Tag: ಗಿಚ್ಚಿ ಗಿಲಿ ಗಿಲಿ

  • ಹಿಟ್ & ರನ್ ಕೇಸ್: ಅಪಘಾತದ ಬಗ್ಗೆ ತಪ್ಪೊಪ್ಪಿಕೊಂಡ ನಟ ಚಂದ್ರಪ್ರಭಾ

    ಹಿಟ್ & ರನ್ ಕೇಸ್: ಅಪಘಾತದ ಬಗ್ಗೆ ತಪ್ಪೊಪ್ಪಿಕೊಂಡ ನಟ ಚಂದ್ರಪ್ರಭಾ

    ‘ಗಿಚ್ಚಿ ಗಿಲಿಗಿಲಿ’ (Gichchi Gili Gili) ವಿನ್ನರ್ ಚಂದ್ರಪ್ರಭಾ (Chandraprabha) ಕಳೆದ ಎರಡ್ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹಿಟ್ & ರನ್ ಕೇಸ್ ವಿಚಾರವಾಗಿ ಚಂದ್ರಪ್ರಭಾ ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ. ಸೆ.4ರಂದು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಚಂದ್ರಪ್ರಭಾ ಎಸ್ಕೇಪ್ ಆಗಿದ್ದರು. ಸದ್ಯ ಅಪಘಾತಕ್ಕೀಡಾದ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಂದ್ರಪ್ರಭಾ ಹಿಟ್ & ರನ್ ಕೇಸ್ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದಂತೆ ಆಕ್ಸಿಡೆಂಟ್ ಆಗಿರುವ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಚಂದ್ರಪ್ರಭಾ ಸುಳ್ಳು ಹೇಳಿಕೆ ನೀಡಿದ್ದರು. ಅಂದು ಒಂದು ಹೇಳಿ ಇಂದು ಚಂದ್ರಪ್ರಭಾ ಯೂಟರ್ನ್ ಹೊಡೆದಿದ್ದಾರೆ. ಅಪಘಾತದ ಬಗ್ಗೆ ಇದೀಗ ಚಿಕ್ಕಮಗಳೂರು ಠಾಣೆಯ ಎದುರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ರಿಷಬ್ ಶೆಟ್ಟಿ- ಐತಿಹಾಸಿಕ ಪಾತ್ರದಲ್ಲಿ ಕಾಂತಾರ ಶಿವ

    ನಾನು ಮಾಡಿದ ಕೆಲಸ ತಪ್ಪಾಯ್ತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ, ಮಾಲ್ತೇಶ್ ಕುಡಿದಿರಲಿಲ್ಲ. ಅಂದು ಅಪಘಾತದ ಬಳಿಕ ಯುವಕನ ಯೋಗಕ್ಷೇಮ ವಿಚಾರಿಸಬೇಕಿತ್ತು. ಈ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ನಾನು ಬಡವ, ತಂದೆ ಸತ್ತು 11 ವರ್ಷವಾಗಿದೆ. ಆಸ್ಪತ್ರೆಗೆ ಹೋಗಿ ಯುವಕನ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್ ಆಸ್ಪತ್ರೆಯ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಚಂದ್ರಪ್ರಭಾ ಮಾಧ್ಯಮಕ್ಕೆ ಮಾತನಾಡಿದ್ದಾರೆ.

    ಸೆ.4ರಂದು ಚಂದ್ರಪ್ರಭಾ ಅವರು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಗಾಡಿ ನಿಲ್ಲಿಸದೇ ಪರಾರಿಯಾಗಿದ್ದರು. ಅಪಘಾತಕ್ಕೀಡಾದ ಮಾಲ್ತೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಮಾನವೀಯತೆಗೂ ಚಂದ್ರಪ್ರಭಾ, ಅಪಘಾತದ ಸ್ಥಳದಲ್ಲಿ ಯುವಕನಿಗೆ ಏನಾಯ್ತು ಎಂದು ನೋಡಲು ಸಹ ಬಂದಿರಲಿಲ್ಲ. ಚಿಕ್ಕಮಗಳೂರಿನ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಚಂದ್ರಪ್ರಭಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಇಂದು (ಸೆ.8) ಚಿಕ್ಕಮಗಳೂರಿನ ಪೊಲೀಸರ ಸೂಚನೆಯ ಮೇರೆಗೆ ಅಪಘಾತವಾದ ಕಾರಿನ ಜೊತೆಯೇ ಚಂದ್ರಪ್ರಭಾ ಬಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    ಕಿರುತೆರೆಯ ಜನಪ್ರಿಯ ಶೋ `ಮಜಾಭಾರತ’ (Majabharatha) ಹಾಗೂ `ಗಿಚ್ಚಿ ಗಿಲಿಗಿಲಿ’ (Gicchigiligili) ರಿಯಾಲಿಟಿ ಶೋಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದ್ದ ಪ್ರಿಯಾಂಕಾ ಕಾಮತ್ ಅವರ ನಿಶ್ಚಿತಾರ್ಥ ನೆರವೇರಿದೆ. ಬಹುಕಾಲದ ಗೆಳೆಯ ಅಮಿತ್ ನಾಯಕ್ (Amith Nayak) ಜೊತೆ ಪ್ರಿಯಾಂಕಾ ಕಾಮತ್ (Priyanka Kamath) ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಇದನ್ನೂ ಓದಿ: `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

     

    View this post on Instagram

     

    A post shared by Mr Nayak (@amit_nayak71)

    ಕರಾವಳಿ ಕುವರಿ ಪ್ರಿಯಾಂಕಾ ಕಾಮತ್ ಅಲಿಯಾಸ್ ಪಿಕೆ `ಮಜಾಭಾರತ’ ಸೇರಿದಂತೆ ಸಾಕಷ್ಟು ಶೋಗಳ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಗುರುಹಿರಿಯರ ಒಪ್ಪಿಗೆ ಪಡೆದು ತಾವು ಪ್ರೀತಿಸಿದ ಹುಡುಗ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ.

     

    View this post on Instagram

     

    A post shared by Pixel Stream (@pixel_stream)

    ಪ್ರಿಯಾಂಕಾ ಹಾಗೂ ಅಮಿತ್ ನಾಯಕ್ ಅವರ ನಿಶ್ಚಿತಾರ್ಥ ಸಮಾರಂಭ ಪುತ್ತೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಪ್ರಿಯಾಂಕಾ ಮತ್ತು ಅಮಿತ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಹೊಸ ಜೋಡಿಗೆ ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ.

     

    View this post on Instagram

     

    A post shared by Priyanka Kamath (@kamath.priyanka)

    ಇನ್ನೂ ಅಮಿತ್ ನಾಯಕ್ ಮೂಲತಃ ಕುಂದಾಪುರದವರು. ಮೆಕ್ಯಾನಿಕಲ್ ಎಂಜಿನಿಯರ್ ಓದಿರುವ ಅಮಿತ್ ನಾಯಕ್‌ಗೆ ಪ್ರವಾಸ ಮಾಡುವುದು ಎಂದರೆ ತುಂಬಾ ಇಷ್ಟ. ಕೆಲವು ಕಾಲದಿಂದ ಪ್ರಿಯಾಂಕಾ ಹಾಗೂ ಅಮಿತ್ ಪರಸ್ಪರ ಪ್ರೀತಿಸುತ್ತಿದ್ದರು. ಸದ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಅವರ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಅವರ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಜಾಭಾರತ, ಗಿಚ್ಚಿ ಗಿಲಿ ಗಿಲಿ, ಶೋ ಮೂಲಕ ಮೋಡಿ ಮಾಡಿರುವ ವಿನೋದ್ ಗೊಬ್ಬರಗಾಲ(Vinod Gobbaragala) ಇದೀಗ ಬಿಗ್ ಬಾಸ್ ಮನೆಗೆ(Bigg Boss House) ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಕಾಮಿಡಿ ಮೂಲಕ ಕಮಾಲ್ ಮಾಡುತ್ತಿರುವ ನಟ ವಿನೋದ್ ನಟನಾ ಕ್ಷೇತ್ರದ ಮೊದಲ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿಪಡುತ್ತೀರಾ.

    ವಿನೋದ್ ಅಪ್ಪಟ ಹಳ್ಳಿ ಪ್ರತಿಭೆ ಮೂಲತಃ ಮಂಡ್ಯದ (Mandya) ಗೊಬ್ಬರಗಾಲದವರಾಗಿದ್ದಾರೆ. ನಟನಾಗಿ ಕನಸು ಹೊತ್ತು ಬಂದಿದ್ದ ವಿನೋದ್‌ಗೆ ಮೊದಲು ಸಿಕ್ಕಿದ್ದೆ `ಮಜಾಭಾರತ'(Majabharatha) ಕಾಮಿಡಿ ರಿಯಾಲಿಟಿ ಶೋ, ಬಳಿಕ ಗಿಚ್ಚಿ ಗಿಲಿ ಗಿಲಿ ಶೋನ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಗೊಬ್ಬರಗಾಲ ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

     

    View this post on Instagram

     

    A post shared by BUD Pictures (@bud.picturess)

    ಸಾಕಷ್ಟು ಸವಾಲುಗಳನ್ನ ದಾಟಿ ಬಿಗ್ ಬಾಸ್ ಮನೆಯಲ್ಲಿ ಮನರಂಜಿಸುತ್ತಿರುವ ವಿನೋದ್ ಅವರು ತಮ್ಮ ಮೊದಲ ರಿಯಾಲಿಟಿ ಶೋನಲ್ಲಿ ಪ್ರತಿ ತಿಂಗಳು 12,750 ರೂಪಾಯಿಗಳನ್ನ ಗಳಿಸುತ್ತಿದ್ದರು. ತನ್ನ ಹುಟ್ಟೂರಿನಲ್ಲಿ ಕಾರ್ಪೆಂಟರ್, ಅಕ್ಕಸಾಲಿಗನಾಗಿ ಕೆಲಸ ಮಾಡಿದ್ದರು. ಬಳಿಕ ಬೆಂಗಳೂರಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ನಿರ್ವಹಿಸಿರುತ್ತಾರೆ.

    ಬಳಿಕ ಸತತ ಪ್ರಯತ್ನದ ನಂತರ `ಮಜಾಭಾರತ’ ಮೂಲಕ ಗೊಬ್ಬರಗಾಲ ಮೋಡಿ ಮಾಡುತ್ತಾರೆ. ಹೀಗೆ ಒಂದೊಂದೇ ಅವಕಾಶಗಳನ್ನ ಸದುಪಯೋಗಪಡಿಸಿಕೊಂಡು ಈಗ ಬಿಗ್ ಬಾಸ್‌ನಲ್ಲಿ ವಿನೋದ್ ಹೈಲೆಟ್ ಆಗುತ್ತಿದ್ದಾರೆ. ಹುಟ್ಟೂರಿನಲ್ಲಿ ಮನೆ ಕಟ್ಟುವ ಕನಸು ಹೊತ್ತಿರುವ ವಿನೋದ್ ಬಿಗ್ ಬಾಸ್ (Bigg Boss) ಟ್ರೋಫಿ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]