸಿ ಸ್ಟಾರ್ ನಟನ ಭಾವಚಿತ್ರ – ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಅಭಿಮಾನಿ ಹೆಸರು

    407 ಸಿನಿಮಾ ಹೆಸರನ್ನು ಬಳಸಿ ಸ್ಟಾರ್ ನಟನ ಭಾವಚಿತ್ರ – ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಅಭಿಮಾನಿ ಹೆಸರು

    ಮುಂಬೈ: ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರ ಫೋಟೋ, ಕಟೌಟ್‍ಗಳಿಗೆ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವ ಮೂಲಕ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸುವುದನ್ನು ನೋಡಿರುತ್ತೇವೆ. ಆದರೆ ಕೇರಳದ ವ್ಯಕ್ತಿಯೊಬ್ಬರು 407 ಸಿನಿಮಾಗಳ ಹೆಸರನ್ನು ಬರೆಯುವ ಮೂಲಕ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಬಿಡಿಸಿದ್ದಾರೆ.

    ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಮಮ್ಮುಟ್ಟಿ ಕೂಡ ಒಬ್ಬರಾಗಿದ್ದು, ಅವರು ತಮ್ಮದೇ ಆದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಕೇರಳದ ಮಲಪ್ಪುರಂನ ಅರ್ಷದ್ ಎಂಬ ಅಭಿಮಾನಿ 407 ಸಿನಿಮಾದ ಹೆಸರುಗಳನ್ನು ಬಳಸಿಕೊಂಡು, ಅಕ್ಷರಗಳ ಮೂಲಕ ಭಾವಚಿತ್ರವನ್ನು ಬಿಡಿಸಿದ್ದಾರೆ.

    ಸರಳವಾಗಿ ಹೇಳುವುದಾದರೆ ಪದಗಳನ್ನು ಅಥವಾ ಅಕ್ಷರಗಳನ್ನು ಬಳಸಿ ರಚಿಸಿದ ಚಿತ್ರಕಲೆ ಎಂದೇ ಹೇಳಬಹುದು. ಈ ಚಿತ್ರಕಲೆಯನ್ನು ಬಿಡಿಸಿದ ಅರ್ಷದ್ ಇದೀಗ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್(ಎಬಿಆರ್) ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಗಳಿಸಿದ್ದು, ದಾಖಲೆಯ ಪುಸ್ತಕಕ್ಕೆ ಇವರ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ಎಬಿಆರ್ ಕಡೆಯಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಕೇವಲ ಮಲಯಾಳಂ ಮಾತ್ರವಲ್ಲದೇ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೂಡ ಅಕ್ಷರವನ್ನು ಭಾವಚಿತ್ರದಲ್ಲಿ ಮುದ್ರಿಸಲಾಗಿದೆ. ಜೊತೆಗೆ ಈ ಭಾವ ಚಿತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅರ್ಷದ್, ನಾನು ಮುಮ್ಮಟ್ಟಿಯವರ ದೊಡ್ಡ ಅಭಿಮಾನಿ, ಅವರ ಚಲನಚಿತ್ರಗಳ 407 ಹೆಸರನ್ನು ಐದು ಭಾಷೆಯಲ್ಲಿ ಬರೆಯಲು ನಿರ್ಧರಿಸಿ ಭಾವಚಿತ್ರವನ್ನು ಬಿಡಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು : ಜಾಕ್ವೆಲಿನ್ ಫರ್ನಾಂಡಿಸ್

  • ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ರೈಡ್ – ಗಿನ್ನಿಸ್ ರೆಕಾರ್ಡ್ ಮಾಡಿದ ಯುವಕ

    ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ರೈಡ್ – ಗಿನ್ನಿಸ್ ರೆಕಾರ್ಡ್ ಮಾಡಿದ ಯುವಕ

    ನವದೆಹಲಿ: ಯವಕನೊಬ್ಬ ಕೇವಲ 8 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ತಲುಪಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

    ಅದಿಲ್ ತೆಲಿ(23) ಗಿನ್ನಿಸ್ ದಾಖಲೆ ಬರೆದ ಯುವಕನಾಗಿದ್ದಾರೆ. ಅದಿಲ್ ಬುಡ್ಗಾಮ್ ಜಿಲ್ಲೆಯ ನರ್ಬಲ್ ಗ್ರಾಮದವನಾಗಿದ್ದಾರೆ. ಸೈಕಲ್‍ನಲ್ಲಿ ಪ್ರಯಾಣವನ್ನು ಆರಂಭಿಸಿದ ಯುವಕ ಕಾಶ್ಮಿರದಿಂದ ಕನ್ಯಾ ಕುಮಾರಿಯವರೆಗೆ ಪ್ರವಾಸ ಮಾಡಿದ್ದಾರೆ.

     

    View this post on Instagram

     

    A post shared by Adil Teli (@adilteliofficial)

    ಮಾರ್ಚ್ 22 ಶ್ರೀನಗರದ ಘಂಟಾ ನಿಂದ ಬೆಳಗ್ಗೆ 7:30ಕ್ಕೆ ಅದಿಲ್ ಸೈಕಲ್‍ನಲ್ಲಿ ಪ್ರಯಾಣವನ್ನು ಆರಂಭಿಸಿದರು. ಎಂಟು ದಿನ, ಒಂದು ಗಂಟೆ 37 ನಿಮಿಷಗಳಲ್ಲಿ 3,600ಕಿಲೋ ಮೀಟರ್ ದೂರದ ಪ್ರಯಾಣ ಮಾಡಿದ್ದಾರೆ. ಮಾರ್ಚ್ 30 ರಂದು ಬೆಳಗ್ಗೆ 9 ಗಂಟೆಗೆ ಕನ್ಯಾಕುಮಾರಿ ತಲುಪಿದ್ದಾರೆ.

     

    View this post on Instagram

     

    A post shared by Adil Teli (@adilteliofficial)

    ಕಷ್ಟಪಟ್ಟು ಕೆಲಸ ಮಾಡಿ, ಆಗ ಅದ್ಭುತ ಸಂಗತಿಗಳನ್ನು ಸಂಭವಿಸುತ್ತವೆ ಎಂದು ಬರೆದುಕೊಂಡು ಸೈಕಲ್ ಪಕ್ಕದಲ್ಲಿ ನಿಂತಿರುವ ಫೋಟೋವನ್ನು ಅದಿಲ್ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಅದಿಲ್‍ನ ಸಾಧನೆಯ ವೀಡಿಯೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

     

    View this post on Instagram

     

    A post shared by Adil Teli (@adilteliofficial)

    ಈ ಹಿಂದೆ ಎಂಟು ದಿನ, ಏಳು ಗಂಟೆ 38 ನಿಮಿಷಗಳಲ್ಲಿ ತಮ್ಮ ಮಾರ್ಗವನ್ನು ಪೂರ್ಣಗೊಳಿಸಿದ ಓಂ ಮಹಾಜನ್(17) ಅವರು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು.

  • ಎಮ್ಮೆಯನ್ನು ಹೆಗೆಲ ಮೇಲೆ ಎತ್ತಿಕೊಂಡ ವ್ಯಕ್ತಿ- ಆಧುನಿಕ ಭೀಮನ ಹೆಸರಿನಲ್ಲಿ 63 ಗಿನ್ನಿಸ್ ರೆಕಾರ್ಡ್

    ಎಮ್ಮೆಯನ್ನು ಹೆಗೆಲ ಮೇಲೆ ಎತ್ತಿಕೊಂಡ ವ್ಯಕ್ತಿ- ಆಧುನಿಕ ಭೀಮನ ಹೆಸರಿನಲ್ಲಿ 63 ಗಿನ್ನಿಸ್ ರೆಕಾರ್ಡ್

    ಸಾಮಾನ್ಯವಾಗಿ ಮನುಷ್ಯರು ಎಮ್ಮೆ ಮೇಲೆ ಕುಳಿತಿರುವುದನ್ನು ನಾವು ನೋಡಿದ್ದೇವೆ. ಆದರೆ ವ್ಯಕ್ತಿಯೋರ್ವ ತನ್ನ ಎರಡು ಕೈಗಳಿಂದ ಎಮ್ಮೆಯನ್ನು ಮಗುವಿನಂತೆ ಸುಲಭವಾಗಿ ಎತ್ತಿ ತನ್ನ ಭುಜದ ಮೇಲೆ ಇರಿಸಿಕೊಂಡಿರುವ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಮಂದಿ ನಿಬ್ಬೆರಗಾಗುತ್ತಿದ್ದಾರೆ.

    ವೀಡಿಯೋದಲ್ಲಿರುವ ವ್ಯಕ್ತಿಯನ್ನು ಡಿಮಿಟ್ರೋ ಖಲಾಡ್ಜಿ(41) ಎಂದು ಗುರುತಿಸಲಾಗಿದ್ದು, ಈತ ಉಕ್ರೇನ್ ನಿವಾಸಿಯಾಗಿದ್ದಾರೆ. ಅದ್ಬುತ ಶಕ್ತಿ ಹೊಂದಿರುವ ಈತ ಎಮ್ಮೆಯನ್ನು ಸಲೀಸಾಗಿ ತನ್ನ ಭುಜದ ಮೇಲೆ ಮಗುವಿನಂತೆ ಎತ್ತಿಕೊಳ್ಳುತ್ತಾರೆ. ಅಲ್ಲದೆ ಕುದುರೆ, ಒಂಟೆ ಇತರ ತೂಕವಿರುವ ಪ್ರಾಣಿಗಳನ್ನು ಸಹ ತನ್ನ ಹೆಗಲ ಮೇಲೆ ಹೊತ್ತಿಕೊಳ್ಳುತ್ತಾರೆ.

    ಪ್ರಾಣಿಗಳನಷ್ಟೇ ಅಲ್ಲದೆ ಡಿಮಿಟ್ರೋ ಖಲಾಡ್ಜಿ ಒಂದೇ ಬಾರಿ 6 ಮಂದಿಯನ್ನು ಎತ್ತುತ್ತಾರೆ. ಸದ್ಯ ಈತನ ಶಕ್ತಿ ನೋಡಿದವರೆಲ್ಲಾ ಆಶ್ಚರ್ಯಗೊಂಡು ಭೀಮ ಎಂದು ಕರೆಯಲಾರಂಭಿಸಿದ್ದಾರೆ. ಡಿಮಿಟ್ರೋ ಖಲಾಡ್ಜಿ ಸರ್ಕಸ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಂದೇ ಕೈನಲ್ಲಿ 150 ಕೆಜಿ ತೂಕವನ್ನು ಎತ್ತುವಷ್ಟು ಬಲಶಾಲಿಯಾಗಿದ್ದಾರೆ. ಅಲ್ಲದೆ ಈತನ ಇನ್‍ಸ್ಟಾಗ್ರಾಮ್ ಖಾತೆಯ ಪೂರ್ತಿ ಇಂತಹ ಅನೇಕ ವೀಡಿಯೋಗಳಿದ್ದು, 63 ಗಿನ್ನಿಸ್ ದಾಖಲೆ ಮಾಡಿದ್ದಾರೆ.

    ಡಿಮಿಟ್ರೋ ಖಲಾಡ್ಜಿ ಒಬ್ಬ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದು, 2009ರಲ್ಲಿ ಉಕ್ರೇನ್ ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿ ಫೈನಲ್‍ವರೆಗೂ ತಲುಪಿದ್ದರು. ಬಳಿಕ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಜೊತೆಗೆ ಡಿಮಿಟ್ರೋ ಖಲಾಡ್ಜಿ ಹಲವು ಕ್ರೀಡಾಪಟುಗಳ ಕಥೆಗಳನ್ನು ಬರೆದಿದ್ದಾರೆ ಹಾಗೂ 2010 ರಲ್ಲಿ ರಷ್ಯಾದ ಗೋಲ್ಡನ್ ಪೆನ್ ಎಂಬ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ 2013ರಲ್ಲಿ ಇವಾನ್ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • 1.9 ವರ್ಷಕ್ಕೆ ಗಿನ್ನಿಸ್ ದಾಖಲೆ ಬರೆದ ಪೋರ

    1.9 ವರ್ಷಕ್ಕೆ ಗಿನ್ನಿಸ್ ದಾಖಲೆ ಬರೆದ ಪೋರ

    ಹೈದರಾಬಾದ್: ಜ್ಞಾಪಕ ಶಕ್ತಿ ಮೂಲದ ಹೈದರಾಬಾದ್‍ನ 1 ವರ್ಷ 9 ತಿಂಗಳ ಪೋರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದ್ದಾನೆ.

    ಹೈದರಾಬಾದ್‍ನ ಆದಿತ್ ವಿಶ್ವನಾಥ ಗೌರಿ ಶೆಟ್ಟಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಮತ್ತು ಸ್ಮರಣ ಶಕ್ತಿಗಾಗಿ ಮತ್ತೆರಡು ದಾಖಲೆಗಳನ್ನು ನಿರ್ಮಿಸಿದ್ದಾನೆ. ವರ್ಣಮಾಲೆ, ಚಿತ್ರಾತ್ಮಕ ವಸ್ತುಗಳು, ಲೋಗೋ, ಧ್ವಜ, ಹಣ್ಣು, ಪ್ರಾಣಿಗಳನ್ನು ಪುಟ್ಟ ಪೋರ ಗುರುತಿಸುವುದರೊಂದಿಗೆ ದಾಖಲೆ ಬರೆದಿದ್ದಾನೆ. ಈ ಮೂಲಕ ಸಣ್ಣ ವಯಸ್ಸಿನಲ್ಲೇ ತಮ್ಮ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದಾನೆ.

    ಈ ಕುರಿತು ಮಾಹಿತಿ ನೀಡಿರುವ ತಾಯಿ ಸ್ನೇಹಿತಾ ಅವರು, ಆದಿತ್ ಕೇವಲ ಸ್ಥಳೀಯ ಅಂಶಗಳನಷ್ಟೇ ಅಲ್ಲದೇ ಜಾಗತಿಕ ಅಂಶಗಳನ್ನು ನೆನಪಿಟ್ಟುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ಆದಿತ್ಯ ವಯಸ್ಸಿನ ಮಕ್ಕಳು ನರ್ಸರಿ ಹಾಡು ಕಲಿಯಲು ಪ್ರಯತ್ನಿಸುತ್ತಾರೆ. ಆದರೆ ಆದಿತ್ ಬಣ್ಣ, ಪ್ರಾಣಿ, ಧ್ವಜ, ಹಣ್ಣು, ಆಕೃತಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳು, ದೇವತೆಗಳು, ಕಾರಿನ ಲೋಗೋ, ವರ್ಣಮಾಲೆ, ಪ್ರಾಣಿಗಳು, ದೇಹದ ಭಾಗಗಳು, ವೈವಿಧ್ಯಮಯ ಚಿತ್ರಗಳನ್ನು ಗುರುತಿಸಬಲ್ಲ ಎಂದು ತಿಳಿಸಿದ್ದಾರೆ.

    ನಾವು ಮೊದಲು ಆದಿತ್ ಸಾಮರ್ಥ್ಯವನ್ನು ಪರೀಕ್ಷಿಸಲು ಭಾರತದ ಧ್ವಜ ಚಿತ್ರವನ್ನು ತೋರಿಸಿದ್ದೇವು. ಸ್ವಾತಂತ್ರ್ಯ ದಿನಾವಣೆಯ ವೇಳೆ ಮೋದಿ ಭಾಷಣ ಮಾಡುತ್ತಿದ್ದ ಆದಿತ್ ಧ್ವಜಕ್ಕೆ ನಮಸ್ಕಾರ ಮಾಡುತ್ತಿದ್ದ. ಒಮ್ಮೆ ಧ್ವಜ ನೋಡಿ ಬೇಗನೆ ಅರಿತುಕೊಳ್ಳಲು ಸಾಧ್ಯ ಎಂದು ಆಗ ನಮಗೆ ತಿಳಿಯಿತು. ಆ ಬಳಿಕ ಬೇರೆ ಬೇರೆ ದೇಶಗಳ ಧ್ವಜಗಳನ್ನು ಆತನಿಗೆ ಪರಿಚಯಿಸಲಾಯಿತು. ಆದಿತ್ ಕಾರ್ಯ ನೆನಪು ಈಗಿನ ವಯಸ್ಕರಿಗೂ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿದೆ.

    ಮಗುವಿನ ಸಾಧನೆ ಕುರಿತು ಪ್ರತಿಕ್ರಿಯೆ ನೀಡಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ, ಆದಿತ್ ವಸ್ತುಗಳನ್ನು ಗುರುತಿಸಲು ತೀಕ್ಷ್ಣವಾದ ಸ್ಮರಣೆ ಹೊಂದಿರುವ ಅಸಾಧಾರಣ ಮಗು. ಜೊತೆಗೆ ದೇಶಗಳ ಧ್ವಜ, ಕಾರಿನ ಲೋಗೋ, ಚಿತ್ರಗಳು, ವಾಹನ ನಕ್ಷೆ ಸೇರಿದಂತೆ ವರ್ಣಮಾಲೆಗಳನ್ನು 1 ವರ್ಷ 9 ತಿಂಗಳ ವಯಸ್ಸಿನಲ್ಲಿ ಗುರುತಿಸುತ್ತಾನೆ ಎಂದು ತಿಳಿಸಿದೆ.