ಯಾರು ಯಾವುದನ್ನು ಮಾಡಬೇಕು ಅದನ್ನು ಮಾಡಿದರೇ ಚಂದ ಎನ್ನುವ ಮಾತಿದೆ. ಆಗದೇ ಇರೋದನ್ನು ನೋಡಿಯೇ ಬಿಡೋಣ ಎಂದರೆ ಅಲ್ಲೊಂದು ಎಡವಟ್ಟು ಕಾದಿರುತ್ತದೆ. ಅಂತಹ ಎಡವಟ್ಟಿಗೆ ಸಾಕ್ಷಿಯಾಗಿದ್ಧಾರೆ ಡ್ರೋನ್ ಪ್ರತಾಪ್.
ಬಿಗ್ ಬಾಸ್‌ನಿಂದ ಬಂದ್ಮೇಲೆ ಡ್ರೋನ್ ಪ್ರತಾಪ್ (Drone Pratap) ಹವಾ ಜೋರಾಗಿದೆ. `ಗಿಚ್ಚಿ ಗಿಲಿಗಿಲಿ 3′ (Gichchi Giligili) ಶೋಗೆ ಎಂಟ್ರಿ ಕೊಟ್ಟು ಕಾಮಿಡಿ ಮಾಡಲು ಪ್ರತಾಪ್ ಶುರು ಮಾಡಿದ್ದಾರೆ. ಇದೀಗ ವೇದಿಕೆಯಲ್ಲಿ ಡೈಲಾಗ್ ಹೇಳಲು ಪ್ರತಾಪ್ ತಿಣುಕಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ಪ್ರತಾಪ್. ದೊಡ್ಮನೆಗೆ ಕಾಲಿಟ್ಟ ಮೇಲೆ ಸ್ಪರ್ಧಿಗಳಿಂದಲೂ ಭಾರೀ ಟಾರ್ಗೆಟ್ ಆಗಿದ್ದರು. ಬಳಿ ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡರು.
ಡ್ರೋನ್ ಪ್ರತಾಪ್ ಡ್ಯಾನ್ಸ್ನಲ್ಲಿ ಸೈ.. ಆದರೆ ಕಾಮಿಡಿ ಅಂತ ಬಂದಾಗ ಪ್ರತಾಪ್ ಕೊಂಚ ಹಿಂದೆ. ಇದೀಗ ಅಭಿನಯದ ಕಾಗುಣಿತ ಗೊತ್ತಿಲ್ಲದ ಪ್ರತಾಪ್ ಗಿಚ್ಚಿಗಿಲಿ ಗಿಲಿಗೆ ಎಂಟ್ರಿ ಕೊಟ್ಟು ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ. ಅದಷ್ಟೇ ಅಲ್ಲ.. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದಾರೆ.
ಪ್ರತಾಪ್ ಈ ಬಾರಿ ಮಂತ್ರವಾದಿಯ ಗೆಟಪ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತ್ಮವನ್ನು ಬದಲಿಸುವ ಸೀನ್‌ನಲ್ಲಿ ಆತ್ಮ ಆವಾಹಯಾಮಿ ಎಂದು ಡೈಲಾಗ್ ಹೇಳಬೇಕಿತ್ತು. ಆಗ ಪ್ರತಾಪ್.. ಡೈಲಾಗ್ ಹೇಳಲು ಆಗದೇ ತಿಣುಕಾಡಿದ್ದಾರೆ. ಹಾವಾಹಯಾಮಿ ಎಂದು ತಪ್ಪಾಗಿ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಜಡ್ಜ್ಗಳಾದ ನಟಿ ಶ್ರುತಿ, ಕೋಮಲ್, ಸಾಧುಕೋಕಿಲ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಪ್ರತಾಪ್‌ನ ಹೊಸ ಜರ್ನಿಗೆ ಅಭಿಮಾನಿಗಳು ಸ್ವೀಟ್ ಆಗಿ ವಿಶ್ ಮಾಡ್ತಿದ್ದಾರೆ.
ಬಿಗ್‌ಬಾಸ್ (Bigg Boss) ಸೀಸನ್ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ” (Gichichi Giligili) ಯ ಎರಡು ಸೂಪರ್ ಹಿಟ್ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.
ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್‌ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಬಿಗ್‌ಬಾಸ್ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್‌ಬಾಸ್ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಅದ್ಭುತ ಕಾಮಿಡಿಯನ್‌ಗಳ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್.
ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು. ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.
“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು. ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.
ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ. “ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್. ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್‌ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್‌ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.
ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್ ಸೀಸನ್ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್‌ಬಾಸ್ ಸೀಸನ್ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್ ಗೊಬ್ಬರಗಾಲ ಇದ್ದೇ ಇರುತ್ತಾರೆ. ಇವರ ಜೊತೆಗೆ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದ ದ್ರೋಣ್ ಪ್ರತಾಪ್ (Drone Pratap) ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್‌ಬಾಸ್ ಸೀಸನ್ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ.
ಉಳಿದಂತೆ ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್, ಶಿವು, ಚಿಲ್ಲರ್ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್, ನಂದೀಶ್ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್‌ಸ್ಟಾರ್” ನ ಪುನೀತಾ, “ಮಜಾ ಟಾಕೀಸ್”ನ ಮೋಹನ್, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.
ಬಿಗ್ ಬಾಸ್ ಮೊದಲನೇ ರನ್ನರ್ ಅಪ್ ಆದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಬಿಗ್ ಆಫರ್ ನೀಡಿದೆ. ವಾಹಿನಿಯ ಅತ್ಯಂತ ಜನಪ್ರಿಯ ಶೋ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ.
ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶ್ರುತಿ, ಕೋಮಲ್, ಸಾಧು ಕೋಕಿಲಾ ನಿರ್ಣಾಕರಾಗಿದ್ದಾರೆ.
ಸಂಕಷ್ಟದಲ್ಲಿ ಪ್ರತಾಪ್
ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರತಾಪ್.
ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.
ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.
ಮಜಾಭಾರತ, ಗಿಚ್ಚಿ ಗಿಲಿಗಿಲಿ (Gichchi Giligili) ನಟಿ ಪ್ರಿಯಾಂಕಾ ಕಾಮತ್ (Priyanka Kamath) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿಗೆ ಕಿರುತೆರೆ ನಟ-ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.
ಕಳೆದ ಎರಡು ದಿನಗಳಿಂದ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ಮದುವೆ ಕುರಿತ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿವೆ. ಇದೀಗ ದಾಂಪತ್ಯ ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಅಮಿತ್- ಪ್ರಿಯಾಂಕಾ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ನಂತರದಲ್ಲಿ ಏಳು-ಬೀಳಿನಲ್ಲಿ ಇವರಿಬ್ಬರು ಒಟ್ಟಿಗೆ ಸಾಥ್ ನೀಡಿದ್ದರು. ಇದೀಗ ಹೊಸ ಬಾಳಿಗೆ ನವಜೋಡಿ ಕಾಲಿಟ್ಟಿದ್ದಾರೆ. ಇದನ್ನೂ ಓದಿ:‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ
ಅಮಿತ್ ನಾಯಕ್ (Amith Nayak) ಮೂಲತಃ ಕುಂದಾಪುರದವರು. ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು.
ನಟಿ ಪ್ರಿಯಾಂಕಾ ಮೂಲತಃ ಮಂಗಳೂರಿನವರು. ಅನಾರೋಗ್ಯದ ಸಮಸ್ಯೆಯಿಂದಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗ ಅಮಿತ್ ಅವರು ಪ್ರಿಯಾಂಕಾ ನೆರವಿಗೆ ನಿಂತು ಸಂಗಾತಿಯ ಆರೈಕೆ ಮಾಡಿದ್ದರು. ಅದನ್ನು ನಟಿಯೇ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ.
ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು.
ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ.
ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆವಿದೆ. ಈ ಜೋಡಿಯ ವಿವಾಹ (marriage) ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ.
ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಸುಷ್ಮಿತಾ ಮತ್ತು ಜಗ್ಗಪ್ಪ ಜೋಡಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಈ ಜೋಡಿಯ ಕಾಮಿಡಿ ವಿಡಿಯೋಗಳು ವೈರಲ್ ಕೂಡ ಆಗಿವೆ.
ಇಂತಹ ಜನಪ್ರಿಯ ಜೋಡಿಯು ಕೇವಲ ವೇದಿಕೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಜೊತೆಯಾಗಿವೆ.
ಕಿರುತೆರೆಯ ಜನಪ್ರಿಯ ಶೋ `ಗಿಚ್ಚಿ ಗಿಲಿಗಿಲಿ’ (Gicchi Giligili) ಶೋಗೆ ತೆರೆಬಿದ್ದಿದೆ. ಕಾಮಿಡಿ ಶೋನ ವಿನ್ನರ್ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿತ್ತು. ಇದೀಗ ಈ ರಿಯಾಲಿಟಿ ಶೋನ ವಿನ್ನರ್ ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ(Vamshika) ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ನಿವೇದಿತಾ ಗೌಡ(Niveditha Gowda) ಎರಡನೇ ಸ್ಥಾನ ಸಿಕ್ಕಿದೆ.
ಅಭಿಮಾನಿಗಳ ಅಚ್ಚು ಮೆಚ್ಚಿನ ಕಾಮಿಡಿ ಶೋ ಆಗಿ ʻಗಿಚ್ಚಿ ಗಿಲಿಗಿಲಿʼ ಮನೆ ಮಾತಾಗಿತ್ತು. ಕಳೆದ ಸೆಪ್ಟೆಂಬರ್ 17 ಮತ್ತು 18ರಂದು ಗ್ರ್ಯಾಂಡ್ ಫಿನಾಲೆ ನಡೆದಿದ್ದು, ಈ ರಿಯಾಲಿಟಿ ಶೋನಲ್ಲಿ ಎರಡು ಆಕ್ಟರ್ ಮತ್ತು ಎರಡು ನಾನ್ ಆಕ್ಟರ್ ವಿಭಾಗದಲ್ಲಿ ವಿನ್ನರ್ ಮತ್ತು ರನ್ನರ್ ಅಪ್ ಅನೌನ್ಸ್ ಮಾಡಲಾಯಿತು. ಸೃಜನ್ ಲೋಕೇಶ್ ಮತ್ತು ನಟಿ ಶ್ರುತಿ, ಮಾಲಾಶ್ರೀ ಅವರ ನೇತೃತ್ವದಲ್ಲಿ ಶೋ ಅದ್ಬುತವಾಗಿ ಮೋಡಿ ಬಂದಿದೆ.
`ಗಿಚ್ಚಿ ಗಿಲಿಗಿಲಿ’ ಸೀಸನ್ ವಿನ್ನರ್, ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ ಅಂಜನಿ ಕಶ್ಯಪಾಗೆ ಗೆಲುವಿನ ಕಿರೀಟ ಒಲಿದು ಬಂದಿದೆ. ಆಕ್ಟರ್ ವಿಭಾಗದಲ್ಲಿ ಶಿವುಗೆ ವಿನ್ನರ್ ಪಟ್ಟ ದಕ್ಕಿದೆ. ಇನ್ನೂ ಈ ಸೀಸನ್‌ನ ರನ್ನರ್ ಅಪ್, ನಾನ್ ಆಕ್ಟರ್ ವಿಭಾಗದಲ್ಲಿ ನಿವೇದಿತಾ ಗೌಡ ಗುರುತಿಸಿಕೊಂಡ್ರೆ, ಆಕ್ಟರ್ ವಿಭಾಗದಲ್ಲಿ ವಿನೋದ್ ಎರಡನೇ ಸ್ಥಾನ ಒಲಿದಿದೆ. ಇದನ್ನೂ ಓದಿ: ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ
ಇನ್ನೂ ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಎರಡನೇ ಸ್ಥಾನ ಪಡೆದವರಿಗೆ ರನ್ನರ್ ಅಪ್ ಟ್ರೋಫಿ ಜೊತೆ 3 ಲಕ್ಷ ರೂಪಾಯಿ ಬಹುಮಾನ ಕೊಡಲಾಗಿದೆ.
Live Tv
[brid partner=56869869 player=32851 video=960834 autoplay=true]