Tag: ಗಾಸಿಪ್

  • ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ಬಿಟೌನ್ ನಲ್ಲಿ ಅತೀ ಹೆಚ್ಚು ಸುದ್ದಿ ಆಗುವ ನಟಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್. ಮೊನ್ನೆಯಷ್ಟೇ ಯಶಸ್ವಿಯಾಗಿ ‘ಲಾಕ್ ಅಪ್’ ರಿಯಾಲಿಟಿ ಶೋ ಮುಗಿಸಿರುವ ಅವರು ಸದ್ಯ ‘ಧಾಕಡ್’ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅದರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಮಯದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ನೇರವಾಗಿಯೇ ಉತ್ತರಿಸಿ ಕಂಗನಾ ಏನು ಅನ್ನುವುದನ್ನು ತೋರಿಸಿದ್ದಾರೆ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ಧಾಕಡ್ ಸಿನಿಮಾದಲ್ಲಿ ಕಂಗನಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅದೊಂದು ರೀತಿಯಲ್ಲಿ ರಗಡ್ ವ್ಯಕ್ತಿತ್ವ ಇರುವಂತಹ ಪಾತ್ರವಾಗಿದೆ. ಹುಡುಗರನ್ನು ಹೊಡೆಯುವುದು, ಚುಡಾಯಿಸುವಂತಹ ಕ್ಯಾರೆಕ್ಟರ್ ಅದಾಗಿದೆಯಂತೆ. ಹಾಗಾಗಿಯೇ ಪತ್ರಕರ್ತರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ನೇರವಾಗಿಯೇ ಕಂಗನಾಗೆ ಪ್ರಶ್ನೆ ಮಾಡಿದ್ದಾರೆ. ತುಸು ಸಿಡುಕಿನ ವ್ಯಕ್ತಿತ್ವದ ನಟಿ, ಅಷ್ಟೇ ಬೋಲ್ಡ್ ಆಗಿಯೇ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಕಂಗನಾ ರಣಾವತ್ ಕ್ಯಾಮೆರಾಗೆ ಎದುರುಗೊಂಡಾಗೊಮ್ಮೆ ಪತ್ರಕರ್ತರು ಕೇಳುವ ಮೊದಲ ಪ್ರಶ್ನೆ ನೀವ್ಯಾಕೆ ಇನ್ನೂ ಮದುವೆ ಆಗಿಲ್ಲ ಎನ್ನುವುದೇ ಆಗಿರುತ್ತದೆ. ಸಿನಿಮಾ ಪ್ರಚಾರದ ಪತ್ರಿಕಾಗೋಷ್ಠಿಯಲ್ಲೂ ಅಂಥದ್ದೊಂದು ಪ್ರಶ್ನೆ ಕೇಳಿಬಂತು. ಆದರೆ, ಅದು ಬೇರೆಯ ರೀತಿಯದ್ದೇ ಆಗಿತ್ತು. ಹಾಗಾಗಿ ಕಂಗನಾ ರಣಾವತ್, ಪತ್ರಕರ್ತರ ಮೇಲೆ ಮುಗಿ ಬಿದ್ದರು. ನನ್ನ ಮದುವೆ ಆಗದೇ ಇರುವುದಕ್ಕೆ ಕಾರಣ ನೀವೇ ಎಂದು ಮಾಧ್ಯಮದವರ ಮೇಲೆ ಗೂಬೆ ಕೂರಿಸಿದರು.  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಪತ್ರಿಕಾಗೋಷ್ಠಿಯಲ್ಲಿ ‘ಮೇಡಂ, ಧಾಕಡ್ ಸಿನಿಮಾದ ನಿಮ್ಮ ಪಾತ್ರಕ್ಕೂ ಮತ್ತು ನಿಮ್ಮ ನಿಜ ಜೀವನಕ್ಕೂ ಹೋಲಿಕೆ ಆಗುತ್ತಿದೆ ಎಂದು ಅನಿಸುತ್ತಿದೆಯಾ?’ ಎಂದು ಕೇಳಿ ಬಂದ ಪ್ರಶ್ನೆಗೆ, ‘ನಾನು ಯಾವ ಹುಡುಗರನ್ನೂ ಹೊಡೆಯುವುದಿಲ್ಲ. ನಾನು ಹುಡುಗರನ್ನು ಹೊಡೆಯುತ್ತೇನೆ. ಹುಡುಗರನ್ನು ಕಂಡರೆ ಈಕೆ ಆಗಲ್ಲ ಅಂತೆಲ್ಲ ಗಾಸಿಪ್ ಹಬ್ಬಿಸಿದರು. ಈ ಕಾರಣಕ್ಕಾಗಿ ನನ್ನ ಮದುವೆಯೇ ಆಗಲಿಲ್ಲ’ ಎಂದು ದಿಟ್ಟ ಉತ್ತರವನ್ನು ನೀಡಿದರು. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಹುಡುಗರನ್ನು ಕಂಡರೆ ಕಂಗನಾಗೆ ತುಂಬಾ ಗೌರವವಂತೆ. ಯಾವತ್ತೂ ಅವರು ಬೇರೆಯವರ ಜೊತೆ ಒರಟಾಗಿ ನಡೆದುಕೊಂಡಿಲ್ಲವಂತೆ. ಆದರೂ, ಕಂಗನಾ ಮೇಲೆ ಸಲ್ಲದ ಆರೋಪಗಳನ್ನು ಹೊರಿಸುತ್ತಲೇ ಇರುತ್ತಾರೆ ಎಂದು ಬೇಸರಿಸಿಕೊಂಡಿದ್ದಾರೆ ಕಂಗನಾ.

  • ವಿಜಯ್ ಜೊತೆ ರೊಮ್ಯಾಂಟಿಕ್ ಸಂಬಂಧದ ಬಗ್ಗೆ ಮೌನ ಮುರಿದ ರಶ್ಮಿಕಾ

    ವಿಜಯ್ ಜೊತೆ ರೊಮ್ಯಾಂಟಿಕ್ ಸಂಬಂಧದ ಬಗ್ಗೆ ಮೌನ ಮುರಿದ ರಶ್ಮಿಕಾ

    ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ ಅವರ ಜೊತೆಗಿನ ರೊಮ್ಯಾಂಟಿಕ್ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.

    ಟಿ-ಟೌನ್‍ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ನಟಿ ರಶ್ಮಿಕಾ ಈಗ ಮೌನ ಮುರಿದಿದ್ದು, ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದರ್ಶಕ ರಶ್ಮಿಕಾ ಅವರನ್ನು ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದರು. ಆಗ ರಶ್ಮಿಕಾ, ನಾನು ಹಾಗೂ ವಿಜಯ್ ಒಳ್ಳೆಯ ಸ್ನೇಹಿತರು ಅಷ್ಟೇ. ನಾವಿಬ್ಬರು ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಗಾಸಿಪ್‍ಗಳನ್ನು ತಳ್ಳಿ ಹಾಕಿದ್ದರು.

    ಬಳಿಕ ಮಾತನಾಡಿದ ರಶ್ಮಿಕಾ ಮಂದಣ್ಣ, ವಿಜಯ್ ಅವರು ಅತ್ಯುತ್ತಮ ಹಾಗೂ ಪ್ರತಿಭಾವಂತ ನಟ. ಅಲ್ಲದೆ ವಿಜಯ್ ತುಂಬಾ ಒಳ್ಳೆಯ ವ್ಯಕ್ತಿ. ನಮ್ಮಿಬ್ಬರ ನಡುವೆ ರೊಮ್ಯಾಂಟಿಕ್ ಸಂಬಂಧದ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಈ ಹಿಂದೆ ‘ಗೀತಾ ಗೋವಿಂದಂ’ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಬಳಿಕ ಇಬ್ಬರು ಭರತ್ ಕಾಮಾ ನಿರ್ದೇಶನದ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

  • ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಗಾಸಿಪ್ – ರಶ್ಮಿಕಾ ಸ್ಪಷ್ಟನೆ!

    ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಗಾಸಿಪ್ – ರಶ್ಮಿಕಾ ಸ್ಪಷ್ಟನೆ!

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಗಾಸಿಪ್‍ಗೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.

    ರಶ್ಮಿಕಾ ಅಭಿನಯದ ‘ಗೀತಾ ಗೋವಿಂದಂ’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ, ನಾನು ಹಾಗೂ ರಕ್ಷಿತ್ ಖುಷಿಯಾಗಿದ್ದೇವೆ. ನಮ್ಮಿಬ್ಬರ ನಡುವೆ ಯಾವ ಸಮಸ್ಯಯೂ ಇಲ್ಲ ಎಂದು ಬ್ರೇಕಪ್ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ನಮ್ಮಿಬ್ಬರ ಬ್ರೇಕಪ್ ಆಗಿದೆ ಎಂಬ ಸುದ್ದಿಯನ್ನು ಕೇಳಿ ರಕ್ಷಿತ್ ಹಾಗೂ ನಾನು ನಗುವುದನ್ನು ನಿಲ್ಲಿಸಲಿಲ್ಲ. ನಾವಿಬ್ಬರು ಖುಷಿಯಾಗಿ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಹಾಗಾಗಿ ಈ ಬ್ರೇಕಪ್ ಸುದ್ದಿಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ.

    ನನಗೆ ಹಾಗೂ ರಕ್ಷಿತ್ ಶೆಟ್ಟಿಗೆ ಒಟ್ಟಿಗೆ ಕಾಲ ಕಳೆಯಲು ಸಮಯವಿಲ್ಲ. ನಮ್ಮ ನಿಶ್ಚಿತಾರ್ಥದ ಮೊದಲು ನಾವು ಒಟ್ಟಿಗೆ ಓಡಾಡಲಿಲ್ಲ. ಅಲ್ಲದೇ ನಾವಿಬ್ಬರು ಡೇಟ್ ಕೂಡ ಮಾಡಲಿಲ್ಲ. ಈಗ ನಮ್ಮ ನಿಶ್ಚಿತಾರ್ಥ ಆದ ಕಾರಣ ನಾವು ಒಟ್ಟಿಗೆ ಕಾಲ ಕಳೆಯುತ್ತಿದ್ದೇವೆ. ನಾವಿಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ.

    ನನ್ನ ಹಾಗೂ ರಕ್ಷಿತ್ ಮದುವೆ ಸದ್ಯಕ್ಕಿಲ್ಲ ನಾವಿಬ್ಬರು ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇವೆ. ನಿಶ್ಚಿತಾರ್ಥದ ವೇಳೆ ಎರಡು ವರ್ಷ ಮದುವೆ ಆಗಬಾರದು ಎಂದು ಮಾತನಾಡಿಕೊಂಡಿದ್ದೇವೆ. ಸದ್ಯ ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ರಶ್ಮಿಕಾ ಮದುವೆ ಬಗ್ಗೆ ಮಾತಾಡಿದ್ದಾರೆ.

    ಗೀತಾ ಗೋವಿಂದಂ ಚಿತ್ರದ ಲಿಪ್ ಲಾಕ್ ಸೀನ್ ಲೀಕ್ ಆಗಿದ್ದರ ಬಗ್ಗೆ ರಶ್ಮಿಕಾ ಮಾತನಾಡಿ ನನಗೆ ತುಂಬಾ ಬೇಸರವಾಗಿದೆ. ಚಿತ್ರರಂಗದಲ್ಲಿ ಗಾಸಿಪ್ ಹಾಗೂ ಟ್ರೋಲ್‍ಗಳು ಸಹಜವಾಗಿರುತ್ತದೆ. ಈ ಸಮಸ್ಯೆ ಚಿತ್ರರಂಗದಲ್ಲಿರುವ ಎಲ್ಲರಿಗೂ ಎದುರಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv