Tag: ಗಿಚ್ಚಿ ಗಿಲಿ ಗಿಲಿ 2

  • ಹಿಟ್‌ & ರನ್‌ ಕೇಸ್‌ನಲ್ಲಿ ‘ಗಿಚ್ಚಿ ಗಿಲಿ ಗಿಲಿ’ ಚಂದ್ರಪ್ರಭಾ

    ಹಿಟ್‌ & ರನ್‌ ಕೇಸ್‌ನಲ್ಲಿ ‘ಗಿಚ್ಚಿ ಗಿಲಿ ಗಿಲಿ’ ಚಂದ್ರಪ್ರಭಾ

    ‘ಗಿಚ್ಚಿ ಗಿಲಿ ಗಿಲಿ’ (Gichi Gichi Gili Gili) ವಿನ್ನರ್ ಚಂದ್ರಪ್ರಭಾ (Chandraprabha)  ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಪಘಾತ ಮಾಡಿ ಮಾನವೀಯತೆಗೂ ಕಾರು ನಿಲ್ಲಿಸದೇ ನಟ ಪರಾರಿಯಾಗಿದ್ದಾರೆ. ಸೋಮವಾರ ರಾತ್ರಿ (ಸೆ.4)  ಚಿಕ್ಕಮಗಳೂರಿನಲ್ಲಿ ಈ ಅಪಘಾತ ನಡೆದಿದ್ದು, ಬೈಕ್‌ನಲ್ಲಿದ್ದ ಯುವಕ ಮಾಲ್ತೇಶ್‌ಗೆ ಗುದ್ದಿ ಚಂದ್ರಪ್ರಭಾ ಎಸ್ಕೇಪ್ ಆಗಿದ್ದಾರೆ.

    ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಾಲ್ತೇಶ್‌ಗೆ ಏನಾಯಿತು ಎಂದು ನೋಡುವ ಸೌಜನ್ಯ ಕೂಡ ತೋರಿಲ್ಲ. ಈ ಕಾರು ಚಂದ್ರಪ್ರಭಾ ಅವರಿಗೆ ಸೇರಿದ್ದಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ:35 ಸಾವಿರ ಮೊತ್ತದ ಸಿಂಪಲ್ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

    ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಗುರು ಕ್ಲೀನ್ ಮಾಡೋದಕ್ಕೆ ಟೂತ್‌ಬ್ರಶ್ ಬಳಸುತ್ತೀನಿ ಎಂದ ನಿವಿಗೆ ನೆಟ್ಟಿಗರಿಂದ ಕ್ಲಾಸ್

    ಉಗುರು ಕ್ಲೀನ್ ಮಾಡೋದಕ್ಕೆ ಟೂತ್‌ಬ್ರಶ್ ಬಳಸುತ್ತೀನಿ ಎಂದ ನಿವಿಗೆ ನೆಟ್ಟಿಗರಿಂದ ಕ್ಲಾಸ್

    ‘ಬಿಗ್ ಬಾಸ್’ (Bigg Boss Kannada) ಬೆಡಗಿ ನಿವೇದಿತಾ ಗೌಡ ‘ಗಿಚ್ಚಿ ಗಿಲಿ ಗಿಲಿ 2’ (Gicci Gili Gili 2) ಶೋ ಮುಗಿದ ಬಳಿಕ ತಮ್ಮ ಯೂಟ್ಯೂಬ್ ಸ್ಟೋರಿಗಳನ್ನ ಮಾಡುತ್ತ ಬ್ಯುಸಿಯಾಗಿದ್ದಾರೆ. ಆಲ್ಬಂ ಸಾಂಗ್, ಸಿನಿಮಾ ಅಂತಾ ಒಂದಲ್ಲಾ ಒಂದು ವಿಚಾರವಾಗಿ ಚಂದನ್ ಪತ್ನಿ ಆಕ್ಟೀವ್ ಆಗಿದ್ದಾರೆ. ಇದೀಗ ನಟಿ ಟೂತ್‌ಬ್ರಶ್‌ನಲ್ಲಿ ಉಗುರು ಕ್ವೀನ್ ಮಾಡುವ ಬಗ್ಗೆ ಅಚ್ಚರಿಯ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ

    ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ದೊಡ್ಮನೆಗೆ ಕಾಲಿಟ್ಟ ಮೇಲೆ ಅವರ ಲಕ್ ಚೇಂಜ್ ಆಯ್ತು. ನೇಮು, ಫೇಮ್ ಜೊತೆಗೆ ಒಳ್ಳೆಯ ಲೈಫ್ ಪಾರ್ಟ್ನರ್‌ ಕೂಡ ಕಂಡುಕೊಂಡರು. ಈಗ ಚಂದನ್ ಶೆಟ್ಟಿ (Chandan Shetty) ಜೊತೆಗಿನ ದಾಂಪತ್ಯ (Wedding) ಬದುಕು ಮತ್ತು ಸಿನಿಮಾ ಕೆರಿಯರ್ ಎರಡನ್ನು ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಸದ್ಯ ತನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ನಿವಿ ಆಡಿದ ಮಾತುಗಳು ಸಖತ್ ಸದ್ದು ಮಾಡುತ್ತಿದೆ.

    ಶೂಟಿಂಗ್ ಸಮಯದಲ್ಲಿ ನಾನು ಎರಡು ಬ್ಯಾಗ್ ತೆಗೆದುಕೊಂಡು ಹೋಗುವೆ. ಸಣ್ಣ ಬ್ಯಾಗ್‌ನ ಅಸಿಸ್ಟೆಂಟ್ ಕೈಗೆ ಕೊಡುವೆ. ಏನ್ ಬೇಕಿದ್ದರೂ ಮಾಡಿ ಆದರೆ ನನ್ನ ಬ್ಯಾಗ್ ಮಾತ್ರ ಮಿಸ್ ಮಾಡಬೇಡಿ. ಅದು ನಿಮ್ಮ ಜೊತೆಗಿರಲಿ. ಏಕೆಂದರೆ ನನ್ನ ದುಬಾರಿ ವಸ್ತುಗಳು ಆ ಬ್ಯಾಗ್‌ನಲ್ಲಿ ಇರುತ್ತದೆ. ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ನನಗೆ ಪಾತ್ರಗಳು ಇರುತ್ತದೆ. ಒಂದು ಸ್ಕಿಟ್ ನಡೆದ ನಂತರ ಮತ್ತೊಂದಕ್ಕೆ ಬದಲಾಗಬೇಕು. ಶೂಟಿಂಗ್ ಮುಗಿಸಿದ ಮರು ದಿನ ಹಾಸಿಗೆಯಿಂದ ಎದ್ದೇಳಲು ಆಗಲ್ಲ. 5 ದಿನ ಟ್ರೈನಿಂಗ್ ಪಡೆದು 6ನೇ ದಿನ ಚಿತ್ರೀಕರಣ ನಡೆಯುತ್ತದೆ. ತಿಂಗಳು ಪೂರ್ತಿ ಚಿತ್ರೀಕರಣ ನಡೆಯುತ್ತದೆ.

    ಬ್ಯಾಗ್‌ನಿಂದ ನಿವೇದಿತಾ ಮೊದಲು ಹೀಲ್ ಚಪ್ಪಲ್ ತೆಗೆದು ತೋರಿಸಿದ್ದಾರೆ. ಕ್ಯಾಮೆರಾ ಎದುರು ನಾನು ಮಾತನಾಡುವಾಗ ಈ ಸ್ಲಿಪ್ಪರ್‌ ಧರಿಸಿದರೆ ಉದ್ದ ಕಾಣುವೆ. ಎಲ್ಲಾ ವಸ್ತ್ರಕ್ಕೂ ಮ್ಯಾಚ್ ಆಗುತ್ತದೆ ಎಂದಿದ್ದಾರೆ. ವೆಟ್ ವೈಪ್ಸ್ ಬ್ಯಾಗ್‌ನಲ್ಲಿ ಇರುತ್ತದೆ. ಆದರೆ ಒಂದು ದಿನವೂ ಬಳಸಿಲ್ಲವಂತೆ ಶೂಟಿಂಗ್ ಮುಗಿಯುವುದು. ರಾತ್ರಿ 2 ಗಂಟೆ ಆಗುತ್ತದೆ ಮನೆಗೆ ಬಂದು ಮಲಗಿದರೆ ಸಾಕು ಅನಿಸುತ್ತದೆ ಅಂತೆ. ಪರ್ಫ್ಯೂಮ್, ಬಾಡಿ ಲೋಷನ್, ಮೊಬೈಲ್ ಚಾರ್ಜರ್‌ ಹಾಗೂ ಕೊಡೆ ಬ್ಯಾಗ್‌ನಲ್ಲಿರುತ್ತದೆ ಎಂದು ವಿಡಿಯೋದಲ್ಲಿ ನಿವಿ ಮಾತನಾಡಿದ್ದಾರೆ.

    ಚಳಿ ತಡೆಯಲು ಕ್ಯಾಪ್ ಹಾಗೂ ಕಲರ್ ಕಲರ್ ಲಿಪ್‌ಸ್ಟಿಕ್ ಇರುತ್ತದೆ. ಯಾರಿಗೂ ಗೊತ್ತಿಲ್ಲ ಬ್ಯಾಗ್‌ನಲ್ಲಿ ನಾನು ಟೂತ್‌ಬ್ರಶ್ ಇಟ್ಟುಕೊಂಡಿರುವೆ. ಒಂದು ಸ್ಕಿಟ್‌ನಲ್ಲಿ ಅವತಾರ್ ವೇಷ ಧರಿಸಿದ್ದೆ. ಮೈ ಕೈ ಎಲ್ಲಾ ನೇರಳೆ ಬಣ್ಣ ಬಟ್ಟೆ ಹಾಕುತ್ತಾರೆ ಅಂದುಕೊಂಡೆ. ಆದರೆ ಅಷ್ಟರಲ್ಲಿ ಫುಲ್ ಬಾಡಿ ಪೇಂಟ್ ಮಾಡಿಬಿಟ್ಟರು. ಟೂತ್‌ಬ್ರಶ್ (Toothbrush) ಹಲ್ಲು ಉಜ್ಜಲು ಬಳಸಬೇಕು. ಆದರೆ ಉಗುರು ಕ್ಲೀನ್ ಮಾಡುವುದಕ್ಕೆ ಬಳಸುವೆ ಎಂದು ನಿವಿ ಹೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.‌ ನಿವಿಯ ಈ ಮಾತು ಕೇಳಿ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದೆಲ್ಲಾ ಬೇಕಾ ಎಂದಿದ್ದಾರೆ.?